For Quick Alerts
ALLOW NOTIFICATIONS  
For Daily Alerts

ಈ 5 ಆಯ್ಕೆ ನಿಮ್ಮದಾದರೆ ಹೆಚ್ಚು ಉಳಿತಾಯ, ತೆರಿಗೆ ಲಾಭ, ಹೆಚ್ಚು ಬಡ್ಡಿದರ ಪಡೆಯೋದು ಗ್ಯಾರಂಟಿ

ನೀವು ಸಾಕಷ್ಟು ಸಂಪಾದಿಸುತ್ತಿದ್ದಿರಬಹುದು ಹಾಗೂ ಈ ಸಂಪಾದನೆಯಿಂದ ಸುಖಕರ ಜೀವನವನ್ನೂ ನಡೆಸುತ್ತಿದ್ದಿರಬಹುದು. ಜಾಣರ ಲಕ್ಷಣವೆಂದರೆ ಸಂಪಾದಿಸಿದ ಹಣವನ್ನು ಮುಂದಿನ ಕಷ್ಟದ ಸಮಯಕ್ಕೆ ಬರಲು ಅನುಕೂಲವಾಗುವಂತೆ ಕಾಪಾಡುವುದು.

By Siddu
|

ಪ್ರಿಯ ಓದುಗರೇ, ನೀವು ಸಾಕಷ್ಟು ಸಂಪಾದಿಸುತ್ತಿದ್ದಿರಬಹುದು ಹಾಗೂ ಈ ಸಂಪಾದನೆಯಿಂದ ಸುಖಕರ ಜೀವನವನ್ನೂ ನಡೆಸುತ್ತಿದ್ದಿರಬಹುದು. ಜಾಣರ ಲಕ್ಷಣವೆಂದರೆ ಸಂಪಾದಿಸಿದ ಹಣವನ್ನು ಮುಂದಿನ ಕಷ್ಟದ ಸಮಯಕ್ಕೆ ಬರಲು ಅನುಕೂಲವಾಗುವಂತೆ ಕಾಪಾಡುವುದು. ಇದನ್ನೇ ಉಳಿತಾಯ ಎಂದು ಕರೆಯಬಹುದು. ಈ ಹಣವನ್ನು ಸಂಪಾದಿಸಿದ್ದು ನೀವಾದರೂ, ಇದರಲ್ಲಿ ಸರ್ಕಾರಕ್ಕೆ ನೀಡಬೇಕಾದ ತೆರಿಗೆಯೂ ಇರುವ ಕಾರಣ ತೆರಿಗೆ ಹಾಗೂ ನಿತ್ಯದ ಮತ್ತು ಇತರ ಅವಶ್ಯಕ ಖರ್ಚುಗಳನ್ನು ಕಳೆದು ಉಳಿಸಿದ ಹಣವನ್ನು ಉಳಿತಾಯ ಯೋಜನೆಗಳಲ್ಲಿ ಹೂಡುವುದು ಜಾಣರ ಲಕ್ಷಣ ಹಾಗೂ ಇಂದಿನ ಅಗತ್ಯವೂ ಕೂಡಾ!

 

