ಆಯಾ ಆಯಾ ಪ್ರದೇಶ, ಪಟ್ಟಣ, ನಗರಗಳಿಗೆ ಅನುಗುಣವಾಗಿ ಉದ್ಯಮಗಳನ್ನು ನಡೆಸಲು ಸಾಕಷ್ಟು ಅವಕಾಶ ಹಾಗು ಸಂಪನ್ಮೂಲಗಳು ಲಭ್ಯವಿರುತ್ತವೆ. ಪ್ರಸ್ತುತ ಡಿಜಿಟಲ್ ಯುಗದಲ್ಲಿ ಅತ್ಯಂತ ಕ್ರಿಯಾಶೀಲ ಹಾಗೂ ಅತಿ ವೇಗದ ಬೆಳವಣಿಗೆಯ ಆರ್ಥಿಕ ವಾತಾವರಣ ಇರುತ್ತದೆ.
ಆಯಾ ಆಯಾ ಪ್ರದೇಶ, ಪಟ್ಟಣ, ನಗರಗಳಿಗೆ ಅನುಗುಣವಾಗಿ ಉದ್ಯಮಗಳನ್ನು ನಡೆಸಲು ಸಾಕಷ್ಟು ಅವಕಾಶ ಹಾಗು ಸಂಪನ್ಮೂಲಗಳು ಲಭ್ಯವಿರುತ್ತವೆ. ಪ್ರಸ್ತುತ ಡಿಜಿಟಲ್ ಯುಗದಲ್ಲಿ ಅತ್ಯಂತ ಕ್ರಿಯಾಶೀಲ ಹಾಗೂ ಅತಿ ವೇಗದ ಬೆಳವಣಿಗೆಯ ಆರ್ಥಿಕ ವಾತಾವರಣ ಹೊಂದಿರುವ ಹೆಚ್ಚಿನ ನಗರಗ/ಪ್ರದೇಶಗಳನ್ನು ಕಾಣಬಹುದು. ಹೊಸದಾಗಿ ವ್ಯಾಪಾರ, ವ್ಯವಹಾರ ಆರಂಭಿಸುವವರಿಗೆ ಇಂತಹ ಪ್ರದೇಶಗಳು ಸ್ವರ್ಗ ಸಮಾನವಾಗಿರುತ್ತವೆ. ಬಯಸಿದಷ್ಟೂ ವ್ಯಾಪಾರ ವೃದ್ಧಿಯ ಅವಕಾಶ ಹಾಗೂ ಆರ್ಥಿಕ ಭದ್ರತೆಯ ಕಾರಣದಿಂದ ಒಳ್ಳೆಯ ಬಿಸಿನೆಸ್ ಐಡಿಯಾ ಹೊಂದಿದವರು ತಮ್ಮ ತಮ್ಮ ನಗರ ಪ್ರದೇಶಗಳಲ್ಲಿ ಅತ್ಯಂತ ಲಾಭದಾಯಕವಾಗಿ ವ್ಯಾಪಾರ, ವಹಿವಾಟು ಆರಂಭಿಸಬಹುದು.
ನೀವೂ ನಿಮ್ಮ ಭಾಗಗಳಲ್ಲಿ ಸ್ವಂತದ ಬಿಸಿನೆಸ್ ಆರಂಭಿಸಲು ಬಯಸುವಿರಾದರೆ ಅದಕ್ಕೂ ಮುನ್ನ ಕೆಲ ವಿಷಯಗಳನ್ನು ಅರಿತುಕೊಳ್ಳುವುದು ಸೂಕ್ತ. ಯಾವ ರೀತಿಯ ವ್ಯಾಪಾರ ವಹಿವಾಟುಗಳು ಮಾಡಿದರೆ ಬೇಗ ಕ್ಲಿಕ್ ಆಗುತ್ತವೆ ಎಂಬುದನ್ನು ತಿಳಿಯಬೇಕು.
ನಿಮ್ಮ ಏರಿಯಾಗಳಲ್ಲಿ ಆರಂಭಿಸಬಹುದಾದ ಅತ್ಯಂತ ಜನಪ್ರಿಯ ಹಾಗೂ ಸೂಕ್ತ ಬಿಸಿನೆಸ್ ಐಡಿಯಾಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ತಿಳಿಯೋಣ ಬನ್ನಿ..
