ಇವು ಅತ್ಯಂತ ಯಶಸ್ಸು ಕಂಡಿರುವ 10 ಬಿಸಿನೆಸ್ ಐಡಿಯಾ

ಯಾವುದಾದರೂ ಒಂದು ವ್ಯವಹಾರ ಅಥವಾ ಬಿಸಿನೆಸ್ ಪ್ರಾರಂಭಿಸುವ ಮೊದಲು ಎಲ್ಲರೂ ಭಯಕ್ಕೆ ಒಳಪಡುವುದು ಸಹಜ. ಜತೆಗೆ ಹತ್ತು ಹಲವಾರು ಪ್ರಶ್ನೆಗಳೂ ಹುಟ್ಟಿಕೊಳ್ಳುತ್ತವೆ. ಈ ವ್ಯವಹಾರದಲ್ಲಿ ಹಣ ಗಳಿಸಬಹುದೆ? ವ್ಯವಹಾರವು ಯಶಸ್ಸನ್ನು ಹೊಂದುವುದೆ?

ಯಾವುದಾದರೂ ಒಂದು ವ್ಯವಹಾರ ಅಥವಾ ಬಿಸಿನೆಸ್ ಪ್ರಾರಂಭಿಸುವ ಮೊದಲು ಎಲ್ಲರೂ ಭಯಕ್ಕೆ ಒಳಪಡುವುದು ಸಹಜ. ಜತೆಗೆ ಹತ್ತು ಹಲವಾರು ಪ್ರಶ್ನೆಗಳೂ ಹುಟ್ಟಿಕೊಳ್ಳುತ್ತವೆ. ಈ ವ್ಯವಹಾರದಲ್ಲಿ ಹಣ ಗಳಿಸಬಹುದೆ? ವ್ಯವಹಾರವು ಯಶಸ್ಸನ್ನು ಹೊಂದುವುದೆ? ಈ ರೀತಿಯ ಹಲವು ಭಯ/ಪ್ರಶ್ನೆಗಳು ಹೊಸ ವ್ಯಾಪಾರ ಆರಂಭಿಸುವವರಲ್ಲಿ ಕಾಡುತ್ತದೆ. ಈ ಎಲ್ಲಾ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಉತ್ತರವಿದೆ.

ಇಲ್ಲಿ 10 ಉತ್ತಮ ಮತ್ತು ಯಶಸ್ಸುದಾಯಕ ವ್ಯವಹಾರ ಮಾಡುವ ಉಪಾಯಗಳನ್ನು ಈ ಕೆಳಗೆ ಕೊಟ್ಟಿದ್ದೇವೆ. ಈ ವ್ಯವಹಾರದಲ್ಲಿನ ಕೆಲವೊಂದು ವಿಚಾರಗಳನ್ನು ಸರಿಯಾಗಿ ನಿರ್ವಹಿಸಿಕೊಂಡು ಹೋದರೆ ಹೆಚ್ಚಿನ ಯಶಸ್ಸನ್ನು ಪಡೆಯಬಹುದಾಗಿದೆ. ಮುಂದೆ ಓದಿ..

1. ರೆಸ್ಟೋರೆಂಟ್ (ಹೋಟೆಲ್)

1. ರೆಸ್ಟೋರೆಂಟ್ (ಹೋಟೆಲ್)

