Englishहिन्दी മലയാളം தமிழ் తెలుగు

ಪ್ರಧಾನ ಮಂತ್ರಿ ಜೀವನ ವಿಮಾ ಯೋಜನೆಯ ವಿಶೇಷತೆ ಹಾಗು ಪ್ರಯೋಜನಗಳೇನು?

Written By: Siddu
Subscribe to GoodReturns Kannada

ಕೇಂದ್ರ ಸರ್ಕಾರ ಜೀವ ವಿಮಾ ಯೋಜನೆಯನ್ನು ಸಮಾಜದಲ್ಲಿನ ಬಡವರು ಮತ್ತು ಕಡಿಮೆ ಆದಾಯ ಗಳಿಸುವ ವರ್ಗದ ಜನರ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಆರಂಭಿಸಲಾಗಿದೆ. ಪ್ರತಿಯೊಬ್ಬ ಭಾರತೀಯನಿಗೂ ಜೀವ ವಿಮೆಯನ್ನು ಒದಗಿಸುವ ಉದ್ದೇಶವನ್ನು ಈ ವಿಮೆ ಹೊಂದಿದೆ. ಟರ್ಮ್ ವಿಮಾ ಯೋಜನೆಯ ಪ್ರಕಾರ ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಯು 18-50 ವರ್ಷ ವಯಸ್ಸಿನ ಜನರಿಗೆ ಲಭ್ಯವಿರುತ್ತದೆ.

ಈ ಸ್ಕೀಂನ ಪ್ರಕಾರ ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ಒಂದು ನವೀಕರಣ (renewal) ಮಾಡಬಹುದಾದ ಪಾಲಿಸಿಯಾಗಿದ್ದು, ಇದರಲ್ಲಿ ವಾರ್ಷಿಕ ಜೀವ ವಿಮಾ ರಕ್ಷಣೆ ರೂ. 2,00,000 ವನ್ನು ವಿಮಾದಾರನ ಮರಣದ ಸಂದರ್ಭದಲ್ಲಿ ಕೊಡಲಾಗುತ್ತದೆ. ಅತೀ ಕಡಿಮೆ ಅಂದರೆ ವಾರ್ಷಿಕ ರೂ. 330 ಪ್ರೀಮಿಯಂ ದರದಲ್ಲಿ ಇದನ್ನು ನೀಡಲಾಗುತ್ತದೆ. ನರೇಂದ್ರ ಮೋದಿ ಸರ್ಕಾರದ ಪ್ರಮುಖ ಜನಕಲ್ಯಾಣ ಯೋಜನೆಗಳು

ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಗಳ ಪ್ರಮುಖ ಲಕ್ಷಣಗಳು ಈ ಕೆಳಗಿನಂತಿವೆ..

ಲೈಫ್ ಕವರೇಜ್

ಜೀವನ ಜ್ಯೋತಿ ವಿಮಾ ಪಾಲಿಸಿ 1 ವರ್ಷಕ್ಕೆ ಲೈಫ್ ಕವರೇಜ್ ಒದಗಿಸುತ್ತದೆ. ವಿಮಾದಾರರು ಪ್ರತಿ ವರ್ಷವೂ ಪಾಲಿಸಿಯನ್ನು ನವೀಕರಿಸಬಹುದು. ವಿಮಾದಾರ ಸ್ವಇಚ್ಛೆಯ ಪ್ರಕಾರ ಈ ಯೋಜನೆಯಿಂದ ಹೊರ ಹೋಗುವ ಅವಕಾಶವೂ ಇದೆ. ಭವಿಷ್ಯದಲ್ಲಿ ಯಾವಾಗಲಾದರೂ ಮತ್ತೆ ಈ ಪಾಲಿಸಿಯಲ್ಲಿ ಸೇರಿಕೊಳ್ಳಬಹುದು.

ಅವಧಿ ಮತ್ತು ವಯಸ್ಸು

ಈ ಪಾಲಿಸಿಯು ಭರವಸೆ ನೀಡಿದಂತೆ ರೂ. 2 ಲಕ್ಷದ ಗರಿಷ್ಠ ಮೊತ್ತವನ್ನು ನೀಡುತ್ತದೆ. ಬೇರೆ ತರಹದ ಟರ್ಮ್ ವಿಮಾ ಪಾಲಿಸಿಗಳಿಗೆ ಹೋಲಿಸಿದರೆ ಈ ಯೋಜನೆಯಲ್ಲಿ ಅತ್ಯಂತ ಕಡಿಮೆ ದರದಲ್ಲಿ ಅಂದರೆ ವಾರ್ಷಿಕವಾಗಿ ರೂ. 330 ಪ್ರೀಮಿಯಂ ಕಟ್ಟಬೇಕಾಗುತ್ತದೆ. ಅಷ್ಟೇ ಅಲ್ಲದೆ ಈ ಪ್ರೀಮಿಯಂ ದರವು 18 ರಿಂದ 50 ವರ್ಷ ವಯಸ್ಸಿನ ಎಲ್ಲರಿಗೂ ಒಂದೇ ಸಮನಾಗಿರುತ್ತದೆ.

