For Quick Alerts
ALLOW NOTIFICATIONS  
For Daily Alerts

ರಕ್ಷಾ ಬಂಧನ ಹಬ್ಬ: ನಿಮ್ಮ ಸಹೋದರಿಗೆ ಈ ಅಮೂಲ್ಯ ಉಡುಗೊರೆ ನೀಡಿ...

ಸಹೋದರ ಹಾಗೂ ಸಹೋದರಿಯರ ಮಧ್ಯದ ಗಟ್ಟಿ ಬಾಂಧವ್ಯದ ಪ್ರತೀಕವೇ ರಕ್ಷಾ ಬಂಧನ ಹಬ್ಬ. ಈ ಶುಭ ದಿನದಂದು ತಂಗಿಯು ತನ್ನ ಸಹೋದರನ ಕೈಗೆ ಪವಿತ್ರವಾದ ರಾಖಿಯನ್ನು ಕಟ್ಟಿ ಆತನಿಗೆ ಜೀವನದಲ್ಲಿ ಸಕಲ ಏಳಿಗೆ ದೊರಕಲೆಂದು ಮನಃಪೂರ್ವಕವಾಗಿ ಹಾರೈಸುತ್ತಾಳೆ.

By Siddu
|

ಸಹೋದರ ಹಾಗೂ ಸಹೋದರಿಯರ ಮಧ್ಯದ ಗಟ್ಟಿ ಬಾಂಧವ್ಯದ ಪ್ರತೀಕವೇ ರಕ್ಷಾ ಬಂಧನ ಹಬ್ಬ. ಈ ಶುಭ ದಿನದಂದು ತಂಗಿಯು ತನ್ನ ಸಹೋದರನ ಕೈಗೆ ಪವಿತ್ರವಾದ ರಾಖಿಯನ್ನು ಕಟ್ಟಿ ಆತನಿಗೆ ಜೀವನದಲ್ಲಿ ಸಕಲ ಏಳಿಗೆ ದೊರಕಲೆಂದು ಮನಃಪೂರ್ವಕವಾಗಿ ಹಾರೈಸುತ್ತಾಳೆ. ಇದಕ್ಕೆ ಪ್ರತಿಯಾಗಿ, ಎಂಥದೇ ಪರಿಸ್ಥಿತಿಯಲ್ಲಿಯೂ ಸಹೋದರಿಯನ್ನು ರಕ್ಷಿಸುವ ವಾಗ್ದಾನವನ್ನು ಸಹೋದರ ನೀಡುತ್ತಾನೆ. ಅಷ್ಟೇ ಅಲ್ಲದೆ ಸಹೋದರಿಯ ಮೇಲಿನ ಪ್ರೀತಿಯ ದ್ಯೋತಕವಾಗಿ ಉಡುಗೊರೆಯನ್ನು ಸಹ ನೀಡುತ್ತಾನೆ.

ಸಾಮಾನ್ಯವಾಗಿ ರಕ್ಷಾ ಬಂಧನ ದಿನದಂದು ಸಹೋದರರು ಹಣ, ಒಡವೆ, ಬಟ್ಟೆ, ಮೊಬೈಲ್, ಸ್ವೀಟ್ ಬಾಕ್ಸ್ ಮುಂತಾದ ಉಡುಗೊರೆಗಳನ್ನು ತಮ್ಮ ಸಹೋದರಿಯರಿಗೆ ನೀಡುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಹಲವಾರು ಹಣಕಾಸು ಉಳಿತಾಯ ಯೋಜನೆ, ಮ್ಯೂಚುವಲ್ ಫಂಡ್, ವಿಮಾ ಸುರಕ್ಷೆ ಹೀಗೆ ವಿಭಿನ್ನ ರೀತಿಯ, ಸಹೋದರಿಯ ಭವಿಷ್ಯದ ಜೀವನದಲ್ಲಿ ಆರ್ಥಿಕವಾಗಿ ಸಹಾಯವಾಗಬಲ್ಲ ಗಿಫ್ಟ್‌ಗಳನ್ನು ಸಹ ಸಹೋದರರು ತಮ್ಮ ಸಹೋದರಿಯರಿಗೆ ನೀಡುತ್ತಿದ್ದಾರೆ. ರಕ್ಷಾ ಬಂಧನ: ಸಹೋದರಿಗಾಗಿ 8 ಅಮೂಲ್ಯ ಉಡುಗೊರೆ ಕೊಡಬಹುದು

