ತಿಂಗಳಿಗೆ 5000 ಹೂಡಿಕೆ ಮಾಡಿ ಕೋಟ್ಯಾಧಿಪತಿ ಆಗೋದು ಹೇಗೆ? ತಪ್ಪದೇ ಓದಿ..

Posted By: Siddu
Subscribe to GoodReturns Kannada

ನಮ್ಮಲ್ಲಿ ಹೆಚ್ಚಿನವರು ತಮ್ಮಲ್ಲಿ ದೊಡ್ಡ ಮೊತ್ತದ ಹಣ ಸಂಗ್ರಹವಾದ ಬಳಿಕವೇ ಹೂಡಿಕೆಯತ್ತ ತಮ್ಮ ಗಮನ ಹರಿಸಲು ಬಯಸುತ್ತಾರೆ. ತಮ್ಮ ಮಹತ್ವಾಕಾಂಕ್ಷೆಯ ದೀರ್ಘಾವಧಿಯ ಗುರಿಗಳನ್ನು ಸಾಧಿಸಲು ಈ ಚಿಕ್ಕ ಮೊತ್ತದ ಹೂಡಿಕೆಗಳು ಅಷ್ಟೊಂದು ನೆರವಾಗಲಾರವು ಎಂದು ಇವರ ನಂಬಿಕೆಯಾಗಿದೆ. ಇದೇ ಕಾರಣಕ್ಕೆ ನಮ್ಮಲ್ಲಿ ಹೆಚ್ಚಿನವರು ತಮ್ಮ ಹೂಡಿಕೆಯನ್ನು ಮುಂದೆ ಹಾಕುತ್ತಾ ಹೊಗುತ್ತಾರೆ.

ಆದರೆ ಈ ನಂಬಿಕೆಗೆ ವ್ಯತಿರಿಕ್ತವಾಗಿ ಕೇವಲ ಮಾಸಿಕ ಐದು ಸಾವಿರ ರೂಪಾಯಿಗಳನ್ನು ವ್ಯವಸ್ಥಿತ ಹೂಡಿಕೆ ಯೋಜನೆಯಾದ ಸಿಪ್ (Systematic Investment Plan) ಮೂಲಕ ಈಕ್ವಿಟಿ ಯೋಜನೆಯಲ್ಲಿ ತೊಡಗಿಸುತ್ತಾ ಹೋದರೆ ಕೇವಲ ಇಪ್ಪತ್ತು ವರ್ಷಗಳಲ್ಲಿ ಒಂದು ಕೋಟಿ ರೂಪಾಯಿಯಷ್ಟು ಬೃಹತ್ ಮೊತ್ತವಾಗಿ ಬೆಳೆಯುತ್ತದೆ. ಕೋಟ್ಯಾಧಿಪತಿ ಆಗುವುದು ಹೇಗೆ?

