For Quick Alerts
ALLOW NOTIFICATIONS  
For Daily Alerts

ಪಿಪಿಎಫ್ ನಲ್ಲಿ ಹೂಡಿಕೆ ಮಾಡಲು 10 ಕಾರಣ

ಪಿಪಿಎಫ್ ಯೋಜನೆ ತುಂಬಾ ಆಕರ್ಷಕವಾಗಿರುವ ಸ್ಥಿರ ಆದಾಯ ಹೂಡಿಕೆಯಾಗಿದ್ದು, ಸಣ್ಣ ಹೂಡಿಕೆದಾರರಿಗಂತೂ ಇದೊಂದು ವರದಾನ. ಏಕೆಂದರೆ ಬೇರೆ ಹೂಡಿಕೆಗಳಿಗೆ ಹೋಲಿಸಿದರೆ ಇದರಲ್ಲಿ ಕಡಿಮೆ ರಿಸ್ಕ್ ಮತ್ತು ಹೆಚ್ಚು ಪ್ರತಿಫಲ ಪಡೆಯಬಹುದು.

By Siddu
|

ಕೇಂದ್ರ ಸರ್ಕಾರ 1968ರಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಯೋಜನೆಯನ್ನು ಪರಿಚಯಿಸಿತು. ಪಿಪಿಎಫ್ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ಅರಿವಿರುತ್ತದೆ. ಆದರೆ ಇದರ ಮೌಲ್ಯ ಹಾಗೂ ಪ್ರಯೋಜನಗಳ ಬಗ್ಗೆ ಸರಿಯಾದ ಮಾಹಿತಿ ಇರಲ್ಲ.

 

ಪಿಪಿಎಫ್ ಯೋಜನೆ ತುಂಬಾ ಆಕರ್ಷಕವಾಗಿರುವ ಸ್ಥಿರ ಆದಾಯ ಹೂಡಿಕೆಯಾಗಿದ್ದು, ಸಣ್ಣ ಹೂಡಿಕೆದಾರರಿಗಂತೂ ಇದೊಂದು ವರದಾನ. ಏಕೆಂದರೆ ಬೇರೆ ಹೂಡಿಕೆಗಳಿಗೆ ಹೋಲಿಸಿದರೆ ಇದರಲ್ಲಿ ಕಡಿಮೆ ರಿಸ್ಕ್ ಮತ್ತು ಹೆಚ್ಚು ಪ್ರತಿಫಲ ಪಡೆಯಬಹುದು. ಪಿಪಿಎಫ್ - ಬ್ಯಾಂಕ್ ಡಿಪಾಸಿಟ್ ಯಾವುದು ಉತ್ತಮ?

ನೋಟು ರದ್ದತಿಯ ಹಿನ್ನೆಲೆಯಲ್ಲಿ ದೇಶದ ಎಲ್ಲ ಬ್ಯಾಂಕುಗಳು ಬಡ್ಡಿದರ ಕಡಿತಗೊಳಿಸಿವೆ. ಶೇ. 6-7ರ ಮಿತಿಯಲ್ಲಿ ಬಡ್ಡಿದರ ನಿಗದಿಪಡಿಸಿದ್ದು, ಸಿಗುವ ಪ್ರತಿಫಲ ಕೂಡ ಕಡಿಮೆಯಾಗುತ್ತಿದೆ. ಪಿಪಿಎಫ್ ಹೂಡಿಕೆ ಮೇಲೆ ಶೇ. 7.8ರಷ್ಟು ಬಡ್ಡಿದರ ಲಭ್ಯವಿದೆ. ಹೀಗಾಗಿ ಪಿಪಿಎಫ್ ಆಕರ್ಷಕ ಹೂಡಿಕೆಗಳಲ್ಲಿ ಒಂದಾಗಿದ್ದು ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ.

ಪಿಪಿಎಪ್ ನಲ್ಲಿ ಹೂಡಿಕೆ ಮಾಡಲು 10 ಆಕರ್ಷಕ ಕಾರಣಗಳು ಇಲ್ಲಿವೆ ನೋಡಿ...

1. ಬ್ಯಾಂಕುಗಳಿಗಿಂತ ಹೆಚ್ಚಿನ ಬಡ್ಡಿ ದರ

1. ಬ್ಯಾಂಕುಗಳಿಗಿಂತ ಹೆಚ್ಚಿನ ಬಡ್ಡಿ ದರ

ಸರ್ಕಾರ ಪ್ರತಿ ತ್ರೈಮಾಸಿಕಕ್ಕೆ ಅನುಗುಣವಾಗಿ ಬಡ್ಡಿದರವನ್ನು ಪರಿಷ್ಕರಿಸುತ್ತದೆ. ಅದರ ಪ್ರಕಾರ ಪಿಪಿಎಫ್ ಬಡ್ಡಿದರವು ಬ್ಯಾಂಕುಗಳ ಬಡ್ಡಿದರಗಳಿಗಿಂತ ಹೆಚ್ಚಿರುವುದು ಖಚಿತವಾಗಿದೆ. ಬ್ಯಾಂಕುಗಳು ಪ್ರಸ್ತುತ ಶೇ.6-7ರ ಮಿತಿಯಲ್ಲಿ ಬಡ್ಡಿದರ ನೀಡುತ್ತಿವೆ. ಆದರೆ ಪಿಪಿಎಪ್ ಹೂಡಿಕೆ ಮೇಲೆ ನೀವು ಶೇ. 7.8 ರಷ್ಟು ಬಡ್ಡಿದರವನ್ನು ಪಡೆಯಬಹುದಾಗಿದೆ.

