For Quick Alerts
ALLOW NOTIFICATIONS  
For Daily Alerts

ರಕ್ಷಾ ಬಂಧನ: ಸಹೋದರಿಗಾಗಿ 8 ಅಮೂಲ್ಯ ಉಡುಗೊರೆ ಕೊಡಬಹುದು

ರಕ್ಷಾ ಬಂಧನ ಆಚರಣೆಗೆ ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಆದ ಪ್ರಾಧಾನ್ಯತೆ ಇದೆ. ಇದು ಶ್ರಾವಣ ಮಾಸದಲ್ಲಿ ಆಚರಿಸುವ ಹಬ್ಬ. ಆ ದಿನ ಸಹೋದರಿಯರು ತಮ್ಮ ಸಹೋದರನ ಕೈಗೆ ರಾಖಿಯನ್ನು ಕಟ್ಟಿ ಆರತಿ ಮಾಡಿ, ಸೋದರನ ಆಶೀರ್ವಾದ ಮತ್ತು ರಕ್ಷಣೆಯನ್ನು ಬೇಡುತ್

By Siddu Thoravat
|

ರಕ್ಷಾ ಬಂಧನ ಆಚರಣೆಗೆ ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಆದ ಪ್ರಾಧಾನ್ಯತೆ ಇದೆ. ಇದು ಶ್ರಾವಣ ಮಾಸದಲ್ಲಿ ಆಚರಿಸುವ ಹಬ್ಬ. ಆ ದಿನ ಸಹೋದರಿಯರು ತಮ್ಮ ಸಹೋದರನ ಕೈಗೆ ರಾಖಿಯನ್ನು ಕಟ್ಟಿ ಆರತಿ ಮಾಡಿ, ಸೋದರನ ಆಶೀರ್ವಾದ ಮತ್ತು ರಕ್ಷಣೆಯನ್ನು ಬೇಡುತ್ತಾರೆ. ತಂಗಿಯ ರಕ್ಷಣೆ ಅಣ್ಣನಿಂದ, ಅಣ್ಣನ ರಕ್ಷಣೆ ತಂಗಿಯಿಂದ ಎಂಬ ಪರಸ್ಪರ ಭಾತೃತ್ವದ ಭಾವನೆಯನ್ನು ದಟ್ಟಗೊಳಿಸುವ ಹಬ್ಬ ಇದಾಗಿದೆ.

 

ಈ ಹಬ್ಬದ ಸಂದರ್ಭದಲ್ಲಿ ಕೆಲವರು ತಮ್ಮ ಸಹೋದರಿಯರಿಗೆ ತುಂಬಾ ಮೌಲ್ಯ ಮತ್ತು ವಿಶೇಷವಾದ ಗಿಪ್ಟ್ ಗಳನ್ನು ಕೊಡುತ್ತಾರೆ. ಬೆಲೆಬಾಳುವ ವಾಚು, ಆಭರಣ, ಉಡುಗೆ, ಬ್ಯಾಗ್ ಹೀಗೆ ಇನ್ನಿತರ ವಸ್ತುಗಳನ್ನು ಕೊಡುತ್ತಾರೆ. ಆದರೆ ಸಹೋದರಿಯ ಹಣಕಾಸು ಭದ್ರತೆ, ಸುರಕ್ಷತೆ ಮತ್ತು ಹಣಕಾಸು ಸ್ವಾತಂತ್ರ್ಯದ ಬಗ್ಗೆ ಏಕೆ ಚಿಂತನೆ ಮಾಡುವುದಿಲ್ಲ?

ಅದಕ್ಕಾಗಿ ನಿಮ್ಮ ಸಹೋದರಿಯ ಸುರಕ್ಷತೆ ಮತ್ತು ಭದ್ರತೆಗಾಗಿ ಬೇರೆ ಯಾವುದೋ ಕೊಡುಗೆ ಕೊಡುವ ಬದಲು ಹಣಕಾಸು ಗಿಪ್ಟ್ ಗಳನ್ನು ಕೊಟ್ಟರೆ ಚೆಂದ ಅಲ್ಲವೇ?

ಹೀಗಾಗಿ ಈ ರಕ್ಷಾ ಬಂಧನದ ಶುಭ ಘಳಿಗೆಯಲ್ಲಿ ನಿಮ್ಮ ಸಹೋದರಿಗಾಗಿ ನೀವು ಕೊಡುಗೆಯಾಗಿ ಕೊಡಬಹುದಾದ 8 ಹಣಕಾಸು ಗಿಪ್ಟ್ ಗಳ ಮಾಹಿತಿ ಇಲ್ಲಿದೆ ನೋಡಿ.

