ನೀವು ಸಂಬಳ ಪಡೆಯುವ ಉದ್ಯೋಗಿನಾ? ಈ ಪ್ರಯೋಜನ ತಪ್ಪದೇ ನಿಮ್ಮದಾಗಿಸಿ..

ತೆರಿಗೆ ಉಳಿತಾಯ ಸೌಲಭ್ಯದ ಯಾವುದೇ ಹೂಡಿಕೆ ಯೋಜನೆಯಲ್ಲಿ ಹಣ ತೊಡಗಿಸಿದ ಸಂಬಳದಾತ ಉದ್ಯೋಗಿ ನೀವಾಗಿದ್ದಲ್ಲಿ ಬೇಗನೆ ಜಾಗರೂಕರಾಗಿ. ತೆರಿಗೆ ಉಳಿತಾಯದ ಬಗ್ಗೆ ದಾಖಲೆ ಸಲ್ಲಿಸುವ ಕೊನೆಯ ದಿನಾಂಕ ಹತ್ತಿರವಾಗುತ್ತಿದ್ದು.

ತೆರಿಗೆ ಉಳಿತಾಯ ಸೌಲಭ್ಯದ ಯಾವುದೇ ಹೂಡಿಕೆ ಯೋಜನೆಯಲ್ಲಿ ಹಣ ತೊಡಗಿಸಿದ ಸಂಬಳದಾತ ಉದ್ಯೋಗಿ ನೀವಾಗಿದ್ದಲ್ಲಿ ಬೇಗನೆ ಜಾಗರೂಕರಾಗಿ. ತೆರಿಗೆ ಉಳಿತಾಯದ ಬಗ್ಗೆ ದಾಖಲೆ ಸಲ್ಲಿಸುವ ಕೊನೆಯ ದಿನಾಂಕ ಹತ್ತಿರವಾಗುತ್ತಿದ್ದು, ಗರಿಷ್ಠ ಪ್ರಮಾಣದಲ್ಲಿ ತೆರಿಗೆ ಉಳಿಸಲು ದಾಖಲೆಗಳನ್ನು ಬೇಗನೆ ಸಿದ್ಧ ಮಾಡಿಕೊಳ್ಳಿ. ಹೂಡಿಕೆಗಳು ಮಾತ್ರವಲ್ಲದೆ ಕೆಲ ಭತ್ಯೆಗಳು ಮತ್ತು ಖರ್ಚು ವೆಚ್ಚಗಳ ಮೇಲೆ ಸಹ ಕೆಲ ವಿನಾಯಿತಿಗಳನ್ನು ನೀಡಲಾಗುತ್ತಿದ್ದು, ಉದ್ಯೋಗಿಗಳು ಈ ಕುರಿತು ಎಲ್ಲ ಮಾಹಿತಿಗಳನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ.

ತೆರಿಗೆ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವ ವಿಧಾನಗಳ ಬಗ್ಗೆ ನಿಮಗೆ ಗೊತ್ತಿರಬೇಕಾಗುತ್ತದೆ.
ನೌಕರರು ಯಾವೆಲ್ಲ ಅಂಶಗಳನ್ನು ಆಧರಿಸಿ ತೆರಿಗೆ ಉಳಿತಾಯ ಕ್ಲೇಮ್ ಮಾಡಬಹುದು ಹಾಗೂ ಯಾವುದಕ್ಕೆ ಎಷ್ಟು ತೆರಿಗೆ ಉಳಿತಾಯ ಮಾಡಬಹುದು ಎಂಬುದನ್ನು ಈ ಅಂಕಣದಲ್ಲಿ ವಿವರವಾಗಿ ತಿಳಿಸಲಾಗಿದೆ.

ಯಾವುದಕ್ಕೆಲ್ಲ ಸಾಮಾನ್ಯ ನೌಕರನೊಬ್ಬ ತೆರಿಗೆ ಉಳಿತಾಯ ಕ್ಲೇಮ್ ಮಾಡಬಹುದು?

