ಹಣ ಉಳಿತಾಯ ಮಾಡಲು ಬಯಸುವವರು ಈ ತಪ್ಪುಗಳನ್ನು ಮಾಡಲೇಬೇಡಿ

ನಮ್ಮಲ್ಲಿ ಹೆಚ್ಚಿನ ಜನರು ಮಾಡುವ ಆರು ಸರ್ವೆ ಸಾಮಾನ್ಯವಾದ ಮತ್ತು ದೊಡ್ಡ ಹಣಕಾಸು ಯೋಜನಾ ತಪ್ಪುಗಳನ್ನು ಪಟ್ಟಿ ಮಾಡಿದ್ದೇವೆ. ಹೆಚ್ಚಿನ ಹೂಡಿಕೆದಾರರು ಸರ್ವೇ ಸಾಮಾನ್ಯವಾದ ಹಾಗೂ ಒಂದೇ ತೆರನಾದ ಹಣಕಾಸಿನ ತಪ್ಪುಗಳಿಗೆ ಒಳಗಾಗಿರುತ್ತಾರೆ.

ಸ್ನೇಹಿತರೊಬ್ಬರು ಕಳೆದ ಐದಾರು ವರ್ಷಗಳಿಂದ ಹಣಕಾಸು ಸಲಹೆಗಾರ/ಫೈನಾಸ್ಸಿಯಲ್ ಕೌನ್ಸಲರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ತಮ್ಮ ಪ್ರಯಾಣದಲ್ಲಿ ಅನೇಕ ಹೂಡಿಕೆದಾರರು, ಕ್ಲೈಂಟ್, ಸ್ನೇಹಿತರು, ಹಿತೈಷಿಗಳು, ಮತ್ತು ಬಂಧುಗಳನ್ನು ಭೇಟಿಯಾಗಿದ್ದಾರೆ. ಅವರ ವೈಯಕ್ತಿಕ ಮತ್ತು ಕೌಟುಂಬಿಕ ಹಣಕಾಸಿನ ಪರಿಸ್ಥಿತಿ, ಹಣಕಾಸಿನ ವರ್ತನೆ ಮತ್ತು ಅವರ ಮನೋಧೋರಣೆಯನ್ನು ಅವಲೋಕಿಸಿದ್ದು, ಹೂಡಿಕೆಯ ರಿಸ್ಕ್ ವಿಚಾರವಾಗಿ ಒಬೊಬ್ಬರಲ್ಲಿ ಅನನ್ಯತೆ ಮತ್ತು ಭಿನ್ನತೆಯಿದೆ ಎನ್ನುತ್ತಾರೆ. ಹಣಕಾಸಿನ ಯೋಜನೆ/ಹೂಡಿಕೆಯ ಯೋಜನೆಯ ವಿಷಯದಲ್ಲಿ ಒಂದು ಅಳತೆ ಎಲ್ಲರಿಗೂ ಫಿಟ್ ಆಗುವುದಿಲ್ಲ ಎಂದು ನಂಬಲು ಇದು ಒಂದು ಕಾರಣವಿರಬಹುದು. ಇದಕ್ಕೆ ಇದನ್ನು ವೈಯಕ್ತಿಕ ಹಣಕಾಸು ಎಂದು ಕರೆಯುತ್ತಾರೆ. ಹೀಗಾಗಿ ಇದು ನಿಮ್ಮ ಹಣಕಾಸು.

ಆದರೆ, ಎಲ್ಲರಿಂದ ಗಮನಿಸಿದ (ಗಮನಿಸುತ್ತಲೇ ಇರುವ) ಒಂದು ಸಾಮಾನ್ಯ ಅಂಶವಿದೆ. ಹೆಚ್ಚಿನ ಹೂಡಿಕೆದಾರರು ಸರ್ವೇ ಸಾಮಾನ್ಯವಾದ ಹಾಗೂ ಒಂದೇ ತೆರನಾದ ಹಣಕಾಸಿನ ತಪ್ಪುಗಳಿಗೆ ಒಳಗಾಗಿರುತ್ತಾರೆ. ಪೋಸ್ಟ್ ಆಫೀಸ್ ಬೆಸ್ಟ್ ಉಳಿತಾಯ ಯೋಜನೆಗಳು

