ಭಾರತದ ಟಾಪ್ 10 ಅತಿ ಶ್ರೀಮಂತ ರಾಜ್ಯಗಳು

By Siddu
Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ಭಾರತದಲ್ಲಿ 29 ರಾಜ್ಯಗಳು ಹಾಗು 7 ಕೇಂದ್ರಾಡಳಿತ ಪ್ರದೇಶಗಳಿವೆ. ಪ್ರತಿ ರಾಜ್ಯದ ಉದ್ದ ಅಗಲಕ್ಕೂ ವೈವಿದ್ಯ ಸಂಸ್ಕೃತಿ, ಆಚಾರ ವಿಚಾರ, ಸಂಪ್ರದಾಯ, ಉಡುಗೆ ತೊಡುಗೆ, ಭಾಷೆ, ವಾತಾವರಣ, ಜನರನ್ನು ಕಾಣಬಹುದು. ಈ ವೈವಿಧ್ಯತೆಯನ್ನು ಗಮನಿಸಿದ ನಮ್ಮ ಹಿರಿಯರು ''ವಿಶ್ವಪರ್ಯಟನೆ ಮಾಡಬೇಕೆಂದಿದ್ದರೆ ವಿಶ್ವ ತಿರುಗಬೇಕಾಗಿಲ್ಲ ಭಾರತವನ್ನೊಮ್ಮೆ ತಿರುಗಿದರೆ ಸಾಕು ವಿಶ್ವಪರ್ಯಟನೆಯಾದಂತೆಯೇ ಲೆಕ್ಕ'' ಎಂದು ಹೇಳಿದ್ದಾರೆ.

  ಹಿಂದಿನ ಕಾಲದಲ್ಲಂತೂ ಒಂದು ಪೈಸೆ ಖರ್ಚಿಲ್ಲದೇ ಭಾರತದ ಪಯಣ ಮಾಡಬಹುದಿತ್ತಂತೆ. ಆಗ ಅತಿಥಿಗಳನ್ನು ದೇವರಂತೆ ಕಾಣುವ ಸಂಪ್ರದಾಯವಿದ್ದು ಮಾರ್ಗದಲ್ಲಿ ಎದುರಾದ ಗ್ರಾಮದವರೇ ಊಟ ಮತ್ತು ವಸತಿಯ ವ್ಯವಸ್ಥೆ ಮಾಡುತ್ತಿದ್ದರಂತೆ. ಆದರೆ ಈಗ ಕಾಲ ಬದಲಾಗಿದೆ.

  ರಾಜ್ಯಗಳ ಶ್ರೀಮಂತಿಕೆಯನ್ನು ಪ್ರತಿ ರಾಜ್ಯದ ಜನತೆ ಖರ್ಚು ಮಾಡುವ ಮೂಲಕ ಪಡೆಯುವ ಒಟ್ಟಾರೆ ಲಾಭ ಅಥವಾ ನಿವ್ವಳ ದೇಶೀಯ ಉತ್ಪನ್ನ (ಜಿಡಿಪಿ) ಪ್ರಗತಿಯನ್ನು ಅಳೆಯುವ ಮಾನದಂಡವಾಗಿದೆ. ಆದರೆ ಈ ಮಾನದಂಡ ವಿಶ್ವ ಆರ್ಥಿಕ ಸಂಸ್ಥೆಯ ಪ್ರಕಾರ ಹಲವು ನ್ಯೂನ್ಯತೆಗಳಿಂದ ಕೂಡಿದ್ದು, ಪೂರ್ಣವಾಗಿ ಸತ್ಯವಲ್ಲ. ಆ ಪ್ರಕಾರ ಜಿಡಿಪಿ ಹೆಚ್ಚಿರುವ ರಾಷ್ಟ್ರಗಳು ಶ್ರೀಮಂತ ರಾಷ್ಟ್ರಗಳಾಗಬೇಕು. ಪ್ರಸ್ತುತ ವರ್ಷದಲ್ಲಿ ಭಾರತದ ಜಿಡಿಪಿ 8.80 ಟ್ರಿಲಿಯನ್ ಇದೆ. ಅಂದರೆ ಇದು ವಿಶ್ವದ ಅತಿ ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ ಮೂರನೆಯ ಸ್ಥಾನದಲ್ಲಿರಬೇಕು. ಆದರೆ ವಾಸ್ತವ ಏನಿದೆ? ಭಾರತದಲ್ಲಿರುವ ಅತಿ ಶ್ರೀಮಂತರ ಸಂಖ್ಯೆ 2002 ರಿಂದ 2016 ರ ವರೆಗೆ ಶೇ. 400 ಏರಿಕೆಯಾದರೂ ಇಡಿಯ ಭಾರತದಲ್ಲಿ ಬಡತನದಲ್ಲಿ ಇರುವ ವ್ಯಕ್ತಿಗಳೇ ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಭಾರತದ 10 ದುಬಾರಿ ನಗರಗಳು ಯಾವುವು ಗೊತ್ತೆ?