2.ತೆರಿಗೆ ಮುಕ್ತ ಆದಾಯ

2.ತೆರಿಗೆ ಮುಕ್ತ ಆದಾಯ

ದೇಶದಲ್ಲಿ ಕೆಲವೆ ಕೆಲವು ಹೂಡಿಕೆಗಳ ಮೇಲೆ ತೆರಿಗೆಯಿಂದ ವಿನಾಯಿತಿ ಪಡೆಯಬಹುದಾಗಿದೆ. ಅದರಲ್ಲಿ ಪಿಪಿಎಪ್ ಕೂಡ ಒಂದಾಗಿದ್ದು, ಪಿಪಿಎಫ್ ಮೇಲೆ ಪಡೆಯುವ ಬಡ್ಡಿದರವು ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿದೆ. ಇದು ಹೆಚ್ಚು ಆದಾಯ ಬಯಸುವ ಸಣ್ಣ ಹೂಡಿಕೆದಾರರಿಗೆ ಒಂದು ವರದಾನ.

3. 80C ಸೆಕ್ಷನ್ ಪ್ರಯೋಜನ
 

3. 80C ಸೆಕ್ಷನ್ ಪ್ರಯೋಜನ

ಆದಾಯ ತೆರಿಗೆ ಇಲಾಖೆಯ 80C ಸೆಕ್ಷನ್ ಕಾಯಿದೆ ಅಡಿಯಲ್ಲಿ ಪಿಪಿಎಫ್ ಮೇಲೆ ಹಿಚ್ಚಿನ ಲಾಭಗಳನ್ನು ಪಡೆಯಬಹುದಾಗಿದೆ. ಆದಾಯ ತೆರಿಗೆ ನೀತಿ ಅನುಗುಣವಾಗಿ 80C ಸೆಕ್ಷನ್ ಅಡಿಯಲ್ಲಿ 1.5 ಲಕ್ಷಕ್ಕಿಂತಲೂ ಹೆಚ್ಚಿನ ಹೂಡಿಕೆ ಮೇಲೆ ತೆರಿಗೆ ವಿನಾಯಿತಿ ಇರುತ್ತದೆ.

4. ತುಂಬಾ ಸುರಕ್ಷಿತ

4. ತುಂಬಾ ಸುರಕ್ಷಿತ

ಪಿಪಿಎಫ್ ನಲ್ಲಿ ಹೂಡಿಕೆ ಮಾಡುವುದು ತುಂಬಾ ಸುರಕ್ಷಿತ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಇದು ಸರ್ಕಾರದಿಂದ ನಿರ್ವಹಿಸಲ್ಪಡುವುದರಿಂದ ಇದರ ದುರ್ಬಳಕೆ ಅಸಾಧ್ಯ. ಅಲ್ಲದೆ ಸರ್ಕಾರ ಪಿಪಿಎಫ್ ಮೇಲೆ ನಿರ್ಲಕ್ಷ ತಾಳುವ ಸಾಧ್ಯತೆ ತುಂಬಾ ವಿರಳ.

5. ನಿವೃತ್ತಿ ಕಾರ್ಪಸ್ ವೃದ್ಧಿ

5. ನಿವೃತ್ತಿ ಕಾರ್ಪಸ್ ವೃದ್ಧಿ

ಪಿಪಿಎಫ್ ಅವಧಿಯನ್ನು 15 ವರ್ಷಗಳಿಗೆ ಸೀಮಿತಗೊಳಿಸಲಾಗುತ್ತದೆ. ನೀವು ಭಾಗಶಹ 7 ವರ್ಷಗಳ ನಂತರ ಹಣವನ್ನು ಪಡೆಯಬಹುದಾಗಿದೆ. ಇದು ನಿಮ್ಮ ನಿವೃತ್ತಿ ನಂತರವು ಹೆಚ್ಚು ಲಾಭ ಉಳಿಸುವ ಉತ್ತಮ ಸಾಧನವಾಗಿದೆ.

6. ಅಂಚೆ ಕಚೇರಿಗಳಿಗೆ ಮಾತ್ರ ಸೀಮಿತವಲ್ಲ

6. ಅಂಚೆ ಕಚೇರಿಗಳಿಗೆ ಮಾತ್ರ ಸೀಮಿತವಲ್ಲ

ಈ ಮೊದಲು ನೀವು ಪಿಪಿಎಫ್ ಖಾತೆಯನ್ನು ಅಂಚೆ ಕಚೇರಿಗಳಲ್ಲಿ ಮಾತ್ರ ತೆರೆಯಬಹುದಿತ್ತು. ಆದರೆ ಇಂದಿನ ದಿನಗಳಲ್ಲಿ ಅಂಚೆ ಕಛೇರಿಗಳನ್ನು ಹೊರತುಪಡಿಸಿದಂತೆ ಖಾಸಗಿ ಹಾಗೂ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲೂ ಪಿಪಿಎಪ್ ಖಾತೆಗಳನ್ನು ತೆರೆಯಬಹುದಾಗಿದೆ. ಪಿಪಿಎಫ್ ಸರಳವಾಗಿ ಹಾಗೂ ಮುಕ್ತವಾಗಿ ವರ್ಗಾಯಿಸಬಹುದಾಗಿದೆ.

