For Quick Alerts
ALLOW NOTIFICATIONS  
For Daily Alerts

ನರೇಂದ್ರ ಮೋದಿ ಸರ್ಕಾರದ ಪ್ರಮುಖ ಜನಕಲ್ಯಾಣ ಯೋಜನೆಗಳು

|

ಕೇಂದ್ರದಲ್ಲಿ ಬಿಜೆಪಿ ಸರ್ಕಾರ 2014 ಮೇ 26ರಂದು ಅಧಿಕಾರಕ್ಕೆ ಬಂದ ನಂತರದಲ್ಲಿ ಹಲವು ಜನಕಲ್ಯಾಣ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ.

ಇದರಲ್ಲಿ ಬಡವರು, ರೈತರು, ಯುವಕರು, ಮಹಿಳೆಯರು ಹಾಗೂ ಹಿರಿಯ ನಾಗರಿಕರು ಸೇರಿದಂತೆ ಎಲ್ಲರ ಕ್ಷೇಮಾಭಿವೃದ್ಧಿಗಾಗಿ ಹತ್ತು ಹಲವು ಯೋಜನೆಗಳು ಸೇರ್ಪಡೆಗೊಂಡಿವೆ. ಆ ಮೂಲಕ ಭಾರತದ ಸಮಗ್ರ ಅಭಿವೃದ್ಧಿಯ ಜತೆಗೆ ಹಣಕಾಸು ಭದ್ರತೆ, ಮೂಲಭೂತ ಅಭಿವೃದ್ಧಿ ಹಾಗೂ ದೀನರ ಸಬಲೀಕರಣದ ಮೂಲಕ ಪ್ರತಿಯೊಬ್ಬರ ಕ್ಷೇಮಾಭಿವೃದ್ಧಿ ಸಾಧಿಸುವುದು ಮೋದಿ ಸರ್ಕಾರದ ಉದ್ದೇಶವಾಗಿದೆ.

ಅವುಗಳಲ್ಲಿ ಪ್ರಮುಖ ಜನಕಲ್ಯಾಣ ಯೋಜನೆಗಳ ವಿವರವನ್ನು ಇಲ್ಲಿ ನೀಡಲಾಗಿದೆ.

1. ಪ್ರಧಾನಮಂತ್ರಿ ಜನಧನ ಯೋಜನೆ
 

1. ಪ್ರಧಾನಮಂತ್ರಿ ಜನಧನ ಯೋಜನೆ

ಲಾಂಚ್: ಅಗಸ್ಟ್ 28, 2014

ಉದ್ದೇಶ: ದೇಶದ ಪ್ರತಿಯೊಬ್ಬರಿಗೂ ಎಲ್ಲ ಬಗೆಯ ಬ್ಯಾಂಕಿಂಗ್ ಸೌಲಭ್ಯಗಳನ್ನು ಕಲ್ಪಿಸುವುದು. ಈ ಯೋಜನೆ ಅಡಿಯಲ್ಲಿ ಬ್ಯಾಂಕ್ ಖಾತೆ, ವಿಮೆ ಮತ್ತು ಡೆಬಿಟ್ ಕಾರ್ಡ್ ಸೌಲಭ್ಯಗಳನ್ನು ಕಲ್ಪಿಸುವ ಗುರಿ ಹೊಂದಿದೆ.

1. ಮೂಲಭೂತವಾಗಿ ಅಪಘಾತ ವಿಮೆ, ಡೆಬಿಟ್ ಕಾರ್ಡ್, ಅಪಘಾತ ವಿಮೆ ಹೀಗೆ ಎಲ್ಲ ಬಗೆಯ ಬ್ಯಾಂಕಿಂಗ್‌ ಕ್ಷೇತ್ರದ ಸೌಲಭ್ಯಗಳನ್ನು ಯೋಜನೆ ಒಳಗೊಂಡಿದೆ.

2. ಆಧಾರ್‌ ಕಾರ್ಡ್ ಸಂಬಂಧಿತ ಐದು ಸಾವಿರಕ್ಕೂ ಹೆಚ್ಚು ಬ್ಯಾಂಕ್‌ ಖಾತೆಗಳಿಗೆ ಓವರ್‌ ಡ್ರಾಪ್ಟ್‌ ಸೌಲಭ್ಯ ಕಲ್ಪಿಸಲಾಗುವುದು.

3. ರುಪೇ ಕಾರ್ಡ್(ಡೊಮೆಸ್ಟಿಕ್ ಡೆಬಿಟ್ ಕಾರ್ಡ್) ಸೇವೆಯನ್ನು ನಗರ ಮತ್ತು ಗ್ರಾಮೀಣ ಜನತೆಗೆ ಒದಗಿಸುವುದು.