ಸ್ಥಿರ ಠೇವಣಿ

ಸ್ಥಿರ ಠೇವಣಿ

ರಕ್ಷಾ ಬಂಧನದ ಈ ಸಂದರ್ಭದಲ್ಲಿ ನಿಮ್ಮ ಸಹೋದರಿಯ ಹೆಸರಿನಲ್ಲಿ ಸ್ಥಿರ ಠೇವಣಿಯಲ್ಲಿ ಹಣ ಹೂಡಿಕೆ ಮಾಡುವುದು ಅವಳ ಹಣಕಾಸು ಸುಭದ್ರತೆ ದೃಷ್ಟಿಯಿಂದ ಉತ್ತಮ ವಿಚಾರವಾಗಿರುತ್ತದೆ.
ಅಲ್ಪಾವಧಿ ಅಥವಾ ದೀರ್ಘಾವಧಿ ಹೀಗೆ ಯಾವುದೇ ಸ್ಥಿರ ಠೇವಣಿಗಳಲ್ಲಿ ಹೂಡಿಕೆ ಮಾಡಿದರೂ ಅಂತ್ಯದಲ್ಲಿ ಉತ್ತಮ ಆದಾಯ ಪಡೆಯಬಹುದು.

ಮ್ಯುಚುವಲ್ ಫಂಡ್ SIP

ಮ್ಯುಚುವಲ್ ಫಂಡ್ SIP

ನಿಮ್ಮ ಸಹೋದರಿಯ ಹೆಸರಿನಲ್ಲಿ ಮ್ಯುಚುವಲ್ ಫಂಡ್ SIP ನಲ್ಲಿ ಹೂಡಿಕೆ ಮಾಡುವುದು ಎರಡನೇ ಉತ್ತಮ ಆಯ್ಕೆ ಆಗಿರುತ್ತದೆ. ಇದೊಂದು ಸಮತೋಲಿತ ನಿಧಿ ಆಗಿರುತ್ತದೆ. ಇದರಲ್ಲಿ ಅಚ್ಚುಕಟ್ಟಾಗಿ ಹೂಡಿಕೆ ಮಾಡುವುದರಿಂದ ಕೊನೆಯಲ್ಲಿ ಗಮನಾರ್ಹ ಪ್ರಮಾಣದ ಆದಾಯವನ್ನು ಕೊಡಬಲ್ಲವು.

ಬ್ಯೂ ಚಿಪ್ ಷೇರುಗಳು
 

ಬ್ಯೂ ಚಿಪ್ ಷೇರುಗಳು

ಬ್ಯೂ ಚಿಪ್ ಷೇರುಗಳಲ್ಲಿ ಹೂಡಿಕೆ ಮಾಡುವುದರಿಂದ ದೀರ್ಘಾವಧಿಗೆ ಉತ್ತಮ ಸಂಪತ್ತನ್ನು ತರಬಲ್ಲವು. ಇವು ದೇಶದಲ್ಲಿನ ಅತ್ಯುತ್ತಮವಾದ ಷೇರುಗಳಾಗಿವೆ. ಇವು ನಿರ್ಧಿಷ್ಟ ಅವಧಿಗೆ ಷೇರುದಾರರಿಗೆ ಉತ್ತಮ ಆದಾಯ ತಂದು ಕೊಡುತ್ತವೆ.

ಆರೋಗ್ಯ ವಿಮೆ

ಆರೋಗ್ಯ ವಿಮೆ

ಸಹೋದರಿಗೆ ಅನಾರೋಗ್ಯದ ಸಂದರ್ಭದಲ್ಲಿ ಮಾಡುವ ರಕ್ಷಣೆಗಿಂತ ಬೇರೆ ರಕ್ಷಣೆ ಇರಲಿಕ್ಕಿಲ್ಲ. ಹೀಗಾಗಿ ಅವಳ ಹೆಸರಿನಲ್ಲಿ ಆರೋಗ್ಯ ವಿಮೆಯನ್ನು ಮಾಡಿಸುವುದು ಉತ್ತಮ ಆಯ್ಕೆ ಜತೆಗೆ ಕಷ್ಟ ಕಾಲದಲ್ಲಿ, ಅಗತ್ಯ ಸನ್ನಿವೇಶದಲ್ಲಿ ಹಣಕಾಸು ರಕ್ಷಣೆ ಕೊಡಬಲ್ಲ ವಿಧಾನ ಇದಾಗಿದೆ.
ಆರೋಗ್ಯ ವಿಮೆ ಆಸ್ಪತ್ರೆ ಅಥವಾ ವೈದ್ಯಕೀಯ ಖರ್ಚನ್ನು ಸರಿದೂಗಿಸಿ ಕಷ್ಟಕಾಲದಲ್ಲಿ ರಕ್ಷಣೆ ಕೊಡಬಲ್ಲದು.

