For Quick Alerts
ALLOW NOTIFICATIONS  
For Daily Alerts

ಬೆಸ್ಟ್ ಆನ್ಲೈನ್ ಯುಟಿಲಿಟಿ ಬಿಲ್ ಪಾವತಿ ಸೇವೆ

ಎಸ್ಬಿಐ, ಯೂನಿಯನ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಐಸಿಐಸಿಐ, ಎಚ್ಡಿಎಫ್ಸಿ, ಎಚ್ಎಸ್ ಬಿಸಿ, ಎಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಸಿಟಿ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್ ಯುಟಿಲಿಟಿ ಆನ್ಲೈನ್ ಸೌಲಭ್ಯವನ್ನು ಒದಗಿಸಿವೆ.

By Siddu
|

ಕೇಂದ್ರ ಸರ್ಕಾರ ನೋಟುಗಳ ಚಲಾವಣೆ ನಿಷೇಧಿಸಿ, ಕಪ್ಪುಹಣ, ಖೋಟಾ ನೋಟು, ಭ್ರಷ್ಟಾಚಾರ, ಭಯೋತ್ಪಾಧನೆ ತಡೆಗೆ ಮಹತ್ವದ ಹೆಜ್ಜೆ ಇಟ್ಟಿದೆ.
ರೂ. 500, 1000 ಮುಖಬೆಲೆಯ ನೋಟುಗಳ ಚಲಾವಣೆ ನಿರ್ಬಂಧದಿಂದಾಗಿ ಜನರು ಬಿಲ್ ಪಾವತಿಸುವಾಗ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಅದಕ್ಕಾಗಿ ಬ್ಯಾಂಕುಗಳು ಬಿಲ್ಲುಗಳನ್ನು ಪಾವತಿ ಮಾಡಲು ಅನುಕೂಲವಾಗಲಿ ಎಂದು ಸಾರ್ವಜನಿಕರಿಗೆ ಆನ್ಲೈನ್ ಯುಟಿಲಿಟಿ ಬಿಲ್ ಪಾವತಿಗೆ ಅವಕಾಶ ಮಾಡಿಕೊಟ್ಟಿದೆ.
ಎಸ್ಬಿಐ, ಯೂನಿಯನ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಐಸಿಐಸಿಐ, ಎಚ್ಡಿಎಫ್ಸಿ, ಎಚ್ಎಸ್ ಬಿಸಿ, ಎಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಸಿಟಿ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್ ಹೀಗೆ ಹಲವಾರು ಬ್ಯಾಂಕುಗಳು ಬಿಲ್ ಗಳನ್ನು ಪಾವತಿ ಮಾಡಲು ಯುಟಿಲಿಟಿ ಆನ್ಲೈನ್ ಸೌಲಭ್ಯವನ್ನು ಒದಗಿಸಿವೆ.

ಆನ್ಲೈನ್ ಮೂಲಕ ಬಿಲ್ ಪಾವತಿ ಮಾಡಬಹುದಾದ ಕೆಲ ಆನ್ಲೈನ್ ಯುಟಿಲಿಟಿ ಬಿಲ್ ಪಾವತಿ ಸೇವೆಗಳ ಮಾಹಿತಿ ನೀಡಲಾಗಿದೆ ನೋಡಿ...

1. ಬಿಲ್ ಡೆಸ್ಕ್ (BillDesk)

1. ಬಿಲ್ ಡೆಸ್ಕ್ (BillDesk)

ಬಿಲ್ ಡೆಸ್ಕ್ ಭಾರತದಲ್ಲಿ ಬಿಲ್ ಪಾವತಿ ಸೇವೆಗೆ ತುಂಬಾ ಪ್ರಸಿದ್ದಿಯಾಗಿದೆ. ವಿದ್ಯುತ್ ಬಿಲ್, ಟೆಲಿಪೋನ್ ಬಿಲ್, ಮೊಬೈಲ್ ಬಿಲ್, ಕ್ರೆಡಿಟ್ ಕಾರ್ಡ್ ಬಿಲ್ ಗಳನ್ನು ಬಿಲ್ ಡೆಸ್ಕ್ ಮುಖಾಂತರ ಪಾವತಿಸಬಹುದು. ಈ ಸೌಲಭ್ಯ ಅಹಮದಾಬಾದ್, ಬೆಂಗಳೂರು, ಚೆನೈ, ಚಂಡೀಘಢ, ಮುಂಬೈ, ದೆಹಲಿ ಮತ್ತು ಪುಣೆ ನಗರಗಳಲ್ಲಿ ಲಭ್ಯವಿದೆ.
BillDesk ಸೇವೆಯನ್ನು ಬಳಸಲು ನೊಂದಣಿ ಮತ್ತು ಪಾವತಿ ಮಾಡಲು ಬಯಸುವ ಬ್ಯಾಂಕಿನ ವಿವರವನ್ನು ಒದಗಿಸಬೇಕು.