ಪಾಲಿಸಿಯ ವಿಶೇಷ ಪ್ರಯೋಜನ

ಪಾಲಿಸಿಯ ನೀತಿಯಲ್ಲಿ ಹೇಳಿರುವಂತೆ ಕ್ಲೈಮ್ ಸೆಟಲ್ಮೆಂಟ್ (ಹಕ್ಕು ವಾಪಸಾತಿ) ಪ್ರಕ್ರಿಯೆಯು ತುಂಬಾ ಸರಳವಾಗಿದ್ದು, ಚಂದಾದಾರರ ಸ್ನೇಹಿಯಾಗಿದೆ. ಪಾಲಿಸಿಯ ಮರಣ ಪ್ರಯೋಜನವನ್ನು ಕೊನೆಗೊಳಿಸಲಾಗುವ ಕೆಲವು ಪ್ರಕರಣಗಳಿವೆ. ಅವು ಈ ಕೆಳಗಿನ ಸಂಧರ್ಭದಲ್ಲಿ ಅನ್ವಯವಾಗುತ್ತದೆ. ವಿಮಾದಾರನು 55 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಲ್ಲಿ, ವಿವಿಧ ಬ್ಯಾಂಕುಗಳಲ್ಲಿ ವಿಮಾದಾರನಾಗಿದ್ದರೆ ಮತ್ತು ವಿಮಾದಾರನು ತನ್ನ ಉಳಿತಾಯ ಖಾತೆಯಲ್ಲಿ ವಿಮೆಯ ಹಣವನ್ನು ಸರಿಯಾದ ರೀತಿಯಲ್ಲಿ ಪಾವತಿ ಮಾಡಲು ಸಾಕಷ್ಟು ಹಣ ಇರಿಸದಿರುವುದು ಒಂದು ಕಾರಣವಾಗಿರುತ್ತದೆ. ಆರಂಭಿಕ ವರ್ಷಗಳಲ್ಲಿ ಯೋಜನೆಯನ್ನು ಖರೀದಿಸಲು ವಿಫಲವಾದ ಪಕ್ಷದಲ್ಲಿ, ನಂತರದ ವರ್ಷಗಳಲ್ಲಿ ವಾರ್ಷಿಕ ಪ್ರೀಮಿಯಂಗಳನ್ನು ಪಾವತಿಸಿ ಮತ್ತು ಸ್ವಯಂ-ದೃಢೀಕರಿಸಿದ ಆರೋಗ್ಯ ಪ್ರಮಾಣ ಪತ್ರವನ್ನು ಸಲ್ಲಿಸುವ ಮೂಲಕ ಪಾಲಿಸಿಯಲ್ಲಿ ಸೇರ್ಪಡೆಗೊಳ್ಳಬಹುದು.

ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮ ಯೋಜನೆ ನೀಡುವ ಪ್ರಯೋಜನಗಳು

ಮರಣಾನಂತರ ಪಯೋಜನಗಳು:
ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಯನ್ನು ಹೊಂದಿರುವ ವಿಮಾದಾರನ ಮರಣದ ಸಮಯದಲ್ಲಿ ಫಲಾನುಭವಿಗೆ (nominee) ರೂ. 2,00,000 ಗಳನ್ನು ಮರಣ ವ್ಯಾಪ್ತಿಯಲ್ಲಿ ನೀಡುತ್ತದೆ.
ಮೆಚುರಿಟಿ ಬೆನಿಫಿಟ್:
ಇದು ಟರ್ಮ್ ವಿಮಾ ಯೋಜನೆ ಆಗಿರುವುದರಿಂದ ಪ್ರಧಾನ ಮಂತ್ರಿ ಜೀವನ ಜ್ಯೋತಿ viಮಾ ಯೋಜನೆಯು ಯಾವುದೇ ಮೆಚುರಿಟಿ ಪ್ರಯೋಜನಗಳನ್ನು ನೀಡುವುದಿಲ್ಲ ಅಥವಾ ಅವಧಿಗೆ ಮುನ್ನ ಪಾಲಿಸಿ ಸರೆಂಡರ್ ಮಾಡಿದರೆ, ಯಾವ ಪ್ರಯೋಜನಗಳನ್ನೂ ನೀಡಲಾಗುವುದಿಲ್ಲ.
ತೆರಿಗೆ ಲಾಭ:
ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 ಸಿ ಅಡಿಯಲ್ಲಿ ಈ ಪಾಲಿಸಿಗೆ ಪಾವತಿಸಲಾದ ಪ್ರೀಮಿಯಂ ತೆರಿಗೆ ವಿನಾಯತಿಗೆ ಅರ್ಹವಾಗಿರುತ್ತದೆ.
ರಿಸ್ಕ್ ಕವರೇಜ್:
ಪ್ರಧಾನ್ ಮಂತ್ರಿ ಜೀವನ ಜ್ಯೋತಿ viಮಾ ಯೋಜನೆಯು ಒಂದು ವರ್ಷಗಳ ರಿಸ್ಕ್ ಕವರೇಜನ್ನು ಒದಗಿಸುತ್ತದೆ. ಹೆಚ್ಚು ಕಡಿಮೆ ಇದು ನವೀಕರಿಸುವ ಪಾಲಿಸಿಗಳಂತೆ ವಾರ್ಷಿಕವಾಗಿ ನವೀಕರಿಸಬಹುದಾಗಿದೆ. ಇದಲ್ಲದೆ, ಉಳಿತಾಯ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿದ ಸ್ವಯಂ ಡೆಬಿಟ್ ಆಯ್ಕೆಯಿಂದ ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಯನ್ನು ಪಾಲಿಸಿದಾರನು ಆಯ್ಕೆ ಮಾಡಬಹುದು.

