ಜಿಎಸ್ಟಿ ಮಸೂದೆ ಮತ್ತು ನೋಟು ರದ್ದತಿ ಪರಿಣಾಮಗಳು 2017ರ ಕೇಂದ್ರ ಬಜೆಟ್ ಮೇಲೆ ಉಂಟಾಗಲಿದೆ ಎನ್ನುವುದು ತಜ್ಞರ ಅಭಿಮತ. ಬಜೆಟ್ ನಲ್ಲಿ ಬಡವರಿಗೆ, ಮಧ್ಯಮ ವರ್ಗ, ಮೆಟ್ರೋ, ಅರೆ ನಗರ ಪ್ರದೇಶಗಳಲ್ಲಿನ ಜನರ ನಿರೀಕ್ಷೆಗಳಂತೂ ಬೆಟ್ಟದಷ್ಟು ಇವೆ.
ಜಿಎಸ್ಟಿ ಮಸೂದೆ ಮತ್ತು ನೋಟು ರದ್ದತಿ ಪರಿಣಾಮಗಳು 2017ರ ಕೇಂದ್ರ ಬಜೆಟ್ ಮೇಲೆ ಉಂಟಾಗಲಿದೆ ಎನ್ನುವುದು ತಜ್ಞರ ಅಭಿಮತ. ಪ್ರಸ್ತುತ ಬಜೆಟ್ ನಲ್ಲಿ ಬಡವರಿಗೆ, ಮಧ್ಯಮ ವರ್ಗ, ಮೆಟ್ರೋ, ಅರೆ ನಗರ ಪ್ರದೇಶಗಳಲ್ಲಿನ ಜನರ ನಿರೀಕ್ಷೆಗಳಂತೂ ಬೆಟ್ಟದಷ್ಟು ಇವೆ.
ಹಣಕಾಸು ಸಚಿವ ಅರುಣ್ ಜೇಟ್ಲಿ ಮಧ್ಯಮ ವರ್ಗ ಮತ್ತು ಬಡವರಿಗಾಗಿ ಹಲವಾರು ವಿಧಗಳಲ್ಲಿ ಪ್ರಯೋಜನಕಾರಿ ಯೋಜನೆಗಳನ್ನು ಮಂಡಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಅರುಣ್ ಜೇಟ್ಲಿ ಮಂಡಿಸಲಿರುವ ಪ್ರಸ್ತುತ ಬಜೆಟ್ ನಲ್ಲಿ ಇರಬಹುದಾದ 10 ಅಂಶಗಳು ಇಲ್ಲಿ ನೀಡಲಾಗಿದೆ...
1. ತೆರಿಗೆಯ ಕನಿಷ್ಟ ಮಿತಿ ಹೆಚ್ಚಳ
ಪ್ರಸ್ತುತ ರೂ. 2.5 ಲಕ್ಷಕ್ಕಿಂತ ಹೆಚ್ಚಿರುವ ಆದಾಯದ ಮೇಲೆ ತೆರಿಗೆ ವಿಧಿಸಲಾಗುತ್ತಿದೆ. ಒಂದು ವೇಳೆ ಇದರ ಕನಿಷ್ಟ ಮಿತಿ ಹೆಚ್ಚಾದರೆ ತೆರಿಗೆದಾರರಿಗೆ ಹೆಚ್ಚು ಪ್ರಯೋಜನವಾಗಲಿದೆ. ಅದರಲ್ಲೂ ಮಧ್ಯಮ ವರ್ಗದವರಿಗೆ ಇದರ ಉಪಯೋಗ ಹೆಚ್ಚಾಗಲಿದೆ.
2. ತೆರಿಗೆ ಹಂತಗಳ ಪುನರ್ ರಚನೆ
ತೆರಿಗೆಗಳನ್ನು ಹಂತಹಂತವಾಗಿ ಪುನರ್ ರಚನೆ ಮಾಡುವುದು ನಗರದ ಮಧ್ಯಮ ವರ್ಗದವರಿಗೆ ಮುಲಾಮು ಆಗಲಿದೆ.