ಸಿಪ್ ನಲ್ಲಿ ಮಾಸಿಕ 5000 ಹೂಡುವ ಬಗೆ

ದೀರ್ಘಾವಧಿಯ ಗುರಿಗಳನ್ನು ಸಾಧಿಸಲು ಮ್ಯೂಚುವಲ್ ಫಂಡ್ ನ ಸಿಪ್ ಯೋಜನೆಯೊಂದರಲ್ಲಿ ಪ್ರತಿ ತಿಂಗಳೂ ತಪ್ಪದೇ ಒಂದು ನಿರ್ದಿಷ್ಟ ಮೊತ್ತವನ್ನು ಹೂಡುತ್ತಾ ಬರುವುದು ಒಂದು ಅತ್ಯುತ್ತಮ ವಿಧಾನವಾಗಿದೆ. ಇತರ ಆಸ್ತಿ ವರ್ಗಕ್ಕೆ ಹೋಲಿಸಿದರೆ ಈಕ್ವಿಟಿ ವಿಧಾನದಲ್ಲಿ ಅತ್ಯುತ್ತಮವಾದ ಆದಾಯವನ್ನು ನಿರೀಕ್ಷಿಸಬಹುದು. ಅದರಲ್ಲೂ ದೀರ್ಘಾವಧಿಯಲ್ಲಿ ಎದುರಾಗುವ ಹಣದುಬ್ಬರವನ್ನು ಸರಿದೂಗಿಸಲೂ ಈ ವಿಧಾನ ಅತ್ಯುತ್ತಮವಾಗಿದೆ. ಅಲ್ಲದೇ ಇದು ಹೂಡಿಕೆದಾರನಿಗೆ ಪೂರಕವಾದ ತೆರಿಗೆಯ ಉಳಿತಾಯವನ್ನೂ ಒದಗಿಸುತ್ತದೆ. ಹೂಡಿಕೆದಾರರಿಗೆ ಇತ್ತೀಚೆಗೆ ಲಭಿಸಿದ ಶುಭ ಸುದ್ದಿಯ ಪ್ರಕಾರ ದೀರ್ಘಾವಧಿಯ ಹೂಡಿಕೆಯಲ್ಲಿ ಹೂಡಿದ ಹಣ ಒಂದು ವರ್ಷ ಕಳೆದ ಬಳಿಕ ಇದರ ಮೂಲಕ ಪಡೆದ ಲಾಭ ತೆರಿಗೆ ರಹಿತವಾಗಿರುತ್ತದೆ. ಪ್ರತಿದಿನ 100 ಹೂಡಿಕೆ ಮಾಡಿ ಕೋಟ್ಯಾಧಿಪತಿ ಆಗೋದು ಹೇಗೆ? ತಪ್ಪದೆ ಓದಿ..

ಸೂಕ್ತ ಯೋಜನೆ ಆಯ್ದುಕೊಳ್ಳಿ

ಒಂದು ವೇಳೆ ನೀವು ತಿಂಗಳಿಗೆ ಐದು ಸಾವಿರ ರೂಪಾಯಿಗಳನ್ನು ಪ್ರತ್ಯೇಕವಾಗಿ ತೆಗೆದಿರಿಸುವ ಸಾಮರ್ಥ್ಯ ಹೊಂದಿದ್ದರೆ ತಕ್ಷಣವೇ ಈಕ್ವಿಟಿ ಮ್ಯೂಚುವಲ್ ಫಂಡ್ ಗಳ ಸಿಪ್ ಯೋಜನೆಯಲ್ಲಿ ಈ ಮೊತ್ತವನ್ನು ತೊಡಗಿಸಲು ಪ್ರಾರಂಭಿಸಿ. ಒಂದು ವೇಳೆ ನಿಮಗೆ ಈ ಯೋಜನೆಯಲ್ಲಿ ಹೂಡಿಕೆಗಾಗಿ ಆಯ್ಕೆಯ ಅಗತ್ಯವಿದ್ದರೆ ಈಕ್ವಿಟಿ ಮ್ಯೂಚುವಲ್ ಫಂಡ್ ಗಳು ಪ್ರಸ್ತುತಪಡಿಸುವ ಬಂಡವಾಳ ಆಯ್ಕೆಗಳ ಬಗ್ಗೆ ಅರಿತುಕೊಳ್ಳಿ ಹಾಗೂ ನಿಮಗೆ ಸೂಕ್ತವೆನಿಸುವ ಯೋಜನೆಯನ್ನು ಆಯ್ದುಕೊಳ್ಳಿ.

