For Quick Alerts
ALLOW NOTIFICATIONS  
For Daily Alerts

ಉತ್ತಮ ಆದಾಯ ಪಡೆಯಲು ಉತ್ತಮ ಹೂಡಿಕೆ ವಿಧಾನಗಳು

|

2018 ರಲ್ಲಿಯಂತೆ 2019 ರಲ್ಲಿಯೂ ಜಾಗತಿಕ ಸ್ಥಿತಿಗತಿಗಳ ಅನಿಶ್ಚಿತತೆಗಳು ಮುಂದುವರಿಯುವ ಸಾಧ್ಯತೆಗಳಿವೆ. ಚೀನಾ-ಅಮೆರಿಕ ವ್ಯಾಪಾರ ಸಂಘರ್ಷ, ವಿವಿಧ ದೇಶಗಳಿಂದ ತಮ್ಮ ಅರ್ಥವ್ಯವಸ್ಥೆಗಳ ರಕ್ಷಣಾ ನೀತಿ, ಜಾಗತಿಕ ಇಂಧನ ಹಾಗೂ ಲೋಹದ ಮಾರುಕಟ್ಟೆಗಳಲ್ಲಿನ ಏರಿಳಿತ, ಆಧುನಿಕ ತಾಂತ್ರಿಕತೆಯ ಅಭಿವೃದ್ಧಿ ಹಾಗೂ ನೀತಿಗಳ ಬದಲಾವಣೆಯಿಂದ ಸುಗಮ ವ್ಯಾಪಾರಕ್ಕೆ ಅಡ್ಡಿ ಮುಂತಾದ ವಿಷಯಗಳು ಪ್ರಮುಖವಾಗಿ ಜಾಗತಿಕ ಮಾರುಕಟ್ಟೆಯನ್ನು ಆಳಲಿವೆ. ಇಂಥ ಏರಿಳಿತ ಹಾಗೂ ಅನಿಶ್ಚಿತತೆಯ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಾಗ ತುಂಬಾ ಎಚ್ಚರಿಕೆ ವಹಿಸುವುದು ಅಗತ್ಯ. ಎಲ್ಲ ಹೂಡಿಕೆಗಳನ್ನು ಒಂದೇ ಕಡೆ ಮಾಡದೆ ವಿವಿಧೆಡೆ ಹೂಡಿಕೆ ಮಾಡುವುದು ಹಾಗೂ ತೀರಾ ಜಾಣ್ಮೆಯಿಂದ ಹಣ ತೊಡಗಿಸುವುದು ಅತಿ ಮುಖ್ಯವಾಗಿದೆ.

ಈಗಿನ ಪರಿಸ್ಥಿತಿಯಲ್ಲಿ ಮಾರುಕಟ್ಟೆಯ ಏರಿಕೆಯಿಂದ ಸಿಗಬಹುದಾದ ಲಾಭಕ್ಕಿಂತ ಇಳಿಕೆಯಿಂದಾಗಬಹುದಾದ ನಷ್ಟದ ಬಗ್ಗೆ ಹೆಚ್ಚು ಗಮನ ಹರಿಸುವುದು ಸೂಕ್ತ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹೂಡಿಕೆಗೆ ಸೂಕ್ತವಾದ ಕೆಲ ಪ್ರಮುಖ ವಿಧಾನಗಳನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.