ನಮ್ಮಲ್ಲಿ ಹೆಚ್ಚಿನ ಜನರು ಮಾಡುವ ಆರು ಸರ್ವೆ ಸಾಮಾನ್ಯವಾದ ಮತ್ತು ದೊಡ್ಡ ಹಣಕಾಸು ಯೋಜನಾ ತಪ್ಪುಗಳನ್ನು ಪಟ್ಟಿ ಮಾಡಿದ್ದೇವೆ. 6 ಸರ್ವೆಸಾಮಾನ್ಯ ಹಣಕಾಸು ಯೋಜನಾ ತಪ್ಪುಗಳು ಈ ಕೆಳಗಿನಂತಿವೆ..

1. ಹೂಡಿಕೆಯಲ್ಲಿ ಜೀವ ವಿಮೆ ಸೇರಿಸುವುದು

1. ಹೂಡಿಕೆಯಲ್ಲಿ ಜೀವ ವಿಮೆ ಸೇರಿಸುವುದು

ಇದು ಹೆಚ್ಚಿನ ಜನರು ಮಾಡುವ ಅತ್ಯಂತ ದೊಡ್ಡ ಮತ್ತು ಸರ್ವೆಸಾಮಾನ್ಯ ತಪ್ಪು ಎನ್ನಬಹುದು. ಹೂಡಿಕೆಯ ಪಾತ್ರ ಸಂಪತ್ತು ಬೆಳವಣಿಗೆಯಾದರೆ ಮತ್ತು ಜೀವವಿಮೆಯ ಪಾತ್ರ ರಕ್ಷಣೆಯಾಗಿದೆ. ಇವೆರಡನ್ನು ಸೇರಿಸುವುದು ನಿರಾಶೆಯನ್ನು ಉಂಟುಮಾಡುತ್ತದೆ. ಸಾಂಪ್ರಾದಾಯಿಕ ಯೋಜನೆಗಳು ಅಂದರೆ ಎಂಡೋಮೇಟ್, ಮನಿಬ್ಯಾಕ್, ಮತ್ತು ಸಂಪೂರ್ಣ ಜೀವನ(whole life) ಪಾಲಿಸಿಗಳು ಇದಕ್ಕೆ ಉತ್ತಮ ಉದಾಹರಣೆಗಳಾಗಿವೆ. ಈ ಯೋಜನೆಯು ಹೂಡಿಕೆ ಮತ್ತು ಜೀವವಿಮೆ ಎರಡರ ಸಂಯೋಜನೆಯಲ್ಲಿ ಬರುತ್ತದೆ. ನಾನು ನೋಡಿದ ಹಾಗೆ ಹೆಚ್ಚಿನ ಹೂಡಿಕೆದಾರರು ಈ ರೀತಿಯ ಜೀವವಿಮೆ ಯೋಜನೆಯನ್ನು ಆ ಯೋಜನೆಯ ಫಲಾಫಲ, ಅವಧಿ, ಲಾಭಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸದೆ ಖರೀದಿಸುತ್ತಾರೆ. ಭಾರತದಲ್ಲಿ ಜೀವವಿಮೆ ಹೆಚ್ಚಿನ ಸಂದರ್ಭಗಳಲ್ಲಿ ಮಾರುವುದಾಗಿರುತ್ತದೆಯೇ ಹೊರತು ಕೊಳ್ಳುವುದಾಗಿರುವುದಿಲ್ಲ. ಎಲ್ಲ ಹೂಡಿಕೆದಾರರು ಕೇವಲ ತೆರಿಗೆ ಯೋಜನೆಯ ಕಾರಣಕ್ಕಾಗಿ ಈ ಜೀವವಿಮೆಯನ್ನು ಖರೀದಿಸುವುದು. (ಅದು ತಮ್ಮ ತೆರಿಗೆ ಯೋಜನೆ ಹೂಡಿಕೆಯ ಪುರಾವೆಗಳನ್ನು ಸಲ್ಲಿಸುವ ಸಮಯದಲ್ಲಿ) ಸ್ವಲ್ಪಪ್ರಮಾಣದ ತೆರಿಗೆ ಸೋರಿಕೆಯನ್ನು ಉಳಿಸಲು ತೆಗೆದುಕೊಳ್ಳಬೇಡಿ. ಜೀವವಿಮೆ ಎನ್ನುವುದು ದೀರ್ಘಾವಾಧಿಯ ಬದ್ದತೆಯಾಗಿರುತ್ತದೆ. ಬೆಸ್ಟ್ 8 ಲೈಪ್ ಇನ್ಸೂರೆನ್ಸ್ ಪಾಲಿಸಿಗಳು