ಅಂಥ ಯಾವ ವಿಶಿಷ್ಟ ಗಿಫ್ಟ್ ಅನ್ನು ಈ ಬಾರಿಯ ರಾಖಿ ಬಂಧನ ದಿನದಂದು ನೀವು ನಿಮ್ಮ ಸಹೋದರಿಗೆ ನೀಡಬಹುದು ಎಂದು ತಿಳಿಯುವ ಕುತೂಹಲ ನಿಮಗಿರಬಹುದು.
ಅದಕ್ಕಾಗಿ 10 ರೀತಿಯ ವಿಶಿಷ್ಟವಾದ ಉಡುಗೊರೆಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

1. ಮ್ಯೂಚುವಲ್ ಫಂಡ್ ಸಿಪ್

1. ಮ್ಯೂಚುವಲ್ ಫಂಡ್ ಸಿಪ್

ಮ್ಯೂಚುವಲ್ ಫಂಡ್ ಸಿಪ್, ಇದು ನೀವು ನಿಮ್ಮ ಸಹೋದರಿಗೆ ಕೊಡಬಹುದಾದ ಅತ್ಯಂತ ಉತ್ತಮ ಉಡುಗೊರೆಯಾಗಿದೆ. ಸಹೋದರಿಯ ಭವಿಷ್ಯದ ಜೀವನದ ಕನಸು ಸಾಕಾರಗೊಳಿಸಲು ಸಿಪ್ ಸಹಕಾರಿಯಾಗಿದೆ. ವ್ಯಾಪಾರ, ಉದ್ದಿಮೆ ಆರಂಭಿಸುವುದು ಅಥವಾ ವಿದೇಶ ಪ್ರಯಾಣ ಕೈಗೊಳ್ಳುವುದು ಹೀಗೆ ಸಹೋದರಿಯ ಯಾವುದೇ ಕನಸು ನನಸಾಗಿಸಲು ಎಸ್‌ಐಪಿ ಹೂಡಿಕೆಯ ಉಡುಗೊರೆ ಸೂಕ್ತವಾಗಿದೆ. ಇದು ಹಣವನ್ನು ಬೆಳೆಸುವ ಕ್ರಮಬದ್ಧ ಯೋಜನೆಯಾಗಿದೆ.
ಸಾಂಪ್ರದಾಯಿಕ ಉಡುಗೊರೆಗಳಿಗಿಂತ ಈ ಎಸ್‌ಐಪಿ ಉಡುಗೊರೆ ನೀಡುವುದು ಉತ್ತಮ. ಕನಿಷ್ಠ 500 ರೂಪಾಯಿಗಳಿಂದ ಸಿಪ್ ಯೋಜನೆಯನ್ನು ಆರಂಭಿಸಿ ನಿಧಾನವಾಗಿ ಬೆಳೆಸುತ್ತ ಹೋಗಬಹುದು.

2. ಫಿಕ್ಸೆಡ್ ಡೆಪಾಸಿಟ್

2. ಫಿಕ್ಸೆಡ್ ಡೆಪಾಸಿಟ್

ಬ್ಯಾಂಕಿನಲ್ಲಿ ನಿರ್ದಿಷ್ಟ ಮೊತ್ತವನ್ನು ತಂಗಿಯ ಹೆಸರಲ್ಲಿ ಫಿಕ್ಸೆಡ್ ಡೆಪಾಸಿಟ್ ಮಾಡುವುದು ಮತ್ತೊಂದು ವಿಶಿಷ್ಟ ಗಿಫ್ಟ್ ಆಗಿದೆ. ನಗದು ನೀಡುವುದಕ್ಕಿಂತ ಫಿಕ್ಸೆಡ್ ಡೆಪಾಸಿಟ್ ಉತ್ತಮ ಆಯ್ಕೆಯಾಗಿದೆ. ಇದರಲ್ಲಿ ಹೂಡಿದ ಹಣಕ್ಕೆ ಉತ್ತಮ ಬಡ್ಡಿ ದೊರಕುವುದರೊಂದಿಗೆ, ಸುರಕ್ಷತೆಯೂ ಇರುತ್ತದೆ. ಯಾವುದಾದರೂ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಸಹೋದರಿಯ ಹೆಸರಲ್ಲಿ ಫಿಕ್ಸೆಡ್ ಡೆಪಾಸಿಟ್ ಮಾಡಿಸಬಹುದು.

