Englishहिन्दी മലയാളം தமிழ் తెలుగు

ಆದಾಯ ತೆರಿಗೆ ಸಲ್ಲಿಸುವಾಗ ಈ 5 ತಪ್ಪುಗಳನ್ನು ಮಾಡದಿರಿ!

Written By: Siddu
Subscribe to GoodReturns Kannada

ಆದಾಯ ತೆರಿಗೆ ರಿಟರ್ನ್ಸ್(ಐಟಿಆರ್) ಸಲ್ಲಿಕೆ ದಾಖಲೆಗಳನ್ನು ಸಲ್ಲಿಸುವಾಗ ವಸ್ತುಸ್ಥಿತಿ ವರದಿ ನೀಡಿದರೆ ಎಲ್ಲಿ ನಮ್ಮ ಮೇಲೆ ದಾಳಿ ಮಾಡಿ ವಿಚಾರಣೆಗೆ ಒಳಪಡಿಸಿ ದಂಡ ವಿಧಿಸುತ್ತಾರೆನೋ ಎಂಬ ಭಯ ನಮ್ಮಲ್ಲಿ ಹೆಚ್ಚಿನವರಿಗೆ ಇರುತ್ತದೆ. ಇದರಿಂದಾಗಿ ಆದಾಯ ಪ್ರಮಾಣವನ್ನು ಸಲ್ಲಿಸುವಾಗ ಕೆಲವು ಸಾಮಾನ್ಯ ತಪ್ಪುಗಳನ್ನು ಮಾಡುವ ಸಾಧ್ಯತೆಯೂ ಇರುತ್ತದೆ. ಈ ಬಗ್ಗೆ ಹೆಚ್ಚು ಚಿಂತಿತರಾಗುವ ಅವಶ್ಯಕತೆಯಿಲ್ಲ.

ಐಟಿಆರ್ ಸಲ್ಲಿಸುವಾಗ ಜನರು ಮಾಡುವ ಸಾಮಾನ್ಯ ತಪ್ಪುಗಳನ್ನು ನಿಗ್ರಹಿಸುವ ನಿಟ್ಟಿನಲ್ಲಿ ನೆನಪಿನಲ್ಲಿಡಬೇಕಾದ 5 ಅಂಶಗಳನ್ನು ತಮ್ಮ ಮುಂದೆ ಇಡುತ್ತಿದ್ದೇವೆ.

