ಕುಟುಂಬಕ್ಕೆ ಆರ್ಥಿಕ ಸುಭದ್ರತೆ ನೀಡುವುದೇ ಜೀವ ವಿಮಾ ಪಾಲಿಸಿಯ ಪ್ರಮುಖ ಉದ್ದೇಶವಾಗಿದೆ ಎಂಬುದು ನಮಗೆಲ್ಲ ತಿಳಿದ ಸಂಗತಿ. ಆದರೂ ಇತ್ತೀಚಿನ ವರ್ಷಗಳಲ್ಲಿ ಜೀವ ವಿಮೆ ಎಂಬುದು ಬಹು ವಿಧಗಳಲ್ಲಿ ಪ್ರಯೋಜನ ನೀಡಬಲ್ಲ ಒಂದು ಹೂಡಿಕೆ ಯೋಜನೆ.
ಕುಟುಂಬಕ್ಕೆ ಆರ್ಥಿಕ ಸುಭದ್ರತೆ ನೀಡುವುದೇ ಜೀವ ವಿಮಾ ಪಾಲಿಸಿಯ ಪ್ರಮುಖ ಉದ್ದೇಶವಾಗಿದೆ ಎಂಬುದು ನಮಗೆಲ್ಲ ತಿಳಿದ ಸಂಗತಿ. ಆದರೂ ಇತ್ತೀಚಿನ ವರ್ಷಗಳಲ್ಲಿ ಜೀವ ವಿಮೆ ಎಂಬುದು ಬಹು ವಿಧಗಳಲ್ಲಿ ಪ್ರಯೋಜನ ನೀಡಬಲ್ಲ ಒಂದು ಹೂಡಿಕೆ ಯೋಜನೆಯಾಗಿಯೂ ಹೊರ ಹೊಮ್ಮಿದೆ ಎಂಬ ವಿಷಯ ತಿಳಿದುಕೊಳ್ಳುವುದು ಅಗತ್ಯವಾಗಿದೆ. ಜೀವ ವಿಮಾ ಪಾಲಿಸಿಯ ಮತ್ತೊಂದು ಪ್ರಮುಖ ವೈಶಿಷ್ಟ್ಯವೆಂದರೆ ಪಾಲಿಸಿಯ ಮೇಲೆ ಸಿಗುವ ಸಾಲ ಸೌಲಭ್ಯ.
ಅಂದರೆ ಭವಿಷ್ಯದ ಆರ್ಥಿಕ ಸುಭದ್ರತೆಗಾಗಿ ಮಾಡಿಸಿದ ಜೀವ ವಿಮಾ ಪಾಲಿಸಿ, ಕೆಲ ತುರ್ತು ಹಣಕಾಸಿನ ಮುಗ್ಗಟ್ಟಿನ ಸಂದರ್ಭಗಳಲ್ಲಿ ಕೂಡ ಸಹಾಯಕ್ಕೆ ಬರುತ್ತದೆ. ಜೀವ ವಿಮಾ ಪಾಲಿಸಿಯ ಮೇಲೆ ಸಾಲ ಪಡೆಯಬಹುದಾಗಿದ್ದು, ಇದರ ಮೇಲೆ ಆಕರಿಸಲಾಗುವ ಬಡ್ಡಿ ದರ ವೈಯಕ್ತಿಕ ಸಾಲ (Personal Loan) ಯೋಜನೆಗಳ ಬಡ್ಡಿಗಿಂತ ಸಾಕಷ್ಟು ಕಡಿಮೆಯಾಗಿದೆ. ಹೀಗಾಗಿ ವಿಮಾ ಪಾಲಿಸಿಯ ಮೇಲೆ ಸಾಲ ಪಡೆಯುವುದು ಈಗೀಗ ಆಕರ್ಷಕವಾಗತೊಡಗಿದೆ. ಚಿನ್ನ ಅಥವಾ ಶೇರುಗಳ ಮೇಲೆ ಸಾಲ ಪಡೆದರೆ ಮಾರುಕಟ್ಟೆಗಳ ಏರಿಳಿತದ ಆಧಾರದಲ್ಲಿ ನಮ್ಮ ಚಿನ್ನ ಹಾಗೂ ಶೇರುಗಳ ಮೌಲ್ಯ ಬದಲಾವಣೆಯಾಗುತ್ತದೆ. ಆದರೆ ವಿಮಾ ಪಾಲಿಸಿಯ ಮೇಲೆ ಸಾಲ ಪಡೆದಾಗ ವಿಮೆಯ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗದಿರುವುದು ಈ ಯೋಜನೆಯ ಪ್ಲಸ್ ಪಾಯಿಂಟ್ ಆಗಿದೆ. 1 ಲಕ್ಷ ಹೂಡಿಕೆ ಮೇಲೆ ಅತ್ಯುತ್ತಮ ಆದಾಯ ಗಳಿಸಲು 10 ವಿಧಾನ
ಜೀವ ವಿಮಾ ಪಾಲಿಸಿಯ ಮೇಲೆ ಸಾಲ ಪಡೆಯುವಾಗ ಅರ್ಹತೆಗಳೇನು ಹಾಗೂ ಯಾವ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂಬ ವಿವರಗಳನ್ನು ನೋಡೋಣ ಬನ್ನಿ..