2. ಗೃಹಸಾಲದ ಮೂಲಕ ಚಿಕ್ಕ ವಯಸ್ಸಿನಲ್ಲಿ ಆಸ್ತಿಯನ್ನು ಖರೀದಿಸುವುದು

2. ಗೃಹಸಾಲದ ಮೂಲಕ ಚಿಕ್ಕ ವಯಸ್ಸಿನಲ್ಲಿ ಆಸ್ತಿಯನ್ನು ಖರೀದಿಸುವುದು

ಭಾರತದಲ್ಲಿ ಚಿನ್ನದ ಖರೀದಿ ನಿರ್ಧಾರ ಅಥವಾ ಆಸ್ತಿಯ ಮೇಲಿನ ಹೂಡಿಕೆ ನಿಜವಾದ ಅವಶ್ಯಕತೆಗಿಂತ ಹೆಚ್ಚಾಗಿ ಅದು ಭಾವನಾತ್ಮಕವಾದುದಾಗಿದೆ. ನಾನು ಗಮನಿಸಿದ ಹಾಗೆ ಮದುವೆಯಾದ ನಂತರ ಎಷ್ಟು ಸಾಧ್ಯ ಅಷ್ಟು ಬೇಗ ಯುವಕ ಅಥವಾ ಯುವತಿ ಸ್ವಂತ ಮನೆಯನ್ನು ಹೊಂದಲು ಮೊದಲ ಹಣಕಾಸಿನ ಯೋಜನೆಯ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಇದು ಅವನ/ಅವಳ ಕುಟುಂಬದ ಸದಸ್ಯರ ಬೇಡಿಕೆಯಾಗಿರುತ್ತದೆ. ಅಥವಾ ಸಹೋದ್ಯೋಗಿಗಳ ಒತ್ತಡ ಅಥವಾ ನಾವು ಸ್ವಂತ ಮನೆ ಮಾಡಿಕೊಳ್ಳುವುದನ್ನು ಬಿಟ್ಟು ಏಕೆ ಬಾಡಿಗೆ ತೆರಬೇಕು ಎಂಬ ಲಕ್ಷಣ. ಚಾಲ್ತಿಯಲ್ಲಿರುವ ಆಸ್ತಿಯ ಮಾರುಕಟ್ಟೆ ಬೆಲೆಯನ್ನು ಪರಿಗಣಿಸಿ ನಾವು ಹೆಚ್ಚಿನ ಜನರು ಗೃಹಸಾಲದ ಮೂಲಕ ಆ ಆಸ್ತಿಯನ್ನು ಖರೀದಿಸುತ್ತೇವೆ. ಒಂದು ಸಾರಿ ನೀವು ಗೃಹಸಾಲವನ್ನು ತೆಗೆದುಕೊಂಡ ಮೇಲೆ ನಿಮ್ಮ ಮಾಸಿಕ ಆದಾಯದ ಶೇ. 30 ರಿಂದ ಶೇ. 40ವರಗಿನ ಹಣವು ನಿಮ್ಮ ಗೃಹ ಸಾಲ ಮಾಸಿಕ ಕಂತುಗಳಿಗೆ ಹೋಗುತ್ತದೆ. ಇದು ನಿಮ್ಮ ಹಣಕಾಸಿನ ವ್ಯವಸ್ಥೆಯ ಮೇಲೆ ಹೆಚ್ಚಿನ ಒತ್ತಡವನ್ನು ಉಂಟು ಮಾಡುತ್ತದೆ. ಇನ್ನೊಂದು ಪ್ರಮುಖ ಅಂಶವೆಂದರೆ ಇದು ನೀವು ನಿಮ್ಮ ಬೇರೆ ಇನ್ನಿತರ ಹಣಕಾಸಿನ ಯೋಜನೆಯ ಗುರಿಗಳನ್ನು ಅಂದರೆ ನಿವೃತ್ತಿ ಯೋಜನೆಗಳಂತಹವುಗಳನ್ನು ಮುಂದೂಡಬೇಕಾಗುತ್ತದೆ. ನಿಮ್ಮ ನಿವೃತ್ತಿ ಯೋಜನೆಯ ಬಗ್ಗೆಯೇ ನೀವು ಮೊದಲು ಗಮನ ಹರಿಸಬೇಕು.

