For Quick Alerts
ALLOW NOTIFICATIONS  
For Daily Alerts

20ರ ಆಸುಪಾಸಿನವರು ತಮ್ಮ ಜೀವನದಲ್ಲಿ ಈ ಅಂಶಗಳನ್ನು ಪಾಲಿಸಬೇಕು..

|

ನಮ್ಮಲ್ಲಿ ಹೆಚ್ಚಿನ ಜನರು ತಮ್ಮ 20ರ ಆಸುಪಾಸಿನಲ್ಲಿ ಜೀವನ ಯೋಜನೆ, ಬಜೆಟ್ ಪ್ಲಾನ್, ಖರ್ಚುಗಳನ್ನು ಪರಿಶೀಲನೆ ಮಾಡಲು ವಿಫಲರಾಗುತ್ತಾರೆ. ತದನಂತರದಲ್ಲಿ ಸಾಲದ ಬಲೆಗೆ ಸಿಲುಕಿ ಪ್ರತಿ ತಿಂಗಳು ಇಎಂಐ (ಮಾಸಿಕ ಕಂತುಗಳಲ್ಲಿ) ಬಡ್ಡಿಯನ್ನು ಪಾವತಿಸುತ್ತಾರೆ. ನಿಮ್ಮಲ್ಲಿ ದೃಢವಾದ ಆರ್ಥಿಕ ಯೋಜನೆ ಇಲ್ಲದಿದ್ದರೆ ಕೆಲವು ಕನಿಷ್ಟ ಕ್ರಮಗಳನ್ನು ಅನುಸರಿಸಬೇಕು. ಆ ಮೂಲಕವಾದರೂ ಹೆಚ್ಚು ಉಳಿತಾಯ ಮಾಡಲು ಮತ್ತು ಆರ್ಥಿಕ ಸ್ವಾತಂತ್ರ್ಯ ಗಳಿಸಿ ಉತ್ತಮ ಜೀವನ ನಡೆಸಬಹುದು.

ಜೀವನದ ಆರಂಭದಲ್ಲಿ ಹಣಕಾಸು ಉಳಿತಾಯ ಆರ್ಥಿಕ ಭದ್ರತೆ ಸಾಧಿಸಲು ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ.

ಬಜೆಟ್ ತಯಾರಿಸಿ
 

ಬಜೆಟ್ ತಯಾರಿಸಿ

ಹಣವನ್ನು ಮೂಲಭೂತ ಮತ್ತು ಸ್ಪಷ್ಟ ಅವಶ್ಯಕತೆಗಳಿಗೆ ನಿಗದಿಪಡಿಸುವುದು ಒಳ್ಳೆಯದು. ಮನೆ ಬಾಡಿಗೆ, ವಿದ್ಯುತ್ ಬಿಲ್, ಮನೆಗೆಲಸದವರ ವೇತನ, ನೀರಿನ ಬಿಲ್, ಆಹಾರ ವೆಚ್ಚ, ಪ್ರಯಾಣ ವೆಚ್ಚ ಮುಂತಾದ ಆವರ್ತಕ ಅಗತ್ಯಗಳಿಗಾಗಿ ಹಣವನ್ನು ತಿಂಗಳ ಆರಂಭದಲ್ಲಿಯೇ ಕಾಯ್ದಿರಿಸಬೇಕು.

ಆರಂಭಿಕ ಹೂಡಿಕೆ

ಆರಂಭಿಕ ಹೂಡಿಕೆ

ನಿಮ್ಮ ವೃತ್ತಿ ಜೀವನದ ಆರಂಭಿಕ ಹಂತದಲ್ಲಿಯೇ ಉಳಿತಾಯ ಮತ್ತು ಹೂಡಿಕೆಯನ್ನು ಆರಂಭಿಸಬೇಕು. ಆರಂಭದ ಹಂತದಲ್ಲಿ ವ್ಯಕ್ತಿಗಳು ಯಾವುದೇ ಜವಾಬ್ದಾರಿ ಹೊಂದದೆ ಇರುವುದರಿಂದ ಅಪಾಯ-ತೆಗೆದುಕೊಳ್ಳುವ ಸಾಮರ್ಥ್ಯಗಳನ್ನು ಅವಲಂಬಿಸಿ ಹೂಡಿಕೆ ಮಾಡಲು ಅಥವಾ ಆಸ್ತಿ ಖರಿದಿ ಆಯ್ಕೆ ಮಾಡಬಹುದು.

