For Quick Alerts
ALLOW NOTIFICATIONS  
For Daily Alerts

ಹಣಕಾಸು ನಿರ್ವಹಣೆಗೆ ಸಲಹೆ ಪಡೆಯಲು ಯಾರು ಸೂಕ್ತ? ಇಲ್ಲಿವೆ 7 ಆಯ್ಕೆ

ಹಣಕಾಸು ನಿರ್ವಹಣೆಯ ಬಗ್ಗೆ ನಮ್ಮ ಗೆಳೆಯರು, ಸಂಬಂಧಿಕರು, ಸಹೋದ್ಯೋಗಿಗಳು ಅಥವಾ ನೆರೆಹೊರೆಯವರು ಹೀಗೆ ಅನೇಕರು ತಮಗೆ ತಿಳಿದಂತೆ ಅನೇಕ ರೀತಿಯಲ್ಲಿ ಉಚಿತವಾಗಿ ಸಲಹೆ, ಸೂಚನೆಗಳನ್ನು ನೀಡುತ್ತಿರುತ್ತಾರೆ.

|

ಹಣಕಾಸು ನಿರ್ವಹಣೆಯ ಬಗ್ಗೆ ನಮ್ಮ ಗೆಳೆಯರು, ಸಂಬಂಧಿಕರು, ಸಹೋದ್ಯೋಗಿಗಳು ಅಥವಾ ನೆರೆಹೊರೆಯವರು ಹೀಗೆ ಅನೇಕರು ತಮಗೆ ತಿಳಿದಂತೆ ಅನೇಕ ರೀತಿಯಲ್ಲಿ ಉಚಿತವಾಗಿ ಸಲಹೆ, ಸೂಚನೆಗಳನ್ನು ನೀಡುತ್ತಿರುತ್ತಾರೆ. ನಿಮಗೆ ಬೇಕೋ ಬೇಡವೋ ಅವನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ಆದರೆ ಇಂಥ ಯಾವ ಹಣಕಾಸು ಸಲಹೆಗಳೂ ವಾಸ್ತವದಲ್ಲಿ ಉಪಯೋಗಕ್ಕೆ ಬರಲಾರವು. ಯಾವೆಲ್ಲ ಮೂಲಗಳಿಂದ ಹಣಕಾಸು ನಿರ್ವಹಣೆಯ ಮಾರ್ಗದರ್ಶನಗಳನ್ನು ಪಡೆಯಬಹುದು ಹಾಗೂ ಅವು ಎಷ್ಟು ಪ್ರಯೋಜನಕಾರಿ ಎಂಬುದನ್ನು ತಿಳಿದಿರಬೇಕಾಗುತ್ತದೆ. ಹೀಗಾಗಿ ಯಾವ ಮೂಲಗಳ ಹಣಕಾಸು ಸಲಹೆಗಳು ಎಷ್ಟು ಪರಿಣಾಮಕಾರಿ ಹಾಗೂ ನಂಬಲರ್ಹ ಎಂಬುದನ್ನು ನಿಮಗಾಗಿ ಈ ಅಂಕಣದಲ್ಲಿ ತಿಳಿಸಿದ್ದೇವೆ.

 

ಹಣಕಾಸು ನಿರ್ವಹಣೆ ಮಾರ್ಗದರ್ಶನ ಪಡೆಯುವ ಪ್ರಮುಖ ಮೂಲಗಳು:

