ಶೂನ್ಯ ಬಂಡವಾಳದಲ್ಲಿ ನಡೆಸಬಹುದಾದ 11 ಉದ್ಯಮಗಳು

ಹೊಸದಾಗಿ ಉದ್ಯಮ ಪ್ರಾರಂಭಿಸಬೇಕೆಂದರೆ ಬಂಡವಾಳ ಬೇಕಾಗುತ್ತದೆ. ಕೆಲವರಿಗೆ ಸ್ವಂತ ಉದ್ಯಮ ಪ್ರಾರಂಭಿಸಿ ಸ್ವತಂತ್ರ ಜೀವಿಯಾಗಿ, ಉದ್ಯಮಿಯಾಗಿ ಬಾಳಬೇಕೆಂಬ ಬಯಕೆ ಇರುತ್ತದೆ. ಆದರೆ ಬಂಡವಾಳದ ಸಮಸ್ಯೆಯಿಂದಾಗಿ ಯೋಜನೆಯನ್ನು ಅರ್ಧಕ್ಕೆ ಕೈಬಿಟ್ಟು ನಿರಾಶ

ಹೊಸದಾಗಿ ಉದ್ಯಮ ಪ್ರಾರಂಭಿಸಬೇಕೆಂದರೆ ಬಂಡವಾಳ ಬೇಕಾಗುತ್ತದೆ. ಕೆಲವರಿಗೆ ಸ್ವಂತ ಉದ್ಯಮ ಪ್ರಾರಂಭಿಸಿ ಸ್ವತಂತ್ರ ಜೀವಿಯಾಗಿ, ಉದ್ಯಮಿಯಾಗಿ ಬಾಳಬೇಕೆಂಬ ಬಯಕೆ ಇರುತ್ತದೆ. ಆದರೆ ಬಂಡವಾಳದ ಸಮಸ್ಯೆಯಿಂದಾಗಿ ಯೋಜನೆಯನ್ನು ಅರ್ಧಕ್ಕೆ ಕೈಬಿಟ್ಟು ನಿರಾಶರಾಗುತ್ತಾರೆ.

ನಿಮ್ಮಲ್ಲಿ ನಿಜವಾಗಿಯೂ ಏನಾದರೂ ಸಾಧಿಸಬೇಕೆಂಬ ಛಲ ಇದ್ದಲ್ಲಿ ಯಾವುದು ಅಸಾಧ್ಯವಲ್ಲ. ಕೆಲ ವ್ಯವಹಾರಗಳನ್ನು ತುಂಬಾ ಕಡಿಮೆ ಬಂಡವಾಳದಲ್ಲಿ ನಡೆಸಬಹುದಾಗಿದೆ. ನಿಮ್ಮ ಬಳಿ ಒಂದಿಷ್ಟು ಸ್ಥಳ, ಮೂಲಭೂತ ಸೌಕರ್ಯಗಳಿದ್ದಲ್ಲಿ ಬಂಡವಾಳದ ಅಗತ್ಯವಿರುವುದಿಲ್ಲ. ಇಲ್ಲದಿದ್ದರೆ ಕಡಿಮೆ ಬಂಡವಾಳ ಬೇಕಾಗುತ್ತದೆ. ಮತ್ತೆ ಕೆಲವನ್ನು ಶೂನ್ಯ ಬಂಡವಾಳದಲ್ಲಿ ನಡೆಸಬಹುದಾಗಿದೆ. ಹಾಗೇ ನಡೆಸಬಹುದಾದ 11 ವ್ಯವಹಾರಗಳ ಕುರಿತಾದ ಮಾಹಿತಿ ಇಲ್ಲಿದೆ ನೋಡಿ.

