ಎಸ್ಬಿಐ ಚಿನ್ನದ ಠೇವಣಿ ಯೋಜನೆ: ಅರ್ಹತೆ, ಬಡ್ಡಿದರ ಮತ್ತು ಇತರೆ ಸಂಪೂರ್ಣ ಮಾಹಿತಿ..

By Siddu Thoravat
Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ಚಿನ್ನಾಭರಣಗಳೆಂದರೆ ಭಾರತೀಯರಿಗೆ ವಿಪರೀತ ವ್ಯಾಮೋಹ. ಚಿನ್ನವನ್ನು ಆಪತ್ಕಾಲದ ಬಂಧು ಎಂದು ಕೂಡ ಕರೆಯುವುದುಂಟು. ಅನೇಕ ಕಷ್ಟದ ಸಂದರ್ಭದಲ್ಲಿ ನಾವು ಚಿನ್ನವನ್ನು ಅಡವಿಟ್ಟು ಹಣ ಪಡೆಯುವುದುಂಟು. ಅದಕ್ಕಾಗಿ ಬ್ಯಾಂಕುಗಳೂ ಕೂಡ ಇತ್ತೀಚೆಗೆ ಉತ್ತಮ ಆಫರ್ ಗಳನ್ನು ನೀಡುತ್ತಿವೆ. ಅಷ್ಟೇ ಅಲ್ಲ, ಈಗ ಚಿನ್ನವನ್ನು ಠೇವಣಿ ಇಡುವುದಕ್ಕೂ ಅವಕಾಶವಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ. ಎಸ್ಬಿಐ ಚಿನ್ನದ ಠೇವಣಿ ಯೋಜನೆಯನ್ನು (Gold Deposit Scheme) ಪರಿಷ್ಕರಿಸಿದ್ದು ಅದರ ವಿವರಣೆ ಈ ಲೇಖನದಲ್ಲಿದೆ. ಆಯುಷ್ಮಾನ್ ಭಾರತ್ ಯೋಜನೆ: 5 ಲಕ್ಷ ವಿಮಾ ಸೌಲಭ್ಯ ಯಾರಿಗೆ ಸಿಗಲಿದೆ, ನೋಂದಣಿ ಹೇಗೆ?

  ಚಿನ್ನದ ಠೇವಣಿ ಯೋಜನೆ ಪೂರಕ ಮಾಹಿತಿ

  ದೇಶದ ಅತೀ ದೊಡ್ಡ ಸಾಲದಾತರಾಗಿರುವ ಎಸ್ಬಿಐ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) ಗ್ರಾಹಕರಿಗೆ ಪರಿಷ್ಕರಿಸಿದ ಚಿನ್ನದ ಠೇವಣಿ ಯೋಜನೆ (R-GDS) ನೀಡುತ್ತಿದೆ. ಇದೊಂದು ರೀತಿಯಲ್ಲಿ ಗೋಲ್ಡ್ ಫಿಕ್ಸ್ಡ್ ಡೆಪಾಸಿಟ್ ಅರ್ಥಾತ್ ಚಿನ್ನದ ಸ್ಥಿರ ಠೇವಣಿ ಯೋಜನೆ.
  ನಿಗಧಿತ ಠೇವಣಿ ಎಂಬುದು ಬ್ಯಾಂಕುಗಳು ಒದಗಿಸುವ ಒಂದು ಹಣಕಾಸಿನ ವಿಭಿನ್ನ ವ್ಯವಸ್ಥೆಯಾಗಿದ್ದು, ಎಸ್ ಬಿಐನ ಅಧಿಕೃತ ವೆಬ್ ಸೈಟ್ ನಲ್ಲಿ ಉಲ್ಲೇಖಿಸಿರುವಂತೆಯೇ ಹೇಳುವುದಾದರೆ ಹೂಡಿಕೆದಾರರಿಗೆ ಸಾಮಾನ್ಯ ಉಳಿತಾಯ ಖಾತೆಗಿಂತ ಹೆಚ್ಚು ಬಡ್ಡಿದರವನ್ನು ನಿಗಧಿತ ಠೇವಣಿಯಲ್ಲಿ ನಿರ್ಧಿಷ್ಟಗೊಳಿಸಿದ ದಿನಾಂಕದವರೆ ನೀಡಲಾಗುವ ಒಂದು ಸೌಲಭ್ಯ.
  R-GDS ಅಡಿಯಲ್ಲಿ ಗ್ರಾಹಕರು ಅವರ ಖಾಲಿ ಚಿನ್ನವನ್ನು ಠೇವಣಿ ಮಾಡಬಹುದು. ಅದು ಅವರಿಗೆ ಸುರಕ್ಷತೆ ಮತ್ತು ಬಡ್ಡಿಯ ಆದಾಯವನ್ನು ಒದಗಿಸುತ್ತದೆ. ಎಸ್ ಬಿಐ ತನ್ನ ವೆಬ್ಸೈಟ್ sbi.co.in. ನಲ್ಲಿ ಗೋಲ್ಡ್ ಬಾರ್ ಗಳು, ನಾಣ್ಯಗಳು, ಹರಳು ಮತ್ತು ಇತರೆ ಖನಿಜಗಳನ್ನು ಹೊರತು ಪಡಿಸಿದ ಆಭರಣಗಳನ್ನು ಸ್ವೀಕರಿಸುವುದಾಗಿ ತಿಳಿಸಿದೆ.