1. ಮನೆ ಬಾಡಿಗೆ ಭತ್ಯೆ (House Rent Allowance- HRA)

1. ಮನೆ ಬಾಡಿಗೆ ಭತ್ಯೆ (House Rent Allowance- HRA)

ಬಾಡಿಗೆ ಮನೆಯಲ್ಲಿ ವಾಸಿಸುವ ನೌಕರರಿಗೆ ಕೆಲ ನಿರ್ದಿಷ್ಟ ಷರತ್ತುಗೊಳಪಟ್ಟು ತೆರಿಗೆ ವಿನಾಯಿತಿ ಲಭಿಸುತ್ತದೆ. ಎಚ್‌ಆರ್‌ಎ ಅಡಿ ಈ ಕೆಳಗಿನ ಅಂಶಗಳಲ್ಲಿ ಯಾವುದು ಕಡಿಮೆಯೋ ಅದನ್ನು ಆಧರಿಸಿ ವಿನಾಯಿತಿ ನೀಡಲಾಗುತ್ತದೆ:
- ವಾಸ್ತವದಲ್ಲಿ ಪಡೆಯಲಾದ ಮನೆ ಬಾಡಿಗೆ ಭತ್ಯೆ
- ಸಂಬಳದ ಶೇ. 40 ರಷ್ಟು (ಮೆಟ್ರೊ ನಗರಗಳಲ್ಲಿ ಶೇ. 50)
- ಬಾಡಿಗೆಯಲ್ಲಿ ಶೇ. 10 ರಷ್ಟು ಸಂಬಳ ಕಳೆದು ಸಿಗುವ ಮೊತ್ತದಷ್ಟು. ಈ ಲೆಕ್ಕದಲ್ಲಿ ಮೂಲ ಸಂಬಳ, ತುಟ್ಟಿ ಭತ್ಯೆ (ಇದು ನಿವೃತ್ತಿ ನಂತರ ಸಿಗುವ ಮೊತ್ತದಲ್ಲಿ ಸೇರಿದ್ದರೆ) ಮತ್ತು ವ್ಯವಹಾರ ಆಧರಿತ ಕಮೀಷನ್‌ಗಳು ಒಟ್ಟು ಸಂಬಳದಲ್ಲಿ ಸೇರಿರುತ್ತವೆ.

2. ಮಕ್ಕಳ ಶಿಕ್ಷಣ ಭತ್ಯೆ

2. ಮಕ್ಕಳ ಶಿಕ್ಷಣ ಭತ್ಯೆ

ಗರಿಷ್ಠ ಇಬ್ಬರು ಮಕ್ಕಳಿಗೆ ಪ್ರತಿ ಮಗುವಿಗೆ ತಿಂಗಳಿಗೆ 100 ರೂ. ಗಳವರೆಗೆ ವಿನಾಯಿತಿ ಇರುತ್ತದೆ.

3. ವಸತಿ ನಿಲಯ ವೆಚ್ಚದ ಭತ್ಯೆ

3. ವಸತಿ ನಿಲಯ ವೆಚ್ಚದ ಭತ್ಯೆ

ಗರಿಷ್ಠ ಇಬ್ಬರು ಮಕ್ಕಳಿಗೆ ಪ್ರತಿ ಮಗುವಿಗೆ ತಿಂಗಳಿಗೆ 300 ರೂ.ಗಳವರೆಗೆ ವಿನಾಯಿತಿ ನೀಡಲಾಗುತ್ತದೆ.

4. ಮನರಂಜನೆ ಭತ್ಯೆ

4. ಮನರಂಜನೆ ಭತ್ಯೆ

ಸರಕಾರಿ ನೌಕರರಿಗೆ ಈ ಕೆಳಗಿನ ಅಂಶಗಳಲ್ಲಿ ಯಾವುದೋ ಕಡಿಮೆಯೋ ಅದನ್ನು ಆಧರಿಸಿ ತೆರಿಗೆ ವಿನಾಯಿತಿ ಸಿಗುತ್ತದೆ:
- ರೂ. 5000
- ಸಂಬಳದ ಐದನೇ ಒಂದು ಭಾಗದಷ್ಟು (ಯಾವುದೇ ಭತ್ಯೆ, ಸೌಲಭ್ಯ ಅಥವಾ ಇತರ ಭತ್ಯೆ ಹೊರತುಪಡಿಸಿ)
- ವಾಸ್ತವದಲ್ಲಿ ಪಡೆದ ಮನರಂಜನಾ ಭತ್ಯೆಯ ಮೊತ್ತ.
ಸರಕಾರಿ ನೌಕರರನ್ನು ಹೊರತು ಪಡಿಸಿ ಉಳಿದೆಲ್ಲ ನೌಕರರು ಇದಕ್ಕೆ ಶೇ. 100 ರಷ್ಟು ತೆರಿಗೆ ಪಾವತಿ ಮಾಡಬೇಕಾಗುತ್ತದೆ.

