For Quick Alerts
ALLOW NOTIFICATIONS  
For Daily Alerts

10 year challenge: ದೊಡ್ಡ ಗುರಿ ಸಾಧನೆಗೆ ನಿಮ್ಮ ಚಾಲೆಂಜ್ ಹೀಗಿರಲಿ..

2019 ರಲ್ಲಿನ ಒಂದು ಹಾಗೂ ವರ್ತಮಾನದ ಒಂದು ಫೋಟೊ ಫೇಸ್ಬುಕ್‌ನಲ್ಲಿ ಪೋಸ್ಟ್ ಮಾಡುವುದು ದೊಡ್ಡ ಅಲೆಯನ್ನೇ ಸೃಷ್ಟಿಸಿದೆ. ಈಗ ಇದೇ ಮಾದರಿಯನ್ನು ನಮ್ಮ ಭವಿಷ್ಯದ ಗುರಿಯ ಸಾಧನೆಗೆ ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ನೋಡೋಣ.

|

ಸೋಶಿಯಲ್ ಮೀಡಿಯಾ ಫೇಸ್ಬುಕ್‌ನಲ್ಲಿ ಟ್ರೆಂಡಿಂಗ್ ಆದ 'ಟೆನ್ ಇಯರ್ ಚಾಲೆಂಜ್' (10 year challenge) ಬಹಳ ಸಂಚಲನ ಸೃಷ್ಟಿಸಿತ್ತು. ತಮ್ಮ 2019 ರಲ್ಲಿನ ಒಂದು ಹಾಗೂ ವರ್ತಮಾನದ ಒಂದು ಫೋಟೊ ಫೇಸ್ಬುಕ್‌ನಲ್ಲಿ ಪೋಸ್ಟ್ ಮಾಡುವುದು ದೊಡ್ಡ ಅಲೆಯನ್ನೇ ಸೃಷ್ಟಿಸಿದೆ. ಈಗ ಇದೇ ಮಾದರಿಯನ್ನು ನಮ್ಮ ಭವಿಷ್ಯದ ಗುರಿಯ ಸಾಧನೆಗೆ ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ನೋಡೋಣ.
ನಿಮ್ಮ ಭವಿಷ್ಯದ 10 ವರ್ಷಗಳ ಕಡೆಗೆ ಗಮನಹರಿಸಿದರೆ ಏನು ಕಂಡು ಬರುತ್ತದೆ ಎಂಬುದನ್ನು ಮೊದಲು ತಿಳಿಯಬೇಕು. ಅಂದರೆ 2019 ರಲ್ಲಿ ನೀವು ಏನಾಗಿರುತ್ತೀರಿ ಎಂದು ನಿಮಗನಿಸುತ್ತದೆ? ಆ ಬಗ್ಗೆ ಯಾವತ್ತೂ ವಿಚಾರವನ್ನೇ ಮಾಡಿಲ್ಲ ಎಂದಾಗಿದ್ದರೆ ಅದರ ಬಗ್ಗೆ ವಿಚಾರ ಮಾಡಲು ಇಂದಿಗಿಂತ ಉತ್ತಮ ಸಮಯ ಮತ್ತೊಂದಿಲ್ಲ. ಜೀವನದಲ್ಲಿ ಉನ್ನತವಾದ ಗುರಿ ಇರಲೇಬೇಕು ಹಾಗೂ ಅದನ್ನು ಸಾಧಿಸಲು ಸ್ಪಷ್ಟವಾದ ಯೋಜನೆಯೂ ಇರಬೇಕು. ಹಾಗಾದರೆ ಮುಂದಿನ 10 ವರ್ಷಗಳಲ್ಲಿ ಯಶಸ್ವಿಯಾಗಿ ನಿಮ್ಮ ಗುರಿಯನ್ನು ತಲುಪುವ ಬಗೆ ಹೇಗೆ ಎಂಬ ಬಗ್ಗೆ ನಾವಿಲ್ಲಿ ವಿವರವಾಗಿ ತಿಳಿಸಿದ್ದೇವೆ, ನೀವೂ ಓದಿಕೊಳ್ಳಿ. ಕೋಟ್ಯಾಧಿಪತಿ ಆಗುವುದು ಹೇಗೆ ಗೊತ್ತೆ?

ನಾನ್ಯಾಕೆ ಗುರಿ ಹಾಕಿಕೊಳ್ಳಬೇಕು?

ನಾನ್ಯಾಕೆ ಗುರಿ ಹಾಕಿಕೊಳ್ಳಬೇಕು?

