ಪಿಪಿಎಪ್ ನಲ್ಲಿ ಸಾಲ ಪಡೆಯುವ ಮುನ್ನ ಇಲ್ಲೊಮ್ಮೆ ನೋಡಿ...

ನಿಗದಿ ಪಡಿಸಿದ ಅವಧಿಯ ವರ್ಷಗಳನ್ನು ಪೂರ್ಣಗೊಳಿಸಿದರೆ ಪಿಪಿಎಪ್ ಖಾತೆ ಮೇಲೆ ಸಾಲವನ್ನು ಪಡೆಯಬಹುದಾಗಿದೆ. ಬೇರೆ ಕಡೆ ಲಭ್ಯವಿರುವ ಸಾಲಕ್ಕಿಂತಲೂ ಇಲ್ಲಿ ತುಂಬಾ ಆಕರ್ಷಕ ಬಡ್ಡಿದರದಲ್ಲಿ ಸಾಲವನ್ನು ನೀಡಲಾಗುತ್ತದೆ.

ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಹೂಡಿಕೆ ಮೇಲೆ ಶೇ. 8 ಬಡ್ಡಿದರ ಲಭ್ಯವಿದ್ದು, ಇದು ಪ್ರತಿ ತ್ರೈಮಾಸಿಕದ ಆಧಾರದಲ್ಲಿ ಪರಿಷ್ಕರಿಸಲಾಗುತ್ತದೆ. ಪಿಪಿಎಫ್ ನಲ್ಲಿ ಹೂಡಿಕೆ ಮಾಡಲು 10 ಕಾರಣ

ಪಿಪಿಎಫ್ ಒಂದು ಆಕರ್ಷಕ ಹೂಡಿಕೆಯಾಗಿದ್ದು, ಇದರ ಮೇಲೆ ಪಡೆಯುವ ಬಡ್ಡಿದರವು ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿದೆ. ಇದು ಹೆಚ್ಚು ಆದಾಯ ಬಯಸುವ ಸಣ್ಣ ಹೂಡಿಕೆದಾರರಿಗೆ ಒಂದು ವರದಾನ ಎಂಬುದರಲ್ಲಿ ಸಂಶಯವಿಲ್ಲ. ನಿಗದಿ ಪಡಿಸಿದ ಅವಧಿಯ ವರ್ಷಗಳನ್ನು ಪೂರ್ಣಗೊಳಿಸಿದರೆ ಪಿಪಿಎಪ್ ಖಾತೆ ಮೇಲೆ ಸಾಲವನ್ನು ಪಡೆಯಬಹುದಾಗಿದೆ. ಬೇರೆ ಕಡೆ ಲಭ್ಯವಿರುವ ಸಾಲಕ್ಕಿಂತಲೂ ಇಲ್ಲಿ ತುಂಬಾ ಆಕರ್ಷಕ ಬಡ್ಡಿದರದಲ್ಲಿ ಸಾಲವನ್ನು ನೀಡಲಾಗುತ್ತದೆ.

ನೀವು ಪಿಪಿಎಎಪ್ ನಲ್ಲಿ ಸಾಲ ಪಡೆಯಲು ಬಯಸಿದಲ್ಲಿ ಈ ಅಂಶಗಳನ್ನು ತಿಳಿದುಕೊಳ್ಳೋಣ ಬನ್ನಿ...

1. ಇದು ಯಾವಾಗ ಲಭ್ಯ

1. ಇದು ಯಾವಾಗ ಲಭ್ಯ

6 ವರ್ಷಗಳ ಕಾಲಾವಧಿಗೆ ಖಾತೆಯನ್ನು ತೆರೆದವರು 3ನೆ ವರ್ಷದಿಂದ ಪಿಪಿಎಪ್ ಖಾತೆ ಮೇಲೆ ಸಾಲವನ್ನು ಪಡೆಯಲು ಅವಕಾಶವಿರುತ್ತದೆ.

2. ಗರಿಷ್ಠ ಮೊತ್ತ

2. ಗರಿಷ್ಠ ಮೊತ್ತ

ಮೂರನೆ ವರ್ಷಕ್ಕೆ ಗರಿಷ್ಠ ಮೊತ್ತ ಪಡೆಯುವ ಆಯ್ಕೆ ನಿಮ್ಮದಾಗಿದಲ್ಲಿ ಮೊದಲ ಹಣಕಾಸಿನ ವರ್ಷದ ಕೊನೆಯಲ್ಲಿ ನಿಮ್ಮ ಖಾತೆಯ ಗರಿಷ್ಠ 25% ಉಳಿತಾಯದ ಮೇಲೆ ಸಾಲದ ಮೊತ್ತವನ್ನು ನಿರ್ಬಂಧಿಸಲಾಗುತ್ತದೆ. ಅಂದರೆ ನಾಲ್ಕನೇ ವರ್ಷದಲ್ಲಿ ಎರಡನೇ ವರ್ಷದ ಉಳಿತಾಯವನ್ನು ಖಾತೆಗೆ ತೆಗೆದುಕೊಳ್ಳಲಾಗುತ್ತದೆ.