ಪಾಲಿಸಿಯ ಅರ್ಹತೆಗಳು

ಉಳಿತಾಯ ಬ್ಯಾಂಕ್ ಖಾತೆಯನ್ನು ಹೊಂದಿರುವ 18-50 ವರ್ಷಗಳ ನಡುವಿನ ಯಾವುದೇ ವ್ಯಕ್ತಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಬ್ಯಾಂಕುಗಳ ಮೂಲಕ ಈ ಯೋಜನೆಯಲ್ಲಿ ಸೇರಬಹುದು. ಒಬ್ಬ ವ್ಯಕ್ತಿಯು ಒಂದಕ್ಕಿಂತ ಹೆಚ್ಚಿನ
ಬ್ಯಾಂಕುಗಳಲ್ಲಿ ಖಾತೆಯನ್ನು ಹೊಂದಿದ್ದರೂ ಈ ಯೋಜನೆಯು ಕೇವಲ ಉಳಿತಾಯ ಖಾತೆಯನ್ನು ಹೊಂದಿದ ಒಂದೇ ಬ್ಯಾಂಕಿನ ಖಾತೆಯ ಮೂಲಕ ಚಂದಾದಾರರಾಗಬಹುದು.

ಪಾಲಿಸಬೇಕಾದ ನಿಯಮಗಳು

ಈ ಪಾಲಿಸಿಯಡಿಯಲ್ಲಿ ಬರುವ ಪ್ರಯೋಜನಗಳನ್ನು ಪಡೆಯಲು ಆಧಾರ್ ಕಾರ್ಡನ್ನು ಖಾತೆಯಿರುವ ಬ್ಯಾಂಕ್ ಗಳಲ್ಲಿ ಲಿಂಕ್ ಮಾಡುವುದು ಕಡ್ಡಾಯ. 2015ರ ಆಗಸ್ಟ್ 31 ರಿಂದ 30ರ ನವೆಂಬರ್ 2015 ರವರೆಗೆ ಪ್ರಾಥಮಿಕ ದಾಖಲಾತಿ ಅವಧಿಯ ನಂತರ ಈ ಯೋಜನೆಯಲ್ಲಿ ಸೇರ್ಪಡೆಗೊಳ್ಳುವ ವಿಮಾ ಖರೀದಿದಾರರು ಸ್ವಯಂ-ದೃಢೀಕರಿಸಿದ ವೈದ್ಯಕೀಯ ಪ್ರಮಾಣ ಪತ್ರವನ್ನು ಅವನು / ಅವಳು ಅಸ್ವಸ್ಥತೆಯಿಂದ ಬಳಲುತ್ತಿದ್ದರು ಎಂಬುದಕ್ಕೆ ಪಾಲಿಸಿಯ ಘೋಷಣೆ ರೂಪದ ಪಾರಂನಲ್ಲಿ ಉಲ್ಲೇಖಿಸಿದಂತೆ ಪುರಾವೆಯಾಗಿ ಸಲ್ಲಿಸಬೇಕು.

ಕೋಷ್ಟಕ ರೂಪದಲ್ಲಿ ನೀತಿ ವಿವರ

ಈ ಪಾಲಿಸಿಯ ಖರೀದಿದಾರರ ಅನುಕೂಲಕ್ಕಾಗಿ, ಇಲ್ಲಿ ಕೋಷ್ಟಕ ರೂಪದಲ್ಲಿ ನೀತಿ ವಿವರಗಳನ್ನು ತೋರಿಸಲಾಗಿದೆ.

ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಯು ಒಂದು ಅನುಕೂಲಕರವಾದ ಯೋಜನೆಯಾಗಿದ್ದು, ಆಧಾರ್ ಕಾರ್ಡ್ ನ್ನು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಸರಳವಾಗಿ ಲಿಂಕ್ ಮಾಡುವ ಮೂಲಕ ಚಂದಾದಾರರಾಗಬಹುದು.
ಈ ಯೋಜನೆಯು ಜೂನ್ 1, 2015 ರಿಂದ ಮೇ 2016 ರವರೆಗೆ ಚಂದಾದಾರರಿಗಾಗಿ ಮುಕ್ತವಾಗಿದೆ. ವಿಮಾದಾರರು ಈ ದಿನಾಂಕದ ನಂತರವೂ ನೊಂದಾಯಿಸಿಕೊಳ್ಳಬಹುದು. ಪೂರ್ಣ ವಾರ್ಷಿಕ ಪ್ರೀಮಿಯಂ ಪಾವತಿಯನ್ನು ಒದಗಿಸುವುದು ಮತ್ತು ಆರೋಗ್ಯ ಪ್ರಮಾಣಪತ್ರವನ್ನು ಸಲ್ಲಿಸಲಾಗುತ್ತದೆ.

ಹಣಕಾಸು ಭದ್ರತೆಗೆ ಸಹಕಾರಿ

ಇದು ಸರಕಾರಿ - ಬೆಂಬಲಿತ ಕಡಿಮೆ ಪ್ರೀಮಿಯಂ ದರ ಹೊಂದಿದ ವಿಮಾ ಪಾಲಿಸಿಯಾಗಿದ್ದು, ಈ ಯೋಜನೆಯು ಕಡಿಮೆ ಆದಾಯ ಹೊಂದಿದ ವ್ಯಕ್ತಿಗಳಿಗೆ ತುಂಬಾ ಪ್ರಯೋಜನಕಾರಿಯಾದುದಾಗಿದೆ. ಈ ಯೋಜನೆಯು ವ್ಯಕ್ತಿಯ ಹಣಕಾಸಿನ ಭವಿಷ್ಯವನ್ನು ಪರಿಣಾಮಕಾರಿಯಾಗಿ ಭದ್ರಪಡಿಸುತ್ತದೆ. ಯಾವುದೇ ರೀತಿಯ ಅಪಾಯಕಾರಿ ಸಂಭವನೀಯತೆ ವಿರುದ್ಧ ಹೋರಾಡಲು ಸೂಕ್ತವಾದ ಪರಿಹಾರವನ್ನು ಒದಗಿಸುತ್ತದೆ.

ಯೋಜನೆಯ ಮೂರು ಪ್ರಮುಖ ಲಕ್ಷಣಗಳು

1. ಈ ಯೋಜನೆಯು ವಿಮೆದಾರರ ಕುಟುಂಬಕ್ಕೆ ಅಚಾನಕ ಅವಘಡದ ಸಮಯದಲ್ಲಿ ರಕ್ಷಣೆ ನೀಡುತ್ತದೆ.
2. ಯೋಜನೆಯಲ್ಲಿ ದಾಖಲಾತಿ ಮತ್ತು ಬಳಸುವ ರೀತಿ ಸರಳ ಪ್ರಕ್ರಿಯೆದ್ದಾಗಿದೆ.
3. ನೀತಿಯು ನೀಡುವ ಕನಿಷ್ಟ ಪ್ರೀಮಿಯಂ ದರಗಳೊಂದಿಗೆ, ಅರ್ಹರಾದ ಯಾವುದೇ ವ್ಯಕ್ತಿಯು ಯಾವುದೇ ತೊಂದರೆಯಿಲ್ಲದೆ ಈ ಪಾಲಿಸಿಯ ಚಂದಾದಾರರಾಗಬಹುದು.

ಕೊನೆ ಮಾತು

ಈ ಪಾಲಿಸಿಯಿಂದ ನೀಡಲಾಗುವ ಎಲ್ಲಾ ಪ್ರಯೋಜನಗಳು ಮತ್ತು ವೈಶಿಷ್ಟ್ಯಗಳೊಂದಿಗೆ, ಇದು ಸಮಾಜದ ಕಡಿಮೆ ಆದಾಯದ ಆದಾಯ ಗಳಿಸುವವರು ಖರೀದಿಸಬಹುದಾದಂತಹ ಉತ್ತಮ ಯೋಜನೆಗಳಲ್ಲಿ ಒಂದಾಗಿದೆ.

English summary

Pradhan Mantri Jeevan Jyoti Bima Yojana – Features and Benefits

The central government of India has launched a new life insurance scheme, Pradhan Mantri Jeevan Jyoti Bima Yojana, for the growth of the poor and low income section of society.
Story first published: Thursday, January 11, 2018, 10:59 [IST]
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

Get Latest News alerts from Kannada Goodreturns