For Quick Alerts
ALLOW NOTIFICATIONS  
For Daily Alerts

ಒಂದು ಡಿಮ್ಯಾಟ್ ಖಾತೆಯ ಕಥೆ: 40 ಸಾವಿರ ರೂಪಾಯಿ 20 ಲಕ್ಷ ಆಗಿತ್ತು, ಆದರೆ...

By ಕೆ.ಜಿ.ಕೃಪಾಲ್
|

ಬೇರೆಯವರು ಮಾಡಿದ ತಪ್ಪನ್ನು ನೋಡಿಯೇ ಪಾಠ ಕಲಿತು, ನಮ್ಮ ಜೀವನದಲ್ಲಿ ಬದಲಾವಣೆ ಮಾಡಿಕೊಂಡು ಜಾಣರಾಗೋಣ ಎಂಬುದು ಇಂದಿನ ಲೇಖನದಲ್ಲಿನ ನನ್ನ ಸಲಹೆ. ಏಕೆಂದರೆ, ಸಾಕ್ಷರತೆ ಅಂದರೆ ಕಂಪ್ಯೂಟರ್ ಸಾಕ್ಷರತೆ, ಶಿಕ್ಷಣದ ಸಾಕ್ಷರತೆ ಎಂದುಕೊಳ್ಳುವವರೇ ಹೆಚ್ಚಾಗಿರುವ ಈಗಿನ ದಿನಮಾನಗಳಲ್ಲಿ ಆರ್ಥಿಕವಾಗಿಯೂ ಸಾಕ್ಷರರಾಗಿ ಎಂದು ತಿಳಿ ಹೇಳಬೇಕಾಗಿದೆ.

 

ಹೌದು, ಆರ್ಥಿಕ ಸಾಕ್ಷರತೆ ಇಂದಿನ ಅಗತ್ಯಗಳ ಅಗ್ರಮಾನ್ಯ ಸ್ಥಾನದಲ್ಲಿದೆ. ಜಗತ್ತಿನಾಧ್ಯಂತ ಎಲ್ಲಾ ಚಟುವಟಿಕೆಗಳು ವ್ಯವಹಾರಿಕವಾಗಿದ್ದು, ಲಾಭ ಗಳಿಕೆಯ ಗುರಿಯನ್ನು ಮಾತ್ರ ಗಮನದಲ್ಲಿರಿಸಿ, ಅನುಸರಿಸುವ ಮಾರ್ಗ ಮಾತ್ರ ನಗಣ್ಯವಾಗಿದೆ. ಹೇಗೆ ಸಾಧಿಸಿದೆ ಎಂಬುದಕ್ಕಿಂತ ಗುರಿ ಸಾಧಿಸಿದೆಯಲ್ಲಾ ಎಂಬುದಷ್ಟೇ ಮುಖ್ಯವಾಗಿದೆ.

ಬ್ಯಾಂಕ್ ಠೇವಣಿಗಿಂತ ಹೆಚ್ಚಿನ ಬಡ್ಡಿದರ ಪಡೆಯಲು ಹೀಗೂ ಒಂದು ದಾರಿ

ಈ ಅಖಾಡದಲ್ಲಿ ಅಂತಿಮವಾಗಿ ಬಲಿಪಶುಗಳು ಸಾಮಾನ್ಯ ಗ್ರಾಹಕರೇ ಆಗಿರುತ್ತಾರೆ. ಈ ಸಮತೋಲನವನ್ನು ಯಾವುದೇ ಕಾನೂನಿನ ಮೂಲಕ ಸರಿಪಡಿಸಲು ಸಾಧ್ಯವಿಲ್ಲ. ಇದಕ್ಕೆ ಸುಲಭ ಪರಿಹಾರ ಎಂದರೆ ಆರ್ಥಿಕ ಸಾಕ್ಷರತೆಯ ಮೂಲಕ ಆರ್ಥಿಕ ಸದೃಢತೆ, ತನ್ಮೂಲಕ ಸ್ವಯಂ ಜಾಗೃತರಾಗುವುದು.