  ಆದರೂ, ಯಾವುದೇ ರಾಜ್ಯ ಗಳಿಸುವ ಲಾಭವನ್ನು ಪರಿಗಣಿಸುವ ಮೂಲಕವೇ ಇದು ಶ್ರೀಮಂತ ರಾಜ್ಯವೇ ಅಲ್ಲವೇ ಎಂದು ಅಳೆಯಲಾಗುತ್ತದೆ. ಬನ್ನಿ, ಈ ಪಟ್ಟಿಯಲ್ಲಿರುವ ಪ್ರಮುಖ ಹತ್ತು ರಾಜ್ಯಗಳನ್ನು ನೋಡೋಣ...

  10. ದೆಹಲಿ

  ದೇಶದ ರಾಜಧಾನಿ ಆಗಿರುವ ದೆಹಲಿ ಪ್ರಸ್ತುತ ಹತ್ತನೆಯ ಸ್ಥಾನದಲ್ಲಿದೆ. 4.51 ಲಕ್ಷ ಕೋಟಿ ರೂ (US$66 ಬಿಲಿಯನ್) ಗಳಿಕೆಯನ್ನು ಹೊಂದಿದೆ. ಈ ರಾಜ್ಯದ ಜಿಡಿಪಿ 2002-03 ರಲ್ಲಿ ಶೇ. 5-7ರಷ್ಟು ವೃದ್ದಿ ಕಂಡಿತ್ತು. ದೇಶದ ಒಟ್ಟಾರೆ ಪ್ರಗತಿಯಲ್ಲಿ ಇದರ ಪಾತ್ರ ಕೇವಲ ಶೇ. 1.83. 2014-15ರಲ್ಲಿ ಪ್ರತಿ ವ್ಯಕ್ತಿಗೆ ನೀಡಲಾಗುವ ಸರಾಸರಿ ವೇತನ ರೂ. 2,52,022 ರಿಂದ 2015-16ರಲ್ಲಿ ರೂ. 2, 80,193ಕ್ಕೆ ಹೆಚ್ಚಿದೆ. ರಾಜ್ಯದ ತೃತೀಯ ವಿಭಾಗದ ಗಳಿಕೆ ಶೇ. 82.3 ಇದ್ದರೆ, ಸಹಾಯಕ ವಿಭಾಗದಿಂದ ಶೇ. 15.5ರಷ್ಟು ಆದಾಯ ಲಭಿಸುತ್ತಿದೆ. ಭಾರತದ 10 ಶ್ರೀಮಂತ ನಗರಗಳು ಯಾವುವು ಗೊತ್ತೆ?