1. ಮ್ಯೂಚುವಲ್ ಫಂಡ್ ವಿತರಕರು

1. ಮ್ಯೂಚುವಲ್ ಫಂಡ್ ವಿತರಕರು

ಮ್ಯೂಚುವಲ್ ಫಂಡ್ ವಿತರಕರು ಫಂಡ್‌ಗಳ ಬಗ್ಗೆ ಕೇವಲ ಸಾಂದರ್ಭಿಕ ಮಾಹಿತಿಯನ್ನಷ್ಟೆ ನೀಡುತ್ತಾರೆ. ಹೂಡಿಕೆಗೆ ಯಾವ ಫಂಡ್ ಚೆನ್ನಾಗಿದೆ ಎಂಬುದಕ್ಕೆ ಮಾತ್ರ ಇವರ ಸಲಹೆ ಸೀಮಿತವಾಗಿರುತ್ತದೆ. ಇದಕ್ಕೆ ಅವರು ಯಾವುದೇ ಶುಲ್ಕವನ್ನು ಪಡೆಯದಿದ್ದರೂ ನೀವು ಕೊಳ್ಳುವ ಫಂಡ್‌ಗಳಲ್ಲಿನ ವೆಚ್ಚದ ಖಾತೆಯಿಂದ ಅವರಿಗೆ ಕಮೀಷನ್ ಸಂದಾಯವಾಗುತ್ತದೆ. ಹೆಚ್ಚಿನ ಶುಲ್ಕ ಭರಿಸಲು ಸಾಧ್ಯವಾಗದ ಸಣ್ಣ ಉಳಿತಾಯದಾರರು ಇವರ ಸೇವೆ ಪಡೆಯಬಹುದು.

2. ವಿಮಾ ಏಜೆಂಟರು

2. ವಿಮಾ ಏಜೆಂಟರು

ನಿಮಗೆ ಸೂಕ್ತವಾದ ಪಾಲಿಸಿ ಕೊಳ್ಳಲು ವಿಮಾ ಏಜೆಂಟರು ಮಾರ್ಗದರ್ಶನ ನೀಡುತ್ತಾರೆ. ವೈಯಕ್ತಿಕ ಏಜೆಂಟರು ತಾವು ಏಜೆನ್ಸಿ ಹೊಂದಿದ ಕಂಪನಿಯ ಉತ್ಪನ್ನಗಳನ್ನು ಮಾತ್ರ ನಿಮಗೆ ಹೇಳುತ್ತಾರೆ. ಆದರೆ ಕಾರ್ಪೊರೇಟ್ ಏಜೆಂಟ್ ಸಂಸ್ಥೆಗಳು ಹಲವಾರು ವಿಮಾ ಕಂಪನಿಗಳ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಬಲ್ಲವು. ಇವರು ಕೂಡ ಸಲಹೆಗೆ ಯಾವುದೇ ಶುಲ್ಕ ಆಕರಿಸದಿದ್ದರೂ ಕಮೀಷನ್ ಮೂಲಕವೇ ಗಳಿಕೆ ಮಾಡುತ್ತಾರೆ. ಅಂದರೆ ಇವರ ಬಹುತೇಕ ಸಲಹೆ, ಸೂಚನೆಗಳು ಕಮೀಷನ್ ಮೇಲೆ ಆಧರಿಸಿರುತ್ತವೆ ಎಂದು ಬೇರೆ ಹೇಳಬೇಕಿಲ್ಲ.

3. ಬ್ಯಾಂಕ್ ರಿಲೇಶನಷಿಪ್ ಮ್ಯಾನೇಜರಗಳು
 

3. ಬ್ಯಾಂಕ್ ರಿಲೇಶನಷಿಪ್ ಮ್ಯಾನೇಜರಗಳು

ಮ್ಯೂಚ್ಯುವಲ್ ಫಂಡ್ ಹಾಗೂ ವಿಮಾ ಉತ್ಪನ್ನಗಳನ್ನು ಮಾರಾಟ ಮಾಡಲೆಂದೇ ಬ್ಯಾಂಕುಗಳು ಪ್ರತ್ಯೇಕ ರಿಲೇಶನಷಿಪ್ ಮ್ಯಾನೇಜರಗಳನ್ನು ನೇಮಿಸಿರುತ್ತವೆ. ಇವರು ಉಚಿತವಾಗಿಯೇ ಸಲಹೆ ನೀಡಿದರೂ ನಿಮ್ಮ ಹೂಡಿಕೆಯ ಮೇಲೆ ಕಮೀಷನ್ ಗಳಿಸುತ್ತಾರೆ. ಬ್ಯಾಂಕ್ ಪ್ರತಿನಿಧಿಗಳು ಬಹುತೇಕ ಸಂದರ್ಭಗಳಲ್ಲಿ ತಪ್ಪಾದ ಹೂಡಿಕೆ ಮಾರ್ಗದರ್ಶನ ನೀಡುತ್ತಾರೆ ಎಂಬ ಆರೋಪಗಳಿವೆ.