3. ಈಕ್ವಿಟಿ

3. ಈಕ್ವಿಟಿ

ಈಕ್ವಿಟಿ ಅಂದರೆ ಕಂಪನಿಯ ಶೇರುಗಳನ್ನೇ ಗಿಫ್ಟ್ ಆಗಿ ಸಹೋದರಿಗೆ ನೀಡುವುದು ಮತ್ತೊಂದು ಪ್ರಮುಖ ಉಡುಗೊರೆಯಾಗಿದೆ. ಶೇರು ಮಾರುಕಟ್ಟೆಯಲ್ಲಿ ಆರ್ಥಿಕ ರಿಸ್ಕ್ ಇದ್ದರೂ, ಅತ್ಯುತ್ತಮ ಕಂಪನಿಯ ಶೇರುಗಳನ್ನು ತಂಗಿಗೆ ನೀಡುವುದರಲ್ಲಿ ತಪ್ಪೇನೂ ಇಲ್ಲ. ದೀರ್ಘಾವಧಿಯಲ್ಲಿ ಈ ಶೇರುಗಳು ಉತ್ತಮ ಆದಾಯವನ್ನು ಗಳಿಸುವುದರಿಂದ ಇದು ಅಮೂಲ್ಯವಾದ ಉಡುಗೊರೆಯಾಗಿದೆ. ಈಗಾಗಲೇ ನಿಮ್ಮ ಡಿಮ್ಯಾಟ್ ಅಕೌಂಟಿನಲ್ಲಿರುವ ಶೇರುಗಳನ್ನು ಸಹೋದರಿಗೆ ವರ್ಗಾಯಿಸಬಹುದು ಅಥವಾ ಹೊಸ ಶೇರುಗಳನ್ನು ಕೊಳ್ಳಬಹುದು.

4. ಚಿನ್ನದ ಇಟಿಎಫ್ (Gold Exchange Traded Fund)

4. ಚಿನ್ನದ ಇಟಿಎಫ್ (Gold Exchange Traded Fund)

ಹೂಡಿಕೆ ಮಾಡಲು ಚಿನ್ನವು ಭಾರತೀಯರ ಅಚ್ಚುಮೆಚ್ಚಿನ ಆಯ್ಕೆಯಾಗಿರುವುದು ಗೊತ್ತೇ ಇದೆ. ಕಷ್ಟದ ಸ್ಥಿತಿಗಳಲ್ಲಿ ಚಿನ್ನವು ಯಾವಾಗಲೂ ಸಹಾಯಕ್ಕೆ ಬರುತ್ತದೆ. ಹೀಗಾಗಿ ಚಿನ್ನದ ಮೇಲೆ ಸಹೋದರಿಯ ಹೆಸರಲ್ಲಿ ಹೂಡಿಕೆ ಮಾಡುವುದರಿಂದ ಅವಳ ಭವಿಷ್ಯದ ಜೀವನಕ್ಕೆ ಆರ್ಥಿಕ ಸುಭದ್ರತೆ ನೀಡಬಹುದಾಗಿದೆ. ಪ್ರಸ್ತುತ ಚಿನ್ನದ ಮೇಲೆ ಹೂಡಿಕೆ ಮಾಡಲು ಅತ್ಯಂತ ಪ್ರಶಸ್ತವಾಗಿರುವ ಗೋಲ್ಡ್ ಇಟಿಎಫ್ ಅನ್ನು ಉಡುಗೊರೆಯಾಗಿ ನೀಡಬಹುದು. ಗೋಲ್ಡ್ ಇಟಿಎಫ್ ಇದು ಚಿನ್ನದ ಮೌಲ್ಯದ ಮೇಲೆ ಆಧರಿತವಾಗಿರುವ ಮುಕ್ತ ಫಂಡ್ ಆಗಿದೆ. ಒಂದು ಇಟಿಎಫ್‌ನ ಮೌಲ್ಯ ಒಂದು ಗ್ರಾಂ ಚಿನ್ನಕ್ಕೆ ಸಮನಾಗಿರುತ್ತದೆ. ಈ ಬಾರಿಯ ರಕ್ಷಾಬಂಧನದಂದು ಸಹೋದರಿಗೆ ಗೋಲ್ಡ್ ಇಟಿಎಫ್ ಉಡುಗೊರೆ ನೀಡಲು ಪ್ರಯತ್ನಿಸಿ.

5. ಚಿನ್ನ ಅಥವಾ ಬೆಳ್ಳಿ

5. ಚಿನ್ನ ಅಥವಾ ಬೆಳ್ಳಿ

ಚಿನ್ನ ಅಥವಾ ಬೆಳ್ಳಿಯನ್ನು ರಕ್ಷಾಬಂಧನ ಉಡುಗೊರೆಯಾಗಿ ಸಹೋದರಿಗೆ ನೀಡಬಹುದಾಗಿದೆ. ಇದು ಆಕೆಯ ಜೀವನದಲ್ಲಿ ಹೆಚ್ಚಿನ ಆರ್ಥಿಕ ಭದ್ರತೆಯನ್ನು ನೀಡಬಲ್ಲುದು. ಆಭರಣ ಅಥವಾ ನಾಣ್ಯದ ರೂಪದಲ್ಲಿ ಚಿನ್ನ, ಬೆಳ್ಳಿ ನೀಡಬಹುದು.