1. ಟೇಲರಿಂಗ್
ಆಯಾ ಆಯಾ ಪ್ರದೇಶ ಭಾಗಗಳಲ್ಲಿ ಉತ್ತಮವಾಗಿ ಬಟ್ಟೆ ಹೊಲಿಯುವವರಿಗೆ ತುಂಬಾ ಬೇಡಿಕೆ ಇರುತ್ತದೆ. ಟೇಲರಿಂಗ್ ಎಂಬುದು ಬಹುತೇಕ ಸಂದರ್ಭಗಳಲ್ಲಿ ಹೆಣ್ಣು ಮಕ್ಕಳ ಬಟ್ಟೆ ಹೊಲಿಯುವುದೇ ಆಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಪುರುಷರು ಸಹ ಮತ್ತೆ ಬಟ್ಟೆ ಹೊಲಿಸಿಕೊಳ್ಳಲು ಟೇಲರ್ ಬಳಿಗೆ ಹೋಗುತ್ತಿರುವುದು ಸತ್ಯ. ನಿಮಗೆ ಟೇಲರಿಂಗ್ ವೃತ್ತಿಯಲ್ಲಿ ಪರಿಣತಿ ಇದ್ದಲ್ಲಿ ಇನ್ನೊಬ್ಬರನ್ನು ಪಾರ್ಟನರ್ ಮಾಡಿಕೊಂಡು ಒಬ್ಬರು ಲೇಡಿಸ್ ಹಾಗೂ ಇನ್ನೊಬ್ಬರು ಜೇಂಟ್ಸ್ ಟೇಲರಿಂಗ್ ಮಾಡುವಂತೆ ಟೇಲರಿಂಗ್ ಶಾಪ್ ಆರಂಭಿಸಬಹುದು. ಟೇಲರಿಂಗ್ ಎಂಬುದು ಯಾವಾಗಲೂ ಬೇಡಿಕೆಯ ಸೇವೆಯಾಗಿದ್ದು ಉತ್ತಮ ಲಾಭ ಗಳಿಸುವ ಅವಕಾಶಗಳಿವೆ.
2. ಬ್ಯೂಟಿ ಪಾರ್ಲರ್
ಯಾವಾಗಲೂ ಸುಂದರವಾಗಿ ಕಾಣಬೇಕೆಂಬುದು ಹೆಣ್ಣು ಮಕ್ಕಳ ಆಸೆಯಾಗಿರುತ್ತದೆ. ಹೀಗಾಗಿ ಬ್ಯೂಟಿ ಪಾರ್ಲರ್ ವ್ಯವಹಾರ ಒಂದು ರೀತಿ ಎವರಗ್ರೀನ್ ಬಿಸಿನೆಸ್ ಆಗಿದೆ. ಇದಕ್ಕೆ ತುಸು ಹೆಚ್ಚು ಬಂಡವಾಳ ಬೇಕಾಗುತ್ತದೆ. ಆದರೆ ಆರಂಭದಲ್ಲಿ ಮನೆಯಲ್ಲಿಯೇ ಚಿಕ್ಕದಾಗಿ ಪಾರ್ಲರ್ ಆರಂಭಿಸಿ ನಂತರ ದೊಡ್ಡದಾಗಿ ಬೆಳೆಸಬಹುದು. ಅಲ್ಲದೆ ಫೋನ್ ಮೂಲಕ ಆರ್ಡರ್ ಪಡೆದು ಮನೆ ಬಾಗಿಲಿಗೇ ಹೋಗಿ ಪಾರ್ಲರ್ ಸರ್ವಿಸ್ ನೀಡಬಹುದು.
3. ಚಪ್ಪಲಿ ಹಾಗೂ ಹ್ಯಾಂಡಬ್ಯಾಗ್‌ಗಳ ವ್ಯಾಪಾರ
ಯಾವುದೇ ಇ-ಕಾಮರ್ಸ್ ವೆಬ್ಸೈಟ್ ನೋಡಿದರೆ ಅದರಲ್ಲಿ ಶೂ, ಚಪ್ಪಲಿ ಹಾಗೂ ಹ್ಯಾಂಡಬ್ಯಾಗ್‌ಗಳ ಲಕ್ಷಾಂತರ ವಸ್ತುಗಳನ್ನು ಕಾಣಬಹುದು. ಅಂದರೆ ಈ ವ್ಯವಹಾರ ತುಂಬಾ ಲಾಭದಾಯಕ ಹಾಗೂ ನಿರಂತರವಾಗಿ ನಡೆಯುವಂಥದ್ದಾಗಿದೆ. ದಿನಂಪ್ರತಿ ಕೆಲಸಕ್ಕೆ ಹೊರಗೆ ಹೋಗುವವರಿಗೆ ಉತ್ತಮ ಶೂ, ಬ್ಯಾಗ್‌ಗಳು ಅತ್ಯಂತ ಅವಶ್ಯಕ ವಸ್ತುಗಳಾಗಿವೆ. ಇದನ್ನೇ ಅವಕಾಶವಾಗಿ ಬಳಸಿಕೊಂಡು ಉತ್ತಮ ವ್ಯಾಪಾರ ಆರಂಭಿಸಲು ಸಾಧ್ಯವಿದೆ.