  9. ಮಧ್ಯ ಪ್ರದೇಶ

  ಭಾರತದ ಶ್ರೀಮಂತ ರಾಜ್ಯಗಳಲ್ಲಿ ಮಧ್ಯ ಪ್ರದೇಶವೂ ಒಂದಾಗಿದ್ದು, ಪ್ರಸ್ತುತ ಜಿಡಿಪಿ ರೂ. 5.08 ಲಕ್ಷ ಕೋಟಿ (US$78 ಬಿಲಿಯನ್) ಹೊಂದಿದೆ. 2004ರವರೆಗೂ ಈ ರಾಜ್ಯದ ಆರ್ಥಿಕ ಸ್ಥಿತಿ ಹೀನಾಯವಾಗಿತ್ತು. ಆದರೆ 2005ರ ಬಳಿಕ ಪರಿಸ್ಥಿತಿ ಬದಲಾಗಿದ್ದು ಶರವೇಗದಿಂದ ಅಭಿವೃದ್ದಿ ಪಡೆಯುತ್ತಿದೆ. ಇದಕ್ಕೆ ಪ್ರಮುಖ ಕಾರಣ ಅಂದು ಭಾರತದ ರಾಷ್ಟ್ರಪತಿಯವರು ಈ ರಾಜ್ಯದ ಪ್ರವಾಸೋದ್ಯಮಕ್ಕೆ ನೀಡಿದ ಧನ ಸಹಾಯ. ಇದರೊಂದಿಗೆ ವೈದ್ಯಕೀಯ, ಸಾಮಾಜಿಕ ಹಾಗೂ ಮೂಲಭೂತ ವ್ಯವಸ್ಥೆಗಳಿಗೂ ಹೆಚ್ಚಿನ ಆದ್ಯತೆ ನೀಡಲಾಯಿತು. ಈ ರಾಜ್ಯದಲ್ಲಿರುವ ನೈಸರ್ಗಿಕ ನಿಕ್ಷೇಪವೂ ರಾಜ್ಯದ ಅಭಿವೃದ್ದಿಗೆ ಹೆಚ್ಚಿನ ಕೊಡುಗೆ ನೀಡಿದೆ.

  8. ಆಂಧ್ರ ಪ್ರದೇಶ

  ತೆಲಂಗಾಣ ರಚನೆಗೂ ಮುನ್ನ ಆಂಧ್ರಪ್ರದೇಶವಾಗಿದ್ದ ಈ ರಾಜ್ಯ ವಿಭಜನೆಯ ಬಳಿಕವೂ ಶ್ರೀಮಂತ ರಾಜ್ಯಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿದೆ. ಪ್ರಸ್ತುತ ರೂ. 5.20 ಲಕ್ಷ ಕೋಟಿ (US$77 ಬಿಲಿಯನ್) ಜಿಡಿಪಿ ಹೊಂದಿದ್ದು, ಎಂಟನೆಯ ಸ್ಥಾನದಲ್ಲಿದೆ. ಈ ರಾಜ್ಯದ ಹೆಗ್ಗಳಿಕೆ ಇದರ 974 ಕಿ.ಮೀ ಉದ್ದದ ಸಾಗರ ತೀರವಾಗಿದ್ದು, ಹಡಗು ಉದ್ಯಮದಲ್ಲಿ ಮುಂಚೂಣಿಯಲ್ಲಿದೆ. ಈ ರಾಜ್ಯದಲ್ಲಿ ಸುಭದ್ರ ಸಾಮಾಜಿಕ ಹಾಗೂ ಯಾಂತ್ರಿಕ ತಳಹದಿ ಇದೆ. ಪ್ರಮುಖವಾಗಿ ಈ ರಾಜ್ಯದಲ್ಲಿ ಔಷಧಿಗಳಿಗೆ ಬೇಕಾಗುವ ಕಚ್ಚಾವಸ್ತುಗಳನ್ನು ತಯಾರಿಸುವ ನೂರಾರು ಉದ್ಯಮಗಳಿದ್ದು ಅಮೂಲ್ಯವಾದ ವಿದೇಶೀ ವಿನಿಮಯವನ್ನು ಗಳಿಸುತ್ತಿವೆ. ರಾಜ್ಯದ ಗಳಿಕೆಗೆ ಇನ್ನೊಂದು ಕೊಡುಗೆ ಎಂದರೆ ಹತ್ತಿ. ಜತೆಗೆ ಸಾಫ್ಟ್ ವೇರ್ ಉದ್ಯಮ ಹಾಗೂ ರಾಕೆಟ್ ಉಡಾವಣಾ ಕೇಂದ್ರದ ಉಪಸ್ಥಿತಿಯೂ ರಾಜ್ಯದ ಜಿಡಿಪಿ ಹೆಚ್ಚಳಕ್ಕೆ ನೆರವು ನೀಡಿದೆ.

