ವೈದ್ಯಕೀಯ ವೆಚ್ಚಗಳಿಗಾಗಿ ಸೆಕ್ಷನ್‌ 80ಡಿಡಿಬಿ ಅಡಿ ಎಷ್ಟು ಕ್ಲೇಮ್ ಮಾಡಬಹುದು?

ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80D ಅಡಿಯಲ್ಲಿ ಆರೋಗ್ಯ ವಿಮೆ ಪ್ರೀಮಿಯಂನಲ್ಲಿ ಲಭ್ಯವಿರುವ ಕಡಿತವನ್ನು ಹೊರತುಪಡಿಸಿ, ನಿಮಗಾಗಿ ಅಥವಾ ನಿಮ್ಮ ಹೆತ್ತವರಿಗೆ ಅಥವಾ ಇಬ್ಬರಿಗಾಗಿ ತೆರಿಗೆಯನ್ನು ಉಳಿಸಲು ಮತ್ತೊಂದು ಅವಕಾಶವಿದೆ.

ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80D ಅಡಿಯಲ್ಲಿ ಆರೋಗ್ಯ ವಿಮೆ ಪ್ರೀಮಿಯಂನಲ್ಲಿ ಲಭ್ಯವಿರುವ ಕಡಿತವನ್ನು ಹೊರತುಪಡಿಸಿ, ನಿಮಗಾಗಿ ಅಥವಾ ನಿಮ್ಮ ಹೆತ್ತವರಿಗೆ ಅಥವಾ ಇಬ್ಬರಿಗಾಗಿ ತೆರಿಗೆಯನ್ನು ಉಳಿಸಲು ಮತ್ತೊಂದು ಅವಕಾಶವಿದೆ.

ಸೆಕ್ಷನ್‌ 80ಡಿಡಿಬಿ ಅಡಿಯಲ್ಲಿ ಇನ್ನೊಂದು ವಿಶೇಷತೆ ದ್ದು, ಈ ಕಾಯಿದೆ ಅಡಿಯಲ್ಲಿ ನೀವು ಆರೋಗ್ಯ ವಿಮೆಗಾಗಿ ಪ್ರೀಮಿಯಂ ಕಟ್ಟಿದ್ದರೂ ಅಥವಾ ನೀವು ಕಟ್ಟಿರದಿದ್ದರೂ ಕ್ಲೇಮ್ ಮಾಡಬಹುದು. ಹೀಗಿದ್ದರೂ, ಸೆಕ್ಷನ್‌ 80ಡಿಡಿಬಿ ಅಡಿಯಲ್ಲಿ ನಿರ್ದಿಷ್ಟ ಕಾಯಿಲೆಗಳಿಗೆ ಸಂಬಂಧಿಸಿದ ವೈದ್ಯಕೀಯ ವೆಚ್ಚಗಳಿಗೆ ಕ್ಲೇಮ್‌ ಮಾಡಬಹುದು ಹಾಗೂ ತೆರಿಗೆ ಉಳಿತಾಯ ಮಾಡಬಹುದು.
ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80DDB ಅಡಿಯಲ್ಲಿ ಕಡಿತ ಕ್ಲೇಮ್ ಮಾಡಲು ನೀವು ತಿಳಿದುಕೊಳ್ಳಬೇಕಾದ ಅಂಶಗಳು ಇಲ್ಲಿವೆ:

ಸೆಕ್ಷನ್ 80ಡಿಡಿಬಿ ನಿಯಮದನ್ವಯ

ಸೆಕ್ಷನ್ 80ಡಿಡಿಬಿ ನಿಯಮದನ್ವಯ

ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80ಡಿಡಿಬಿ ಅಡಿಯಲ್ಲಿ ಭಾರತೀಯ ನಿವಾಸಿಗಳು ಅಥವಾ ಹಿಂದು ಅವಿಭಜಿತ ಕುಟುಂಬ ಸದಸ್ಯರು ತೆರಿಗೆ ಕಡಿತದ ಪ್ರಯೋಜನ ಪಡೆಯಬಹುದು. ಅನಿವಾಸಿ ಭಾರತೀಯರು (ಎನ್‌ಆರ್‌ಐ) ಹಾಗೂ ಅನಿವಾಸಿ ಎಚ್‌ಯುಎಫ್ ಸದಸ್ಯರು ಕ್ಲೇಮ್‌ ಮಾಡುವಂತಿಲ್ಲ. ಆದರೆ ವೈಯಕ್ತಿಕವಾಗಿ ತಮಗಾಗಿ, ಪೋಷಕರು, ಪತ್ನಿ, ಮಕ್ಕಳು, ಸೋದರ, ಸೋದರಿಯರ ವೈದ್ಯಕೀಯ ವೆಚ್ಚವನ್ನು ಕ್ಲೇಮ್ ಮಾಡಬಹುದಾಗಿದೆ.

