Englishहिन्दी മലയാളം தமிழ் తెలుగు

ಕಳೆದ 3 ವರ್ಷಗಳಲ್ಲಿ ನರೇಂದ್ರ ಮೋದಿ ಸರ್ಕಾರ ಮಾಡಿದ್ದೇನು..?

Written By: Siddu
Subscribe to GoodReturns Kannada

ಮೋದಿ ಸರ್ಕಾರಕ್ಕೆ ಮೂರು, ಸಾಧನೆಗಳು ನೂರು, ನಿರೀಕ್ಷೆಗಳು ಸಾವಿರಾರು, ಪ್ರಶ್ನೆಗಳು ಹಲವಾರು...

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರೀ ಬಹುಮತದೊಂದಿಗೆ 2014 ಮೇ 26ರಂದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರಕ್ಕೆ ಈಗಾಗಲೇ ಮೂರು ವರ್ಷಗಳು ತುಂಬಿವೆ.

ಚುನಾವಣಾ ಸಂದರ್ಭದಲ್ಲಿ ನೂರಾರು ಭರವಸೆಗಳನ್ನು ಹೊತ್ತು ತಂದಿದ್ದ ಬಿಜೆಪಿ ಮೇಲೆ ಜನರಲ್ಲಿ ನಿರೀಕ್ಷೆ ಅಪಾರವಾಗಿಯೇ ಇತ್ತು. ಮೋದಿ ಸರ್ಕಾರ ಅನೇಕ ಹೊಸ ನೀತಿಗಳನ್ನು ಜಾರಿ ತಂದಿದೆ, ಇನ್ನೂ ಹಲವು ನೀತಿಗಳನ್ನು ಬದಲಾವಣೆ ಮಾಡಿದೆ. ಕಪ್ಪುಹಣ, ಭ್ರಷ್ಟಾಚಾರ(ನೋಟು ರದ್ದತಿ), ವಿದೇಶಾಂಗ ನೀತಿ, ಅರ್ಥ ವ್ಯವಸ್ಥೆ, ರಕ್ಷಣೆ, ಮೂಲಸೌಕರ್ಯಗಳಲ್ಲಿ ಪರಿವರ್ತನೆಗಳಾಗಿವೆ.

ಇದೇಲ್ಲಕ್ಕೂ ಮುಖ್ಯವಾಗಿ ಹಲವು ಜನಕಲ್ಯಾಣ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಇದರಲ್ಲಿ ಬಡವರು, ರೈತರು, ಯುವಕರು, ಮಹಿಳೆಯರು ಹಾಗೂ ಹಿರಿಯ ನಾಗರಿಕರು ಸೇರಿದಂತೆ ಎಲ್ಲರ ಕ್ಷೇಮಾಭಿವೃದ್ಧಿಗಾಗಿ ಹತ್ತು ಹಲವು ಯೋಜನೆಗಳು ಸೇರ್ಪಡೆಗೊಂಡಿವೆ. ಹೊಸ ನೀತಿ ಮತ್ತು ಜನಪರ ಕ್ಷೇಮಾಭಿವೃದ್ಧಿ ಯೋಜನೆಗಳ ಮೂಲಕ ಭಾರತದ ಸಮಗ್ರ ಅಭಿವೃದ್ಧಿ ಸಾಧಿಸುವುದು ಮೋದಿ ಸರ್ಕಾರದ ಉದ್ದೇಶವಾಗಿದೆ.
ಮೂರು ಸಂವತ್ಸರಗಳು ತುಂಬಿದ ಈ ಸಂದರ್ಭದಲ್ಲಿ ಮೋದಿ ಸರ್ಕಾರದ ಸಾಧನೆ, ಹೊಸ ನೀತಿ, ಏಳು-ಬೀಳುಗಳ ಸಂಕ್ಷೀಪ್ತ ನೋಟ ಇಲ್ಲಿದೆ...