ಸಾಲದ ಮೇಲೆ ಕಡಿಮೆ ಅವಲಂಬನೆ

ಸಾಲದ ಮೇಲೆ ಕಡಿಮೆ ಅವಲಂಬನೆ

ಸಂಪೂರ್ಣವಾಗಿ ಸಾಲದ ಮೇಲೆ ಅವಲಂಬನೆಯಾಗುವುದು ಕೆಟ್ಟ ವಿಚಾರ. ಯೋಜಿತವಲ್ಲದ ಅವಶ್ಯಕತೆ ಅಥವಾ ತಾತ್ಕಾಲಿಕ ನಿರುದ್ಯೋಗವು ಇದ್ದಲ್ಲಿ ನೀವು ಸಾಲವನ್ನು ತಿರಿಸಲು ಸಾಧ್ಯವಾಗುವುದಿಲ್ಲ. ಸುರಕ್ಷಿತವಾಗಿರಬೇಕೆಂದರೆ, ಸಾಲದ ಅವಲಂಬನೆಯು ಒಟ್ಟು ಆದಾಯದ ಶೇ. 40ಕ್ಕಿಂತ ಹೆಚ್ಚಾಗಬಾರದು. ಸಾಲ ಯಾವುದೇ ರೂಪದಲ್ಲಿರಬಹುದು. ಅಲ್ಪಾವಧಿಯ ಸಾಲಗಳು ಅಥವಾ ಕ್ರೆಡಿಟ್ ಕಾರ್ಡ್ ಬಳಕೆ ಇರಬಹುದು.

ವೆಚ್ಚಗಳನ್ನು ಪರಿಶೀಲಿಸಿ
 

ವೆಚ್ಚಗಳನ್ನು ಪರಿಶೀಲಿಸಿ

ನಿಮ್ಮ ವೆಚ್ಚಗಳ ವಾರದ ವಿಮರ್ಶೆಯನ್ನು ನೀವು ಮಾಡುತ್ತಿರಬೇಕು. ಇದರಿಂದಾಗಿ ನೀವು ಯೋಜಿತ ವೆಚ್ಚಗಳ ಪ್ರಮಾಣವನ್ನು ಟ್ರ್ಯಾಕ್ ಮಾಡಬಹುದು. ಇದು ಯಾವುದೇ ನಿರ್ದಿಷ್ಟ ವಸ್ತುವಿನ ಮೇಲಿನ ಅತಿಯಾದ ವೆಚ್ಚವನ್ನು ಪರಿಶೀಲಿಸಲು ಸಹಾಯ ಮಾಡುತ್ತದೆ.

ತುರ್ತು ನಿಧಿ

ತುರ್ತು ನಿಧಿ

ತುರ್ತು ನಿಧಿ ಅನೇಕ ಸಮಯದಲ್ಲಿ ಸಹಾಯಕ್ಕೆ ಬರುತ್ತದೆ. ಒಬ್ಬಂಟಿಯಾಗಿ ವಾಸಿಸುವ ವ್ಯಕ್ತಿಗಳಿಗೆ ತುರ್ತು ನಿಧಿ ಅತ್ಯುತ್ತಮವಾಗಿರುತ್ತದೆ. ಬೇರೆ ಮೂಲಗಳಿಂದ ಸಹಾಯ ಮಾಡಲು ಸ್ವಲ್ಪ ಸಮಯ ಬೇಕಾಗಬಹುದು. ಇದಕ್ಕಾಗಿ ಬ್ಯಾಂಕ್ ಎಫ್ಡಿ, ರಿಕರಿಂಗ್ ಡಿಪಾಸಿಟ್ (ಆರ್ಡಿ), ಮ್ಯೂಚುಯಲ್ ಫಂಡ್, ಸಿಪ್ ಇತ್ಯಾದಿಗಳನ್ನು ಪರಿಗಣಿಸಬಹುದು.

Read more about: money savings finance news
English summary

Personal finance at 20s, money habits you should follow

Individuals in their late 20s tend to skip planning, budgeting and checking the expenses following.
Story first published: Tuesday, February 19, 2019, 15:32 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more