For Quick Alerts
ALLOW NOTIFICATIONS  
For Daily Alerts

ನಿರಂತರ ಆದಾಯ ಇಲ್ಲದ ವ್ಯಕ್ತಿಗಳು ಏನು ಮಾಡಬೇಕು?

|

ಜಗತ್ತಿನಲ್ಲಿ ಎಲ್ಲರೂ ಪ್ರತಿನಿತ್ಯ ಬೆಳಗ್ಗೆ ೧೦ ರಿಂದ ಸಂಜೆ ೬ ರವರೆಗೆ ಆಫೀಸಿನ ಕ್ಯುಬಿಕಲ್ ನಲ್ಲಿ ಕುಳಿತು ಮಾಡುವ ಕೆಲಸವನ್ನು ಇಷ್ಟಪಡಲಾರರು. ಬೇರೆ ಬೇರೆ ಜನರ ಜೀವನೋಪಾಯದ ಮಾರ್ಗಗಳು ವಿಭಿನ್ನವಾಗಿರುತ್ತವೆ.

ಕೆಲವರಿಗೆ ತಾವು ಮಾಡುತ್ತಿರುವ ಉದ್ಯೋಗದಲ್ಲಿ ಉದ್ಯೋಗ ಸುರಕ್ಷತೆಯ ವಿಷಯ ಮುಖ್ಯವಾಗಿರುತ್ತದೆ.ಇನ್ನು ಕೆಲವರು ರಿಸ್ಕ್ ಆದರೂ ಪರವಾಗಿಲ್ಲ ಫ್ರೀಲಾನ್ಸಿಂಗ್ ಅಥವಾ ಸ್ವಂತ ಉದ್ದಿಮೆ ಮಾಡುತ್ತೇನೆ ಎಂದು ನಿರ್ಧರಿಸಿ ಅದೇ ರೀತಿ ಬದುಕುತ್ತಿರುತ್ತಾರೆ. ನಿತ್ಯ ಆಫೀಸಿಗೆ ಹೋಗಿ ಕೆಲಸ ಮಾಡಿ ಬರುವವರಿಗಿಂತ, ಜೀವನವನ್ನು ನೋಡುವ ಇವರ ದೃಷ್ಟಿಕೋನ ವಿಭಿನ್ನವಾಗಿರುತ್ತದೆ. ಆದರೆ ಇಂಥವರು ಯಾವಾಗಲೂ ಅನಿಶ್ಚಿತ ಆದಾಯದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಅನಿಯಮಿತ ಅವಧಿಯ ಅಂತರಗಳಲ್ಲಿ ಆದಾಯ ಬರುತ್ತಿರುವಾಗ ವೈಯಕ್ತಿಕ ಹಣಕಾಸು ವ್ಯವಸ್ಥೆಯನ್ನು ಅತ್ಯಂತ ಜಾಣ್ಮೆಯಿಂದ ನಿಭಾಯಿಸಬೇಕಾಗುತ್ತದೆ.

 

ಮುಖ್ಯಮಂತ್ರಿ 1 ಲಕ್ಷ ವಸತಿ ಯೋಜನೆಗೆ ಅರ್ಜಿ ಸಲ್ಲಿಕೆ ಹಾಗು ಸ್ಟೇಟಸ್ ಚೆಕ್ ಮಾಡೋದು ಹೇಗೆ?