ತೆರಿಗೆ ಹೊಣೆಗಾರಿಕೆ ಇಲ್ಲ

ಕೆಲವು ವರ್ಷಗಳಿಂದ ತೆರಿಗೆ ಪಾವತಿಸದಿದ್ದರೆ ಅದರ ಮಾಹಿತಿಯನ್ನು ಮತ್ತೊಮ್ಮೆ ಸಲ್ಲಿಸುವುದು ಕಡ್ಡಾಯವಲ್ಲ ಎಂದು ಕೆಲವರು ಹೇಳುತ್ತಾರೆ. ಆದರೆ, ಐಟಿಆರ್ ಸ್ವರೂಪವು ವಿಕಸನಗೊಂಡಿದ್ದು, ಲಭ್ಯವಿರುವ ವಿನಾಯಿತಿ ಆದಾಯ, ವಿದೇಶಿ ಆಸ್ತಿಗಳು, ವಿದೇಶಿ ತೆರಿಗೆ ಸಾಲ ಇತ್ಯಾದಿಗಳ ಘೋಷಣೆಗೆ ಯಾವುದೇ ಅಡ್ಡಿ ಆತಂಕವಿಲ್ಲ. ತೆರಿಗೆ ವಲಯದಲ್ಲಿ ಸೊನ್ನೆಗಿಂತ ಹೆಚ್ಚು ತೆರಿಗೆದಾರರನ್ನು ತರುವ ಪ್ರಯತ್ನವಾಗಿ ಅಂಡರ್-ರಿಪೋರ್ಟಿಂಗ್ ಮೂಲಕ ಕಡಿಮೆ ತೆರಿಗೆಯನ್ನು ಪಾವತಿಸಬಹುದಾಗಿದೆ. ರಿಟರ್ನ್ ಫಾರ್ಮ್ ಮಾಹಿತಿಯನ್ನು ತೆರಿಗೆದಾರರನ್ನು ಬಲಪಡಿಸಲು ಒಂದು ಮಾರ್ಗವಾಗಿದ್ದು, ಕಪ್ಪು ಹಣವನ್ನು ಪತ್ತೆ ಹಚ್ಚಲು ಮತ್ತು ಸಂಭವನೀಯ ತಪ್ಪುಗಳಿಂದ ಮುಕ್ತಿ ಸಿಗಲಿದೆ.
ಈ ನಿಟ್ಟಿನಲ್ಲಿ ಆಧಾರ್ ಕಾರ್ಡ್ ಮತ್ತು ಪಾನ್ ಖಾತೆಯೊಂದಿಗೆ ಸಂಪರ್ಕ ಕಲ್ಪಿಸಿದೆ. ಸರ್ಕಾರವು ಒಂದಕ್ಕಿಂತ ಹೆಚ್ಚು ಪ್ಯಾನ್ ಗಳನ್ನು ಹೊಂದಿದ್ದರವನ್ನು ಪತ್ತೆ ಹಚ್ಚಲು ಮುಂದಾಗಿದೆ. ಹೀಗಾಗಿ ವಿದೇಶದ ಸ್ವತ್ತುಗಳನ್ನು ವೈಯಕ್ತಿಕ ಸಾಮರ್ಥ್ಯದಲ್ಲಿ ಅಥವಾ ಲಾಭದಾಯಕ ಮಾಲೀಕನಾಗುವ ಸಾಮರ್ಥ್ಯದಲ್ಲಿ ಒಬ್ಬರು ಹೊಂದಿದ್ದಲ್ಲಿ ಅವರ ಒಟ್ಟು ಆದಾಯವು ತೆರಿಗೆ ಮಿತಿಗಿಂತ ಕಡಿಮೆಯಿದ್ದರೂ ಕಾನೂನಿಗೆ ತೆರಿಗೆ ರಿಟರ್ನ್ ಸಲ್ಲಿಸಬೇಕು. ಐಟಿಆರ್ ಸಹ ಮರುಪಾವತಿಗಳನ್ನು ಹೂಡುವುದಕ್ಕಾಗಿ ಸಲ್ಲಿಸಬೇಕಾದ ಅಗತ್ಯವಿದೆ. ನಷ್ಟವನ್ನು ಎದುರಿಸುತ್ತಿರುವ ಮತ್ತು ವರ್ಷದಲ್ಲಿ ಗಳಿಸಿದ ಆದಾಯವನ್ನು ದಾಖಲಿಸುವುದು ಸೂಕ್ತ.

ತಪ್ಪಾದ ವೈಯಕ್ತಿಕ ವಿವರಗಳು

ಪ್ರತಿ ವರ್ಷ ವೈಯಕ್ತಿಕ ವಿವರಗಳನ್ನು ತಪ್ಪಾಗಿ ಸಲ್ಲಿಸುವುದರಿಂದ ಹೆಚ್ಚಿನ ಐಟಿಆರ್ ವರದಿಗಳನ್ನು ತಿರಸ್ಕರಿಸಲಾಗುತ್ತದೆ. ವರದಿಯಲ್ಲಿ ಕ್ರಿಯಾತ್ಮಕ ಇಮೇಲ್ ಐಡಿಯನ್ನು ಒದಗಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಬಾಡಿಗೆ ಮನೆಯಲ್ಲಿ ವಾಸವಿದ್ದರೆ, ಶಾಶ್ವತ ವಿಳಾಸವನ್ನು ಒದಗಿಸಬೇಕಾಗುತ್ತದೆ. ಇದು ಫಾರ್ಮ್ 16 ರಲ್ಲಿ ಉಲ್ಲೇಖಿಸಲಾಗಿದೆ. ಒಂದು ತೆರಿಗೆ ಮರುಪಾವತಿ ನಿರೀಕ್ಷೆಯಿದ್ದರೆ ಬ್ಯಾಂಕಿನ ವಿವರಗಳನ್ನು ಸರಿಯಾಗಿ ನಮೂದಿಸಿ, ಇಲ್ಲವಾದಲ್ಲಿ ಮರುಪಾವತಿ ಅನಗತ್ಯವಾಗಿ ವಿಳಂಬವಾಗಬಹುದು.