4. ಆರು ತಿಂಗಳ ನಂತರ ರುಪೇ ಡೆಬಿಟ್ ಕಾರ್ಡ್ ರೂ. 1 ಲಕ್ಷ ವರೆಗಿನ ಅಪಘಾತ ವಿಮೆ ಒಳಗೊಂಡಿರುತ್ತದೆ.

5. ಖಾತೆದಾರ ವ್ಯಕ್ತಿ 6 ತಿಂಗಳ ನಂತರ ರೂ. 5000 ಓವರ್‌ ಡ್ರಾಪ್ಟ್‌ಗೆ ಭಾಜನನಾಗುತ್ತಾನೆ.

6. ಬ್ಯಾಂಕ್‌ ಖಾತೆ ಹೊಂದಿರದ 7.5 ಕೋಟಿ ಜನರಿಗೆ ಬ್ಯಾಂಕಿಂಗ್‌ ಸೌಲಭ್ಯ ಕಲ್ಪಿಸುವುದು.

7. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯ ಹೊಸ ತಂತ್ರಜ್ಞಾನ ಪರಿಚಯಿಸಿದ್ದು, ಸ್ಮಾರ್ಟ್ ಫೋನ್ ಇಲ್ಲದವರು ಸಾಮಾನ್ಯ ಫೋನ್ ಬಳಸಿ ಫಂಡ್ಸ್ ವರ್ಗಾವಣೆ ಮತ್ತು ಬ್ಯಾಲೆನ್ಸ್ ಚೆಕ್ ಮಾಡಬಹುದು.

8. ಜನಧನ ಯೋಜನೆ ಮುಖಾಂತರ ಬಡವರಿಗೆ ಮೊಬೈಲ್ ಬ್ಯಾಂಕಿಂಗ್ ಸೇವೆ ಒದಗಿಸುವುದು.

