Englishहिन्दी മലയാളം தமிழ் తెలుగు

30 ವರ್ಷದೊಳಗೆ ಶ್ರೀಮಂತರಾಗೋದು ಹೇಗೆ? ಈ ತಂತ್ರಗಳನ್ನು ಅಳವಡಿಸಿ..

Written By: Siddu
Subscribe to GoodReturns Kannada

ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಶ್ರೀಮಂತರಾಗಬೇಕು ಎಂಬ ಬಯಕೆ ಎಲ್ಲರಲ್ಲೂ ಇರುತ್ತದೆ. ಬರೀಯ ಕನಸುಗಳಿದ್ದರೆ ಶ್ರೀಮಂತರಾಗಲು ಸಾಧ್ಯವಿಲ್ಲ. ಅದಕ್ಕಾಗಿ 30 ವರ್ಷಕ್ಕಿಂತಲೂ ಮೊದಲೇ ಕೆಲ ಹೂಡಿಕೆ ತಂತ್ರಗಳನ್ನು ಅನುಸರಿಸಬೇಕಾಗುತ್ತದೆ.

ನಾವೇಲ್ಲರೂ ನಮ್ಮ ಜೀವನದಲ್ಲಿ ನಮ್ಮದೆ ಆದ ಹಣಕಾಸಿನ ಗುರಿಗಳನ್ನು ಹೊಂದಿದ್ದೇವೆ. ಪ್ರತಿಯೊಬ್ಬರು 30-40 ವರ್ಷ ವಯಸ್ಸಿನೊಳಗೆ ಅರ್ಥಿಕವಾಗಿ ಸುರಕ್ಷಿತವಾಗಿರಲೂ ಬಯಸುತ್ತಾರೆ. ಅದಾಗ್ಯೂ ನಾವು 20ನೇ ವಯಸ್ಸಿನಲ್ಲಿದ್ದಾಗ ಆ ಕ್ಷಣದ ಪ್ರಸ್ತುತ ಜೀವನವನ್ನು ನಡೆಸುತ್ತೇವೆ. ಜತೆಗೆ ನಮ್ಮ ಭವಿಷ್ಯಕ್ಕಾಗಿ ಉಳಿತಾಯ ಮಾಡುವುದನ್ನು ಮರೆಯುತ್ತೇವೆ. ಆದ್ದರಿಂದ ನೀವು ಆರ್ಥಿಕವಾಗಿ ಸುರಕ್ಷಿತವಾಗಿದ್ದೀರಾ ಮತ್ತು ಹಣಕಾಸಿನ ಭದ್ರತೆಗಾಗಿ ಸರಿಯಾದ ಮಾರ್ಗದಲ್ಲಿ ನಡೆಯುತ್ತಿದ್ದೇವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

ನಿಮಗೆ 30 ವರ್ಷ ತುಂಬುವ ಮೊದಲು ಮಾಡಬೇಕಾದ ಇಲ್ಲವೇ ಅನುಸರಿಸಬೇಕಾದ 5 ಪ್ರಮುಖ ಹೂಡಿಕಾ ತಂತ್ರಗಳನ್ನು ಇಲ್ಲಿ ನೀಡಲಾಗಿದೆ.