ಆರೋಗ್ಯಕರ ಮತ್ತು ರುಚಿಕರ ಆಹಾರ ಎಲ್ಲರೂ ಬಯಸುವಂತಹ ಮತ್ತು ಅವಶ್ಯಕತೆಯಿರುವ ವಿಷಯಗಳಲ್ಲೊಂದು. ಹಾಗಾಗಿ, ರೆಸ್ಟೋರೆಂಟ್ ಅಥವಾ ಹೋಟೆಲ್ ವ್ಯವಹಾರವು ಇಂದು ಅತ್ಯಂತ ಯಶಸ್ಸುದಾಯಕ ವ್ಯವಹಾರಗಳಲ್ಲಿ ಒಂದಾಗಿದೆ. ಪಾಕ ಪದ್ದತಿಗಳಲ್ಲಿ ಪರಿಣಿತರಾಗಿದ್ದವರು ಆರೋಗ್ಯಕರ, ರುಚಿಕರ ಆಹಾರವನ್ನು ಪೂರೈಸಲು ಸಿದ್ದರಾಗಿದ್ದಲ್ಲಿ ಈ ವ್ಯವಹಾರವನ್ನು ಯಾವುದೇ ಮುಲಾಜಿಲ್ಲದೇ ಪ್ರಾರಂಭಿಸಬಹುದಾಗಿದೆ.
ಹೆಚ್ಚಿನ ಬಂಡವಾಳವಿದ್ದ ಪಕ್ಷದಲ್ಲಿ, ಥೀಮ್ ಆಧಾರಿತ ರೆಸ್ಟೋರೆಂಟ್ ಮಾಡುವ ಬಗ್ಗೆಯೂ ಯೋಚಿಸಬಹುದಾಗಿದೆ. ಉದಾ: ಜಂಗಲ್ ಆಧಾರಿತ ಥೀಮ್, ಕಾಥಿಯಾವಾಡಿ ಥೀಮ್ ಇದು ಇಂದು ಹೆಚ್ಚು ಪ್ರಸಿದ್ದಿಯನ್ನು ಪಡೆದ ವಿಷಯಗಳಾಗಿವೆ.

ರೆಸ್ಟೋರೆಂಟ್ ಉದ್ಯಮ ಯಶಸ್ಸುದಾಯಕ ವ್ಯವಹಾರದ ಐಡಿಯಾ ಏಕೆ?
ಇಂದಿನ ಜನರ ತೀವ್ರ ಕೆಲಸದ ಒತ್ತಡದ ಜೀವನ ಶೈಲಿಯಿಂದಾಗಿ, ಜನರಿಗೆ ತಮ್ಮ ಮನೆಗಳಲ್ಲಿ ಅಡುಗೆ ಮಾಡಲು ಸಮಯ ಇರುವುದಿಲ್ಲ ಮತ್ತು ಅನೇಕ ಜನರು ರೆಸ್ಟೋರೆಂಟುಗಳಲ್ಲಿ ಸದಾ ತಿನ್ನುವುದಕ್ಕೆ ಹೆಚ್ಚಿನ ಆದ್ಯತೆ ಕೊಡುವುದನ್ನು ನೋಡುತ್ತಿರುತ್ತೇವೆ. ಈ ಎಲ್ಲಾ ಕಾರಣಗಳಿಂದಾಗಿ ರೆಸ್ಟೋರೆಂಟ್ ವ್ಯವಹಾರವು ಇಂದು ಹೆಚ್ಚು ಯಶಸ್ಸು ಕಾಣುವ ವ್ಯವಹಾರಗಳಲ್ಲಿ ಒಂದಾಗಿದೆ. ಕೇವಲ 10 ಸಾವಿರ ಇದ್ರೆ ಈ ಬಿಸಿನೆಸ್ ಶುರು ಮಾಡಬಹುದು..

2. ಉದ್ಯೋಗ ನೇಮಕಾತಿ ಸಂಸ್ಥೆ

2. ಉದ್ಯೋಗ ನೇಮಕಾತಿ ಸಂಸ್ಥೆ

ಉದ್ಯೋಗ ನೇಮಕಾತಿ ಸಂಸ್ಥೆ ಪ್ರಾರಂಭಿಸುವುದು ಒಂದು ಉತ್ತಮ ವ್ಯವಹಾರದ ವಿಚಾರವಾಗಿದೆ. ಈ ಸಂಸ್ಥೆಯನ್ನು ಪ್ರಾರಂಭಿಸಲು ದೊಡ್ಡ ಮೊತ್ತದ ಬಂಡವಾಳದ ಅವಶ್ಯಕತೆಯಿರುವುದಿಲ್ಲ. ಇದನ್ನು ಪ್ರಾರಂಭಿಸಲು ಬೇಕಾದುದೆಂದರೆ ಆಫೀಸು ಮಾಡಲು ಸಣ್ಣ ಜಾಗ ಮತ್ತು ಮತ್ತು ಕೆಲವು ಸಂಪರ್ಕ ಸಾಧನಗಳ ಅವಶ್ಯಕತೆಯಿರುತ್ತದೆ

