For Quick Alerts
ALLOW NOTIFICATIONS  
For Daily Alerts

1 ಲಕ್ಷ ಹೂಡಿಕೆ ಮೇಲೆ ಅತ್ಯುತ್ತಮ ಆದಾಯ ಗಳಿಸಲು 10 ವಿಧಾನ

ಹೂಡಿಕೆಗಾಗಿ ನನ್ನ ಬಳಿ 1 ಲಕ್ಷ ರೂಪಾಯಿಗಳಿವೆ. ನನಗೆ ತ್ವರಿತಗತಿಯ ಹಾಗೂ ಲಾಭದಾಯಕವಾದ ಆದಾಯ ಬೇಕಾಗಿದೆ. ಹೀಗಾಗಬೇಕಿದ್ದಲ್ಲಿ, ನಾನು ಆ 1 ಲಕ್ಷ ರೂಪಾಯಿಗಳನ್ನು ಎಲ್ಲಿ ಹೂಡಿಕೆ ಮಾಡಲಿ? ಎಂಬುದೇ ಆಗಿದೆ.

By Siddu
|

ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ ಕೇಳಿಬರುವ ಪ್ರಶ್ನೆಯೆಂದರೆ, ಹೂಡಿಕೆಗಾಗಿ ನನ್ನ ಬಳಿ 1 ಲಕ್ಷ ರೂಪಾಯಿಗಳಿವೆ. ನನಗೆ ತ್ವರಿತಗತಿಯ ಹಾಗೂ ಲಾಭದಾಯಕವಾದ ಆದಾಯ ಬೇಕಾಗಿದೆ. ಹೀಗಾಗಬೇಕಿದ್ದಲ್ಲಿ, ನಾನು ಆ 1 ಲಕ್ಷ ರೂಪಾಯಿಗಳನ್ನು ಎಲ್ಲಿ ಹೂಡಿಕೆ ಮಾಡಲಿ? ಎಂಬುದೇ ಆಗಿದೆ. ಸರಿ..... ಈ ಪ್ರಶ್ನೆಗೆ ಉತ್ತರವು ರಿಸ್ಕ್ ಅನ್ನು ಜೀರ್ಣಿಸಿಕೊಳ್ಳುವ ನಿಮ್ಮ ಸಾಮರ್ಥ್ಯ ಹಾಗೂ ಇನ್ನಿತರ ಅನೇಕ ಸಂಗತಿಗಳ ಮೇಲೆ ಅವಲಂಬಿತವಾಗಿರುತ್ತದೆ. ಆದಾಗ್ಯೂ, ನೀವೋರ್ವ ಜಾಣ ಹೂಡಿಕೆದಾರಾಗಿದ್ದೀರಿ ಹಾಗೂ ಅಲ್ಪಮಟ್ಟಿಗಿನ ರಿಸ್ಕ್ ನೊಂದಿಗೆ, ಸುರಕ್ಷತೆಯ ಸಾಮ್ರಾಜ್ಯದಲ್ಲಿ ಗರಿಷ್ಟ ಪ್ರಮಾಣದ ರಿಟರ್ನ್ ಅನ್ನು ಬಯಸುವವರಾಗಿದ್ದೀರಿ ಎಂದೇ ನನ್ನ ನಂಬಿಕೆಯಾಗಿದೆ. ಹೀಗಾಗಿ, ಉತ್ತಮ ರಿಟರ್ನ್ ಗಾಗಿ 1 ಲಕ್ಷ ರೂ.ಗಳನ್ನು ಹೂಡುವ 10 ಅತ್ಯುತ್ತಮ ಮಾರ್ಗೋಪಾಯಗಳ ಕುರಿತಾಗಿ ಇಲ್ಲಿ ಪ್ರಸ್ತಾವಿಸಲಾಗಿದೆ. ತಿಂಗಳಿಗೊಮ್ಮೆ ಈ 7 ಕೆಲಸ ಮಾಡದಿದ್ದರೆ ಕೋಟ್ಯಾಧಿಶರಾಗಬಹುದು! ಆಶ್ಚರ್ಯವಾಯಿತಾ? ಮುಂದೆ ಓದಿ..