4. ಸ್ಟಾಕ್ ಬ್ರೋಕರ್ಸ್

4. ಸ್ಟಾಕ್ ಬ್ರೋಕರ್ಸ್

ಶೇರುಗಳ ವ್ಯವಹಾರಕ್ಕೆ ಪ್ಲಾಟಫಾರ್ಮ ಒದಗಿಸುವ ಜೊತೆಗೆ ಶೇರುಗಳನ್ನು ಕೊಳ್ಳುವುದು ಹಾಗೂ ಮಾರುವ ಬಗ್ಗೆ ಸ್ಟಾಕ್ ಬ್ರೋಕರಗಳು ಸಲಹೆ ನೀಡುತ್ತಾರೆ. ಇವರ ಸಲಹೆಗಳು ಕೂಡ ಉಚಿತವಾಗಿಯೇ ಇದ್ದರೂ ಪ್ರತಿಬಾರಿ ಶೇರು ಕೊಂಡಾಗ, ಮಾರಿದಾಗ ಅವರಿಗೆ ಕಮೀಷನ್ ಸಿಗುತ್ತದೆ. ಇನ್ನು ಹಲವಾರು ಸ್ಟಾಕ್ ಬ್ರೋಕರ್‌ಗಳು ಶೇರು ವ್ಯವಹಾರದೊಂದಿಗೆ ಸಮಾನಾಂತರವಾಗಿ ಮ್ಯೂಚುವಲ್ ಫಂಡ್ ಹಾಗೂ ವಿಮಾ ಉತ್ಪನ್ನಗಳನ್ನು ಸಹ ಮಾರಾಟ ಮಾಡುತ್ತಿದ್ದಾರೆ.

5. ಸಂಪತ್ತು ನಿರ್ವಹಣೆ ಮ್ಯಾನೇಜರಗಳು (ವೆಲ್ತ್ ಮ್ಯಾನೇಜರ್ಸ್)

5. ಸಂಪತ್ತು ನಿರ್ವಹಣೆ ಮ್ಯಾನೇಜರಗಳು (ವೆಲ್ತ್ ಮ್ಯಾನೇಜರ್ಸ್)

ಈ ಮುನ್ನ ಒಂದು ಕೋಟಿ ರೂಪಾಯಿ ಅಥವಾ ಅದಕ್ಕೂ ಹೆಚ್ಚಿನ ಹೂಡಿಕೆ ಇದ್ದಲ್ಲಿ ಮಾತ್ರ ಅದಕ್ಕೆ ಪ್ರತ್ಯೇಕ ಸಂಪತ್ತು ನಿರ್ವಹಣೆ ಮ್ಯಾನೇಜರಗಳು ಇರುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ 25 ಲಕ್ಷ ರೂ. ಹೂಡಿಕೆಯ ಸಂಪತ್ತಿಗೂ ಪ್ರತ್ಯೇಕ ಮ್ಯಾನೇಜರಗಳಿರುತ್ತಾರೆ. ಸಾಮಾನ್ಯವಾಗಿ ಇದಕ್ಕಾಗಿ ನಿಶ್ಚಿತ ಶುಲ್ಕ (ವಾರ್ಷಿಕ ಸಂಪತ್ತು ನಿರ್ವಹಣೆ ಮೊತ್ತದ 25 ರಿಂದ 50 ಬಿಪಿಎಸ್) ಅಥವಾ ಬದಲಾಗುವ ಶುಲ್ಕ (ಪೂರ್ವ ನಿರ್ಧರಿತ ಮೊತ್ತಕ್ಕೂ ಹೆಚ್ಚಿನ ವಾರ್ಷಿಕ ಆದಾಯದ ಶೇ.10 ರಿಂದ 20 ರಷ್ಟು) ಗಳನ್ನು ಆಕರಿಸಲಾಗುತ್ತದೆ. ಇನ್ನು ತಾವು ಮಾರುವ ಹಣಕಾಸು ಉತ್ಪನ್ನಗಳ ಮೇಲೆ ಕೆಲ ಮ್ಯಾನೇಜರಗಳಿಗೆ ಕಮೀಷನ್ ಕೂಡ ಸಿಗುತ್ತದೆ.