ವೆಬ್ಸೈಟ್: http://www.pmjdy.gov.in

2. ಸುಕನ್ಯಾ ಸಮೃದ್ಧಿ ಯೋಜನೆ ಯೋಜನೆ

2. ಸುಕನ್ಯಾ ಸಮೃದ್ಧಿ ಯೋಜನೆ ಯೋಜನೆ

ಲಾಂಚ್: ಜನೆವರಿ 22, 2015

ಉದ್ದೇಶ: ಹೆಣ್ಣು ಮಗುವಿನ ಭವಿಷ್ಯದ ಭದ್ರತೆ

ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಮದುವೆಯ ಸಂದರ್ಭದಲ್ಲಿ ಪಾಲಕರನ್ನು ಪ್ರೋತ್ಸಾಹಿಸುವುದು ಈ ಉಳಿತಾಯ ಖಾತೆಯ ಪ್ರಮುಖ ಉದ್ದೇಶವಾಗಿದೆ. ಒಂದು ಹಣಕಾಸು ವರ್ಷದ ಅವಧಿಯಲ್ಲಿ ಖಾತೆಯ ಒಟ್ಟು ಠೇವಣಿ ಮೊತ್ತ 1.5 ಲಕ್ಷ ದಾಟಬಾರದು. ಇದಕ್ಕಿಂತಲೂ ಹೆಚ್ಚಿನ ಮೊತ್ತಕ್ಕೆ ಯಾವುದೆ ಬಡ್ಡಿ ಇರುವುದಿಲ್ಲ. 1.5 ಲಕ್ಷಕ್ಕಿಂತ ಹೆಚ್ಚು ಇಟ್ಟಿರುವ ಮೊತ್ತವನ್ನು ಖಾತೆದಾರರು ಯಾವಾಗ ಬೇಕಾದರೂ ಹಿಂಪಡೆಯಬಹುದು. ಸರ್ಕಾರ ಈ ಖಾತೆಯ ಬಡ್ಡಿದರವನ್ನು ಕಾಲ ಕಾಲಕ್ಕೆ ನಿರ್ಧರಿಸಲಿದೆ ಹಾಗೂ ವಾರ್ಷಿಕವಾಗಿ ಇದನ್ನು ಪರಿಷ್ಕರಿಸಲಿದೆ. ಜತೆಗೆ ಖಾತೆಗೆ ಪಾವತಿಸಲಿದೆ. ಸರ್ಕಾರ ಪ್ರತಿ ತ್ರೈಮಾಸಿಕಕ್ಕೆ ಅನುಗುಣವಾಗಿ ಬಡ್ಡಿಯನ್ನು ಘೋಷಿಸಲಿದೆ. ವಾರ್ಷಿಕವಾಗಿ ಪ್ರಸ್ತುತ ತ್ರೈಮಾಸಿಕದ ಬಡ್ಡಿದರ ಶೇ. 8.4ರಷ್ಟು ಇದೆ. ಈ ಹಿಂದೆ ಠೇವಣಿಯನ್ನು 14ನೇ ವಯಸ್ಸಿನವರೆಗೆ ಮಾಡಿಸಬಹುದಾಗಿತ್ತು. ಆದರೆ ಈಗ ಇದನ್ನು 15ನೇ ವರ್ಷಕ್ಕೆ ಹೆಚ್ಚಿಸಲಾಗಿದೆ. ಮೊದಲಿಗೆ ವಾರ್ಷಿಕವಾಗಿ ಕನಿಷ್ಟ ಠೇವಣಿ 1000 ರೂಪಾಯಿಗಳಿದ್ದವು. ಜತೆಗೆ ಶೇ. 8.4ರಷ್ಟು ಬಡ್ಡಿದರ ಇದೆ. ಪ್ರಸ್ತುತ ಯಾವುದೇ ಕನಿಷ್ಟ ಠೇವಣಿ ಇಟ್ಟಿಲ್ಲ. ಆದರೆ ಸಾಮಾನ್ಯ ಉಳಿತಾಯ ಖಾತೆದಾರರು ಶೇ. 4ರಷ್ಟು ಬಡ್ಡಿ ಪಡೆಯಲು ಅರ್ಹರಾಗಿರುತ್ತಾರೆ. ಖಾತೆ ತೆರೆದ ದಿನದಿಂದ 21ನೇ ವಯಸ್ಸು ಪೂರೈಸಿದ ನಂತರ ಈ ಖಾತೆಯ ಮೆಚುರಿಟಿ ಅವಧಿ ಮುಗಿಯುತ್ತದೆ. 21 ವರ್ಷಗಳ ಅವಧಿ ಮುಗಿದ ನಂತರ ಯಾವುದೇ ಬಡ್ಡಿಯನ್ನು ಪಾವತಿಸಲಾಗುವುದಿಲ್ಲ.

ವೆಬ್ಸೈಟ್: http://www.nsiindia.gov.in

3. ಪ್ರಧಾನಮಂತ್ರಿ ಅವಾಸ್ ಯೋಜನೆ
 

3. ಪ್ರಧಾನಮಂತ್ರಿ ಅವಾಸ್ ಯೋಜನೆ

ಲಾಂಚ್: ಜೂನ್ 25, 2015

ಉದ್ದೇಶ: 2022ರಲ್ಲಿ ದೇಶಧ ಪ್ರತಿಯೊಬ್ಬರಿಗೂ ಮನೆ ಸಿಗುವಂತಾಗಬೇಕು ಎನ್ನುವುದು ಸರ್ಕಾರದ ಉದ್ದೇಶ. ನಗರ ಪ್ರದೇಶಗಳಲ್ಲಿ 2 ಕೋಟಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 3 ಕೋಟಿ ಮನೆಗಳನ್ನು ನಿರ್ಮಿಸುವುದು.

ದೇಶದ ಪ್ರತಿಯೊಬ್ಬರಿಗೂ 2022ರ ಹೊತ್ತಿಗೆ ಮನೆ ಸಿಗಬೇಕು ಎನ್ನುವುದು ಪ್ರಧಾನಿ ಮೋದಿಯವರ ಆಶಯ. ಈ ಆಶಯಕ್ಕಾಗಿ ಕೇಂದ್ರ ಸರ್ಕಾರ "ಪ್ರಧಾನ ಮಂತ್ರಿ ಅವಾಸ ಯೋಜನೆ" (Pradhan ,Mantri Awas Yojana) ಪ್ರಾರಂಭಿಸಿದೆ. ಇದರಲ್ಲಿ ಬಡವರು, ಅತಿ ಕೆಳವರ್ಗದವರು, ಮಧ್ಯಮ ವರ್ಗದವರು, ಕಡಿಮೆ ಆದಾಯ ಹೊಂದಿರುವವರು, ನೌಕರರು ಹೀಗೆ ಎಲ್ಲರೂ ಒಳಗೊಂಡಿದ್ದಾರೆ. ಕೇಂದ್ರದ ಸಹಾಯದೊಂದಿಗೆ ನಗರ ಸ್ಥಳೀಯ ಸಂಸ್ಥೆಗಳು(Urban Local Bodies), ಫಲಾನುಭವಿ ನೇತೃತ್ವ(Beneficiary Led Construction), ನ್ಯಾಷನಲ್ ಹೌಸಿಂಗ್ ಬ್ಯಾಂಕ್NHB() ಮತ್ತು ಹುಡ್ಕೊ(HUDCO) ಸಂಸ್ಥೆಗಳು ಮತ್ತು ರಾಜ್ಯ/ಕೇಂದ್ರಾಡಳಿತ ಸಂಸ್ಥೆಗಳ ಸಹಯೋಗದಲ್ಲಿ ಮನೆಗಳನ್ನು ನಿರ್ಮಿಸಲಾಗುವುದು. ವೆಬ್ಸೈಟ್: http://www.mhupa.gov.in