3. ಆಕಸ್ಮಿಕ ಮತ್ತು ತುರ್ತು ಪರಿಸ್ಥಿತಿ ನಿಧಿ ಸರಿಯಾಗಿ ನಿರ್ವಹಿಸರಿರುವುದು

3. ಆಕಸ್ಮಿಕ ಮತ್ತು ತುರ್ತು ಪರಿಸ್ಥಿತಿ ನಿಧಿ ಸರಿಯಾಗಿ ನಿರ್ವಹಿಸರಿರುವುದು

ಅನಿರೀಕ್ಷಿತ ವೈದಕೀಯ ಪರಿಸ್ಥಿತಿ ಮತ್ತು ದುರಾದೃಷ್ಟಕರವಾದ ಘಟನೆಗಳ ಸಂದರ್ಭಗಳಲ್ಲಿ ಐದು ಅಂಕಿಯ ಸಂಬಳ ಪಡೆಯುವ ವ್ಯಕ್ತಿಗಳು ಸಹ ಹಣಕಾಸಿನ ನೆರವನ್ನು ಕೇಳುವುದನ್ನು ನಾನು ನೋಡಿದ್ದೇನೆ. ಅವರು ಚೆನ್ನಾಗಿ ಹಣ ಗಳಿಸುತ್ತಾರೆ. ಅದರೆ ಅವರು ಹಣವನ್ನು ಉಳಿಸುವುದಿಲ್ಲ. ಅದ್ದರಿಂದ ಅವರು ಇಂತಹ ತುರ್ತು ಪರಿಸ್ಥಿತಿಗಳಿಗೆ ಹಣ ಹೂಡಲು ಏನು ಮಾಡುತ್ತಾರೆ ಎಂಬ ಪ್ರಶ್ನೆ ಬರುತ್ತದೆ. ಅದಕ್ಕಾಗಿ ಅವರು ಹೋಗಿ ವೈಯಕ್ತಿಕ ಸಾಲಗಳನ್ನೋ (ಪರ್ಸನಲ್ ಲೋನ್) ಅಥವಾ ಕ್ರೆಡಿಟ್ ಕಾರ್ಡಿನ ಸಾಲಗಳನ್ನು ತೆಗೆದುಕೊಳ್ಳುತ್ತಾರೆ. ಇದು ಅವರನ್ನು ಕಂಗಾಲಾಗಿಸಿ ಜಿಗುಟುತನದ ವೃತ್ತದಲ್ಲಿರಿಸುತ್ತದೆ. ಅಂತವರು ಈ ಸಾಲದಿಂದ ಹೊರಬರಲು ವರ್ಷಾನುಗಟ್ಟಲೆ ಸಮಯವನ್ನು ತೆಗೆದುಕೊಳ್ಳುತ್ತಾರೆ. ಹೆಚ್ಚಿನ ಬಡ್ಡಿದರವನ್ನು ಪಾವತಿ ಮಾಡುತ್ತಾರೆ. ನಾವು ಮೇಲಿನ ಅಂಶವನ್ನು (ತಪ್ಪು 2) ಇಲ್ಲಿ ಮತ್ತೊಮ್ಮೆ ಪರಿಗಣಿಸಬಹುದು. ನಾನು ಗಮನಿಸಿದ ಹಾಗೆ ಜನರು ಆಸ್ತಿಯನ್ನು ಖರೀದಿಸಲು ತಮ್ಮ ಎಲ್ಲ ಹಣದ ಹೂಡಿಕೆಗಳನ್ನು ಅಂದರೆ ಪಿ.ಪಿ.ಎಫ್ (ಪಬ್ಲಿಕ್ ಪ್ರಾವಿಡೆಂಟ್ ಫಂಡ್) ಇ.ಪಿ.ಎಫ್ (ಕಾರ್ಮಿಕರ ಭವಿಷ್ಯ ನಿಧಿ)ಗಳನ್ನು ಹಿಂತೆಗೆದುಕೊಳ್ಳುತ್ತಾರೆ. ಅದರೆ ಹಾಗೆ ಮಾಡಬೇಡಿ. ಸರಿಸುಮಾರು 6 ತಿಂಗಳ ಮಾಸಿಕ ಆದಾಯವನ್ನು (ನಿಗಧಿತ + ಪರಿವರ್ತಿತ) ತುರ್ತು ಪರಿಸ್ಥಿತಿಯಲ್ಲಿ ಖರ್ಚು ಮಾಡಲು ಕೈಯಲ್ಲಿ ಸಾಕಷ್ಟು ಹಣವನ್ನು ಅಥವಾ ಹಣವನ್ನು ಬ್ಯಾಂಕಿನ ಉಳಿತಾಯ ಖಾತೆಯಲ್ಲಿ ಹೊಂದಿರಿ. ನಿಮ್ಮ ಬಳಿ ಹೆಚ್ಚಿನ ಹಣಕಾಸು ಇಲ್ಲದಿದ್ದರೆ ರಿಕರಿಂಗ್ ಡಿಪಾಸಿಟ್ ಹಣ ಉಳಿಸಲು ಪ್ರಾರಂಭಿಸಿ ಅಥವಾ ನಿಮ್ಮ ಆಕಸ್ಮಿಕ ನಿಧಿ ರಚಿಸಲು ನಿಮ್ಮ ಸ್ವೀಪ್ ಇನ್ ಖಾತೆಯನ್ನು ಬಳಸಿ. ಎಲ್ಐಸಿ ಪಾಲಿಸಿ: 10 ಉತ್ತಮ ಪಾಲಿಸಿ ಮತ್ತು ಪ್ರಯೋಜನಗಳು