 

1. ಮಿಡ್-ಕ್ಯಾಪ್, ಮಲ್ಟಿ-ಕ್ಯಾಪ್ ಮ್ಯೂಚುವಲ್ ಫಂಡ್

1. ಮಿಡ್-ಕ್ಯಾಪ್, ಮಲ್ಟಿ-ಕ್ಯಾಪ್ ಮ್ಯೂಚುವಲ್ ಫಂಡ್

ಉತ್ತಮ ರಿಟರ್ನ್ ಗಳಿಗಾಗಿ 1 ಲಕ್ಷ ರೂ.ಗಳನ್ನು ಹೂಡುವ ಮೊತ್ತ ಮೊದಲನೆಯ ಅತ್ಯುತ್ತಮ ಮಾರ್ಗೋಪಾಯವು ಮಿಡ್-ಕ್ಯಾಪ್ ಅಥವಾ ಮಲ್ಟಿ-ಕ್ಯಾಪ್ ಮ್ಯೂಚುವಲ್ ಫಂಡ್ ಗಳಾಗಿವೆ. ಇಂತಹ ಮ್ಯೂಚುವಲ್ ಫಂಡ್ ಗಳಲ್ಲಿ ಹೂಡುವ ವಿಚಾರವು ರಿಸ್ಕ್ ನಿಂದ ಕೂಡಿರುವಂತಹದ್ದಾಗಿದ್ದು, ಈ ಯೋಜನೆಯು ಬಹುಶ: ಎಲ್ಲರಿಗೂ ಹೇಳಿಮಾಡಿಸಿದಂತಹದ್ದಲ್ಲ. ರಿಸ್ಕ್ ಅನ್ನು ಜೀರ್ಣಿಸಿಕೊಳ್ಳುವ ನಿಮ್ಮ ಸಾಮರ್ಥ್ಯವು ಸಮ್ಮತಿಸಿದಲ್ಲಿ, ಸಿಪ್ ಮಾರ್ಗದ ಮೂಲಕ ಈ ಫಂಡ್ ಗಳಲ್ಲಿ ಹೂಡುವ ಕುರಿತು ನೀವು ಯೋಚಿಸಬಹುದು.

ಈ ವಿಧದ ಮ್ಯೂಚುವಲ್ ಫಂಡ್ ಗಳಿಂದ ನೀವು ಶೇ. 12 ರಿಂದ ಶೇ. 18 ರವರೆಗಿನ ರಿಟರ್ನ್ ಅನ್ನು ನಿರೀಕ್ಷಿಸಬಹುದು.

2. ಇಎಲ್ಎಸ್ಎಸ್ (ELSS)

2. ಇಎಲ್ಎಸ್ಎಸ್ (ELSS)

ನಿಮ್ಮ 80C ಯ ಮಿತಿಯನ್ನು ನೀವು ಪೂರ್ಣವಾಗಿ ಬಳಸಿಕೊಳ್ಳದೇ ಇದ್ದಲ್ಲಿ, ನಿಮಗಾಗಿ 1 ಲಕ್ಷ ರೂ.ಗಳನ್ನು ಹೂಡುವ ಅತ್ಯುತ್ತಮ ಮಾರ್ಗೋಪಾಯವು ಇಎಲ್ಎಸ್ಎಸ್ ಆಗಿದೆ. ತೆರಿಗೆಯನ್ನು ಉಳಿಸುವ ನಿಟ್ಟಿನಲ್ಲಿ ಅತ್ಯಂತ ಜನಪ್ರಿಯವಾದ ಹೂಡಿಕಾ ಆಯ್ಕೆಗಳ ಪೈಕಿ ಇಎಲ್ಎಸ್ಎಸ್ ಕೂಡಾ ಒಂದಾಗಿದೆ. ನೀವು ಹೂಡಿದ ಬಂಡವಾಳದ ಮೌಲ್ಯವರ್ಧನೆಯನ್ನು ಆನಂದಿಸುವುದರ ಜೊತೆಗೆ, ತೆರಿಗೆಯಿಂದಲೂ ಪಾರಾಗುವಂತಹ ಒಟ್ಟು ಎರಡು ವಿಧದ ಪ್ರಯೋಜನಗಳನ್ನು ಇಎಲ್ಎಸ್ಎಸ್ ನಿಮಗೆ ಕೊಡಮಾಡುತ್ತದೆ. ಆದಾಗ್ಯೂ, ಇಎಲ್ಎಸ್ಎಸ್ ಮೂರು ವರ್ಷಗಳ ಲಾಕ್-ಇನ್ ಅವಧಿಯನ್ನು ಒಳಗೊಂಡಿರುತ್ತದೆ. ಅರ್ಥಾತ್ ಮೂರು ವರ್ಷಗಳು ಪೂರ್ಣಗೊಳ್ಳುವವರೆಗೂ ನೀವು ಇಎಲ್ಎಸ್ಎಸ್ ನಲ್ಲಿ ಹೂಡಿದ ಹಣದ ಕುರಿತು ಯೋಚಿಸುವಂತಿಲ್ಲ. ಇಎಲ್ಎಸ್ಎಸ್ 10% ರಿಂದ 12% ವರೆಗಿನ ವ್ಯಾಪ್ತಿಯಲ್ಲಿ ರಿಟರ್ನ್ ಗಳನ್ನು ಕೊಡಬಲ್ಲದು.