ಅನಿಶ್ಚಿತ ಆದಾಯದ ಪರಿಸ್ಥಿತಿಗಳಲ್ಲಿ ಲೈಫ್ ಮ್ಯಾನೇಜ್ ಮಾಡುವ ೫ ವಿಧಾನಗಳು:

ಬಜೆಟ್ ತಯಾರಿಸಿ

ಅಂಚೆ ಇಲಾಖೆಯ ಯೋಜನೆಗಳ ಬಗ್ಗೆ ನಿಮಗೆ ಗೊತ್ತಿರಬೇಕಾದ ಸಂಗತಿಗಳು

ಜೀವವಿಮೆ ಹಾಗೂ ಆರೋಗ್ಯ ವಿಮೆ ಪಡೆದುಕೊಳ್ಳಿ

ನಿತ್ಯ ಆಫೀಸಿಗೆ ಹೋಗಿ ಮಾಡುವ ಕೆಲಸಗಳು ಒಂದು ರೀತಿ ಕಟ್ಟಿ ಹಾಕಿದಂತೆನಿಸಿದರೂ ಅದಕ್ಕೆ ಅದರದೇ ಆದ ಅನುಕೂಲತೆಗಳೂ ಇವೆ. ದಿನದಲ್ಲಿ ಕಚೇರಿಗೆ ಹೋಗಿ ಕೆಲಸ ಮಾಡುವವರಿಗೆ ಅವರ ಕಂಪನಿಯಿಂದ ಸಿಗುವ ಜೀವವಿಮೆ ಹಾಗೂ ಆರೋಗ್ಯ ವಿಮೆ ಸೌಲಭ್ಯಗಳು ಇಂಥ ಪ್ರಯೋಜನಗಳಲ್ಲೊಂದಾಗಿವೆ. ನೀವು ಸ್ವ ಉದ್ಯೋಗ ಅಥವಾ ಫ್ರೀ ಲಾನ್ಸಿಂಗ್ ಮಾಡುವವರಾಗಿದ್ದರೆ ನಿಮಗೆ ಇಂಥ ಸೌಲಭ್ಯಗಳನ್ನು ಯಾರೂ ನೀಡಲಾರರು. ಹೀಗಾಗಿ ಜವಾಬ್ದಾರಿಯುತ ಗೃಹಸ್ಥರಾಗಿರುವವರೆಲ್ಲರೂ ತಾವಾಗಿಯೇ ವಿಮೆಯ ಸುರಕ್ಷತೆಯನ್ನು ಪಡೆದುಕೊಳ್ಳಬೇಕಾಗುತ್ತದೆ.

ನಿಶ್ಚಿತ ಅವಧಿಗೆ ವಿಮಾ ಸುರಕ್ಷೆ ನೀಡುವ ಟರ್ಮ ಲೈಫ್ ಇನ್ಸುರೆನ್ಸ್ ಖರೀದಿಸಬೇಕು. ಒಂದೊಮ್ಮೆ ವಿಮಾ ಅವಧಿಯೊಳಗೆ ಪಾಲಿಸಿದಾರ ಆಕಸ್ಮಿಕ ಮರಣ ಹೊಂದಿದಲ್ಲಿ ಆತನ ನಾಮಿನಿಗೆ ಇನ್ಸುರೆನ್ಸ್ ಡೆಥ್ ಬೆನಿಫಿಟ್ ಹಾಗೂ ವಿಮೆಯ ಖಾತರಿ ಮೊತ್ತ ಎರಡೂ ಸಿಗುತ್ತವೆ. ಯಾವುದೇ ಗೃಹ ಸಾಲ ಅಥವಾ ಕಾರು ಸಾಲಗಳು ಇದ್ದಲ್ಲಿ ಅವುಗಳನ್ನು ತೀರಿಸಲು ಈ ಮೊತ್ತ ನೆರವಾಗುತ್ತವೆ. ಹೀಗೆ ಆಪತ್ಕಾಲದಲ್ಲಿಯೂ ನಿಮ್ಮ ಕುಟುಂಬದ ಸುರಕ್ಷತೆಯನ್ನು ಖಾತರಿಪಡಿಸಬಹುದು.

ತುರ್ತು ನಿಧಿ ಇರಲಿ
 

ತುರ್ತು ನಿಧಿ ಇರಲಿ

ಆದಾಯ ಅನಿಶ್ಚಿತವಾಗಿರುವಾಗ ತುರ್ತು ನಿಧಿ ಕಾಯ್ದುಕೊಳ್ಳುವುದು ಅತಿ ಅಗತ್ಯವಾಗಿದೆ. ಯಾವುದೋ ಬಾಕಿ ಮೊತ್ತ ಬರುವುದು ತಡವಾದ ಸಂದರ್ಭಗಳಲ್ಲಿ ತುರ್ತು ನಿಧಿ ಸಹಾಯಕ್ಕೆ ಬರುತ್ತದೆ. ಕೈಕೆಲಸ ಅಥವಾ ಫ್ರೀಲಾನ್ಸಿಂಗ್ ಕೆಲಸ ಮಾಡುವಾಗ ಆದಾಯ ಯಾವಾಗ ಸಿಗುತ್ತದೆ ಎಂಬ ಬಗ್ಗೆ ಖಾತರಿ ಇರುವುದಿಲ್ಲ. ಒಮ್ಮೊಮ್ಮೆ ಬೇಗನೆ ಬಾಕಿ ಪಾವತಿಯಾದರೆ, ಇನ್ನು ಕೆಲವೊಮ್ಮೆ ತೀರಾ ತಡವಾಗಿ ಬರಬಹುದು. ಇಂಥ ಕಠಿಣ ಪರಿಸ್ಥಿತಿಗಳನ್ನು ನಿಭಾಯಿಸಲು ತುರ್ತು ನಿಧಿ ಸಂಗ್ರಹಿಸಿ ಇಟ್ಟುಕೊಳ್ಳುವುದು ಜಾಣತನವಾಗಿದೆ. ಕಾಯಿಲೆ ಅಥವಾ ತುರ್ತಾಗಿ ಎಲ್ಲೋ ಹೋಗಬೇಕಾದ ಸಂದರ್ಭಗಳಲ್ಲಿಯೂ ಈ ನಿಧಿ ಆಪತ್ಬಾಂಧವನಾಗಿ ಕೈ ಹಿಡಿಯುತ್ತದೆ.

ಮಿತಿ ಮೀರಿ ಖರ್ಚು ಮಾಡುವಂತಿಲ್ಲ

ಯಾವುದೋ ಬಾಕಿ ಮೊತ್ತ ಕೈಸೇರಿದಾಗ ಒಮ್ಮೆಲೇ ಎಲ್ಲ ಹಣವನ್ನು ಖರ್ಚು ಮಾಡುವುದು ಸರಿಯಲ್ಲ. ಅತಿಯಾಗಿ ಖರ್ಚು ಮಾಡುವ ಪ್ರವೃತ್ತಿಗೆ ಕಡಿವಾಣ ಹಾಕಲೇಬೇಕು. ಕೈತುಂಬಾ ಹಣ ಇದ್ದಾಗ ಬೇಕಾಬಿಟ್ಟಿ ಖರ್ಚು ಮಾಡಿದರೆ ಭವಿಷ್ಯದಲ್ಲಿ ಹಣಕಾಸು ಕೊರತೆ ಎದುರಿಸಬೇಕಾಗಿ ಬರಬಹುದು. ಹಣ ಬಂದ ಕ್ಷಣದಲ್ಲಿ ಲೆಕ್ಕಾಚಾರ ಹಾಕಿಯೇ ಖರ್ಚು ಮಾಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಯಾವುದೋ ತೀರಾ ಅಗತ್ಯ ಸಂದರ್ಭಗಳಲ್ಲಿ ಹಣ ಇಲ್ಲದೆ ಪರದಾಡುವಂತಾಗಬಹುದು. ಹೀಗಾಗಿ ಅನಿಶ್ಚಿತ ಆದಾಯ ಹೊಂದಿರುವವರು ಖರ್ಚಿನ ಮೇಲೆ ನಿಗಾ ವಹಿಸಲೇಬೇಕು.

ಸಾಲದಿಂದ ದೂರವಿರಿ

ನಿಮ್ಮ ಆದಾಯ ಅನಿಶ್ಚಿತವಾಗಿದ್ದರೆ ನೀವು ಸಾಲಗಳಿಂದ ದೂರವಿರುವುದೇ ವಾಸಿ. ಕ್ರೆಡಿಟ್ ಕಾರ್ಡ ಹೊರತುಪಡಿಸಿದರೆ ಬಹುತೇಕ ಎಲ್ಲ ಬಗೆಯ ಸಾಲಗಳ ಕಂತುಗಳನ್ನು ಪ್ರತಿತಿಂಗಳು ನಿಯಮಿತವಾಗಿ ಪಾವತಿಸಬೇಕಾಗುತ್ತದೆ. ಪರ್ಸನಲ್ ಲೋನ ಅಥವಾ ಗೃಹ ಸಾಲ ಪಡೆದುಕೊಂಡರೆ ಒಪ್ಪಂದದಂತೆ ಪ್ರತಿ ತಿಂಗಳು ನಿಗದಿತ ದಿನಾಂಕದಂದು ಇಎಂಐ ಕಟ್ಟಲೇಬೇಕು. ಇಂಥ ಇಎಂಐಗಳು ಸಾಮಾನ್ಯವಾಗಿ ಬ್ಯಾಂಕ್ ಖಾತೆಯಿಂದ ಆಟೊ ಡೆಬಿಟ್ ಆಗುತ್ತವೆ. ಆದಾಯ ಸುನಿಶ್ಚಿತವಾಗಿಲ್ಲದಿರುವಾಗ ಬ್ಯಾಂಕ್ ಬ್ಯಾಲೆನ್ಸ್ ಇಡುವುದು ಕಷ್ಟಕರ. ನಿಗದಿತ ದಿನಾಂಕದಂದು ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದಿದ್ದರೆ ಚೆಕ್ ಬೌನ್ಸ್ ಆಗುವ ಅಪಾಯವಿರುತ್ತದೆ. ಇದರಿಂದ ಕಾನೂನು ತೊಡಕುಗಳನ್ನು ಎದುರಿಸಬೇಕಾಗುತ್ತದೆ. ಅಲ್ಲದೆ ಮುಂದಿನ ದಿನಗಳಲ್ಲಿ ಮತ್ತೊಂದು ಸಾಲ ಪಡೆಯುವ ಸಾಧ್ಯತೆಗಳೂ ಕ್ಷೀಣಿಸುತ್ತವೆ.

ಆರ್ಥಿಕ ಶಿಸ್ತು ಇರಲಿ

ಸಾಮಾನ್ಯವಾಗಿ ಜೀವನದ ಒಂದಿಲ್ಲೊಂದು ಹಂತದಲ್ಲಿ ಎಲ್ಲರೂ ಅನಿಶ್ಚಿತ ಆದಾಯದ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ. ಇಂಥ ಅವಧಿಯಲ್ಲಿ ನಿಮ್ಮ ಇತಿ ಮಿತಿಗಳನ್ನು ಅರಿತು ಬಾಳಿದರೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಜೀವನದಲ್ಲಿ ಆರ್ಥಿಕ ಶಿಸ್ತು ಅಳವಡಿಸಿಕೊಂಡಲ್ಲಿ ಅನಿಶ್ಚಿತ ಆದಾಯದ ಸಂದರ್ಭಗಳಲ್ಲಿಯೂ ನೆಮ್ಮದಿಯ ಜೀವನ ನಡೆಸಬಹುದು.

Read more about: income investment money savings
English summary

Best Ways to Manage Money Without Regular Income

Not every person in this world likes to have a day job where they would be stuck in their cubicles from 10 am to 6 pm.
Story first published: Thursday, October 25, 2018, 10:40 [IST]
Company Search
Enter the first few characters of the company's name or the NSE symbol or BSE code and click 'Go'
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more