ಉದ್ಯೋಗ ನೇಮಕಾತಿ ಸಂಸ್ಥೆಯ ಉದ್ಯಮ ಯಶಸ್ಸುದಾಯಕ ವ್ಯವಹಾರ ಹೇಗೆ?
ನಿರುದ್ಯೋಗದ ಅನುಪಾತ ದಿನದಿಂದ ದಿನಕ್ಕೆ ಹೆಚ್ಚುತ್ತಾ ಇರುವುದುರಿಂದ ಉದ್ಯೋಗ ನೇಮಕಾತಿ ಸಂಸ್ಥೆಗೆ ಹೆಚ್ಚಿನ ಬೇಡಿಕೆಯಿದೆ. ಪ್ರತೀ ವಿದ್ಯಾರ್ಥಿ ಮತ್ತು ವೃತ್ತಿಪರರಿಗೆ ಒಳ್ಳೆಯ ಉದ್ಯೋಗದ ಅವಶ್ಯಕತೆ ಇರುತ್ತದೆ ಮತ್ತು ಕಂಪನಿಗಳಿಗೆ ಉತ್ತಮ ಹಾಗೂ ಹೆಚ್ಚು ಲಾಭ ತಂದುಕೊಡುವ ಅಭ್ಯರ್ಥಿಯ ಅವಶ್ಯಕತೆಯಿರುತ್ತದೆ. ಉತ್ತಮ ಕೆಲಸ ಮತ್ತು ಉತ್ತಮ ಅಭ್ಯರ್ಥಿಗಳನ್ನು ಪಡೆಯಲು ಅವರು ನೇಮಕಾತಿ ಸಂಸ್ಥೆಯಿಂದ ಹಣ/ಕಮಿಷನ್ ಆಧಾರಿತ ಸೇವೆಗಳನ್ನು ತೆಗೆದುಕೊಳ್ಳಲು ಸಿದ್ಧರಾಗಿರುತ್ತಾರೆ.

3. ಗಿಫ್ಟ್ ಸ್ಟೋರ್ ಮಾಡಿ (ಸಾಂದರ್ಭಿಕ ಉಡುಗೊರೆ ಅಂಗಡಿ)

3. ಗಿಫ್ಟ್ ಸ್ಟೋರ್ ಮಾಡಿ (ಸಾಂದರ್ಭಿಕ ಉಡುಗೊರೆ ಅಂಗಡಿ)

ಕಸ್ಟಮ್ ಉಡುಗೊರೆ ಅಂಗಡಿಗಳನ್ನು (ಗಿಫ್ಟ್ ಶಾಪ್) ತೆರೆಯುವುದು ಇನ್ನೊಂದು ಒಳ್ಳೆಯ ವ್ಯವಹಾರವನ್ನು ಪ್ರಾರಂಭಿಸುವ ಕಲ್ಪನೆಗಳಲ್ಲೊಂದಾಗಿದೆ. ಇಂತಹ ಐಡಿಯಾಗಳಿಗೆ ಹೆಚ್ಚಿನ ಬಂಡವಾಳದ ಅವಶ್ಯಕತೆ ಇರುವುದಿಲ್ಲ, ಜೊತೆಗೆ ಇದನ್ನು ಆರಂಭಿಸಲು ಆಫೀಸು ಸ್ಥಳದ ಅವಶ್ಯಕತೆಯೂ ಇರುವುದಿಲ್ಲ. ಈ ರೀತಿಯ ವ್ಯವಹಾರಗಳನ್ನು ತಮ್ಮ ತಮ್ಮ ಮನೆಗಳಲ್ಲಿಯೇ ಪ್ರಾರಂಭಿಸಬಹುದಾಗಿದೆ.