3. ಬ್ಯಾಲೆನ್ಸ್ ಫಂಡ್
 

3. ಬ್ಯಾಲೆನ್ಸ್ ಫಂಡ್

ಒಂದು ಲಕ್ಷ ರೂಪಾಯಿ ಹೂಡುವುದಕ್ಕಾಗಿ ಬ್ಯಾಲೆನ್ಸ್ ಫಂಡ್ ಹೂಡಿಕೆಯ ಮುಂದಿನ ಆಯ್ಕೆಯಾಗಿದೆ. ಸುರಕ್ಷಿತವಾದ ಹಾಗೂ ಮಧ್ಯಮ ಪ್ರಮಾಣದ ರಿಟರ್ನ್ ಗಳನ್ನು ಎದುರು ನೋಡುತ್ತಿರುವವರಿಗಾಗಿ ಬ್ಯಾಲೆನ್ಸ್ ಮ್ಯೂಚುವಲ್ ಫಂಡ್, ಹೂಡಿಕೆಯ ಅತ್ಯುತ್ತಮ ಆಯ್ಕೆಯಾಗಿದೆ. ಹೆಸರೇ ಸೂಚಿಸುವಂತೆ, ಬ್ಯಾಲೆನ್ ಫಂಡ್ ಸಮತೋಲನದ ತತ್ವವನ್ನು ಅನುಸರಿಸುತ್ತದೆ. ಹೂಡಿಕೆದಾರರು ಫಂಡ್ ಗಳನ್ನು ವಿಭಜಿಸಿ ಇಕ್ವಿಟಿ ಮತ್ತು ಡೆಬ್ಟ್ ಗಳೆರಡರಲ್ಲೂ ಹೂಡುತ್ತಾರೆ. ಹೀಗಾಗಿ ಬ್ಯಾಲೆನ್ಸ್ ಮ್ಯೂಚುವಲ್ ಫಂಡ್ ಗಳಲ್ಲಿ ತೊಡಗಿಸುವುದರ ಮೂಲಕ ನೀವು ಎರಡು ವಿಭಿನ್ನ ಆಯಾಮಗಳ ಅತ್ಯುತ್ತಮವಾದವುಗಳನ್ನು ಆನಂದಿಸಬಹುದು.

ಬ್ಯಾಲೆನ್ಸ್ ಮ್ಯೂಚುವಲ್ ಫಂಡ್ ಗಳು ಶೇ. 10 ರಿಂದ ಶೇ. 13 ರ ವ್ಯಾಪ್ತಿಯಲ್ಲಿ ರಿಟರ್ನ್ ಅನ್ನು ಹುಟ್ಟು ಹಾಕಬಲ್ಲವು.

