For Quick Alerts
ALLOW NOTIFICATIONS  
For Daily Alerts

ಸ್ಥಿರ ಠೇವಣಿಯಲ್ಲಿ (FD) ಹೂಡಿಕೆ ಮಾಡಬೇಕೆ? ಎಸ್ಬಿಐ ಮತ್ತು ಪೋಸ್ಟ್ ಆಫೀಸ್ ಬಡ್ಡಿದರ ನೋಡಿ..

ಹಣವನ್ನು ಸುರಕ್ಷಿತ ವಿಧಾನಗಳಲ್ಲಿ ಹೂಡಿಕೆ ಮಾಡಿ ಉತ್ತಮ ರಿಟರ್ನ್ ಪಡೆಯಬೇಕು ಎನ್ನುವುದು ಹೂಡಿಕೆದಾರರ ಇಚ್ಛೆಯಾಗಿರುತ್ತದೆ. ಸುರಕ್ಷಿತ ಹೂಡಿಕೆಯ ಉತ್ತಮ‌ ಉಪಾಯವೆಂದರೆ ಫಿಕ್ಸೆಡ್ ಡಿಪಾಸಿಟ್ (ಎಫ್ಡಿ).

|

ಹಣವನ್ನು ಸುರಕ್ಷಿತ ವಿಧಾನಗಳಲ್ಲಿ ಹೂಡಿಕೆ ಮಾಡಿ ಉತ್ತಮ ರಿಟರ್ನ್ ಪಡೆಯಬೇಕು ಎನ್ನುವುದು ಹೂಡಿಕೆದಾರರ ಇಚ್ಛೆಯಾಗಿರುತ್ತದೆ. ಸುರಕ್ಷಿತ ಹೂಡಿಕೆಯ ಉತ್ತಮ‌ ಉಪಾಯವೆಂದರೆ ಫಿಕ್ಸೆಡ್ ಡಿಪಾಸಿಟ್ (ಎಫ್ಡಿ). ಬ್ಯಾಂಕುಗಳು, ಬ್ಯಾಂಕೆತರ ಹಣಕಾಸು ಸಂಸ್ಥೆಗಳು ಹಾಗೂ ಅಂಚೆ ಇಲಾಖೆ ನೂತನ ಎಫ್.ಡಿ. ಯೋಜನೆಗಳನ್ನು ಜಾರಿಗೊಳಿಸಿವೆ.

 

ಸ್ಥಿರ ಠೇವಣಿಯಾಗಿ, ಉಳಿತಾಯ ಖಾತೆಗಳಿಗಿಂತ ಹೆಚ್ಚಿನ ಬಡ್ಡಿದರಕ್ಕಾಗಿ ಹಣವನ್ನು ಹೂಡಿಕೆ ಮಾಡಬಹುದು. ನಿಶ್ಚಿತ ಅವಧಿಗೆ ನಿಗದಿತ ಠೇವಣಿಗಳಲ್ಲಿ ಹಣವನ್ನು ಠೇವಣಿ ಇಡಬಹುದು. ಖಾತರಿ ಲಾಭಗಳು, ಬಡ್ಡಿ ಪಾವತಿಯ ಆಯ್ಕೆ, ಓವರ್ ಡ್ರಾಫ್ಟ್ (OD) ಅಥವಾ ಅಕಾಲಿಕ ವಾಪಸಾತಿ ಮೂಲಕ ದ್ರವ್ಯತೆಗಳನ್ನು ಪಡೆಯಬಹುದು.

ಬಡ್ಡಿದರ

ಬಡ್ಡಿದರ

ಅಂಚೆ ಇಲಾಖೆ, ಬ್ಯಾಂಕ್ ಗಳು ಅವಧಿಗೆ ಅನುಗುಣವಾಗಿ ಬಡ್ಡಿದರ ಲಭ್ಯವಿರುತ್ತದೆ.
ಉದಾ: ನಾಲ್ಕು ವರ್ಷಗಳ ಅವಧಿಯ1 ಕೋಟಿಗಿಂತ ಕಡಿಮೆ ಸ್ಥಿರ ಠೇವಣಿ ಹೂಡಿಕೆ ಮೇಲೆ ಶೇ. 6.8ರಷ್ಟು ಬಡ್ಡಿ ದರವನ್ನು ಎಸ್ಬಿಐ ಒದಗಿಸುತ್ತದೆ.

