For Quick Alerts
ALLOW NOTIFICATIONS  
For Daily Alerts

ಖಾತೆ ತೆರೆಯುವ ಮುನ್ನ ಇಲ್ಲೊಮ್ಮೆ ನೋಡಿ..

ಉಳಿತಾಯ ಖಾತೆ ಎಂಬುದು ಸಾರ್ವಜನಿಕರನ್ನು ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಬೆಸೆಯುವ ಪ್ರಮುಖ ಕೊಂಡಿಯಾಗಿದೆ. ಉಳಿತಾಯ ಖಾತೆ ಅದರ ಹೆಸರೇ ಹೇಳುವಂತೆ ಜನರಲ್ಲಿ ಹಣದ ಉಳಿತಾಯ ಮನೋಭಾವನೆ ಮೂಡಿಸಲು ಸಹಕಾರಿಯಾಗಿದೆ

|

ಉಳಿತಾಯ ಖಾತೆ ಎಂಬುದು ಸಾರ್ವಜನಿಕರನ್ನು ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಬೆಸೆಯುವ ಪ್ರಮುಖ ಕೊಂಡಿಯಾಗಿದೆ. ಉಳಿತಾಯ ಖಾತೆ ಅದರ ಹೆಸರೇ ಹೇಳುವಂತೆ ಜನರಲ್ಲಿ ಹಣದ ಉಳಿತಾಯ ಮನೋಭಾವನೆ ಮೂಡಿಸಲು ಸಹಕಾರಿಯಾಗಿದೆ. ಈ ಖಾತೆಯಲ್ಲಿ ಹಣ ಇಟ್ಟು ಬೇಕೆಂದಾಗ ವಾಪಸ್ ಪಡೆದುಕೊಳ್ಳಬಹುದು.
ಬ್ಯಾಂಕುಗಳಲ್ಲಿ ಹಲವಾರು ರೀತಿಯ ಉಳಿತಾಯ ಖಾತೆಗಳನ್ನು ತೆರೆಯುವ ಸೌಲಭ್ಯವಿದೆ. ಗ್ರಾಹಕರ ಅವಶ್ಯಕತೆ ಹಾಗೂ ಆಯಾ ಖಾತೆಗಳಿಗೆ ನೀಡಲಾಗುವ ಸೌಲಭ್ಯಗಳನ್ನು ಆಧರಿಸಿ ಇವುಗಳನ್ನು ವಿಂಗಡಿಸಲಾಗಿದೆ. ಓರ್ವ ವ್ಯಕ್ತಿ ಉಳಿತಾಯ ಖಾತೆ ಆರಂಭಿಸುವ ಮುನ್ನ ತನಗೆ ಯಾವ ರೀತಿಯ ಖಾತೆ ಸರಿಹೊಂದುತ್ತದೆ? ಆಯಾ ಖಾತೆಯಲ್ಲಿ ಕಾಯ್ದುಕೊಳ್ಳಬೇಕಾದ ಮಿನಿಮಮ್ ಬ್ಯಾಲೆನ್ಸ್ ಎಷ್ಟು? ಮುಂತಾದ ಅಂಶಗಳನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ. ಉಳಿತಾಯ ಖಾತೆ ತೆರೆಯುವ ಮುನ್ನ ತಿಳಿಯಬೇಕಾದ ಪ್ರಮುಖ ಅಂಶಗಳನ್ನು ಈ ಅಂಕಣದಲ್ಲಿ ನೀಡಲಾಗಿದೆ.

