For Quick Alerts
ALLOW NOTIFICATIONS  
For Daily Alerts

ಬ್ಯಾಂಕುಗಳು ವಿಧಿಸುವ 8 ಶುಲ್ಕಗಳ ಬಗ್ಗೆ ನಿಮಗೆ ಅರಿವಿರಬೇಕು

ಬ್ಯಾಂಕಿಂಗ್ ವ್ಯವಹಾರ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗ. ಬ್ಯಾಂಕಿಂಗ್ ವಹಿವಾಟು, ಎಟಿಎಂ, ಡೆಬಿಟ್/ಕ್ರೆಡಿಟ್ ಕಾರ್ಡ್, ಆನ್ಲೈನ್ ವ್ಯವಹಾರ ಸಂದರ್ಭದಲ್ಲಿ ವಿಧಿಸಲ್ಪಡುವ ಶುಲ್ಕಗಳ ಬಗ್ಗೆ ಅರಿವಿರಬೇಕಾಗುತ್ತದೆ.

By Siddu
|

ಬ್ಯಾಂಕಿಂಗ್ ವ್ಯವಹಾರ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗ. ಬ್ಯಾಂಕಿಂಗ್ ವಹಿವಾಟು, ಎಟಿಎಂ, ಡೆಬಿಟ್/ಕ್ರೆಡಿಟ್ ಕಾರ್ಡ್, ಆನ್ಲೈನ್ ವ್ಯವಹಾರ ಸಂದರ್ಭದಲ್ಲಿ ವಿಧಿಸಲ್ಪಡುವ ಶುಲ್ಕಗಳ ಬಗ್ಗೆ ಅರಿವಿರಬೇಕಾಗುತ್ತದೆ.

ಹಣ ವಿತ್ ಡ್ರಾ ಮಾಡಲು ನಿಮ್ಮ ಡೆಬಿಟ್ ಕಾರ್ಡ್ ನ್ನು ಬಳಸುತ್ತಿದ್ದರೆ, ಈ ಕೆಳಗಿನ ಶುಲ್ಕಗಳ ಬಗ್ಗೆ ನಿಮಗೆ ತಿಳಿದಿರಲಿ. ಅವು ನಿಮ್ಮ ಮಾಸಿಕ ಬಜೆಟ್ ಹತೋಟಿಯಲ್ಲಿಡಲು ಸಹಕಾರಿಯಾಗಬಲ್ಲದು.. ಬ್ಯಾಂಕಿಂಗ್ ವ್ಯವಹಾರಕ್ಕಾಗಿ ಈ ಅಪ್ಲಿಕೇಶನ್ಸ್ (Apps) ನಿಮ್ಮ ಬಳಿ ಇರಲಿ..

ಕನಿಷ್ಟ ಬ್ಯಾಲೆನ್ಸ್

ಕನಿಷ್ಟ ಬ್ಯಾಲೆನ್ಸ್

ನಿಮ್ಮ ಖಾತೆಯಲ್ಲಿ ಕನಿಷ್ಟ ಮೊತ್ತ ಇರಬೇಕಾಗುತ್ತದೆ. ನೀವು ಉದ್ಯೋಗವನ್ನು ತೊರೆದು ನಿಮ್ಮ ಸಂಬಳದ ಖಾತೆಯನ್ನು ಉಳಿತಾಯ ಖಾತೆಯಾಗಿ ಇರಿಸಲು ಬಯಸಿದರೆ, ಅದು ಸ್ವಯಂಚಾಲಿತವಾಗಿ ಪರಿವರ್ತನೆಯಾಗುತ್ತದೆ. ಆದರೆ ಶೂನ್ಯ ಬ್ಯಾಲೆನ್ಸ್ (zero balance account) ಖಾತೆಯಾಗಿ ಇರುವುದಿಲ್ಲ.
ಉಳಿತಾಯ ಖಾತೆಗಳಲ್ಲಿ ಬ್ಯಾಂಕುಗಳು ಒಂದು ಸಾವಿರದಿಂದ ಹತ್ತು ಸಾವಿರದವರೆಗೆ ಕನಿಷ್ಟ ಅವಶ್ಯಕತೆ ಇದೆ. ಒಂದು ವೇಳೆ ನೀವು ಮಿನಿಮಮ್ ಬ್ಯಾಲೆನ್ಸ್ ಉಳಿಸಲು ವಿಫಲರಾದಲ್ಲಿ ಶುಲ್ಕ ಭರಿಸಬೇಕಾಗುತ್ತದೆ. ನಿಮಗೆ ಠೇವಣಿ ಇಡಲು ಸಾದ್ಯವಾಗದಿದ್ದರೆ ಖಾತೆಯನ್ನು ಮುಚ್ಚಿ.

ಕ್ಯಾಶ್ ವಿತ್ ಡ್ರಾವಲ್

ಕ್ಯಾಶ್ ವಿತ್ ಡ್ರಾವಲ್

ನಿಮ್ಮ ಬ್ಯಾಂಕು ಹೊರತುಪಡಿಸಿ ಬೇರೆ ಬ್ಯಾಂಕುಗಳ ಎಟಿಎಂಗಳಲ್ಲಿ ನಗದು ವಿತ್ ಡ್ರಾ ಮಾಡಿದರೆ ಸೇವಾ ಶುಲ್ಕವನ್ನು ವಿಧಿಸಲ್ಪಡುತ್ತದೆ. ನಿಮ್ಮ ಬ್ಯಾಂಕಿನ ಎಟಿಎಂಗಳಲ್ಲಿ ತಿಂಗಳಿಗೆ ನೀಡಿರುವ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಬಾರಿ ಹಣ ವಿತ್ ಡ್ರಾ ಮಾಡಿದರೆ ಶುಲ್ಕ ವಿಧಿಸಲ್ಪಡುತ್ತದೆ.