ಯಾವ ಕಾಯಿಲೆಗಳು

ಯಾವ ಕಾಯಿಲೆಗಳು

ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80ಡಿಡಿಬಿ ಅಡಿಯಲ್ಲಿ ಇಲ್ಲಿ ನೀಡಲಾಗಿರುವ ಕಾಯಿಲೆಗಳ ವೈದ್ಯಕೀಯ ವೆಚ್ಚದ ತೆರಿಗೆ ಕಡಿತಕ್ಕಾಗಿ ಕ್ಲೇಮ್ ಮಾಡಬಹುದು.
ಮಾರಕ ಕ್ಯಾನ್ಸರ್‌ ಕಾಯಿಲೆಗಳು
ಏಡ್ಸ್
ನರವ್ಯೂಹದ ಕಾಯಿಲೆ
ಪಾರ್ಕಿನ್ಸನ್
ದೀರ್ಘಕಾಲದ ಮೂತ್ರಪಿಂಡ ವಿಫಲತೆ
ಹಿಮೊಫೀಲಿಯಾ
ನರವೈಜ್ಞಾನಿಕ ಕಾಯಿಲೆ (ಕೆಳಕಂಡ ನರವೈಜ್ಞಾನಿಕ ಕಾಯಿಲೆಗಳಲ್ಲಿ ಅಂಗವೈಕಲ್ಯ ಮಟ್ಟ 40% ಮತ್ತು ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪ್ರಮಾಣೀಕರಿಸಲ್ಪಟ್ಟಿರಬೇಕು.)(i) ಡಿಮೆನ್ಶಿಯಾ,(ii) ಡಿಸ್ಟೋನಿಯಾ ಮಸ್ಕ್ಯುಲೋರಮ್ ಡೆಫಾರ್ಮಾನ್ಸ್,(III) ಮೋಟಾರ್ ನರಕೋಶದ ಕಾಯಿಲೆ,(IV) ಅಟಾಕ್ಸಿಯಾ,(v) ಕೊರಿಯಾ,(VI) ಹೆಮಿಬಾಲಿಸಮ್, vii) ಅಪಾಶಿಯ,(viii) ಪಾರ್ಕಿ

ಎಷ್ಟು ಕ್ಲೇಮ್ ಮಾಡಬಹುದು?

ಎಷ್ಟು ಕ್ಲೇಮ್ ಮಾಡಬಹುದು?

ಇದು ವ್ಯಕ್ತಿಯ ವಯಸ್ಸನ್ನು ಆಧರಿಸಿದೆ. 60 ವರ್ಷದೊಳಗಿನವರು ವಾರ್ಷಿಕ ಗರಿಷ್ಠ ರೂ. 40,000 ಕ್ಲೇಮ್‌ ಮಾಡಬಹುದು. 60 ವರ್ಷಕ್ಕಿಂತ ಮೇಲಿನವರಿಗೆ ವಾರ್ಷಿಕ ರೂ. 1 ಲಕ್ಷ ರೂ. ಕ್ಲೇಮ್ ಮಾಡಬಹುದು.

Case 1: ಉದ್ಯೋಗದಾತ ಅಥವಾ ವಿಮೆದಾರರಿಂದ ನೀವು ಯಾವುದೇ ಮರುಪಾವತಿಯನ್ನು ಸ್ವೀಕರಿಸದಿದ್ದರೆ, ರೂ. 60,000 ವೆಚ್ಚದಿಂದ ರೂ. 40,000 ಗರಿಷ್ಠ ಕಡಿತವನ್ನು ಪಡೆಯಬಹುದು.

Case 2: ರೂ. 20,000 ರಷ್ಟು ಮೊತ್ತ ಮರುಪಾವತಿಯಾಗಿ ಸ್ವೀಕರಿಸಿದ್ದಿರಿ. ಆದ್ದರಿಂದ ನೀವು ಬ್ಯಾಲೆನ್ಸ್ ಮೊತ್ತದಿಂದ ರೂ. 20,000 ಮಾತ್ರ ಕಡಿತಗೊಳಿಸಬಹುದು.

Case 3: ಮರುಪಾವತಿ ಮೊತ್ತವು ರೂ. 45,000 ಆಗಿದೆ. ಇದು ಅರ್ಹ ಕಡಿತದ ಮೊತ್ತ ಆಗಿದೆ.

ನೆನಪಿಡಿ: 2018-19ರ ಆರ್ಥಿಕ ವರ್ಷದಿಂದ ಹಿರಿಯ ನಾಗರಿಕರಿಗೆ (60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು) ಗರಿಷ್ಠ ರೂ. 1 ಲಕ್ಷ ಕಡಿತ ಲಭ್ಯವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+