4. ಎಫ್ಎಂಪಿ ಅಥವಾ ಡೆಬ್ಟ್ ಫಂಡ್

4. ಎಫ್ಎಂಪಿ ಅಥವಾ ಡೆಬ್ಟ್ ಫಂಡ್

ಒಂದು ವೇಳೆ ಬಂಡವಾಳದ ಸುರಕ್ಷತೆಯೇ ನಿಮಗೆ ಮುಖ್ಯವಾಗಿದ್ದಲ್ಲಿ ಹಾಗೂ ನೀವು ಈಗಾಗಲೇ 80C ಯ ಮಿತಿಯನ್ನು ಪೂರ್ಣವಾಗಿ ಬಳಸಿಕೊಂಡಿದ್ದಲ್ಲಿ, ಎಫ್ಎಂಪಿ (ಫಿಕ್ಸ್ಡ್ ಮೆಚ್ಯೂರಿಟಿ ಪ್ಲ್ಯಾನ್) ಮತ್ತು ಡೆಟ್ ಫಂಡ್ ಗಳು ನಿಮಗೆ ಆದರ್ಶಪ್ರಾಯದವುಗಳಾಗಿರುತ್ತವೆ. ಕಾಲಾವಧಿಯ ದೃಷ್ಟಿಯಿಂದ ಎಫ್ಎಂಪಿ ಒಂದು ಬಗೆಯ ಸ್ಥಿರ ಠೇವಣಿಯಂತೆಯೇ ಕಂಡುಬರುತ್ತದೆಯಾದರೂ ಸಹ, ಖಚಿತ ರಿಟರ್ನ್ ಗಳ ಆಧಾರದ ಮೇಲೆ ಇದು ಸ್ಥಿರ ಠೇವಣಿಗಿಂತ ವಿಭಿನ್ನ ಸ್ವರೂಪದ್ದಾಗಿರುತ್ತದೆ. ಎಫ್ಎಂಪಿಗಳು ಕ್ಲೋಸ್ಡ್-ಎಂಡೆಡ್ ಯೋಜನೆಗಳಾಗಿವೆ. ಮತ್ತೊಂದೆಡೆ, ಈ ಡೆಟ್ ಫಂಡ್ ಗಳು ಖಚಿತ ಆದಾಯದ ವಿತ್ತೀಯ ಉಪಕರಣಗಳಲ್ಲಿ ಮತ್ತು ಸರಕಾರೀ ಸೆಕ್ಯೂರಿಟಿಗಳಲ್ಲಿ ಪ್ರಮುಖವಾಗಿ ಹೂಡಿಕೆ ಮಾಡುತ್ತವೆ.

ಎಫ್ಎಂಪಿ ಅಥವಾ ಡೆಟ್ ಫಂಡ್ ನಿಂದ ನೀವು ಶೇ. 9 ರಿಂದ ಶೇ. 10 ರ ವ್ಯಾಪ್ತಿಯಲ್ಲಿ ರಿಟರ್ನ್ ಗಳನ್ನು ನಿರೀಕ್ಷಿಸಬಹುದು.

5. ಈಕ್ವಿಟಿ

5. ಈಕ್ವಿಟಿ

ಒಂದು ಲಕ್ಷ ರೂಪಾಯಿಗಳನ್ನು ಹೂಡುವ ನಿಟ್ಟಿನಲ್ಲಿ ಈಕ್ವಿಟಿ ಹೂಡಿಕೆಯು ಅತ್ಯುತ್ತಮವಾದ ಮಾರ್ಗೋಪಾಯಗಳ ಪೈಕಿ ಒಂದಾಗಿದೆ. ಈಕ್ವಿಟಿಯಲ್ಲಿನ ಹೂಡಿಕೆಯು ಸಾಟಿಯಿಲ್ಲದಷ್ಟು ಗರಿಷ್ಟ ಮಟ್ಟದ ರಿಟರ್ನ್ ಗಳನ್ನು ತಂದುಕೊಡಬಲ್ಲದು. ಆದಾಗ್ಯೂ, ಈಕ್ವಿಟಿಯಲ್ಲಿನ ಹೂಡಿಕೆಯು ಬಲು ಅಪಾಯಕಾರಿಯಾಗಿದ್ದು, ಅಂತಿಮವಾಗಿ ನೀವು ಹೂಡಿದ ಹಣವನ್ನು ಕಳೆದುಕೊಳ್ಳುವ ಸಂಭವವೂ ಎದುರಾಗಬಹುದು. ಹೀಗಾಗಿ ಈಕ್ವಿಟಿಯು ಅತ್ಯಂತ ಅಪಾಯಕಾರಿಯಾದ ಮತ್ತು ಹಾಗೇನೇ ಅತ್ಯುತ್ತಮ ರಿಟರ್ನ್ ಅನ್ನು ತಂದುಕೊಡುವ ಆಟವೇ ಸರಿ.
'ಏನಾದರಾಗಲಿ ಒಂದು ಕೈ ನೋಡಿಯೇ ಬಿಡುವ' ಎಂಬ ಮನೋಭಾವವಿರುವ ಹೂಡಿಕೆದಾರರಿಗೆ ಹೂಡಿಕೆಯ ಈ ಆಯ್ಕೆಯು ಹೇಳಿ ಮಾಡಿಸಿದಂತಹದ್ದು. ಸ್ಟಾಕ್ ನ ವಿವೇಚನಾಯುಕ್ತ ಆಯ್ಕೆ ಹಾಗೂ ಹೂಡಿಕೆಯ ಕ್ಲಪ್ತ ಸಮಯದ ಆಯ್ಕೆ ಇವೆರಡೂ ಈಕ್ವಿಟಿಯ ಹೂಡಿಕೆಯಲ್ಲಿ ನಿರ್ಣಾಯಕ ಪಾತ್ರವಹಿಸುತ್ತವೆ. ಸ್ಟಾಕ್ ಮಾರುಕಟ್ಟೆಯಲ್ಲಿನ ಹೂಡಿಕೆಯು ಅತಿಯಾದ ಜಾಗರೂಕತೆ ಮತ್ತು ಸಾಕಷ್ಟು ಜ್ಞಾನವನ್ನು ಬೇಡುತ್ತವೆ.