1. ತೆರಿಗೆ ಉಳಿತಾಯದ ಕಡೆಗೆ ಹೂಡಿಕೆ

ನೀವು ಕೆಲಸ ಮಾಡುತ್ತಿದ್ದಿರಿ, ಸಂಪಾದನೆ ಮಾಡುತ್ತಿದ್ದಿರಿ ಎಂದು ಇಟ್ಟುಕೊಳ್ಳೋಣ. ಹಾಗಿದ್ದಾಗ ತೆರಿಗೆ ಹೊಣೆಗಾರಿಕೆಯನ್ನು ನಿರ್ವಹಿಸಲು ಮತ್ತು ಆದಾಯ ತೆರಿಗೆ ಕಾಯಿದೆ ಸೆಕ್ಷನ್ 80ಸಿ ಅಡಿಯಲ್ಲಿ ಲಭ್ಯವಿರುವ ತೆರಿಗೆ ವಿನಾಯಿತಿ ಲಾಭವನ್ನು ಪಡೆಯುವುದು ಮುಖ್ಯವಾಗಿರುತ್ತದೆ. ಸರಿಯಾದ ತೆರಿಗೆ ಯೋಜನೆ ಮೂಲಕ ನೀವು ತೆರಿಗೆ ಹೊಣೆಗಾರಿಕೆಯನ್ನು ಕಡಿತಗೊಳಿಸಲು ಸಾಧ್ಯವಿಲ್ಲ. ಆದ್ದರಿಂದ ನೀವು ನಿಮ್ಮ ಇನ್ನಿತರ ಅರ್ಥಿಕ ಗುರಿಗಳ ಕಡೆಯೂ ಹೂಡಿಕೆ ಮಾಡುವ ಮೂಲಕ ಹೆಚ್ಚಿನ ತೆರಿಗೆಯನ್ನು ಉಳಿಸಬಹುದು. ಇಕ್ವಿಟಿ ಲಿಂಕ್ಡ್ ಸೇವಿಂಗ್ ಸ್ಕೀಮ್ (ಇಎಲ್ಎಸ್ಎಸ್) ಎನ್ನುವುದು ಒಂದು ಉತ್ತಮ ತೆರಿಗೆ ಉಳಿತಾಯದ ವಿಧಾನವಾಗಿದೆ. ಇದೊಂದು ಒಪನ್ ಎಂಡೆಡ್ ಇಕ್ವಿಟಿ ಮ್ಯೂಚುವಲ್ ಫಂಡ್‌ನ ಒಂದು ವಿಧವಾಗಿದೆ. ಈ ಮೂಲಕ ಹಣಕಾಸು ವರ್ಷದ ಅವಧಿಯಲ್ಲಿ 80C ಅಡಿಯಲ್ಲಿ ರೂ. 1.5 ಲಕ್ಷದವರೆಗೆ ಹೂಡಿಕೆದಾರರು ಲಾಭ ಪಡೆಯಬಹುದು ಎಂದು
ಹ್ಯಾಪಿನೆಸ್ ಫಾಕ್ಟರಿ ಡಾಟ್ ಇನ್ ಸಂಸ್ಥಾಪಕ ಅಮರ್ ಪಂಡಿತ್ ಹೇಳಿದ್ದಾರೆ.

2. ತುರ್ತು ನಿಧಿಗಾಗಿ ಹೂಡಿಕೆ

ಜೀವನದಲ್ಲಿ ಅನೇಕ ಸಂದರ್ಭಗಳು ನಮ್ಮನ್ನು ಹೈರಾಣು ಮಾಡುತ್ತವೆ. ಅಫಘಾತ, ಅನಾರೋಗ್ಯ, ಆಕಸ್ಮಿಕ ಮರಣ, ನೈಸರ್ಗಿಕ ವಿಕೋಪ ಇಂತಹ ಘಟನೆಗಳು ಮನುಷ್ಯನನ್ನು ಆರ್ಥಿಕವಾಗಿ ದುರ್ಬಲನನ್ನಾಗಿಸುತ್ತವೆ. ಇದರಿಂದಾದ ನಷ್ಟವನ್ನು ಭರಿಸಲು ಅಥವಾ ಆದಾಯ ಗಳಿಸಲು ಐದಾರು ತಿಂಗಳು ಇಲ್ಲವೆ ಒಂದೇರಡು ವರ್ಷಗಳು ಬೇಕಾಗಬಹುದು. ಇಂತಹ ಸಂದರ್ಭಗಳು ಹೇಳಿಕೇಳಿ ಬರುವಂತವು ಅಲ್ಲ. ಇದಕ್ಕಾಗಿಯೇ ನಿಮ್ಮ ಬಳಿ ತುರ್ತು ನಿಧಿ ಇದ್ದರೆ ಆಗುವ ನಷ್ಟಗಳನ್ನು ಭರಿಸಲು ಶಕ್ತರಾಗಬಹುದು. ಉಳಿತಾಐ ಬ್ಯಾಂಕ್ ಖಾತೆ ಮತ್ತು ಲಿಕ್ವಿಡ್ ಮ್ಯೂಚುವಲ್ ಫಂಡ್ ತುರ್ತು ನಿಧೀಗೆ ಉತ್ತಮ ಆಯ್ಕೆ.

