For Quick Alerts
ALLOW NOTIFICATIONS  
For Daily Alerts

ಆಯುಷ್ಮಾನ್ ಭಾರತ್ ಯೋಜನೆ: 5 ಲಕ್ಷ ವಿಮಾ ಸೌಲಭ್ಯ ಪಡೆಯೋದು ಹೇಗೆ?

ವಿಶ್ವದ ಅತಿದೊಡ್ಡ ಆರೋಗ್ಯ ರಕ್ಷಾ ಕವಚ ಆಯುಷ್ಮಾನ್ ಭಾರತ ಯೋಜನೆಯಾಗಿದ್ದು, ದೇಶದ ಜನರು ಆರೋಗ್ಯವಾಗಿರಬೇಕು ಎಂಬ ಉದ್ದೇಶದೊಂದಿಗೆ ಪ್ರಧಾನ ಮಂತ್ರಿ ಆರೋಗ್ಯ ಅಭಿಯಾನ ಘೋಷಣೆ ಮಾಡಿದರು.

By Siddu
|

ಪ್ರಧಾನಿ ನರೇಂದ್ರ ಮೋದಿಯವರು 72ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ದೇಶವನ್ನುದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ ಭಾರತೀಯ ಆರೋಗ್ಯ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ಘೋಷಿದ್ದಾರೆ. ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯನ್ನು ಆಯುಷ್ಮಾನ್ ಭಾರತ್ ಅಥವಾ ಮೋದಿ ಕೇರ್ ಎಂಬುದಾಗಿ ಕರೆಯಲ್ಪಡುತ್ತದೆ.

 

ವಿಶ್ವದ ಅತಿದೊಡ್ಡ ಆರೋಗ್ಯ ರಕ್ಷಾ ಕವಚ ಆಯುಷ್ಮಾನ್ ಭಾರತ್ ಯೋಜನೆಯಾಗಿದ್ದು, ದೇಶದ ಜನರು ಆರೋಗ್ಯವಾಗಿರಬೇಕು ಎಂಬ ಉದ್ದೇಶದೊಂದಿಗೆ ಪ್ರಧಾನ ಮಂತ್ರಿ ಆರೋಗ್ಯ ಅಭಿಯಾನ ಘೋಷಣೆ ಮಾಡಿದರು.

ಆಯುಷ್ಮಾನ್ ಭಾರತ್ ಯೋಜನೆ ಏನಿದು?

ಆಯುಷ್ಮಾನ್ ಭಾರತ್ ಯೋಜನೆ ಏನಿದು?

ರಾಷ್ಟ್ರೀಯ ಆರೋಗ್ಯ ರಕ್ಷಣಾ ಮಿಷನ್ (ಎಬಿ-ಎನ್ಎಚ್ ಪಿಎಂ) ಭಾಗವಾಗಿರುವ ಆಯುಷ್ಮಾನ್ ಭಾರತ್ ಯೋಜನೆಯು 10 ಕೋಟಿ ಕುಟುಂಬಗಳ 50 ಕೋಟಿ ಜನರಿಗೆ ಆರೋಗ್ಯ ವಿಮೆ ಸೌಲಭ್ಯ ಒದಗಿಸುವ ಗುರಿ ಹೊಂದಿದೆ. ಪ್ರಧಾನ ಮಂತ್ರಿ ಆರೋಗ್ಯ ಅಭಿಯಾನ ಮೊದಲ ಹಂತದಲ್ಲಿ ತ್ರಿಪುರ, ಛತ್ತೀಸ್‍ಗಢ, ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳ, ಚಂಡೀಗಢ, ಆಂಧ್ರಪ್ರದೇಶ, ಮಧ್ಯಪ್ರದೇಶ, ಗುಜರಾತ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ 70 ರಿಂದ 80 ಜಿಲ್ಲೆಗಳಲ್ಲಿ ಆರಂಭವಾಗಲಿದೆ. ಮಾತೃಶ್ರೀ ಯೋಜನೆ: ಗರ್ಭಿಣಿಯರಿಗೆ 6 ಸಾವಿರ ಹಣ, ಅರ್ಜಿ ಸಲ್ಲಿಸುವುದು ಹೇಗೆ ಹಾಗು ಬೇಕಾಗುವ ದಾಖಲಾತಿಗಳೇನು?