ಜೀವನದಲ್ಲಿ ಯಾವಾಗಲೂ ಮುಂದೆ ಗುರಿ, ಹಿಂದೆ ಗುರು ಇರಬೇಕು ಎಂದು ಹಿರಿಯರು ಹೇಳಿದ್ದು ಸತ್ಯವಾಗಿದೆ. ಸ್ಪಷ್ಟ ಗುರಿಯ ಕಲ್ಪನೆಯೇ ಇಲ್ಲದಿದ್ದರೆ ಏನು ಮಾಡಬೇಕೆಂದು ನಿರ್ಧರಿಸುವುದು ಕಷ್ಟವಾಗುತ್ತದೆ. ಎಲ್ಲ ಕಾರ್ಯಗಳೂ ಕ್ಷಣಿಕ ಗುರಿಯ ಸಾಧನೆಯ ಮೇಲೆ ಕೇಂದ್ರಿಕೃತವಾಗುತ್ತವೆ. ಆದರೆ ನಿರ್ದಿಷ್ಟ ಗುರಿಯ ಸಾಧನೆಯ ಬಗ್ಗೆ ನಿರ್ಧರಿಸಿದ್ದಲ್ಲಿ ಅದಕ್ಕುನುಗುಣವಾಗಿ ಜೀವನದಲ್ಲಿ ಮುನ್ನಡೆಯಬಹುದು. ಎಲ್ಲಿಗೆ ಹೋಗುವುದು ಎಂಬುದು ಗೊತ್ತೇ ಇರದಿದ್ದರೆ ಯಾವ ಗುರಿಯನ್ನೂ ಸಾಧಿಸಲಾಗದು. ಉದಾಹರಣೆಗೆ ನೋಡುವುದಾದರೆ, ಒಂದು ಚಿಕ್ಕ ಟೂರ್ ಹೋಗುವುದಾದರೂ ಅದನ್ನು ಮುಂಚೆಯೇ ಪ್ಲಾನ್ ಮಾಡಬೇಕಾಗುತ್ತದೆ. ಅದಕ್ಕಾಗಿ ಆಫೀಸಿನಲ್ಲಿ ಸಾಕಷ್ಟು ಮುಂಚಿತವಾಗಿ ರಜೆ ಕೇಳಬೇಕಾಗುತ್ತದೆ. ಜೊತೆಗೆ ಬಸ್ ಅಥವಾ ಟ್ರೇನ್ ಟಿಕೆಟ್ ಅನ್ನು ಮುಂಚಿತವಾಗಿಯೇ ಬುಕಿಂಗ್ ಮಾಡಬೇಕಾಗುತ್ತದೆ. ಜೀವನದಲ್ಲಿನ ಗುರಿಗಳ ಸಾಧನೆಗೆ ಇದಕ್ಕಿಂತ ದೊಡ್ಡ ಪ್ಲಾನಿಂಗ್ ಬೇಕಾಗುತ್ತದೆ ಎಂಬುದು ಗೊತ್ತಿರಲಿ.

ಎಲ್ಲಿಂದ ಆರಂಭಿಸುವುದು?

ಎಲ್ಲಿಂದ ಆರಂಭಿಸುವುದು?

ಮೊದಲಿಗೆ ಒಂದು ಪೆನ್ ಹಾಗೂ ಪೇಪರ್ ತೆಗೆದುಕೊಂಡು ಬರೆಯಲಾರಂಭಿಸಿ. ೧೯೭೯ರ ಹಾರ್ವರ್ಡ ವಿವಿಯಲ್ಲಿ ಕಲಿತ ಬ್ಯಾಚ್ ನವರನ್ನು ಮುಂದಿನ 10 ವರ್ಷಗಳವರೆಗೆ ಅಧ್ಯಯನ ಮಾಡಲಾಗಿತ್ತು ಎಂದು ತಿಳಿದವರು ಹೇಳುತ್ತಾರೆ. ಇವರಲ್ಲಿ ತಮ್ಮ ಗುರಿ ಹಾಗೂ ಅದನ್ನು ಸಾಧಿಸುವ ಕಾರ್ಯಯೋಜನೆಯನ್ನು ಲಿಖಿತವಾಗಿ ಬರೆದ ಶೇ.3 ರಷ್ಟು ಜನ ಇತರರಿಗಿಂತ 10 ಪಟ್ಟು ಜೀವನದಲ್ಲಿ ಹೆಚ್ಚು ಯಶಸ್ಸು ಸಾಧಿಸಿದ್ದರು ಹಾಗೂ ಹೆಚ್ಚು ದುಡ್ಡು ಗಳಿಸಿದ್ದರು. ಈ ಒಂದು ವರದಿಯನ್ನು ಗಮನಿಸಿದಾಗ, ನಿಮ್ಮ ಗುರಿ ಹಾಗೂ ಅದನ್ನು ಸಾಧಿಸುವ ಬಗ್ಗೆ ಕಾರ್ಯಯೋಜನೆಯನ್ನು ಲಿಖಿತವಾಗಿ ಬರೆದಿಟ್ಟುಕೊಂಡಲ್ಲಿ ಅದರ ಬಗ್ಗೆ ಗಮನ ಕೇಂದ್ರಿಕರಿಸುವುದು ಸುಲಭವಾಗುತ್ತದೆ ಹಾಗೂ ಯಶಸ್ಸಿನ ಉತ್ತುಂಗಕ್ಕೇರಲು ಸಹಾಯವಾಗುತ್ತದೆ. ಹೀಗಾಗಿ ನಿಮ್ಮ ಗುರಿಯ ಬಗ್ಗೆ ನೀವೂ ಈಗಲೇ ನೋಟ್ ಮಾಡಿಟ್ಟುಕೊಂಡು ಆಗಾಗ ಗಮನಿಸುತ್ತಿರಿ. ಸ್ವಂತ ಉದ್ಯಮ(ಕಂಪನಿ) ಪ್ರಾರಂಭಿಸುವುದು ಹೇಗೆ?