6. ಕ್ರಮಬದ್ಧ ಆದಾಯ ಯೋಜನೆ

6. ಕ್ರಮಬದ್ಧ ಆದಾಯ ಯೋಜನೆ

Systematic Withdrawal Plan (SWP) ಎಂದು ಕರೆಯಲಾಗುವ ಕ್ರಮಬದ್ಧ ಆದಾಯ ಯೋಜನೆಯು ನಿಮ್ಮ ಸಹೋದರಿಗೆ ನೀವು ನೀಡಬಹುದಾದ ಅತ್ಯುತ್ತಮ ಗಿಫ್ಟಗಳಲ್ಲೊಂದಾಗಿದೆ. ಇದು ಸಹೋದರಿಗೆ ಒಂದು ನಿಶ್ಚಿತ ಆದಾಯದ ಮೂಲವನ್ನು ಒದಗಿಸುತ್ತದೆ. ಈಗಷ್ಟೇ ವಿವಾಹವಾದ ಸಹೋದರಿಯರಿಗೆ ಈ ಉಡುಗೊರೆ ಅತ್ಯಂತ ಸೂಕ್ತವಾಗಿದೆ. ನಂತರದ ಕಾಲಾವಧಿಯಲ್ಲಿ ಈ ಯೋಜನೆಯಲ್ಲಿ ಎಸ್‌ಐಪಿ ಅನುಸಾರ ಹೂಡಿಕೆ ಮಾಡುವುದು ಹೇಗೆ ಎಂಬುದನ್ನು ನೀವು ತಿಳಿಸಿಕೊಡಬಹುದಾಗಿದೆ.

7. ಸಹೋದರಿಗೆ ಆರೋಗ್ಯ ವಿಮೆ

7. ಸಹೋದರಿಗೆ ಆರೋಗ್ಯ ವಿಮೆ

ಸಹೋದರಿಯ ಹೆಸರಲ್ಲಿ ಆರೋಗ್ಯ ವಿಮೆ ಮಾಡಿಸುವುದು ಮತ್ತೊಂದು ಅತಿ ವಿಶಿಷ್ಟ ಗಿಫ್ಟ್ ಆಗಿದೆ. ಆಕೆಯ ಹೆಸರಲ್ಲಿ ಹೊಸ ಆರೋಗ್ಯ ವಿಮಾ ಪಾಲಿಸಿ ಕೊಳ್ಳಬಹುದು ಅಥವಾ ಈಗಾಗಲೇ ಪಾಲಿಸಿ ಇದ್ದರೆ ಅದನ್ನು ನವೀಕರಿಸಬಹುದು. ಈಗಿನ ಆಧುನಿಕ ಜೀವನ ಶೈಲಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಅತಿ ಪ್ರಮುಖ ಸಂಗತಿಯಾಗಿದೆ. ಹೀಗಾಗಿ ಆರೋಗ್ಯ ವಿಮೆಯ ಗಿಫ್ಟ ನೀಡುವ ಮೂಲಕ ಸಹೋದರಿಯ ಆರೋಗ್ಯದ ಕಾಳಜಿಗೆ ಮುಂದಾಗಬಹುದು.

8. ಸಾಲದ ಹೊರೆ ಕಡಿಮೆ ಮಾಡಿ

8. ಸಾಲದ ಹೊರೆ ಕಡಿಮೆ ಮಾಡಿ

ಯಾವುದೋ ಕಾರಣಕ್ಕೆ ನಿಮ್ಮ ಸಹೋದರಿಯ ಮೇಲೆ ಸಾಲದ ಭಾರ ಇದ್ದಲ್ಲಿ ಅಂಥ ಸಾಲವನ್ನು ಪೂರ್ತಿಯಾಗಿ ಅಥವಾ ಭಾಗಶಃ ತೀರಿಸುವ ಮೂಲಕ ಸಹೋದರಿಗೆ ಜೀವನದಲ್ಲಿ ಮರೆಯಲಾಗದಂಥ ರಕ್ಷಾ ಬಂಧನದ ಉಡುಗೊರೆ ನೀಡಬಹುದಾಗಿದೆ. ನಿಮ್ಮ ಕೈಲಾದಷ್ಟು ಸಾಲದ ಹೊರೆಯನ್ನು ಕಡಿಮೆ ಮಾಡಿದರೆ ಅದೇ ನೀವು ಸಹೋದರಿಗೆ ನೀಡುವ ಅಮೂಲ್ಯ ಉಡುಗೊರೆ. ಜೊತೆಗೆ ಆಕೆಯು ಸಾಲದ ಸುಳಿಯಿಂದ ಪಾರಾಗಲು ಆರ್ಥಿಕ ಪರಿಣಿತರ ಸಹಾಯವನ್ನು ಸಹ ನೀಡಬಹುದು.

