ಪಾರ್ಟ್-ಟೈಮ್ ಉದ್ಯೋಗದ ಮೂಲಕ ಹೆಚ್ಚು ಹಣ ಗಳಿಸಬೇಕೆ?

ಪೂರ್ಣಾವಧಿ ಕೆಲಸ ಮಾಡಲು ಹಲವು ಕಟ್ಟುಪಾಡುಗಳು ಇರುತ್ತವೆ. ಅರೆಕಾಲಿಕ ಕೆಲಸ ಅಥವಾ ಪಾರ್ಟ್ ಟೈಮ್ ಕೆಲಸ ಹೊಂದಿರುವವರು, ಈಗಿರುವ ಸ್ಪರ್ಧಾತ್ಮಕ ಉದ್ಯೋಗದ ವಾತಾವರಣದಲ್ಲಿ, ಇಂತಹ ಕೆಲಸದಿಂದ ಹೆಚ್ಚು ಆದಾಯವನ್ನು ಪಡೆಯಲು ಸಹಾಯ ಮಾಡಬಹುದಾಗಿದೆ.

ಪೂರ್ಣಾವಧಿ ಕೆಲಸ ಮಾಡಲು ಹಲವು ಕಟ್ಟುಪಾಡುಗಳು ಇರುತ್ತವೆ. ಅರೆಕಾಲಿಕ ಕೆಲಸ ಅಥವಾ ಪಾರ್ಟ್ ಟೈಮ್ ಕೆಲಸ ಹೊಂದಿರುವವರು, ಈಗಿರುವ ಸ್ಪರ್ಧಾತ್ಮಕ ಉದ್ಯೋಗದ ವಾತಾವರಣದಲ್ಲಿ, ಇಂತಹ ಕೆಲಸದಿಂದ ಹೆಚ್ಚು ಆದಾಯವನ್ನು ಪಡೆಯಲು ಸಹಾಯ ಮಾಡಬಹುದಾಗಿದೆ. ಸಂಬಂಧಪಟ್ಟ ಕ್ಷೇತ್ರಗಳಲ್ಲಿ ಪರಿಣಿತಿಯನ್ನು ಹೊಂದಿರುವ ವ್ಯಕ್ತಿಗಳು ತಮ್ಮ ಅನುಕೂಲಕ್ಕಾಗಿ ಜೊತೆಗೆ ಹೆಚ್ಚಿನ ವೇತನಕ್ಕಾಗಿ ಕೆಲಸ ಮಾಡಲು 6 ಅರೆಕಾಲಿಕ ಉದ್ಯೋಗಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಉದ್ಯೋಗಿಗಳಿಗೆ ಆಶ್ಚರ್ಯಕರ ಸೌಲಭ್ಯಗಳನ್ನು ನೀಡುವ 15 ಕಂಪನಿಗಳು

ಗ್ರಾಫಿಕ್ ಡಿಸೈನರ್

ಗ್ರಾಫಿಕ್ ಡಿಸೈನರ್

ಹಲವು ಸಂಸ್ಥೆಗಳು ಗ್ರಾಫಿಕ್ ವಿನ್ಯಾಸಕಾರರನ್ನು (ಡಿಸೈನರ್ಸ್) ಸ್ವತಂತ್ರ ಆಧಾರದ ಪಾಲಿಸಿಯ ಮೇಲೆ ನೇಮಿಸಿಕೊಳ್ಳುತ್ತಾರೆ. ಇವರನ್ನು ನೇಮಿಸುವ ಉದ್ದೇಶವೇನೆಂದರೆ ತಮ್ಮ ಬ್ರಾಂಡ್ ಗಳ ನಿರ್ವಹಣೆಯನ್ನು, ಪ್ಯಾಕೇಜ್ ವಿನ್ಯಾಸವನ್ನು ಅಥವಾ ವೆಬ್ಸೈಟ್ ವಿನ್ಯಾಸದಂತಹ ನಿರ್ವಹಣೆಗೆ ಬಳಸಿಕೊಳ್ಳಲು. ಆ ಮೂಲಕ, ತಮ್ಮ ಪ್ರೊಡಕ್ಟ್ ಗಳನ್ನು ಸುಧಾರಿಸಲು ಹೊಸ ಹೊಸ ಕಂಪನಿಗಳಿಂದ ಇಂತರ ಆಫರ್ ಗಳು ಗ್ರಾಫಿಕ್ ಡಿಸೈನರ್ ಗಳಿಗೆ ಬರುತ್ತಲೇ ಇರುತ್ತವೆ.