ಭವಿಷ್ಯದಲ್ಲಿ ನಾನು ಏನಾಗಬಯಸುತ್ತಿರುವೆ?

ಭವಿಷ್ಯದಲ್ಲಿ ನಾನು ಏನಾಗಬಯಸುತ್ತಿರುವೆ?

ನೀನು ನೀನಾಗಿರು, ಗುರಿಯತ್ತ ಮುನ್ನಡೆ ಹಾಗೂ ಯಶಸ್ಸನ್ನು ಸಾಧಿಸು ಇವು ಯಾವುದೇ ಕಾರ್ಯಯೋಜನೆಯನ್ನು ಜಾರಿಗೆ ತರುವ ಸೂಕ್ತ ವಿಧಾನವಾಗಿವೆ. ಇನ್ನು 10 ವರ್ಷಗಳ ನಂತರ ನೀವೇನಾಗಬಯಸುವಿರಿ ಎಂಬುದರ ಬಗ್ಗೆ ಸ್ಪಷ್ಟ ಕಲ್ಪನೆ ಇರಲಿ. ಇನ್ನು ಆರೋಗ್ಯ, ಶಾಂತಿ, ನೆಮ್ಮದಿ, ಪರಿಪೂರ್ಣತೆ, ಪ್ರೀತಿ, ಕರುಣೆ ಇವೆಲ್ಲ ಸಹ ನಮ್ಮ ನಮ್ಮ ಜೀವನದ ಗುರಿಗಳ ಪಟ್ಟಿಯಲ್ಲಿರಲೇಬೇಕು. ಈ ರೀತಿಯಾಗಿ ಕಾರ್ಯಯೋಜನೆ ಹಾಕಿಕೊಂಡಲ್ಲಿ ನಿಮ್ಮ ಆಲೋಚನೆ, ಭಾವನೆ ಹಾಗೂ ಕ್ರಿಯೆಗಳಲ್ಲಿ ಅಗಾಧ ಬದಲಾವಣೆ ಕಂಡುಬರುತ್ತದೆ. ಒಂದು ವೇಳೆ ಇನ್ನು 10 ವರ್ಷಗಳಲ್ಲಿ ಸಂಪೂರ್ಣ ನೆಮ್ಮದಿಯಾಗಿರಬೇಕೆಂದು ನೀವು ಬಯಸಿದಲ್ಲಿ ಖಂಡಿತವಾಗಿಯೂ ನೀವು ಒತ್ತಡ ರಹಿತ ಕೆಲಸಗಳನ್ನು ಆಯ್ಕೆ ಮಾಡುತ್ತ ಗುರಿಯತ್ತ ಸಾಗುವಿರಿ. ನಿಮ್ಮ ಕನಸುಗಳನ್ನು ಸಾಕಾರಗೊಳಿಸಿ ಯಶಸ್ಸಿನ ಸಂಪೂರ್ಣ ಆನಂದ ಪಡೆಯಲು ಆರೋಗ್ಯ ಭಾಗ್ಯ ಇರಲೇಬೇಕು ಎಂಬುದು ಗೊತ್ತಿರಲಿ.

ನನ್ನೊಂದಿಗೆ ಯಾರ್‍ಯಾರೆಲ್ಲ ಇರಬಹುದು?

ನನ್ನೊಂದಿಗೆ ಯಾರ್‍ಯಾರೆಲ್ಲ ಇರಬಹುದು?