ಶಿಶುಪಾಲನಾ ಕೇಂದ್ರ (ಬೇಬಿ ಕೇರ್)

ಶಿಶುಪಾಲನಾ ಕೇಂದ್ರ (ಬೇಬಿ ಕೇರ್)

ವೇಗವಾಗಿ ಬೆಳೆಯುತ್ತಿರುವ ನಗರೀಕರಣದಿಂದಾಗಿ ಹಾಗೂ ಒತ್ತಡದ ಜೀವನ ಶೈಲಿಯಿಂದಾಗಿ ಶಿಶುಗಳ ಪಾಲನೆ ಮಾಡುವುದು ಪೋಷಕರಿಗೆ ದುಸ್ತರವಾಗುತ್ತಿದೆ.

ಉತ್ತಮವಾದ ನಿರ್ವಹಣೆ ನಿಮ್ಮಿಂದ ಸಾಧ್ಯವಾದರೆ ನಿಮ್ಮ ಮನೆಯಿಂದಲೇ ಈ ಕಾರ್ಯವನ್ನು ಪ್ರಾರಂಭಿಸಬಹುದು. ಇಲ್ಲಿ ಒಬ್ಬರೆ ಮಕ್ಕಳನ್ನು ನಿರ್ವಹಿಸಬಹುದಾಗಿದ್ದು, ಇದಕ್ಕೆ ಬಂಡವಾಳದ ಅಗತ್ಯವು ತುಂಬಾ ಕಡಿಮೆ. ಹಾಗಾಗಿ ಇದೊಂದು ಅತ್ಯುತ್ತಮ ಆಯ್ಕೆ ಎಂದೇ ಹೇಳಬಹುದು.

ಬ್ಯೂಟಿಷಿಯನ್ (Beautician)

ಬ್ಯೂಟಿಷಿಯನ್ (Beautician)

ಸೌಂದರ್ಯಪ್ರಜ್ಞೆ ಇರುವ ಇಂದಿನ ದಿನಗಳಲ್ಲಿ ಬ್ಯೂಟಿಷಿಯನ್ ಗೆ ಎಲ್ಲಿಲ್ಲದ ಬೇಡಿಕೆ ಇದೆ. ಅದರಲ್ಲೂ ಮನೆ ಬಾಗಿಲಿಗೆ ಸೇವೆ ನೀಡಿದರೆ ಇದರಿಂದ ಉತ್ತಮ ಲಾಭವನ್ನೆ ಪಡೆಯಬಹುದಾಗಿದೆ.

ಬ್ಯೂಟಿಷಿಯನ್ ಜ್ಞಾನ ಹೊಂದಿರುವವರು ಈ ಉದ್ಯೋಗದಿಂದ ಹೆಚ್ಚೆಚ್ಚು ಆದಾಯವನ್ನು ಗಳಿಸಬಹುದಾಗಿದೆ. ಇಂತವರು ಮನೆ ಬಾಗಿಲಿಗೆ ಹೋಗಿ ಸೆವೆಯನ್ನು ಒದಗಿಸಲು ಸಿದ್ದರಾದಲ್ಲಿ ದೊಡ್ಡ ಪ್ರಮಾಣದಲ್ಲಿ ಲಾಭ ಪಡೆಯಲು ಸಾಧ್ಯ.

ಟಿಫಿನ್ (ಉಪಹಾರ) ಸೇವೆ

ಟಿಫಿನ್ (ಉಪಹಾರ) ಸೇವೆ

ನೀವು ಅಡುಗೆ ಮಾಡುವುದರಲ್ಲಿ ಪ್ರಾವಿಣ್ಯತೆ ಹೊಂದಿದ್ದಲ್ಲಿ ಟಿಫಿನ್ (ಉಪಹಾರ) ಸೇವೆಯನ್ನು ಅವಶ್ಯವಾಗಿ ಪ್ರಾರಂಭಿಸಬಹುದು. ಹೆಚ್ಚಿನ ಗ್ರಾಹಕರು ಮನೆಯಲ್ಲಿ ಮಾಡಿದ(ಹೋಮ್ ಮೇಡ್) ಆಹಾರವನ್ನು ಬಯಸುವುದರಿಂದ ಇಲ್ಲಿ ವಿಪುಲ ಅವಕಾಶಗಳಿವೆ. ಅಲ್ಲದೆ ಇದನ್ನು ಮನೆಯಲ್ಲೆ ಮಾಡಬಹುದಾಗಿದ್ದು, ಬಂಡವಾಳದ ಅಗತ್ಯವು ಇರುವುದಿಲ್ಲ.