4. ಪ್ರಧಾನಮಂತ್ರಿ ಮುದ್ರಾ ಯೋಜನೆ

4. ಪ್ರಧಾನಮಂತ್ರಿ ಮುದ್ರಾ ಯೋಜನೆ

ಲಾಂಚ್: ಏಪ್ರಿಲ್ 8, 2015

ಉದ್ದೇಶ: ದೇಶದ ಯುವಜನತೆಯನ್ನು ಉದ್ಯಮಶೀಲತೆಯೆತ್ತ ಆಕರ್ಷಿಸಲು ಹಾಗೂ ಸಣ್ಣ ಹಾಗೂ ಅತಿಸಣ್ಣ ಉದ್ದಿಮೆಗಳನ್ನು ನಡೆಸುತ್ತಿರುವ ಉದ್ಯಮಶೀಲರಿಗೆ ಹಣಕಾಸಿನ ನೆರವು ನೀಡುವುದು.

ಯಾವುದೇ ಭಾರತೀಯ ನಾಗರಿಕ ಕೃಷಿಯೇತರ ಆದಾಯದ ಚಟುವಟಿಕೆಗೆ ಉದಾಹರಣೆಗೆ ಉತ್ಪಾದನೆ, ಪರಿಷ್ಕರಣೆ, ವ್ಯಾಪಾರ ಅಥವಾ ಸೇವಾ ವಲಯ ಇವುಗಳಲ್ಲಿ ತೊಡಗಲು ಇಚ್ಛಿಸಿ ರೂ. 10 ಲಕ್ಷದ ವರೆಗೆ ಸಾಲ ಪಡೆಯಲು ಬಯಸಿದಲ್ಲಿ ಬ್ಯಾಂಕ್, MFI, ಅಥವಾ NBFC ಸಂಪರ್ಕಿಸಿ ಮೈಕ್ರೋ ಯೂನಿಟ್ ಡೆವಲಪ್ಮೆಂಟ್ & ರಿಫೈನೆನ್ಸ್ ಏಜೆನ್ಸಿ ಲಿಮಿಟೆಡ್ (ಮುದ್ರಾ) ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY) ಅಡಿಯಲ್ಲಿ ಸಾಲ ಪಡೆಯಬಹುದು.

ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ ಈ ಕೆಳಗಿನ ಸಾಲ ಯೋಜನೆಗಳು ಲಭ್ಯವಿರುತ್ತದೆ. ಶಿಶು ಸಾಲ: ರೂ . 50,000/- ವರೆಗೆ ಒಳಗೊಂಡ ಸಾಲ ಕಿಶೋರ್ ಸಾಲ: - ರೂ 50,000 /- ದಿಂದ ರೂ 5 ಲಕ್ಷ ವರೆಗೆ ಸಾಲ ತರುಣ್ ಸಾಲ: ರೂ 5 ಲಕ್ಷ ದಿಂದ ರೂ. 10 ಲಕ್ಷ ವರೆಗೆ ಸಾಲ ಶಿಶು, ಕಿಶೋರ್, ಮತ್ತು ತರುಣ್ ಹೆಸರುಗಳು ಫಲಾನುಭವಿಗಳ / ವಾಣಿಜ್ಯೋದ್ಯಮಿ ಗಳ ಅಭಿವೃದ್ಧಿ ಮತ್ತು ಹಣಕಾಸು ಅಗತ್ಯಗಳನ್ನು ಹಂತ ಹಂತ ವಾಗಿ ಪ್ರತಿನಿಧಿಸುತ್ತದೆ.