  7. ರಾಜಸ್ಥಾನ

  ಭಾರತದ ಮರುಭೂಮಿ ರಾಜ್ಯ ಎಂದೇ ರಾಜಸ್ಥಾನ ಏಳನೇ ಶ್ರೀಮಂತ ರಾಜ್ಯ. 2017 ರಲ್ಲಿ ರೂ. 5.7 ಲಕ್ಷಕೋಟಿ (US$100 ಬಿಲಿಯನ್) ನೊಂದಿಗೆ ಏಳನೆಯ ಸಂಪತ್ಭರಿತ ರಾಜ್ಯ ಎನಿಸಿದೆ. ಒಟ್ಟು ಹದಿನೈದು ಮಿಲಿಯನ್ ಹೆಕ್ಟೇರು ಭೂಮಿಯಲ್ಲಿ ಕೇವಲ ಶೇ. 20 ಭೂಮಿ ಪ್ರವಾಹಕ್ಕೆ ಒಳಾಗುತ್ತಿದೆ. ಇಲ್ಲಿ ಗೋಧಿ, ಬಾರ್ಲಿ, ಕಡಲೆ, ವಿವಿಧ ತರಕಾರಿಗಳು, ಸಾವಯವ ಉತ್ಪನ್ನಗಳನ್ನು ಬೆಳೆಯಲಾಗುತ್ತದೆ. ಆದರೆ ಇಲ್ಲಿನ ನಗರಗಳು ಉತ್ತಮ ಸೌಲಭ್ಯಗಳನ್ನು ಹೊಂದಿದ್ದು, 1,50,000ಕಿಮೀ ಯಷ್ಟು ಉತ್ತಮ ರಸ್ತೆಗಳನ್ನು ಹೊಂದಿದೆ. ಇದು ದೇಶದಲ್ಲಿ ಅತಿದೊಡ್ಡ ಮರುಭೂಮಿ ಹೊಂದಿದ್ದು, ಅತಿಹೆಚ್ಚು ತಾಪಮಾನದ ರಾಜ್ಯಗಳಲ್ಲಿ ಒಂದಾಗಿದೆ.

  6. ಕರ್ನಾಟಕ

  ಈ ವರ್ಷದ ಜಿಡಿಪಿ ರೂ. 7.02 ಲಕ್ಷ ಕೋಟಿ (US$ 100 ಬಿಲಿಯನ್) ನೊಂದಿಗೆ ನಮ್ಮ ಕರ್ನಾಟಕ ಆರನೆಯ ಸ್ಥಾನದಲ್ಲಿದೆ. ಆದರೆ ಈ ಸ್ಥಾನ ಪಡೆಯಲು ನಮ್ಮ ರಾಜ್ಯ ಪಡೆದ ನಾಗಾಲೋಟ ಮಾತ್ರ ಬೇರೆಲ್ಲಾ ರಾಜ್ಯಗಳಿಗಿಂತ ತೀವ್ರವಾಗಿದೆ. ತೃತೀಯ ವಿಭಾಗದ ಕೊಡುಗೆ ಶೇ. 55%, ಇತರ ವಿಭಾಗಗಳಿಂದ ಶೇ. 29ರಷ್ಟು ಹಾಗೂ ಇತರ ಪ್ರಮುಖ ವಿಭಾಗಗಳಿಂದ ಶೇ. 16% ಬೆಳವಣಿಗೆಗಳಿಂದ ಪಡೆದಿದೆ. ರಾಜಧಾನಿ ಬೆಂಗಳೂರು ಭಾರತದ ಸಿಲಿಕಾನ್ ಕಣಿವೆ ಎಂದು ಖ್ಯಾತಿ ಪಡೆದಿದ್ದು, ಸ್ಟಾರ್ಟ್ಅಪ್ ಹಾಗು ಸಾಫ್ಟ್ ವೇರ್ ಉದ್ಯಮದಲ್ಲಿ ಮುಂಚೂಣಿಯಲ್ಲಿದೆ.