ಡಿಮ್ಯಾಟ್ ಖಾತೆ ಮಾಡಿಸಿಕೊಳ್ಳುವುದು ಕ್ಷೇಮ

ಡಿಮ್ಯಾಟ್ ಖಾತೆ ಮಾಡಿಸಿಕೊಳ್ಳುವುದು ಕ್ಷೇಮ

ವಿತ್ತೀಯ ಪೇಟೆಗಳ ನಿಯಂತ್ರಕ 'ಸೆಬಿ' ಇತ್ತೀಚೆಗೆ ಆದೇಶವೊಂದನ್ನು ಹೊರಡಿಸಿ, ಮಾರ್ಚ್ ನಂತರ ಭೌತಿಕ ಷೇರುಪತ್ರಗಳನ್ನು (ಫಿಸಿಕಲ್ ಫಾರ್ಮ್ ನ ಷೇರುಗಳು) ವರ್ಗಾವಣೆ ಮಾಡುವಂತಿಲ್ಲ ಎಂದು ತಿಳಿಸಿದೆ. ಈ ವಿಚಾರದ ಬಗ್ಗೆ ಹೆಚ್ಚಿನವರು ಗೊಂದಲಕ್ಕೀಡಾಗಿದ್ದಾರೆ. ಕೆಲವರು ತಮ್ಮ ಹೆಸರಿನಲ್ಲಿಯೇ ಷೇರುಗಳನ್ನು ಹೊಂದಿದ್ದರು ಸಹ ಭೌತಿಕವಾಗಿ ಷೇರುಪತ್ರಗಳನ್ನು ಹೊಂದಬಾರದೇನೋ ಎಂಬ ಕಲ್ಪನೆಯಲ್ಲಿದ್ದಾರೆ. ಈ ಆದೇಶದ ಹಿಂದೆ ಇರುವ ಉದ್ದೇಶ ಸ್ಪಷ್ಟ. ಭೌತಿಕ ಷೇರುಪತ್ರಗಳನ್ನು ಡಿಮ್ಯಾಟ್ ಮಾಡಿಸಿಕೊಳ್ಳುವುದು ಕ್ಷೇಮ ಮತ್ತು ಸುರಕ್ಷಿತವಲ್ಲದೆ ಷೇರುಪೇಟೆಯ ಮುಖ್ಯ ಅನುಕೂಲವಾದ 'ದಿಢೀರ್ ನಗದೀಕರಣ' ವ್ಯವಸ್ಥೆಯ ಲಾಭ ಎಲ್ಲರಿಗೂ ದೊರೆಯಲಿ ಅಂತಷ್ಟೇ. ಈ ಸಂಗತಿ ನಿಮಗೆ ತಿಳಿಸುವ ಸಲುವಾಗಿಯೇ ಈ ಲೇಖನ.