ಸಾಮಾಜಿಕ ಮಾಧ್ಯಮಗಳಲ್ಲಿ ಉತ್ತಮ ಉಪಸ್ಥಿತಿಯನ್ನು ಹೊಂದಿರುವವರು ಜೊತೆಗೆ ಡಿಜಿಟಲ್ ಕೌಶಲಗಳನ್ನು ಹೊಂದಿರುವ ಚಿತ್ರಕಾರರು ಮತ್ತು ಕಲಾವಿದರು ಒಂದೇ ಸಮಯದಲ್ಲಿ ಹಲವಾರು ಪ್ರಾಜೆಕ್ಟುಗಳನ್ನು ಪಡೆಯುತ್ತಾರೆ. ಇಂತಹ ಪ್ರಾಜೆಕ್ಟುಗಳು ನಿರ್ದಿಷ್ಟ ಸಮಯದಲ್ಲಿ ಮುಗಿಸಲೇಬೇಕಾದ ಗಡುವನ್ನು ಹೊಂದಿರುತ್ತವೆ.

ಪಠ್ಯಕ್ರಮ ಬರಹಗಾರ

ಪಠ್ಯಕ್ರಮ ಬರಹಗಾರ

ಪಠ್ಯಕ್ರಮ ತಯಾರಿಸವಲ್ಲಿ ವಿಶೇಷ ಅನುಭವ ಹೊಂದಿರುವ ಪ್ರಾಧ್ಯಾಪಕರುಗಳಿಗೆ ಶೈಕ್ಷಣಿಕ ವೆಬ್ಸೈಟ್ ಗಳಲ್ಲಿ ಅರೆಕಾಲಿಕ ಉದ್ಯೋಗ ಹುಡುಕಿಕೊಂಡು ಬರುತ್ತವೆ. ಜೊತೆಗೆ, ಪುಸ್ತಕಗಳ ತಾಂತ್ರಿಕ ವಿಷಯಗಳ ಬರವಣಿಗೆಯಲ್ಲಿ ಕೌಶಲತೆ ಇದ್ದವರು, ವಿವಿಧ ರೀತಿಯ ಉದ್ಯೋಗವನ್ನು ಹೊಂದುವ ಅವಕಾಶವನ್ನು ಹೊಂದಿರುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾಗುವ ತರಬೇತಿ ಕ್ಲಾಸ್ ಗಳಿಗೂ ಸಹ ಸಂಶೋಧಕರು ಮತ್ತು ವಿಷಯಗಳ ಅಭಿವೃದ್ಧಿಯ ನೈಪುಣ್ಯತೆಯನ್ನು ಹೊಂದಿರುವ ಬರಹಗಾರರ ಅವಶ್ಯಕತೆ ಇರುತ್ತದೆ ಮತ್ತು ಅಂತವರನ್ನು ಅರೆಕಾಲಿಕ ಸೇವೆಗೆ ತೆಗೆದುಕೊಳ್ಳುತ್ತಿರುತ್ತಾರೆ.

ವ್ಯವಹಾರ/ಹಣಕಾಸು ಸಲಹೆಗಾರ

ವ್ಯವಹಾರ/ಹಣಕಾಸು ಸಲಹೆಗಾರ

ವಿವಿಧ ಉದ್ಯಮಗಳನ್ನು ನಡೆಸುವವರು ತಮ್ಮ ಉದ್ಯಮಕ್ಕೆ ಸಂಬಂಧಪಟ್ಟ ಕೆಲಸ ಮತ್ತು ಪ್ರಕ್ರಿಯೆಗಳನ್ನು ನೋಡಿಕೊಳ್ಳಲು, ಪರಿಶೀಲಿಸಲು ಜೊತೆಗೆ ತಮ್ಮ ಸಲಹೆಗಳ ಮೂಲಕ ಸಂಸ್ಥೆಯನ್ನು ಬೆಳೆಸಲು ವೃತ್ತಿಪರ ಸಲಹೆಗಾರರನ್ನು ಇಂತಿಷ್ಟು ಅವಧಿಗೆ ನೇಮಿಸಿಕೊಳ್ಳುತ್ತಾರೆ. ಈ ಕೆಲಸಕ್ಕಾಗಿ ನೇಮಕಗೊಳ್ಳುವ ತಜ್ಞರಿಗೆ, ಉತ್ತಮ ಅನುಭವ ಮತ್ತು ನಿರ್ವಹಣೆಯ ಶಕ್ತಿಯ ಅಗತ್ಯವಿರುತ್ತದೆ.