  ಎಸ್ಬಿಐನ ಪರಿಷ್ಕೃತ ಚಿನ್ನದ ಠೇವಣಿ ಯೋಜನೆ (ಆರ್ ಜಿಡಿಎಸ್) ಬಗ್ಗೆ ತಿಳಿದುಕೊಳ್ಳಬೇಕಾದ ಪ್ರಮುಖ ವಿಷಯಗಳು ಇಲ್ಲಿವೆ:

   

  1. ಅರ್ಹತೆ:

  ಸೆಬಿ (ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ) ಅಡಿಯಲ್ಲಿ ನೊಂದಾಯಿಸಲಾದ ವ್ಯಕ್ತಿಗಳು, ಮಾಲೀಕತ್ವ ಮತ್ತು ಪಾಲುದಾರಿಕೆ ಪಡೆದಿರುವ ಅರ್ಹ ಸಂಸ್ಥೆಗಳು, HUF ಗಳು (ಹಿಂದೂ ಅನುವಂಶಿಕ ಕುಟುಂಬ), ಮ್ಯೂಚುಯಲ್ ಫಂಡ್/ಎಕ್ಸ್ಚೇಂಜ್ ಟ್ರೇಡ್ಡ್ ಫಂಡ್ಗಳು ಮತ್ತು ಕಂಪನಿಗಳು ಹೂಡಿಕೆ ಮಾಡಲು ಅರ್ಹರಾಗಿರುತ್ತಾರೆ..

  2. ಪ್ರಮಾಣ

  ಈ ಯೋಜನೆಯನ್ನು ಪಡೆಯಬೇಕಾದರೆ ವ್ಯಕ್ತಿಯು ಕನಿಷ್ಟ 30 ಗ್ರಾಂನಷ್ಟು ಚಿನ್ನವನ್ನ ಪಾವತಿಸಬೇಕಾಗುತ್ತದೆ. ಆದರೆ ಗರಿಷ್ಠ ಮಿತಿ ಇರುವುದಿಲ್ಲ.