ಷೇರು ಬ್ರೋಕರ್ ಗೆ ನೋಟಿಸ್ ಜಾರಿ
 

ಷೇರು ಬ್ರೋಕರ್ ಗೆ ನೋಟಿಸ್ ಜಾರಿ

ಭೌತಿಕ ಷೇರುಗಳನ್ನು ಹೊಂದಿದ್ದವರಿಗೆ ಎಂತಹ ತೊಂದರೆಗಳು ಬರಬಹುದೆಂಬುದಕ್ಕೆ ಈ ಉದಾಹರಣೆ ಗಮನಿಸಿ. ಸಾಮಾನ್ಯವಾಗಿ ಇನ್ಫೋಸಿಸ್ ಕಂಪನಿ ಷೇರುಗಳಲ್ಲಿ ಹೂಡಿಕೆದಾರರು ಉತ್ತಮ ಲಾಭ ಗಳಿಸಿದ್ದಾರೆ ಎಂಬ ಭಾವನೆ ಇದೆ. ಆದರೆ ಇದಕ್ಕೆ ಅಪವಾದವಾಗಿರುವ ಈ ಪ್ರಕರಣವನ್ನು ನೋಡಿ. 1996ನೇ ಇಸವಿಯಲ್ಲಿ ಒಂದು ನೂರು ‌ಇನ್ಫೋಸಿಸ್ ಷೇರುಗಳನ್ನು ಭೌತಿಕ ಷೇರುಪತ್ರಗಳ ರೂಪದಲ್ಲೇ ಷೇರು ವಿನಿಮಯ ಕೇಂದ್ರದಲ್ಲಿ ಬ್ರೋಕರ್ ಮೂಲಕ ಮಾರಾಟ ಮಾಡಲಾಯಿತು. ದಾಖಲೆಪತ್ರಗಳು ಸರಿಯಾಗಿದ್ದ ಕಾರಣ ಆ ವಹಿವಾಟು ಸುಸೂತ್ರವಾಗಿ ಚುಕ್ತಾ ಆಯಿತು. ಮಾರಾಟ ಮಾಡಿದ ಗ್ರಾಹಕರಿಗೂ ಹಣ ಸಂದಾಯವಾಯಿತು. ಆದರೆ ಸುಮಾರು ಮೂರು ವರ್ಷ ತುಂಬುವ ಸಮಯದಲ್ಲಿ ಷೇರು ವಿನಿಮಯ ಕೇಂದ್ರದಿಂದ ಒಂದು ನೋಟಿಸ್ ಜಾರಿಯಾಗಿ, ವಿಲೇವಾರಿಯಾದ ಷೇರುಪತ್ರವು ಕಳುವಾಗಿದ್ದಾಗಿದ್ದು, ಇದು ಊರ್ಜಿತವಲ್ಲವಾದ ಕಾರಣ ಬ್ರೋಕರ್ ಖಾತೆಯಿಂದ ಈ ವಹಿವಾಟಿನ ಹಣವನ್ನು ಒಂದು ನಿರ್ದಿಷ್ಟವಾದ ದಿನದಂದು ಪಡೆಯಲಾಗುವುದೆಂದು ಸೂಚಿಸಲಾಗಿತ್ತು.

ಭಾರತೀಯ ಷೇರುಪೇಟೆ ತಲ್ಲಣ; ಕೊಚ್ಚಿಹೋಯಿತು 2.2 ಲಕ್ಷ ಕೋಟಿ ಸಂಪತ್ತು

ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ತನ್ನ ತಪ್ಪಿಲ್ಲದಿದ್ದರೂ ಬ್ರೋಕರ್ ಶಿಕ್ಷೆ ಅನುಭವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಲು ಕಾರಣವಾಗಿದ್ದು ಈ ಭೌತಿಕ ಷೇರುಪತ್ರಗಳು. ಇಲ್ಲಿ ಷೇರುಪತ್ರವು ವರ್ಗಾವಣೆ ಪತ್ರದೊಂದಿಗೆ ನೀಡಿದ್ದರೂ ಅದು ಕಳುವಾಗಿದ್ದ ಪತ್ರವೆಂದು ವ್ಯಾಜ್ಯ ಪರಿಹಾರ ಸಮಿತಿ ನಿರ್ಧರಿಸಿದ್ದುದು ಪ್ರಶ್ನಾರ್ಹವಾಗಿತ್ತು. ಪೂರ್ಣವಾದ ವಿವರ ಇಂತಿದೆ. ಷೇರು ವಿನಿಮಯ ಕೇಂದ್ರದಿಂದ ಅಂತಿಮವಾಗಿ ಖರೀದಿ ಮಾಡಿದ ಬ್ರೋಕರ್ ತಮ್ಮ ಗ್ರಾಹಕರಿಗೆ ವಿಲೇವಾರಿ ಮಾಡಿದ್ದರು, ಗ್ರಾಹಕರು ವರ್ಗಾವಣೆ ಪಾತ್ರ (ಟ್ರಾನ್ಸ್ ಫರ್ ಡೀಡ್) ಕಳೆದುಕೊಂಡರು. ಆ ನಂತರ ತಾವು ಖರೀದಿ ಮಾಡಿದ ಬ್ರೋಕರ್ ಮೂಲಕ ಬಾರದೆ, ನೇರವಾಗಿ ಷೇರುದಾರರ ವಿಳಾಸ ಪಡೆದು ಅವರನ್ನು ಸಂಪರ್ಕಿಸಿದರು. ಷೇರುದಾರರು ಇದೊಂದು ಅಪೂರ್ವ ಅವಕಾಶ ಎಂದು ಭಾವಿಸಿ, ಷೇರುಪತ್ರ ಕಳುವಾಗಿವೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.