  5. ಗುಜರಾತ್

  ರೂ. 7.66 ಲಕ್ಷ ಕೋಟಿ (US$ 110 ಬಿಲಿಯನ್) ನೊಂದಿಗೆ ಗುಜರಾತ್ ಐದನೆಯ ಸ್ಥಾನದಲ್ಲಿದ್ದು, ಮುಂಬೈ ಬಳಿಕ ದೇಶದ ಪಶ್ಚಿಮ ಭಾಗದಲ್ಲಿ ಅತಿ ಹೆಚ್ಚಿನ ಯಾಂತ್ರಿಕ ವ್ಯವಸ್ಥೆಯನ್ನು ಹೊಂದಿದೆ. ವಜ್ರ ಹಾಗೂ ಅಮೂಲ್ಯ ರತ್ನಗಳನ್ನು ರಫ್ತು ಮಾಡುವಲ್ಲಿ ಈ ರಾಜ್ಯ ಪ್ರಥಮ ಸ್ಥಾನದಲ್ಲಿದೆ. ರಾಜ್ಯದ ರಾಜ್ಯಧಾನಿ ಅಹ್ಮದಾಬಾದ್ ನಗರವನ್ನು ವಿಕ್ರಂ ಸಾರಾಭಾಯಿ ಹಾಗೂ ಕಸ್ತೂರಬಾಯಿ ಲಾಲ್ ಬಾಯಿಯವರು ಭಾರತದ ಮ್ಯಾಂಚೆಸ್ಟರ್ ಎಂದು ಬಣ್ಣಿಸಿದ್ದಾರೆ. ಭಾರತದ ಅತ್ಯಂತ ದೊಡ್ಡ ಅರವಿಂದ್ ಮಿಲ್ಸ್ ಸಹಾ ಇದೇ ರಾಜ್ಯದಲ್ಲಿದೆ. ಯಾಂತ್ರಿಕ ನೀರುಣಿಸುವ ಗದ್ದೆಗಳು ಸಹಾ ಈ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಭಾರತದಲ್ಲಿಯೇ ಅತಿ ಹೆಚ್ಚು ತಾಜಾ ತರಕಾರಿಗಳನ್ನು ಬೆಳೆಯುವ ರಾಜ್ಯವಾಗಿದೆ.

  4. ಪಶ್ಚಿಮ ಬಂಗಾಳ

  ರೂ. 8.00 ಲಕ್ಷ ಕೋಟಿ (US$ 140 ಬಿಲಿಯನ್) ಜಿಡಿಪಿಯೊಂದಿಗೆ ನಾಲ್ಕನೆಯ ಸ್ಥಾನದಲ್ಲಿರುವ ಈ ರಾಜ್ಯದ ಗಳಿಕೆ ಪ್ರಮುಖವಾಗಿ ಕೃಷಿ ಹಾಗೂ ಮಧ್ಯಮ ಗಾತ್ರದ ಉದ್ದಿಮೆಗಳ ಮೇಲೆ ಅವಲಂಬಿತವಾಗಿದೆ. ಆದರೆ ಈ ರಾಜ್ಯ ಜೀವನಾಧಾರಕ್ಕಾಗಿ ಕೇಂದ್ರ ಸರ್ಕಾರದ ನೆರವಿನ ಮೇಲೆ ಹೆಚ್ಚಾಗಿ ಅವಲಂಬಿಸಿರುವುದು ಒಂದು ಕೊರತೆ ಎಂದೆನ್ನಿಸಿದೆ. ಆದರೆ ಈ ರಾಜ್ಯದಲ್ಲಿ ವಿಫುಲವಾಗಿರುವ ನೀರಿನ ಲಭ್ಯತೆ ಕೃಷಿಯ ಉತ್ಪಾದನೆ ಗರಿಷ್ಟವಾಗಿರಿಸಿದೆ. ದೇಶದ ಅಗತ್ಯದ ಶೇ.20ರಷ್ಟು ಅಕ್ಕಿ ಹಾಗೂ ಶೇ.35ರಷ್ಟು ಆಲೂಗಡ್ಡೆಯನ್ನು ಈ ರಾಜ್ಯದಲ್ಲಿ ಬೆಳೆಯಲಾಗುತ್ತದೆ.