ರಿಸ್ಕ್ ಮೇಲೆ ಸಂಸ್ಥೆಯ ರಕ್ಷಣೆ

ನಿಮ್ಮ ಆಯ್ಕೆ ಸುಲಭವಾಗಿಸಲು ಪ್ರತಿ ತಿಂಗಳೂ ಹೂಡಬಹುದಾದ ಮೊತ್ತ ಮತ್ತು ಅಪಾಯದ ಸನ್ನಿವೇಶದಲ್ಲಿ ಸಂಸ್ಥೆ ಎಷ್ಟು ಮೊತ್ತಕ್ಕೆ ಅಪಾಯದ ಸಾಧ್ಯತೆಯ ರಕ್ಷಣೆ ಒದಗಿಸುತ್ತದೆ (risk appetite) ಎಂದುದನ್ನು ಗಮನಿಸಿ ಈ ಪ್ರಕಾರ ನಿಮ್ಮ ಮಾಸಿಕ ಹೂಡಿಕೆಯ ಮೊತ್ತ ಮತ್ತು ಅವಧಿಯನ್ನು ಆಯ್ಕೆ ಮಾಡಿಕೊಳ್ಳಿ. ಒಂದು ವೇಳೆ ನಿಮ್ಮ ವಾರ್ಷಿಕ ಆದಾಯ ಸುಮಾರು ಹನ್ನೆರಡು ಶೇಖಡಾ ಎಂದಿದ್ದರೆ ತಿಂಗಳ ಐದು ಸಾವಿರದ ಹೂಡಿಕೆಯಿಂದ ಒಂದು ಕೋಟಿ ರೂಪಾಯಿ ಪಡೆಯಲು 25.5 ವರ್ಷಗಳು ಬೇಕಾಗುತ್ತವೆ.

ಆದರೂ, ಈ ವಿಧಾನ ಹೂಡಿಕೆಗೆ ಅತ್ಯುತ್ತಮ ವಿಧಾನವಲ್ಲ! ಸಮಯ ಕಳೆದಂತೆ ನಿಮ್ಮ ಆದಾಯವೂ ಖಚಿತವಾಗಿ ಏರುವ ಕಾರಣ ಈ ಪ್ರಕಾರ ನಿಮ್ಮ ಹೂಡಿಕೆಯೂ ಹೆಚ್ಚುತ್ತಾ ಹೋಗಬೇಕು ಹಾಗೂ ಕಾಲಕಾಲಕ್ಕೆ ಬದಲಾಗುವ ಪರಿಸ್ಥಿತಿಗೆ ಅನುಗುಣವಾಗಿ ನಿಮ್ಮ ಹೂಡಿಕೆಗಳೂ ಬದಲಾಗಬೇಕು.

ಪ್ರತಿವರ್ಷವೂ ಸಿಪ್ ಮೊತ್ತ ಹೆಚ್ಚಿಸಿ

ಒಂದು ಲೆಕ್ಕಾಚಾರದ ಪ್ರಕಾರ ನಿಮ್ಮ ಸಿಪ್ ಹೂಡಿಕೆಯ ಮೊತ್ತವನ್ನು ವಾರ್ಷಿಕ ಹತ್ತು ಶೇಖಡಾದಷ್ಟು ಏರಿಸುವುದು ಎಂದು ಅಂದುಕೊಳ್ಳೋಣ. ಆ ಲೆಕ್ಕಾಚಾರ ದ ಪ್ರಕಾರ ಮೊದಲ ವರ್ಷ ನೀವು ಪ್ರತಿ ತಿಂಗಳೂ ಐದು ಸಾವಿರ ರೂ. ಗಳನ್ನು ಸಿಪ್ ಯೋಜನೆಯಲ್ಲಿ ಹೂಡಿರುತ್ತೀರಿ. ಮರುವರ್ಷ ಈ ಮೊತ್ತ ಪ್ರತಿ ತಿಂಗಳೂ ರೂ. 5,500 ಆಗುತ್ತದೆ ((Rs 5,000+10 per cent of Rs 5,000). ಅದರ ಮರುವರ್ಷ ಅಂದರೆ ಮೂರನೆಯ ವರ್ಷದಲ್ಲಿ ಇದು 6,050 ಆಗುತ್ತದೆ (Rs 5,500 + 10 per cent of Rs 5,500). ಹೀಗೆ ಪ್ರತಿ ವರ್ಷವೂ ಈ ಮೊತ್ತವನ್ನು ಏರಿಸುತ್ತಾ ಹೋಗಬೇಕು.