4. ಮೊಬೈಲ್ ಸಲೂನ್ ಶಾಪ್
ಈಗೀಗ ಕಟಿಂಗ್ ಮಾಡಿಸಿಕೊಳ್ಳಲು ಸಹ ಕೆಲವರಿಗೆ ಸಮಯದ ಅಭಾವ ಕಾಡುತ್ತಿರುತ್ತದೆ. ಇಂಥ ಸಂದರ್ಭದಲ್ಲಿ ಅವರ ಆಫೀಸು ಅಥವಾ ಮನೆಯ ಮುಂದೆಯೇ ಹೇರ್ ಸಲೂನ್ ಗಾಡಿ ಅಂಗಡಿ ಬಂದಲ್ಲಿ ಹೇಗಿರುತ್ತದೆ ಒಂದು ಕ್ಷಣ ಯೋಚಿಸಿ. ಇದೊಂದು ವಿನೂತನ ಬಿಸಿನೆಸ್ ಐಡಿಯಾ ಆಗಿದ್ದು, ಹೇರ್ ಕಟಿಂಗ್ ಪರಿಣತಿ ಇದ್ದವರು ಇದರ ಬಗ್ಗೆ ಮುಂದುವರಿಯಬಹುದು.
5. ಫೋಟೊಗ್ರಫಿ ಹಾಗೂ ವಿಡಿಯೋಗ್ರಫಿ ಸರ್ವಿಸ್
ಮೊಬೈಲ್ ಕ್ಯಾಮೆರಾಗಳು ಬಂದ ಮೇಲೆ ಫೋಟೊಗ್ರಫಿಯದೇನು ಕೆಲಸ ಎಂದುಕೊಳ್ಳಬೇಡಿ. ವಿಶೇಷ ಸಭೆ ಸಮಾರಂಭಗಳು ಅಥವಾ ಮದುವೆಗಳಲ್ಲಿ ನುರಿತ ಫೋಟೊಗ್ರಾಫರ್‌ಗಳೇ ಬೇಕಾಗುತ್ತಾರೆ. ಉತ್ತಮ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು ಅವುಗಳನ್ನು ಪ್ರಿಂಟ್ ಹಾಕಿ ಅಲ್ಬಂ ತಯಾರಿಸುವುದು ಹಾಗೂ ವಿಡಿಯೋ ಎಡಿಟ್ ಮಾಡಿ ಅದಕ್ಕೆ ಹಾಡು ಹಾಗೂ ವಿಶಿಷ್ಟ ಎಫೆಕ್ಟ್‌ಗಳನ್ನು ಜೋಡಿಸುವುದು ಅತ್ಯಂತ ಬೇಡಿಕೆಯ ವ್ಯವಹಾರವಾಗಿದೆ. ಈ ಬಿಸಿನೆಸ್‌ನಲ್ಲಿ ಸಾಕಷ್ಟು ದುಡ್ಡು ಸಂಪಾದಿಸಲು ಅವಕಾಶಗಳಿವೆ.
6. ಮನೆಯಲ್ಲಿಯೇ ಜಿಮ್ ಆರಂಭಿಸುವುದು
ನಿಮ್ಮ ಮನೆಯಲ್ಲಿ ವಿಶಾಲವಾದ ಹೆಚ್ಚುವರಿ ಕೋಣೆ ಇದ್ದರೆ ಅದರಲ್ಲಿ ಜಿಮ್ ಆರಂಭಿಸಬಹುದು. ಅವಶ್ಯಕ ಜಿಮ್ ಸಲಕರಣೆಗಳನ್ನು ಇಟ್ಟುಕೊಂಡಲ್ಲಿ ಸಾಕಷ್ಟು ಗ್ರಾಹಕರನ್ನು ಆಕರ್ಷಿಸಬಹುದು. ಆದರೆ ಇದಕ್ಕಾಗಿ ನೀವೊಬ್ಬ ಉತ್ತಮ ಜಿಮ್ ಟ್ರೇನರ್ ಆಗಿರುವುದು ಮಾತ್ರ ಅತಿ ಅಗತ್ಯ.