ಇನ್ನು 10 ವರ್ಷಗಳ ನಂತರ ನಿಮ್ಮ ಕುಟುಂಬದವರು ಹಾಗೂ ಆಪ್ತ ಮಿತ್ರರು ಹೇಗಿರಬಹುದು ಎಂದು ಊಹಿಸಿಕೊಳ್ಳಿ. ನೀವು ಮದುವೆಯಾಗಿ ಹೆಂಡತಿ, ಮಕ್ಕಳು ಮರಿಗಳೊಂದಿಗೆ ಆರಾಮವಾಗಿರಲು ಬಯಸುವಿರಾ? ಈಗಿರುವ ಗೆಳೆಯರು ಮಾತ್ರವಲ್ಲದೆ ಹೊಸ ಗೆಳೆಯರನ್ನು ಹೊಂದಲು ಬಯಸುವಿರಾ? ಸಂಬಂಧಗಳ ಕುರಿತಾಗಿ ನೀವು ಹಾಕಿಕೊಂಡಿರುವ ಗುರಿಗಳಿಂದ ಯಾವ ಪ್ರದೇಶದಲ್ಲಿ ವಾಸಿಸಬೇಕು, ಯಾವ ರೀತಿಯ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಸ್ಪಷ್ಟ ತಿಳುವಳಿಕೆ ಮೂಡುತ್ತದೆ. ಸದಾ ಸುತ್ತಾಟದ ಮಾರ್ಕೆಟಿಂಗ್ ರೀತಿಯ ಕೆಲಸ ಮಾಡುವುದು ಅಥವಾ ವಿದೇಶದಲ್ಲಿ ಸೆಟ್ಲ್ ಆಗಲು ಬಯಸಿದಲ್ಲಿ ನೀವು ಉದಾರವಾಗಿ ವಿಚಾರ ಮಾಡಬೇಕಾಗುತ್ತದೆ. ಅಂದರೆ ಅದಕ್ಕಾಗಿ ಕೆಲ ತ್ಯಾಗಕ್ಕೂ ಸಿದ್ಧವಾಗಿರಬೇಕು.

ನನ್ನ ಜ್ಞಾನ ಪರಿಧಿ ಎಷ್ಟು ವಿಸ್ತಾರವಾಗಬಹುದು?

ನನ್ನ ಜ್ಞಾನ ಪರಿಧಿ ಎಷ್ಟು ವಿಸ್ತಾರವಾಗಬಹುದು?

ಈಗ ಏನಾಗಿರುವಿರೋ ಅಲ್ಲಿಂದ ಮುನ್ನಡೆದು ಉನ್ನತವಾದುದನ್ನು ಸಾಧಿಸಲು ಯತ್ನಿಸಿ. 10 ವರ್ಷಗಳ ನಂತರ ನಿಮ್ಮ ಕೌಶಲ ಎಷ್ಟು ಹೆಚ್ಚಾಗಬಹುದು ಎಂದು ಗುರುತಿಸಿ. ಜಗತ್ತಿಗೆ ಅಥವಾ ನಿಮ್ಮ ಕಂಪನಿಗೆ ನೀವೇನು ಕೊಡಬಲ್ಲಿರಿ ಎಂದು ವಿಚಾರ ಮಾಡಿ. 10 ವರ್ಷಗಳ ನಂತರ ಯಾವೆಲ್ಲ ಕೌಶಲಗಳನ್ನು ಕಲಿಯಬೇಕು ಹಾಗೂ ಅವನ್ನು ಕಲಿಯುವುದು ಹೇಗೆ ಎಂಬ ಬಗ್ಗೆ ನೋಟ್ಸ್ ಮಾಡಿ. ಮುಂದುವರಿದ ಶಿಕ್ಷಣ, ಇನ್ನಾವುದೋ ಸರ್ಟಿಫಿಕೇಟ್ ಕೋರ್ಸ್ ಅಥವಾ ಕೆಲಸದ ಬದಲಾವಣೆ ಹೀಗೆ ಏನೇ ಇದ್ದರೂ ಬರೆದಿಟ್ಟುಕೊಳ್ಳಿ. ನೀವು ನಿಮ್ಮ ಕಂಪನಿಯಲ್ಲಿ ಮ್ಯಾನೇಜರ್ ಹುದ್ದೆಗೆ ಅಥವಾ ಮತ್ತೊಂದು ಉನ್ನತ ಹುದ್ದೆಗೆ ಏರಲು ಬಯಸುತ್ತಿದ್ದಲ್ಲಿ ಅದಕ್ಕೆ ಬೇಕಾದ ತಯಾರಿ ಆರಂಭಿಸಿ.

ಸಮಯವನ್ನು ಸದುಪಯೋಗಪಡಿಸಿಕೊಳ್ಳುವುದು ಹೇಗೆ?

ಸಮಯವನ್ನು ಸದುಪಯೋಗಪಡಿಸಿಕೊಳ್ಳುವುದು ಹೇಗೆ?