ಪಾಲಿಸಿಯ ಅರ್ಹತೆ
ಎಲ್ಲ ರೀತಿಯ ಜೀವ ವಿಮಾ ಪಾಲಿಸಿಗಳ ಮೇಲೆ ಸಾಲ ಸೌಲಭ್ಯ ಇರುವುದಿಲ್ಲ. ಹಾಗಾಗಿ ನಿಮ್ಮ ಬಳಿ ಇರುವ ಪಾಲಿಸಿ ಸಾಲಕ್ಕೆ ಅರ್ಹವಾಗಿದೆ ಅಥವಾ ಇಲ್ಲ ಎಂಬುದನ್ನು ಮೊದಲು ಪರಿಶೀಲಿಸಬೇಕು. ನಿಶ್ಚಿತ ಅಥವಾ ಜೀವಿತಾವಧಿಯ ಜೀವ ವಿಮಾ ಪಾಲಿಸಿಗಳ ಸರೆಂಡರ್ ಮೌಲ್ಯದ ಆಧಾರದಲ್ಲಿ ಸಾಲ ಪಡೆಯಬಹುದು.
ಆದರೆ ಟರ್ಮ್ ಇನ್ಸೂರೆನ್ಸ್ ಪಾಲಿಸಿಗಳ ಮೇಲೆ ಸಾಲ ಸಿಗಲಾರದು. ಅವಧಿ ಮುಗಿದ ನಂತರ ಕೊನೆಗೊಳ್ಳುವ ಟರ್ಮ್ ಪಾಲಿಸಿಗಳು ನಗದು ಮೌಲ್ಯವನ್ನು ಹೊಂದಿರುವುದಿಲ್ಲ ಹಾಗೂ ಯಾವುದೇ ರಿಟರ್ನ್ಸ್ ಸಹ ಇರುವುದಿಲ್ಲ. ಹಾಗಾಗಿ ಟರ್ಮ್ ಪಾಲಿಸಿಗಳ ಮೇಲೆ ಸಾಲ ನೀಡಲಾಗುವುದಿಲ್ಲ.
ಮೂರು ವರ್ಷ ನಿರಂತರವಾಗಿ ಹಾಗೂ ಸಕಾಲಕ್ಕೆ ಪ್ರೀಮಿಯಂ ಪಾವತಿಸಿದ ಟರ್ಮ್ ಪಾಲಿಸಿ ಅಲ್ಲದ ವಿಮೆಯ ಮೇಲೆ ಸಾಲ ಪಡೆಯಬಹುದಾಗಿದೆ.
