ಎಸ್ಬಿಐ ಪಿಪಿಎಫ್ ಖಾತೆ: ಬಡ್ಡಿದರ, ಹೂಡಿಕೆ ಮಿತಿ, ತೆರಿಗೆ ಪ್ರಯೋಜನಗಳೇನು?

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಗ್ರಾಹಕರು ಯಾವುದೇ ಸಮಯದಲ್ಲಾದರೂ ಪಿಪಿಎಫ್ (ಪಬ್ಲಿಕ್ ಪ್ರಾವಿಡೆಂಟ್ ಫಂಡ್) ಖಾತೆಯನ್ನು ಡಿಜಿಟಲ್ ಚಾನೆಲ್ ಬಳಸಿ ಅನುಕೂಲಕರವಾಗಿ ತೆರೆಯುವ ಆಯ್ಕೆಯನ್ನು ಹೊಂದಿರುತ್ತಾರೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಗ್ರಾಹಕರು ಯಾವುದೇ ಸಮಯದಲ್ಲಾದರೂ ಪಿಪಿಎಫ್ (ಪಬ್ಲಿಕ್ ಪ್ರಾವಿಡೆಂಟ್ ಫಂಡ್) ಖಾತೆಯನ್ನು ಡಿಜಿಟಲ್ ಚಾನೆಲ್ ಬಳಸಿ ಅನುಕೂಲಕರವಾಗಿ ತೆರೆಯುವ ಆಯ್ಕೆಯನ್ನು ಹೊಂದಿರುತ್ತಾರೆ.

ಸಣ್ಣ ಉಳಿತಾಯವನ್ನು ಪ್ರೇರೆಪಿಸಲು ೧೯೬೮ ರಲ್ಲಿ ರಾಷ್ಟ್ರೀಯ ಉಳಿತಾಯ ಸಂಸ್ಥೆ ಪಿಪಿಎಫ್ ಪರಿಚಯಿಸಿದ್ದು, 2016 ರಲ್ಲಿ ಎಸ್ಬಿಐ ಪಿಪಿಎಫ್ ಯೋಜನೆ ಪರಿಚಯಿಸಿದೆ. ಬ್ಯಾಂಕುಗಳು ವಿಧಿಸುವ 8 ಶುಲ್ಕಗಳ ಬಗ್ಗೆ ನಿಮಗೆ ಅರಿವಿರಬೇಕು

ಈ ಯೋಜನೆಯು ತೆರಿಗೆ ಪ್ರಯೋಜನಗಳೊಂದಿಗೆ ಯೋಗ್ಯ ಆದಾಯ ಒದಗಿಸುತ್ತದೆ. ತಮ್ಮ ಹೆಸರಿನಲ್ಲಿ ಮತ್ತು ಚಿಕ್ಕವರ ಪರವಾಗಿ ವ್ಯಕ್ತಿಗಳು ಯಾವುದೇ ಶಾಖೆಯಲ್ಲಿ PPF ಖಾತೆಯನ್ನು ತೆರೆಯಬಹುದು. ವಿಸ್ತೃತ ಸೂಚನೆಗಳ ಪ್ರಕಾರ, ಹಿಂದೂ ಅವಿಭಜಿತ ಕುಟುಂಬದ ಹೆಸರಿನಲ್ಲಿ PPF ಖಾತೆಗಳನ್ನು ತೆರೆಯಲಾಗುವುದಿಲ್ಲ.

ಎಸ್ಬಿಐನ ಪಿಪಿಎಫ್ ಖಾತೆಯನ್ನು ತಿಳಿದುಕೊಳ್ಳಲು ಪ್ರಮುಖ ವಿಷಯಗಳು ಇಲ್ಲಿವೆ:

1. ಕನಿಷ್ಟ, ಗರಿಷ್ಠ ಠೇವಣಿ

1. ಕನಿಷ್ಟ, ಗರಿಷ್ಠ ಠೇವಣಿ

ಕನಿಷ್ಠ ರೂ. 500 ಹಾಗು ವಾರ್ಷಿಕ ರೂ. 1,50,000 ಠೇವಣಿ ಇಡಬಹುದು. ಚಂದಾದಾರರು ವರ್ಷಕ್ಕೆ ರೂ. 1,50,000 ಕ್ಕಿಂತ ಹೆಚ್ಚು ಹಣವನ್ನು ಠೇವಣಿ ಇಡಬಾರದು. ಏಕೆಂದರೆ ಹೆಚ್ಚುವರಿ ಮೊತ್ತಕ್ಕೆ ಯಾವುದೇ ಬಡ್ಡಿ ಇರುವುದಿಲ್ಲ ಅಥವಾ ಆದಾಯ ತೆರಿಗೆ ಕಾಯಿದೆಯಡಿಯಲ್ಲಿ ರಿಯಾಯಿತಿಗಾಗಿ ಅರ್ಹತೆ ಪಡೆಯುವುದಿಲ್ಲ.ವರ್ಷಕ್ಕೆ ಒಂದು ಭಾರಿ ಇಲ್ಲವೇ ಹನ್ನೆರಡು ಕಂತುಗಳಲ್ಲಿ ಮೊತ್ತ ಶೇಖರಿಸಬಹುದು ಎಂದು ಎಸ್ಬಿಐ ಹೇಳಿದೆ.