ವಾರ್ಷಿಕ 5 ಲಕ್ಷ ವಿಮೆ

ವಾರ್ಷಿಕ 5 ಲಕ್ಷ ವಿಮೆ

ಒಂದು ಕುಟುಂಬಕ್ಕೆ ವಾರ್ಷಿಕವಾಗಿ 5 ಲಕ್ಷವರೆಗೆ ಆರೋಗ್ಯ ವಿಮೆ ಕಲ್ಪಿಸಲಾಗುತ್ತದೆ. ಪ್ರಸ್ತುತ ಯೋಜನೆಗೆ ನೋಂದಾಯಿಸಿಕೊಂಡಿರುವ ರಾಜ್ಯಗಳ ಆರೋಗ್ಯ ಯೋಜನೆ, ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನೆ ಫಲಾನುಭವಿಗಳು ಕೂಡ ಆಯುಷ್ಮಾನ್ ಭಾರತ್ ಯೋಜನೆಯ ಫಲಾನುಭವಿಗಳಾಗಲಿದ್ದಾರೆ.

ವಿಮಾ ಸೌಲಭ್ಯ ಅರ್ಹತೆ - ಮಾನದಂಡ
 

ವಿಮಾ ಸೌಲಭ್ಯ ಅರ್ಹತೆ - ಮಾನದಂಡ

ಆಯುಷ್ಮಾನ್ ಭಾರತ್ ಯೋಜನೆಯ ಸೌಲಭ್ಯ ಪಡೆಯಲು ಪಡಿತರ ಚೀಟಿ ಇರಬೇಕಾಗುತ್ತದೆ. ಈ ಯೋಜನೆಗೆ ಆಧಾರ್ ಕಾರ್ಡ್ ಕಡ್ಡಾಯ ಅಲ್ಲ. ರೇಷನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಮತದಾರರ ಚೀಟಿ ಯಾವುದಿದ್ದರೂ ಸಾಕು. ಕುಟುಂಬದ ಗಾತ್ರ ಹಾಗು ನಿಮ್ಮ ವಯಸ್ಸಿಗೆ ಯಾವುದೇ ಮಿತಿ ಇರುವುದಿಲ್ಲ. ಫಲಾನುಭವಿಗಳಿಗೆ ಆಸ್ಪತ್ರೆಗೆ ಸಂಚರಿಸಲು ನಿಗದಿತ ಪ್ರಯಾಣಕ್ಕೆ ಭತ್ಯೆಯೂ ಸಿಗಲಿದೆ. ಒಮ್ಮೆ ನೋಂದಾಯಿಸಿದರೆ ಒಂದು ವರ್ಷದವರೆಗೆ ಸೌಲಭ್ಯವಿರುತ್ತದೆ.

ನಗದು ರಹಿತ ಯೋಜನೆ

ನಗದು ರಹಿತ ಯೋಜನೆ

ಆಯುಷ್ಮಾನ್ ಭಾರತ್ ಯೋಜನೆ ಸೌಲಭ್ಯವನ್ನು ಖಾಸಗಿ ಅಥವಾ ಮಾನ್ಯತೆ ಪಡೆದ ಖಾಸಗಿ ಆಸ್ಪತ್ರೆಗಳಲ್ಲಿ ನಗದುರಹಿತ ಪಡೆಯಬಹುದು. ರೂ. ೫ ಲಕ್ಷದವರೆಗಿನ ಆರೋಗ್ಯ ಸೇವೆಗೆಯನ್ನು ಎಬಿ-ಎನ್ಎಚ್ ಪಿಎಂ ಕಾರ್ಡ್ ಮೂಲಕ ನಗದು ರಹಿತವಾಗಿ ಲಭ್ಯವಿರುತ್ತದೆ.