ವಿಮಾ ಪಾಲಿಸಿಯ ಮೇಲೆ ಸಾಲ ಪಡೆಯುವುದು ಎಂದರೆ ಒಂದರ್ಥದಲ್ಲಿ ನಿಮ್ಮಿಂದ ನೀವೇ ಸಾಲ ಪಡೆದ ಹಾಗೆ. ಹಾಗಾಗಿ ಯಾವ ಉದ್ದೇಶಕ್ಕೆ ಸಾಲ ಬೇಕು ಎಂಬುದು ಇಲ್ಲಿ ಪರಿಶೀಲನೆಗೊಳಪಡುವುದಿಲ್ಲ. ಜೊತೆಗೆ ಸಾಲ ಮಂಜೂರಿ ಪ್ರಕ್ರಿಯೆ ಕೂಡ ಅತಿ ಸರಳವಾಗಿರುತ್ತದೆ. ಇಲ್ಲಿ ಸಾಲ ಪಡೆಯುವವರ ಆದಾಯ ಖಾತರಿ ಬೇಕಾಗಿಲ್ಲವಾದರೂ, ಹಿಂದಿನ ಉತ್ತಮ ಹಣಕಾಸು ನಿರ್ವಹಣೆಯನ್ನು ತಪ್ಪದೇ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
ಪಾಲಿಸಿಯ ಅರ್ಹತೆ
ಎಲ್ಲ ರೀತಿಯ ಜೀವ ವಿಮಾ ಪಾಲಿಸಿಗಳ ಮೇಲೆ ಸಾಲ ಸೌಲಭ್ಯ ಇರುವುದಿಲ್ಲ. ಹಾಗಾಗಿ ನಿಮ್ಮ ಬಳಿ ಇರುವ ಪಾಲಿಸಿ ಸಾಲಕ್ಕೆ ಅರ್ಹವಾಗಿದೆ ಅಥವಾ ಇಲ್ಲ ಎಂಬುದನ್ನು ಮೊದಲು ಪರಿಶೀಲಿಸಬೇಕು. ನಿಶ್ಚಿತ ಅಥವಾ ಜೀವಿತಾವಧಿಯ ಜೀವ ವಿಮಾ ಪಾಲಿಸಿಗಳ ಸರೆಂಡರ್ ಮೌಲ್ಯದ ಆಧಾರದಲ್ಲಿ ಸಾಲ ಪಡೆಯಬಹುದು.
ಆದರೆ ಟರ್ಮ್ ಇನ್ಸೂರೆನ್ಸ್ ಪಾಲಿಸಿಗಳ ಮೇಲೆ ಸಾಲ ಸಿಗಲಾರದು. ಅವಧಿ ಮುಗಿದ ನಂತರ ಕೊನೆಗೊಳ್ಳುವ ಟರ್ಮ್ ಪಾಲಿಸಿಗಳು ನಗದು ಮೌಲ್ಯವನ್ನು ಹೊಂದಿರುವುದಿಲ್ಲ ಹಾಗೂ ಯಾವುದೇ ರಿಟರ್ನ್ಸ್ ಸಹ ಇರುವುದಿಲ್ಲ. ಹಾಗಾಗಿ ಟರ್ಮ್ ಪಾಲಿಸಿಗಳ ಮೇಲೆ ಸಾಲ ನೀಡಲಾಗುವುದಿಲ್ಲ.
ಮೂರು ವರ್ಷ ನಿರಂತರವಾಗಿ ಹಾಗೂ ಸಕಾಲಕ್ಕೆ ಪ್ರೀಮಿಯಂ ಪಾವತಿಸಿದ ಟರ್ಮ್ ಪಾಲಿಸಿ ಅಲ್ಲದ ವಿಮೆಯ ಮೇಲೆ ಸಾಲ ಪಡೆಯಬಹುದಾಗಿದೆ.