10 ವರ್ಷಗಳ ನಂತರ ನಿವೃತ್ತ ಜೀವನ ನಡೆಸುವುದು ಅಥವಾ ಕೆಲಸದಲ್ಲಿದ್ದರೂ ಕುಟುಂಬ ಸದಸ್ಯರೊಂದಿಗೆ ಹೆಚ್ಚು ಸಮಯ ಕಳೆಯುವುದು ಅಥವಾ ಸಮಾಜಕ್ಕಾಗಿ ಏನನ್ನಾದರೂ ಮಾಡಲು ಸಮಯ ಮೀಸಲಿಡುವುದು ಹೀಗೆ ನಿಮ್ಮ ಜೀವನದ ಪ್ರಾಮುಖ್ಯತೆಗಳ ಬಗ್ಗೆ ಪಟ್ಟಿ ತಯಾರಿಸಿ. ಅಲ್ಲದೆ ಈಗಿರುವ ಕೆಲಸದ ಅವಧಿಯನ್ನು ಹೆಚ್ಚು ಮಾಡಿಕೊಳ್ಳಬಯಸುತ್ತಿದ್ದರೆ ಅದರ ಬಗ್ಗೆಯೂ ವಿಚಾರ ಮಾಡಿ. ಒಂದು ವೇಳೆ ನೀವು ಕೆಲಸದಲ್ಲಿ ಜವಾಬ್ದಾರಿಯುತ ಹುದ್ದೆಗಳನ್ನು ನಿಭಾಯಿಸಲು ಬಯಸಿದಲ್ಲಿ ಬೇರೆ ಕೆಲಸಗಳಿಗೆ ಸಮಯದ ಕೊರತೆ ಉಂಟಾಗಬಹುದು. ಜನರೊಂದಿಗೆ ನೇರವಾಗಿ ಅಥವಾ ತಂಡದ ಸದಸ್ಯನಾಗಿ ಅಥವಾ ವೈಯಕ್ತಿಕವಾಗಿ ಕೆಲಸ ಮಾಡಲು ಬಯಸುತ್ತಿದ್ದರೆ ಅದಕ್ಕೆ ತಕ್ಕಂತೆ ಪ್ಲಾನ್ ಮಾಡಿಕೊಳ್ಳಿ.

ನನ್ನ ಹತ್ತಿರ ಏನೆಲ್ಲ ಇರಬೇಕೆಂದು ಬಯಸುವೆ?

ನನ್ನ ಹತ್ತಿರ ಏನೆಲ್ಲ ಇರಬೇಕೆಂದು ಬಯಸುವೆ?

ಈಗ ನಾವು ಒಂದು ಪ್ರಮುಖ ಹಂತಕ್ಕೆ ಬಂದು ತಲುಪಿದ್ದೇವೆ. 10 ವರ್ಷಗಳ ನಂತರ ನಿಮ್ಮ ಬಳಿ ಎಷ್ಟು ಹಣ, ಆಸ್ತಿ ಇರಬೇಕೆಂದು ಬಯಸುತ್ತಿರುವಿರಿ? ಇದರ ಬಗ್ಗೆಯೂ ಬರೆದಿಟ್ಟುಕೊಂಡು ನಿಮ್ಮ ಗುರಿ ಸಾಧನೆಯ ಹಾದಿಯಲ್ಲಿ ಇದನ್ನು ಸಾಧಿಸುವುದು ಹೇಗೆ ಎಂದು ಯೋಜನೆ ತಯಾರಿಸಿ. ಒಂದು ವೇಳೆ ನೀವು ಈಗಾಗಲೇ ಹಾಕಿಕೊಂಡಿರುವ ಗುರಿಗಳಿಂದ ಹಣಕಾಸು ಗುರಿಯನ್ನು ಸಾಧಿಸಲು ಸಾಧ್ಯವಾಗದು ಎನಿಸಿದರೆ ದೊಡ್ಡದಾಗಿ ವಿಚಾರ ಮಾಡಿ ಗುರಿಯನ್ನು ಮಾರ್ಪಡಿಸಿ.

ಸಮಾಜದಲ್ಲಿ ನನ್ನ ಸ್ಥಾನಮಾನ ಹೇಗಿರಬೇಕು?

ಸಮಾಜದಲ್ಲಿ ನನ್ನ ಸ್ಥಾನಮಾನ ಹೇಗಿರಬೇಕು?