40 ಸಾವಿರ ರೂಪಾಯಿಯು  20 ಲಕ್ಷದಷ್ಟಾಗಿತ್ತು

40 ಸಾವಿರ ರೂಪಾಯಿಯು 20 ಲಕ್ಷದಷ್ಟಾಗಿತ್ತು

ಇದಕ್ಕೆ ಮುಖ್ಯ ಕಾರಣ ಆ ಮೂರು ವರ್ಷದಲ್ಲಿ ಇನ್ಫೋಸಿಸ್ ಷೇರಿನ ಬೆಲೆ ಅತಿ ಹೆಚ್ಚಾಗಿತ್ತು. 1996ರಲ್ಲಿ 40 ಸಾವಿರ ರೂಪಾಯಿಗಳು, 1999ರ ಸಮೀಪದಲ್ಲಿ ಅದು 400 ಷೇರುಗಳಾಗಿ, ಅದರ ಮೌಲ್ಯವು 20 ಲಕ್ಷದಷ್ಟಿತ್ತು. ಅಂದರೆ ತಾನು ಮಾರಾಟ ಮಾಡಿ ಹಣವನ್ನು ಪಡೆದಿದ್ದರು ಸಹ ಮೂರು ವರ್ಷಗಳ ನಂತರದಲ್ಲಿ ಕಂಡ ಅಭೂತಪೂರ್ವ ಏರಿಕೆಯು ಮಾರಾಟಗಾರನ ಮನಸ್ಸಿನ ಚಿಂತನೆಗಳನ್ನು ಬದಲಿಸಿತ್ತು. ನಂತರ ನ್ಯಾಯಾಲಯದಲ್ಲಿ ಈ ಕ್ರಮಗಳು ಪ್ರಶ್ನಿಸಿ, ಹೋರಾಟ ಮಾಡಿದ ನಂತರ ಅಂತಿಮವಾಗಿ ನ್ಯಾಯವು ಖರೀದಿದಾರರಪರವಾಗಿ ಬಂದಿತು. ಭೌತಿಕ ಷೇರುಪತ್ರಗಳ ವಹಿವಾಟು ನಡೆಯುತ್ತಿದ್ದ ಅಂತಿಮ ದಿನಗಳಲ್ಲಿ ಹೆಚ್ಚಿನ ಮೌಲ್ಯದ ಷೇರುಗಳು ನಕಲಿಯಾಗಿ ಅನೇಕ ಹೂಡಿಕೆದಾರರು, ವಹಿವಾಟುದಾರರು, ಬ್ರೋಕರ್ ಗಳು ವಿವಿಧ ನಮೂನೆಯ ತೊಂದರೆಗಳನ್ನು ಅನುಭವಿಸುವಂತೆ ಮಾಡಿತ್ತು.