ವಿಮಾ ಪಾಲಿಸಿಯ ಮೇಲೆ ಸಾಲ ಪಡೆಯುವುದು ಎಂದರೆ ಒಂದರ್ಥದಲ್ಲಿ ನಿಮ್ಮಿಂದ ನೀವೇ ಸಾಲ ಪಡೆದ ಹಾಗೆ. ಹಾಗಾಗಿ ಯಾವ ಉದ್ದೇಶಕ್ಕೆ ಸಾಲ ಬೇಕು ಎಂಬುದು ಇಲ್ಲಿ ಪರಿಶೀಲನೆಗೊಳಪಡುವುದಿಲ್ಲ. ಜೊತೆಗೆ ಸಾಲ ಮಂಜೂರಿ ಪ್ರಕ್ರಿಯೆ ಕೂಡ ಅತಿ ಸರಳವಾಗಿರುತ್ತದೆ. ಇಲ್ಲಿ ಸಾಲ ಪಡೆಯುವವರ ಆದಾಯ ಖಾತರಿ ಬೇಕಾಗಿಲ್ಲವಾದರೂ, ಹಿಂದಿನ ಉತ್ತಮ ಹಣಕಾಸು ನಿರ್ವಹಣೆಯನ್ನು ತಪ್ಪದೇ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
ಪಡೆಯಬಹುದಾದ ಸಾಲದ ಮೊತ್ತ
ಪಾಲಿಸಿಯ ಮೇಲೆ ನಿಮಗೆ ಸಿಗಬಹುದಾದ ಸಾಲದ ಮೊತ್ತ ಎಷ್ಟೆಂಬುದನ್ನು ವಿಮಾ ಕಂಪನಿ ಅಥವಾ ಬ್ಯಾಂಕಿಗೆ ಸಂಪರ್ಕಿಸಿ ತಿಳಿದುಕೊಳ್ಳಬಹುದು. ಪಾಲಿಸಿಯ ಸರೆಂಡರ್ ಮೌಲ್ಯದ ಮೇಲೆ ಸಾಲದ ಮೊತ್ತ ನಿರ್ಧರಿಸಲ್ಪಡುತ್ತದೆ. ನಿಶ್ಚಿತ ಆದಾಯದ ಸಾಂಪ್ರದಾಯಿಕ ಪಾಲಿಸಿಗಳ ಮೇಲೆ ಶೇ. 85 ರಿಂದ 90ರಷ್ಟು ಸಾಲ ಪಡೆಯಬಹುದು. ಎಲ್ಲ ಬಗೆಯ ಯುನಿಟ್ ಲಿಂಕ್ಡ್ ಪಾಲಿಸಿಗಳ ಮೇಲೆ ಸಾಲ ಸಿಗುವುದಿಲ್ಲ. ಕೆಲ ಯುನಿಟ್ ಲಿಂಕ್ಡ್ ಪಾಲಿಸಿಗಳಲ್ಲಿ ಪ್ರಸ್ತುತ ಸಂಗ್ರಹಿತ ಮೊತ್ತ ಹಾಗೂ ಫಂಡ್ ರೀತಿಯನ್ನು ಆಧರಿಸಿ ಸಾಲದ ಮೊತ್ತವನ್ನು ನಿರ್ಧರಿಸಲಾಗುತ್ತದೆ.
ಸಾಲ ಪಡೆಯುವ ಪ್ರಕ್ರಿಯೆಯಲ್ಲಿ ಸಾಲದ ಮೊತ್ತ ನಿರ್ಧಾರವಾದ ಮೇಲೆ, ನಿಮ್ಮ ವಿಮಾ ಪಾಲಿಸಿ ಸಾಲ ನೀಡುವ ಕಂಪನಿಗೆ ವರ್ಗಾವಣೆಯಾಗುತ್ತದೆ. ಅಂದರೆ ಪಾಲಿಸಿಯ ಮೇಲಿನ ಸಂಪೂರ್ಣ ಹಕ್ಕುಗಳು ಸಾಲ ನೀಡುವ ಕಂಪನಿಗೆ ಪರಭಾರೆಯಾಗುತ್ತವೆ. ಆದಾಯ ತೆರಿಗೆ ಇಲಾಖೆಯ ಕಾನೂನುಗಳ ಪ್ರಕಾರ, ಈ ಯೋಜನೆಯಲ್ಲಿ ಪಡೆಯುವ ಸಾಲವನ್ನು ಆದಾಯ ಎಂದು ಪರಿಗಣಿಸಲಾಗುವುದಿಲ್ಲ. ಹೀಗಾಗಿ ಇದರ ಮೇಲೆ ಯಾವುದೇ ತೆರಿಗೆ ಕಟ್ಟುವ ಅವಶ್ಯಕತೆ ಇರುವುದಿಲ್ಲ.