2. ಅವಧಿ

2. ಅವಧಿ

ಯೋಜನೆಯ ಮೂಲ ಅವಧಿಯು 15 ವರ್ಷಗಳಾಗಿದ್ದು, ಚಂದಾದಾರರು ಬಯಸಿ ಅರ್ಜಿ ಸಲ್ಲಿಸಿದರೆ ಅದನ್ನು 1 ಅಥವಾ ಅದಕ್ಕಿಂತ ಹೆಚ್ಚಿನ 5 ವರ್ಷಗಳಿಗೆ ವಿಸ್ತರಿಸಬಹುದು.

3. ಬಡ್ಡಿಯ ದರ

3. ಬಡ್ಡಿಯ ದರ

ಬಡ್ಡಿಯ ದರವನ್ನು ಕೇಂದ್ರ ಸರ್ಕಾರವು ತ್ರೈಮಾಸಿಕ ಆಧಾರದ ಮೇಲೆ ನಿರ್ಧರಿಸುತ್ತದೆ. ಪ್ರಸ್ತುತ ಇದು ವರ್ಷಕ್ಕೆ ಶೇ. 7.6 ರಷ್ಟಿದೆ.

4. ಸಾಲ ಮತ್ತು ವಿತ್ ಡ್ರಾವಲ್

4. ಸಾಲ ಮತ್ತು ವಿತ್ ಡ್ರಾವಲ್

ಖಾತೆಯ ವರ್ಷಗಳು ಮತ್ತು ನಿಗದಿತ ದಿನಾಂಕಗಳಂತೆ ಬ್ಯಾಲೆನ್ಸ್ ಅವಲಂಬಿಸಿ ಸಾಲ ಮತ್ತು ವಿತ್ ಡ್ರಾವಲ್ ಅನುಮತಿಸಲಾಗಿದೆ.

5. ತೆರಿಗೆ ಪ್ರಯೋಜನ

5. ತೆರಿಗೆ ಪ್ರಯೋಜನ

ಆದಾಯ ತೆರಿಗೆ ಕಾಯಿದೆ ಸೆಕ್ಷನ್ 88 ಅಡಿಯಲ್ಲಿ ಆದಾಯ ತೆರಿಗೆ ಪ್ರಯೋಜನಗಳು ಲಭ್ಯವಿವೆ. ಬಡ್ಡಿಯ ಆದಾಯವು ಆದಾಯ ತೆರಿಗೆಯಿಂದ ಸಂಪೂರ್ಣವಾಗಿ ವಿನಾಯಿತಿ ಪಡೆದಿದೆ. ಸಾಲಕ್ಕೆ ಬಾಕಿ ಉಳಿದಿರುವ ಮೊತ್ತವು ವೆಲ್ತ್ ತೆರಿಗೆಯಿಂದ ಸಂಪೂರ್ಣವಾಗಿ ವಿನಾಯಿತಿ ಪಡೆದಿದೆ ಎಂದು ಎಸ್ಬಿಐ ಹೇಳಿದೆ.

6. ನಾಮಿನೇಷನ್

6. ನಾಮಿನೇಷನ್

ನಾಮನಿರ್ದೇಶನ ಸೌಲಭ್ಯವಿದ್ದು, ಒಂದು ಅಥವಾ ಹೆಚ್ಚಿನ ವ್ಯಕ್ತಿಗಳ ಹೆಸರಿನಲ್ಲಿ ನಾಮಿನೇಷನ್ ಮಾಡಬಹುದಾಗಿದೆ. ನಾಮಿನಿಗಳ ಪಾಲನ್ನು ಚಂದಾದಾರರು ನಿರ್ಧರಿಸುತ್ತಾರೆ.

7.ಖಾತೆ ವರ್ಗಾವಣೆ

7.ಖಾತೆ ವರ್ಗಾವಣೆ

ಪಿಪಿಎಫ್ ಖಾತೆಯನ್ನು ಇತರ ಶಾಖೆಗಳಿಗೆ / ಇತರ ಬ್ಯಾಂಕುಗಳಿಗೆ ಅಥವಾ ಪೋಸ್ಟ್ ಆಫೀಸ್ ಗಳಿಗೆ ವರ್ಗಾಯಿಸಬಹುದು ಮತ್ತು ಚಂದಾದಾರರ ಮನವಿಯ ಮೇರೆಗೆ ಅದನ್ನು ಬದಲಿಸಬಹುದು. ಈ ಸೇವೆ ಶುಲ್ಕರಹಿತವಾಗಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+