ನೋಟು ರದ್ದತಿ

ಮೋದಿ ಸರ್ಕಾರ ಕೈಗೊಂಡಿರುವ ಪ್ರಮುಖ ನಿರ್ಧಾರಗಳಲ್ಲಿ ನೋಟು ರದ್ದತಿ ಅತ್ಯಂತ ಮಹತ್ವ. ಬ್ಲಾಕ್ ಮನಿ ನಿಯಂತ್ರಣ, ಭ್ರಷ್ಟಾಚಾರ ನಿಗ್ರಹದ ಉದ್ದೇಶದಿಂದ ಕಳೆದ ನವೆಂಬರ್‌ 8ರಂದು ರೂ. 500, 1000 ಮುಖಬೆಲೆಯ ನೋಟುಗಳ ಚಲಾವಣೆ ರದ್ದುಗೊಳಿಸಲಾಯಿತು. ನೋಟುಗಳ ವಿನಿಮಯ, ನಗದು ಕೊರತೆಯಿಂದ ಸಾರ್ವಜನಿಕರು ಕೆಲಕಾಲ ಪರದಾಡಬೇಕಾಯಿತು. ಆದರೆ ನೋಟುರದ್ದತಿ ಡಿಜಿಟಲೀಕರಣಕ್ಕೆ ಉತ್ತೇಜನ ನೀಡಿತು.

ಪ್ರಮುಖ ಮಸೂದೆ/ನೀತಿಗಳು

- ಸರಕು ಮತ್ತು ಸೇವಾ ತೆರಿಗೆ ಮಸೂದೆ(ಜಿಎಸ್ಟಿ)
- ರೇರಾ (ರಿಯಲ್‌ ಎಸ್ಟೇಟ್‌ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯಿದೆ) ಮಸೂದೆ
- ಆಧಾರ್ ಕಾರ್ಡ್ ಮಸೂದೆ
- ಕಂಪೆನಿಗಳ(ತಿದ್ದುಪಡಿ) ಮಸೂದೆ
- ಆರ್ಥಿಕ ಸುರಕ್ಷತೆ ಮತ್ತು ದಿವಾಳಿ ಸಂಹಿತೆ ಮಸೂದೆ
- ಬೇನಾಮಿ ವ್ಯವಹಾರ ತಡೆ(ತಿದ್ದುಪಡಿ) ಮಸೂದೆ-2015
- ಕೈಗಾರಿಕೆ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆ
- ಅಘೋಷಿತ ವಿದೇಶಿ ಆದಾಯ ಮತ್ತು ಆಸ್ತಿಗಳ (ತೆರಿಗೆ ಹೇರಿಕೆ) ಮಸೂದೆ-2015
- ನೌಕರರ ಪರಿಹಾರ (ತಿದ್ದುಪಡಿ) ಮಸೂದೆ -2016
- ಮೋಟಾರು ವಾಹನ (ತಿದ್ದುಪಡಿ) ಮಸೂದೆ-2016
- ಲೋಕಪಾಲ ಮತ್ತು ಲೋಕಾಯುಕ್ತ (ತಿದ್ದುಪಡಿ) ಮಸೂದೆ-2016

ಮೇಕ್ ಇನ್ ಇಂಡಿಯಾ

ಲಾಂಚ್: ಸೆಪ್ಟಂಬರ್ 25, 2014
ಉದ್ದೇಶ: ದೇಶೀಯ ಕಂಪನಿ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಉತ್ಪನ್ನಗಳನ್ನು ಉತ್ತೇಜಿಸಿ ಹೆಚ್ಚೆಚ್ಚು ಉದ್ಯೋಗವನ್ನು ಸೃಷ್ಟಿ ಮಾಡುವುದು.
ಮೇಕ್ ಇನ್ ಇಂಡಿಯಾ ಭಾರತದ ತಮ್ಮ ಉತ್ಪನ್ನಗಳನ್ನು ತಯಾರಿಸಲು ಕಂಪನಿಗಳು ಪ್ರೋತ್ಸಾಹಿಸಲು ಭಾರತ ಸರ್ಕಾರ ಚಾಲನೆ ನೀಡಿದೆ. ಪ್ರಧಾನಮಂತ್ರಿ ನರೇಂದ್ರಮೋದಿ ಅವರು ತಮ್ಮ ಮಹತ್ವಾಕಾಂಕ್ಷೆಯ ಮೇಕ್ ಇನ್ ಇಂಡಿಯಾ ಪ್ರಚಾರ ಅಭಿಯಾನಕ್ಕೆ 25ರಿಂದ ಚಾಲನೆ ನೀಡಿದ್ದಾರೆ. ಈ ಮೂಲಕ ಬಂಡವಾಳ ಮತ್ತು ತಂತ್ರಜ್ಞಾನ ಭಾರತಕ್ಕೆ ಹರಿದು ಬರಲಿದೆ ಎಂಬ ನಂಬಿಕೆ ಇದೆ.
ವೆಬ್ಸೈಟ್: http://www.makeinindia.com