ಪ್ರಸ್ತುತ 2.5 ಲಕ್ಷದಿಂದ 5 ಲಕ್ಷದವರೆಗಿನ ವಾರ್ಷಿಕ ಆದಾಯದ ಮೇಲೆ ಶೇ. 10ರಷ್ಟು ತೆರಿಗೆ ವಿಧಿಸಲಾಗುತ್ತಿದೆ. 5 ಲಕ್ಷದಿಂದ 10 ಲಕ್ಷದವರೆಗಿನ ಆದಾಯದ ಮೇಲೆ ಶೇ. 20 ಹಾಗೂ 1 ಲಕ್ಷಕ್ಕಿಂತ ಹೆಚ್ಚಿನದಕ್ಕೆ ಶೇ. 30ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಹೀಗಾಗಿ ಮೊದಲ ಎರಡು ಹಂತಗಳ ಮೇಳೆ ತೆರಿಗೆ ಕಡಿಮೆ ಮಾಡಬಹುದು ಅಥವಾ ಆದಾಯದ ವ್ಯಾಪ್ತಿ ವಿಸ್ತರಿಸಬಹುದು.
3. ವಿನಾಯಿತಿ ಮಿತಿಯಲ್ಲಿ ಹೆಚ್ಚಳ
ಸಂಬಳ ಪಡೆಯುವ ನೌಕರರು ಭತ್ಯೆ, ವೈದ್ಯಕೀಯ ವೆಚ್ಚ, ಮಕ್ಕಳ ಶಿಕ್ಷಣ, ಮನೆ ಬಾಡಿಗೆ, ರಜೆ ಪ್ರಯಾಣ ಹೀಗೆ ಹಲವಾರು ಅವಕಾಶ/ಪ್ರಯೋಜನಗಳ ಮೇಲೆ ತೆರಿಗೆ ವಿನಾಯಿತಿ ಪಡೆಯುವ ಸಾಧ್ಯತೆ ಇದೆ. ಭತ್ಯೆ ಮಿತಿಗಳನ್ನು ಬಹಳ ಹಿಂದೆಯೇ ನಿರ್ಧರಿಸಲಾಗಿದ್ದು, ಹಣದುಬ್ಬರದ ದೃಷ್ಟಿಯಿಂದ ಪರಿಷ್ಕರಿಸುವ ಅಗತ್ಯ ಇದೆ.
4. 80C ಅಡಿಯಲ್ಲಿ ವಿನಾಯಿತಿ
ಪ್ರಸ್ತುತ ಆದಾಯ ತೆರಿಗೆ ಕಾಯಿದೆ ಪ್ರಕಾರ 80C ಅಡಿಯಲ್ಲಿ ರೂ. 1.5 ಲಕ್ಷದಿಂದ 3 ಲಕ್ಷದವರೆಗೆ ವಿನಾಯಿತಿಗೆ ಅವಕಾಶವಿದೆ. ಜೇಟ್ಲಿ ಇದನ್ನು ಹೆಚ್ಚಿಸಿದ್ದಲ್ಲಿ ಕುಟುಂಬದ ಉಳಿತಾಯ ಹೆಚ್ಚಾಗಿ ಹೂಡಿಕೆ ಪ್ರಮಾಣ ಹೆಚ್ಚಾಗಲಿದೆ.
5. ಹಿರಿಯ ನಾಗರಿಕರಿಗೆ ವಿನಾಯಿತಿ ಮಿತಿ
ಪ್ರಸ್ತುತ 60-80 ವರ್ಷದವರೆಗಿನ ಹಿರಿಯ ನಾಗರಿಕರಿಗೆ ರೂ. 3 ಲಕ್ಷದ ಮೇಲೆ ವಿನಾಯಿತಿ ಮಿತಿ ಹಾಗೂ 80ಕ್ಕಿಂತ ಮೇಲ್ಪಟ್ಟ ಸೂಪರ್ ಹಿರಿಯ ನಾಗರಿಕರಿಗೆ ರೂ. 5ಲಕ್ಷದ ಮೇಲೆ ವಿನಾಯಿತಿ ಇದೆ. ಇದರ ಮಿತಿಯನ್ನು ಹೆಚ್ಚಿಸುವ ಸಾಧ್ಯತೆಗಳು ಇವೆ.