ಉಳಿತಾಯ ಖಾತೆ ಆರಂಭಿಸುವ ಮುನ್ನ ತಿಳಿಯಬೇಕಾದ ಪ್ರಮುಖ ಅಂಶಗಳು:

ಮಾಸಿಕ ಸರಾಸರಿ ಬ್ಯಾಲೆನ್ಸ್

ಮಾಸಿಕ ಸರಾಸರಿ ಬ್ಯಾಲೆನ್ಸ್

ಬ್ಯಾಂಕಿನ ನಿಯಮಿತ ಉಳಿತಾಯ ಖಾತೆಯಲ್ಲಿ ಮಾಸಿಕ ಸರಾಸರಿ ಬ್ಯಾಲೆನ್ಸ್ 2,500 ರೂಪಾಯಿಗಳಿಂದ 10,000 ರೂಪಾಯಿಗಳವರೆಗೆ ನಿಗದಿಪಡಿಸಲಾಗಿದೆ. ಕೆಲ ಬಾರಿ ಈ ಮೊತ್ತ ಹೆಚ್ಚಾಗಿರುವ ಸಾಧ್ಯತೆಯೂ ಇದೆ. ಉಳಿತಾಯ ಖಾತೆಯ ಗ್ರಾಹಕರಿಗೆ ನೀಡಲಾಗುವ ಸೌಲಭ್ಯಗಳನ್ನು ಆಧರಿಸಿ ಇದನ್ನು ನಿಗದಿಪಡಿಸಲಾಗುತ್ತದೆ. ಪ್ರೀಮಿಯಂ ಅಥವಾ ಅಧಿಕ ನಿವ್ವಳ ವ್ಯವಹಾರದ ಖಾತೆಗೆ ಸರಾಸರಿ ಬ್ಯಾಲೆನ್ಸ್ ಮೊತ್ತ ಸರಳ ಉಳಿತಾಯ ಖಾತೆಗಿಂತ ಎಷ್ಟೋ ಪಟ್ಟು ಅಧಿಕವಾಗಿರುತ್ತದೆ.
ಎಲ್ಲ ಸೌಲಭ್ಯಗಳನ್ನು ಒಳಗೊಂಡ ಉಳಿತಾಯ ಖಾತೆಯ ಸರಾಸರಿ ಬ್ಯಾಲೆನ್ಸ್ ವಿವಿಧ ಅಂಶಗಳನ್ನು ಆಧರಿಸಿರುತ್ತದೆ. ಗ್ರಾಹಕರ ಟೋಟಲ್ ರಿಲೇಶನಶಿಪ್ ವ್ಯಾಲ್ಯು (ಟಿಆರ್‌ವಿ) ಮೂಲಕ ಇದು ನಿರ್ಧರಿಸಲ್ಪಡುತ್ತದೆ. ಅಂದರೆ ಗ್ರಾಹಕ ಅದೇ ಬ್ಯಾಂಕಿನಲ್ಲಿ ಹೊಂದಿರುವ ಎಫ್‌ಡಿ, ಆರ್‌ಡಿ, ಉಳಿತಾಯ ಖಾತೆ ಮತ್ತು ಡಿಮ್ಯಾಟ್ ಖಾತೆ ಮುಂತಾದುವುಗಳ ಸರಾಸರಿ ವ್ಯವಹಾರದ ಮೇಲೆ ಇದು ಅವಲಂಬಿತವಾಗಿರುತ್ತದೆ.
ಹಾಗಾಗಿ ಬ್ಯಾಂಕಿನಲ್ಲಿ ಉಳಿತಾಯ ಖಾತೆ ತೆರೆಯುವ ಮುನ್ನ ಈ ಎಲ್ಲ ಅಂಶಗಳನ್ನು ಆಧರಿಸಿ ಸರಾಸರಿ ಎಷ್ಟು ಬ್ಯಾಲೆನ್ಸ್ ಕಾಯ್ದುಕೊಳ್ಳಬೇಕಾಗುತ್ತದೆ ಹಾಗೂ ಸಿಗಬಹುದಾದ ಸೌಲಭ್ಯಗಳು ಯಾವುವು ಎಂಬುದನ್ನು ಪರಿಶೀಲಿಸಿ.