4. ಸಾಕಷ್ಟು ಆರೋಗ್ಯ ವಿಮಾ ರಕ್ಷಣೆ ಹೊಂದಿಲ್ಲದಿರುವುದು

4. ಸಾಕಷ್ಟು ಆರೋಗ್ಯ ವಿಮಾ ರಕ್ಷಣೆ ಹೊಂದಿಲ್ಲದಿರುವುದು

ನಾನು ಸಂಬಳದ ವ್ಯಕ್ತಿಯನ್ನು ಅವನ/ಅವಳ ವೈದ್ಯಕೀಯ ವಿಮೆ ಯೋಜನೆಯ ಬಗ್ಗೆ ಕೇಳಿದಾಗ ನಾನು ಕೆಲಸ ಮಾಡುವ ಸಂಸ್ಥೆಯು ನನಗೆ ಆರೋಗ್ಯ ವಿಮಾ ರಕ್ಷಣೆಯನ್ನು ಒದಗಿಸುತ್ತದೆ ಎಂಬ ಉತ್ತರವನ್ನು ಅವರಿಂದ ಕೇಳಿದ್ದೇನೆ. ಈಗ ಹೆಚ್ಚುತ್ತಿರುವ ವೈದಕೀಯ ವೆಚ್ಚಗಳು ಮತ್ತು ಅನಾರೋಗ್ಯಕರ ಜೀವನ ಶೈಲಿಗೆ ನೀವು ಕೆಲಸ ಮಾಡುವ ಸಂಸ್ಥೆಯಿಂದ ಒದಗಿಸಲ್ಪಟ್ಟ ಕವರೇಜ್ ಸಾಕಾಗುತ್ತದೆಯೇ ಎಂದು ಯೋಚಿಸಿ? ಈ ಕೆಲವು ಪ್ರಶ್ನೆಗಳನ್ನು ನಿಮಗೆ ನೀವೆ ಹಾಕಿಕೊಳ್ಳಬಹುದು. ನಾನು ನನ್ನ ಕೆಲಸವನ್ನು ಕಳೆದುಕೊಂಡರೆ ಅಥವಾ ಕೆಲಸ ಬಿಟ್ಟರೆ ನನ್ನ ಆರೋಗ್ಯ ವಿಮೆಯ ಕವರೆಜ್ ಏನಾಗುತ್ತದೆ? ನಾನು ನನ್ನ 58ನೇ ವಯಸ್ಸಿಗೆ ನಿವೃತ್ತಿ ಹೊಂದಿದಾಗ ಹೊಸ ಆರೋಗ್ಯ ವಿಮೆ ಯೋಜನೆಯನ್ನು ಖರೀದಿಸಬೇಕೆ ಅಥವಾ ಪಡೆಯಬೇಕೆ? ನಾನು ಕೆಲಸ ನಿರ್ವಹಿಸುವ ಸಂಸ್ಥೆಯು ಇದ್ದಕ್ಕಿದ್ದಂತೆ ನೌಕರರ ಮೆಡಿ ಕ್ಲೈಮ್ ಪಾಲಿಸಿಯ ನಿಯಮಗಳನ್ನು ಮತ್ತು ಷರತ್ತುಗಳನ್ನು ಬದಲಾಯಿಸಿದರೆ? ಈ ರೀತಿ ಆದಾಗ ನೀವು ನಿಮ್ಮ ಇಡೀ ಕುಟುಂಬವನ್ನು ತೊಂದರೆಯಲ್ಲಿ ಇಡುತ್ತಿರಲ್ಲವೆ? ಅದಕ್ಕಾಗಿ ಒಂದು ಸ್ವತಂತ್ರ ವೈದ್ಯಕೀಯ ವಿಮೆ ಪಾಲಿಸಿಯನ್ನು ಹೊಂದಿ. ಜೊತೆಗೆ ನೀವು ನಿಮ್ಮ ಎಲ್ಲ ಅವಲಂಬಿತರಿಗಾಗಿ ಆರೋಗ್ಯ ವಿಮಾ ಯೋಜನೆಯನ್ನು ಮಾಡಿಸಿ.