ಮಾರ್ಚ್ 31ರವರೆಗೂ ಸಮಯಾವಕಾಶ

ಮಾರ್ಚ್ 31ರವರೆಗೂ ಸಮಯಾವಕಾಶ

ಹೆಚ್ಚಿನ ಮೌಲ್ಯದ ಷೇರುಪತ್ರಗಳು ವರ್ಗಾವಣೆಗೆ ನೀಡಿದರೆ, ಆ ಷೇರು ಪತ್ರಗಳು ಮಾರಾಟದಾರರ ಹೆಸರಿನಲ್ಲಿ ಇಲ್ಲವೆಂದು, ಅದಕ್ಕಾಗಲೇ ಡೂಪ್ಲಿಕೇಟ್ ಷೇರುಪತ್ರ ವಿತರಣೆಯಾಗಿದೆ ಎಂದು ಹಿಂದಿರುಗಿ ಬಂದ ನಿದರ್ಶನವು ಇತ್ತು. ಇಂತಹ ವಿವಿಧ ಜಂಜಾಟಗಳಿಂದ ಮುಕ್ತಿ ಪಡೆಯಲು ಡಿಮ್ಯಾಟ್ ವಿಧ ಒಂದು ರಾಜಮಾರ್ಗವಾಗಿದೆ. ಡಿಮ್ಯಾಟ್ ನಲ್ಲಿರುವ ಷೇರುಗಳಿಗೆ 'ಹೋಲ್ಡಿಂಗ್' ಶುಲ್ಕವಿರುವುದಿಲ್ಲ. ಡಿಮ್ಯಾಟ್ ನಲ್ಲಿರುವ ಷೇರುಗಳನ್ನು ಮಾರಾಟ ಮಾಡಿದರೆ ಮಾತ್ರ ಶುಲ್ಕ ವಿಧಿಸಲಾಗುವುದು, ಇಲ್ಲದಿದ್ದರೆ ಕೇವಲ ವಾರ್ಷಿಕ ನಿರ್ವಹಣಾ ವೆಚ್ಚ ಮಾತ್ರ ಭರಿಸಬೇಕಾಗುವುದು. ಉಪಯೋಗಗಳಿಗೆ ಹೋಲಿಸಿದರೆ ಇದು ನಗಣ್ಯ. ಈಗ ಸೆಬಿ ಜಾರಿಗೊಳಿಸುತ್ತಿರುವ ನಿಯಮವು ಹೂಡಿಕೆದಾರರ ಹಿತದಿಂದ ಇದ್ದು, ಹೂಡಿಕೆದಾರರು ತಮ್ಮ ಹೆಸರಿಗೆ ಷೇರುಪತ್ರಗಳನ್ನು ವರ್ಗಾಯಿಸಿಕೊಳ್ಳಲು ಮಾರ್ಚ್ 31ರವರೆಗೂ ಸಮಯವಿದ್ದರೂ, ಶೀಘ್ರವೇ ಕಾರ್ಯ ಪ್ರವೃತ್ತರಾಗುವುದು ಸೂಕ್ತ.