9. ಬ್ಯಾಂಕ್ ಖಾತೆ ಮಾಡಿಸಿ

9. ಬ್ಯಾಂಕ್ ಖಾತೆ ಮಾಡಿಸಿ

ನಿಮ್ಮ ಸಹೋದರಿಯು ಇನ್ನೂ ಚಿಕ್ಕವಳಾಗಿದ್ದು, ಬ್ಯಾಂಕ್ ಖಾತೆ ಹೊಂದಿರದಿದ್ದರೆ ಅವಳಿಗೆ ಖಾತೆ ಮಾಡಿಸಿ ಕೊಡುವುದು ಉತ್ತಮ ರಕ್ಷಾಬಂಧನ ಉಡುಗೊರೆಯಾಗಿದೆ. ಈ ಅಕೌಂಟಿನಲ್ಲಿ ನೀವೇ ಆಗಾಗ ಹಣವನ್ನು ಹಾಕಬಹುದು. ಜೊತೆಗೆ ಸಹೋದರಿಗೆ ಬ್ಯಾಂಕಿಂಗ್ ವ್ಯವಹಾರಗಳ ಬಗ್ಗೆ ಜ್ಞಾನವನ್ನು ನೀಡಬಹುದು. ಇದು ಹಣಕಾಸು ನಿರ್ವಹಣೆಯನ್ನು ಸಹ ನಿಮ್ಮ ಸಹೋದರಿಗೆ ತಿಳಿಸಿಕೊಡಲು ಸಹಾಯವಾಗುತ್ತದೆ.

10. ಗಿಫ್ಟ ಕಾರ್ಡ್

10. ಗಿಫ್ಟ ಕಾರ್ಡ್

ಗಿಫ್ಟ ಕಾರ್ಡ್ ನೀಡುವುದು ಅತ್ಯಂತ ಸರಳ ಹಾಗೂ ಸುಲಭವಾದ ಉಡುಗೊರೆಯಾಗಿದೆ. ಯಾವುದೇ ಬ್ಯಾಂಕಿಗೆ ಹೋಗಿ ೫೦೦ ರೂಪಾಯಿಗಳಿಂದ ೫೦ ಸಾವಿರ ರೂಪಾಯಿ ಮೌಲ್ಯದ ಗಿಫ್ಟ್ ಕಾರ್ಡ್ ಅನ್ನು ಖರೀದಿಸಿ ಸಹೋದರಿಗೆ ನೀಡಬಹುದು. ನಿಮ್ಮ ಸಹೋದರಿಗೆ ಶಾಪಿಂಗ್ ಮಾಡುವುದು ಇಷ್ಟದ ಸಂಗತಿಯಾಗಿದ್ದಲ್ಲಿ ಈ ಗಿಫ್ಟ್ ಅವಳಿಗೆ ಸೂಕ್ತವಾಗಿದೆ.

ಕೊನೆ ಮಾತು

ಕೊನೆ ಮಾತು

ಇಲ್ಲಿ ತಿಳಿಸಲಾದ ರಕ್ಷಾ ಬಂಧನ ಉಡುಗೊರೆಯ ಐಡಿಯಾಗಳು ಈ ಬಾರಿಯ ರಕ್ಷಾ ಬಂಧನದಂದು ನಿಮ್ಮ ಉಪಯೋಗಕ್ಕೆ ಬರಬಹುದು. ಇವುಗಳ ಹೊರತಾಗಿ ಇನ್ನೂ ವಿಶಿಷ್ಟವಾದ ರಕ್ಷಾ ಬಂಧನ ಉಡುಗೊರೆ ಐಡಿಯಾಗಳು ನಿಮ್ಮ ಬಳಿ ಇದ್ದರೆ ಕಾಮೆಂಟ್ ಸೆಕ್ಷನ್‌ನಲ್ಲಿ ತಪ್ಪದೇ ಹಂಚಿಕೊಳ್ಳಿ.

Read more about: money savings finance news
English summary

Raksha Bandhan Festival: Give this precious gift to your sister

Raksha Bandhan is a special festival that signifies bonding between brother and sister. On this wonderful day, sister knot a thread.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X