7. ಸಣ್ಣ ಮೊತ್ತದ ನಿಧಿಯನ್ನು ಇಡಬಹುದು

7. ಸಣ್ಣ ಮೊತ್ತದ ನಿಧಿಯನ್ನು ಇಡಬಹುದು

ಒಂದು ವರ್ಷದ ಅವಧಿಯಲ್ಲಿ ರೂ. 500ರಷ್ಟು ಕಡಿಮೆ ಅಥವಾ 1.5 ಲಕ್ಷದಷ್ಟು ಗರಿಷ್ಠ ಬಂಡವಾಳ ಹೂಡಿಕೆ ಮಾಡಬಹುದು. ಸಣ್ಣ ಮೊತ್ತದ ಹಣವನ್ನು ಪ್ರತಿ ವರ್ಷ ಇಡಬಹುದಾಗಿದ್ದು, ಇವುಗಳ ಮೇಲೆ ಹೆಚ್ಚಿನ ಲಾಭಗಳನ್ನು ಪಡೆಯಬಹುದಾಗಿದೆ.

8. ಖಾತೆ ವರ್ಗಾವಣೆ ಸಾಧ್ಯ

8. ಖಾತೆ ವರ್ಗಾವಣೆ ಸಾಧ್ಯ

ಪಿಪಿಎಫ್ ಖಾತೆಯನ್ನು ಒಂದು ಅಂಚೆ ಕಚೇರಿಯಿಂದ ಇನ್ನೊಂದು ಅಂಚೆ ಕಚೇರಿಗೆ ಅಥವಾ ಅಂಚೆ ಕಚೇರಿಯಿಂದ ಬ್ಯಾಂಕುಗಳಿಗೆ ಅಥವಾ ಬ್ಯಾಂಕುಗಳಿಂದ ಅಂಚೆ ಕಚೇರಿಗಳಿಗೆ ಅಥವಾ ಒಂದು ಬ್ಯಾಂಕಿನಿಂದ ಇನ್ನೊಂದು ಬ್ಯಾಂಕಿಗೆ ಖಾತೆಯನ್ನು ವರ್ಗಾಯಿಸಬಹುದು.

9. ಮೆಚುರಿಟಿ ಅವಧಿ

9. ಮೆಚುರಿಟಿ ಅವಧಿ

ಪಬ್ಲಿಕ್ ಪ್ರಾವಿಡೆಂಟ್ ಪಂಡ್ ಖಾತೆಯ ಮೆಚುರಿಟಿ ಅವಧಿ ಕನಿಷ್ಟ 15 ವರ್ಷ ಆಗಿರುತ್ತದೆ. ನೀವು ಇಷ್ಟ ಪಟ್ಟಲ್ಲಿ ಈ ಅವಧಿಯನ್ನು ಹೆಚ್ಚುವರಿ 5 ವರ್ಷ ವಿಸ್ತರಿಸಬಹುದು. ಇದಕ್ಕಿಂತ ಹೆಚ್ಚು ವಿಸ್ತರಿಸಲು ಸಾಧ್ಯ ಇರುವುದಿಲ್ಲ. ಪಿಪಿಎಫ್ ಖಾತೆ ಮುಚ್ಚಿಸುವವರೆಗೂ ಬಡ್ಡಿದರವನ್ನು ಪಡೆಯಬಹುದು.

10. ವಯಸ್ಸಿನ ಮಿತಿಯಿಲ್ಲ

10. ವಯಸ್ಸಿನ ಮಿತಿಯಿಲ್ಲ

ಪಬ್ಲಿಕ್ ಪ್ರಾವಿಡೆಂಟ್ ಪಂಡ್ ಖಾತೆ ತೆರೆಯಲು ವಯಸ್ಸಿನ ಇತಿಮಿತಿ ಇರುವುದಿಲ್ಲ. ಸಣ್ಣ(ಮೈನರ್) ವಯಸ್ಸಿನವರ ಹೆಸರಿನಲ್ಲಿ ಖಾತೆ ತೆರೆದು ಪೋಷಕರು ಅದನ್ನು ನಿರ್ವಹಿಸಬಹುದು.

English summary

PPF: Top 10 Reasons for Investing In Public Provided Fund

The Public Provident Fund (PPF) Scheme, 1968 is a tax-free savings avenue that was introduced by the Ministry of Finance (MoF) in India in the year 1968. Interest earned on deposits in the PPF account are not taxable. Deposits made towards PPF accounts can be claimed as tax deductions.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X