  3. ಉತ್ತರ ಪ್ರದೇಶ

  ಕೂಲಿಗೆಂದು ಈ ರಾಜ್ಯದಿಂದ ಕರ್ನಾಟಕಕ್ಕೆ ಬರುವವರ ಸಂಖ್ಯೆ ನೋಡಿದಾಗ ಈ ರಾಜ್ಯ ಅತ್ಯಂತ ಬಡ ರಾಜ್ಯವಿರಬಹುದು ಎಂದೆನ್ನಿಸುತ್ತದೆ. ಆದರೆ ವಾಸ್ತವದಲ್ಲಿ 9.76 ಲಕ್ಷ ಕೋಟಿ (US$ 160 ಬಿಲಿಯನ್) ನೊಂದಿಗೆ ದೇಶದಲ್ಲಿಯೇ ತೃತಿಯ ಸಂಪದ್ಭರಿತ ರಾಜ್ಯವೆಂಬ ಹಣೆಪಟ್ಟಿ ಪಡೆದಿದೆ. ಈ ರಾಜ್ಯದ ಕೇವಲ ಶೇ. 22.3 ಭಾಗ ಮಾತ್ರ ಆಧುನೀಕರಣಗೊಂಡಿದ್ದು, ಉಳಿದ ಪ್ರದೇಶ ಇನ್ನೂ ಹಿಂದುಳಿದ ಸ್ಥಿತಿಯಲ್ಲಿದೆ. ಈ ಆಧುನಿಕ ಭಾಗದಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಜನರು ವಾಸಿಸುತ್ತಾರೆ. ಆದರೆ ವಿಪರ್ಯಾಸವೆಂದರೆ ವಿಪುಲ ಭೂಮಿಯ ಲಭ್ಯತೆಯಿದ್ದರೂ ದೇಶದ ಶೇ. 18.9ರಷ್ಟು ಪೌಷ್ಟಿಕ ಆಹಾರವನ್ನು ಉತ್ಪಾದಿಸುವ ಕಾರಣ ಭಾರತದ ಕೃಷಿಕರಾಜ್ಯ ಎಂಬ ಅನ್ವರ್ಥನಾಮವನ್ನೂ ಪಡೆದಿದೆ. ಹತ್ತನೆಯ ಪಂಚವಾರ್ಷಿಕ ಯೋಜನೆಯವರೆಗೂ ಈ ರಾಜ್ಯ ಶೇ. 5.3 ರಷ್ಟು ವಾರ್ಷಿಕ ಅಭಿವೃದ್ದಿಯನ್ನು ಪಡೆದಿದೆ. ಆದರೆ ಹನ್ನೊಂದನೆಯ ಪಂಚವಾರ್ಷಿಕ ಯೋಜನೆಯ ಬಳಿಕ ಇದು ಶೇ. 4.8ಕ್ಕೆ ಕುಸಿತ ಕಂಡಿದೆ. ಆದರೂ ಈ ರಾಜ್ಯದ ಗಳಿಕೆ ಪ್ರಮುಖವಾಗಿ ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿದ್ದು, ಜಗತ್ತಿನ ಅದ್ಭುತಗಳಲ್ಲೊಂದಾದ ತಾಜ್ ಮಹಲ್ ರಾಜ್ಯಕ್ಕೆ ಅಗತ್ಯವಾದ ಗಳಿಕೆಯನ್ನು ತಂದು ಕೊಡುತ್ತಿದೆ.

  2. ತಮಿಳುನಾಡು

  ಜಿಡಿಪಿ ರೂ. 13,842 ಬಿಲಿಯನ್ (US$ 210 ಬಿಲಿಯನ್) ನಷ್ಟು ಆಗಾಧ ಗಳಿಕೆಯೊಂದಿಗೆ ಈ ರಾಜ್ಯ ಎರಡನೆಯ ಸ್ಥಾನದಲ್ಲಿದೆ. 2014-15ರಲ್ಲಿ ಈ ರಾಜ್ಯದ ಸರಾಸರಿ ಪ್ರತಿ ವ್ಯಕ್ತಿಯ ಆದಾಯ ವಾರ್ಷಿಕ ಮೂರು ಸಾವಿರ ಡಾಲರುಗಳಷ್ಟಿದೆ. ಈ ರಾಜ್ಯದ ಅರ್ಧಕ್ಕಿಂತಲೂ ಹೆಚ್ಚು ಭಾಗ ಆಧುನೀಕರಣಗೊಂಡಿದ್ದು, ಅರ್ಧಕ್ಕಿಂತಲೂ ಹೆಚ್ಚಿನ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸುತ್ತಿದೆ. ಅಷ್ಟೇ ಅಲ್ಲ, ರಾಜ್ಯದ ಉತ್ಪನ್ನಗಳಿಗೆ ರಾಜ್ಯ ಸರ್ಕಾರವೇ ವ್ಯಾಪಾರಿಯಂತೆ ಕಾರ್ಯನಿರ್ವಹಿಸುವ ಮೂಲಕ ಹೆಚ್ಚಿನ ಆದಾಯ ಪಡೆಯುತ್ತಿದೆ. ಅಲ್ಲದೇ ಖಾಸಗಿ ವ್ಯಾಪಾರಿ ಸಂಸ್ಥೆಗಳೂ ಶೇ. 30ರಷ್ಟು ಆದಾಯವನ್ನು ತಂದರೆ ಶೇ. 15ರಷ್ಟು ವಿದೇಶೀ ವಿನಿಮಯದಿಂದ ಆದಾಯ ಲಭ್ಯವಾಗುತ್ತದೆ.