ಕೆಲ ಖಚಿತ ಆದಾಯ ಸೇರಿಸುವಲ್ಲಿ ವಿಫಲ

ಕೆಲವು ಆದಾಯಗಳನ್ನು ತಪ್ಪಾಗಿ ಕೈಬಿಟ್ಟಿದ್ದರೆ, ಅವುಗಳನ್ನು ಸೇರಿಸಬೇಕು. ಇಕ್ವಿಟಿ ಮತ್ತು ಮ್ಯೂಚುಯಲ್ ಫಂಡ್ ಗಳು ಕೂಡ ಆದಾಯದ ಒಂದು ಭಾಗವಾಗಿದೆ. ಇಕ್ವಿಟಿ ಮ್ಯೂಚುಯಲ್ ಫಂಡ್ ಮತ್ತು ಲಿಖಿತ ಸೆಕ್ಯೂರಿಟಿಗಳಿಂದ ದೀರ್ಘಕಾಲೀನ ಬಂಡವಾಳ ಲಾಭಗಳು ಮತ್ತು ಲಾಭಾಂಶಗಳು ತೆರಿಗೆಯಲ್ಲವಾದರೂ ಸಹ, ಇತರೆ ಮೂಲಗಳಿಂದ ಆದಾಯದ ಭಾಗವಾಗಿ ಮತ್ತು ಐಟಿಆರ್ ನಲ್ಲಿ ಘೋಷಿಸಬೇಕಾದ ಅವಶ್ಯಕತೆ ಇದೆ. ಇಕ್ವಿಟಿ ಮ್ಯೂಚುಯಲ್ ಫಂಡ್ ಗಳಿಗೆ ಅಲ್ಪಾವಧಿಯ ಲಾಭಗಳು ಮಾತ್ರ ತೆರಿಗೆ ವಿಧಿಸಲ್ಪಡುತ್ತವೆಯಾದರೂ, ಋಣಭಾರದ ನಿಧಿಯಿಂದ ಕಡಿಮೆ ಮತ್ತು ದೀರ್ಘಕಾಲೀನ ಲಾಭಗಳು ತೆರಿಗೆಯಿಂದ ಕೂಡಿರುತ್ತವೆ.

ಫಾರ್ಮ್ 16 ಮಹತ್ವ

ಒಂದು ಹಣಕಾಸು ವರ್ಷದ ಮಧ್ಯದಲ್ಲಿ ಉದ್ಯೋಗವನ್ನು ಬದಲಾಯಿಸಿದರೆ ಎರಡೂ ಉದ್ಯೋಗದಾತರಿಂದ ಫಾರ್ಮ್ 16 ಅನ್ನು ತೆಗೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಿ. ಪ್ರಸಕ್ತ ಉದ್ಯೋಗದಾತರ ಆದಾಯವನ್ನು ತಮ್ಮ ಐಟಿಆರ್ ನಲ್ಲಿ ವರದಿ ಮಾಡುವ ತಪ್ಪು ಅನೇಕರಿಗೆ ಕಾಡುತ್ತದೆ. ನೀವು ಎರಡು ಮಾಲೀಕರಿಂದ ತೆರಿಗೆ ಪ್ರಯೋಜನಗಳನ್ನು ಪಡೆದುಕೊಂಡಿದ್ದರಿಂದ ಐಟಿಆರ್ ಸಲ್ಲಿಸುವ ಸಮಯದಲ್ಲಿ ನೀವು ಇನ್ನೂ ಕೆಲವು ಹೆಚ್ಚುವರಿ ತೆರಿಗೆ ಹೊಣೆಗಾರಿಕೆಯಲ್ಲಿ ಬದ್ಧರಾಗಿರಲು ಸಾಧ್ಯವಿದೆ.