ಕಸ್ಟಮ್ ಉಡುಗೊರೆ ಅಂಗಡಿಯ ವ್ಯವಹಾರವು ಹೆಚ್ಚು ಯಶಸ್ಸುದಾಯಕ ಕಲ್ಪನೆ ಹೇಗೆ?
ಜನರು ಕಾರ್ಡ್ ರೂಪದಲ್ಲಿ ಅಥವಾ ಸಾಂಪ್ರದಾಯಿಕ ರೀತಿಯಲ್ಲಿ ಉಡುಗೊರೆಗಳನ್ನು ನೀಡುವ ಪದ್ದತಿ ಈಗ ಹಳೆಯದಾಗಿದೆ. ಈಗ ನಾವು ಉಡುಗೊರೆಗಳನ್ನು ಪ್ರತೀ ಸಂದರ್ಭಗಳು ಮತ್ತು ಹಬ್ಬಗಳಿಗನುಸಾರವಾಗಿ ಕೊಡುವುದು ಹೊಸ ಪ್ರವೃತ್ತಿಯಾಗಿರುವುದರಿಂದ, ಕಸ್ಟಮೈಸ್ಡ್ ಉಡುಗೊರೆಗಳನ್ನು ನೀಡುವುದು ಹೆಚ್ಚು ಗಮನವನ್ನು ಸೆಳೆಯುವ ಕಾರಣದಿಂದಾಗಿ ಈ ಅಂಗಡಿಯನ್ನು ಪ್ರಾರಂಭಿಸುವುದು ಉತ್ತಮ ವ್ಯಾಪಾರ ಕಲ್ಪನೆ ಎಂದು ಭಾವಿಸಲು ಅಡ್ಡಿಯಿಲ್ಲ. ಅತಿ ಕಡಿಮೆ ಬಂಡವಾಳದಲ್ಲಿ ನಡೆಸಬಹುದಾದ 10 ಉದ್ಯಮ

4. ವೆಡ್ಡಿಂಗ್ ಪ್ಲಾನಿಂಗ್ & ಕ್ಯಾಟರಿಂಗ್

4. ವೆಡ್ಡಿಂಗ್ ಪ್ಲಾನಿಂಗ್ & ಕ್ಯಾಟರಿಂಗ್

ಯಾವುದೇ ಸೃಜನಶೀಲ ವ್ಯಕ್ತಿ ಮತ್ತು ಅದೇ ಸಮಯದಲ್ಲಿ ಇತರ ಅನೇಕ ಕೆಲಸಗಳನ್ನು ನಿರ್ವಹಿಸಲು ಸಾಧ್ಯವುಳ್ಳವನಾಗಿಗಿದ್ದರೆ, ಮದುವೆ ಯೋಜನೆ ಮತ್ತು ಅಡುಗೆ ವ್ಯವಹಾರದಲ್ಲಿ ಪ್ರವೇಶಿಸಲು ಯೋಚಿಸಬಹುದಾಗಿದೆ. ಇದು ಸ್ವಲ್ಪ ಸವಾಲುದಾಯಕ ವ್ಯವಹಾರವಾದುದರಿಂದ ಇದನ್ನು ಪ್ರಾರಂಭಿಸಲು ನೈಪುಣ್ಯತೆ ಮತ್ತು ಉತ್ತಮ ನಿರ್ವಹಣಾ ಸಾಮರ್ಥ್ಯ ಹೊಂದಿರಬೇಕಾಗುತ್ತದೆ.

ಮದುವೆ ಯೋಜನೆ ಮತ್ತು ಅಡುಗೆ ವ್ಯವಹಾರ ಏಕೆ ಯಶಸ್ಸುದಾಯಕ ವ್ಯವಹಾರ?
ಜೀವನದಲ್ಲಿ ಮದುವೆಯೆನ್ನುವುದು ಒಂದು ಸಲ ಬರುವ ಸಂದರ್ಭವಾದುದರಿಂದ ಜನರು ಇದನ್ನು ಹೆಚ್ಚು ಯಶಸ್ಸು ಮತ್ತು ಸ್ಮರಣದಾಯಕವಾಗಿಸಲು ಬಯಸುತ್ತಾರೆ. ಜೊತೆಗೆ, ಹೆಚ್ಚಿನ ಹಣವನ್ನು ವ್ಯಯಿಸಲು ತಯಾರಾಗಿರುತ್ತಾರೆ. ಈ ವಿಭಾಗದಲ್ಲಿ ಹೆಚ್ಚಿನ ಕೌಶಲ್ಯ ಮತ್ತು ಸಾಮರ್ಥ್ಯದೊಂದಿಗೆ ವ್ಯವಹಾರ ಆರಂಭಿಸಿದರೆ, ಆಕಾಶದೆತ್ತರಕ್ಕೆ ಹಣ ಸಂಪಾದಿಸಬಹುದಾಗಿದೆ. ಶೂನ್ಯ ಬಂಡವಾಳದಲ್ಲಿ ನಡೆಸಬಹುದಾದ 11 ಉದ್ಯಮಗಳು