ಆದರೆ ಉಳಿತಾಯದ ಹಣವನ್ನು ಎಲ್ಲಿ ಹೂಡಬೇಕು ಎಂಬ ಪ್ರಶ್ನೆಗೆ ಉತ್ತರ ಸುಲಭವಲ್ಲ. ಇದಕ್ಕಾಗಿ ಹಲವಾರು ವಿಷಯಗಳನ್ನು ಪರಿಗಣಿಸಬೇಕಾಗುತ್ತದೆ. ಕನಿಷ್ಟ ಇರಿಸಬೇಕಾದ ಅವಧಿ ಅಥವಾ ಲಾಕ್ ಇನ್ ಪೀರಿಯಡ್, ತೆರಿಗೆ ಉಳಿಸುವ ಆಯ್ಕೆ, ಸುರಕ್ಷತೆ, ಸುಲಭವಾಗಿ ಹಾಗೂ ಸಮಯಕ್ಕೆ ಸರಿಯಾಗಿ, ಅಗತ್ಯಕ್ಕೆ ತಕ್ಕಂತೆ ನಮ್ಮ ಹಣವನ್ನು ಹಿಂದಿರುಗಿ ಪಡೆಯಬೇಕಾದ ಸೌಲಭ್ಯ ಮೊದಲಾದ ಹತ್ತು ಹಲವು ವಿಷಯಗಳನ್ನು ಪರಿಗಣಿಸಬೇಕಾಗುತ್ತದೆ. ಜೀವನದಲ್ಲಿ ಸಿಕ್ಕಾಪಟ್ಟೆ ದುಡ್ಡು ಮಾಡಬೇಕು ಅಂತಿರಾ? ಈ 10 ಸಂಗತಿ ಮರಿಬೇಡಿ..

ಈ ನಿಟ್ಟಿನಲ್ಲಿ ಒಟ್ಟು ಐದು ಬಗೆಯ ಉಳಿತಾಯ ಯೋಜನೆಗಳನ್ನು ಇಲ್ಲಿ ನೀಡಲಾಗಿದ್ದು, ಇವುಗಳಿಂದ ಲಭಿಸಬಹುದಾದ ಪ್ರಯೋಜನಗಳ ಬಗ್ಗೆ ನೋಡೋಣ..

1. ಇಪಿಎಫ್- ವೇತನದಾರರ ಭವಿಷ್ಯ ನಿಧಿ (Employee Provident Fund)

1. ಇಪಿಎಫ್- ವೇತನದಾರರ ಭವಿಷ್ಯ ನಿಧಿ (Employee Provident Fund)

ಈ ಯೋಜನೆ ವೇತನ ಪಡೆಯುವ ಉದ್ಯೋಗಿಗಳಿಗಾಗಿಯೇ ಇದೆ. ಇದು ಕೇವಲ ನಿಯಮಿತ ಸಂಸ್ಥೆಗಳಿಗೆ ಮಾತ್ರವಲ್ಲ, ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೂ ಕಡ್ಡಾಯವಾಗಿ ನಿವೃತ್ತಿ ಸಮಯದಲ್ಲಿ ದೊರಕುವಂತೆ ಮಾಡುವ ನಿಧಿ ಯೋಜನೆಯಾಗಿದೆ. ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಇಲಾಖೆ ನಿರ್ವಹಿಸುವ ಇಪಿಎಫ್ಒ Employees' Provident Fund Organisation (EPFO) ಎಂಬ ವಿಭಾಗ ಈ ನಿಧಿಯ ಮೇಲುಸ್ತುವಾರಿಕೆಯನ್ನು ನೋಡಿಕೊಳ್ಳುತ್ತದೆ.
ಬಡ್ಡಿ ದರ:
ಇಪಿಎಫ್ ನಿಧಿಯಲ್ಲಿ ಬಳಕೆದಾರರಿಗೆ ದೊರಕುವ ಬಡ್ಡಿ ದರವನ್ನು EPFO ಸಂಸ್ಥೆಯ ಮಂಡಳಿ ಸದಸ್ಯರು ಹಿಂದಿನ ವರ್ಷದ ನಿಧಿಯ ಸಂಗ್ರಹ ಹಾಗೂ ಇದರ ಹೂಡಿಕೆಯಿಂದ ಲಭಿಸಿದ ಲಾಭವನ್ನು ಪರಿಗಣಿಸಿ ನಿರ್ಧರಿಸಲಾಗುತ್ತದೆ. ಈ ವರ್ಷ ಅಂದರೆ 2016-17ರ ಅವಧಿಯಲ್ಲಿ ಈ ಬಡ್ಡಿದರವನ್ನು 8.65% ಎಂದು ನಿರ್ಧರಿಸಲಾಗಿದೆ.
ತೆರಿಗೆಯ ಪ್ರಯೋಜನಗಳು:
ಈ ನಿಧಿಯಲ್ಲಿ ಹೂಡಬಹುದಾದ ಗರಿಷ್ಟ 1.50 ಲಕ್ಷ ರೂ ವರೆಗಿನ ಮೊತ್ತ ಆದಾಯ ತೆರಿಗೆ ವಿಧಿ 80C ಪ್ರಕಾರ ತೆರಿಗೆಯ ವಿನಾಯಿತಿಯನ್ನು ಹೊಂದಿರುತ್ತದೆ. ಆಯಾ ವರ್ಷದಲ್ಲಿ ಹೂಡಿದ ಒಟ್ಟು ಮೊತ್ತದ ಮೇಲೆ ಬಡ್ಡಿಯನ್ನು ನೀಡಲಾಗುತ್ತದೆ ಹಾಗೂ ಅಂತಿಮವಾಗಿ ದೊರಕುವ ಮೊತ್ತ ಆದಾಯ ತೆರಿಗೆಯ ವಿನಾಯ್ತಿ ಹೊಂದಿರುತ್ತದೆ.