ಕೊನೆಯದಾಗಿ ನಿಮ್ಮ ಸಾಮಾಜಿಕ ಸ್ಥಾನಮಾನದ ಆಕಾಂಕ್ಷೆಗಳ ಬಗ್ಗೆ ವಿಚಾರ ಮಾಡಿ. 10 ವರ್ಷಗಳ ನಂತರ ಸಮಾಜದಲ್ಲಿ ಹೆಸರು ಮಾಡಬೇಕು, ನಾಲ್ಕು ಜನ ಗುರುತಿಸುವಂತಾಗಬೇಕು ಎಂದು ನೀವು ಬಯಸಬಹುದು. ಯಾವುದಾದರೂ ಆಡಳಿತಾತ್ಮಕ ಹುದ್ದೆ, ರಾಜಕೀಯ ಸ್ಥಾನಮಾನ, ಮಾಧ್ಯಮ ಅಥವಾ ಇನ್ನಾವುದಾದರೂ ಸಾರ್ವಜನಿಕ ಜೀವನದಲ್ಲಿ ಹೆಸರು ಮಾಡಬೇಕೆಂದಿದ್ದರೆ ಅದರ ಬಗ್ಗೆ ಯೋಜನೆ ತಯಾರಿಸಬೇಕಾಗುತ್ತದೆ. ನೀವು ಮಾಡುತ್ತಿರುವ ಯಾವುದೇ ಕೆಲಸವಾದರೂ ಸಾಮಾಜಿಕವಾಗಿ ಅದರಲ್ಲಿ ಸಕಾರಾತ್ಮಕ ಹಾಗೂ ನಕಾರಾತ್ಮಕ ಅಂಶಗಳು ಅಡಗಿರುತ್ತವೆ ಎಂಬುದು ಗಮನದಲ್ಲಿರಲಿ.

ಗುರಿ ಸಾಧನೆಗೆ ಯಾವೆಲ್ಲ ತ್ಯಾಗ ಮಾಡಲು ಸಿದ್ಧ?

ಗುರಿ ಸಾಧನೆಗೆ ಯಾವೆಲ್ಲ ತ್ಯಾಗ ಮಾಡಲು ಸಿದ್ಧ?

ಈಗ ನಿಮ್ಮೆಲ್ಲ ಗುರಿಗಳ ಬಗ್ಗೆ ಪಟ್ಟಿ ತಯಾರಿಸಿದ ಮೇಲೆ ಅದನ್ನು ಕೆಳಗಿನಿಂದ ಮೇಲಕ್ಕೆ ಓದಿ. ಅವುಗಳಲ್ಲಿ ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ ಗುರಿಗಳಾವುವು ಎಂಬುದನ್ನು ವಿಂಗಡಿಸಿ. ನೀವು ಕೋಟ್ಯಧೀಶರಾಗಲು ಬಯಸುವಿರಾದರೆ ನಿಮ್ಮದೇ ಸ್ಟಾರ್ಟಪ್ ಆರಂಭಿಸಲು ತಯಾರಾಗಿರಬೇಕಾಗುತ್ತದೆ. ಇದಕ್ಕೆಲ್ಲ ಜೀವನದಲ್ಲಿ ಯಾವೆಲ್ಲ ತ್ಯಾಗಗಳನ್ನು ಮಾಡಬೇಕಾಗುತ್ತದೆ ಎಂಬ ಬಗ್ಗೆ ಆಲೋಚಿಸಿ ಆ ನಿಟ್ಟಿನಲ್ಲಿ ಮುಂದುವರೆಯಬೇಕಾಗುತ್ತದೆ. ಜೊತೆಗೆ ತ್ಯಾಗಕ್ಕಾಗಿ ಮಾನಸಿಕ ಸಿದ್ಧತೆಯೂ ಅಗತ್ಯ.

ಲವಲವಿಕೆಯ ಗುರಿಗಳು ಬಹುಕಾಲ ಬಾಳುತ್ತವೆ

ಲವಲವಿಕೆಯ ಗುರಿಗಳು ಬಹುಕಾಲ ಬಾಳುತ್ತವೆ

ನಿಮ್ಮ ಗುರಿ ಹಾಗೂ ಅದನ್ನು ಸಾಧಿಸುವ ಬಗ್ಗೆ ಸಂಪೂರ್ಣ ಪಟ್ಟಿ ಈಗ ತಯಾರಾಗಿದ್ದರೆ ಅದನ್ನು ಮನೆಯಲ್ಲಿ ಕಾಣುವ ಹಾಗೆ ಫ್ರಿಜ್ ಮೇಲೆ ಅಥವಾ ಗೋಡೆಗೆ ಅಂಟಿಸಿ. ಪ್ರತಿ ಎರಡು ಅಥವಾ ನಾಲ್ಕು ವಾರಗಳಿಗೊಮ್ಮೆ ಪಟ್ಟಿಯನ್ನು ಪುನರ್ ಪರಿಶೀಲಿಸಿ ನೀವು ಸರಿಯಾದ ದಾರಿಯಲ್ಲಿ ಸಾಗುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳಿ. ಏನಾದರೂ ಮಾರ್ಪಾಟು ಮಾಡಬೇಕಿದಲ್ಲಿ ಅದನ್ನೂ ಮಾಡಿ. ಅನಿರೀಕ್ಷಿತವಾಗಿ ಉತ್ತಮ ಅವಕಾಶಗಳು ಒದಗಿ ಬಂದಲ್ಲಿ ನಿಮ್ಮ ಪಟ್ಟಿಯನ್ನು ಬದಲಾಯಿಸಲು ಯಾವುದೇ ಹಿಂಜರಿಕೆ ಬೇಡ. ಇನ್ನು ಕೆಲ ಬಾರಿ ಜೀವನದಲ್ಲಿ ಅನಿರೀಕ್ಷಿತ ಘಟನೆಗಳು ಸಂಭವಿಸಿದಾಗ ಸಹ ಯೋಜನೆ ಬದಲಾಗುವ ಸಾಧ್ಯತೆಗಳಿರುತ್ತವೆ.