ಡಿಮ್ಯಾಟ್ ಖಾತೆಯಿರುವುದು ಸದಾ ಸುರಕ್ಷಿತ

ಡಿಮ್ಯಾಟ್ ಖಾತೆಯಿರುವುದು ಸದಾ ಸುರಕ್ಷಿತ

ಡಿಮ್ಯಾಟ್ ಮಾಡಿಸಿಕೊಂಡರೆ ವೃಥಾ ಖರ್ಚು ನಿಭಾಯಿಸಬೇಕೆಂದು ಹಲವರಲ್ಲಿ ತಪ್ಪು ಕಲ್ಪನೆ ಇದೆ. ಡಿಮ್ಯಾಟ್ ನಲ್ಲಿ ಷೇರುಗಳಿದ್ದರೆ ಖಾತೆಯ ನಿರ್ವಹಣೆಗಾಗಿ ವಾರ್ಷಿಕ ರೂ. 300 ರಷ್ಟು ವೆಚ್ಚ ಭರಿಸಬೇಕಾಗಬಹುದು. ಈ ಮೂಲಕ ಆಗುವ ಪ್ರಯೋಜನಗಳೆಂದರೆ ಷೇರುಗಳು ಸುಭದ್ರ, ಕಳುವಾಗುವ, ಹುಡುಕಬೇಕಾಗುವ ಪ್ರಮೇಯ ಇರುವುದಿಲ್ಲ. ಮೇಲಾಗಿ ಕಂಪನಿ ಪ್ರಕಟಿಸುವ ಯಾವುದೇ 'ಷೇರು ಸ್ವರೂಪ' ದ ಬದಲಾವಣೆ ಅಂದರೆ, ಮುಖ ಬೆಲೆ ಸೀಳಿಕೆ, ಮುಖಬೆಲೆ ಕಡಿತ, ಮತ್ತೊಂದು ಕಂಪನಿಯ ಜೊತೆಗೆ ವಿಲೀನ, ಸ್ವಾದೀನ, ಸಮ್ಮಿಲನಗಳ ಕಾರಣ ಬದಲಾಗಬಹುದಾದ ಹೆಸರು ಮುಂತಾದವುಗಳು ಸ್ವಯಂಪ್ರೇರಿತವಾಗಿ ಆಗುವುದರಿಂದ ಹೂಡಿಕೆದಾರರು ಅದರ ಬಗ್ಗೆ ಯೋಚನೆ ಮಾಡುವ ಪ್ರಶ್ನೆ ಉಧ್ಭವಿಸದು. ಆದ್ದರಿಂದ ಷೇರು ವ್ಯವಹಾರ ಮಾಡಲಿ ಅಥವಾ ಹೂಡಿಕೆಯಾಗಿ ಮುಂದುವರೆಸಲಿ ಷೇರುಗಳನ್ನು ಡಿಮ್ಯಾಟ್ ರೂಪದಲ್ಲಿ ಹೊಂದುವುದು ಸದಾ ಸುರಕ್ಷಿತವಾಗಿದೆ.

ನಿರ್ವಹಣಾ ವೆಚ್ಚದಿಂದ ವಿನಾಯಿತಿ

ನಿರ್ವಹಣಾ ವೆಚ್ಚದಿಂದ ವಿನಾಯಿತಿ

ಸಣ್ಣ ಹೂಡಿಕೆದಾರರ ಅನುಕೂಲಕ್ಕಾಗಿ 'ಸೆಬಿ' 'ಬೇಸಿಕ್ ಸರ್ವೀಸಸ್ ಡಿಮ್ಯಾಟ್ ಅಕೌಂಟ್' ಅನ್ನು ಜಾರಿಗೊಳಿಸಿದೆ. ಅದರ ಪ್ರಕಾರ ಖಾತೆದಾರರ ಹೂಡಿಕೆ ಮೌಲ್ಯವು ರೂ. 50,000ದೊಳಗಿದ್ದರೆ ಅವರು ವಾರ್ಷಿಕ ನಿರ್ವಹಣಾ ವೆಚ್ಚ ಪಾವತಿಯಿಂದ ವಿನಾಯಿತಿಯನ್ನು ಪಡೆಯಬಹುದು. ಒಂದು ವೇಳೆ ಹೂಡಿಕೆಯ ಮೌಲ್ಯವು ರೂ.50 ಸಾವಿರ ದಾಟಿ ರೂ.2 ಲಕ್ಷದೊಳಗಿದ್ದರೆ ಅವರು ಕೇವಲ ವಾರ್ಷಿಕ ರೂ.100 ಮಾತ್ರ ಪಾವತಿಸಿದರೆ ಸಾಕು, ಖಾತೆ ಚಾಲ್ತಿಯಲ್ಲಿರುತ್ತದೆ. ಈ ನಿಯಮವು 2012ರ ಆಗಸ್ಟ್ ನಿಂದಲೂ ಜಾರಿಯಲ್ಲಿದೆ. ಅಲ್ಪ ಮೌಲ್ಯದ ಷೇರುಗಳನ್ನು, ಅಲ್ಪ ಸಂಖ್ಯೆಯ ಷೇರುಗಳಿಗೆ ತಗಲಬಹುದಾದ ವೆಚ್ಚವನ್ನು ಸಹ ಈ ಯೋಜನೆ ಮೂಲಕ ತಡೆಯಬಹುದು.

English summary

March 31st last date to convert physical share into electronic form

March 31st last date to convert physical share into electronic form. For this Demat account is necessary. Here is the need, importance and use of Demat account, explained by professional stock broker and columnist K.G.Krupal with examples.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X