6. ಸಾರ್ವಜನಿಕ ಭವಿಷ್ಯ ನಿಧಿ

6. ಸಾರ್ವಜನಿಕ ಭವಿಷ್ಯ ನಿಧಿ

ದೀರ್ಘಕಾಲೀನ ದೃಷ್ಟಿಕೋನದಿಂದ, ಸಾರ್ವಜನಿಕ ಭವಿಷ್ಯ ನಿಧಿಯು ತೆರಿಗೆ ಉಳಿಸುವ ಅತ್ಯುತ್ತಮ ಹೂಡಿಕೆಯ ಆಯ್ಕೆಗಳ ಪೈಕಿ ಒಂದಾಗಿದೆ. ಪಿಪಿಎಫ್ ನಿಧಾನಗತಿಯಲ್ಲಿ, ಏಕ ಪ್ರಕಾರವಾದ ಹಾಗೂ ಸುರಕ್ಷಿತವಾದ ಆದಾಯವನ್ನು ಗಳಿಸಿಕೊಡುತ್ತದೆ. ಪಿಪಿಎಫ್ ಖಾತೆಯನ್ನು ನೀವು ಯಾವುದೇ ಬ್ಯಾಂಕ್ ನಲ್ಲಿಯೂ ತೆರೆಯಬಹುದು. ಪಿಪಿಎಫ್ ಖಾತೆಯ ಅವಧಿಯು 15 ವರ್ಷಗಳಾಗಿರುತ್ತವೆ ಹಾಗೂ ಅದನ್ನು ಮತ್ತೂ 5 ವರ್ಷಗಳ ಅವಧಿಯವರೆಗೆ ವಿಸ್ತರಿಸಬಹುದು. ಪಿಪಿಎಫ್ ಖಾತೆಗೆ ಪ್ರಸ್ತುತ ಅನ್ವಯವಾಗುವ ಬಡ್ಡಿಯ ದರವು ಶೇ. 7.60 ಆಗಿರುತ್ತದೆ.