1. ಚಿನ್ನದ ಮೇಲೆ ಹೂಡಿಕೆ
 

1. ಚಿನ್ನದ ಮೇಲೆ ಹೂಡಿಕೆ

ಕಳೆದ ಹಲವಾರು ವರ್ಷಗಳಿಂದ ಒಂದೇ ರೀತಿಯಲ್ಲಿದ್ದ ಚಿನ್ನದ ಮೌಲ್ಯ ಇತ್ತೀಚೆಗೆ ಹೆಚ್ಚಾಗುತ್ತಿದೆ. ಸಾಮಾನ್ಯವಾಗಿ ಒಂದು ಬಾರಿ ಚಿನ್ನದ ಮೌಲ್ಯ ಹೆಚ್ಚಾಗತೊಡಗಿದರೆ ಅದು ಮುಂದಿನ ಕೆಲ ವರ್ಷಗಳ ಕಾಲ ಮುಂದುವರಿಯುತ್ತದೆ ಎನ್ನಲಾಗಿದೆ. ಅನಿಶ್ಚಿತತೆ ಹಾಗೂ ಭಯದ ವಾತಾವರಣದಲ್ಲಿ ಹಣ ಚಿನ್ನದತ್ತ ಹೊರಳುವುದರಿಂದ ಸಹಜವಾಗಿಯೇ ಚಿನ್ನದ ಮೌಲ್ಯ ಹೆಚ್ಚಾಗತೊಡಗುತ್ತದೆ. ಹೀಗಾಗಿ 2019 ರಲ್ಲಿ ಹೂಡಿಕೆ ಮಾಡಲು ಚಿನ್ನ ಉತ್ತಮ ಆಯ್ಕೆಯಾಗಿದೆ.

 

2. ಕಾರ್ಪೊರೇಟ್ ಬ್ಯಾಂಕುಗಳ ಶೇರು

ಕಳೆದ ಕೆಲ ವರ್ಷಗಳ ಅವಧಿಯಲ್ಲಿ ರಿಟೇಲ್ ವ್ಯವಹಾರದ ಮೇಲೆ ಆಧರಿಸಿದ ಬ್ಯಾಂಕುಗಳು ಹಾಗೂ ಕಾರ್ಪೊರೇಟ್ ವಲಯಕ್ಕೆ ಸಾಲ ನೀಡುವ ಬ್ಯಾಂಕುಗಳ ಕಾರ್ಯಕ್ಷಮತೆಯಲ್ಲಿ ಭಾರಿ ವ್ಯತ್ಯಾಸ ಕಂಡು ಬಂದಿದೆ. ಕಾರ್ಪೊರೇಟ್ ಸಂಸ್ಥೆಗಳಿಗೆ ನೀಡಲಾದ ವಸೂಲಾಗದ ಸಾಲಗಳ (ಎನ್‌ಪಿಎ) ಕಾರಣದಿಂದ ಸಾರ್ವಜನಿಕ ವಲಯದ ಹಾಗೂ ಖಾಸಗಿ ವಲಯದ ಬ್ಯಾಂಕುಗಳ ಶೇರುಗಳ ಮೌಲ್ಯ ಕುಸಿತ ಕಾಣುತ್ತಿದ್ದವು. ಇನ್ನು ಕನ್ಸ್ಯೂಮರ್ ಲೋನ್ ಹಾಗೂ ರಿಟೇಲ್ ಸಾಲದ ವಲಯಗಳಲ್ಲಿ ಹೆಚ್ಚು ತೊಡಗಿಸಿಕೊಂಡಿರುವ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್‌ಸಿ) ಹಾಗೂ ಖಾಸಗಿ ಬ್ಯಾಂಕುಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಇವುಗಳ ಶೇರುಗಳ ಮೌಲ್ಯ ಏರಿಕೆಯ ಹಾದಿಯಲ್ಲಿದ್ದವು.

ಆದರೆ ಈಗ ಈ ಟ್ರೆಂಡ್ ರಿವರ್ಸ್ ಆಗುತ್ತಿದ್ದು, ಎನ್‌ಪಿಎ ಸಮಸ್ಯೆ ನಿವಾರಣೆಗೆ ಹಾಗೂ ಬ್ಯಾಂಕುಗಳ ಬ್ಯಾಲೆನ್ಸ್ ಶೀಟ್‌ಗಳಿಂದ ಎನ್‌ಪಿಎ ಅಳಿಸಿಹಾಕಲು ಸರಕಾರ ತೆಗೆದುಕೊಳ್ಳುತ್ತಿರುವ ಕೆಲ ಕ್ರಮಗಳ ಕಾರಣದಿಂದ ಮಾರುಕಟ್ಟೆಯಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳ ಮೇಲಿನ ವಿಶ್ವಾಸ ನಿಧಾನವಾಗಿ ಹೆಚ್ಚಾಗುತ್ತಿದ್ದು ಹಣ ಇವುಗಳೆಡೆಗೆ ಹರಿಯಲಾರಂಭಿಸಿದೆ. ಎನ್‌ಪಿಎ ಪ್ರಕರಣಗಳಿಂದ ಬಳಲುತ್ತಿದ್ದ ಬಹುತೇಕ ಎಲ್ಲ ಬ್ಯಾಂಕುಗಳ ಸಿಇಒಗಳು ಬದಲಾಗಿದ್ದು, ಬ್ಯಾಲೆನ್ಸ್ ಶೀಟುಗಳಲ್ಲಿನ ಎನ್‌ಪಿಎ ಕಡಿಮೆ ಮಾಡಲು ಪ್ರಯತ್ನಗಳು ಮುಂದುವರಿದಿವೆ. ಹೀಗಾಗಿ ಕಳೆದ ಕೆಲ ವರ್ಷಗಳಿಂದ ಕೆಳಮಟ್ಟದಲ್ಲಿರುವ ಕಾರ್ಪೊರೇಟ್ ಬ್ಯಾಂಕುಗಳ ಶೇರುಗಳು 2019 ರಲ್ಲಿ ಏರಿಕೆಯಾಗುವ ಎಲ್ಲ ಸಾಧ್ಯತೆಗಳಿವೆ.