  3. ಠೇವಣಿ ವಿಧಗಳು

  ಎಸ್ ಬಿಐ ನ ಆರ್-ಜಿಡಿಎಸ್ ನ ಅಡಿಯಲ್ಲಿ ಮೂರು ವಿಧಧ ಠೇವಣಿಗಳಿವೆ:
  • ಅಲ್ಪಾವಧಿ ಬ್ಯಾಂಕ್ ಠೇವಣಿ (STBD): ಈ ಅಲ್ಪಾವಧಿ ಬ್ಯಾಂಕ್ ಠೇವಣಿಯ ಅವಧಿ ಕನಿಷ್ಠ ಎಂದರೆ ಒಂದು ವರ್ಷದಿಂದ ಗರಿಷ್ಠ 3 ವರ್ಷದ ಅವಧಿ ಆಗಿರುತ್ತದೆ.
  • ಮಧ್ಯಮ ಅವಧಿಯ ಸರ್ಕಾರಿ ಠೇವಣಿ (MTGD): ಇದರ ಅವಧಿಯು 5 ರಿಂದ 7 ವರ್ಷಕ್ಕಿಂತ ಕಡಿಮೆ ಆಗಿರುತ್ತದೆ. ಕೇಂದ್ರ ಸರ್ಕಾರದ ಪರವಾಗಿ ಬ್ಯಾಂಕ್ ಈ ಠೇವಣಿಯನ್ನು ಸ್ವೀಕರಿಸುತ್ತದೆ.
  • ದೀರ್ಘಕಾಲೀನ ಸರ್ಕಾರಿ ಠೇವಣಿ(LTGD): ಇದರ ಅವಧಿಯು 12 ರಿಂದ 15 ವರ್ಷದ ಮಿತಿಯನ್ನು ಹೊಂದಿರುತ್ತದೆ. ಇದನ್ನೂ ಕೂಡ ಕೇಂದ್ರ ಸರ್ಕಾರದ ಪರವಾಗಿ ಬ್ಯಾಂಕ್ ಠೇವಣಿಯನ್ನು ಸ್ವೀಕರಿಸುತ್ತದೆ.

  4. ಬಡ್ಡಿದರ ಮತ್ತು ಪಾವತಿ ನಿಯಮ

  ಅಲ್ಪಾವಧಿ ಬ್ಯಾಂಕ್ ಠೇವಣಿ:
  ಎಸ್ಟಿಬಿಡಿ ಅಡಿಯಲ್ಲಿ ಬಡ್ಡಿ ದರಗಳು 1 ವರ್ಷಕ್ಕೆ ಶೇಕಡಾ 0.50 , 2 ವರ್ಷಕ್ಕೆ 0.55 ಶೇ. ಮತ್ತು 3 ವರ್ಷಕ್ಕೆ 0.60 ಶೇಕಡಾ ಆಗಿರುತ್ತದೆ.
  ಮಧ್ಯಮ ಅವಧಿಯ ಸರ್ಕಾರಿ ಠೇವಣಿ:
  ಎಂಟಿಜಿಟಿ ಅಡಿಯಲ್ಲಿ ಬಡ್ಡಿದರ 5 ರಿಂದ 7 ವರ್ಷಕ್ಕೆ ವಾರ್ಷಿಕ ಶೇಕಡಾ2.25 ಆಗಿರುತ್ತದೆ.
  ದೀರ್ಘಕಾಲೀನ ಸರ್ಕಾರಿ ಠೇವಣಿ:
  ಎಲ್ಟಿಜಿಡಿ ಅಡಿಯಲ್ಲಿ ಬಡ್ಡಿದರ 12-15 ವರ್ಷಕ್ಕೆ ವಾರ್ಷಿಕ ಶೇಕಡಾ 2.50 ಆಗಿರುತ್ತದೆ.

  ಮಾಮೂಲಿ ಎಲ್ಲಾ ಚಿನ್ನದ ಠೇವಣಿಯಂತೆ ಇದರಲ್ಲೂ ಅಂದರೆ MTGD ಮತ್ತು LTGDಯಲ್ಲೂ ಕೂಡ ಅಸಲನ್ನು ಚಿನ್ನದ ಆಧಾರದಲ್ಲೇ ಅಳೆಯಲಾಗುತ್ತದೆ. ಆದಾಗ್ಯೂ, ವಾರ್ಷಿಕವಾಗಿ ಮಾರ್ಚ್ 31 ರ ಒಳಗೆ ಬಡ್ಡಿಯನ್ನು ಪಾವತಿಸಬೇಕು. ಇಲ್ಲದೇ ಇದ್ದರೆ ಅವಧಿಯ ನಂತರ ಅಸಲಿನ ಮೇಲಿನ ಚಕ್ರಬಡ್ಡಿಯ ಹೊರೆಯೂ ಬೀಳಲಿದೆ.