ವಿಧಿಸಲಾಗುವ ಬಡ್ಡಿ ದರ
ಪಾಲಿಸಿ ಅವಧಿಯಲ್ಲಿ ಎಷ್ಟು ಮೊತ್ತದ ಹಾಗೂ ಎಷ್ಟು ಸಂಖ್ಯೆಯ ಪ್ರೀಮಿಯಂಗಳನ್ನು ಪಾವತಿಸಲಾಗಿದೆ ಎಂಬುದರ ಆಧಾರದಲ್ಲಿ ಸಾಲದ ಬಡ್ಡಿ ನಿರ್ಧಾರವಾಗುತ್ತದೆ. ಅಂದರೆ ಹೆಚ್ಚು ಸಂಖ್ಯೆಯ ಪ್ರೀಮಿಯಂ ಹಾಗೂ ಪ್ರೀಮಿಯಂ ಮೊತ್ತ ಪಾವತಿಸಿದಷ್ಟೂ ಬಡ್ಡಿ ದರ ಕಡಿಮೆಯಾಗಿರುತ್ತದೆ.
ಸಾಮಾನ್ಯವಾಗಿ ಬ್ಯಾಂಕ್‌ಗಳು ತಮ್ಮ ಮೂಲ ಬಡ್ಡಿ ದರವನ್ನೇ ಈ ವಿಷಯದಲ್ಲಿಯೂ ಗಣನೆಗೆ ತೆಗೆದುಕೊಳ್ಳುತ್ತವೆ. ಪಾಲಿಸಿಯನ್ನು ಅಡವಿಟ್ಟುಕೊಂಡು ಅದರ ಮೇಲೆ ಓವರ್‌ಡ್ರಾಫ್ಟ್ ರೀತಿಯಲ್ಲಿ ಬ್ಯಾಂಕ್‌ಗಳು ಸಾಲ ನೀಡುತ್ತವೆ. ಹೀಗಾಗಿ ವಿಮಾ ಕಂಪನಿಗಳಿಗೆ ಹೋಲಿಸಿದರೆ ಬ್ಯಾಂಕ್ ಬಡ್ಡಿ ದರಗಳು ತುಸು ಹೆಚ್ಚಾಗಿರುತ್ತವೆ. ವಿಮಾ ಪಾಲಿಸಿಯ ವಿಧ ಹಾಗೂ ಅದರ ಅವಧಿಯನ್ನು ಆಧರಿಸಿ ಶೇ. 10 ರಿಂದ 14 ರವರೆಗೆ ಬ್ಯಾಂಕ್‌ಗಳು ಬಡ್ಡಿ ವಿಧಿಸುತ್ತವೆ.
ಭಾರತೀಯ ಜೀವವಿಮಾ ನಿಗಮ ಪ್ರಸ್ತುತ ಶೇ. 9 ರ ಬಡ್ಡಿದರ ಆಕರಿಸುತ್ತಿದ್ದು, ಪ್ರತಿ ಆರು ತಿಂಗಳಿಗೊಮ್ಮೆ ಬಡ್ಡಿ ಪಾವತಿಸಬೇಕಿರುತ್ತದೆ. ಸಾಲದ ಕನಿಷ್ಠ ಅವಧಿ 6 ತಿಂಗಳಾಗಿರುವುದರಿಂದ, ಒಂದು ವೇಳೆ 6 ತಿಂಗಳೊಳಗೆ ಸಾಲ ತೀರಿಸಬೇಕೆಂದರೂ 6 ತಿಂಗಳ ಬಡ್ಡಿ ಪಾವತಿಸುವುದು ಕಡ್ಡಾಯವಾಗಿರುತ್ತದೆ.