ಡಿಜಿಟಲ್ ಇಂಡಿಯಾ

ಲಾಂಚ್: ಜುಲೈ 1, 2015
ಉದ್ದೇಶ: ದೇಶದಲ್ಲಿ ನಗದು ರಹಿತ ವ್ಯವಹಾರವನ್ನು ಉತ್ತೇಜಿಸುವುದು. ಆನ್ಲೈನ್ ಸೌಕರ್ಯ ಮತ್ತು ಅಂತರ್ಜಾಲ ಸಂಪರ್ಕ ಉತ್ತಮ ಪಡಿಸುವುದು.
ವೆಬ್ಸೈಟ್: http://www.digitalindia.gov.in

ಸ್ವಚ್ಛ ಭಾರತ ಅಭಿಯಾನ

ಲಾಂಚ್: ಅಕ್ಟೋಬರ್ 2, 2014
ಉದ್ದೇಶ: ಗಾಂಧಿ ಕನಸಿನ ಸ್ವಚ್ಛ ಮತ್ತು ನೈರ್ಮಲ್ಯ ಭಾರತ
ಸ್ವಚ್ಛ ಭಾರತ ಅಭಿಯಾನ ಮೋದಿಯವರ ಪ್ರಮುಖ ಯೋಜನೆಗಳಲ್ಲಿ ಒಂದಾಗಿದ್ದು, ನಗರ ಅಭಿವೃದ್ಧಿ ಸಚಿವಾಲಯ ಮತ್ತು ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯಗಳು ಅಭಿವೃದ್ಧಿಪಡಿಸಿವೆ.

ಪ್ರಧಾನಮಂತ್ರಿ ಜನಧನ ಯೋಜನೆ

ಲಾಂಚ್: ಅಗಸ್ಟ್ 28, 2014
ಉದ್ದೇಶ: ದೇಶದ ಪ್ರತಿಯೊಬ್ಬರಿಗೂ ಎಲ್ಲ ಬಗೆಯ ಬ್ಯಾಂಕಿಂಗ್ ಸೌಲಭ್ಯಗಳನ್ನು ಕಲ್ಪಿಸುವುದು. ಈ ಯೋಜನೆ ಅಡಿಯಲ್ಲಿ ಬ್ಯಾಂಕ್ ಖಾತೆ, ವಿಮೆ ಮತ್ತು ಡೆಬಿಟ್ ಕಾರ್ಡ್ ಸೌಲಭ್ಯಗಳನ್ನು ಕಲ್ಪಿಸುವ ಗುರಿ ಹೊಂದಿದೆ.
1. ಮೂಲಭೂತವಾಗಿ ಅಪಘಾತ ವಿಮೆ, ಡೆಬಿಟ್ ಕಾರ್ಡ್, ಅಪಘಾತ ವಿಮೆ ಹೀಗೆ ಎಲ್ಲ ಬಗೆಯ ಬ್ಯಾಂಕಿಂಗ್‌ ಕ್ಷೇತ್ರದ ಸೌಲಭ್ಯಗಳನ್ನು ಯೋಜನೆ ಒಳಗೊಂಡಿದೆ.
2. ಆಧಾರ್‌ ಕಾರ್ಡ್ ಸಂಬಂಧಿತ ಐದು ಸಾವಿರಕ್ಕೂ ಹೆಚ್ಚು ಬ್ಯಾಂಕ್‌ ಖಾತೆಗಳಿಗೆ ಓವರ್‌ ಡ್ರಾಪ್ಟ್‌ ಸೌಲಭ್ಯ ಕಲ್ಪಿಸಲಾಗುವುದು.
3. ರುಪೇ ಕಾರ್ಡ್(ಡೊಮೆಸ್ಟಿಕ್ ಡೆಬಿಟ್ ಕಾರ್ಡ್) ಸೇವೆಯನ್ನು ನಗರ ಮತ್ತು ಗ್ರಾಮೀಣ ಜನತೆಗೆ ಒದಗಿಸುವುದು.
4. ಆರು ತಿಂಗಳ ನಂತರ ರುಪೇ ಡೆಬಿಟ್ ಕಾರ್ಡ್ ರೂ. 1 ಲಕ್ಷ ವರೆಗಿನ ಅಪಘಾತ ವಿಮೆ ಒಳಗೊಂಡಿರುತ್ತದೆ.
5. ಖಾತೆದಾರ ವ್ಯಕ್ತಿ 6 ತಿಂಗಳ ನಂತರ ರೂ. 5000 ಓವರ್‌ ಡ್ರಾಪ್ಟ್‌ಗೆ ಭಾಜನನಾಗುತ್ತಾನೆ.
6. ಬ್ಯಾಂಕ್‌ ಖಾತೆ ಹೊಂದಿರದ 7.5 ಕೋಟಿ ಜನರಿಗೆ ಬ್ಯಾಂಕಿಂಗ್‌ ಸೌಲಭ್ಯ ಕಲ್ಪಿಸುವುದು.
7. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯ ಹೊಸ ತಂತ್ರಜ್ಞಾನ ಪರಿಚಯಿಸಿದ್ದು, ಸ್ಮಾರ್ಟ್ ಫೋನ್ ಇಲ್ಲದವರು ಸಾಮಾನ್ಯ ಫೋನ್ ಬಳಸಿ ಫಂಡ್ಸ್ ವರ್ಗಾವಣೆ ಮತ್ತು ಬ್ಯಾಲೆನ್ಸ್ ಚೆಕ್ ಮಾಡಬಹುದು.
8. ಜನಧನ ಯೋಜನೆ ಮುಖಾಂತರ ಬಡವರಿಗೆ ಮೊಬೈಲ್ ಬ್ಯಾಂಕಿಂಗ್ ಸೇವೆ ಒದಗಿಸುವುದು.  ವೆಬ್ಸೈಟ್: http://www.pmjdy.gov.in