5. ಉದ್ಯೋಗ ತೆರಿಗೆ/ ವೃತ್ತಿ ತೆರಿಗೆ

5. ಉದ್ಯೋಗ ತೆರಿಗೆ/ ವೃತ್ತಿ ತೆರಿಗೆ

ವರ್ಷದಲ್ಲಿ ವಾಸ್ತವಿಕವಾಗಿ ಪಾವತಿಸಲಾದ ಮೊತ್ತವನ್ನು ಇದು ಆಧರಿಸಿರುತ್ತದೆ.

6. ಸ್ಟ್ಯಾಂಡರ್ಡ್ ಡಿಡಕ್ಷನ್

6. ಸ್ಟ್ಯಾಂಡರ್ಡ್ ಡಿಡಕ್ಷನ್

40 ಸಾವಿರ ರೂ .ಗಳಿಗಿಂತ ಕಡಿಮೆ ಅಥವಾ ಸಂಬಳದ ಮೊತ್ತವನ್ನು ಆಧರಿಸಿರುತ್ತದೆ.

7. ಗೃಹ ಸಾಲದ ಮೇಲಿನ ಬಡ್ಡಿ

7. ಗೃಹ ಸಾಲದ ಮೇಲಿನ ಬಡ್ಡಿ

ಗೃಹ ಸಾಲಕ್ಕೆ ಕಟ್ಟಲಾದ ಗರಿಷ್ಠ 2 ಲಕ್ಷ ರೂ. ಬಡ್ಡಿಗೆ ವಿನಾಯಿತಿ ಸಿಗುತ್ತದೆ.

8. ಎನ್‌ಪಿಎಸ್‌ಗೆ ನೀಡಲಾದ ವಂತಿಗೆ

8. ಎನ್‌ಪಿಎಸ್‌ಗೆ ನೀಡಲಾದ ವಂತಿಗೆ

ಎನ್‌ಪಿಎಸ್ ಪಾವತಿಯನ್ನು ಸ್ವ ಇಚ್ಛೆಯಿಂದ ಮಾಡಲಾಗಿದೆಯೋ ಅಥವಾ ಕಡ್ಡಾಯ ನಿಯಮದ ಪ್ರಕಾರ ಮಾಡಲಾಗಿದೆಯೊ ಎಂಬುದನ್ನು ಆಧರಿಸಿ ಇದನ್ನು ಲೆಕ್ಕ ಹಾಕಲಾಗುತ್ತದೆ.
ಕಡ್ಡಾಯ ಎನ್‌ಎಪಿಎಸ್ ವಂತಿಗೆ : 1.5 ಲಕ್ಷ ರೂ.ವರೆಗಿನ ಮೊತ್ತ ಅಥವಾ ಕಡ್ಡಾಯ ವಂತಿಗೆ ಮೊತ್ತ ಇವುಗಳಲ್ಲಿ ಆರ್ಥಿಕ ವರ್ಷದಲ್ಲಿ ಯಾವುದು ಕಡಿಮೆಯೋ ಅದು. ಇದನ್ನು ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80ಸಿ ಯೊಂದಿಗೆ 80ಸಿಸಿಇ ಅಡಿ ಲೆಕ್ಕ ಹಾಕಲಾಗುತ್ತದೆ.
ನೌಕರರು ಅಥವಾ ವ್ಯಕ್ತಿಗಳಿಂದ ಸ್ವ ಇಚ್ಛೆಯಿಂದ ಎನ್‌ಪಿಎಸ್ ಪಾವತಿ : ನಿರ್ದಿಷ್ಟ ಹಣಕಾಸು ವರ್ಷದಲ್ಲಿ 50 ಸಾವಿರ ರೂ.ಗಳವರೆಗೆ, ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80ಸಿಸಿಡಿ ಅಡಿಯಲ್ಲಿ 80ಸಿ ಯ ಮೇಲ್ಪಟ್ಟು ಹಾಗೂ ಮೀರಿದ್ದು.