ಸಾಲ ಪಡೆಯಲು ಬೇಕಾದ ದಾಖಲೆಗಳು
ಸಾಲ ಪ್ರಕ್ರಿಯೆಯ ಹೆಚ್ಚಿನ ಮಾಹಿತಿಗೆ ಹಾಗೂ ಸಲ್ಲಿಸಬೇಕಾದ ದಾಖಲೆಗಳ ಬಗ್ಗೆ ವಿಮಾ ಕಂಪನಿಯ ಕಚೇರಿಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದು. ನಿಗದಿತ ನಮೂನೆಯ ಅರ್ಜಿ ಫಾರ್ಮ ತುಂಬಿ, ಅದರೊಂದಿಗೆ ಅಸಲಿ ವಿಮಾ ಪಾಲಿಸಿಯನ್ನು ಲಗತ್ತಿಸಿ ಕಂಪನಿಗೆ ನೀಡಬೇಕು. ಸಾಲದ ಅವಧಿಯಲ್ಲಿ ಪಾಲಿಸಿಯ ಎಲ್ಲ ಹಕ್ಕುಗಳನ್ನು ಸಾಲ ನೀಡುವ ಕಂಪನಿಗೆ ನೀಡುವ ಕುರಿತು ಪಾಲಿಸಿದಾರರು ಕರಾರು ಪತ್ರಕ್ಕೆ ಈ ಸಂದರ್ಭದಲ್ಲಿ ಸಹಿ ಮಾಡಬೇಕಿರುತ್ತದೆ. ಸಂಪೂರ್ಣ ಸಾಲ ಮರುಪಾವತಿ ಆಗುವವರೆಗೂ ಪಾಲಿಸಿಯನ್ನು ಖಾತರಿಯಾಗಿ ಇಟ್ಟುಕೊಳ್ಳಲಾಗುತ್ತದೆ.
ಪ್ರೀಮಿಯಂ ಪಾವತಿ ಮುಂದುವರಿಕೆ
ವಿಮಾ ಪಾಲಿಸಿಯ ಮೇಲೆ ಸಾಲ ಪಡೆದಾಗ ನಿಗದಿತ ಪ್ರೀಮಿಯಂಗಳನ್ನು ಸಕಾಲಕ್ಕೆ ಪಾವತಿಸುವುದನ್ನು ಮುಂದುವರಿಸಬೇಕಿರುತ್ತದೆ. ಒಂದು ವೇಳೆ ಪ್ರೀಮಿಯಂ ಕಟ್ಟದಿದ್ದಲ್ಲಿ ವಿಮಾ ಕಂಪನಿ ಪಾಲಿಸಿಯನ್ನು ರದ್ದುಗೊಳಿಸುವ ಅಧಿಕಾರವನ್ನು ಹೊಂದಿರುತ್ತದೆ ಎಂಬುದು ಗಮನದಲ್ಲಿರಲಿ.
ಸಾಲದ ಮರುಪಾವತಿ
ವಿಮಾ ಪಾಲಿಸಿಯ ಅವಧಿಯ ಒಳಗಡೆ ಸಾಲವನ್ನು ಸಂಪೂರ್ಣವಾಗಿ ಮರುಪಾವತಿಸಬೇಕು. ಕಂತು ಪಾವತಿಸುವಾಗ ಅಸಲು ಹಾಗೂ ಬಡ್ಡಿ ಅಥವಾ ಬಡ್ಡಿ ಮಾತ್ರ ಪಾವತಿಸುವ ಆಯ್ಕೆ ಇದೆ. ಒಂದು ವೇಳೆ ಕೇವಲ ಬಡ್ಡಿ ಮಾತ್ರ ಪಾವತಿಸುತ್ತ ಬಂದಲ್ಲಿ ಪಾಲಿಸಿಯ ಕೊನೆಯಲ್ಲಿ ಸಿಗುವ ಪಕ್ವ ಮೊತ್ತದಲ್ಲಿ ಸಾಲದ ಹಣವನ್ನು ಕಳೆದು ಉಳಿದ ಮೊತ್ತ ನೀಡಲಾಗುವುದು.