2. ಪಿಪಿಎಫ್ (ಸಾರ್ವಜನಿಕ ಭವಿಷ್ಯ ನಿಧಿ)
 

2. ಪಿಪಿಎಫ್ (ಸಾರ್ವಜನಿಕ ಭವಿಷ್ಯ ನಿಧಿ)

ಈ ನಿಧಿಯಲ್ಲಿ ಹೂಡುವ ಮೊತ್ತ ಆಕರ್ಷಕ ಬಡ್ಡಿಯನ್ನು ಒದಗಿಸುವುದಲ್ಲದೇ ಇವು ಪೂರ್ಣವಾಗಿ ಆದಾಯ ತೆರಿಗೆಯಿಂದ ವಿನಾಯಿತಿಯನ್ನೂ ಹೊಂದಿರುತ್ತವೆ. ಈ ಮೊತ್ತದಲ್ಲಿ ಸ್ಥಿರನಿಧಿಯಾಗಿ ಹೂಡಬಹುದಾದ ಕನಿಷ್ಟ ಮೊತ್ತ 500 ರೂಪಾಯಿಗಳು ಹಾಗೂ ಗರಿಷ್ಟ ಮೊತ್ತ 1.5 ಲಕ್ಷ ರೂಪಾಯಿಗಳು.

ಬಡ್ಡಿ ದರ:
ಕಳೆದ ಏಪ್ರಿಲ್ ನಿಂದ ಪಿಪಿಎಫ್ ಮೇಲಿನ ವಾರ್ಷಿಕ ಬಡ್ಡಿ ದರ ಹಾಗೂ ಇತರ ಉಳಿತಾಯ ಯೋಜನಗೆಗಳನ್ನು ಮರುನವೀಕರಿಸಿದ್ದು ಈಗ ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿ ವಿತರಿಸಲಾಗುತ್ತದೆ. ಪ್ರಸ್ತುತ ಸಮಯದಲ್ಲಿ ಪಿಪಿಎಫ್ ಹೂಡಿಕೆದಾರರಿಗೆ 7.8ಶೇಖಡಾ ಬಡ್ಡಿ ದೊರಕುತ್ತಿದೆ.

ತೆರಿಗೆಯ ಪ್ರಯೋಜನಗಳು:
ಪಿಪಿಎಫ್ ಹೂಡಿಕೆಯಲ್ಲಿ EEE ಅಥವಾ exempt, exempt, exempt (ವಿನಾಯಿತಿ, ವಿನಾಯಿತಿ, ವಿನಾಯಿತಿ) ಅಂದರೆ ಹೂಡಿಕೆ, ಬಡ್ಡಿ ಹಾಗೂ ಅಂತಿಮ ಮೊತ್ತ, ಎಲ್ಲವೂ ತೆರಿಗೆರಹಿತವಾಗಿರುತ್ತವೆ.