3. ದೀರ್ಘಾವಧಿ ಗುರಿಗಳಿಗಾಗಿ ಹೂಡಿಕೆ

ಮದುವೆ, ಮಕ್ಕಳ ಶಿಕ್ಷಣ, ಮನೆ ಖರೀದಿ, ನಿಮ್ಮ ಸ್ವಂತ ಉದ್ಯಮ, ನಿವೃತ್ತಿ ಮುಂತಾದ ನಿಮ್ಮ ದೀರ್ಘಾವಧಿಯ ಉದ್ದೇಶಗಳಿಗೆ ಉಳಿತಾಯ ಮತ್ತು ಹೂಡಿಕೆ ಮಾಡುವುದು ಬಹಳ ಮುಖ್ಯ. ಈ ಪ್ರತಿಯೊಂದು ಗುರಿ ಸಾಧನೆಗಾಗಿ ಎಷ್ಟು ಸಮಯ ಬೇಕಾಗಬಹುದು ಮತ್ತು ಎಷ್ಟು ಉಳಿತಾಯ ಮಾಡಬೇಕು ಎಂಬುದನ್ನು ನಿರ್ಧರಿಸಿ. ಕಾರ್ಪಸ್ ಮೊತ್ತ ನಿರ್ಧರಿಸಿದ ನಂತರ ನಿಯಮಿತವಾಗಿ ಉಳಿತಾಯ ಮಾಡಿ. ಪ್ರತಿ ತಿಂಗಳ ಹೂಡಿಕಾ ತಂತ್ರಗಳನ್ನು ಅಳವಡಿಸಿ. ಮ್ಯೂಚುವಲ್ ಫಂಡ್ ಗಳಲ್ಲಿ SIP (ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್) ಹೂಡಿಕೆ ಮಾಡಿ. ಗುರಿಸಾಧನೆಗಾಗಿ ಆದಷ್ಟು ಬೇಗ ಹೂಡಿಕೆ ಮಾಡಬೇಕೆಂಬುದನ್ನು ಮರೆಯದಿರಿ. ದೀರ್ಘಾವಧಿಗಾಗಿ ಇಕ್ವಿಟಿ ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಲು ಆಧ್ಯತೆ ನೀಡಿ.

4. ಅಲ್ಪಾವಧಿ ಗುರಿಗಳಿಗಾಗಿ ಹೂಡಿಕೆ

ನಮ್ಮ ಜೀವನದಲ್ಲಿ ಪುನರಾವರ್ತಿತವಾಗುವ ಹಲವಾರು ಅಲ್ಪಾವಧಿಯ ಹಣಕಾಸಿನ ಗುರಿಗಳು ಇರುತ್ತವೆ. ಅವುಗಳೆಂದರೆ ವಾರ್ಷಿಕ ರಜೆಗಳು ಕಳೆಯುವುದು, ಕಾರು ಖರೀದಿ, ಸ್ವತ್ತುಗಳ ಖರೀದಿ ಮುಂತಾದವು. ಅಂತಹ ಗುರಿಗಳಿಗಾಗಿ ನಿಮ್ಮ ಹಣವನ್ನು ಉಳಿತಾಯ ಖಾತೆಯಲ್ಲಿ ಇಡುವ ಬದಲಾಗಿ ಮಧ್ಯಸ್ಥಿಕೆಯ ಮ್ಯೂಚುವಲ್ ಫಂಡ್‌ನ ಖಾತೆಯಲ್ಲಿ ಇಡುವುದು ಉತ್ತಮ. ತೆರಿಗೆಯ ವಿಷಯದಲ್ಲಿ ಮ್ಯೂಚುವಲ್ ಫಂಡ್ ಗಳು ಹೆಚ್ಚು ಪರಿಣಾಮಕಾರಿಯಾಗಿವೆ. ಇದರಲ್ಲಿ ವಿವಿಧ ರೀತಿಯ ಫಂಡ್ ಗಳು ಹಾಗೂ ಅವಧಿಯನ್ನು ಹೊಂದಿವೆ. ಉದಾಹರಣೆಗೆ ಒಂದು ವರ್ಷದ ಒಳಗಿನ ಆರ್ಥಿಕ ಗುರಿಗಳನ್ನು ಸಾಧಿಸಲು ಲಿಕ್ವಿಡ್ ಅಥವಾ ಅಲ್ಟ್ರಾ ಅಲ್ಪಾವಧಿ ಫಂಡ್ (iquid or ultra-short term funds ) ಆರಿಸಿಕೊಳ್ಳಬಹುದು. ಒಂದು ವರ್ಷದ ಮೇಲ್ಪಟ್ಟ ಆರ್ಥಿಕ ಗುರಿಗಳ ಸಾಧನೆಗೆ ಮಧ್ಯಸ್ಥಿಕೆ ನಿಧಿಯನ್ನು (arbitrage funds) ಆರಿಸಿಕೊಳ್ಳಬಹುದು ಎಂದು ಅಮರ್ ಪಂಡಿತ್ ಸಲಹೆ ನೀಡುತ್ತಾರೆ.

