ಕೋಟ್ಯಾಧಿಪತಿಯಾಗಬೇಕು ಎಂಬ ಆಸೆ ಎಲ್ಲರಲ್ಲೂ ಇರೋದು ಸಾಮಾನ್ಯ. ಆದರೆ ಶ್ರೀಮಂತರಾಗಬೇಕು ಎಂಬ ಖಾಲಿ ಕನಸುಗಳಿದ್ರೆ ಸಾಲದು. ಕೌನ್ ಬನೇಗಾ ಕರೋಡ್ ಪತಿಯಂತಹ ಅನೇಕ ಕಾರ್ಯಕ್ರಮಗಳು ಕೋಟ್ಯಾಧಿಪತಿಯಾಗಬೇಕು ಎಂಬ ಕನಸಿಗೆ ಸ್ಪೂರ್ತಿಯಾಗಬಲ್ಲವು.
ಕೋಟ್ಯಾಧಿಪತಿಯಾಗಬೇಕು ಎಂಬ ಆಸೆ ಎಲ್ಲರಲ್ಲೂ ಇರೋದು ಸಾಮಾನ್ಯ. ಆದರೆ ಶ್ರೀಮಂತರಾಗಬೇಕು ಎಂಬ ಖಾಲಿ ಕನಸುಗಳಿದ್ರೆ ಸಾಲದು. ಕೌನ್ ಬನೇಗಾ ಕರೋಡ್ ಪತಿಯಂತಹ ಅನೇಕ ಕಾರ್ಯಕ್ರಮಗಳು ನಿಮ್ಮಲ್ಲಿ ಕೋಟ್ಯಾಧಿಪತಿಯಾಗಬೇಕು ಎಂಬ ಕನಸಿಗೆ ಸ್ಪೂರ್ತಿಯಾಗಬಲ್ಲವು. ಇದಕ್ಕೆ ಕೇವಲ ಸ್ಪೂರ್ತಿ, ಕನಸು ಇದ್ದರೆ ಆಗದು. ಕಠಿಣ ಪರಿಶ್ರಮ, ಶಿಸ್ತು, ಹಣಕಾಸು ನಿರ್ವಹಣೆ, ದೃಢನಿರ್ಧಾರಗಳು ಬೇಕಾಗುತ್ತವೆ.
ಆದರೆ ಸರ್ವೆಸಾಮಾನ್ಯವಾಗಿ ನಿಮ್ಮಲ್ಲಿನ ಕೆಲ ಕೆಟ್ಟ ಹವ್ಯಾಸಗಳು ಕೋಟ್ಯಾಧಿಪತಿಯಾಗುವ ಕನಸಿಗೆ ಅಡ್ಡಿಯಾಗಬಲ್ಲವು ಎಂಬುದನ್ನು ನೆನಪಿನಲ್ಲಿಡಬೇಕಾಗುತ್ತದೆ. ಕೋಟ್ಯಾಧಿಪತಿ ಆಗುವುದು ಹೇಗೆ ಗೊತ್ತೆ?
ನಿಯಂತ್ರಣ ಮೀರಿದ ಅಧಿಕ ಖರ್ಚು
ನೀವೆಷ್ಟು ಸಂಪಾದನೆ ಮಾಡುತ್ತಿರಾ ಎನ್ನುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ನೀವು ಎಷ್ಟು ಖರ್ಚು ಮಾಡುತ್ತಿರಿ ಎನ್ನುವುದು ಆಗಿದೆ. ಈ ಸಂಗತಿ ಶ್ರೀಮಂತಿಕೆಯಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸುತ್ತದೆ. ನಿಮಗೆ ಲಾಟರಿ ಹೊಡೆದು ಬಂದ ಹಣ ಹೆಚ್ಚು ದಿನ ಇರುತ್ತದೆ ಎಂದು ಹೇಳುವುದು ಕಷ್ಟ. ಹಣಕಾಸು ನಿರ್ವಹಣೆ ಮಾಡುವ ಕೌಶಲ್ಯ ಮುಖ್ಯವಾಗಿದ್ದು, ಶ್ರೀಮಂತ ಅಥವಾ ಬಡವನನ್ನಾಗಿಸುವ ಅಸ್ತ್ರವೇ ಇದು! ತಿಂಗಳಿಗೆ 5000 ಹೂಡಿಕೆ ಮಾಡಿ ಕೋಟ್ಯಾಧಿಪತಿ ಆಗೋದು ಹೇಗೆ?
ವಿಳಂಬ/ಮುಂದೂಡಿಕೆ
ನಮ್ಮ್ಲಲಿ ಹೆಚ್ಚಿನ ಜನರು ನಿರ್ಧಾರ ಕೈಗೊಳ್ಳುವುದಕ್ಕಾಗಿಯೇ ವರ್ಷಗಟ್ಟಲೇ ಸಮಯ ತೆಗೆದುಕೊಳ್ಳುವವರಿದ್ದಾರೆ! ಆದರೆ ಆರ್ಥಿಕ ನಿರ್ಧಾರ ತೆಗೆದುಕೊಳ್ಳಲು ವಿಳಂಬ ಮಾಡುವುದರಿಂದ ಕೋಟ್ಯಾಧಿಪತಿಯಾಗುವ ಅವಕಾಶ ತಪ್ಪಿ ಹೋಗಬಹುದಲ್ಲವೇ? ನೀವು ಹಣ ಗಳಿಕೆ ಆರಂಭಿಸಿದ ದಿನದಿಂದ ಉಳಿತಾಯ ಮಾಡುವುದನ್ನು ಕರಗತ ಮಾಡಬೇಕು. ಹಣಕಾಸು ಯೋಜನೆಯನ್ನು ನಾಳೆ ನಾಡಿದ್ದು ಎನ್ನುತ್ತಾ ಮುಂದೂಡಬಾರದು.
ತಪ್ಪು ಆಲೋಚನೆ
ಹಣಕಾಸು ಯೋಜನೆ ಮಾಡಿದರೆ ಸಾಕು ನಾವು ಶ್ರೀಮಂತರಾಗಿ ಬಿಡುತ್ತೇವೆ ಎಂಬ ಆಲೋಚನೆ ತಪ್ಪು. ನೀವು ಗಳಿಸುವ ಆದಾಯದಲ್ಲಿ ಒಂದಿಷ್ಟು ಮೊತ್ತವನ್ನು ಉಳಿತಾಯಕ್ಕಾಗಿ ಮೀಸಲಾಗಿಡಬೇಕು.
ಅದೃಷ್ಟಕ್ಕಾಗಿ ಕಾಯುವುದು
ಆಲಸ್ಯ
ಆಲಸ್ಯ ಎಂಬುದು ಪ್ರತಿಯೊಬ್ಬರ ಶತ್ರು, ಪ್ರತಿಯೊಂದು ಕೆಲಸಕ್ಕೆ ಅಡ್ಡಿಯಾಗುವ ರೋಗ. ಇದು ನಿಮ್ಮ ಶ್ರೀಮಂತಿಕೆಯ ಆಸೆಗೆ ತಣ್ಣೀರು ಎರಚಬಹುದು. ಕಷ್ಟಪಟ್ಟರೆ ಮಾತ್ರ ಫಲ ಸಿಗುತ್ತದೆ. ಆಲಸ್ಯವನ್ನು ಮೆಟ್ಟಿ ನಿಲ್ಲದೇ ಹೋದರೆ ಜೀವನದಲ್ಲಿ ಎಲ್ಲವೂ ಕಷ್ಟ.


Click it and Unblock the Notifications