3. ಸ್ಥಿರ ಠೇವಣಿಗಳು (Fixed deposits (FD)

3. ಸ್ಥಿರ ಠೇವಣಿಗಳು (Fixed deposits (FD)

ಇದೊಂದು ಅತ್ಯಂತ ಜನಪ್ರಿಯ ಯೋಜನೆಯಾಗಿದ್ದು ನಮ್ಮ ದೇಶದ ಪ್ರತಿ ಬ್ಯಾಂಕ್ ನಲ್ಲಿ ದೊರಕುವ ಸೇವೆಯಾಗಿದೆ. ಈ ಹೂಡಿಕೆಯನ್ನು ಯಾವಾಗ ಬೇಕಾದರೂ ಮರುಪಡೆಯುವ ಅವಕಾಶ ಹಾಗೂ ದ್ರವ್ಯತೆಯ ಕಾರಣದಿಂದಾಗಿ ಹೆಚ್ಚಿನ ಜನರು ಸ್ಥಿರ ಠೇವಣಿಗಳಲ್ಲಿ ಹಣ ಹೂಡಲು ಉತ್ಸುಕರಾಗಿದ್ದಾರೆ. ಈ ಹೂಡಿಕೆಗೆ ಅವಧಿ ಠೇವಣಿ (term deposits) ಎಂದೂ ಕರೆಯುತ್ತಾರೆ. ಹೂಡಿಕೆ ಹೂಡಿರುವ ಅಷ್ಟೂ ಅವಧಿಗೆ ನಿಗದಿತ ಬಡ್ಡಿ ದರವನ್ನು ನೀಡಲು ಬ್ಯಾಂಕ್ ಬದ್ದವಾಗಿರುತ್ತದೆ.

ಬಡ್ಡಿ ದರ:
ಈ ದರ ಬ್ಯಾಂಕ್ ನಿಂದ ಬ್ಯಾಂಕ್ ಗೆ, ಹೂಡಿಕೆಯ ಅವಧಿಯನ್ನನುಸರಿಸಿ ಬದಲಾಗುತ್ತಿರುತ್ತದೆ. ಉದಾಹರಣೆಗೆ ಭಾರತದ ಅತಿ ದೊಡ್ಡ ಬ್ಯಾಂಕ್ ಸಮೂಹವಾದ ಭಾರತೀಯ ಸ್ಟೇಟ್ ಬ್ಯಾಂಕ್ (State Bank of India (SBI) ಒಂದು ವರ್ಷದ ಅವಧಿಗೆ ಒಂದು ಕೋಟಿ ರೂಪಾಯಿಗೂ ಕಡಿಮೆ ಮೊತ್ತದ ಹಣಕ್ಕೆ 6.25 ಶೇಖಡಾ ಬಡ್ಡಿ ಒದಗಿಸುತ್ತದೆ. ಆದರೆ ಇದು ಸಾಮಾನ್ಯ ಸ್ಥಿರ ಹೂಡಿಕೆಯಾಗಿದ್ದು ಇದರಲ್ಲಿ ಲಭಿಸುವ ಬಡ್ಡಿ ತೆರಿಗೆಗೆ ಒಳಗಾಗುತ್ತದೆ.

