ಮೋದಿಯವರ 'ಪ್ರಧಾನಮಂತ್ರಿ ಜನಧನ ಯೋಜನೆಯ' ಸಾಧನೆಗಳೇನು?

ಪ್ರಧಾನಮಂತ್ರಿ ಜನಧನ ಯೋಜನೆ ಅಗಸ್ಟ್ 28, 2014ರಂದು ಲಾಂಚ್ ಮಾಡಲಾಗಿದೆ. ಕಳೆದ ಎರಡು ವರ್ಷ ಹತ್ತು ತಿಂಗಳ ಅವಧಿಯಲ್ಲಿ ಈ ಯೋಜನೆ ಮೂಲಕ ಅವಧಿಯಲ್ಲಿ ಮಾಡಿರುವ ಸಾಧನೆಗಳ ವಿವರವನ್ನು ಇಲ್ಲಿ ನೀಡಲಾಗಿದೆ.

ಭಾರತೀಯ ಪ್ರತಿಯೊಬ್ಬ ಪ್ರಜೆಗೂ ಬ್ಯಾಂಕಿಂಗ್ ಸೌಲಭ್ಯಗಳನ್ನು ಕಲ್ಪಿಸುವುದು ಜನಧನ ಯೋಜನೆಯ ಪ್ರಮುಖ ಧ್ಯೇಯ. ಈ ಯೋಜನೆ ಅಡಿ ಬ್ಯಾಂಕ್ ಖಾತೆ, ವಿಮೆ, ರುಪೇ ಡೆಬಿಟ್ ಕಾರ್ಡ್ ಒದಗಿಸುವ ಗುರಿ ಹೊಂದಿದೆ.

ಪ್ರಧಾನಮಂತ್ರಿ ಜನಧನ ಯೋಜನೆ ಅಗಸ್ಟ್ 28, 2014ರಂದು ಲಾಂಚ್ ಮಾಡಲಾಗಿದೆ. ಕಳೆದ ಎರಡು ವರ್ಷ ಹತ್ತು ತಿಂಗಳ ಅವಧಿಯಲ್ಲಿ ಈ ಯೋಜನೆ ಮೂಲಕ ಮಾಡಿರುವ ಸಾಧನೆಗಳ ವಿವರವನ್ನು(17-5-2017ರ ಅಂಕಿಅಂಶಗಳಿಗೆ ಅನುಗುಣವಾಗಿ) ಇಲ್ಲಿ ನೀಡಲಾಗಿದೆ. 'ಪ್ರಧಾನ ಮಂತ್ರಿ ಜನಧನ ಖಾತೆ' ಯಾಕೆ ತೆರೆಯಬೇಕು?

ಸಾರ್ವಜನಿಕ ವಲಯದ ಬ್ಯಾಂಕ್

ಸಾರ್ವಜನಿಕ ವಲಯದ ಬ್ಯಾಂಕ್

ಒಟ್ಟು ಫಲಾನುಭವಿಗಳು: 23.02 ಕೋಟಿ
ಗ್ರಾಮೀಣ / ಅರೆ ನಗರ ಬ್ಯಾಂಕ್ ಶಾಖೆಗಳಲ್ಲಿ ಫಲಾನುಭವಿಗಳು: 12.57 ಕೋಟಿ
ನಗರ/ಮೆಟ್ರೊ ಬ್ಯಾಂಕ್ ಶಾಖೆಗಳಲ್ಲಿ ಫಲಾನುಭವಿಗಳು: 10.45 ಕೋಟಿ
ಒಟ್ಟು ರುಪೇ ಕಾರ್ಡ್: 17.84 ಕೋಟಿ
ಫಲಾನುಭವಿಗಳ ಖಾತೆಗಳಲ್ಲಿನ ಒಟ್ಟು ಬ್ಯಾಲೆನ್ಸ್: 50519.75 ಕೋಟಿ

ಪ್ರಾದೇಶಿಕ ಗ್ರಾಮೀಣ ಬ್ಯಾಂಕ್

ಪ್ರಾದೇಶಿಕ ಗ್ರಾಮೀಣ ಬ್ಯಾಂಕ್

ಒಟ್ಟು ಫಲಾನುಭವಿಗಳು: 4.68 ಕೋಟಿ
ಗ್ರಾಮೀಣ / ಅರೆ ನಗರ ಬ್ಯಾಂಕ್ ಶಾಖೆಗಳಲ್ಲಿ ಫಲಾನುಭವಿಗಳು: 3.98 ಕೋಟಿ
ನಗರ/ಮೆಟ್ರೊ ಬ್ಯಾಂಕ್ ಶಾಖೆಗಳಲ್ಲಿ ಫಲಾನುಭವಿಗಳು: 0.71 ಕೋಟಿ
ಒಟ್ಟು ರುಪೇ ಕಾರ್ಡ್: 3.54 ಕೋಟಿ
ಫಲಾನುಭವಿಗಳ ಖಾತೆಗಳಲ್ಲಿನ ಒಟ್ಟು ಬ್ಯಾಲೆನ್ಸ್: 11780.21 ಕೋಟಿ