5. ಸ್ಥಿರ ಆದಾಯ ಸೆಕ್ಯುರಿಟಿಗಳಲ್ಲಿ ಹೆಚ್ಚಿನ ಹೂಡಿಕೆ ಮಾಡುತ್ತಿರುವುದು

5. ಸ್ಥಿರ ಆದಾಯ ಸೆಕ್ಯುರಿಟಿಗಳಲ್ಲಿ ಹೆಚ್ಚಿನ ಹೂಡಿಕೆ ಮಾಡುತ್ತಿರುವುದು

ಇತ್ತೀಚೆಗೆ ನನ್ನ ಕೆಲವು ಉತ್ತಮ ಸ್ನೇಹಿತರಲ್ಲಿ ಒಬ್ಬ ನನ್ನೊಂದಿಗೆ ಅವನ ವೈಯಕ್ತಿಕ ಹಣಕಾಸಿನ ವಿಚಾರವನ್ನು ಕುರಿತು ಚರ್ಚಿಸಿದ್ದನು. ಆ ವ್ಯಕ್ತಿಯು ಕೇವಲ 30 ವರ್ಷ ವಯಸ್ಸಿನವನಾಗಿದ್ದು, 12 ಲಕ್ಷ ರೂ ತನ್ನ ನಿವ್ವಳ ಮೌಲ್ಯದ ಶೇ. 30 ಹಣವು ಸ್ಥಿರ ಠೇವಣಿಗಳಾಗಿದ್ದವು ಎಂಬುದನ್ನು ತಿಳಿದು ನನಗೆ ಅಘಾತವಾಯಿತು. ಈ ವ್ಯಕ್ತಿಗೆ ಯಾವುದೆ ಅವಲಂಬಿತರು ಇಲ್ಲ ಮತ್ತು ಯಾವುದೇ ಹಣಕಾಸಿನ ಬದ್ದತೆಯು ಇಲ್ಲ. ಇಲ್ಲಿ ನಾವು ನಿಜವಾದ ದರದ ಆದಾಯದ ಮಹತ್ವವನ್ನು ಅರ್ಥಮಾಡಿಕೊಳ್ಳುವ ಅಗತ್ಯತೆ ಇದೆ. ಬ್ಯಾಂಕ್ ಠೇವಣಿಗಳು, ರಿಕರಿಂಗ್ ಡಿಪಾಸಿಟ್, ಅಥವಾ ಅಂಚೆ ಕಛೇರಿಯ ಸಣ್ಣ ಉಳಿತಾಯ ಯೋಜನೆಗಳಂತಹ ಸ್ಥಿರವಾದ ಆದಾಯ ಭದ್ರತೆಗಳು ಸುಮಾರು ಶೇ. 8 ರಿಂದ 9 ರವರಗೆ ಆದಾಯವನ್ನು ನೀಡುತ್ತವೆ. ಕಳೆದ ಕೆಲವು ವರ್ಷಗಳಿಂದ ಜೀವನಾವಶ್ಯಕತೆಗಳ ವೆಚ್ಚಗಳು ಹೆಚ್ಚಾಗಿರುವುದರ ಅರಿವು ನಮಗೆ ಇದೆ ಮತ್ತು ಇದು ಭವಿಷ್ಯದಲ್ಲಿ ಇದು ಹೆಚ್ಚಾಗುತ್ತಲೇ ಇರುತ್ತದೆ. ನೀವು ನಿಮ್ಮ ಸ್ಥಿರ ಠೇವಣಿಗಳ ಮೇಲೆ ಶೇ. 