ಶುಲ್ಕಗಳು

ಶುಲ್ಕಗಳು

ಖಾತೆದಾರರಿಗೆ ನೀಡುವ ಹಲವಾರು ಸೌಲಭ್ಯಗಳಿಗೆ ಬ್ಯಾಂಕಗಳು ಶುಲ್ಕವನ್ನು ಆಕರಿಸುತ್ತವೆ. ಆನ್‌ಲೈನ್ ಹಣ ವರ್ಗಾವಣೆ, ಚೆಕ್ ಬುಕ್, ನಗದು ಡೆಪಾಸಿಟ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಅಕೌಂಟ್ ಸ್ಟೇಟಮೆಂಟ್, ಹೆಚ್ಚುವರಿ ಪಾಸ್ ಬುಕ್, ಲಾಕರ್ ಮುಂತಾದ ಸೌಲಭ್ಯಗಳಿಗೆ ಪ್ರತ್ಯೇಕವಾಗಿ ಶುಲ್ಕ ನೀಡಬೇಕಾಗುತ್ತದೆ. ಕೇವಲ ಹಣ ಉಳಿತಾಯ ಮಾಡುವುದು, ಯಾವಾಗಲಾದರೊಮ್ಮೆ ಚೆಕ್ ಬಳಸುವುದಾದರೆ ಬೇಸಿಕ್ ಉಳಿತಾಯ ಖಾತೆ ನಿಮಗೆ ಸಾಕಾಗುತ್ತದೆ. ಅನೇಕ ಸೌಲಭ್ಯಗಳನ್ನು ಬಯಸುತ್ತಿದ್ದರೆ ನೀವು ಪ್ರೀಮಿಯಂ ಖಾತೆ ತೆರೆಯಬೇಕಾಗುತ್ತದೆ.

ಹೆಚ್ಚುವರಿ ಸೌಲಭ್ಯಗಳನ್ನು ಪರಿಶೀಲಿಸಿ

ಹೆಚ್ಚುವರಿ ಸೌಲಭ್ಯಗಳನ್ನು ಪರಿಶೀಲಿಸಿ

ಕೆಲ ಬ್ಯಾಂಕ್‌ಗಳು ಉಳಿತಾಯ ಖಾತೆದಾರರಿಗೆ ಶೇ. 20 ರಿಂದ 50 ರಷ್ಟು ರಿಯಾಯಿತಿ ದರದಲ್ಲಿ ಲಾಕರ್ ಸೌಲಭ್ಯ, ಉಚಿತ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್, ಚೆಕ್ ಬುಕ್ ಮುಂತಾದ ಆಫರ್‌ಗಳನ್ನು ನೀಡುತ್ತವೆ. ಮನೆ ಬಾಗಿಲಿಗೆ ಬಂದು ನಗದು ಹಾಗೂ ಚೆಕ್ ಸಂಗ್ರಹ ಮುಂತಾದ ಆಫರ್‌ಗಳನ್ನು ಸಹ ಕೆಲ ಬ್ಯಾಂಕ್‌ಗಳು ನೀಡುತ್ತವೆ. ಉಚಿತ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್‌ಗಳೊಂದಿಗೆ ದೇಶೀಯ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದೊಳಗೆ ಉಚಿತ ಪ್ರವೇಶ, ಫೈವ್ ಸ್ಟಾರ್ ಹೋಟೆಲ್‌ಗಳಲ್ಲಿ ರಿಯಾಯಿತಿ, ಉಚಿತ ಸಿನಿಮಾ ಟಿಕೆಟ್ ಹೀಗೆ ಕೆಲ ಬ್ಯಾಂಕ್‌ಗಳು ನೀಡುವ ವಿವಿಧ ಸೌಲಭ್ಯಗಳನ್ನು ಪರಿಶೀಲಿಸಿ.
ಇನ್ನು ಕೆಲ ಸಂದರ್ಭಗಳಲ್ಲಿ ಹೆಚ್ಚು ವಿತ್‌ಡ್ರಾ ಲಿಮಿಟ್ ಹಾಗೂ ಹೆಚ್ಚು ಖರ್ಚು ಮಾಡಬಹುದಾದ ಡೆಬಿಟ್ ಕಾರ್ಡ್, ನಿರ್ವಹಣಾ ಶುಲ್ಕ ರಹಿತ ಡಿಮ್ಯಾಟ್ ಅಕೌಂಟ್, ೨೪ ಗಂಟೆ ಗ್ರಾಹಕ ಸಹಾಯ ಸೇವೆ ಮುಂತಾದ ಸೌಲಭ್ಯಗಳು ಸಹ ಲಭಿಸುತ್ತವೆ. ಆದರೆ ಹೆಚ್ಚು ಸರಾಸರಿ ಬ್ಯಾಲೆನ್ಸ್ ಕಾಯ್ದುಕೊಳ್ಳವವರಿಗೆ ಮಾತ್ರ ಮೇಲೆ ತಿಳಿಸಲಾದ ಬಹುತೇಕ ಪ್ರೀಮಿಯಂ ಸೌಲಭ್ಯಗಳು ಲಭ್ಯ ಎಂಬುದು ಗೊತ್ತಿರಲಿ.