ನಗದು ಠೇವಣಿ
 

ನಗದು ಠೇವಣಿ

ನಿಮ್ಮ ಹೋಮ್ ಬ್ರಾಂಚ್ ಹೊರತುಪಡಿಸಿ ಬೇರೆ ಕಡೆಗಳಲ್ಲಿ ನಗದು ಠೇವಣಿ ಇಟ್ಟರೆ ಸೇವಾ ಶುಲ್ಕ ವಿಧಿಸಲ್ಪಡುತ್ತದೆ.

ಚೆಕ್

ಚೆಕ್

ತಿಂಗಳಿಗೆ ಒಂದಕ್ಕಿಂತ ಹೆಚ್ಚು ಚೆಕ್ ಬುಕ್ ಪಡೆದುಕೊಂಡರೆ ಶುಲ್ಕ ಭರಿಸಬೇಕಾಗುತ್ತದೆ. ಹೆಚ್ಚುವರಿಯಾಗಿ, ಹೊಸ ಚೆಕ್ ಬುಕ್ ಪಡೆದರೆ ಅದರಲ್ಲಿನ ಹಾಳೆಗಳು ಕೂಡ ಮೊದಲ ಚೆಕ್ ಬುಕ್ ಗಿಂತ ಕಡಿಮೆಯಿರುತ್ತವೆ. ಇದನ್ನು ಹೊರತುಪಡಿಸಿ ಹೊರಗಡೆ ಚೆಕ್ ಪ್ರಕ್ರಿಯೆ ಸೇವಾ ಶುಲ್ಕ ಒಳಗೊಂಡಿರುತ್ತದೆ.

ಎಸ್ಎಂಎಸ್ ಸೇವೆ

ಎಸ್ಎಂಎಸ್ ಸೇವೆ

ಡಿಪಾಸಿಟ್, ವಿತ್ ಡ್ರಾವಲ್ ಅಥವಾ ಪಾವತಿ ಸಂಬಂಧಿತ ಎಸ್ಎಂಎಸ್ ಸೇವೆಗಳಿಗಾಗಿ ಬ್ಯಾಂಕುಗಳು ಶುಲ್ಕ ವಿದಿಸುತ್ತವೆ.

ಕಾರ್ಡ್ ಮರು ವಿತರಣೆ

ಕಾರ್ಡ್ ಮರು ವಿತರಣೆ

ಕಾರ್ಡುಗಳನ್ನು ಕಳೆದುಕೊಂಡರೆ ಅಥವಾ ಕಳುವಾದರೆ ಹೊಸ ಕಾರ್ಡುಗಳ ಮರು ವಿತರಣೆಗಾಗಿ ಬ್ಯಾಂಕುಗಳು ಶುಲ್ಕವನ್ನು ವಿಧಿಸುತ್ತವೆ.

ವ್ಯಾಪಾರಿ ಪ್ರಕ್ರಿಯಾ ಶುಲ್ಕ

ವ್ಯಾಪಾರಿ ಪ್ರಕ್ರಿಯಾ ಶುಲ್ಕ

ಡಿಜಿಟಲ್ ವ್ಯವಹಾರಗಳ ಸಂದರ್ಭದಲ್ಲಿ ನಿಮ್ಮ ಡೆಬಿಟ್/ಕ್ರೆಡಿಟ್ ಕಾರ್ಡ್ ಬಳಸಿ ಆನ್ಲೈನ್ ಪಾವತಿ ಮಾಡಿದರೆ ಸಾಮಾನ್ಯವಾಗಿ ಶುಲ್ಕ ಇರುವುದಿಲ್ಲ. ಕೆಲ ಸಂದರ್ಭಗಳಲ್ಲಿ ಪ್ರಕ್ರಿಯಾ ಶುಲ್ಕ ಇರುತ್ತದೆ ಎಂಬುದರ ಬಗ್ಗೆ ಅರಿವಿರಬೇಕು.

ವಿದೇಶಿ ಕರೆನ್ಸಿ ವ್ಯವಹಾರ ಶುಲ್ಕ

ವಿದೇಶಿ ಕರೆನ್ಸಿ ವ್ಯವಹಾರ ಶುಲ್ಕ

ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಗಳನ್ನು ಬಳಸಿಕೊಂಡು ವಿದೇಶಿ ಕರೆನ್ಸಿ ವಹಿವಾಟನ್ನು ಮಾಡಿದರೆ 2 ರಿಂದ 4 ಪ್ರತಿಶತದಷ್ಟು ಕ್ರಾಸ್ ಕರೆನ್ಸಿ ಮಾರ್ಕ್ಅಪ್ ಶುಲ್ಕವನ್ನು ನಿಮಗೆ ವಿಧಿಸಬಹುದು.

Read more about: banking money finance news atm frauds
English summary

8 Bank Charges That You Should be Aware of

Banking has brought an ease to our day to day payments and expenses that we have become almost ignorant about the charges on services that banks impose on us as "fees."
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X