8 ಲಾಭವನ್ನು ಹೊಂದಿದ್ದರೆ ಮತ್ತು ಹಣದುಬ್ಬರವು ಶೇ. 6 ಆಗಿದ್ದರೆ ನಿಜವಾದ ದರದ ಆದಾಯವು ಸುಮಾರು ಶೇ. 2 ಆಗಿರುತ್ತದೆ. ನೀವು ಇನ್ನೂ ಪಾವತಿಸುವ ತೆರಿಗೆಗೆ ಈ ಶೇ. 2ನ್ನು ನೀವು ಹೊಂದಿಸಬೇಕು. ಅದರ ಅರ್ಥ ನಿಮ್ಮ ಸಂಪತ್ತು/ಹೂಡಿಕೆಗಳು ಬೆಳೆಯುತ್ತಿಲ್ಲ. ಅಂದರೆ ನಿಮ್ಮ ಹೂಡಿಕೆ ನಶಿಸುತ್ತಿದೆ. ಹಾಗಾಗಿ ನಿಮ್ಮ ಹಣಕಾಸು ವಹಿವಾಟನ್ನು ಬದಲಿಸಿಕೊಳ್ಳಿ. ದೀರ್ಘಾವಾಧಿಯ ಸಂಪತ್ತನ್ನು ಸೃಷ್ಠಿಸಲು ನೀವು ಇಕ್ವಿಟಿ ಸಂಬಂಧಿತ ವಿಧಾನಗಳಲ್ಲಿ ಹೂಡಿಕೆ ಮಾಡಬೇಕು. ಸರಿಯಾದ ಇಕ್ವಿಟಿಯಲ್ಲಿ ಮತ್ತು ಇಕ್ವಿಟಿ ಸಂಬಂಧಿತ ಮ್ಯೂಚುಯಲ್ ಫಂಡ್‌ಗಳಲ್ಲಿ ನಿಮ್ಮ ಉಳಿತಾಯದ ಕನಿಷ್ಠ ಭಾಗವನ್ನಾದರೂ ಹೂಡಿಕೆ ಮಾಡಿ. ಅಲ್ಲದೆ ವಿವಿಧ ಸ್ವತ್ತು ವರ್ಗಗಳಲ್ಲಿ ಹೂಡಿಕೆ ಮಾಡಿ ಮತ್ತು ವೈವಿಧ್ಯಗೊಳಿಸಿ. ಆದರೆ ಹೂಡಿಕೆ ಮಾಡುವ ಮೊದಲು ಎಲ್ಲಾ ಸ್ತರದಗಳಲ್ಲಿ ಎದುರಾಗುವ ತೊಂದರೆಗಳನ್ನು (ರಿಸ್ಕ್) ಸರಿಯಾಗಿ ಅರ್ಥಮಾಡಿಕೊಳ್ಳಿ. ಚಿನ್ನ, ರಿಯಲ್ ಎಸ್ಟೇಟ್, ಸ್ಟಾಕ್ಸ್ ನಿಮ್ಮನ್ನು ಶ್ರೀಮಂತರನ್ನಾಗಿಸುವುದಿಲ್ಲ. ಬದಲಾಗಿ ನೀವು ಅದನ್ನು ಎಷ್ಟು ಚೆನ್ನಾಗಿ ತಿಳಿದುಕೊಂಡಿದ್ದೀರಿ ಎಂಬುದರಿಂದ ಶ್ರೀಮಂತರಾಗುತ್ತಿರಿ. ಹಾಗಾಗಿ ಹಣಕಾಸು ಜ್ಞಾನ, ಅರಿವು ಬಹಳ ಮುಖ್ಯವಾಗಿದೆ.