6. ಬಾಂಡ್
ಇನ್ಫ್ರಾಸ್ಟ್ರಕ್ಚರ್ ಬಾಂಡ್ ಗಳ ಮೇಲೆ ಕಡಿತ ಮಾಡುವ ನಿರ್ಣಯ ಸರ್ಕಾರ ತೆಗೆದುಕೊಳ್ಳಬಹುದು. ರೂ. 20 ಸಾವಿರದ ಮೇಲೆ ಸರ್ಕಾರ ಪುನರ್ ಬದಲಾವಣೆ ಮಾಡಬಹುದು. ಬಾಂಡ್ ಗಳ ಮೇಲಿನ ಹೂಡಿಕೆಗಳಲ್ಲಿ ನಿಯಮಗಳಲ್ಲಿ ಬದಲಾವಣೆಗಳಾದಲ್ಲಿ ಬೆಳವಣಿಗೆ ವೃದ್ಧಿ ಮತ್ತು ಉದ್ಯೋಗ ಹೆಚ್ಚಾಗಲಿದೆ.
7. EPF, PPF, NPS ಹೂಡಿಕೆಗೆ ಪ್ರೋತ್ಸಾಹ
ಇಪಿಎಫ್, ಪಿಪಿಎಫ್, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ(ಎನ್ಪಿಎಸ್)ಯಲ್ಲಿ ಹೂಡಿಕೆ ಹೆಚ್ಚಳ ಉತ್ತೇಜನಕ್ಕಾಗಿ ಜೇಟ್ಲಿ ಹೆಚ್ಚೆಚ್ಚು ಪ್ರೋತ್ಸಾಹ ಕೊಡುವ ಸಾಧ್ಯತೆ ಇದೆ. 80CCD(1B)ಸೆಕ್ಷನ್ ಅಡಿಯಲ್ಲಿ NPS ಹೂಡಿಕೆಗೆ ಪ್ರೋತ್ಸಾಹ ಸಿಗಲಿದೆ. ಜತೆಗೆ ಪಿಪಿಎಫ್ ಮತ್ತು ಇಪಿಎಫ್ ಹೂಡಿಕೆ ಉತ್ತೇಜನ ಸಿಗಲಿದ್ದು, ಬಡ್ಡಿದರ, ಅವಧಿ, ಐದು ವರ್ಷಗಳ ನಂತರದ ಮೊತ್ತ, ಟಿಡಿಎಸ್ ಇತ್ಯಾದಿ ಮೇಲೆ ಪ್ರೋತ್ಸಾಹ ಹಾಗೂ 80C ಅಡಿಯಲ್ಲಿ ವಿನಾಯಿತಿ ನಿರೀಕ್ಷೆ ಇದೆ.
8. ಗೃಹಸಾಲ
ಪ್ರಧಾನ ಮಂತ್ರಿ ಅವಾಸ್ ಯೋಜನಾ ಅಡಿಯಲ್ಲಿ ಪ್ರಧಾನಿ ಮೋದಿಯವರು ರೂ. 12 ಲಕ್ಷ ಮತ್ತು 9 ಲಕ್ಷ ಗೃಹಸಾಲದ ಮೇಲೆ ಶೇ. 3 ಹಾಗೂ ಶೇ. 4ರಷ್ಟು ಬಡ್ಡಿದರ ಘೋಷಿಸಿದ್ದಾರೆ. ಹೀಗಾಗಿ ಪ್ರಸ್ತುತ ಬಜೆಟ್ ನಲ್ಲಿ ಹೆಚ್ಚು ಮೊತ್ತದ ಗೃಹಸಾಲದ ಮೇಲೆ ಕಡಿಮೆ ಬಡ್ಡಿದರ ವಿಧಿಸುವ ಸಾಧ್ಯತೆ ಇದೆ.
9. ಇಎಂಐ ಮೇಲೆ ಕಡಿತ
ಪ್ರಸ್ತುತ 2 ಲಕ್ಷದವರೆಗಿನ ಗೃಹಸಾಲದ ಬಡ್ಡಿ ಮೇಲೆ ಕಡಿತ ಲಭ್ಯವಿದೆ. ಇದು 1.5 ಲಕ್ಷದವರೆಗೆ ಮೂಲ ಮರುಪಾವತಿಯ ಮೇಲೂ ಕಡಿತ ಪಡೆಯಬಹುದಾಗಿದೆ. ಈ ಎರಡು ಹಂತಗಳಲ್ಲೂ ಕಡಿತದ ಮಿತಿಯನ್ನು ಹೆಚ್ಚಿಸುವ ಸಾಧ್ಯತೆ ಇದೆ.