ಎಸ್ಬಿಐ ಎಫ್ಡಿ

ಎಸ್ಬಿಐ ಎಫ್ಡಿ

ಎಸ್ಬಿಐ ಇಷ್ಟು ದಿನಗಳ‌ ಕಾಲ ಕನಿಷ್ಟ ಆರು ತಿಂಗಳ ಎಫ್ಡಿ ಸೇವೆಯನ್ನು ಮಾತ್ರ ಒದಗಿಸುತ್ತಿತ್ತು. ಈಗ ಏಳು ದಿನಗಳಿಂದ ವಿವಿಧ ಕಾಲ ಮಿತಿಯ ಎಫ್ಡಿ ಯೋಜನೆಗಳನ್ನು ಜಾರಿ ಗೊಳಿಸಿದೆ.
ಎಸ್ಬಿಐ, ಅಲ್ಪಾವಧಿ ಹೂಡಿಕೆಗೆ ಶೇ. 0.5- 1 ರಷ್ಟು ಬಡ್ಡಿ ದರ ನೀಡಲಿದ್ದು, ಅವಧಿ ಹೆಚ್ಚಾದಂತೆ ಬಡ್ಡಿ ದರದಲ್ಲಿ ಏರಿಕೆಯಾಗಲಿದೆ ಎಂದಿದೆ.‌ ಏಳು ದಿನದಿಂದ 10 ವರ್ಷದ ತನಕ ಎಫ್ಡಿ ಮಾಡಿಸಬಹುದು. ಖಾತೆ ತೆರೆಯಲು ಕನಿಷ್ಟ ಒಂದು‌ ಸಾವಿರ ಬೇಕಾಗುತ್ತದೆ.

ಅಂಚೆ ಇಲಾಖೆ‌
 

ಅಂಚೆ ಇಲಾಖೆ‌

ಪೋಸ್ಟ್ ಆಫೀಸ್ ಅವಧಿ ಠೇವಣಿ (ಟಿಡಿ) ಅಥವಾ ಸ್ಥಿರ ಠೇವಣಿ (ಎಫ್ಡಿ) ಖಾತೆಯನ್ನು ನಗದು ಅಥವಾ ಚೆಕ್ ಮೂಲಕ ತೆರೆಯಬಹುದಾಗಿದೆ. ಅಂಚೆ ಇಲಾಖೆ‌ ಗ್ರಾಹಕರನ್ನು ಸೆಳೆಯಲು,‌ ಕನಿಷ್ಟ ರೂ. 200 ಮೂಲಕ ಎಫ್ಡಿ ಖಾತೆ ಮಾಡಿಸಬಹುದು. ವರ್ಷಕ್ಕೊಮ್ಮೆ ಬಡ್ಡಿ ಹಣ ನೀಡಲಾಗುವುದು ಆದರೆ ತ್ರೈಮಾಸಿಕ ಲೆಕ್ಕದಲ್ಲಿ ಬಡ್ಡಿ ನೀಡಲಾಗುವುದು. ಒಂದು ವಷರ್ಷ, ಎರಡು ವರ್ಷ, ಮೂರು ವರ್ಷ, ನಾಲ್ಕು ವರ್ಷ ಹಾಗು ಐದು ವರ್ಷದ ಅವಧಿಗೆ ಎಫ್ಡಿ ಮಾಡಿಸಬಹುದು.

English summary

Want To Invest In Fixed Deposit (FD)? Check Out Interest Rates Offered By SBI And Post Office

FDs also known as term deposits, are secure investment instruments offered by banks, non-banking financial companies and post offices.
Story first published: Tuesday, November 13, 2018, 13:00 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X