ಉಳಿತಾಯ ಖಾತೆ ಬಡ್ಡಿ ದರ

ಉಳಿತಾಯ ಖಾತೆ ಬಡ್ಡಿ ದರ

ಉಳಿತಾಯ ಖಾತೆಗೆ ಸಾಮಾನ್ಯವಾಗಿ ವಾರ್ಷಿಕ ಶೇ. 3.5 ರಿಂದ 4 ರಷ್ಟು ಬಡ್ಡಿ ದರ ನೀಡಲಾಗುತ್ತದೆ. ಕೆಲ ಬ್ಯಾಂಕ್‌ಗಳು ಮಾತ್ರ ಶೇ. 6 ರಿಂದ 7 ರಷ್ಟು ಬಡ್ಡಿಯನ್ನು ನೀಡುತ್ತವೆ. ಉಳಿತಾಯ ಖಾತೆಯಲ್ಲಿ ಸಿಗುವ 10 ಸಾವಿರ ರೂಪಾಯಿವರೆಗಿನ ಬಡ್ಡಿಗೆ ಆದಾಯ ತೆರಿಗೆ ಕಾಯ್ದೆ ೮೦ಟಿಟಿಎ ಅನ್ವಯ ತೆರಿಗೆ ವಿನಾಯಿತಿ ಇರುತ್ತದೆ.
ಒಂದು ವೇಳೆ ನೀವು ಉಳಿತಾಯ ಖಾತೆಯಲ್ಲಿ ದೊಡ್ಡ ಮೊತ್ತವನ್ನು ಇಡಲು ಬಯಸುತ್ತಿದ್ದರೆ ಬಡ್ಡಿ ದರವನ್ನು ಪರಿಶೀಲಿಸುವುದು ಅಗತ್ಯವಾಗುತ್ತದೆ. ಪ್ರತಿ ದಿನದ ಆಧಾರದಲ್ಲಿ ಬಡ್ಡಿಯನ್ನು ಜಮೆ ಮಾಡಲಾಗುವುದರಿಂದ ದೊಡ್ಡ ಮೊತ್ತವನ್ನು ಖಾತೆಯಲ್ಲಿ ಇಡುವುದಾದರೆ ಹೆಚ್ಚು ಬಡ್ಡಿ ಸಿಗುವ ಖಾತೆಯನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ.