6. ಕಂಪ್ಯೂಟರ್ ಆಧರಿತ ಸಲಹೆ

6. ಕಂಪ್ಯೂಟರ್ ಆಧರಿತ ಸಲಹೆ

ರೋಬೊ ಅಡ್ವೈಸರ್ ಎಂದು ಕರೆಯಲಾಗುವ ಈ ಕಂಪ್ಯೂಟರ್ ಆಧರಿತ ಹಣಕಾಸು ಮಾರ್ಗದರ್ಶನ ಇತ್ತೀಚಿನ ಬೆಳವಣಿಗೆಯಾಗಿದೆ. ಹೂಡಿಕೆ ನಿಗದಿ, ಫಂಡ್ ಆಯ್ಕೆ, ವಿಮಾ ಯೋಜನೆ ಹೀಗೆ ಹಲವಾರು ಅಂಶಗಳ ಆಧಾರದಲ್ಲಿ ಮೊದಲೇ ಮಾಡಲಾದ ಪ್ರೊಗ್ರಾಂ ಆಧರಿಸಿ ಕಂಪ್ಯೂಟರ್ ಮಾರ್ಗದರ್ಶನ ನೀಡುತ್ತದೆ. ಹೀಗಾಗಿ ಸಹಜವಾಗಿಯೇ ಇದರಲ್ಲಿ ವ್ಯಕ್ತಿಗತ ಕೇಂದ್ರಿತ ಸಂವಹನ ಕೊರತೆ ಕಂಡುಬರುತ್ತದೆ. ಇದಕ್ಕೆ ವಾರ್ಷಿಕವಾಗಿ 1 ಸಾವಿರ ರೂ. (ರೋಬೊ ಅಡ್ವೈಸ್‌ಗೆ) ಗಳಿಂದ 12 ಸಾವಿರ ರೂ. (ವ್ಯಕ್ತಿಗತ ಮಾನದಂಡಗಳ ಮೇಲೆ ಮಾರ್ಗದರ್ಶನಕ್ಕೆ) ಗಳವರೆಗೆ ಶುಲ್ಕ ಪಡೆಯಲಾಗುತ್ತದೆ.

7. ಶುಲ್ಕ ಪಡೆದು ಅಡ್ವೈಸ್ ನೀಡುವವರು

7. ಶುಲ್ಕ ಪಡೆದು ಅಡ್ವೈಸ್ ನೀಡುವವರು

ಹೆಸರೇ ಹೇಳುವಂತೆ ಇವರು ತಾವು ಸಲಹೆ ನೀಡುವ ಹಣಕಾಸು ಉತ್ಪನ್ನಗಳಿಂದ ಯಾವುದೇ ಕಮೀಷನ್ ಪಡೆಯದೆ ಕೇವಲ ಗ್ರಾಹಕರಿಂದಲೇ ಶುಲ್ಕ ಆಕರಿಸುತ್ತಾರೆ. ಇವರು ನೋಂದಾಯಿತ ಹಣಕಾಸು ಸಲಹೆಗಾರರಾಗಿರುವುದರಿಂದ ಇವರ ಸಲಹೆಗಳಲ್ಲಿ ಯಾವುದೇ ವೈಯಕ್ತಿಕ ಹಿತಾಸಕ್ತಿಗಳು ಅಡಗಿರುವುದಿಲ್ಲ. ಆದಾಗ್ಯೂ ಇಂಥ ವ್ಯಕ್ತಿ ಅಥವಾ ಸಂಸ್ಥೆಯು ತನ್ನ ಸಂಬಂಧಿಗಳ ಹೆಸರಲ್ಲಿ ವಿಮಾ ಏಜೆನ್ಸಿ ಅಥವಾ ಮ್ಯೂಚುವಲ್ ಫಂಡ್ ಏಜೆನ್ಸಿಯನ್ನು ನಡೆಸುತ್ತಿಲ್ಲ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕಾಗುತ್ತದೆ.

Read more about: finance news money investments
English summary

7 different sources of financial advice: Which ones can help you?

Everyone, including friends, relatives, colleagues and neighbours, doles out free financial advice. However, very little of this is useful.
Story first published: Tuesday, December 18, 2018, 10:07 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X