7. ಟ್ಯೂಶನ್ ಮಾಡುವುದು
ಮನೆಪಾಠ ಅಥವಾ ಟ್ಯೂಶನ್‌ಗಳಿಗೆ ಸದಾ ಬೇಡಿಕೆ ಇದೆ. ಶಾಲಾ ಮಕ್ಕಳಿಗೆ ಅಥವಾ ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳಲ್ಲಿ ಟ್ಯೂಶನ್ ಮಾಡಿದರೆ ಒಳ್ಳೆಯ ಸಂಪಾದನೆ ಮಾಡಬಹುದು. ಆದರೆ ಯಾವುದಾದರೂ ಕೆಲವು ವಿಷಯಗಳಲ್ಲಿ ನಿಮಗೆ ಪರಿಣತಿ ಇರುವುದು ಅಗತ್ಯ. ಜೊತೆಗೆ ಉತ್ತಮವಾಗಿ ಕಲಿಸುವ ಜಾಣ್ಮೆಯೂ ಇರಬೇಕಾಗುತ್ತದೆ.
8. ಮೊಬೈಲ್ ಹಾಗೂ ಗ್ಯಾಜೆಟ್‌ಗಳ ರಿಪೇರಿ
ಈಗ ಎಲ್ಲರ ಕೈಗಳಲ್ಲೂ ಮೊಬೈಲ್ ಫೋನ್‌ಗಳಿವೆ. ಇವು ಆಗಾಗ ಕೆಟ್ಟು ಹೋಗಿ ರಿಪೇರಿಗೆ ಬರುತ್ತವೆ. ರಿಪೇರಿಗೆ ಬಂದಾಕ್ಷಣ ಎಲ್ಲರೂ ಹೊಸ ಮೊಬೈಲ್ ಕೊಳ್ಳಲು ಬಯಸಲಾರರು. ಕಡಿಮೆ ಖರ್ಚಿನಲ್ಲಿ ಮತ್ತೆ ತಮ್ಮ ಗ್ಯಾಜೆಟ್ ಕೆಲಸ ಮಾಡಿದರೆ ಸಾಕು ಎಂದುಕೊಳ್ಳುತ್ತಾರೆ. ಹೀಗಾಗಿ ಮೊಬೈಲ್ ಹಾಗೂ ಗ್ಯಾಜೆಟ್‌ಗಳ ರಿಪೇರಿ ಸರ್ವಿಸ್ ಉತ್ತಮ ಬಿಸಿನೆಸ್ ಐಡಿಯಾ ಆಗಿದೆ. ಈಗಾಗಲೇ ಸಾಕಷ್ಟು ಮೊಬೈಲ್ ರಿಪೇರಿ ಅಂಗಡಿಗಳಿವೆ ಎಂಬುದು ನಿಜ. ಆದರೆ ನೀವು ನಿಮ್ಮ ಬಿಸಿನೆಸ್ ಅನ್ನು ಆನ್ಲೈನ್ ಮೂಲಕ ಪ್ರಮೋಟ್ ಮಾಡಿ ಹೆಚ್ಚು ಗ್ರಾಹಕರನ್ನು ಸೆಳೆಯಬಹುದು. ಜೊತೆಗೆ ಯಾವುದಾದರೂ ಕಂಪನಿಯ ಅಧಿಕೃತ ಸೇವಾ ಕೇಂದ್ರದ ಮಾನ್ಯತೆ ಪಡೆದರೆ ಜೋರಾಗಿ ವ್ಯಾಪಾರ ನಡೆಸಬಹುದು.
9. ಗ್ಯಾಜೆಟ್ ಹಾಗೂ ಇತರ ತಾಂತ್ರಿಕ ಸಲಕರಣೆಗಳ ಮಾರಾಟ
ಇದು ತಾಂತ್ರಿಕ ಯುಗವಾಗಿದ್ದು ಎಲ್ಲರಿಗೂ ಗ್ಯಾಜೆಟ್ ಹಾಗೂ ಇನ್ನೂ ಹಲವಾರು ತಾಂತ್ರಿಕ ಡಿವೈಸ್‌ಗಳು ಬೇಕೇ ಬೇಕು. ಮೊಬೈಲ್, ಕಂಪ್ಯೂಟರ್, ಲ್ಯಾಪಟಾಪ್ ಹಾಗೂ ಇನ್ನೂ ಹಲವಾರು ಸಲಕರಣೆಗಳಿಗೆ ಬಹು ಬೇಡಿಕೆ ಇದೆ. ಜೊತೆಗೆ ಇವುಗಳ ಬಿಡಿಭಾಗಗಳಿಗೆ ಸಹ ಉತ್ತಮ ಮಾರ್ಕೆಟ್ ಇದೆ. ಈ ನಿಟ್ಟಿನಲ್ಲಿ ಆಲೋಚಿಸಿ ಬಿಸಿನೆಸ್ ಆರಂಭಿಸಬಹುದು.