ತೆರಿಗೆಯ ಪ್ರಯೋಜನಗಳು:
ಈ ಹೂಡಿಕೆಯಲ್ಲಿ ಪಡೆಯುವ ಬಡ್ಡಿ ಪೂರ್ಣವಾಗಿ ತೆರಿಗೆಗೆ ಒಳಪಡುತ್ತವೆ. ಆದರೆ ಉಳಿತಾಯ ಖಾತೆಯ ಬಡ್ಡಿದರ ವಾರ್ಷಿಕ ರೂ. ಹತ್ತು ಸಾವಿರದ ವರೆಗೆ ತೆರಿಗೆ ವಿನಾಯಿತಿಯನ್ನು ಪಡೆಯುತ್ತದೆ. ಒಂದು ವೇಳೆ ಸ್ಥಿರ ಠೇವಣಿಯ ಮೇಲೆ ವಾರ್ಷಿಕವಾಗಿ ಹತ್ತು ಸಾವಿರಕ್ಕೂ ಹೆಚ್ಚಿನ ಬಡ್ಡಿ ಲಭಿಸಿದರೆ ಇದರಿಂದ ಟಿಡಿಎಸ್(deduct tax at source (TDS) ಅಂದರೆ ಮೂಲದಲ್ಲಿಯೇ ತೆರಿಗೆಯನ್ನು ಮುರಿದುಕೊಳ್ಳುವ ಮೂಲಕ ಶೇ ಹತ್ತರಷ್ಟು ಮೊತ್ತವನ್ನು ಮುರಿದುಕೊಂಡೇ ಕೊಡುತ್ತದೆ. ಈ ಟಿಡಿಎಸ್ ಅನ್ನು ನಿಮ್ಮ ಬ್ಯಾಂಕಿನ ಎಲ್ಲಾ ಶಾಖೆಗಳಲ್ಲಿರುವ ಖಾತೆಗಳಿಂದ ಲಭಿಸಿದ ಒಟ್ಟು ಮೊತ್ತವನ್ನು ಪರಿಗಣಿಸಿಯೇ ಮುರಿಯಲಾಗುತ್ತದೆ.

ಕೆಲವು ಬ್ಯಾಂಕುಗಳು ಸ್ಥಿರ ಠೇವಣಿಯ ಮೇಲೆ ತೆರಿಗೆ ವಿನಾಯ್ತಿಯನ್ನೂ ನೀಡುತ್ತವೆ. ಆದಾಯ ತೆರಿಗೆ ವಿಧಿ 80C ಪ್ರಕಾರ ನೀವು ಸ್ಥಿರ ಠೇವಣಿಯಲ್ಲಿ ಹೂಡುವ ಹಣ ತೆರಿಗೆಯ ವಿನಾಯ್ತಿಯನ್ನು ಹೊಂದಿರುತ್ತದೆ. ಆದರೆ ಇದರಿಂದ ಲಭಿಸುವ ಬಡ್ಡಿ ಮಾತ್ರ ತೆರಿಗೆಗೆ ಒಳಪಡುತ್ತದೆ.

 