ನಿರ್ದಿಷ್ಟ ವ್ಯಾಪಾರ ಚಟುವಟಿಕೆಗಳು, ನಿರ್ಧಿಷ್ಟ ಕ್ಷೇತ್ರದಲ್ಲಿ ಚಟುವಟಿಕೆ ಅಗತ್ಯಗಳನ್ನು ಪೂರೈಸಲು ಫಲಾನುಭವಿಗಳಿಗೆ ಬೇಕಾದ ಅಗತ್ಯತೆ ಕಡೆಗೆ ಗಮನ ಹರಿಸಲಾಗುತ್ತದೆ. ಸಾರಿಗೆ ವಲಯ: ಇದು ಆಟೋ ರಿಕ್ಷಾ, ಸಣ್ಣ ಸರಕುಗಳು ಸಾರಿಗೆ ವಾಹನ, 3 ಚಕ್ರ ವಾಹನ, ಕಾರು, ಟ್ಯಾಕ್ಸಿ, ಇತ್ಯಾದಿ ಸರಕು ಮತ್ತು ಸಾರಿಗೆ ವಾಹನಗಳ ಖರೀದಿಯನ್ನು ಬೆಂಬಲಿಸುತ್ತದೆ. ಸಮುದಾಯ ಮತ್ತು ವೈಯಕ್ತಿಕ ಸೇವೆ ಚಟುವಟಿಕೆಗಳು: ಸಲೂನ್, ಬ್ಯೂಟಿಪಾರ್ಲರ್ ಗಳು, ವ್ಯಾಯಾಮಶಾಲೆ, ಅಂಗಡಿಗಳು, ಹೊಲಿಗೆ ಅಂಗಡಿಗಳು, ಡ್ರೈ ಕ್ಲೀನಿಂಗ್, ಸೈಕಲ್ ಮತ್ತು ಮೋಟರ್ ರಿಪೇರಿ ಮಾಡುವ ಅಂಗಡಿ, DTP ಮತ್ತು ಜೆರಾಕ್ಸ್ , ಮೆಡಿಸಿನ್ ಅಂಗಡಿಗಳು, ಕೊರಿಯರ್ ಏಜೆಂಟ್ಸ್ ಹೀಗೆ ಹಲವು ಕ್ಷೇತ್ರಗಳನ್ನು ಒಳಗೊಂಡಿದೆ.

ಹಪ್ಪಳ ತಯಾರಿಕೆ, ಉಪ್ಪಿನಕಾಯಿ ತಯಾರಿಕೆ, ಜಾಮ್ / ಜೆಲ್ಲಿ ತಯಾರಿಕೆ, ಗ್ರಾಮೀಣ ಮಟ್ಟದಲ್ಲಿ ಕೃಷಿ ಉತ್ಪನ್ನಗಳ ಸಂರಕ್ಷಣೆ, ಸಣ್ಣ ಸೇವೆ ಆಹಾರ ಮಳಿಗೆಗಳು ಮತ್ತು ಅಡುಗೆ / ಕ್ಯಾಂಟೀನ್ ಸೇವೆಗಳು, ಐಸ್ ತಯಾರಿಕೆ ಘಟಕಗಳು, ಐಸ್ ಕ್ರೀಮ್ ಮಾಡುವ ಘಟಕಗಳು, ಬಿಸ್ಕತ್ತು, ಬ್ರೆಡ್ ಮತ್ತು ಬನ್ ತಯಾರಿಕೆ, ಇತ್ಯಾದಿ ಗಳಿಗೆ ಬೆಂಬಲ ಒದಗಿಸುವುದಾಗಿದೆ. ಕೈಮಗ್ಗ, ಮಗ್ಗ, ಸಾಂಪ್ರದಾಯಿಕ ಕಸೂತಿ ಮತ್ತು ಕೈ ಕೆಲಸ, ಸಾಂಪ್ರದಾಯಿಕ ಬಣ್ಣ ಮತ್ತು ಮುದ್ರಣ, ಉಡುಪು ವಿನ್ಯಾಸ, ಹೆಣಿಗೆ, ಹತ್ತಿ ಬೆಸೆಯುವುದು, ಗಣಕೀಕೃತ ಕಸೂತಿ, ಹೊಲಿಗೆ ಮತ್ತು ಜವಳಿ ಉಡುಪು ಇತ್ಯಾದಿ. ವೆಬ್ಸೈಟ್: http://www.mudra.org

5. ಪ್ರಧಾನಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ

5. ಪ್ರಧಾನಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ

ಲಾಂಚ್: 9 ಮೇ, 2015

ಉದ್ದೇಶ: ಪ್ರತಿಯೊಬ್ಬ ಭಾರತೀಯನಿಗೂ ಜೀವ ವಿಮೆಯನ್ನು ಒದಗಿಸುವುದು.