7. ಸುಕನ್ಯಾ ಸಮೃದ್ಧಿ ಯೋಜನೆ

7. ಸುಕನ್ಯಾ ಸಮೃದ್ಧಿ ಯೋಜನೆ

ಸುಕನ್ಯಾ ಸಮೃದ್ಧಿ ಯೋಜನೆಯು ಹೆಣ್ಣು ಮಗುವಿಗಾಗಿ ಸರ್ಕಾರಿ ಪ್ರಾಯೋಜಿತ ಉಳಿತಾಯ ಯೋಜನೆಯಾಗಿದೆ. ಸುಕನ್ಯಾ ಸಮೃದ್ಧಿ ಖಾತೆಯನ್ನು ನೀವು ಯಾವುದೇ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ತೆರೆಯಬಹುದು. ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯ ಕಾಲಾವಧಿಯು ಖಾತೆಯನ್ನು ತೆರೆದ ದಿನಾಂಕದಿಂದ 21 ವರ್ಷಗಳದ್ದಾಗಿರುತ್ತದೆ. ಈ ಖಾತೆಯಲ್ಲಿ ನೀವು ಹಣವನ್ನು 14 ವರ್ಷಗಳವರೆಗೆ ಠೇವಣಿ ಇರಿಸಬೇಕಾಗುತ್ತದೆ. ಹೆಣ್ಣು ಮಗುವಿನ ಹೆಸರಿನಲ್ಲಿ ಈ ಖಾತೆಯನ್ನು ತೆರೆಯಬಹುದಾಗಿದೆ. ಹೆಣ್ಣು ಮಗುವಿನ ವಯಸ್ಸು 10 ವರ್ಷಗಳಿಗಿಂತ ಕೆಳಗಿರಬೇಕು. ಸುಕನ್ಯಾ ಸಮೃದ್ಧಿ ಯೋಜನೆ ಖಾತೆಗೆ ಅನ್ವಯಿಸುವ ಪ್ರಸ್ತುತ ಬಡ್ಡಿಯ ದರವು ಶೇ. 8.1 ಆಗಿರುತ್ತದೆ.

8. ಬ್ಯಾಂಕ್ ಸ್ಥಿರ ಠೇವಣಿ ಮತ್ತು ತೆರಿಗೆ ಉಳಿತಾಯದ ಠೇವಣಿ

8. ಬ್ಯಾಂಕ್ ಸ್ಥಿರ ಠೇವಣಿ ಮತ್ತು ತೆರಿಗೆ ಉಳಿತಾಯದ ಠೇವಣಿ

ಹೆಚ್ಚು ರಿಸ್ಕ್ ಬಯಸದ ನೀವು ಸಾಂಪ್ರದಾಯಿಕ ಹೂಡಿಕೆದಾರರಾಗಿದ್ದಲ್ಲಿ ಹಾಗೂ ಸಣ್ಣ ಪ್ರಮಾಣದ ರಿಟರ್ನ್ ಕಾಣಬಲ್ಲವರಾದಲ್ಲಿ, ನೀವು 1 ಲಕ್ಷ ರೂಪಾಯಿಗಳನ್ನು ಬ್ಯಾಂಕ್ ನ ಸ್ಥಿರ ಠೇವಣಿಯಲ್ಲಿ ಹೂಡುವ ಬಗ್ಗೆ ಯೋಚಿಸಿರಿ. ಬ್ಯಾಂಕ್ ಸ್ಥಿರ ಠೇವಣಿಗಳು ಹೂಡಿಕೆದಾರರಿಗೆ ನಿಶ್ಚಿತ ರಿಟರ್ನ್ ಗಳನ್ನು ಗಳಿಸಿಕೊಡುತ್ತವೆ. ನಿರಖು ಠೇವಣಿಯ ಕಾಲಾವಧಿಯು 7, 15, 30, 45 ದಿನಗಳಿಂದ ಮೊದಲ್ಗೊಂಡು 3, 6 ತಿಂಗಳುಗಳು, 1 ವರ್ಷ, 1.5 ವರ್ಷಗಳು ಮತ್ತು 5 ವರ್ಷಗಳವರೆಗೆ ವ್ಯತ್ಯಯಗೊಳ್ಳಬಹುದು. ಬಡ್ಡಿಯ ದರವು ಠೇವಣಿಯ ಕಾಲಾವಧಿಯ ಮೇಲೆ ಅವಲಂಬಿತವಾಗಿರುತ್ತದೆ ಮತ್ತು ಬ್ಯಾಂಕ್ ನಿಂದ ಬ್ಯಾಂಕ್ ಗೆ ವ್ಯತ್ಯಯಗೊಳ್ಳುತ್ತದೆ. ಇಲ್ಲಿ ನೆನಪಿಟ್ಟುಕೊಳ್ಳಬೇಕಾದ ಒಂದು ಸಂಗತಿಯೇನೆಂದರೆ, ಸ್ಥಿರ ಠೇವಣಿಯು ಗಳಿಸುವ ಬಡ್ಡಿ ಹಣವು ಆದಾಯ ತೆರಿಗೆಗೆ ಒಳಪಡುತ್ತದೆ. ಒಂದು ವೇಳೆ ನೀವು ನಿಮ್ಮ 80C ಮಿತಿಯನ್ನು ಪೂರ್ಣವಾಗಿ ಬಳಸಿಕೊಳ್ಳದೇ ಇದ್ದಲ್ಲಿ, ನೀವು ತೆರಿಗೆ ಉಳಿತಾಯದ ಠೇವಣಿಯಲ್ಲಿ ಹೂಡುವುದಕ್ಕೆ ಯೋಚಿಸಬಹುದು. ಆದಾಗ್ಯೂ, ಈ ಠೇವಣಿಯು 5 ವರ್ಷಗಳ ಲಾಕ್-ಇನ್ ಅವಧಿಯನ್ನು ಒಳಗೊಂಡಿರುತ್ತದೆ.