ಸ್ವೀಪ್ ಇನ್ ಸೌಲಭ್ಯ (Sweep-in facility)

ಸ್ವೀಪ್ ಇನ್ ಸೌಲಭ್ಯ (Sweep-in facility)

ಉಳಿತಾಯ ಖಾತೆಯೊಂದಿಗೆ ನಿಮ್ಮ ಬ್ಯಾಂಕ್ ಸ್ವೀಪ್ ಇನ್ ಎಫ್‌ಡಿ ಸೌಕರ್ಯ ನೀಡುತ್ತಿದೆಯಾ ಎಂಬುದನ್ನು ಪರಿಶೀಲಿಸಿ. ನಿಮ್ಮ ಉಳಿತಾಯ ಖಾತೆಯ ಬ್ಯಾಲೆನ್ಸ್ ಅನ್ನು ನಿರ್ದಿಷ್ಟ ಮೊತ್ತಕ್ಕೆ ನಿಗದಿಪಡಿಸಿ, ಅದರ ಮೇಲೆ ಜಮೆಯಾಗುವ ಹಣ (ಸಾವಿರದ ಗುಣಕಗಳಲ್ಲಿ) ತನ್ನಿಂತಾನೇ ಎಫ್‌ಡಿ ಖಾತೆಗೆ ವರ್ಗಾವಣೆ ಆಗುವಂತೆ ಮಾಡುವುದೇ ಸ್ವೀಪ್ ಇನ್ ಸೌಲಭ್ಯವಾಗಿದೆ.
ಆದಾಗ್ಯೂ ನಿಮಗೆ ಅವಶ್ಯಕತೆ ಬಿದ್ದಾಗ ಎಫ್‌ಡಿ ಖಾತೆಯಲ್ಲಿನ ಹಣವನ್ನು ರೂ.೧ ರ ಗುಣಕಗಳಲ್ಲಿ ವಾಪಸ್ ಪಡೆಯಬಹುದು. ಉಳಿತಾಯ ಖಾತೆಯಲ್ಲಿನ ಹೆಚ್ಚುವರಿ ಹಣಕ್ಕೆ ಫಿಕ್ಸೆಡ್ ಡೆಪಾಸಿಟ್ ಲೆಕ್ಕದಲ್ಲಿ ಬಡ್ಡಿಯನ್ನು ಈ ಸೌಲಭ್ಯದ ಮೂಲಕ ಪಡೆಯಬಹುದು.

ಬ್ಯಾಂಕ್ ಸಿಬ್ಬಂದಿಯಿಂದ ಗ್ರಾಹಕ ಸೇವೆ

ಬ್ಯಾಂಕ್ ಸಿಬ್ಬಂದಿಯಿಂದ ಗ್ರಾಹಕ ಸೇವೆ

ಪ್ರೀಮಿಯಂ ಖಾತೆದಾರರಿಗೆ ಬ್ಯಾಂಕುಗಳು ಸಾಮಾನ್ಯವಾಗಿ ಓರ್ವ ರಿಲೇಶನಶಿಪ್ ಮ್ಯಾನೇಜರ್ ಅನ್ನು ನೇಮಿಸುತ್ತವೆ. ಯಾವುದೇ ಸೇವೆ ಬೇಕೆಂದಾಗ ಇವರ ಮೂಲಕ ತ್ವರಿತವಾಗಿ ಸಹಾಯ ಪಡೆದುಕೊಳ್ಳಬಹುದು. ಸಾಲ, ಡಿಮ್ಯಾಟ್ ಖಾತೆ, ಕಾರ್ಡ್‌ಗಳು ಮುಂತಾದ ಸೇವೆಗಳನ್ನು ಸುಲಭವಾಗಿ ಪಡೆಯಲು ಈ ರಿಲೇಶನಶಿಪ್ ಮ್ಯಾನೇಜರ್‌ಗಳು ನೆರವಾಗುತ್ತಾರೆ.

Read more about: banking savings money finance news
English summary

Check these things before opening a Savings Bank Account

Let’s take a look at some key points to keep in mind while choosing an Savings Bank account. How much balance do you need to maintain.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X