ಖಾಸಗಿ ಬ್ಯಾಂಕ್

ಖಾಸಗಿ ಬ್ಯಾಂಕ್

ಒಟ್ಟು ಫಲಾನುಭವಿಗಳು: 0.93 ಕೋಟಿ
ಗ್ರಾಮೀಣ / ಅರೆ ನಗರ ಬ್ಯಾಂಕ್ ಶಾಖೆಗಳಲ್ಲಿ ಫಲಾನುಭವಿಗಳು: 0.56 ಕೋಟಿ
ನಗರ/ಮೆಟ್ರೊ ಬ್ಯಾಂಕ್ ಶಾಖೆಗಳಲ್ಲಿ ಫಲಾನುಭವಿಗಳು: 0.38 ಕೋಟಿ
ಒಟ್ಟು ರುಪೇ ಕಾರ್ಡ್: 0.86 ಕೋಟಿ
ಫಲಾನುಭವಿಗಳ ಖಾತೆಗಳಲ್ಲಿನ ಒಟ್ಟು ಬ್ಯಾಲೆನ್ಸ್: 2064.95 ಕೋಟಿ

ಒಟ್ಟು ಅಂಕಿ-ಅಂಶ

ಒಟ್ಟು ಅಂಕಿ-ಅಂಶ

ಒಟ್ಟು ಫಲಾನುಭವಿಗಳು: 28.63 ಕೋಟಿ
ಒಟ್ಟು ಗ್ರಾಮೀಣ/ಅರೆ ನಗರ ಬ್ಯಾಂಕ್ ಶಾಖೆಗಳಲ್ಲಿ ಫಲಾನುಭವಿಗಳು: 17.10 ಕೋಟಿ
ನಗರ/ಮೆಟ್ರೊ ಬ್ಯಾಂಕ್ ಶಾಖೆಗಳಲ್ಲಿ ಫಲಾನುಭವಿಗಳು: 11.53 ಕೋಟಿ
ಒಟ್ಟು ರುಪೇ ಕಾರ್ಡ್: 22.24 ಕೋಟಿ
ಫಲಾನುಭವಿಗಳ ಖಾತೆಗಳಲ್ಲಿನ ಒಟ್ಟು ಬ್ಯಾಲೆನ್ಸ್: 64364.91 ಕೋಟಿ

ಜನಧನ ಯೋಜನೆ ಉದ್ದೇಶ

ಜನಧನ ಯೋಜನೆ ಉದ್ದೇಶ

1. ಮೂಲಭೂತವಾಗಿ ಅಪಘಾತ ವಿಮೆ, ಡೆಬಿಟ್ ಕಾರ್ಡ್, ಅಪಘಾತ ವಿಮೆ ಹೀಗೆ ಎಲ್ಲ ಬಗೆಯ ಬ್ಯಾಂಕಿಂಗ್‌ ಕ್ಷೇತ್ರದ ಸೌಲಭ್ಯಗಳನ್ನು ಯೋಜನೆ ಒಳಗೊಂಡಿದೆ.
2. ಆಧಾರ್‌ ಕಾರ್ಡ್ ಸಂಬಂಧಿತ ಐದು ಸಾವಿರಕ್ಕೂ ಹೆಚ್ಚು ಬ್ಯಾಂಕ್‌ ಖಾತೆಗಳಿಗೆ ಓವರ್‌ ಡ್ರಾಪ್ಟ್‌ ಸೌಲಭ್ಯ ಕಲ್ಪಿಸಲಾಗುವುದು.
3. ರುಪೇ ಕಾರ್ಡ್(ಡೊಮೆಸ್ಟಿಕ್ ಡೆಬಿಟ್ ಕಾರ್ಡ್) ಸೇವೆಯನ್ನು ನಗರ ಮತ್ತು ಗ್ರಾಮೀಣ ಜನತೆಗೆ ಒದಗಿಸುವುದು.
4. ಆರು ತಿಂಗಳ ನಂತರ ರುಪೇ ಡೆಬಿಟ್ ಕಾರ್ಡ್ ರೂ. 1 ಲಕ್ಷ ವರೆಗಿನ ಅಪಘಾತ ವಿಮೆ ಒಳಗೊಂಡಿರುತ್ತದೆ.
5. ಖಾತೆದಾರ ವ್ಯಕ್ತಿ 6 ತಿಂಗಳ ನಂತರ ರೂ. 5000 ಓವರ್‌ ಡ್ರಾಪ್ಟ್‌ಗೆ ಭಾಜನನಾಗುತ್ತಾನೆ.
6. ಬ್ಯಾಂಕ್‌ ಖಾತೆ ಹೊಂದಿರದ 7.5 ಕೋಟಿ ಜನರಿಗೆ ಬ್ಯಾಂಕಿಂಗ್‌ ಸೌಲಭ್ಯ ಕಲ್ಪಿಸುವುದು.
7. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯ ಹೊಸ ತಂತ್ರಜ್ಞಾನ ಪರಿಚಯಿಸಿದ್ದು, ಸ್ಮಾರ್ಟ್ ಫೋನ್ ಇಲ್ಲದವರು ಸಾಮಾನ್ಯ ಫೋನ್ ಬಳಸಿ ಫಂಡ್ಸ್ ವರ್ಗಾವಣೆ ಮತ್ತು ಬ್ಯಾಲೆನ್ಸ್ ಚೆಕ್ ಮಾಡಬಹುದು.
8. ಜನಧನ ಯೋಜನೆ ಮುಖಾಂತರ ಬಡವರಿಗೆ ಮೊಬೈಲ್ ಬ್ಯಾಂಕಿಂಗ್ ಸೇವೆ ಒದಗಿಸುವುದು. ವೆಬ್ಸೈಟ್: http://www.pmjdy.gov.in (ಮೋದಿ ಸರ್ಕಾರದ ಜನಪ್ರಿಯ ಜನಕಲ್ಯಾಣ ಯೋಜನೆಗಳು)

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+