5. ಶಿಕ್ಷಣ/ತರಬೇತಿ ಕ್ಲಾಸುಗಳು

5. ಶಿಕ್ಷಣ/ತರಬೇತಿ ಕ್ಲಾಸುಗಳು

ಶಿಕ್ಷಣ ಅಥವಾ ತರಬೇತಿ ಕ್ಲಾಸುಗಳು ಎಲ್ಲಕ್ಕಿಂತ ಉತ್ತಮ ವ್ಯವಹಾರದ ಕಲ್ಪನೆಯಾಗಿದೆ. ಇದಕ್ಕಾಗಿ ಸಣ್ಣ ಜಾಗದ ಅಗತ್ಯವಿದ್ದು, ಈ ವ್ಯವಹಾರ ಪ್ರಾರಂಭಿಸುವ ಕೌಶಲ್ಯವೂ ಬೇಕಾಗಿರುತ್ತದೆ.

ಶಿಕ್ಷಣ ಅಥವಾ ತರಬೇತಿ ಕ್ಲಾಸ್ ವ್ಯವಹಾರ ಏಕೆ ಆಯ್ಕೆ ಮಾಡಬೇಕು?
ಇಂದು ಶೈಕ್ಷಣಿಕ ಗುಣಮಟ್ಟ ಹೆಚ್ಚಿರುವುದರಿಂದ ಪ್ರತೀ ಪೋಷಕರು ತಮ್ಮ ಮಕ್ಕಳು ಅತ್ಯುತ್ತಮವಾಗಿ ಓದಬೇಕೆಂದು ಬಯಸುವುದು ಸಹಜ. ಇದರಿಂದಾಗಿ ಅವರು ತಮ್ಮ ಮಗುವಿಗೆ ಉತ್ತಮ ತರಬೇತಿ ಕ್ಲಾಸುಗಳಿಗೆ ಆದ್ಯತೆಯನ್ನು ನೀಡುತ್ತಾರೆ. ಇದರಿಂದಾಗಿ ಇಂದು ಎಲ್ಲಾ ಕಡೆ ಬಹು ಕೋಚಿಂಗ್ ತರಗತಿಗಳು ಯಶಸ್ವಿಯಾಗುವುದನ್ನು ಕಾಣಬಹುದಾಗಿದೆ.

6. ನಮ್ಕೀನ್ಸ್ ಮತ್ತು (ನಾಸ್ಟಾ) ಬೆಳಗ್ಗಿನ ಉಪಹಾರದ ಅಂಗಡಿ

6. ನಮ್ಕೀನ್ಸ್ ಮತ್ತು (ನಾಸ್ಟಾ) ಬೆಳಗ್ಗಿನ ಉಪಹಾರದ ಅಂಗಡಿ

ಈ ವ್ಯವಹಾರದ ಕಲ್ಪನೆಯು ಸ್ವಲ್ಪ ವಿಭಿನ್ನವಾಗಿ ಕಾಣಬಹುದು. ಆದರೂ ಈ ವ್ಯವಹಾರವು ಒಂದು ಉತ್ತಮ ಕಲ್ಪನೆಯಾಗಿದೆ ಎನ್ನುವುದಕ್ಕೆ ಸಂಶಯವೇ ಬೇಡ. ಇದಕ್ಕಾಗಿ ಒಂದು ಸಣ್ಣ ಅಂಗಡಿ ಬೇಕಾಗುವುದು ಮತ್ತು ಉತ್ತಮ ಉಪಹಾರ ತಯಾರಿಸಲು ನುರಿತ ಹಾಗೂ ಅನುಭವಸ್ಥರು ಬೇಕಾಗುವುದು. ಇದರಿಂದ ದೊಡ್ಡ ಮೊತ್ತದ ಹಣವನ್ನು ಗಳಿಸಬಹುದಾಗಿದೆ.