ಆಯಷ್ಮಾನ್ ಭಾರತ್ ಯೋಜನೆ ಯಾರಿಗೆ ಸಿಗಲಿದೆ?

ಆಯಷ್ಮಾನ್ ಭಾರತ್ ಯೋಜನೆ ಯಾರಿಗೆ ಸಿಗಲಿದೆ?

ಜಾತಿ ಗಣತಿ/ಪಡಿತರ ಚೀಟಿ ಮಾನದಂಡದ ಆಧಾರದ ಮೇಲೆ ವಿಮೆ ಸಗಲಿದೆ.
- ಪ.ಜಾತಿ/ಪ.ಪಂಗಡ ಬುಡಕಟ್ಟು ಸಮುದಾಯದವರು
- ನಿರ್ವಸಿತರು (ವಸತಿ ಸೌಲಭ್ಯ ಇಲ್ಲದವರು)
- ಒಂದು ಕೊಠಡಿಯಲ್ಲಿ ವಾಸಿಸುವ ಕುಟುಂಬಗಳು
- ಕೂಲಿ ಕಾರ್ಮಿಕರು, ಜೀತ ವಿಮುಕ್ತರು
- ರದ್ದಿ ಆಯುವವರು, ಭಿಕ್ಷುಕರು, ಪೌರಕಾರ್ಮಿಕರು
- ಕಟ್ಟಡ ಕಾರ್ಮಿಕರು, ಮನೆ ಕೆಲಸದವರು, ಕುಸುರಿ ಕೆಲಸಗಾರರು
- ಟೈಲರ್, ಪ್ಲಂಬರ್, ಸಾರಿಗೆ ನೌಕರರು, ರಿಕ್ಷಾವಾಲಾಗಳು
- ಎಲೆಕ್ಟ್ರಿಷಿಯನ್, ಮೆಕಾನಿಕ್, ಸಹಾಯಕರು

ಆಯುಷ್ಮಾನ್ ಭಾರತ್ ಯೋಜನೆ ಸೌಲಭ್ಯಗಳು

ಆಯುಷ್ಮಾನ್ ಭಾರತ್ ಯೋಜನೆ ಸೌಲಭ್ಯಗಳು

ಫಲಾನುಭವಿಗಳು ಸಾಮಾನ್ಯ ದರ್ಜಯ ವಾರ್ಡ್ ಗಳಲ್ಲಿ ಶುಶ್ರೂಷೆ ಪಡೆಯಲಿದ್ದಾರೆ. ನೋಂದಣಿ ಶುಲ್ಕ, ವೈದ್ಯರ ಶುಲ್ಕ, ಶಸ್ತ್ರ ಚಿಕಿತ್ಸೆ, ಔಷಧಿಗಳು, ರೋಗಪತ್ತೆ ಪರೀಕ್ಷೆ (ಸ್ಕ್ಯಾನ್, ಎಕ್ಸರೇ) ವಿಮೆಯಡಿ ಸಿಗಲಿದೆ. ಶಸ್ತ್ರಚಿಕಿತ್ಸೆ ಹಾಗೂ ಇತರೆ ವೈದ್ಯಕೀಯ ಚಿಕಿತ್ಸಾ ಸೇವೆ ಸಿಗಲಿದ್ದು, ವಿಮೆ ಪಡೆದ ದಿನದಿಂದಲೇ ಎಲ್ಲಾ ಕಾಯಿಲೆಗಳಿಗೂ ಚಿಕಿತ್ಸೆ ಸಿಗಲಿದೆ. ಧೀರ್ಘಕಾಲಿನ ರೋಗಗಳು, ಹೃದಯದ ಬೈಪಾಸ್, ಸರ್ಜರಿ
ಮಂಡಿ ಚಿಪ್ಪು ಅಳವಡಿಕೆ ಕಾಯಿಲೆಗಳಿಗೂ ಚಿಕಿತ್ಸೆ ಸಿಗಲಿದೆ.