9. ಪ್ರಾವಿಡೆಂಟ್ ಫಂಡ್ ವಂತಿಗೆ

9. ಪ್ರಾವಿಡೆಂಟ್ ಫಂಡ್ ವಂತಿಗೆ

ಒಟ್ಟು ಮೂರು ರೀತಿಯ ಪ್ರಾವಿಡೆಂಟ್ ಫಂಡ್‌ಗಳನ್ನು ವರ್ಗೀಕರಿಸಲಾಗಿದೆ. ಖಾಸಗಿ ಸಂಸ್ಥೆಗಳ ನೌಕರರಿಗೆ ಅನ್ವಯಿಸುವ ಮಾನ್ಯತೆ ಪಡೆದ ಪಬ್ಲಿಕ್ ಪ್ರಾವಿಡೆಂಟ್ ಫಂಡ್, ಸರಕಾರಿ ನೌಕರರಿಗೆ ಅನ್ವಯಿಸುವ ಸರಕಾರದ ಜಿಪಿಎಫ್ ಮತ್ತು ಮಾನ್ಯತೆ ಪಡೆಯದ ಪ್ರಾವಿಡೆಂಟ್ ಫಂಡ್‌ಗಳಾಗಿ ಇವನ್ನು ವರ್ಗೀಕರಿಸಲಾಗಿದೆ. ಪಿಎಫ್‌ನ ಈ ಕೆಳಗಿನ ಅಂಶಗಳ ಆಧಾರದಲ್ಲಿ ತೆರಿಗೆ ವಿನಾಯಿತಿ ನಿರ್ಧರಿಸಲಗುತ್ತದೆ.
- ಕಂಪನಿ ಅಥವಾ ಸಂಸ್ಥೆಯ ವಂತಿಗೆ ಪಾಲು
ಮಾನ್ಯತೆ ಪಡೆದ ಪ್ರಾವಿಡೆಂಟ್ ಫಂಡ್‌ಗಳ ವಿಷಯದಲ್ಲಿ ಸಂಬಳದ (ಮೂಲ ಸಂಬಳ ಮತ್ತು ಡಿಎ, ನಿವೃತ್ತಿ ನಂತರದ ಸೌಲಭ್ಯಗಳಲ್ಲಿ ಅಡಕವಾಗಿರುವಂತೆ) ಶೇ.12 ಕ್ಕೆ ಮೀರದಂತೆ ಮತ್ತು ವ್ಯವಹಾರ ಆಧರಿತ ಕಮೀಷನ್ ಆಧರಿಸಿ ತೆರಿಗೆ ವಿನಾಯಿತಿ ಲೆಕ್ಕ ಮಾಡಲಾಗುತ್ತದೆ. ಸರಕಾರಿ ಹಾಗೂ ಮಾನ್ಯತೆ ಪಡೆಯದ ಪ್ರಾವಿಡೆಂಟ್ ಫಂಡ್‌ಗಳ ವಂತಿಗೆಯು ಸಂಪೂರ್ಣ ತೆರಿಗೆ ಮುಕ್ತವಾಗಿರುತ್ತದೆ.

- ಉದ್ಯೋಗಿಯ ಪಿಪಿಎಫ್ ವಂತಿಗೆ
ಮಾನ್ಯತೆ ಪಡೆಯದ ಪಿಎಫ್ ಹೊರತುಪಡಿಸಿ ಇತರರಿಗೆ ಆದಾಯ ತೆರಿಗೆ ಸೆಕ್ಷನ್ 80ಸಿ ಪ್ರಕಾರ ವಿನಾಯಿತಿ ದೊರಕುತ್ತದೆ.
- ಪಿಎಫ್ ಖಾತೆಗೆ ಸಿಗುವ ಬಡ್ಡಿ
ಮಾನ್ಯತೆ ಪಡೆದ ಪಿಎಫ್‌ಗಳಿಗೆ ಬಡ್ಡಿ ದರ ಶೇ.9.5 ನ್ನು ಮೀರದಿದ್ದರೆ ಮಾತ್ರ ವಿನಾಯಿತಿ ಸಿಗುತ್ತದೆ. ಸರಕಾರಿ ಹಾಗೂ ಮಾನ್ಯತೆ ರಹಿತ ಪಿಎಫ್‌ಗಳಿಗೆ ಸಿಗುವ ಬಡ್ಡಿಯು ಸಂಪೂರ್ಣ ತೆರಿಗೆ ಮುಕ್ತವಾಗಿದೆ.