  5. ಮರುಪಾವತಿ

  ಎಸ್ಟಿಬಿಡಿಯಲ್ಲಿ ಅವಧಿ ಮುಗಿದ ದಿನಾಂಕದಂದು ಅಸಲನ್ನು ಮರು ಪಡೆಯಲು ಚಿನ್ನವನ್ನೇ ಅಥವಾ ಚಿನ್ನದ ಮೌಲ್ಯದಷ್ಟೇ ರುಪಾಯಿಗಳನ್ನು ಮರುಪಾವತಿ ತೆಗೆದುಕೊಳ್ಳಲು ಅವಕಾಶವಿರುತ್ತದೆ.
  ಎಂಟಿಜಿಡಿ ಮತ್ತು ಎಲ್ ಟಿಜಿಡಿ ಅಡಿಯಲ್ಲಿ, ಠೇವಣಿಯ ವಿಮೋಚನೆಯು ಚಿನ್ನದಲ್ಲಿ ಅಥವಾ ಚಿನ್ನದ ಮೌಲ್ಯಕ್ಕೆ ಸಮಾನವಾದ ರುಪಾಯಿ ರೂಪದಲ್ಲಿ ಇರುತ್ತದೆ. ಆಗ ಅದು ಚಿನ್ನದ ಬೆಲೆಗೆ ಅನುಗುಣವಾಗಿಯೇ ಇರುತ್ತದೆ. ಆದರೆ, ಚಿನ್ನದ ವಿತರಣೆಯ ಸಂದರ್ಬದಲ್ಲಿ 0.20 ಶೇಕಡಾದಷ್ಟು ಆಡಳಿತಾತ್ಮಕ ಚಾರ್ಜ್ ನ್ನು ವಿಧಿಸಲಾಗುತ್ತದೆ.

  ಅಕಾಲಿಕ ಮರುಪಾವತಿ

  ಎಸ್ ಟಿ ಬಿಡಿ ಅಡಿಯಲ್ಲಿ ಅಕಾಲಿಕ ಮರುಪಾವತಿಗೆ ಅವಕಾಶವಿದ್ದು ಅನ್ವಯವಾಗುವ ಬಡ್ಡಿದರದಲ್ಲಿ ಪೆನಾಲ್ಟಿ ನೀಡಲು ಒಂದು ವರ್ಷದ ಅವಧಿಯ ಲಾಕ್-ಇನ್- ಪಿರೇಡ್ ಇರುತ್ತದೆ.
  ಆದರೆ, ಮಧ್ಯಮ ಅವಧಿ ಸರ್ಕಾರಿ ಠೇವಣಿಯಲ್ಲಿ 3 ವರ್ಷದ ನಂತರ ಮತ್ತು ದೀರ್ಘಾವಧಿ ಸರ್ಕಾರಿ ಠೇವಣಿಯಲ್ಲಿ 5 ವರ್ಷದ ನಂತರ ಹಿಂತೆಗೆದುಕೊಳ್ಳಲು ಅನುಮತಿಯನ್ನು ನೀಡಲಾಗಿರುತ್ತದೆ.
  ಸೂಚನೆ: ಅಕಾಲಿಕ ಮರುಪಾವತಿಯ ಪೆನಾಲ್ಟಿಯು ಆರ್ ಬಿಐ ಅಧಿಸೂಚನೆಯಂತೆಯೇ ಇರುತ್ತದೆ.

  English summary

  SBI Gold Deposit Scheme: Eligibility, Interest Rates And Other Details

  SBI (State Bank of India), country's largest lender, offers Revamped Gold Deposit Scheme (R-GDS), a fixed deposit scheme in gold.
  Story first published: Friday, August 17, 2018, 12:24 [IST]
  Company Search
  Enter the first few characters of the company's name or the NSE symbol or BSE code and click 'Go'

  Find IFSC

  Get Latest News alerts from Kannada Goodreturns

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more