9. ಕರಮುಕ್ತ ಬಾಂಡ್ ಗಳು

9. ಕರಮುಕ್ತ ಬಾಂಡ್ ಗಳು

1 ಲಕ್ಷ ರೂ.ಗಳನ್ನು ಹೂಡುವುದಕ್ಕಾಗಿ ಲಭ್ಯವಿರುವ ಮುಂದಿನ ಆಯ್ಕೆಯು ಕರಮುಕ್ತ ಬಾಂಡ್ ಗಳಾಗಿವೆ. ಕರಮುಕ್ತ ಬಾಂಡ್ ಹೂಡಿಕೆಯ ಮೇಲೆ ಉತ್ತಮ ಆದಾಯ ಪಡೆಯುವ ಸುರಕ್ಷಿತವಾದ ಮಾರ್ಗೋಪಾಯವಾಗಿದ್ದರೂ ಸಹ, ಸ್ಥಿರ ಠೇವಣಿಗಳಷ್ಟು ಉತ್ತಮವಲ್ಲ. ದೇಶದ ಮೂಲಸೌಕರ್ಯಗಳ ನಿರ್ಮಾಣದ ವಿಚಾರದಲ್ಲಿ ಸರಕಾರಕ್ಕೆ ತೀರಾ ಬೇಕಾದ ಸಂಸ್ಥೆಗಳಾಗಿರುವುದರಿಂದ, ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ (ಎನ್.ಹೆಚ್.ಎ.ಐ) ಮತ್ತು ಪವರ್ ಫೈನಾನ್ಸ್ ಕಾರ್ಪೋರೇಷನ್ ಗಳಂತಹ ಅಂಗ ಸಂಸ್ಥೆಗಳು ಕರಮುಕ್ತ ಬಾಂಡ್ ಗಳನ್ನು ಜನತೆಗೆ ಒದಗಿಸುವ ಅಧಿಕಾರವುಳ್ಳವುಗಳಾಗಿವೆ.

ಕರಮುಕ್ತ ಬಾಂಡ್ ಗಳಲ್ಲಿ ಹೂಡುವ ಹಣವು 15 ವರ್ಷಗಳವರೆಗೆ ಲಾಕ್ ಆಗಿರುತ್ತವೆ. ನನ್ನ ಪ್ರಕಾರ, ನಿಮ್ಮಲ್ಲಿ ಹೆಚ್ಚಾದ ಹಣವಿದ್ದಲ್ಲಿ, ನೀವು ಈ ಹೂಡಿಕಾ ಆಯ್ಕೆಯ ಕುರಿತಾಗಿ ಯೋಚಿಸಬಹುದು. ಈ ಆಯ್ಕೆಯು 15 ವರ್ಷಗಳವರೆಗೆ ಪ್ರತೀ ವರ್ಷವೂ 8.2% ರಿಂದ 8.3% ರವರೆಗಿನ ನಿರಪೇಕ್ಷ ಆದಾಯ ಗಳಿಸಿಕೊಡುತ್ತವೆ.