ಸುಕನ್ಯಾ ಸಮೃದ್ಧಿ ಯೋಜನೆ ಯೋಜನೆ

ಲಾಂಚ್: ಜನೆವರಿ 22, 2015
ಉದ್ದೇಶ: ಹೆಣ್ಣು ಮಗುವಿನ ಭವಿಷ್ಯದ ಭದ್ರತೆ
ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಮದುವೆಯ ಸಂದರ್ಭದಲ್ಲಿ ಪಾಲಕರನ್ನು ಪ್ರೋತ್ಸಾಹಿಸುವುದು ಈ ಉಳಿತಾಯ ಖಾತೆಯ ಪ್ರಮುಖ ಉದ್ದೇಶವಾಗಿದೆ. ಒಂದು ಹಣಕಾಸು ವರ್ಷದ ಅವಧಿಯಲ್ಲಿ ಖಾತೆಯ ಒಟ್ಟು ಠೇವಣಿ ಮೊತ್ತ 1.5 ಲಕ್ಷ ದಾಟಬಾರದು. ಇದಕ್ಕಿಂತಲೂ ಹೆಚ್ಚಿನ ಮೊತ್ತಕ್ಕೆ ಯಾವುದೆ ಬಡ್ಡಿ ಇರುವುದಿಲ್ಲ. 1.5 ಲಕ್ಷಕ್ಕಿಂತ ಹೆಚ್ಚು ಇಟ್ಟಿರುವ ಮೊತ್ತವನ್ನು ಖಾತೆದಾರರು ಯಾವಾಗ ಬೇಕಾದರೂ ಹಿಂಪಡೆಯಬಹುದು. ಸರ್ಕಾರ ಈ ಖಾತೆಯ ಬಡ್ಡಿದರವನ್ನು ಕಾಲ ಕಾಲಕ್ಕೆ ನಿರ್ಧರಿಸಲಿದೆ ಹಾಗೂ ವಾರ್ಷಿಕವಾಗಿ ಇದನ್ನು ಪರಿಷ್ಕರಿಸಲಿದೆ. ಜತೆಗೆ ಖಾತೆಗೆ ಪಾವತಿಸಲಿದೆ. ಸರ್ಕಾರ ಪ್ರತಿ ತ್ರೈಮಾಸಿಕಕ್ಕೆ ಅನುಗುಣವಾಗಿ ಬಡ್ಡಿಯನ್ನು ಘೋಷಿಸಲಿದೆ. ವಾರ್ಷಿಕವಾಗಿ ಪ್ರಸ್ತುತ ತ್ರೈಮಾಸಿಕದ ಬಡ್ಡಿದರ ಶೇ. 8.4ರಷ್ಟು ಇದೆ. ಈ ಹಿಂದೆ ಠೇವಣಿಯನ್ನು 14ನೇ ವಯಸ್ಸಿನವರೆಗೆ ಮಾಡಿಸಬಹುದಾಗಿತ್ತು. ಆದರೆ ಈಗ ಇದನ್ನು 15ನೇ ವರ್ಷಕ್ಕೆ ಹೆಚ್ಚಿಸಲಾಗಿದೆ. ಮೊದಲಿಗೆ ವಾರ್ಷಿಕವಾಗಿ ಕನಿಷ್ಟ ಠೇವಣಿ 1000 ರೂಪಾಯಿಗಳಿದ್ದವು. ಜತೆಗೆ ಶೇ. 8.4ರಷ್ಟು ಬಡ್ಡಿದರ ಇದೆ. ಪ್ರಸ್ತುತ ಯಾವುದೇ ಕನಿಷ್ಟ ಠೇವಣಿ ಇಟ್ಟಿಲ್ಲ. ಆದರೆ ಸಾಮಾನ್ಯ ಉಳಿತಾಯ ಖಾತೆದಾರರು ಶೇ. 4ರಷ್ಟು ಬಡ್ಡಿ ಪಡೆಯಲು ಅರ್ಹರಾಗಿರುತ್ತಾರೆ. ಖಾತೆ ತೆರೆದ ದಿನದಿಂದ 21ನೇ ವಯಸ್ಸು ಪೂರೈಸಿದ ನಂತರ ಈ ಖಾತೆಯ ಮೆಚುರಿಟಿ ಅವಧಿ ಮುಗಿಯುತ್ತದೆ. 21 ವರ್ಷಗಳ ಅವಧಿ ಮುಗಿದ ನಂತರ ಯಾವುದೇ ಬಡ್ಡಿಯನ್ನು ಪಾವತಿಸಲಾಗುವುದಿಲ್ಲ. ವೆಬ್ಸೈಟ್: http://www.nsiindia.gov.in