ಬಂಗಾರ

ಬಂಗಾರ

ನೀವು ಚಿನ್ನಾಭರಣಗಳನ್ನು ಖರೀದಿಸಲು ಬಯಸಿದಲ್ಲಿ ಅದರ ಬದಲಿಗೆ ಗೋಲ್ಡ್ ಇಟಿಎಫ್ ಅಥವಾ ಗೋಲ್ಡ್ ಫಂಡ್ಸ್ ಖರೀದಿಸಿ. ಭಾರತ ಸರ್ಕಾರ ಹೊಸದಾಗಿ ಆರಂಭಿಸಿದ ಗೋಲ್ಡ್ ಯೋಜನೆಗಳಿಗೂ ಅದ್ಯತೆ ಕೊಡಬಹುದು.

ಪಿಪಿಎಫ್

ಪಿಪಿಎಫ್

ಪಬ್ಲಿಕ್ ಪ್ರಾವಿಡೆಂಟ್ ಫಂಡ್ ನಲ್ಲಿ ಹೂಡಿಕೆ ಮಾಡುವುದು ಸಹೋದರಿಯ ಭವಿಷ್ಯಕ್ಕೆ ಉತ್ತಮ. ಪಿಪಿಎಫ್ ತೆರಿಗೆ ಮುಕ್ತವಾಗಿರುವುದರಿಂದ ಹೆಚ್ಚು ಪ್ರಯೋಜನಕಾರಿ. ಇಲ್ಲಿ ಹೂಡಿಕೆ ಮತ್ತು ಬಡ್ಡಿ ಎರಡು ತೆರಿಗೆ ರಹಿತವಾಗಿರುವುದರಿಂದ ಹೂಡಿಕೆದಾರರಿಗೆ ಹೆಚ್ಚು ಉಪಯೋಗಕಾರಿ.

ವೈಯಕ್ತಿಕ ಹಣಕಾಸು ಪುಸ್ತಕಗಳು

ವೈಯಕ್ತಿಕ ಹಣಕಾಸು ಪುಸ್ತಕಗಳು

ಹಣಕಾಸು ಸಂಬಂಧಿ ಜ್ಞಾನವನ್ನು ಪಡೆಯುವುದನ್ನು ಎಂದಿಗೂ ತಡಮಾಡಬಾರದು. ಹೀಗಾಗಿ ಹಣ ನಿರ್ವಹಣೆ ಹಾಗೂ ವೈಯಕ್ತಿಕ ಹಣಕಾಸಿಗೆ ಸಂಬಂಧಿಸಿದ ಮಹತ್ವದ ಪುಸ್ತಕಗಳನ್ನು ರಕ್ಷಾ ಬಂಧನದ ಶುಭ ಸಂದರ್ಭದಲ್ಲಿ ಉಡುಗೊರೆಯಾಗಿ ನೀಡುವುದು ತುಂಬಾ ಅರ್ಥಪೂರ್ಣವಾಗಿರುತ್ತದೆ.

ಗಿಪ್ಟ್ ಕಾರ್ಡುಗಳು

ಗಿಪ್ಟ್ ಕಾರ್ಡುಗಳು

ಸಹೋದರಿಗೆ ಏನು ಉಡುಗೊರೆ ಕೊಡಬೇಕು? ಏನು ಆಯ್ಕೆ ಮಾಡಬೇಕು? ಇತ್ಯಾದಿ ಗೊಂದಲಗಳಿದ್ದವರು ಗಿಪ್ಟ್ ಕಾರ್ಡುಗಳಿಗೆ ಆದ್ಯತೆ ಕೊಡುವುದು ಒಳಿತು.
ಇವುಗಳ ಪ್ರಾರಂಭದ ಬೆಲೆ ರೂ. 500 ರಿಂದ 50,000 ರೂ. ವರೆಗೆ ಇದ್ದು, ಇವುಗಳನ್ನು ಖರೀದಿಸಬಹುದು.
ಖರೀದಿ ಮಾಡಿದ ದಿನದಿಂದ ಒಂದು ವರ್ಷಗಳವರೆಗೆ ಇ ಕಾರ್ಡುಗಳ ಅವಧಿ ಇರುತ್ತದೆ. ಇದನ್ನು ಕಾರ್ಡಿನ ಮೇಲೆ ಉಲ್ಲೇಖಿಸಲಾಗಿರುತ್ತದೆ.

English summary

Raksha Bandhan Festival: 8 Financial Gift to your sister

Many individuals spend a hefty amount for their sisters on Raksha Bandhan to make their sister feel special and important. Buying gifts such as an expensive watch, accessory, dress, bags can give only happiness for the time being. Why not think about her financial independence and financial security?
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X