ಜೀವನದ ಹಾದಿಯಲ್ಲಿ ಈ ಅಂಶಗಳತ್ತ ಗಮನವಿರಲಿ

ಜೀವನದ ಹಾದಿಯಲ್ಲಿ ಈ ಅಂಶಗಳತ್ತ ಗಮನವಿರಲಿ

1. ಗುರಿಗಳು ಪ್ರಾಮುಖ್ಯತೆ ಪಡೆಯದಿರಬಹುದು
ನೀವು ಜೀವನದಲ್ಲಿ ಸದಾ ಹೊಸತನ್ನು ಹುಡುಕಾಡುತ್ತಿದ್ದರೆ ಅಥವಾ ಈಗಾಗಲೇ ಮುಖ್ಯವಾದದ್ದನ್ನೇನಾದರೂ ಕಲಿಯುತ್ತಿದ್ದರೆ ತೀರಾ ಕಠಿಣವಾದ ಗುರಿಗಳು ನಿಮಗೆ ಒಗ್ಗಲಾರವು. ಇನ್ನೂ ಕಾಲೇಜು ಶಿಕ್ಷಣ ಹಂತದಲ್ಲಿದ್ದರೆ ಈಗಲೇ ದೀರ್ಘಾವಧಿ ಗುರಿಗಳ ಬಗ್ಗೆ ಆಲೋಚನೆ ಬೇಡ. ನಿಮ್ಮ ಬಗ್ಗೆ ನಿಮಗೇ ವಿಶ್ವಾಸ ಮೂಡುವವರೆಗೆ ತಾಳ್ಮೆಯಿಂದ ಕಾಯುವುದು ಲೇಸು.

2. ಒಂದು ಬಾರಿಗೆ ಒಂದು ದಿನದಂತೆ ಆರಂಭಿಸಿ

2. ಒಂದು ಬಾರಿಗೆ ಒಂದು ದಿನದಂತೆ ಆರಂಭಿಸಿ

ಕೆಲ ಬಾರಿ ಗುರಿಗಳನ್ನು ಅಲ್ಪಾವಧಿಗೆ ಬದಲಾಯಿಸಿಕೊಳ್ಳಬೇಕಾಗುತ್ತದೆ. ಯಾವುದೋ ಅನಾರೋಗ್ಯ ಸಮಸ್ಯೆ ಅಥವಾ ಹಣಕಾಸು ಸಮಸ್ಯೆ ಇದ್ದಲ್ಲಿ ನಿಧಾನವಾಗಿ ಅವನ್ನು ಪರಿಹರಿಸಿಕೊಳ್ಳುವತ್ತ ಗಮನಹರಿಸಿ. ಪ್ರತಿ ಹೆಜ್ಜೆಯೂ ಗೆಲುವಿನತ್ತ ಸಾಗುವ ಹೆಜ್ಜೆಯೇ ಆಗಿರುತ್ತದೆ. ನೀವು ಒಂದು ವೇಳೆ ಯಾವುದಾದರೂ ಸಾಹಸ ಪ್ರವೃತ್ತಿಯಲ್ಲಿ ತೊಡಗಿಸಿಕೊಳ್ಳಬಯಸುವಿರಾದರೆ ವಾರದ ಆಧಾರದಲ್ಲಿ ಗುರಿಗಳನ್ನು ನಿರ್ಧರಿಸಬೇಕಾಗುತ್ತದೆ.