4. ಎನ್ಪಿಎಸ್ - ರಾಷ್ಟ್ರೀಯ ಪಿಂಚಣಿ ಯೋಜನೆ

4. ಎನ್ಪಿಎಸ್ - ರಾಷ್ಟ್ರೀಯ ಪಿಂಚಣಿ ಯೋಜನೆ

2004 ರ ಜನವರಿ 1ರಂದು ಉದ್ಘಾಟನೆಗೊಂಡ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯ ಯೋಜನೆ ಹೆಸರೇ ತಿಳಿಸುವಂತೆ ಓರ್ವ ವ್ಯಕ್ತಿ ತನ್ನ ನಿವೃತ್ತಿಯ ಬಳಿಕ ಪಡೆಯಬಹುದಾದ ಪಿಂಚಣಿನ್ನು ಆಧರಿಸಿದ್ದು ಎಲ್ಲಾ ಭಾರತೀಯ ನಾಗರಿಕರೂ ಈ ಯೋಜನೆಯಲ್ಲಿ ಪಾಲ್ಗೊಳ್ಳಬಹುದು. ಎನ್. ಪಿ.ಎಸ್ ಯೋಜನೆಯ ಮೂಲಕ ನಿವೃತ್ತಿಯ ಸಮಯದಲ್ಲಿ ಪಡೆಯಲು ಅನುಕೂಲವಾಗುವಂತೆ ವೃತ್ತಿಜೀವನದ ಮೊದಲ ವರ್ಷಗಳಿಂದಲೇ ಉಳಿತಾಯದ ಅಭ್ಯಾಸವನ್ನು ರೂಢಿಸಿಕೊಳ್ಳಲು ಈ ಯೋಜನೆ ಪ್ರೇರಣೆ ನೀಡುತ್ತದೆ ಎಂದು ಈ ಸಂಸ್ಥೆಯ ಜಾಲತಾಣ ವಿವರಿಸುತ್ತದೆ.
"ಈ ಯೋಜನೆ ನೀಡುವ ಪ್ರಯೋಜನಗಳಾದ ಹಣದ ಹೂಡಿಕೆಯ ಮೊತ್ತದ ಆಯ್ಕೆ, ಮರುಪಡೆಯುವ ಮೊತ್ತದ ಏರಿಕೆಯ ಸಾಧ್ಯತೆ ಹಾಗೂ ಒಂದೂವರೆ ಲಕ್ಷ ರೂಪಾಯಿಯ ಮಿತಿಗೂ 50,000 ರೂ ಹೆಚ್ಚು ಮೊತ್ತಕ್ಕೆ ತೆರಿಗೆ ವಿನಾಯಿತಿಯ ಸೌಲಭ್ಯ, ಇವೆಲ್ಲವೂ ವಿಶೇಷವಾಗಿ ಯುವ ಜನತೆಯನ್ನು ಈ ಯೋಜನೆಯಲ್ಲಿ ಒಳಗೊಳ್ಳಲು ಪ್ರೇರಣೆ ನೀಡುತ್ತವೆ" ಎಂದು TBNG Capital Advisors ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ತರುಣ್ ಬಿರಾನಿಯವರು ತಿಳಿಸುತ್ತಾರೆ.

ಬಡ್ಡಿ ದರ:
ಈ ಯೋಜನೆಯ ಬಡ್ಡಿ ದರ ಮಾರುಕಟ್ಟೆಯ ಸ್ಥಿತಿಯನ್ನು ಅವಲಂಬಿಸಿರುತ್ತದೆ. "ನಮ್ಮ ದೃಷ್ಟಿಯಲ್ಲಿ, ಮರುಪಡೆಯುವ ಮೊತ್ತ ಮಾರುಕಟ್ಟೆಯನ್ನು ಅವಲಂಬಿಸಿದ್ದರೂ ಖಚಿತ ಬಡ್ದಿದರ ಒದಗಿಸುವ ಪಿಪಿಎಫ್/ಪಿಎಫ್ ಯೋಜನೆಗಳಿಗಿಂತಲೂ ಕೊಂಚ ಹೆಚ್ಚೇ ಬಡ್ಡಿಯನ್ನು ನೀಡುತ್ತದೆ. ಇದಕ್ಕೆ ಎರಡು ಕಾರಣಗಳಿವೆ. ಒಂದು ಎನ್ ಪಿ ಎಸ್ ನಲ್ಲಿ ತೆರೆದ ಶೇರುಬೆಲೆ (equity exposure)ಯ ಆಯ್ಕೆ ಹಾಗೂ ಎರಡನೆಯದಾಗಿ ವೃತ್ತಿಪರ ನಿಧಿ ನಿರ್ವಹಣೆ" ಎಂದು ಔಟ್ ಲುಕ್ ಏಶಿಯಾ ಕ್ಯಾಪಿಟಲ್ ಸಂಸ್ಥೆಯ ವೃತ್ತಿಪರ ನಿಧಿ ನಿರ್ವಹಣೆ ಮನೋಜ್ ನಾಗಪಾಲ್ ರವರು ತಿಳಿಸುತ್ತಾರೆ.