ಲೀಡ್ ಜನರೇಶನ್ ಸ್ಪೆಷಲಿಸ್ಟ್

ಲೀಡ್ ಜನರೇಶನ್ ಸ್ಪೆಷಲಿಸ್ಟ್

ಕಂಪನಿಗಳು ಪ್ರಾರಂಭದ ಹಂತಗಳಲ್ಲಿ, ಹೊಸ ಹೊಸ ಸ್ಥಳಗಳಲ್ಲಿ ತಮ್ಮ ಕಂಪನಿಗಳನ್ನು ವಿಸ್ತರಿಸಲು ಈ ಮೇಲಿನ ಕೆಲಸದಲ್ಲಿ ಅನುಭವವನ್ನು ಹೊಂದಿರುವವರನ್ನು ನೇಮಿಸುತ್ತಾರೆ. ಇವರ ಕೆಲಸವೇನಂದರೆ, ಹೊಸ ಗ್ರಾಹಕರನ್ನು ಸಂಸ್ಥೆಯತ್ತ ಸೆಳೆಯುವುದು, ಇದಕ್ಕಾಗಿ ಇಂತಹ ಸಂಸ್ಥೆಗಳು ಶಾಶ್ವತ ಉದ್ಯೋಗದ ಆಧಾರದ ಮೇಲೆ ಅಥವಾ ಉತ್ಸಾಹಿ ಯುವಕ/ಯುವತಿಯರಿಗೆ ಮತ್ತು ಸ್ವಯಂ ಪ್ರೇರಿತವಾಗಿ ಕೆಲಸ ಮಾಡಲು ಇಚ್ಚಿಸುವ ವ್ಯಕ್ತಿಗಳನ್ನು ಆಯ್ಕೆಮಾಡುತ್ತಾರೆ. ಇಂತಹ ಅಭ್ಯರ್ಥಿಗಳಿಗೆ ತಿಂಗಳಿಗೆ 50,000 ರೂಪಾಯಿವರೆಗೆ ವೇತನವನ್ನು ಕೊಟ್ಟು ನೇಮಕಮಾಡುತ್ತಾರೆ.
ಈ ತಜ್ಞರು ಕಂಪನಿಯ ಭವಿಷ್ಯದ ಯೋಜನೆಯನ್ನು ಆಧರಿಸಿ ನೇಮಕಾತಿಗಳನ್ನು ಆಯೋಜಿಸುತ್ತಾರೆ. ಇದಲ್ಲದೇ, ಯಾವುದೇ ವ್ಯಕ್ತಿ ವೈಯಕ್ತಿಕವಾಗಿ ಕಮಿಷನ್ ಆಧಾರಿತವಾಗಿಯೂ ಅರೆಕಾಲಿಕ ಕೆಲಸ ಮಾಡಬಹುದಾಗಿದೆ. ಇದು ಇಂತಹ ಅಭ್ಯರ್ಥಿಗಳಿಗೆ ಹೆಚ್ಚಿನ ಆದಾಯಗಳಿಸುವಲ್ಲಿ ಸಹಾಯ ಮಾಡುತ್ತದೆ.