ಸೆಪ್ಟಂಬರ್ 25ರಿಂದ ಯೋಜನೆ ಆರಂಭ

ಸೆಪ್ಟಂಬರ್ 25ರಿಂದ ಯೋಜನೆ ಆರಂಭ

ಆಯುಷ್ಮಾನ್ ಭಾರತ್ ಯೋಜನೆ ಪಂಡಿತ್ ದೀನ್ ದಯಾಳ ಉಪಾಧ್ಯಾಯರ ಜನ್ಮದಿನವಾದ ಸೆಪ್ಟಂಬರ್ 25ರಿಂದ ಜಾರಿಯಾಗಲಿದೆ. ಅಲ್ಲಿಯವರೆಗೆ ಬೇಕಾಗುವ ದಾಖಲಾತಿ ಹಾಗು ಇನ್ನಿತರ ಮಾಹಿತಿಯನ್ನು ತಿಳಿದುಕೊಂಡಿರುವುದು ಉತ್ತಮ.

ಈ ರಾಜ್ಯಗಳಲ್ಲಿ ಸೌಲಭ್ಯವಿಲ್ಲ

ಈ ರಾಜ್ಯಗಳಲ್ಲಿ ಸೌಲಭ್ಯವಿಲ್ಲ

ಈ ಯೋಜನೆ ಆರಂಭದ ಮೊದಲ ಹಂತದಲ್ಲಿ ಕರ್ನಾಟಕ, ಕೇರಳ, ಮಹಾರಾಷ್ಟ್ರ, ಪಂಜಾಬ್ ಹಾಗೂ ನವದೆಹಲಿ ರಾಜ್ಯಗಳಲ್ಲಿ ಈ ಯೋಜನೆ ಇರುವುದಿಲ್ಲ. ತದನಂತರ ಹಂತಗಳಲ್ಲಿ ಈ ರಾಜ್ಯಗಳು ಆಯುಷ್ಮಾನ್ ಭಾರತ್ ಯೋಜನೆಗೆ ಒಳಪಡಲಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಹೆಚ್ಚಿನ ಮಾಹಿತಿ/ನೋಂದಾಯಿಸಲು

ಹೆಚ್ಚಿನ ಮಾಹಿತಿ/ನೋಂದಾಯಿಸಲು

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ನೀಡಲಾಗಿರುವ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ. ಇನ್ನೂ ಹೆಚ್ಚ್ಇನ ಮಾಹಿತಿಗಳನ್ನು ಸೇರಿಸಲಾಗಿಲ್ಲ. https://abnhpm.gov.in/coming-soon and https://abnhpm.gov.in/
ಅಧಿಕೃತ ಅಂತರ್ಜಾಲ ತಾಣವನ್ನು ಸಂಪರ್ಕಿಸಿ "ಆನ್ಲೈನ್ ದಾಖಲಾತಿ" ಕೊಂಡಿಯನ್ನು ("Online Registration") ಕ್ಲಿಕ್ಕಿಸಿ. ಅಗತ್ಯವಿರುವ ಎಲ್ಲಾ ಮಾಹಿತಿಗಳನ್ನು ತಪ್ಪಿಲ್ಲದೇ ದಾಖಲಿಸಿ ಪೂರ್ಣವಾದ ಬಳಿಕ ಅರ್ಜಿಯನ್ನು ಸಲ್ಲಿಸಿ (Submit). ಈಗ ಅಂತರ್ಜಾಲ ತಾಣದಲ್ಲಿ ರಚನೆಗೊಂಡ ಅರ್ಜಿ ಸಂಖ್ಯೆ ಅಥವಾ ಉಲ್ಲೇಖ ಸಂಖ್ಯೆಯನ್ನು ತಪ್ಪಿಲ್ಲದೆ ಬರೆದಿಡಿ .

English summary

Ayushman Bharat Scheme: How to get 5 Lakh Insurance Facility?

Here is all you need to know about Ayushman Bharat health insurance scheme, its features, benefits and eligibility criteria.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X