ಪ್ರಧಾನಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆಯೂ ಭಾರತ ಸರ್ಕಾರ ಆಧಾರಿತ ಜೀವವಿಮೆಯಾಗಿದ್ದು, ಪ್ರತಿಯೊಬ್ಬ ನಾಗರಿಕನಿಗೂ ಇದನ್ನು ನೀಡುವುದು ಸರ್ಕಾರದ ಉದ್ದೇಶ. 18-50ವರ್ಷದ ಒಳಗಿನವರು ಈ ಭೀಮಾ ಯೋಜನೆ ಮಾಡಿಸಬಹುದು.

ವೆಬ್ಸೈಟ್: http://www.jansuraksha.gov.in

6. ಅಟಲ್ ಪಿಂಚಣಿ ಯೋಜನೆ

6. ಅಟಲ್ ಪಿಂಚಣಿ ಯೋಜನೆ

ಲಾಂಚ್: 9 ಮೇ, 2015

ಉದ್ದೇಶ: ಬಡ ಮತ್ತು ಮಧ್ಯಮ ವರ್ಗದ ಜನರು ತಮ್ಮ ನಿವೃತ್ತಿ ಜೀವನದಲ್ಲಿ ನೆಮ್ಮದಿಯಿಂದ ಜೀವನ ಸಾಗಿಸುವಂತಾಗಬೇಕು ಎಂಬುದೇ ಆಟಲ್ ಪಿಂಚಣಿ ಯೋಜನೆಯ ಪ್ರಮುಖ ಉದ್ದೇಶ.

ಅಸಂಘಟಿತ ವಿಭಾಗದಲ್ಲಿ ಕೆಲಸ ಮಾಡುತ್ತಿರುವವರನ್ನು ಗುರಿಯಾಗಿರಿಸಿಕೊಂಡು ಯೋಜನೆಯನ್ನು ಸಿದ್ಧಮಾಡಲಾಗಿದೆ. ಸಾಮಾಜಿಕ ಭದ್ರತೆ ಯೋಜನೆಗಳು ಲಭ್ಯವಿಲ್ಲದರೂ ಇದರ ಲಾಭ ಪಡೆದುಕೊಳ್ಳಬಹುದು.

ಯೋಜನೆ ಅನ್ವಯ ತಿಂಗಳಿಗೆ ಒಂದು ಸಾವಿರ, ಎರಡು ಸಾವಿರ ಮತ್ತು ಮೂರು ಸಾವಿರ, 5 ಸಾವಿರ , 6 ಸಾವಿರ ರು. ಪಡೆದುಕೊಳ್ಳಲು ಸಾಧ್ಯವಿದೆ. 60 ವರ್ಷದ ನಂತರ ಪೆನ್ಶನ್ ದೊರೆಯಲಿದ್ದು ನೀವು ಕಟ್ಟುವ ಹಣದ ಆಧಾರದ ಮೇಲೆ ಪೆನ್ಶನ್ ಹಣ ನಿರ್ಧರಿತವಾಗಿರುತ್ತದೆ.

18-40 ವಯಸ್ಸಿನ ಎಲ್ಲಾ ಭಾರತೀಯರು ಈ ಯೋಜನೆ ಮಾಡಿಸಬಹುದು.

ವೆಬ್ಸೈಟ್: http://www.jansuraksha.gov.in

7. ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ

7. ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ

ಲಾಂಚ್: 9 ಮೇ, 2015

ಉದ್ದೇಶ: ದೇಶದ ಪ್ರತಿಯೊಬ್ಬ ಪ್ರಜೆಗೂ ಅಪಘಾತ ವಿಮಾ ಸೌಲಭ್ಯ ಒದಗಿಸುವುದು.

ಈ ಯೋಜನೆ ಕೇಂದ್ರ ಸರ್ಕಾರ ಆಧಾರಿತ ಅಪಘಾತ ವಿಮೆಯಾಗಿದ್ದು, ಪ್ರತಿಯೊಬ್ಬ ನಾಗರಿಕನಿಗೂ ಇದನ್ನು ನೀಡುವುದು ಸರ್ಕಾರದ ಉದ್ದೇಶ. 18-70ವರ್ಷದ ಒಳಗಿನವರು ಈ ಸುರಕ್ಷಾ ಭೀಮಾ ಯೋಜನೆ ಮಾಡಿಸಬಹುದು.