ಸಾಕು ಪ್ರಾಣಿಗಳ ರಕ್ಷಣೆ (Pet care )

ಸಾಕು ಪ್ರಾಣಿಗಳ ರಕ್ಷಣೆ (Pet care )

ನೀವು ಸಾಕು ಪ್ರಾಣಿಗಳನ್ನು ಇಷ್ಟಪಡುತ್ತಿದ್ದರೆ, ಪ್ರೀತಿಸುತ್ತಿದ್ದರೆ ಅವುಗಳ ಆರೈಕೆಯನ್ನು ಮಾಡಬಹುದು. ನಿಮ್ಮ ಹತ್ತಿರ ಸ್ವಂತ ಸ್ಥಳವಿದ್ದರೆ ಸಾಕು. ಇದಕ್ಕೆ ಬಂಡವಾಳದ ಅವಶ್ಯಕತೆ ಇರುವುದಿಲ್ಲ.

ಟ್ಯಾಕ್ಷಿ ಸೇವೆಗಳು

ಟ್ಯಾಕ್ಷಿ ಸೇವೆಗಳು

ನಗರೀಕರಣ ಕ್ಷೀಪ್ರವಾಗಿ ಹೆಚ್ಚುತ್ತಿರುವುದರಿಂದ ಟ್ಯಾಕ್ಷಿ ಸೇವೆಗಳು ಹೆಚ್ಚು ಚಾಲ್ತಿಗೆ ಬರುತ್ತಿವೆ. ಹೀಗಾಗಿ ನಿಮ್ಮ ಬಳಿ ಸ್ವಂತ ವಾಹನವಿದ್ದರೆ ಈ ಸೇವೆಯನ್ನು ಪ್ರಾರಂಬಿಸಬಹುದು. ಇದಕ್ಕೆ ಬಂಡವಾಳದ ಅಗತ್ಯ ಇರುವುದಿಲ್ಲ.

ಟ್ಯೂಷನ್ (Tutions)

ಟ್ಯೂಷನ್ (Tutions)

ನಿಮ್ಮಿಂದ ಮಕ್ಕಳನ್ನು ನಿರ್ವಹಿಸಲು ಮತ್ತು ಕಲಿಸಲು ಸಾಧ್ಯವಾದರೆ ಟ್ಯೂಷನ್ ನಂದಾಗಿ ಉತ್ತಮ ಸಂಪಾದನೆ ಮಾಡಬಹುದು. ಇಲ್ಲಿ ನಿರ್ದಿಷ್ಟ ಮಟ್ಟದ ನೈಪುಣ್ಯತೆಯ ಹಾಗೂ ಜ್ಞಾನದ ಅಗತ್ಯ ಇರುತ್ತದೆ.

ಅಡುಗೆ ತರಗತಿಗಳು

ಅಡುಗೆ ತರಗತಿಗಳು

ನೀವು ಅಡುಗೆ ತಜ್ಞರಾಗಿದ್ದಲ್ಲಿ ನಿಮ್ಮ ನೈಪುಣ್ಯತೆಯನ್ನು ಬಳಸಿ ಉತ್ತಮ ಆದಾಯ ಗಳಿಸಬಹುದು. ಇದಕ್ಕೆ ಹೆಚ್ಚು ಬಂಡವಾಳದ ಅಗತ್ಯವೂ ಇರುವುದಿಲ್ಲ. ಆಸಕ್ತರು ಮನೆಗೆ ಬಂದು ನಿಮ್ಮಿಂದ ತುಂಬಾ ಜ್ಞಾನವನ್ನು ಪಡೆಯಬಹುದಾಗಿದೆ.

