ಬ್ಯಾಂಕುಗಳಲ್ಲಿ ಎದುರಾಗುವ ಜನದಟ್ಟಣೆಯನ್ನು ಕಡಿಮೆಗೊಳಿಸುವ ಸಲುವಾಗಿ ಎಟಿಎಂ ಕೇಂದ್ರಗಳು ಮಹತ್ವದ ಪಾತ್ರ ವಹಿಸುತ್ತಿವೆ. ಸಾಮಾನ್ಯವಾಗಿ ಈ ಹಿಂದೆ ಗ್ರಾಹಕರು ಎಟಿಎಂ ಕೇಂದ್ರಗಳನ್ನು ನಗದು ವಿತ್ ಡ್ರಾ ಮಾಡುವುದಕ್ಕಾಗಿ ಮಾತ್ರ ಬಳಸುತಿದ್ದರು.
ಬ್ಯಾಂಕುಗಳಲ್ಲಿ ಎದುರಾಗುವ ಜನದಟ್ಟಣೆಯನ್ನು ಕಡಿಮೆಗೊಳಿಸುವ ಸಲುವಾಗಿ ಎಟಿಎಂ ಕೇಂದ್ರಗಳು ಮಹತ್ವದ ಪಾತ್ರ ವಹಿಸುತ್ತಿವೆ. ಸಾಮಾನ್ಯವಾಗಿ ಈ ಹಿಂದೆ ಗ್ರಾಹಕರು ಎಟಿಎಂ ಕೇಂದ್ರಗಳನ್ನು ನಗದು ವಿತ್ ಡ್ರಾ ಮಾಡುವುದಕ್ಕಾಗಿ ಮಾತ್ರ ಬಳಸುತಿದ್ದರು. ಆದರೆ ಇದೀಗ ಇನ್ನೂ ಅನೇಕ ವ್ಯವಹಾರಗಳನ್ನು ಎಟಿಎಂ ಯಂತ್ರಗಳ ಮೂಲಕ ನಡೆಸಬಹುದು. ಬೆಸ್ಟ್ ಆನ್ಲೈನ್ ಯುಟಿಲಿಟಿ ಬಿಲ್ ಪಾವತಿ ಸೇವೆ
ಎಟಿಎಂ ಯಂತ್ರಗಳ ಮೂಲಕ ಕೈಗೊಳ್ಳಬಹುದಾದ 8 ಪ್ರಮುಖ ವ್ಯವಹಾರಗಳ ಪಟ್ಟಿ ಇಲ್ಲಿ ಮಾಡಲಾಗಿದೆ.
1. ಫಂಡ್ ವರ್ಗಾವಣೆ
ಒಂದು ಬ್ಯಾಂಕ್ ಖಾತೆಯಿಂದ ಇನ್ನೊಂದು ಖಾತೆಗೆ ಫಂಡ್ಸ್ ವರ್ಗಾವಣೆ ಮಾಡಬಹುದು. ಫಂಡ್ ವರ್ಗಾವಣೆ ಮಾಡುವಾಗ ಕಳಿಸಬೇಕಾಗಿರುವ ವ್ಯಕ್ತಿಯ ಕಾರ್ಡ್ ಮೇಲಿರುವ 16 ಡಿಜಿಟ್ ಸಂಖ್ಯೆಗಳು ಗೊತ್ತಿರಬೇಕಾಗುತ್ತದೆ. ರೂ. 5000 ದಿಂದ ರೂ. 49000ರ ವರೆಗೆ ಮೊತ್ತವನ್ನು ವರ್ಗಾವಣೆ ಮಾಡಬಹುದು.
2. ಸ್ಥಿರ ಠೇವಣಿ ತೆರೆಯಿರಿ
ಬ್ಯಾಂಕ್ ಗ್ರಾಹಕರು ಎಟಿಎಂ ಬಳಸಿ ಸ್ಥಿರ ಠೇವಣಿ ಖಾತೆಯನ್ನು ತೆರೆಯಬಹುದು. ಖಾತೆಯ ಅವಧಿಯನ್ನು ಆಯ್ಕೆ ಮಾಡುವ ಅವಕಾಶ ಇದ್ದು, ಕನಿಷ್ಟ ರೂ. 5000 ರಿಂದ ಗರಿಷ್ಠ ರೂ. 49000 ವ್ಯಾಪ್ತಿಯಲ್ಲಿ ಮೊತ್ತ ಡಿಪಾಸಿಟ್ ಮಾಡಬಹುದು.