1 ಕೋಟಿ ಆಗಲು 21 ವರ್ಷ

ಈ ಪ್ರಕಾರ ವಾರ್ಷಿಕ ಐದು ಸಾವಿರದಿಂದ ತೊಡಗಿಸಿದ್ದ ಮೊತ್ತ ಒಟ್ಟು ಒಂದು ಕೋಟಿ ರೂ ಆಗಲು 21 ವರ್ಷ ತೆಗೆದುಕೊಳ್ಳುತ್ತದೆ. ಇನ್ನಷ್ಟು ಸ್ಪಷ್ಟವಾದ ಮಾಹಿತಿಯನ್ನು ಪಡೆಯಲು ಕೋಷ್ಟಕವನ್ನು ಗಮನಿಸಿ.
ನಾವು ವಾರ್ಷಿಕ 12% ಆದಾಯ ಬರಬಹುದೆಂಬ ಅಂದಾಜಿನ ಮೇರೆಗೆ ಈ ಲೆಕ್ಕಾಚಾರವನ್ನು ಪ್ರಸ್ತುತಪಡಿಸಿದ್ದೇವೆ.

ಹೂಡಿಕೆಗಳನ್ನು ಸತತವಾಗಿ ಗಮನಿಸುತ್ತಿರಿ

ಯಾವುದೇ ಹೂಡಿಕೆದಾರನಿಗೆ ತನ್ನ ಮ್ಯೂಚುವಲ್ ಫಂಡ್ ಯೋಜನೆಯ ಹೂಡಿಕೆಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಸತತವಾಗಿ ಗಮನಿಸುತ್ತಿರುವುದು ಅಗತ್ಯವಾಗಿದೆ. ಪ್ರತಿ ಆರು ತಿಂಗಳಿಗೊಮ್ಮೆಯಾದರೂ ಈ ಯೋಜನೆಗಳು ಹೇಗೆ ಕಾರ್ಯ ನಿರ್ವಹಿಸಿವೆ ಎಂಬುದನ್ನು ಗಮನಿಸಬೇಕಾಗುತ್ತದೆ. ಒಂದು ವೇಳೆ ಈ ಯೋಜನೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೆ ಹಾಗೂ ನೀಡಿದ್ದ ಭರವಸೆಯನ್ನು ಉಳಿಸಿಕೊಂಡಿರುವುದನ್ನು ಖಾತರಿ ಪಡಿಸಿದರೆ ಈ ಹೂಡಿಕೆಗಳನ್ನು ನೀವು ಮುಂದುವರೆಸಬಹುದು. ಒಂದು ವೇಳೆ ಈ ಯೋಜನೆಗಳು ಕಳಪೆ ಪ್ರದರ್ಶನ ನೀಡಿ ಒಂದು ವರ್ಷದ ಬಳಿಕವೂ ಚೇತರಿಕೆ ತೋರದೆಯಿದ್ದರೆ ಈ ಕುಸಿತಕ್ಕೆ ಏನು ಕಾರಣ ಎಂಬುದನ್ನು ಅರಿಯಲು ಯತ್ನಿಸಬೇಕು. ಒಂದು ವೇಳೆ ನಿಮಗೆ ದೊರೆತ ಉತ್ತರ ನಿಮಗೆ ಸಮರ್ಪಕ ಅಥವಾ ಸೂಕ್ತವೆನಿಸದಿದ್ದಲ್ಲಿ ಅಥವಾ ಈ ಬಗ್ಗೆ ಅನುಮಾನಗಳು ಎದುರಾಗುತ್ತಿದ್ದರೆ ತಕ್ಷಣವೇ ನಿಮ್ಮ ಹೂಡಿಕೆಗಳನ್ನು ಮಾರುವ ಬಗ್ಗೆ ಯೋಚಿಸಬೇಕಾಗುತ್ತದೆ ಹಾಗೂ ನಿಮ್ಮ ಹೂಡಿಕೆಯನ್ನು ಇದೇ ವರ್ಗಕ್ಕೆ ಸೇರಿದ ಬೇರೆ ಯೋಜನೆಯಲ್ಲಿ ತೊಡಗಿಸಲು ಕ್ರಮ ಕೈಗೊಳ್ಳಬೇಕಾಗುತ್ತದೆ.

English summary

How to become a Crorepati by investing 5000 a month?

Investing in an equity mutual fund scheme via an SIP is the best way to achieve your long-term goals.
Story first published: Saturday, March 24, 2018, 18:04 [IST]
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

ಕರ್ನಾಟಕ ವಿಧಾನಸಭೆ ಚುನಾವಣೆ 2018

Get Latest News alerts from Kannada Goodreturns