2. ಪೇಟಿಎಂ

2. ಪೇಟಿಎಂ

ಪ್ರಸ್ತುತ ಪೇಟಿಎಂ ತುಂಬಾ ಉತ್ತುಂಗದಲ್ಲಿರುವ ಸಂಸ್ಥೆ. ವಿದ್ಯುತ್ ಬಿಲ್, ಟೆಲಿಪೋನ್ ಬಿಲ್, ಮೊಬೈಲ್ ಬಿಲ್, ಡೇಟಾ ಕಾರ್ಡ್, ಗ್ಯಾಸ್, ಡಿಟಿಎಚ್, ಲ್ಯಾಂಡ್ ಲೈನ್ ಬಿಲ್ ಗಳನ್ನು ಪೇಟಿಎಂ ಮುಖಾಂತರ ಪಾವತಿಸಬಹುದು.

3. ಸುವಿಧಾ

3. ಸುವಿಧಾ

ಸುವಿಧಾ ಒಮಧೂ ಉತ್ತಮ ವಿಧಾನವಾಗಿದ್ದು, ಇದರ ಮೂಲಕ ನಿಮ್ಮ ಎಲ್ಲಾ ಯುಟಿಲಿಟಿ ಬಿಲ್ ಗಳನ್ನು ಪಾವತಿ ಮಾಡಬಹುದು. ಯುಟಿಲಿಟಿ ಬಲ್ ಕಲೆಕ್ಷನ್, ಇನ್ಸೂರೆನ್ಸ್ ಫ್ರೀಮಿಯಂ, ಟ್ರಾವೆಲ್ ಟಿಕೆಟ್, ವಿದ್ಯುತ್ ಬಿಲ್, ಟೆಲಿಪೋನ್ ಬಿಲ್, ಮೊಬೈಲ್ ಬಿಲ್, ಡಿಟಿಎಚ್ ರಿಚಾರ್ಜ್, ಹಣ ವರ್ಗಾವಣೆ ಸುವಿಧಾ ಮುಖಾಂತರ ಮಾಡಬಹುದು. ಗ್ರಾಹಕರು ಸುವಿಧಾ ಆಪ್ ಡೌನ್ಲೋಡ್ ಮಾಡಬಹುದು.

4. ಈಜಿ ಬಿಲ್ ಇಂಡಿಯ(Easy Bill India)

4. ಈಜಿ ಬಿಲ್ ಇಂಡಿಯ(Easy Bill India)

ಗ್ರಾಹಕರು ಈಜಿ ಬಿಲ್ ಇಂಡಿಯ(Easy Bill India) ಮೂಲಕ ಸರಳವಾಗಿ ಬಿಲ್ ಗಳನ್ನು ಪಾವತಿಸಬಹುದು.
ವಿದ್ಯುತ್ ಬಿಲ್, ಟೆಲಿಪೋನ್ ಬಿಲ್, ಮೊಬೈಲ್ ಬಿಲ್, ಡಿಟಿಎಚ್ ಬಿಲ್ ಗಳನ್ನು ಪಾವತಿಸಬಹುದು. ಬಿಲ್ ಪಾವತಿ ನಂತರ ಅಧಿಕೃತ ರಸೀತಿ ಪಡೆಯಬಹುದು. ಫಂಡ್ಸ್ ಗಳನ್ನು ಸಹ ವರ್ಗಾವಣೆ ಮಾಡಬಹುದಾಗಿದೆ. ಆರ್ಬಿಐ ಪೇಮೆಂಟ್ ವ್ಯವಸ್ಥೆಗೆ ಅನುಮತಿ ನೀಡಿದೆ.

5. ಆಕ್ಸಿಜನ್ ವಾಲೆಟ್(Oxigen Wallet)
ಆಕ್ಸಿಜನ್ ವಾಲೆಟ್ ಮುಖಾಂತರ ವಿದ್ಯುತ್ ಬಿಲ್, ಟೆಲಿಪೋನ್ ಬಿಲ್, ಮೊಬೈಲ್ ಬಿಲ್, ಗ್ಯಾಸ್, ಡಿಟಿಎಚ್, ಲ್ಯಾಂಡ್ ಲೈನ್ ಬಿಲ್ ಗಳನ್ನು ಬಿಲ್ ಪಾವತಿಸಬಹುದಾಗಿದೆ. ಇದು ಕೆಲ ನಗರಗಳಲ್ಲಿ ಮಾತ್ರ ಸೇವೆ ಒದಗಿಸುತ್ತಿದೆ.
ಗ್ರಾಹಕರು ರೂ. 100ಕ್ಕಿಂತ ಹೆಚ್ಚಿನ ಬಿಲ್ ಪಾವತಿಗೆ 100 ಪಾಯಿಂಟ್ ಗಳನ್ನು ಪಡೆಯುತ್ತಾರೆ.

6. ಬಿಜಲಿ ಬಚಾವೋ(Bijali Bachao)
ಬಿಜಲಿ ಬಚಾವೋ ಕೂಡ ಆನ್ಲೈನ್ ಸೇವೆ ಒದಗಿಸುತಿದ್ದು, ಇದು ವಿದ್ಯುತ್ ಬಿಲ್ ಪಾವತಿಗೆ ಮಾತ್ರ ಸಿಮಿತವಾಗಿದೆ.

 

English summary

Best Online Utility Bill Payment Services In India

Banks do provide an option to pay utility bills online. SBI, Union Bank, Syndicate Bank, ICICI, HDFC, HSBC, Axis Bank, Bank of India, Citi Bank, Corporation Bank are some of the banks which provide options to pay utility bills online.
Story first published: Saturday, November 12, 2016, 17:26 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X