ಹಿಂದುಗಳ ಹಲವು ಪವಿತ್ರ ದಿನಗಳಲ್ಲಿ ಅತ್ಯಂತ ಪವಿತ್ರವಾದ ಶುಭ ಮುಹೂರ್ತಗಳಲ್ಲಿ ಯುಗಾದಿ, ಅಕ್ಷಯ ತೃತೀಯ, ವಿಜಯ ದಶಮಿ ಮುಖ್ಯವಾಗಿವೆ. ಈ ದಿವಸಗಳಂದು ಸಾಮಾನ್ಯವಾಗಿ ಎಲ್ಲಾ ಶುಭ ಕೆಲಸವನ್ನು ಮಾಡಿದರೆ ಭಾರೀ ಒಳ್ಳೆದು.
ಹಿಂದುಗಳ ಅತ್ಯಂತ ಪವಿತ್ರವಾದ ಶುಭ ಮುಹೂರ್ತಗಳಲ್ಲಿ ಯುಗಾದಿ, ಅಕ್ಷಯ ತೃತೀಯ, ವಿಜಯ ದಶಮಿಗಳದ್ದು ಮೇಲ್ಪಂಕ್ತಿ. ಈ ದಿವಸಗಳಂದು ಸಾಮಾನ್ಯವಾಗಿ ಎಲ್ಲಾ ಶುಭ ಕೆಲಸವನ್ನು ಮಾಡಿದರೆ ತುಂಬಾ ಒಳ್ಳೆದು. ಅಕ್ಷಯ ತೃತೀಯ ದಿವಸ ಜೀವನದ ಹೊಸ ಕೆಲಸ, ಉದ್ಯೋಗ ಪ್ರಾರಂಭ, ಚಿನ್ನಾಭರಣ ಖರೀದಿ ತುಂಬಾ ಶುಭಕರ.
ಹೀಗಾಗಿ ಪ್ರತಿವರ್ಷ ಅಕ್ಷಯ ತೃತೀಯ ದಿನದಂದು ಚಿನ್ನಾಭರಣ, ಆಸ್ತಿ ಕೊಳ್ಳುವವರ ಸಂಖ್ಯೆ ದ್ವಿಗುಣವಾಗುತ್ತಲೇ ಇದೆ. ಚಿನ್ನಾಭರಣ ಪರಿಶುದ್ದತೆ ಅಳೆಯುವುದು ಹೇಗೆ?
ಅಕ್ಷಯ ತೃತೀಯ ವೈಶಿಷ್ಟ್ಯ
ಗಂಗಾ ಮಾತೆ ಸ್ವರ್ಗದಿಂದ ಭೂಮಿಗಿಳಿದ ದಿನವೇ ಅಕ್ಷಯ ತೃತೀಯ ಎಂಬ ಪ್ರತೀತಿ. ಇದು ಕೃತ ಯುಗದ ಪ್ರಾರಂಭ ದಿನ. ಪರಶುರಾಮ ಹಾಗೂ ಬಸವೇಶ್ವರರು ಜನಿಸಿದ್ದು ಇದೇ ದಿವಸ. ಅಕ್ಷಯ ತೃತೀಯದಂದು ವಿಷ್ಣುವಿನ ಪೂಜೆ ಮಾಡಿದರೆ ಮೋಕ್ಷ ದೊರೆಯುವುದೆಂಬ ಪ್ರತೀತಿ ಇದೆ. ಅದರಲ್ಲೂ ಅಕ್ಷಯ ತೃತೀಯ ತಿಥಿಯ ಜೊತೆ ರೋಹಿಣಿ ನಕ್ಷತ್ರವಿದ್ದರೆ ಮಹಾ ಪುಣ್ಯಕರ ಎಂಬ ನಂಬಿಕೆಯಿದೆ. ಈ ದಿನದಂದು ವಿಷ್ಣು ಮತ್ತು ಲಕ್ಷ್ಮೀ ಗಂಗಾದೇವಿಗೆ ಪೂಜೆ ಸಲ್ಲಿಸಿದ್ದರಿಂದ ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ಸಕಲ ದೋಷ ಪರಿಹಾರವಾಗುತ್ತದೆಂದು ಪುರಾಣ ಪ್ರತೀತಿ ಇದೆ.
ಸೂರ್ಯ ಚಂದ್ರ ಉಜ್ವಲ ಸಮ್ಮಿಲನ
ಅಕ್ಷಯ ತೃತೀಯ ದಿನ ಸೂರ್ಯ, ಚಂದ್ರ ಏಕಕಾಲದಲ್ಲಿ ಉನ್ನತ ಪ್ರಮಾಣ ಮುಟ್ಟಿ ಉಚ್ಚರಾಶಿಯಲ್ಲಿ ಉಜ್ವಲತೆ ಸಂಭವಿಸುವುದರಿಂದ ಎಲ್ಲಾ ಕಾರ್ಯಗಳಿಗೆ ಶುಭಕರ. ಸೂರ್ಯ ಆತ್ಮಕಾರಕವಾದರೆ, ಚಂದ್ರ ಮನಸ್ಸುಕಾರಕ. ಹೀಗಾಗಿ ಆತ್ಮ ಮತ್ತು ಮನಸ್ಸು ಪರಿಪೂರ್ಣತೆ ಕಾಣುವ ದಿನ ಇದಾಗಿದೆ.
ಪುರಾಣ ಪ್ರತೀತಿ
ಶ್ರೀಕೃಷ್ಣನ ಆದೇಶದಂತೆ ಪಾಂಡವರು ಸೂರ್ಯನನ್ನು ಪ್ರಾರ್ಥಿಸಿ ದ್ರೌಪದಿ ಅಕ್ಷಯ ಪಾತ್ರೆಯನ್ನು ಪಡೆದ ದಿನವೇ ಈ ಅಕ್ಷಯ ತೃತೀಯ. ಚಾಮುಂಡೇಶ್ವರಿ ರಾಕ್ಷಸರನ್ನು ಸಂಹರಿಸಿದ್ದು, ವೇದವ್ಯಾಸರು ಗಣಪತಿಯೊಂದಿಗೆ ಮಹಾಭಾರತ ಬರೆಯಿಸಲು ಪ್ರಾರಂಭಿಸಿದ್ದು ಇದೇ ದಿನ. ಹೀಗಾಗಿ ಅಕ್ಷಯ ತೃತೀಯ ದಿನ ಶುಭಕಾರ್ಯ ಹಾಗೂ ದಾನಧರ್ಮ ಮಾಡಿದರೆ ಹೆಚ್ಚಿನ ಪ್ರತಿಫಲ ಸಿಗುತ್ತದೆ.
ಚಿನ್ನಾಭರಣ ಆಸ್ತಿ ಖರೀದಿಗೆ ಯೋಗ್ಯ
ಈ ಅಕ್ಷಯ ತೃತೀಯದಂದು ಚಿನ್ನಾಭರಣ, ರತ್ನಾಭರಣ, ಭೂಮಿ ಇತ್ಯಾದಿ ಖರೀದಿ ಹಾಗೂ ಆಸ್ತಿಯಲ್ಲಿ ಹೂಡಿಕೆಗೆ ಯೋಗ್ಯ. ಜನರು ಉಳಿತಾಯ ಮತ್ತು ಸಂಪತ್ತಿನ ಸದುಪಯೋಗ ಹಾಗೂ ಸಮೃದ್ಧಿಗಾಗಿ ಖರೀದಿ ಮತ್ತು ಹೂಡಿಕೆಗೆ ತೊಡಗುತ್ತಾರೆ. ಜತೆಗ ವಿವಾಹ, ಗೃಹಪ್ರವೇಶ ಮಾಡಬಹುದಾಗಿದೆ.
ಅಕ್ಷಯ ತೃತೀಯ ಕೊಡುಗೆ
ಪ್ರತಿ ಬಾರಿ ಅಕ್ಷಯ ತೃತೀಯ ಸಂಭ್ರಮ ಚಿನ್ನ ಪ್ರಿಯರ ಸಡಗರವನ್ನು ಇಮ್ಮಡಿಗೊಳಿಸುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಹಿನ್ನೆಲೆಯಲ್ಲಿ ಚಿನ್ನಾಭರಣ ಮಳಿಗೆಗಳು ಅಕ್ಷಯ ತೃತೀಯದಂದು ಗ್ರಾಹಕರನ್ನು ಆಕರ್ಷಿಸಲು ತುದಿಗಾಲಲಿ ನಿಲ್ಲುತ್ತವೆ. ಈ ಸಂಭ್ರಮವನ್ನು ಹಲವಾರು ವಿಶೇಷ ಕೊಡುಗೆಗಳೊಂದಿಗೆ ಸ್ವಾಗತಿಸುತ್ತಿವೆ.
More From GoodReturns