ಪ್ರಧಾನಮಂತ್ರಿ ಅವಾಸ್ ಯೋಜನೆ

ಲಾಂಚ್: ಜೂನ್ 25, 2015
ಉದ್ದೇಶ: 2022ರಲ್ಲಿ ದೇಶಧ ಪ್ರತಿಯೊಬ್ಬರಿಗೂ ಮನೆ ಸಿಗುವಂತಾಗಬೇಕು ಎನ್ನುವುದು ಸರ್ಕಾರದ ಉದ್ದೇಶ. ನಗರ ಪ್ರದೇಶಗಳಲ್ಲಿ 2 ಕೋಟಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 3 ಕೋಟಿ ಮನೆಗಳನ್ನು ನಿರ್ಮಿಸುವುದು.
ದೇಶದ ಪ್ರತಿಯೊಬ್ಬರಿಗೂ 2022ರ ಹೊತ್ತಿಗೆ ಮನೆ ಸಿಗಬೇಕು ಎನ್ನುವುದು ಪ್ರಧಾನಿ ಮೋದಿಯವರ ಆಶಯ. ಈ ಆಶಯಕ್ಕಾಗಿ ಕೇಂದ್ರ ಸರ್ಕಾರ "ಪ್ರಧಾನ ಮಂತ್ರಿ ಅವಾಸ ಯೋಜನೆ" (Pradhan ,Mantri Awas Yojana) ಪ್ರಾರಂಭಿಸಿದೆ. ಇದರಲ್ಲಿ ಬಡವರು, ಅತಿ ಕೆಳವರ್ಗದವರು, ಮಧ್ಯಮ ವರ್ಗದವರು, ಕಡಿಮೆ ಆದಾಯ ಹೊಂದಿರುವವರು, ನೌಕರರು ಹೀಗೆ ಎಲ್ಲರೂ ಒಳಗೊಂಡಿದ್ದಾರೆ. ಕೇಂದ್ರದ ಸಹಾಯದೊಂದಿಗೆ ನಗರ ಸ್ಥಳೀಯ ಸಂಸ್ಥೆಗಳು(Urban Local Bodies), ಫಲಾನುಭವಿ ನೇತೃತ್ವ(Beneficiary Led Construction), ನ್ಯಾಷನಲ್ ಹೌಸಿಂಗ್ ಬ್ಯಾಂಕ್NHB() ಮತ್ತು ಹುಡ್ಕೊ(HUDCO) ಸಂಸ್ಥೆಗಳು ಮತ್ತು ರಾಜ್ಯ/ಕೇಂದ್ರಾಡಳಿತ ಸಂಸ್ಥೆಗಳ ಸಹಯೋಗದಲ್ಲಿ ಮನೆಗಳನ್ನು ನಿರ್ಮಿಸಲಾಗುವುದು. ವೆಬ್ಸೈಟ್: http://www.mhupa.gov.in