 

10. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80ಸಿ ಅನ್ವಯ ವಿನಾಯಿತಿ

10. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80ಸಿ ಅನ್ವಯ ವಿನಾಯಿತಿ

ಹಣಕಾಸು ವರ್ಷವೊಂದರಲ್ಲಿ ಗರಿಷ್ಠ 1.5 ಲಕ್ಷ ರೂ.ಗಳವರೆಗೆ ಈ ಕೆಳಗಿನ ಅಂಶಗಳಿಗೆ ವಿನಾಯಿತಿ ಪಡೆಯಬಹುದು:
-ತನಗೆ, ಸಂಗಾತಿಗೆ ಮತ್ತು ಮಕ್ಕಳ ಹೆಸರಲ್ಲಿ ಪಡೆದ ಜೀವವಿಮಾ ಪಾಲಿಸಿಯ ಪ್ರೀಮಿಯಂ ಮೊತ್ತದ ಶೇ.10 ರವರೆಗೆ.
-ಪಿಂಚಣಿ ಯೋಜನೆ ಅಥವಾ ಮುಂದೂಡಲ್ಪಟ್ಟ ಮಾಸಾಶನ ಯೋಜನೆ ಅಥವಾ ಯೂಲಿಪ್‌ಗಳಲ್ಲಿನ ಹೂಡಿಕೆ : ಸರಕಾರಿ ನೌಕರರಾಗಿದ್ದು ಮುಂದೂಡಲ್ಪಟ್ಟ ಮಾಸಾಶನ ಯೋಜನೆ ಪಡೆದಿದ್ದರೆ ಅಥವಾ ತನ್ನ ಹೆಂಡತಿ/ ಮಕ್ಕಳಿಗೆ ಈ ಸೌಲಭ್ಯ ಸಿಗುವಂತೆ ಮಾಡಿದ್ದರೆ ಸಂಬಳದ ಶೇ.20 ರಷ್ಟು ಮೊತ್ತ ಕಡಿತಕ್ಕೆ ವಿನಾಯಿತಿ ಸಿಗುತ್ತದೆ.
- ಮನೆ ಸಾಲ ಪಡೆದು ಮೂರು ವರ್ಷದೊಳಗೆ ಮನೆಯ ಒಡೆತನ ಪಡೆಯುವ ಉದ್ಯೋಗಿಗೆ ಸಾಲದ ಅಸಲು ಪಾವತಿಗೆ ವಿನಾಯಿತಿ ಸಿಗುತ್ತದೆ.
- ಗರಿಷ್ಠ ಇಬ್ಬರು ಮಕ್ಕಳಿಗೆ ಹಣಕಾಸು ವರ್ಷವೊಂದರಲ್ಲಿ ಪಾವತಿಸಲಾದ ಟ್ಯೂಶನ್ ಫೀಸ್. (ಡೊನೇಶನ್, ಅಭಿವೃದ್ಧಿ ನಿಧಿ ಮುಂತಾದುವುಗಳನ್ನು ಹೊರತು ಪಡಿಸಿ)
- ತನ್ನ, ಸಂಗಾತಿ ಹಾಗೂ ಮಕ್ಕಳ ಹೆಸರಲ್ಲಿ ಪಿಪಿಎಫ್ ವಂತಿಗೆ
- ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಖರೀದಿಗೆ
-ಅಂಚೆ ಕಚೇರಿಯ 5 ವರ್ಷದ ನಿಶ್ಚಿತ ಅವಧಿಯ ಠೇವಣಿ
-ಶೆಡ್ಯೂಲ್ಡ್ ಬ್ಯಾಂಕ್‌ಗಳ ಅಧಿಸೂಚಿತ 5 ವರ್ಷಗಳ ಅವಧಿಯ ಫಿಕ್ಸೆಡ್ ಡಿಪಾಸಿಟ್‌ಗಳಲ್ಲಿ ಹೂಡಿಕೆ
- ಇಕ್ವಿಟಿ ಆಧರಿತ ಉಳಿತಾಯ ಯೋಜನೆಗಳು ಅಥವಾ ಅಧಿಕೃತ ನಿವೃತ್ತಿ ನಂತರದ ಯೋಜನೆಯ ಹೂಡಿಕೆ
- ಗರಿಷ್ಠ ಇಬ್ಬರು ಹೆಣ್ಣು ಮಕ್ಕಳ ಹೆಸರಲ್ಲಿ ತೆರೆಯಲಾದ ಸುಕನ್ಯಾ ಸಮೃದ್ಧಿ ಯೋಜನೆ ಖಾತೆಗೆ ವಂತಿಗೆ
- ಅಂಚೆ ಕಚೇರಿಯ 5 ವರ್ಷ ಅವಧಿಯ ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿನ ಹೂಡಿಕೆ

11. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80ಡಿ ಅನ್ವಯ ವಿನಾಯಿತಿ

11. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80ಡಿ ಅನ್ವಯ ವಿನಾಯಿತಿ

- ತನಗೆ, ಸಂಗಾತಿಗೆ ಮತ್ತು ಅವಲಂಬಿತ ಮಕ್ಕಳ ಹೆಸರಲ್ಲಿ ಪಾವತಿಸಲಾಗುವ (ನಗದು ರೂಪದಲ್ಲಿ ಹೊರತುಪಡಿಸಿ) 25 ಸಾವಿರ ರೂ. ಅಥವಾ ರೂ. 50 ಸಾವಿರ (ಸಂಗಾತಿಯು ಹಿರಿಯ ನಾಗರಿಕರಾಗಿದ್ದಲ್ಲಿ) ಮೊತ್ತದ ಆರೋಗ್ಯ ವಿಮೆಯ ಪ್ರೀಮಿಯಂ ಪಾವತಿಗೆ ವಿನಾಯಿತಿ ಕ್ಲೇಮ್ ಮಾಡಬಹುದು. ಇದಕ್ಕೆ ಹೆಚ್ಚುವರಿಯಾಗಿ ಪಾಲಕರ ಹೆಸರಲ್ಲಿ ಪಾವತಿ ಮಾಡುವ ರೂ. 25 ಸಾವಿರ ಅಥವಾ 50 ಸಾವಿರ ರೂ. (ಪಾಲಕರು ಹಿರಿಯ ನಾಗರಿಕರಾಗಿದ್ದಲ್ಲಿ) ಪಾಲಿಸಿ ಪ್ರೀಮಿಯಂ ಮೇಲೆ ಸಹ ವಿನಾಯಿತಿ ಕ್ಲೇಮ್ ಮಾಡಬಹುದು. ಸರಕಾರಿ ನೌಕರರು ಕೇಂದ್ರ ಸರಕಾರದ ಆರೋಗ್ಯ ಯೋಜನೆಗೆ ಮಾಡುವ ವಂತಿಗೆ ಮತ್ತು/ಅಥವಾ 5 ಸಾವಿರ ರೂ.ವರೆಗಿನ ಮುಂಜಾಗ್ರತಾ ಆರೋಗ್ಯ ತಪಾಸಣಾ ವೆಚ್ಚಗಳಿಗೂ ತೆರಿಗೆ ವಿನಾಯಿತಿ ಪಡೆಯಬಹುದು.

12. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80ಇ ಅನ್ವಯ ವಿನಾಯಿತಿ

12. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80ಇ ಅನ್ವಯ ವಿನಾಯಿತಿ

ಯಾವುದೇ ಪೂರ್ಣಾವಧಿಯ ಸ್ನಾತಕ ಅಥವಾ ಸ್ನಾತಕೋತ್ತರ ಪದವಿ ಶಿಕ್ಷಣಕ್ಕೆ ಪಡೆಯಲಾದ ಸಾಲಕ್ಕೆ ಪಾವತಿಸಲಾದ ಬಡ್ಡಿ (ಅಸಲು ಪಾವತಿಗೆ ಅಲ್ಲ) ಗೆ ವಿನಾಯಿತಿ ಕ್ಲೇಮ್ ಮಾಡಬಹುದು

13. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80ಜಿ ಅನ್ವಯ ವಿನಾಯಿತಿ

13. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80ಜಿ ಅನ್ವಯ ವಿನಾಯಿತಿ

ಮಾನ್ಯತೆ ಪಡೆದ ಚಾರಿಟಿ ಸಂಸ್ಥೆಗಳಿಗೆ ನೀಡಲಾದ ದಾನ ಮೊತ್ತದ ಶೇ. 50 ರಿಂದ 100 ರವರೆಗೆ ತೆರಿಗೆ ವಿನಾಯಿತಿ ಕ್ಲೇಮ್ (ಚಾರಿಟಿ ಆಧರಿಸಿ) ಮಾಡಬಹುದು. ಆದರೆ ಒಟ್ಟು ನಿವ್ವಳ ಆದಾಯದ ಶೇ. 10ನ್ನು ಇದು ಮೀರುವಂತಿಲ್ಲ ಎಂಬ ಷರತ್ತು ವಿಧಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+