10. ಚಿನ್ನ

10. ಚಿನ್ನ

1 ಲಕ್ಷ ರೂಪಾಯಿಗಳನ್ನು ಹೂಡುವುದಕ್ಕಾಗಿ ಲಭ್ಯವಿರುವ ಕೊನೆಯ ಆಯ್ಕೆಯು ಚಿನ್ನವಾಗಿದೆ. ಎಲ್ಲಾ ವಿಧವಾದ ರಾಷ್ಟ್ರೀಯ, ರಾಜಕೀಯ ಮತ್ತು ಸಾಂಸ್ಕೃತಿಕ ಸಂಕಷ್ಟ ಪರಿಸ್ಥಿತಿಗಳ ವಿರುದ್ಧ ಚಿನ್ನವನ್ನು ಸುರಕ್ಷಿತ ಸ್ವರ್ಗವೆಂದೇ ಪರಿಗಣಿಸಲಾಗಿದೆ. ಹಿಂದೆಯೂ ಚಿನ್ನವು ಬೃಹತ್ ಪ್ರಮಾಣದ ರಿಟರ್ನ್ ಅನ್ನು ತಂದುಕೊಟ್ಟಿತ್ತು ಹಾಗೂ ಮುಂದೆಯೂ ಚಿನ್ನದ ಮೌಲ್ಯವು ವೃದ್ಧಿಗೊಳ್ಳುತ್ತಲೇ ಸಾಗುವುದೆಂದು ನಮ್ಮ ನಿರೀಕ್ಷೆ. ನಾನಿಲ್ಲಿ ನಿರ್ಧಿಷ್ಟವಾಗಿ ಹೇಳುವುದೇನೆಂದರೆ, ಚಿನ್ನದ ಮೇಲಿನ ಹೂಡಿಕೆಯು ನಿಮ್ಮ ಪೋರ್ಟ್ ಪೋಲಿಯೋದ ಶೇ. 20 ರಷ್ಟನ್ನು ದಾಟಬಾರದು. ನೀವು ಚಿನ್ನದಲ್ಲಿ ಎರಡು ರೂಪಗಳಲ್ಲಿ ಹೂಡಬಹುದು.
1. ಭೌತಿಕ ಚಿನ್ನ - ಆಭರಣ, ನಾಣ್ಯ, ಅಥವಾ ಬಿಸ್ಕತ್ತು, 2.ಭೌತಿಕವಲ್ಲದ ಚಿನ್ನ - ಗೋಲ್ಡ್ ಇಟಿಎಫ್

ಗಮನಿಸಿ

ಗಮನಿಸಿ

ಎಲ್ಲಾ ಮೊಟ್ಟೆಗಳನ್ನೂ ಒಂದೇ ಬುಟ್ಟಿಯಲ್ಲಿ ಹಾಕಿಡುವುದು ತರವಲ್ಲ. ನಿಮ್ಮ ಮೂಲ ಬಂಡವಾಳವನ್ನು ಹಲವು ಭಾಗಗಳಾಗಿ ವಿಂಗಡಿಸಿ ಅವುಗಳನ್ನು ನಿಮ್ಮ ಆರ್ಥಿಕ ಗುರಿಯ ಆಧಾರದ ಮೇಲೆ ಕೆಲವೇ ಕೆಲವು ಅತ್ಯುತ್ತಮವಾದ ಹೂಡಿಕೆಯ ಆಯ್ಕೆಗಳಲ್ಲಿ ಹೂಡುವುದು ಜಾಣತನ. ಆದಾಗ್ಯೂ, 1 ಲಕ್ಷ ರೂಪಾಯಿಗಳನ್ನು ಎಲ್ಲಿ ಹೂಡುವುದೆಂಬ ಪ್ರಶ್ನೆಗೆ ತಾರ್ಕಿಕವಾಗಿ ಉತ್ತರವನ್ನು ಕಂಡುಕೊಳ್ಳಲು ನೀವು ಎದುರು ನೋಡುತ್ತಿರುವಿರಾದಲ್ಲಿ, 1 ಲಕ್ಷ ರೂಪಾಯಿಗಳನ್ನು ಹೂಡಲು ಇವು ಅತ್ಯುತ್ತಮ ಮಾರ್ಗೋಪಾಯಗಳಾಗಿವೆ ಎನ್ನಬಹುದು.

English summary

10 Best ways to Invest 1 Lakh for good returns

If you want to get a maximum possible return in the realm of safety with some risk. So, here is 10 Best ways to Invest 1 Lakh for good returns.
Story first published: Thursday, May 24, 2018, 10:44 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X