ಪ್ರಧಾನಮಂತ್ರಿ ಮುದ್ರಾ ಯೋಜನೆ

ಲಾಂಚ್: ಏಪ್ರಿಲ್ 8, 2015
ಉದ್ದೇಶ: ದೇಶದ ಯುವಜನತೆಯನ್ನು ಉದ್ಯಮಶೀಲತೆಯೆತ್ತ ಆಕರ್ಷಿಸಲು ಹಾಗೂ ಸಣ್ಣ ಹಾಗೂ ಅತಿಸಣ್ಣ ಉದ್ದಿಮೆಗಳನ್ನು ನಡೆಸುತ್ತಿರುವ ಉದ್ಯಮಶೀಲರಿಗೆ ಹಣಕಾಸಿನ ನೆರವು ನೀಡುವುದು. ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ ಈ ಕೆಳಗಿನ ಸಾಲ ಯೋಜನೆಗಳು ಲಭ್ಯವಿರುತ್ತದೆ.

ಶಿಶು ಸಾಲ: ರೂ . 50,000/- ವರೆಗೆ ಒಳಗೊಂಡ ಸಾಲ
ಕಿಶೋರ್ ಸಾಲ: ರೂ. 50,000 /- ದಿಂದ ರೂ 5 ಲಕ್ಷ
ತರುಣ್ ಸಾಲ: ರೂ 5 ಲಕ್ಷ ದಿಂದ ರೂ. 10 ಲಕ್ಷ
ಶಿಶು, ಕಿಶೋರ್, ಮತ್ತು ತರುಣ್ ಹೆಸರುಗಳು ಫಲಾನುಭವಿಗಳ / ವಾಣಿಜ್ಯೋದ್ಯಮಿ ಗಳ ಅಭಿವೃದ್ಧಿ ಮತ್ತು ಹಣಕಾಸು ಅಗತ್ಯಗಳನ್ನು ಹಂತ ಹಂತವಾಗಿ ಪ್ರತಿನಿಧಿಸುತ್ತದೆ.
ವೆಬ್ಸೈಟ್: http://www.mudra.org

ಪ್ರಧಾನಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ

ಲಾಂಚ್: 9 ಮೇ, 2015
ಉದ್ದೇಶ: ಪ್ರತಿಯೊಬ್ಬ ಭಾರತೀಯನಿಗೂ ಜೀವ ವಿಮೆಯನ್ನು ಒದಗಿಸುವುದು.
ಪ್ರಧಾನಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆಯೂ ಭಾರತ ಸರ್ಕಾರ ಆಧಾರಿತ ಜೀವವಿಮೆಯಾಗಿದ್ದು, ಪ್ರತಿಯೊಬ್ಬ ನಾಗರಿಕನಿಗೂ ಇದನ್ನು ನೀಡುವುದು ಸರ್ಕಾರದ ಉದ್ದೇಶ. 18-50ವರ್ಷದ ಒಳಗಿನವರು ಈ ಭೀಮಾ ಯೋಜನೆ ಮಾಡಿಸಬಹುದು. ವೆಬ್ಸೈಟ್: http://www.jansuraksha.gov.in