5. ಆರೋಗ್ಯ ಮತ್ತು ಜೀವ ರಕ್ಷಣೆಗೆ ಹೂಡಿಕೆ

ಜೀವನ ಮತ್ತು ಆರೋಗ್ಯ ವಿಮೆಯನ್ನು ವಿಶಿಷ್ಟವಾಗಿ ಹೂಡಿಕೆಯೆಂದು ಪರಿಗಣಿಸಲಾಗುವುದಿಲ್ಲ. ಹೀಗಾದರೂ ಇವೆರಡೂ ಬಹಳ ಮುಖ್ಯ ಮತ್ತು ಮೂವತ್ತು ವರ್ಷ ತುಂಬುವುದರೊಳಗೆ ತಪ್ಪದೆ ನಾವು ಆದ್ಯತೆ ನೀಡಬೇಕಾದ ಅಂಶವಾಗಿರುತ್ತದೆ.
ನೀವು ಸಂಪಾದನೆ ಮಾಡುತ್ತಿದ್ದು, ನಿಮ್ಮ ಮನೆಯವರು ನಿಮ್ಮ ಮೇಲೆ ಅವಲಂಬಿತರಾಗಿದ್ದಲ್ಲಿ ನೀವು ಸರಿಯಾದ ವಿಮೆಯನ್ನು ಮಾಡಿಸಿಕೊಳ್ಳುವುದು ಒಳ್ಳೆಯದು. ಜೊತೆಗೆ ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಹಾಗೂ ಆರೋಗ್ಯ ಸೇವೆಗಳು ದುಬಾರಿಯಾಗುತ್ತಿವೆ. ಯಾವುದಾದರೂ ಕಾಯಿಲೆ ಯಾರಿಗಾದರೂ ಬಂದಲ್ಲಿ ನಿಮ್ಮ ಹಣ ವ್ಯರ್ಥವಾಗಿ ಹೋಗುತ್ತದೆ. ಆದ್ದರಿಂದ ಉತ್ತಮ ಆರೋಗ್ಯ ವಿಮೆಯನ್ನು ಮಾಡಿಸಿಕೊಳ್ಳಿ. ಅದೃಷ್ಟವಶಾತ್ ಇಂದು ಉತ್ತಮ ಆರೋಗ್ಯ ವಿಮೆಗಳು ನಮಗೆ ದೊರೆಯುತ್ತಿವೆ. ನಿಮಗೆ ಸರಿ ಹೊಂದುವ ಹಾಗು ಅಗತ್ಯಕ್ಕೆ ತಕ್ಕಂತಹ ಒಂದು ಆರೋಗ್ಯ ವಿಮೆಯನ್ನು ತಪ್ಪದೇ ಮಾಡಿಸಿಕೊಳ್ಳಿ.

English summary

How to become rich before 30: 5 investment strategies to follow

Everyone wants to be financially secure and well off by the age of 35-40. However, when we are in our 20’s, we tend to live life in the moment and forget saving for the future.
Story first published: Friday, December 15, 2017, 12:25 [IST]
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

Get Latest News alerts from Kannada Goodreturns