3. ಪ್ರೀಮಿಯಂ ಪೇಮೆಂಟ್
ಎಟಿಎಂ ಮೂಲಕ ಐಸಿಐಸಿಐ, ಎಷ್ಡಿಎಫ್ಸಿ, ಎಕ್ಸಿಸ್ ಬ್ಯಾಂಕುಗಳು ಮ್ಯೂಚುವಲ್ ಫಂಡ್ ಮತ್ತು ಎಲ್ಐಸಿ ಪ್ರೀಮಿಯಂ ಪಾವತಿಗೆ ಸೌಲಭ್ಯ ಕಲ್ಪಿಸಿದೆ. ಎಟಿಎಂ ಮೂಲಕ ಪ್ರೀಮಿಯಂ ಪಾವತಿ ಸಂದರ್ಭದಲ್ಲಿ ಪಾಲಿಸಿ ನಂಬರ್ ಮತ್ತು ಖಾತೆ ವಿವರಗಳನ್ನು ಹೊಂದಿರಬೇಕು.
4. ಆದಾಯ ತೆರಿಗೆ ಪಾವತಿಸಿ
ನೇರವಾಗಿ ಆದಾಯ ತೆರಿಗೆ ಪಾವತಿಸುವುದಕ್ಕಾಗಿ ನೋಂದಣಿ ಮಾಡಿಸಬೇಕಾಗುತ್ತದೆ. ತೆರಿಗೆ ಪಾವತಿಯ ಮೊತ್ತ ನಿಮ್ಮ ಖಾತೆಯಿಂದ ಕಡಿತವಾಗುತ್ತದೆ. Special Information Number(SIN) ಆಯ್ಕೆ ಮೂಲಕ ನಿಮಗೆ ರಸೀತಿ ಲಭ್ಯವಾಗುತ್ತದೆ. ತೆರಿಗೆ ರಿಟರ್ನ್ಸ್ ಫೈಲಿಂಗ್ ಮಾಡುವಾಗ SIN ಸಂಖ್ಯೆ ಒದಗಿಸಬೇಕಾಗುತ್ತದೆ.
5. ದೇಣಿಗೆ ಮಾಡಿ
NGO ಅಥವಾ ದೇವಸ್ಥಾನದ ಟ್ರಸ್ಟ್ ಗಳಿಗೆ ದೇಣಿಗೆ ನೀಡಲು ಎಟಿಎಂ ಯಂತ್ರದಲ್ಲಿ ಅವಕಾಶ ಕಲ್ಪಿಸಲಾಗಿರುತ್ತದೆ. ಒಂದು ಸಲ ದೇಣಿಗೆ ಪಾವತಿಸಿದ ನಂತರ ರಸೀತಿ ಪಡೆಯಬಹುದು. ಇದನ್ನು ತೆರಿಗೆ ಫೈಲಿಂಗ್ ಮಾಡುವ ವೇಳೆ ಬಳಸಬಹುದು.
6. ಯುಟಿಲಿಟಿ ಬಿಲ್
ವಿದ್ಯುತ್ ಬಿಲ್ ಪಾವತಿ, ಗ್ಯಾಸ್ ಬಿಲ್ ಪಾವತಿ ಮತ್ತು ಲ್ಯಾಂಡ್ ಲೈನ್ ಬಿಲ್ ಪಾವತಿಯಂತಹ ಯುಟಿಲಿಟಿ ಬಿಲ್ ಪಾವತಿ ಮಾಡಬಹುದು. ಕೆಲ ಬ್ಯಾಮಕುಗಳು ಇವುಗಳ ಮೇಲೆ ಕ್ಯಾಶ್ ಬ್ಯಾಕ್ ಆಫರ್ ಕೂಡ ನೀಡುತ್ತವೆ.
7. ರೈಲ್ವೆ ಬುಕಿಂಗ್
ಎಟಿಎಂ ಮುಖಾಂತರ ಎಸ್ಬಿಐ, ಪಂಜಾಬ್ ನ್ಯಾಷನಲ್ ಬ್ಯಾಂಕ್ ನಂತಹ ಕೆಲ ಬ್ಯಾಂಕುಗಳು ರೈಲ್ವೆ ಟಿಕೇಟ್ ಬುಕಿಂಗ್ ಮಾಡಲು ಅವಕಾಶ ಕಲ್ಪಸಿವೆ.
8. ಇನ್ನಿತರ ವ್ಯವಹಾರ
ನಗದು ಠೇವಣಿ, ಮೊಬೈಲ್ ರಿಚಾರ್ಜ್, ಡಿಟಿಎಚ್ ರೀಚಾರ್ಜ್, ಚೆಕ್ ಬುಕ್ ಕೋರಿಕೆ ಇನ್ನಿತರ ವ್ಯವಹಾರಗಳನ್ನು ಎಟಿಎಂ ಯಂತ್ರದ ಮೂಲಕ ನಿರ್ವಹಿಸಬಹುದು.


Click it and Unblock the Notifications