ತೆರಿಗೆಯ ಪ್ರಯೋಜನಗಳು:
ಈ ಯೋಜನೆಯಲ್ಲಿ ಹೂಡುವ ಎರಡು ಲಕ್ಷ ರೂ ( 80C ವಿಧಿಯ ಪ್ರಕಾರ ಒಂದೂವರೆ ಲಕ್ಷ + 80CCD ವಿಧಿಯ ಪ್ರಕಾರ ಹೆಚ್ಚುವರಿ ರೂ. 50,000) ಮೊತ್ತ ಪೂರ್ಣವಾಗಿ ತೆರಿಗೆಯಿಂದ ವಿನಾಯಿತಿಯನ್ನು ಪಡೆಯುತ್ತದೆ.

5. ಎನ್ ಎಸ್ ಸಿ (ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ)

5. ಎನ್ ಎಸ್ ಸಿ (ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ)

ಈ ಯೋಜನೆಯೂ ಭಾರತ ಸರ್ಕಾರದ ಇನ್ನೊಂದು ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು ಎಲ್ಲಾ ಅಂಚೆ ಕಛೇರಿಯಲ್ಲಿ ಮುಕ್ತವಾಗಿ ದೊರಕುತ್ತದೆ. ಇದರಲ್ಲಿ ಪಡೆಯುವ ಮೊತ್ತ 80C ವಿಧಿಯ ಪ್ರಕಾರ ತೆರಿಗೆಯಿಂದ ವಿನಾಯ್ತಿಯನ್ನು ಹೊಂದಿರುತ್ತದೆ.

ಬಡ್ಡಿ ದರ:
ಅಂಚೆ ಕಛೇರಿಯ ಜಾಲತಾಣದ ಪ್ರಕಾರ ಪ್ರಸ್ತುತ ಈ ಯೋಜನೆಯಲ್ಲಿ ಪಡೆಯುವ ಬಡ್ದಿದರ 7.8 ಶೇ. ಇದೆ. ಉದಾಹರಣೆಗೆ 1.10.2016 ಅಥವಾ ಇದರ ನಂತರದ ದಿನಾಂಕದಂದು ಕೊಂಡ ನೂರು ರೂ. ಬೆಲೆಯ ಒಂದು ಪ್ರಮಾಣಪತ್ರ ಐದು ವರ್ಷದ ಬಳಿಕ 146.93 ರೂ ಮೌಲ್ಯ ಹೊಂದಿರುತ್ತದೆ.

ತೆರಿಗೆಯ ಪ್ರಯೋಜನಗಳು:
ಈ ಯೋಜನೆಯಲ್ಲಿ ಹೂಡುವ 1.50ಲಕ್ಷ ರೂ ಗಳವರೆಗಿನ ಮೊತ್ತದ ಬಡ್ಡಿ ಆದಾಯ ತೆರಿಗೆ 80C ವಿಧಿಯ ಪ್ರಕಾರ ತೆರಿಗೆ ವಿನಾಯಿತಿಯನ್ನು ಪಡೆಯುತ್ತದೆ. ಈ ಹೂಡಿಕೆಯಲ್ಲಿ ಗರಿಷ್ಟ ಮೊತ್ತದ ಮಿತಿಯಿಲ್ಲದೇ ಎಷ್ಟು ಬೇಕಾದರೂ ಹಣ ಹೂಡಬಹುದು. ಅಲ್ಲದೇ ಇದರಿಂದ ಬರುವ ಬಡ್ಡಿ ಸಹಾ ಟಿಡಿಎಸ್ ಗೆ ಒಳಪಡುವುದಿಲ್ಲ. ಆದರೆ ಇದರಲ್ಲಿ ಪಡೆಯುವ ಒಟ್ಟ ಬಡ್ಡಿ ತೆರಿಗೆಗೆ ಒಳಪಡುತ್ತದೆ.

English summary

Five Savings Schemes You Should Consider For Investments

Employee Provident Fund, Public Provident Fund, Fixed Deposits, National Pension Scheme and the National Savings Certificates are some of the key savings schemes in which one can invest.
Story first published: Tuesday, January 9, 2018, 10:42 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X