3. ನಿರ್ಣಯ ಕೈಗೊಳ್ಳುವ ಸಾಮರ್ಥ್ಯ

3. ನಿರ್ಣಯ ಕೈಗೊಳ್ಳುವ ಸಾಮರ್ಥ್ಯ

ದೀರ್ಘಾವಧಿಯ ಗುರಿ ಇಲ್ಲದಿದ್ದಲ್ಲಿ ನಿರ್ಣಯ ಕೈಗೊಳ್ಳುವ ಸಾಮರ್ಥ್ಯ ಕುಂಠಿತವಾಗುತ್ತದೆ. ಈಗಿರುವ ಕೆಲಸದಲ್ಲಿಯೇ ಮುಂದುವರಿಯಬೇಕಾ ಅಥವಾ ಹೊಸ ವೃತ್ತಿಗೆ ಬದಲಾಗಬೇಕಾ ಎಂಬ ಬಗ್ಗೆ ನಿರ್ಣಯ ಕೈಗೊಳ್ಳುವುದು ಮುಖ್ಯವಾಗುತ್ತದೆ. ಏನೇ ಆದರೂ ಮುಖ್ಯ ಕೆಲಸಗಳಿಗಾಗಿ ನಿಮ್ಮ ಶಕ್ತಿಯನ್ನು ಕಾಪಾಡಿಕೊಂಡಿರಿ. ಇನ್ನು ದಿನವೂ ಏನು ತಿನ್ನುವುದು, ತೊಡುವುದು ಮುಂತಾದ ಚಿಕ್ಕಪುಟ್ಟ ವಿಷಯಗಳಿಗೆಲ್ಲ ನಿರ್ಧರಿಸುತ್ತ ಸಮಯ ಹಾಳು ಮಾಡಿಕೊಳ್ಳಬೇಡಿ.

4. ಸಾಹಸವೂ ಒಂದು ಗುರಿಯೇ ಆಗಿದೆ

4. ಸಾಹಸವೂ ಒಂದು ಗುರಿಯೇ ಆಗಿದೆ

ಯಾವುದೇ ಗುರಿಯನ್ನು ಹಾಕಿಕೊಂಡಿಲ್ಲ ಎಂದಾದರೆ ನೀವೊಂದು ಗುರಿಯನ್ನು ನಿರ್ಧರಿಸುವ ಕಡೆಗೆ ಸಾಗುತ್ತಿರುವಿರಿ ಎಂಬುದು ಗೊತ್ತಿರಲಿ. ಪ್ರಸ್ತುತ ಆರೋಗ್ಯವಾಗಿರುವುದು, ಸಾಹಸದ ಜೀವನ ಜೀವಿಸುವುದು ಹಾಗೂ ನಾಳೆಗಾಗಿ ಎದುರು ನೋಡುವುದು ಸಹ ಗುರಿಗಳೇ ಆಗಿವೆ. ಬೇರೆಯವರು ನಿಮ್ಮ ಬಗ್ಗೆ ಏನು ಹೇಳುತ್ತಾರೆ, ಏನು ವಿಚಾರ ಮಾಡುತ್ತಾರೆ ಎಂಬ ಬಗ್ಗೆ ತಲೆ ಕೆಡಿಸಿಕೊಳ್ಳುವುದೇ ಬೇಡ. ನಿಮ್ಮ ಜೀವನ ನಿಮಗೆ ಬಿಟ್ಟರೆ ಬೇರೆಯವರಿಗೆ ಅರ್ಥವಾಗಲಾರದು.

5. ಪರ್ಯಾಯ ಯೋಜನೆಯೂ ಜೊತೆಗಿರಲಿ

5. ಪರ್ಯಾಯ ಯೋಜನೆಯೂ ಜೊತೆಗಿರಲಿ

ಒಂದೊಮ್ಮೆ ಯಾವುದೋ ಅನಿರೀಕ್ಷಿತ ಘಟನೆಯಿಂದ ಈಗಿರುವ ಯೋಜನೆಯನ್ನು ಬದಲಾಯಿಸಬೇಕಾದ ಸಂದರ್ಭ ಬರಬಹುದು. ಅದಕ್ಕಾಗಿ ಪರ್ಯಾಯ ಯೋಜನೆಯೊಂದು ಸಿದ್ಧವಾಗಿರುವುದು ಅಗತ್ಯ. ತೀರಾ ಅನಾರೋಗ್ಯ ಅಥವಾ ಹಣಕಾಸು ಸಮಸ್ಯೆ ಉಂಟಾದಾಗ ಸಹಾಯಕ್ಕೆ ಬರುವವರು ಯಾರು ಎಂಬ ಬಗ್ಗೆ ತಿಳಿದುಕೊಳ್ಳಿ. ಕಷ್ಟದಲ್ಲಿ ಜೊತೆಯಾಗುವವರು ಯಾರು ಎಂಬುದನ್ನು ತಿಳಿದುಕೊಂಡಲ್ಲಿ ಪ್ರಸ್ತುತ ನಿಮ್ಮ 10 ವರ್ಷಗಳ ಗುರಿಯ ಸಾಧನೆಗೆ ನಿರಾಳವಾಗಿ ಮುನ್ನಡೆಯಬಹುದು.

Read more about: money savings finance news
English summary

10 year challenge: How to set to Achieve your Career Goals

The 10-year challenge is a Facebook trend where people post a photograph from 2009. For your career, let’s flip this and look at 10 years into the future.
Story first published: Friday, March 8, 2019, 9:50 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X