ನೃತ್ಯ ಮತ್ತು ಏರೋಬಿಕ್ ತರಗತಿಗಳು

ನೃತ್ಯ ಮತ್ತು ಏರೋಬಿಕ್ ತರಗತಿಗಳು

ನೀವು ನೃತ್ಯ ಮತ್ತು ಏರೋಬಿಕ್ ನಲ್ಲಿ ನೈಪುಣ್ಯತೆ ಸಾಧಿಸಿದಲ್ಲಿ ಈ ತರಗತಿಗಳನ್ನು ಪ್ರಾರಂಭಿಸುವುದರ ಮೂಲಕ ಉತ್ತಮ ಆದಾಯವನ್ನೆ ಗಳಿಸಬಹುದು.

ಕೋರಿಯರ್ ಕಂಪನಿ

ಕೋರಿಯರ್ ಕಂಪನಿ


ಅನೆಕ ಕೋರಿಯರ್ ಕಂಪನಿಗಳು ತಮ್ಮ ಅಗತ್ಯತೆಗಳನ್ನು ನಿರ್ವಹಿಸಲು ಸಹ ಕಂಪನಿಗಳನ್ನು (ಪ್ರಾಂಚೈಸಿ) ಹುಡುಕುತ್ತಿರುತ್ತವೆ. ಉದಾರಹಣೆಗೆ ನಾವು ಇತ್ತೀಚಿನ ದಿನಗಳಲ್ಲಿ ಮನೆ ಬಾಗಿಲಿಗೆ ತಂದು ಕೊಡುವ DTDC ಯಂತಹ ಕೋರಿಯರ್ ಕಂಪನಿಗಳನ್ನು ಕಾಣಬಹುದು. ಒಂದಿಬ್ಬರು ಕೆಲಸಗಾರರು ಮತ್ತು ಸಣ್ಣ ಸ್ಥಳ ಇದರ ಹೊಡಿಕೆಯಾಗಿರುತ್ತದೆ.

ಫ್ರಿಲ್ಯಾನ್ಸರ್ (Freelancers)

ಫ್ರಿಲ್ಯಾನ್ಸರ್ (Freelancers)

ನಿಮ್ಮಲ್ಲಿ ಸ್ವತಂತ್ರ ಬರಹ, ವಿನ್ಯಾಸ ಅಥವಾ ಇನ್ಯಾವುದೇ ಸ್ವತಂತ್ರ ಉದ್ಯೋಗದ ಕುರಿತು ಜ್ಞಾನ ಇದ್ದಲ್ಲಿ ಅದನ್ನು ಸ್ವತಂತ್ರವಾಗಿ ಹಾಗೂ ವೈಯಕ್ತಿಕವಾಗಿ ಪ್ರಾರಂಭಿಸಬಹುದು. ವೃತ್ತಿಪರರಿಗೆ ಇಂತಹ ಕ್ಷೇತ್ರಗಳಲ್ಲಿ ಹೆಚ್ಚು ಅವಕಾಶಗಳಿರುತ್ತವೆ.

 

ಹಣಕಾಸು ಅಥವಾ ಬಂಡವಾಳ ಸಲಹೆಗಾರ

ಹಣಕಾಸು ಅಥವಾ ಬಂಡವಾಳ ಸಲಹೆಗಾರ

ಹಣಕಾಸು ಮತ್ತು ಬಂಡವಾಳ ಕ್ಷೇತ್ರಗಳಲ್ಲಿ ನೀವು ಪ್ರಾವಿಣ್ಯತೆ ಹೊಂದಿದ್ದಲ್ಲಿ ಸಲಹೆಗಾರರಾಗಿ ಸೇವೆ ಸಲ್ಲಿಸಬಹುದು. ಇದು ಕೂಡ ಹೆಚ್ಚಿನ ಹೊಡಿಕೆ ಅಥವಾ ಬಂಡವಾಳ ಬಯಸುವುದಿಲ್ಲ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+