 

3. ಕಚ್ಚಾ ವಸ್ತು ತಯಾರಿಕಾ ಕಂಪನಿಗಳ ಶೇರುಗಳು
 

3. ಕಚ್ಚಾ ವಸ್ತು ತಯಾರಿಕಾ ಕಂಪನಿಗಳ ಶೇರುಗಳು

ಕಳೆದ ಕೆಲ ವರ್ಷಗಳ ನಿಧಾನಗತಿಯ ಬೆಳವಣಿಗೆಯ ನಂತರ ಕ್ಯಾಪಿಟಲ್ ಗೂಡ್ಸ್ ಅಥವಾ ಕಚ್ಚಾ ವಸ್ತು ತಯಾರಿಕಾ ವಲಯ ಏರುಗತಿಯ ಬೆಳವಣಿಗೆ ಕಾಣುತ್ತಿದೆ. ಈ ಕ್ಷೇತ್ರಕ್ಕೆ ಹೆಚ್ಚಿನ ಬಂಡವಾಳ ಹರಿದು ಬರುತ್ತಿರುವ ಲಕ್ಷಣಗಳು ಗೋಚರಿಸತೊಡಗಿವೆ. ಈಗ ಅನೇಕ ವರ್ಷಗಳಿಂದ ತುಂಬಾ ಕಡಿಮೆ ಆದಾಯ ನೀಡಿರುವ ಈ ವಲಯದ ಶೇರುಗಳು ಇನ್ನು ಏರಿಕೆ ಕಾಣುವ ಎಲ್ಲ ಸಾಧ್ಯತೆಗಳಿವೆ. ಅಂದರೆ ಸದ್ಯದ ಭವಿಷ್ಯದಲ್ಲಿ ಈ ವಲಯ ಸಕಾರಾತ್ಮಕ ಬೆಳವಣಿಗೆ ಹೊಂದುವುದು ನಿಶ್ಚಿತವಾಗಿದೆ. ಈ ಕ್ಷೇತ್ರದಲ್ಲಿನ ಹಲವಾರು ಬ್ಲೂ ಚಿಪ್ ಕಂಪನಿಗಳ ಶೇರುಗಳ ಮೇಲೆ ಹೂಡಿಕೆ ಮಾಡಿದಲ್ಲಿ ಉತ್ತಮ ಆದಾಯ ಪಡೆಯುವ ಸಾಧ್ಯತೆಗಳಿವೆ.