6) ಯಾವುದೇ ಹಣಕಾಸು ಗುರಿ ಇಟ್ಟುಕೊಳ್ಳದಿರುವುದು

6) ಯಾವುದೇ ಹಣಕಾಸು ಗುರಿ ಇಟ್ಟುಕೊಳ್ಳದಿರುವುದು

ನಾನು ಎಷ್ಟು ಪಡೆಯುತ್ತೇನೆ? ನಾನು ಶೇ. 15 ಖಾತರಿ ರಿಟರ್ನ್ ಪಡೆಯಬಹುದೇ? ಯಾವುದೇ ರಿಸ್ಕ್ ತೆಗೆದುಕೊಳ್ಳದೆ ಶೇ. 20 ಆದಾಯ ಕೊಡುವ ಯಾವುದಾದರೂ ಹೂಡಿಕೆ ಇದೆಯೇ? ಷೇರು ಮಾರುಕಟ್ಟೆಯು ಎಲ್ಲ ಸಮಯದಲ್ಲೂ ಉನ್ನತಮಟ್ಟದಲ್ಲಿರುತ್ತದೆಯೆ? ಷೇರು ಮಾರುಕಟ್ಟೆ ಪ್ರವೇಶಿಸಲು ಇದು ಸರಿಯಾದ ಸಮಯವೇ? ಆಸ್ತಿ ಅಥವಾ ಚಿನ್ನವನ್ನು ಖರೀದಿಸಲು ಇದು ಸರಿಯಾದ ಸಮಯವೇ? ಎಂಬುದು ಹಣಕಾಸು ಸಲಹೆಗಾರರು/ತಜ್ಞರು ಪ್ರತಿದಿನ ಸ್ವೀಕರಿಸುವ ಸಾಮಾನ್ಯ ಪ್ರಶ್ನೆಗಳಾಗಿವೆ. ಈ ಎಲ್ಲ ಪ್ರಶ್ನೆಗಳಿಗೂ ಒಂದೇ ಉತ್ತರ ಇದೆ. ಹಣಕಾಸಿನ ಮಾರುಕಟ್ಟೆಗಳಿಗೆ ಸಮಯ ತೆಗೆದುಕೊಳ್ಳುವ ಬದಲು ನಾವು ಮೊದಲು ಆರ್ಥಿಕ ಗುರಿಯನ್ನು ಗುರುತಿಸಿಕೊಳ್ಳಲು ಪ್ರಯತ್ನಿಸುವುದು ಉತ್ತಮ. ಇದು ನಿಮ್ಮ ಹೂಡಿಕೆ ಅಗತ್ಯತೆಗಳ ಬಗ್ಗೆ ಸ್ಪಷ್ಟತೆ ಹೊಂದಲು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಹಣಕಾಸಿನ ಯೋಜನೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಿ ಮತ್ತು ನಿಮ್ಮ ಹಣಕಾಸಿನ ಗುರಿಗಳಿಗಾಗಿ ಹೂಡಿಕೆ ಮಾಡುವುದನ್ನು ಮುಂದೂಡಬೇಡಿ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+