ಬಡ್ಡಿ ಆದಾಯ

ಎಲ್ಲಾ ಬ್ಯಾಂಕುಗಳು ನಿಮ್ಮ ನಿಶ್ಚಿತ ಠೇವಣಿ ಖಾತೆಗಳ ಮೇಲೆ ಪಡೆಯುವ ಬಡ್ಡಿಗೆ ಟಿಡಿಎಸ್ ಕಡಿತಗೊಳಿಸುವುದರಿಂದ ನಿಮ್ಮ ತೆರಿಗೆ ಹೊಣೆಗಾರಿಕೆಯನ್ನು ಉಲ್ಲೇಖಿಸುವುದಿಲ್ಲ ಎಂದರ್ಥವಲ್ಲ. ನಿಮ್ಮ ಬಡ್ಡಿ ಆದಾಯ ಎಷ್ಟೇ ಇದ್ದರೂ ಕೇವಲ 10% ತೆರಿಗೆಯನ್ನು ಮಾತ್ರ ಬ್ಯಾಂಕುಗಳು ಕಡಿತಗೊಳಿಸುತ್ತವೆ. ಆದ್ದರಿಂದ ಬಡ್ಡಿದರವನ್ನು ಐಟಿಆರ್ ನಲ್ಲಿ ಸೇರಿಸಲಾಗುತ್ತದೆ.

ಇ-ಫೈಲಿಂಗ್ ಅಂಗೀಕಾರ

ಜುಲೈ 1, 2017 ರಿಂದ ಆಧಾರ್ ಲಿಂಕಿಂಗ್ ಕಡ್ಡಾಯವಾಗಿದೆ. ಇದರ ಮುಂಚಿತವಾಗಿ ಐಆಟಿಆರ್ ಫೈಲಿಂಗ್ ಮಾಡುವವರು ಐಟಿಆರ್-ವಿ (ITR-V) ಅನ್ನು ಆದಾಯ ತೆರಿಗೆ ಇಲಾಖೆಯ ಸಿಪಿಸಿ ಕೇಂದ್ರಕ್ಕೆ 120 ದಿನಗಳಲ್ಲಿ ಕಳುಹಿಸಬೇಕು ಎಂಬುದನ್ನು ಗಮನದಲ್ಲಿಡಬೇಕು. ಅಂಗೀಕಾರವನ್ನು ಸಿಪಿಸಿ ಸ್ವೀಕರಿಸದ ಹೊರತು ತಾಂತ್ರಿಕವಾಗಿ ಐಟಿಆರ್ ಸಲ್ಲಿಸುವ ಪ್ರಕ್ರಿಯೆಯು ಪೂರ್ಣಗೊಳ್ಳುವುದಿಲ್ಲ. ನಿಧಾನವಾಗಿ ಸೂಚನೆಗಳನ್ನು ಓದಿ ಮತ್ತು ಐಟಿಆರ್ ಪರಿಶೀಲಿಸಿದರೆ ಈ ದೋಷಗಳನ್ನು ತಡೆಯಬಹುದು.

Read more about: itr, income tax, savings, taxes
English summary

How to avoid mistakes while filing income tax returns; 5 points to know

Due to lack of knowledge and fear that a mistake in income tax returns (ITR) may entail interest, penalty and even prosecution, people prefer to file their tax returns through professionals. However, with little attention, one can file returns themselves.
Story first published: Wednesday, August 9, 2017, 11:49 [IST]
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

Get Latest News alerts from Kannada Goodreturns