ವೆಬ್ಸೈಟ್: http://www.jansuraksha.gov.in

8. ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ

8. ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ

ಲಾಂಚ್: 11 ಅಕ್ಟೋಬರ್, 2014

ಉದ್ದೇಶ: ದೇಶದ ಪ್ರತಿಯೊಬ್ಬ ರೈತನಿಗೂ ರಾಬಿ ಮತ್ತು ಖಾರಿಪ್ ಬೆಳೆಗೆ ವಿಮೆ ಮತ್ತು ಬೆಳೆ ಹಾನಿಯಾದರೆ ಹಣಕಾಸು ಭದ್ರತೆ ಒದಗಿಸುವುದು.

ವೆಬ್ಸೈಟ್: http://www.agricoop.nic.in

9. ಪ್ರಧಾನಮಂತ್ರಿ ಗರಿಬ್ ಕಲ್ಯಾಣ ಯೋಜನೆ

9. ಪ್ರಧಾನಮಂತ್ರಿ ಗರಿಬ್ ಕಲ್ಯಾಣ ಯೋಜನೆ

ಲಾಂಚ್: ಏಪ್ರಿಲ್ 2015

ಉದ್ದೇಶ: ಗರಿಬ್ ಕಲ್ಯಾಣ ಯೋಜನೆ ಬಡತನ ನಿವಾರಣೆ ಯೋಜನೆಯಾಗಿದೆ.

PMGKY 2016ರ ನಿಯಮಗಳು

1. ಹಳೆ ರೂ. 500, 1000 ಮುಖಬೆಲೆಯ ನೋಟುಗಳನ್ನು 5,000ಕ್ಕಿಂತ ಹೆಚ್ಚು ಮೊತ್ತ ಒಮ್ಮೆ ಮಾತ್ರ ಒಂದು ಖಾತೆಗೆ ಜಮಾವಣೆಗೆ ಅವಕಾಶ

2. ಇಲ್ಲಿಯವರೆಗೆ ಜಮೆ ಮಾಡದಿರುವ ಬಗ್ಗೆ ಬ್ಯಾಂಕಿನ ಅಧಿಕಾರಿಗಳು ಕೇಳುವ ಪ್ರಶ್ನೆಗಳಿಗೆ ವಿವರಣೆ ನೀಡಬೇಕು.

3. ಠೇವಣಿದಾರರಿಂದ ವಿವರಣೆ ಪಡೆಯುವಾಗ ಕನಿಷ್ಠ ಇಬ್ಬರು ಅಧಿಕಾರಿಗಳು ಉಪಸ್ಥಿತರಿದ್ದು, ವಿವರಣೆಯನ್ನು ದಾಖಲಿಸಿಕೊಳ್ಳುವರು.

4. ರೂ. 5,000ಕ್ಕಿಂತ ಕಡಿಮೆ ಮೊತ್ತ ಜಮಾ ಮಾಡಲು ಯಾವುದೇ ನಿರ್ಬಂಧ ಇರುವುದಿಲ್ಲ.

5. ಖಾತೆದಾರರ ಅನುಮತಿ ಪತ್ರ, ಗುರುತಿನ ಚೀಟಿ ಒದಗಿಸಿದರೆ ಬೇರೆಯವರ ಖಾತೆಗೂ ಹಳೆ ನೋಟು ಜಮೆಗೆ ಅವಕಾಶ.

6. ಕೆವೈಸಿ ಇಲ್ಲದಿರುವ ಖಾತೆಗಳಿಗೆ ರೂ. 5,000ಕ್ಕಿಂತ ಹೆಚ್ಚಿನ ಮೊತ್ತ ಜಮಾ ಮಾಡುವಂತಿಲ್ಲ.

ವೆಬ್ಸೈಟ್: http://www.niti.gov.in

10. ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆ

10. ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆ

ಲಾಂಚ್: ಜನೆವರಿ 22, 2015

ಉದ್ದೇಶ: ಮಕ್ಕಳ ಲಿಂಗಾನುಪಾತ ಹಾಗೂ ಮಹಿಳಾ ಸಬಲೀಕರಣದ ಸಮಸ್ಯೆಗಳಿಗೆ ಈ ಯೋಜನೆ ಉತ್ತರ ಕಂಡುಕೊಳ್ಳಲಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಮಾನವ ಸಂಪನ್ಮೂಲಾಭಿವೃದ್ಧಿ ಇಲಾಖೆಗಳ ಜಂಟಿ ಚಿಂತನೆಯ ಫಲವಾಗಿ ಈ ಯೋಜನೆ ರೂಪಿತವಾಗಿದೆ.