ವಿಮಾ ಉದ್ಯಮಕ್ಕೆ ಯಾವ ಲಾಭ
ಅನಾಣ್ಯೀಕರಣದ ಹಿನ್ನೆಲೆಯಲ್ಲಿ ವಿಮಾ ಉದ್ದಿಮೆಯು ಹೆಚ್ಚಿನ ತೆರಿಗೆ ವಿನಾಯಿತಿಯನ್ನು ಎದುರು ನೋಡುತ್ತಿದೆ. ಮುಂಬರುವ ಬಜೆಟ್ ನಲ್ಲಿ ಕಡ್ಡಾಯ ಗೃಹ ವಿಮೆ ಮತ್ತು ಇ-ಪಾವತಿ ಮೇಲೆ ಹೆಚ್ಚು ಗಮನ ಕೇಂದ್ರಿಕರಿಸುವುದರಿಂದ ಭಾರತದಲ್ಲಿ ವಿಮಾ ವಲಯಕ್ಕೆ ಇದು ಶಕ್ತಿ ತುಂಬಲಿದೆ. ಬರಲಿರುವ ಬಜೆಟ್ ನಲ್ಲಿ ಕಡಿಮೆ ತೆರಿಗೆ ಮತ್ತು ಹೆಚ್ಚು ವಿನಾಯಿತಿ ಇರುವ ನಿಯಮಗಳು ಜಾರಿ ತರುವ ಸಾದ್ಯತೆ ಇದೆಯೆಂದು ಎಡೆಲ್ವಿಯೆಸ್ ಟೊಕಿಯೊ ಜೀವ ವಿಮಾ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ದೀಪಕ್ ಮಿತ್ತಲ್ ತಿಳಿಸಿದ್ದಾರೆ.
ಪಿಂಚಣಿ ಮತ್ತು ನಿವೃತ್ತಿ ಉಳಿತಾಯಕ್ಕೆ ಸಂಬಂಧಿಸಿದಂತ ಪ್ರಯೋಜನಗಳು ಈ ಬಜೆಟ್ ನಲ್ಲಿ ಸಿಗುವ ಸಾಧ್ಯತೆಗಳಿವೆ ಎಂದಿದ್ದಾರೆ. ಹತ್ತು ಕೋಟಿ ಇರುವ ಭಾರತದ ಹಿರಿಯ ನಾಗರಿಕರಿಗೆ ತೆರಿಗೆ ಪರಿಧಿಯಿಂದ ಪರಿಹಾರ ಲಭ್ಯವಾಗಲಿದೆ ಎನ್ನಲಾಗಲಿದೆ.
More From GoodReturns

Biggest Airport: ಭಾರತದ ಅತಿದೊಡ್ಡ ವಿಮಾನ ನಿಲ್ದಾಣ ಸಂಚಾರಕ್ಕೆ ಸಿದ್ಧ; 45 ದಿನದೊಳಗೆ ಆರಂಭ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

LPG Cylinder Shortage Live Updates: ಭಾರತದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ಪಿಎಂ ಮೋದಿ ಮಹತ್ವದ ಸಭೆ

LPG ಪೂರೈಕೆಯಲ್ಲಿ ಕೊರತೆ; ದೇಶದಲ್ಲಿ ಎಲ್ಪಿಜಿ ಉತ್ಪಾದನೆ 10% ಹೆಚ್ಚಳ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Bank Holidays: ಮಾರ್ಚ್ನಲ್ಲಿ ಬ್ಯಾಂಕ್ಗಳಿಗೆ 18 ದಿನ ರಜೆ! ಗ್ರಾಹಕರೇ ಇಲ್ಲಿ ಗಮನಿಸಿ

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?

Market Prediction: ನಾಳೆ ಹೇಗಿರಲಿದೆ ಷೇರು ಮಾರುಕಟ್ಟೆ? ಲಾಭವೋ? ನಷ್ಟವೋ? ಇಲ್ಲಿದೆ ಓದಿ



Click it and Unblock the Notifications