ಅಟಲ್ ಪಿಂಚಣಿ ಯೋಜನೆ

ಲಾಂಚ್: 9 ಮೇ, 2015
ಉದ್ದೇಶ: ಬಡ ಮತ್ತು ಮಧ್ಯಮ ವರ್ಗದ ಜನರು ತಮ್ಮ ನಿವೃತ್ತಿ ಜೀವನದಲ್ಲಿ ನೆಮ್ಮದಿಯಿಂದ ಜೀವನ ಸಾಗಿಸುವಂತಾಗಬೇಕು ಎಂಬುದೇ ಆಟಲ್ ಪಿಂಚಣಿ ಯೋಜನೆಯ ಪ್ರಮುಖ ಉದ್ದೇಶ.
ಅಸಂಘಟಿತ ವಿಭಾಗದಲ್ಲಿ ಕೆಲಸ ಮಾಡುತ್ತಿರುವವರನ್ನು ಗುರಿಯಾಗಿರಿಸಿಕೊಂಡು ಯೋಜನೆಯನ್ನು ಸಿದ್ಧಮಾಡಲಾಗಿದೆ. ಸಾಮಾಜಿಕ ಭದ್ರತೆ ಯೋಜನೆಗಳು ಲಭ್ಯವಿಲ್ಲದರೂ ಇದರ ಲಾಭ ಪಡೆದುಕೊಳ್ಳಬಹುದು.
ಯೋಜನೆ ಅನ್ವಯ ತಿಂಗಳಿಗೆ ಒಂದು ಸಾವಿರ, ಎರಡು ಸಾವಿರ ಮತ್ತು ಮೂರು ಸಾವಿರ, 5 ಸಾವಿರ , 6 ಸಾವಿರ ರು. ಪಡೆದುಕೊಳ್ಳಲು ಸಾಧ್ಯವಿದೆ. 60 ವರ್ಷದ ನಂತರ ಪೆನ್ಶನ್ ದೊರೆಯಲಿದ್ದು ನೀವು ಕಟ್ಟುವ ಹಣದ ಆಧಾರದ ಮೇಲೆ ಪೆನ್ಶನ್ ಹಣ ನಿರ್ಧರಿತವಾಗಿರುತ್ತದೆ. 18-40 ವಯಸ್ಸಿನ ಎಲ್ಲಾ ಭಾರತೀಯರು ಈ ಯೋಜನೆ ಮಾಡಿಸಬಹುದು. ವೆಬ್ಸೈಟ್: http://www.jansuraksha.gov.in

ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ

ಲಾಂಚ್: 9 ಮೇ, 2015
ಉದ್ದೇಶ: ದೇಶದ ಪ್ರತಿಯೊಬ್ಬ ಪ್ರಜೆಗೂ ಅಪಘಾತ ವಿಮಾ ಸೌಲಭ್ಯ ಒದಗಿಸುವುದು.
ಈ ಯೋಜನೆ ಕೇಂದ್ರ ಸರ್ಕಾರ ಆಧಾರಿತ ಅಪಘಾತ ವಿಮೆಯಾಗಿದ್ದು, ಪ್ರತಿಯೊಬ್ಬ ನಾಗರಿಕನಿಗೂ ಇದನ್ನು ನೀಡುವುದು ಸರ್ಕಾರದ ಉದ್ದೇಶ. 18-70ವರ್ಷದ ಒಳಗಿನವರು ಈ ಸುರಕ್ಷಾ ಭೀಮಾ ಯೋಜನೆ ಮಾಡಿಸಬಹುದು.
ವೆಬ್ಸೈಟ್: http://www.jansuraksha.gov.in

ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ

ಲಾಂಚ್: 11 ಅಕ್ಟೋಬರ್, 2014
ಉದ್ದೇಶ: ದೇಶದ ಪ್ರತಿಯೊಬ್ಬ ರೈತನಿಗೂ ರಾಬಿ ಮತ್ತು ಖಾರಿಪ್ ಬೆಳೆಗೆ ವಿಮೆ ಮತ್ತು ಬೆಳೆ ಹಾನಿಯಾದರೆ ಹಣಕಾಸು ಭದ್ರತೆ ಒದಗಿಸುವುದು.
ವೆಬ್ಸೈಟ್: http://www.agricoop.nic.in