  1. ಮಹಾರಾಷ್ಟ್ರ

  ರೂ. 16.8 ಲಕ್ಷ ಕೋಟಿ ($398 ಬಿಲಿಯನ್) ಜಿಡಿಪಿಯೊಂದಿಗೆ ಮಹಾರಾಷ್ಟ್ರ ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ರಾಜ್ಯದ ರಾಜಧಾನಿ ಮುಂಬೈ ದೇಶದ ವಾಣಿಜ್ಯ ರಾಜಧಾನಿ ಎಂಬ ಗಳಿಕೆಯನ್ನು ಹೊಂದಿದೆ. 2014ರಲ್ಲಿ $295 ಬಿಲಿಯನ್ ಜಿಡಿಪಿ ಹೊಂದಿದ್ದು, ಈಗ $398ಕ್ಕೆ ಏರಿದೆ. ಆದರೆ ಈ ರಾಜ್ಯದ ಪ್ರತಿ ವ್ಯಕ್ತಿಯ ಸರಾಸರಿ ಗಳಿಕೆ $1,660 ನಷ್ಟಿದೆ. ರಾಜ್ಯದ ಮೂರನೆಯ ಒಂದು ಭಾಗ ಆಧುನೀಕರಣಗೊಂಡಿದೆ. ರಾಜ್ಯದ ಒಟ್ಟಾರೆ ಜನಸಂಖ್ಯೆಯ ಶೇ.45ರಷ್ಟು ಜನರು ನಗರಗಳಲ್ಲಿ ವಾಸಿಸುತ್ತಿದ್ದಾರೆ.
  ಪ್ರೋಗ್ರಾಮಿಂಗ್ ಕ್ಷೇತ್ರದಲ್ಲಿ ಇದು ದೇಶದ ಎರಡನೆಯ ಆತಿದೊಡ್ಡ ರಫ್ತುಗಾರ ರಾಜ್ಯವಾಗಿದ್ದು, ವಾರ್ಷಿಕ ರೂ. 19,000 ಕೋಟಿ ಆದಾಯ ನೀಡುತ್ತಿದೆ. ಪುಣೆ, ನವಿ ಮುಂಬೈ, ಮುಂಬೈ, ನಾಗ್ಪುರ, ಔರಂಗಾಬಾದ್ ಹಾಗೂ ಲಾತೂರ್ ಪ್ರಮುಖ ನಗರಗಳಾಗಿದ್ದು, ಈ ನಗರಗಳು ಹೆಚ್ಚು ಜನಸಾಂದ್ರತೆಯನ್ನು ಹೊಂದಿವೆ.

  ಕೊನೆ ಮಾತು

  ಇದು ದೇಶದ ಅತಿ ಹೆಚ್ಚು ಸಂಪತ್ಭರಿತ ಪ್ರಮುಖ ಹತ್ತು ರಾಜ್ಯಗಳಾಗಿವೆ. ಈ ರಾಜ್ಯಗಳ ಜಿಡಿಪಿ ದೇಶದ ಅಭಿವೃದ್ದಿಗೂ ಪೂರಕವಾಗಿದ್ದು ಉತ್ತಮ ಜೀವನ ಹಾಗೂ ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ಪಡೆಯಲು ನೆರವಾಗುತ್ತದೆ.

  English summary

  Top 10 Richest States in India

  The extravagance of the state depends on the Gross Domestic Product, which is normally known as GDP. It is a customary device used to gauge the lavishness of the nations on the planet.
  Company Search
  Enter the first few characters of the company's name or the NSE symbol or BSE code and click 'Go'
  ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?

  Find IFSC

  Get Latest News alerts from Kannada Goodreturns

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more