ಬಹುಭಾಷಾ ಕಾನೂನು ಸಹಾಯಕ

ಬಹುಭಾಷಾ ಕಾನೂನು ಸಹಾಯಕ

ವಿವಿಧ ದೇಶಗಳಲ್ಲಿ ಕೆಲಸ ಮಾಡಿ ಅನುಭವ ಹೊಂದಿರುವ, ಜೊತೆಗೆ ಎರಡು ಅಥವಾ ಅದಕ್ಕಿಂತ ಹೆಚ್ಚು ಭಾಷೆಗಳಲ್ಲಿ ಪರಿಣತಿ ಹೊಂದಿರುವ ಮತ್ತು ಕೆಲವು ನಿರ್ದಿಷ್ಟ ದೇಶ/ಪ್ರದೇಶಗಳಲ್ಲಿ ಕೆಲಸ ಮಾಡಿ ಅನುಭವಹೊಂದಿರುವ ಅಭ್ಯರ್ಥಿಗಳ ಅವಶ್ಯಕತೆ ಹೆಚ್ಚಿನ ಸಂಸ್ಥೆಗಳಿಗೆ ಇರುತ್ತದೆ.

ಉದಾಹರಣೆಗೆ, ಒಂದು ಬ್ರಿಟಿಷ್ ಮೂಲದ ಕಂಪನಿ ಜರ್ಮನಿಯಲ್ಲಿನ ತನ್ನ ಗ್ರಾಹಕರೊಂದಿಗೆ ಮಾತುಕತೆ ನಡೆಸುವ ಅವಶ್ಯಕತೆ ಬಿದ್ದಲ್ಲಿ, ಅಥವಾ ಕಾನೂನು ಪ್ರಕಾರ ಅಲ್ಲಿನ ದಾಖಲೆಗಳನ್ನು ಸಿದ್ಧಪಡಿಸಲು ಜರ್ಮನ್ ಭಾಷೆಯಲ್ಲಿನ ತಾಂತ್ರಿಕ ಶಬ್ದಕೋಶವನ್ನು ಅನುವಾದಿಸುವ ಹಾಗೂ ಅದನ್ನು ಇಂಗ್ಲಿಷ್ ಗೆ ತರ್ಜುಮೆ ಮಾಡಲು ಜರ್ಮನ್ ಮತ್ತು ಇಂಗ್ಲಿಷ್ ಭಾಷೆಗಳನ್ನು ಕಲಿತಿರುವ ಅಭ್ಯರ್ಥಿಗಳ ಅವಶ್ಯಕತೆಯಲ್ಲಿ ಇರುತ್ತದೆ.

 

ಸಾಫ್ಟವೇರ್ ಡೆವಲಪರ್

ಸಾಫ್ಟವೇರ್ ಡೆವಲಪರ್

ಒಂದು ಸಾಫ್ಟ್ವೇರ್ ಡೆವಲಪರ್ ಸ್ವತಂತ್ರ ಆಧಾರದ ಮೇಲೆ ಅಂತರಾಷ್ಟ್ರೀಯ ಮತ್ತು ಸ್ಥಳೀಯ ಗ್ರಾಹಕರೊಂದಿಗೆ ಕೆಲಸ ಮಾಡಬಹುದು. ಹಾಲೀ ವೆಬ್ಸೈಟ್ ಗಳನ್ನು ನವೀಕರಿಸುವುದು ಮತ್ತು ಹೊಸ ಟೆಂಪ್ಲೆಟ್ ಗಳನ್ನು ರಚಿಸುವುದು ಅಥವಾ ಹೊಸ ಅಪ್ಲಿಕೇಶನ್ ಅಥವಾ ವೆಬ್ಸೈಟ್ ಅಭಿವೃದ್ಧಿಪಡಿಸುವಂತಹ ಕೆಲಸಗಳಿಗೆ, ಅರಕಾಲಿಕ ಕೆಲಸಗಳನ್ನು ಮಾಡಬಹುದಾಗಿದೆ. ಇಂತಹ ಕೆಲಸಗಳಿಗೆ ಬೇಡಿಕೆ ಹೆಚ್ಚಾಗಿರುತ್ತದೆ ಮತ್ತು ಅವರವರ ಅನುಕೂಲಕ್ಕೆ ತಕ್ಕಂತೆ ಯಾವುದೇ ಕೆಲಸ ಮಾಡುವ ಸ್ವಾತಂತ್ರ್ಯವನ್ನೂ ನೀಡುತ್ತದೆ.  ಭಾರತದ ಟಾಪ್ 10 ಅತಿ ಶ್ರೀಮಂತ ರಾಜ್ಯಗಳು

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+