ನಮ್ಕೀನ್ ಅಂಗಡಿಯ ವ್ಯವಹಾರವು ಯಶಸ್ಸು ಕಾಣುವ ವ್ಯವಹಾರದ ಕಲ್ಪನೆ ಹೇಗೆ?
ಇಂದು ಹೆಚ್ಚಿನ ಮಹಿಳೆಯರು ಉದ್ಯೋಗಸ್ಥೆಯರಾಗಿದ್ದು, ಅವರು ತಮ್ಮ ಮನೆಗಳಲ್ಲಿ ಬಹಳ ಕಡಿಮೆ ಸಮಯವನ್ನು ಕಳೆಯುತ್ತಾರೆ. ಅವರು ಉಪಹಾರಗಳನ್ನು ಮನೆಯಲ್ಲಿ ತಯಾರಿಸುವ ಬದಲಾಗಿ ಸಿದ್ದ ಉಪಹಾರಗಳನ್ನು ತರುವುದಕ್ಕೆ ಹೆಚ್ಚಿನ ಆದ್ಯತೆಯನ್ನು ಕೊಡುತ್ತಾರೆ. ನಮ್ಕೀನ್/ ನಾಸ್ತಾ ತಯಾರಿಕೆಯಲ್ಲಿ ತುಂಬಾ ಪರಿಣತರಾಗಿದ್ದವರು ಈ ವ್ಯವಹಾರದ ಮೂಲಕ ಸುಲಭವಾಗಿ ಲಾಭವನ್ನು ಕಾಣಬಹುದಾಗಿದೆ.

7. ಪ್ರವಾಸ/ಪ್ರಯಾಣ ಯೋಜನೆಯ ವ್ಯವಹಾರ

7. ಪ್ರವಾಸ/ಪ್ರಯಾಣ ಯೋಜನೆಯ ವ್ಯವಹಾರ

ಪ್ರವಾಸ ಅಥವಾ ಪ್ರಯಾಣ ಯೋಜನೆ ಮಾಡುವುದು ಇನ್ನೊಂದು ಉತ್ತಮ ವ್ಯವಹಾರ ಮಾಡುವ ಕಲ್ಪನೆಯಲ್ಲಿ ಒಂದು. ಈ ವ್ಯವಹಾರವನ್ನು ಮಾಡಲು ಉತ್ತಮ ಭೌಗೋಳಿಕ ಜ್ಞಾನ ಮತ್ತು ಹೆಚ್ಚಿನ ಸಂಪರ್ಕಗಳ ಅವಶ್ಯಕತೆಯಿರುತ್ತದೆ. ಈ ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಕಾಣಬೇಕೆಂದರೆ ಯಾತ್ರಾ.ಕಾಂ ನಂತಹ ಆನ್ಲೈನ್ ವೆಬ್ಸೈಟ್ ಗಳ ಜೊತೆಗೆ ಸಂಪರ್ಕದಲ್ಲಿರಬೇಕಾಗುತ್ತದೆ.

ಪ್ರವಾಸ/ ಪ್ರಯಾಣ ಯೋಜನೆಯ ವ್ಯವಹಾರವು ಏಕೆ ಯಶಸ್ವಿ ವ್ಯವಹಾರ ಕಲ್ಪನೆಯಾಗಿದೆ?
ಇತ್ತೀಚಿನ ಸರ್ವೇ ಪ್ರಕಾರ ಭಾರತೀಯರು ಹೆಚ್ಚಿನ ಪ್ರಮಾಣದಲ್ಲಿ ಪ್ರತೀ ವರ್ಷ ಬಿಸಿನೆಸ್ ಟೂರ್ ಗೆ ಹೋಗುತ್ತಾರೆ ಎಂದು ವರದಿಯಾಗಿದೆ. ಇದು ರಜಾ ದಿನಗಳಲ್ಲಿ (ದೀಪಾವಳಿ, ಬೇಸಿಗೆ, ಕ್ರಿಸ್ ಮಸ್ ಇತ್ಯಾದಿ) ಮಾತ್ರವಲ್ಲದೆ ಜನರು ತಮ್ಮ ಇತರ ರಜಾದಿನಗಳಲ್ಲಿ ಕೆಲವು ಸ್ಥಳಗಳು ಮತ್ತು ಗಿರಿಧಾಮಗಳಿಗೆ ಭೇಟಿ ನೀಡುವುದಕ್ಕೆ ಹೆಚ್ಚಿನ ಆದ್ಯತೆಯನ್ನು ಕೊಡುತ್ತಿರುತ್ತಾರೆ. ಆದುದರಿಂದ ಪ್ರವಾಸ/ಪ್ರಯಾಣ ಯೋಜನೆಯ ವ್ಯವಹಾರದ ಯೋಜನೆಯಲ್ಲಿ ಹೆಚ್ಚಿನ ಲಾಭವಿರುವುದನ್ನು ಕಾಣುತ್ತೇವೆ.