ಪ್ರಧಾನಮಂತ್ರಿ ಗರಿಬ್ ಕಲ್ಯಾಣ ಯೋಜನೆ

ಲಾಂಚ್: ಏಪ್ರಿಲ್ 2015
ಉದ್ದೇಶ: ಗರಿಬ್ ಕಲ್ಯಾಣ ಯೋಜನೆ ಬಡತನ ನಿವಾರಣೆ ಯೋಜನೆಯಾಗಿದೆ.
PMGKY 2016ರ ನಿಯಮಗಳು
1. ಹಳೆ ರೂ. 500, 1000 ಮುಖಬೆಲೆಯ ನೋಟುಗಳನ್ನು 5,000ಕ್ಕಿಂತ ಹೆಚ್ಚು ಮೊತ್ತ ಒಮ್ಮೆ ಮಾತ್ರ ಒಂದು ಖಾತೆಗೆ ಜಮಾವಣೆಗೆ ಅವಕಾಶ
2. ಇಲ್ಲಿಯವರೆಗೆ ಜಮೆ ಮಾಡದಿರುವ ಬಗ್ಗೆ ಬ್ಯಾಂಕಿನ ಅಧಿಕಾರಿಗಳು ಕೇಳುವ ಪ್ರಶ್ನೆಗಳಿಗೆ ವಿವರಣೆ ನೀಡಬೇಕು.
3. ಠೇವಣಿದಾರರಿಂದ ವಿವರಣೆ ಪಡೆಯುವಾಗ ಕನಿಷ್ಠ ಇಬ್ಬರು ಅಧಿಕಾರಿಗಳು ಉಪಸ್ಥಿತರಿದ್ದು, ವಿವರಣೆಯನ್ನು ದಾಖಲಿಸಿಕೊಳ್ಳುವರು.
4. ರೂ. 5,000ಕ್ಕಿಂತ ಕಡಿಮೆ ಮೊತ್ತ ಜಮಾ ಮಾಡಲು ಯಾವುದೇ ನಿರ್ಬಂಧ ಇರುವುದಿಲ್ಲ.
5. ಖಾತೆದಾರರ ಅನುಮತಿ ಪತ್ರ, ಗುರುತಿನ ಚೀಟಿ ಒದಗಿಸಿದರೆ ಬೇರೆಯವರ ಖಾತೆಗೂ ಹಳೆ ನೋಟು ಜಮೆಗೆ ಅವಕಾಶ.
6. ಕೆವೈಸಿ ಇಲ್ಲದಿರುವ ಖಾತೆಗಳಿಗೆ ರೂ. 5,000ಕ್ಕಿಂತ ಹೆಚ್ಚಿನ ಮೊತ್ತ ಜಮಾ ಮಾಡುವಂತಿಲ್ಲ. ವೆಬ್ಸೈಟ್: http://www.niti.gov.in

ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆ

ಲಾಂಚ್: ಜನೆವರಿ 22, 2015
ಉದ್ದೇಶ: ಮಕ್ಕಳ ಲಿಂಗಾನುಪಾತ ಹಾಗೂ ಮಹಿಳಾ ಸಬಲೀಕರಣದ ಸಮಸ್ಯೆಗಳಿಗೆ ಈ ಯೋಜನೆ ಉತ್ತರ ಕಂಡುಕೊಳ್ಳಲಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಮಾನವ ಸಂಪನ್ಮೂಲಾಭಿವೃದ್ಧಿ ಇಲಾಖೆಗಳ ಜಂಟಿ ಚಿಂತನೆಯ ಫಲವಾಗಿ ಈ ಯೋಜನೆ ರೂಪಿತವಾಗಿದೆ.
ಹೆಣ್ಣುಮಕ್ಕಳ ವಿಧ್ಯಾಭ್ಯಾಸ ಮತ್ತು ಸಾಮಾಜಿಕ ಭದ್ರೆತೆಗಳನ್ನು ಉ್ತ್ಏಜಿಸುವ ಸಲುವಾಗಿ ಬೇಟಿ ಬಚಾವೋ, ಬೇಟಿ ಪಡಾವೋ(ಹೆಣ್ಣು ಮಗು ಉಳಿಸಿ- ಹೆಣ್ಣು ಓದಿಸಿ) ಯೋಜನೆ ಆರಂಭಿಸಿದೆ. ವೆಬ್ಸೈಟ್: http://www.wcd.nic.in (Read more: ಭಾರತ ಸರ್ಕಾರ)

English summary

Three years of Narendra Modi Government: A report card

Prime Minister Narendra Modi's government stepped into its fourth year today, marking three years since its landslide win over the Congress-led government in 2014.
Please Wait while comments are loading...
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC