ಅಂಚೆ ಕಚೇರಿ ಉಳಿತಾಯ ಯೋಜನೆ: ಸ್ಥಿರ ಠೇವಣಿ (FD) ಮತ್ತು ಮರುಕಳಿಸುವ ಠೇವಣಿ (RD) ಯಾವುದು ಬೆಸ್ಟ್

ಭಾರತೀಯ ಅಂಚೆ ಇಲಾಖೆ ದೇಶದಾದ್ಯಂತ 1.55 ಲಕ್ಷ ಅಂಚೆ ಕಚೇರಿಗಳನ್ನು ಹೊಂದಿದ್ದು, ಮೇಲಿಂಗ್ ಸೇವೆಗಳನ್ನು ಹೊರತುಪಡಿಸಿ, ವಿವಿಧ ಬ್ಯಾಂಕಿಂಗ್ ಮತ್ತು ರವಾನೆ ಸೇವೆಗಳನ್ನು ಒದಗಿಸುತ್ತದೆ.

ಭಾರತೀಯ ಅಂಚೆ ಇಲಾಖೆ ದೇಶದಾದ್ಯಂತ 1.55 ಲಕ್ಷ ಅಂಚೆ ಕಚೇರಿಗಳನ್ನು ಹೊಂದಿದ್ದು, ಮೇಲಿಂಗ್ ಸೇವೆಗಳನ್ನು ಹೊರತುಪಡಿಸಿ, ವಿವಿಧ ಬ್ಯಾಂಕಿಂಗ್ ಮತ್ತು ರವಾನೆ ಸೇವೆಗಳನ್ನು ಒದಗಿಸುತ್ತದೆ.
ಅಂಚೆ ಇಲಾಖೆ ಹಲವಾರು ಉಳಿತಾಯ ಯೋಜನೆಗಳನ್ನು ಪರಿಚಯಿಸಿದ್ದು, ಈ ಬಗ್ಗೆ ತನ್ನ ಅಧಿಕೃತ ವೆಬ್ಸೈಟ್- indiapost.gov.in ನಲ್ಲಿ ಉಲ್ಲೇಖಿಸಿದೆ.
ಇದರಲ್ಲಿ ಮರುಕಳಿಸುವ ಠೇವಣಿ (RD) ಹಾಗು ಸ್ಥಿರ ಠೇವಣಿ (FD) ಉಳಿತಾಯ ಯೋಜನೆಗಳ ಮಾಹಿತಿ ಕೂಡ ನೀಡಿದೆ.

ಮರುಕಳಿಸುವ ಠೇವಣಿ (RD)

ಮರುಕಳಿಸುವ ಠೇವಣಿ (RD)

ಮರುಕಳಿಸುವ ಠೇವಣಿ (RD) ಖಾತೆಯನ್ನು ನಗದು ಮತ್ತು ಚೆಕ್ ಮೂಲಕ ತೆರೆಯಬಹುದಾಗಿದೆ. ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ ಖಾತೆಯನ್ನು ತೆರೆಯಲು ಕನಿಷ್ಠ ಮೊತ್ತ ರೂ. 10 ತಿಂಗಳಿಗೆ ಪಾವತಿಸಬೇಕಾಗುತ್ತದೆ. ಪೋಸ್ಟ್ ಆಫೀಸ್ RD ಖಾತೆ ವರ್ಷಕ್ಕೆ ಶೇ. 7.3 ರಷ್ಟು ಬಡ್ಡಿದರವನ್ನು ನೀಡುತ್ತದೆ. ಅಂಚೆ ಕಛೇರಿ RD ಖಾತೆಯಲ್ಲಿನ ಬಡ್ಡಿಯ ದರ ವಾರ್ಷಿಕವಾಗಿ ಹೆಚ್ಚಾಗುತ್ತದೆ.

ಸ್ಥಿರ ಠೇವಣಿ (ಎಫ್ಡಿ) ಖಾತೆ

ಸ್ಥಿರ ಠೇವಣಿ (ಎಫ್ಡಿ) ಖಾತೆ

ಪೋಸ್ಟ್ ಆಫೀಸ್ ಟೈಮ್ ಡಿಪಾಸಿಟ್ (ಟಿಡಿ) ಅಥವಾ ಸ್ಥಿರ ಠೇವಣಿ (ಎಫ್ಡಿ) ಖಾತೆಯನ್ನು ನಗದು ಅಥವಾ ಚೆಕ್ ಮೂಲಕ ತೆರೆಯಬಹುದಾಗಿದೆ. ವಾರ್ಷಿಕವಾಗಿ ಬಡ್ಡಿಯನ್ನು ಪಾವತಿಸಲಾಗುತ್ತದೆ. ಆದರೆ ತ್ರೈಮಾಸಿಕಕ್ಕೆ ಅನುಗುಣವಾಗಿ ಲೆಕ್ಕ ಹಾಕಲಾಗುತ್ತದೆ. ಈ ಖಾತೆಯು ನಾಲ್ಕು ಮೆಚುರಿಟಿಗಳಂತೆ ಬಡ್ಡಿಯನ್ನು ನೀಡುತ್ತದೆ. ( ಒಂದು ವರ್ಷ, ಎರಡು ವರ್ಷಗಳ, ಮೂರು ವರ್ಷಗಳು ಮತ್ತು ಐದು ವರ್ಷಗಳು.)
ಒಂದು ವರ್ಷ, ಎರಡು ವರ್ಷ, ಮೂರು ವರ್ಷ, ಮತ್ತು ಐದು ವರ್ಷಗಳಲ್ಲಿ ಅಂಚೆ ಕಚೇರಿ ಸ್ಥಿರ ಠೇವಣಿ ಕ್ರಮವಾಗಿ ಶೇ. 6.9 ಶೇ. 7, ಶೇ. 7.2, ಮತ್ತು ಶೇ. 7.8. ಅಂಚೆ ಕಛೇರಿಗೆ ಸ್ಥಿರವಾದ ಠೇವಣಿ ತೆರೆಯಲು ಕನಿಷ್ಠ ಮೊತ್ತವು ರೂ. 200 ಆಗಿರುತ್ತದೆ.

ಕೊನೆ ಮಾತು

ಕೊನೆ ಮಾತು

ಸರ್ಕಾರದ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳಿಗೆ ಅನುಗುಣವಾಗಿ ಅಂಚೆ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿಯ ದರಗಳು ಬದಲಾಗುತ್ತವೆ. ಅಂಚೆ ಕಛೇರಿ ಸ್ಥಿರ ಠೇವಣಿ ಮತ್ತು ಮರುಕಳಿಸುವ ಠೇವಣಿಗಳ ಮೇಲಿನ ಬಡ್ಡಿದರಗಳು 6.9 ರಿಂದ ಶೇ 7.8 ರವರೆಗೆ ಇರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+