8. ಸ್ಮಾರ್ಟ್ ಫೋನ್ ಮಾರಾಟ ಮತ್ತು ದುರಸ್ತಿ

8. ಸ್ಮಾರ್ಟ್ ಫೋನ್ ಮಾರಾಟ ಮತ್ತು ದುರಸ್ತಿ

ಸ್ಮಾರ್ಟ್ ಫೋನ್ ಮಾರಾಟ ಮತ್ತು ಇತರ ರಿಪೇರಿ ಇದು ಒಂದು ಒಳ್ಳೆಯ ವ್ಯವಹಾರ ಕಲ್ಪನೆಗಳಲ್ಲೊಂದು. ಇದನ್ನು ಪ್ರಾರಂಭಿಸಲು ಕೌಶಲ್ಯತೆ ಮತ್ತು ಬಂಡವಾಳ ಬೇಕಾಗುತ್ತದೆ.

ಸ್ಮಾರ್ಟ್ ಫೋನ್ ಮಾರಾಟ ಮತ್ತು ರಿಪೇರಿ ವ್ಯವಹಾರ ಏಕೆ ಯಶಸ್ವಿದಾಯಕ?
ಮೊಬೈಲ್ ಫೋನ್ ವ್ಯವಹಾರ ಶೀಘ್ರವಾಗಿ ಬೆಳೆಯುತ್ತಿದೆ. ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯೂ ಇಂದು ಸ್ಮಾರ್ಟ್ ಫೋನು ಬಯಸುತ್ತಾನೆ. ಈ ಸ್ಮಾರ್ಟ್ ಫೋನಿನ ಬಳಕೆಯು ಹೆಚ್ಚುತ್ತಿರುವುದರಿಂದ ಈ ವ್ಯವಹಾರವನ್ನು ಪ್ರಾರಂಭಿಸುವುದರಿಂದ ಈ ಫೋನಿನ ಮಾರಾಟ ಮತ್ತು ದುರಸ್ತಿಗೆ ಹೆಚ್ಚಿನ ಅವಕಾಶಗಳು ಇರುತ್ತವೆ.

9. ಈವೆಂಟ್ ಮ್ಯಾನೇಜ್ಮೆಂಟ್

9. ಈವೆಂಟ್ ಮ್ಯಾನೇಜ್ಮೆಂಟ್

ಇತರ ಕಂಪನಿಗಳು ಮತ್ತು ವ್ಯಕ್ತಿಗಳಿಗೆ ದೊಡ್ಡ ಸಂದರ್ಭಗಳನ್ನು ಯೋಜಿಸಲು ಮತ್ತು ನಿರ್ವಹಿಸಲು ಸಹಾಯ ಮಾಡುವ ಆಸಕ್ತಿ ಇರುವವರಿಗೆ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಗಳು ಪರಿಪೂರ್ಣ ಸಣ್ಣ ವ್ಯಾಪಾರ ಕಲ್ಪನೆಯಾಗಿದೆ.

ಈವೆಂಟ್ ಮ್ಯಾನೇಜ್ಮೆಂಟ್ ವ್ಯವಹಾರವು ಯಶಸ್ವಿ ವ್ಯಾಪಾರ ಕಲ್ಪನೆ ಯಾಕೆ?
ಈವೆಂಟ್ ಮ್ಯಾನೇಜ್ಮೆಂಟ್ ಸೇವೆ ಇಂದಿನ ಉದ್ಯಮದಲ್ಲಿ ಖಂಡಿತವಾಗಿಯೂ ಅವಶ್ಯಕತೆಯಿರುತ್ತದೆ. ಕಂಪನಿಗಳು ನಿರಂತರವಾಗಿ ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ಮತ್ತು ಸೇವೆಯನ್ನು ಪಡೆಯಲು ಇಂತಹ ಸಂದರ್ಭಗಳನ್ನು ಆಯೋಜಿಸುತ್ತಾ ಇರುತ್ತವೆ. ಇಂತಹ ಸಂದರ್ಭಗಳನ್ನು ಯಶಸ್ವಿಗೊಳಿಸಲು ಅವರು ಯಾವಾಗಲೂ ಇವೆಂಟ್ ಮ್ಯಾನೇಜ್ ಮೆಂಟ್ ಸಂಸ್ಥೆಯ ಪರಿಣಿತರ ಮೊರೆಹೋಗುತ್ತಾರೆ ಆದುದುರಿಂದ ಈ ವ್ಯವಹಾರವು ಉತ್ತಮವಾದ ವ್ಯವಹಾರ ಕಲ್ಪನೆಯೆನಿಸಿದೆ.