Bengaluru Gold: ಬೆಂಗಳೂರಿನ ಚಿನ್ನ ಪ್ರಿಯರಿಗೆ ಶಾಕ್; ದಿಢೀರ್ 7000 ರೂ. ಏರಿಕೆ ಕಂಡ ಬಂಗಾರ

Gold Rate Bengaluru: ಮಹಿಳಾ ದಿನಾಚರಣೆಯಂದೇ ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ಗೊತ್ತಾ ಬೆಲೆ?

Gold Rate: ಚಿನ್ನ ಕೊಳ್ಳುವವರಿಗೆ ‘ಗುರುದೆಸೆ’…ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ 9,800 ರೂ. ಕುಸಿತ!

Gold Rate Today: ಚಿನ್ನದ ಬೆಲೆ ದಿಢೀರ್ ಏರಿಕೆ; ಒಂದೇ ದಿನ 7,000 ರೂ. ಹೆಚ್ಚಳ

Gold Prices: ತೈಲ ಬೆಲೆ ಏರಿಕೆ ನಡುವೆಯೂ ಚಿನ್ನದ ಬೆಲೆ ಕುಸಿತ...ಭಾರತದಲ್ಲಿ ಹೂಡಿಕೆದಾರರನ್ನು ಆಘಾತ ನೀಡಿದ ಬೆಳವಣಿಗೆ

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Gold Price India: ದಿಢೀರ್ ಏರಿಕೆ ಹಾದಿಯನ್ನೇ ಅನುಸರಿಸಿದ ಚಿನ್ನದ ಬೆಲೆ…25,100 ರೂ. ಏರಿಕೆ!

Gold Rate Today: ಶುಕ್ರವಾರ ಚಿನ್ನ ಪ್ರಿಯರಿಗೆ ಒಲಿದ ಲಕ್ಷ್ಮಿ! 7,000 ರೂ. ಇಳಿಕೆ

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Gold Rate Down: ಚಿನ್ನ ಪ್ರಿಯರಿಗೆ ಜಾಕ್ಪಾಟ್! ದಿಢೀರ್ 3,110 ರೂ. ಇಳಿಕೆ



Click it and Unblock the Notifications