ಒಂದು ವೇಳೆ ಪಾಲಿಸಿದಾರ ಕೇವಲ ಬಡ್ಡಿ ಹಣ ಮಾತ್ರ ತುಂಬುತ್ತಿದ್ದು, ಸಾಲ ಇನ್ನೂ ಬಾಕಿ ಇರುವಾಗ ಮರಣಕ್ಕೆ ತುತ್ತಾದರೆ, ಕ್ಲೇಮ್ ಮೊತ್ತದಲ್ಲಿ ಸಾಲದ ಮೊತ್ತವನ್ನು ಕಳೆದು ಉಳಿದ ಹಣವನ್ನು ಮಾತ್ರ ಅವರ ನಾಮಿನಿದಾರರಿಗೆ ನೀಡಲಾಗುತ್ತದೆ. ಹೀಗಾಗಿ ಸಾಲ ಪಡೆದು ಅಕಾಲ ಮರಣಕ್ಕೆ ತುತ್ತಾದರೆ, ಪಾಲಿಸಿದಾರನ ಅವಲಂಬಿತರು ಇದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಅಕಾಲಿಕ ಮರಣದ ಸಂದರ್ಭದಲ್ಲಿ ಅವರ ಅವಲಂಬಿತರಿಗೆ ಸಹಾಯವಾಗಲಿ ಎಂಬ ಸದುದ್ದೇಶದಿಂದ ಪಡೆಯುವ ಜೀವ ವಿಮಾ ಪಾಲಿಸಿ ಅದರ ಮೂಲ ಉದ್ದೇಶ ಈಡೇರಿಸಲು ಇಂಥ ಸಂದರ್ಭಗಳಲ್ಲಿ ವಿಫಲವಾಗಬಹುದು. ಹೀಗಾಗಿ ಪಾಲಿಸಿ ಮೇಲೆ ಸಾಲ ಪಡೆಯುವುದು ಅವಲಂಬಿತರಿಗೆ ಹೊರೆಯಾಗಬಹುದು ಎಂಬ ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಕೊನೆ ಮಾತು
ಆದ್ದರಿಂದ ಬಡ್ಡಿ ಹೆಚ್ಚಾಗಿ ಹೊರೆಯಾಗದಂತಿರಲು ಸಕಾಲಕ್ಕೆ ಸಾಲದ ಕಂತುಗಳನ್ನು ಪಾವತಿಸುತ್ತ ಹೋಗುವುದು ಜಾಣತನ. ಬಡ್ಡಿಯನ್ನು ಸಹ ಸಕಾಲಕ್ಕೆ ಪಾವತಿ ಮಾಡದಿದ್ದರೆ ಅದೂ ಸಹ ಸಾಲದ ಮೂಲ ಮೊತ್ತದಲ್ಲಿ ಸೇರ್ಪಡೆಯಾಗುತ್ತ ಹೋಗುತ್ತದೆ. ಇದರಿಂದ ಪಾಲಿಸಿಯ ಒಟ್ಟು ಮೊತ್ತವನ್ನೂ ಮೀರಿ ಸಾಲದ ಹೊರೆ ಹೆಚ್ಚಾಗಬಹುದು. ಇದು ಪಾಲಿಸಿ ಲ್ಯಾಪ್ಸ್ ಆಗುವ ಅಪಾಯವನ್ನು ಸಹ ತಂದೊಡ್ಡುತ್ತದೆ. ಇಂಥ ಸಂದರ್ಭಗಳಲ್ಲಿ ಉಳಿದ ಸಾಲದ ಮೊತ್ತಕ್ಕೆ ತೆರಿಗೆಯನ್ನು ಸಹ ಕಟ್ಟಬೇಕಾಗುತ್ತದೆ. ಸಾಲ ಬಾಕಿ ಉಳಿಸಿಕೊಂಡಾಗ ಒಟ್ಟು ಸಂಗ್ರಹಿತ ಸರೆಂಡರ್ ಮೊತ್ತದಲ್ಲಿ ಸಾಲದ ಹಣವನ್ನು ಕಡಿತ ಮಾಡಲಾಗುವುದು ಹಾಗೂ ಪಾಲಿಸಿಯನ್ನು ರದ್ದುಗೊಳಿಸಲಾಗುವುದು.


Click it and Unblock the Notifications