ಹೆಣ್ಣುಮಕ್ಕಳ ವಿಧ್ಯಾಭ್ಯಾಸ ಮತ್ತು ಸಾಮಾಜಿಕ ಭದ್ರೆತೆಗಳನ್ನು ಉ್ತ್ಏಜಿಸುವ ಸಲುವಾಗಿ ಬೇಟಿ ಬಚಾವೋ, ಬೇಟಿ ಪಡಾವೋ(ಹೆಣ್ಣು ಮಗು ಉಳಿಸಿ- ಹೆಣ್ಣು ಓದಿಸಿ) ಯೋಜನೆ ಆರಂಭಿಸಿದೆ.

ವೆಬ್ಸೈಟ್: http://www.wcd.nic.in

11. ಡಿಜಿಟಲ್ ಇಂಡಿಯಾ

11. ಡಿಜಿಟಲ್ ಇಂಡಿಯಾ

ಲಾಂಚ್: ಜುಲೈ 1, 2015

ಉದ್ದೇಶ: ದೇಶದಲ್ಲಿ ನಗದು ರಹಿತ ವ್ಯವಹಾರವನ್ನು ಉತ್ತೇಜಿಸುವುದು. ಆನ್ಲೈನ್ ಸೌಕರ್ಯ ಮತ್ತು ಅಂತರ್ಜಾಲ ಸಂಪರ್ಕ ಉತ್ತಮ ಪಡಿಸುವುದು.

ವೆಬ್ಸೈಟ್: http://www.digitalindia.gov.in

12. ಸ್ವಚ್ಛ ಭಾರತ ಅಭಿಯಾನ

12. ಸ್ವಚ್ಛ ಭಾರತ ಅಭಿಯಾನ

ಲಾಂಚ್: ಅಕ್ಟೋಬರ್ 2, 2014

ಉದ್ದೇಶ: ಗಾಂಧಿ ಕನಸಿನ ಸ್ವಚ್ಛ ಮತ್ತು ನೈರ್ಮಲ್ಯ ಭಾರತ

ಸ್ವಚ್ಛ ಭಾರತ ಅಭಿಯಾನ ಮೋದಿಯವರ ಪ್ರಮುಖ ಯೋಜನೆಗಳಲ್ಲಿ ಒಂದಾಗಿದ್ದು, ನಗರ ಅಭಿವೃದ್ಧಿ ಸಚಿವಾಲಯ ಮತ್ತು ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯಗಳು ಅಭಿವೃದ್ಧಿಪಡಿಸಿವೆ.

13. ಮೇಕ್ ಇನ್ ಇಂಡಿಯಾ

13. ಮೇಕ್ ಇನ್ ಇಂಡಿಯಾ

ಲಾಂಚ್: ಸೆಪ್ಟಂಬರ್ 25, 2014

ಉದ್ದೇಶ: ದೇಶೀಯ ಕಂಪನಿ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಉತ್ಪನ್ನಗಳನ್ನು ಉತ್ತೇಜಿಸಿ ಹೆಚ್ಚೆಚ್ಚು ಉದ್ಯೋಗವನ್ನು ಸೃಷ್ಟಿ ಮಾಡುವುದು.

ಮೇಕ್ ಇನ್ ಇಂಡಿಯಾ ಭಾರತದ ತಮ್ಮ ಉತ್ಪನ್ನಗಳನ್ನು ತಯಾರಿಸಲು ಕಂಪನಿಗಳು ಪ್ರೋತ್ಸಾಹಿಸಲು ಭಾರತ ಸರ್ಕಾರ ಚಾಲನೆ ನೀಡಿದೆ. ಪ್ರಧಾನಮಂತ್ರಿ ನರೇಂದ್ರಮೋದಿ ಅವರು ತಮ್ಮ ಮಹತ್ವಾಕಾಂಕ್ಷೆಯ ಮೇಕ್ ಇನ್ ಇಂಡಿಯಾ ಪ್ರಚಾರ ಅಭಿಯಾನಕ್ಕೆ 25ರಿಂದ ಚಾಲನೆ ನೀಡಿದ್ದಾರೆ. ಈ ಮೂಲಕ ಬಂಡವಾಳ ಮತ್ತು ತಂತ್ರಜ್ಞಾನ ಭಾರತಕ್ಕೆ ಹರಿದು ಬರಲಿದೆ ಎಂಬ ನಂಬಿಕೆ ಇದೆ.

ವೆಬ್ಸೈಟ್: http://www.makeinindia.com

English summary

List of major welfare schemes launched by Narendra modi government

The Indian government is bringing many implementation for development and welfare. The poor, farmers, youth, women and senior citizens and thus included many new schemes. The Government of India aims to achieve comprehensive development in the welfare of everyone. Here given details of major schemes.
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more