4. ರಿಯಲ್ ಎಸ್ಟೇಟ್ ವಲಯ

ಒಟ್ಟಾರೆಯಾಗಿ ನೋಡಿದರೆ ರಿಯಲ್ ಎಸ್ಟೇಟ್ ವಲಯ ಇನ್ನೂ ಕೆಲ ವರ್ಷಗಳ ಕಾಲ ನಿಧಾನಗತಿಯಲ್ಲೇ ಇರಲಿದೆ. ಆದಾಗ್ಯೂ ರಿಯಲ್ ಎಸ್ಟೇಟ್ ವಲಯದ ಶೇರುಗಳು ಮಾತ್ರ ಹೂಡಿಕೆದಾರರನ್ನು ಆಕರ್ಷಿಸುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಸರಕಾರದ ಹಲವಾರು ಕ್ರಮಗಳಿಂದ ಇಡೀ ವಲಯ ಸ್ವಚ್ಛಗೊಂಡಿದ್ದು ಮೋಸ, ವಂಚನೆಗಳಿಗೆ ಕಡಿವಾಣ ಬಿದ್ದಿರುವುದೇ ಈ ಕ್ಷೇತ್ರದಲ್ಲಿ ಹೊಸ ಭರವಸೆ ಮೂಡಲು ಕಾರಣವಾಗಿದೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಗಟ್ಟಿಯಾಗಿ ತಳ ಊರಿರುವ ಹಾಗೂ ಹೆಚ್ಚು ಸಾಮರ್ಥ್ಯ ಹೊಂದಿರುವ ಕಂಪನಿಗಳು ಮಾತ್ರ ಇನ್ನು ಉತ್ತಮ ಸಾಧನೆ ತೋರಬಲ್ಲವು. ದಿನಗಳೆದಂತೆ ರಿಯಲ್ ಎಸ್ಟೇಟ್ ವಲಯ ವಿಸ್ತಾರವಾದರೂ ಕಂಪನಿಗಳು ಮಾತ್ರ ಕೆಲವೇ ಉಳಿದುಕೊಳ್ಳುವುದರಿಂದ ಅವುಗಳ ಲಾಭದ ಪ್ರಮಾಣ ಸಹಜವಾಗಿಯೇ ಜಾಸ್ತಿಯಾಗಲಿದೆ. 

ಇನ್ನು ನೂತನ ರೇರಾ ಕಾಯ್ದೆ ಯಶಸ್ವಿಯಾಗಿ ಜಾರಿಗೆ ಬಂದಿರುವುದರಿಂದ ರಿಯಲ್ ಎಸ್ಟೇಟ್ ವಲಯದಲ್ಲಿ ಸಮರ್ಥ ಹಾಗೂ ಪ್ರಗತಿಶೀಲ ಬೆಳವಣಿಗೆಯನ್ನು ಕಾಣಬಹುದಾಗಿದೆ. ಈಗಾಗಲೇ ಈ ಕ್ಷೇತ್ರದ ಶೇರುಗಳು ಸಾಕಷ್ಟು ಕೆಳ ಮಟ್ಟ ಕಂಡು ಬಂದಿದ್ದು ಇನ್ನೇನಿದ್ದರೂ ಏರಿಕೆಯ ಕಾಲವಾಗಿದೆ ಎನ್ನಲಾಗಿದೆ.

5. ಮ್ಯೂಚುವಲ್ ಫಂಡ್‌ಗಳ ಆದಾಯ ಯೋಜನೆಗಳು

ಈಗಿನ ಅತಿ ಕಡಿಮೆ ಹಣದುಬ್ಬರದ ಪ್ರಮಾಣ ಹಾಗೂ ಕಚ್ಚಾ ತೈಲಗಳ ಬೆಲೆ ಇಳಿಕೆಯ ಸಂದರ್ಭದಲ್ಲಿ ಬಡ್ಡಿ ದರಗಳ ಪ್ರಮಾಣ ಹೆಚ್ಚಾಗುತ್ತಿವೆ. ಹೀಗಾಗಿ ಹತ್ತಿರದ ಭವಿಷ್ಯದಲ್ಲಿ ಬಾಂಡ್‌ಗಳ ಮೌಲ್ಯ ಹೆಚ್ಚಾಗಲಿದೆ ಎನ್ನಲಾಗಿದೆ. ಈ ವಲಯ ಹೂಡಿಕೆದಾರರ ಮೆಚ್ಚಿನ ವಲಯವೇನೂ ಆಗಿಲ್ಲ ಹಾಗೂ ಇದು ಕನಿಷ್ಠ ಮಟ್ಟದ ರಿಸ್ಕ್ ಹೊಂದಿದೆ.

Read more about: money investment savings business
English summary

5 investment options for get good return

Downside risk protection should be given more importance than upside gain potential. Given this backdrop, here are my 5 investment ideas for this year:
Story first published: Monday, January 21, 2019, 14:27 [IST]
Company Search
Enter the first few characters of the company's name or the NSE symbol or BSE code and click 'Go'

Find IFSC

Get Latest News alerts from Kannada Goodreturns

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more