3. ಅರ್ಹತೆ

3. ಅರ್ಹತೆ

7ನೇ ವರ್ಷದ ಪ್ರಾರಂಭದಿಂದ ಪಿಪಿಎಪ್ ಖಾತೆ ಮೇಲೆ ಸಾಲವನ್ನು ಪಡೆಯಲು ಅರ್ಹತೆ ಇರುವುದಿಲ್ಲ. ಆದರೆ 7ನೇ ವರ್ಷದ ಅವಧಿಯಲ್ಲಿ ಹಣವನ್ನು ಹಿಂದಕ್ಕೆ ಪಡೆಯಬಹುದು.

4. ಸಾಲ ಮರುಪಾವತಿ

4. ಸಾಲ ಮರುಪಾವತಿ

36 ತಿಂಗಳುಗಳ ಒಳಗಾಗಿ ಸಾಲದ ಮೊತ್ತವನ್ನು ಮರುಪಾವತಿ ಮಾಡಬೇಕೆಂಬುದನ್ನು ಗಮನಿಸಬೇಕು. ತಿಂಗಳ ಕಂತುಗಳಲ್ಲಿ ಅಥವಾ ಭಾರಿ ಮೊತ್ತದ ವಿಧಾನದ ಮೂಲಕ ಸಾಲ ಮರುಪಾವತಿ ಮಾಡಬಹುದಾಗಿರುತ್ತದೆ.

5. ಸಾಲದ ಮೇಲಿನ ಬಡ್ಡಿದರ

5. ಸಾಲದ ಮೇಲಿನ ಬಡ್ಡಿದರ

ಚಾಲ್ತಿಯಲ್ಲಿರುವ ಪಿಪಿಎಪ್ ಬಡ್ಡಿದರಕ್ಕಿಂತಲು ಸಾಲದ ಮೇಲಿನ ಬಡ್ಡಿದರ ವಾರ್ಷಿಕವಾಗಿ 2% ಅನ್ವಯಿಸುತ್ತದೆ. ಸರಿಯಾದ ಸಮಯಕ್ಕೆ ಸಾಲವನ್ನು ಮರುಪಾವತಿಸದಿದ್ದರೆ 6% ಕ್ಕಿಂತಲು ಹೆಚ್ಚು ಬೆಲೆ ತೆರಬೇಕಾಗುತ್ತದೆ.

6. ಅಸಲು ಮತ್ತು ಬಡ್ಡಿ ಪಾವತಿ

6. ಅಸಲು ಮತ್ತು ಬಡ್ಡಿ ಪಾವತಿ

36 ತಿಂಗಳುಗಳ ಒಳಗಾಗಿ ಕಂತುಗಳಲ್ಲಿ ಅಥವಾ ಭಾರಿ ಮೊತ್ತಗಳಲ್ಲಿ ಅಸಲು ಮೊತ್ತವನ್ನು ಕಟ್ಟಬೇಕಾಗುತ್ತದೆ. ಅಸಲು ಮೊತ್ತವನ್ನು ಕಟ್ಟಿದ ಮೇಲೆ ಬಡ್ಡಿಯ ಭಾಗವನ್ನು ಎರಡು ತಿಂಗಳ ಕಂತುಗಳಲ್ಲಿ ಮರುಪಾವತಿಸಬೇಕಾಗುತ್ತದೆ.

7. ಎರಡನೇ ಸಾಲ

7. ಎರಡನೇ ಸಾಲ

ಪಿಪಿಎಪ್ ನಲ್ಲಿ ಮಾತ್ರ ಮೊದಲ ಸಾಲವನ್ನು ಹಿಂತಿರುಗಿಸಿದ ನಂತರ ಎರಡನೇ ಬಾರಿಗೆ ಸಾಲವನ್ನು ಪಡೆಯಬಹುದಾಗಿದೆ.

8. ಖಾತೆ ನಿಷ್ಕ್ರಿಯ

8. ಖಾತೆ ನಿಷ್ಕ್ರಿಯ

ಖಾತೆಯನ್ನು ನಿಷ್ಕ್ರಿಯಗೊಳಿಸಿದ ನಂತರ ಖಾತೆದಾರರು ಪಿಪಿಎಪ್ ಮೊತ್ತದ ಮೇಲೆ ಸಾಲವನ್ನು ಪಡೆಯಲು ಸಾಧ್ಯವಿಲ್ಲ. ಸಾಲವನ್ನು ಪಡೆಯಲು ಬಯಸಿದಲ್ಲಿ ಅಗತ್ಯವಿರುವ ಮೊತ್ತವನ್ನು ದಂಡದೊಂದಿಗೆ ಖಾತೆಗೆ ಹಾಕಿ ಸಕ್ರಿಯಗೊಳಿಸಿ ಸಾಲವನ್ನು ಪಡೆಯಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+