10. ಕನ್ಸಲ್ಟೆನ್ಸಿ ಮತ್ತು ಕಾಂಟ್ರಾಕ್ಟಿಂಗ್

10. ಕನ್ಸಲ್ಟೆನ್ಸಿ ಮತ್ತು ಕಾಂಟ್ರಾಕ್ಟಿಂಗ್

ಕೊನೆಯದಾಗಿ, ಕನ್ಸಲ್ಟೆನ್ಸಿ ಮತ್ತು ಕಾಂಟ್ರಾಕ್ಟಿಂಗ್ ಒಂದು ಉತ್ತಮವಾದ ಮತ್ತು ಯಶಸ್ವಿ ವ್ಯವಹಾರ ಕಲ್ಪನೆ. ಈ ವ್ಯಾಪಾರಕ್ಕೆ ನೈಪುಣ್ಯತೆ ಮತ್ತು ಅತ್ಯಂತ ಹೆಚ್ಚಿನ ಜ್ಞಾನದ ಅಗತ್ಯವಿರುತ್ತದೆ. ಆದರೆ ಈ ವ್ಯವಹಾರಕ್ಕೆ ಕಡಿಮೆ ಬಂಡವಾಳ ಸಾಕಾಗುತ್ತದೆ.

ಕನ್ಸಲ್ಟೆನ್ಸಿ ಮತ್ತು ಕಾಂಟ್ರಾಕ್ಟ್ ವ್ಯವಹಾರವು ಏಕೆ ಲಾಭದಾಯಕ?
ಇಂಜಿನಿಯರಿಂಗ್, ಮಾರ್ಕೆಟಿಂಗ್ ಮತ್ತು ವೈಜ್ಞಾನಿಕ ಕೈಗಾರಿಕೆಗಳು ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಸಲಹಾಕಾರರು ಮತ್ತು ಗುತ್ತಿಗೆದಾರರ ಅವಶ್ಯಕತೆಯಿರುತ್ತದೆ. ಉತ್ತಮ ಕಂಪನಿಗಳು ಉತ್ತಮ ಸಲಹೆಗಾರರು ಮತ್ತು ಗುತ್ತಿಗೆದಾರರಿಗೆ ಹೆಚ್ಚಿನ ಮತ್ತು ಲಾಭದಾಯಕ ಹಣವನ್ನು ನೀಡಲು ಸಹ ಸಿದ್ಧವಾಗಿರುತ್ತವೆ. ಆದುದರಿಂದ ಈ ವ್ಯವಹಾರವು ಲಾಭದಾಯಕವಾದುದಾಗಿದೆ.

ಕೊನೆ ಮಾತು

ಕೊನೆ ಮಾತು

ಈ ಎಲ್ಲಾ ಮೇಲೆ ತಿಳಿಸಲಾದ ವಿಚಾರಗಳು ಯಶಸ್ವಿ ಉದ್ಯಮಗಳನ್ನು ಪ್ರಾರಂಭಿಸಲು ಇರುವ ಐಡಿಯಾಗಳು ಎಂದು ಸಾಬೀತಾಗಿದ್ದು, ಅತ್ಯಂತ ಯಶಸ್ವೀ ವ್ಯವಹಾರ ಕಲ್ಪನೆಗಳೆಂದು ಪರಿಗಣಿಸಲಾಗಿದೆ. ಅದೇನೆ ಇರಲಿ ಎಂತಹ ಸಂದರ್ಭಗಳು ಎದುರಾದರೂ ಎದೆಗುಂದದೆ ಮುನ್ನಡೆಯಬೇಕು. ಸೋಲು ಗೆಲುವು ಸಹಜ.

ಲೇಖನ ಓದಿದ ನಂತರ ನಿಮ್ಮ ಅಭಿಪ್ರಾಯಗಳನ್ನು ಮತ್ತು ವ್ಯಾಪಾರ ಕಲ್ಪನೆಗಳನ್ನು ಹಂಚಿಕೊಳ್ಳಿ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+