10. ಆನ್ಲೈನ್ ರಿಟೇಲಿಂಗ್
ಹೋಲಸೇಲ್ ಮಾರುಕಟ್ಟೆಯಿಂದ ವಸ್ತುಗಳನ್ನು ಕಡಿಮೆ ದರದಲ್ಲಿಕೊಂಡು ಅವನ್ನು ಆನ್ಲೈನ್ ಮೂಲಕ ಮಾರಿ ಸಾಕಷ್ಟು ಲಾಭ ಗಳಿಸಬಹುದಾಗಿದೆ. ನಿಮ್ಮ ವಸ್ತುಗಳ ಬಗ್ಗೆ ಜಾಹಿರಾತು ಪ್ರದರ್ಶಿಸಿ ಹೆಚ್ಚು ಗ್ರಾಹಕರನ್ನು ಸೆಳೆಯಬಹುದು. ಆದರೆ ಇವತ್ತು ಜಗತ್ತಿನಲ್ಲಿ ಯಾವ ವಸ್ತುಗಳಿಗೆ ಹೆಚ್ಚು ಬೇಡಿಕೆ ಇದೆ ಎಂಬದರ ಬಗ್ಗೆ ಒಳ್ಳೆಯ ಜ್ಞಾನ ಇರಬೇಕಾಗುತ್ತದೆ.
11. ವೆಬ್ಸೈಟ್ ಮೂಲಕ ಮಾಹಿತಿ ನೀಡುವುದು
ಆಧುನಿಕ ವಿಚಾರದ ಜನರನ್ನು ಹೊಂದಿರುವ ಬೆಂಗಳೂರಿನಂಥ ಊರಿನಲ್ಲಿ ಯಾವುದೇ ರೀತಿಯ ವಿಶಿಷ್ಟ ಬಿಸಿನೆಸ್ ಮಾಡಿ ಯಶಸ್ಸು ಗಳಿಸಬಹುದು. ಇವತ್ತು ಯಾವುದೇ ಮಾಹಿತಿ ಬೇಕಾದರೂ ಜನ ಮೊದಲು ನೋಡುವುದೇ ಗೂಗಲ್. ಹೀಗಾಗಿ ಸ್ಥಳೀಯ ಮಾಹಿತಿ ನೀಡುವ ಅಥವಾ ಜನರಿಗೆ ಬೇಕಾಗುವ ಅವಶ್ಯಕ ಮಾಹಿತಿ ಸಿಗುವಂಥ ಉತ್ತಮ ವೆಬ್ಸೈಟ್ ಆರಂಭಿಸಿ ಅದರ ಮೂಲಕವೂ ದುಡ್ಡು ಸಂಪಾದಿಸುವ ಅವಕಾಶಗಳಿವೆ.
12. ಕಂಪನಿ ಸ್ಥಾಪನೆ
ನಮ್ಮ ದೇಶದ ಹಲವಾರು ನಗರಗಳಲ್ಲಿ ಅಲ್ಲಿನ ಸಂಪನ್ನೂಲಗಳಿಗೆ ಅನುಗುಣವಾಗಿ ಸಹಜವಾಗಿಯೇ ಕಂಪನಿಗಳನ್ನು ಸ್ಥಾಪಿಸಬಹುದು. ನೀವೂ ಸಹ ಉತ್ತಮ ಪ್ರೊಗ್ರಾಮರ್ ಆಗಿದ್ದಲ್ಲಿ ನಿಮ್ಮೊಂದಿಗೆ ಇನ್ನೂ ಕೆಲ ಪರಿಣಿತರನ್ನು ಸೇರಿಸಿಕೊಂಡು ಸಾಫ್ಟವೇರ್ ಕಂಪನಿ ಆರಂಭಿಸಬಹುದು. ಬೆಂಗಳೂರಿನಲ್ಲಿ ಸಾಫ್ಟವೇರ್ ಅಭಿವೃದ್ಧಿ ಪಡಿಸುವ ಕಂಪನಿಗಳಿಗೆ ಬಹಳ ಬೇಡಿಕೆ ಇರುವುದರಿಂದ ತುಸು ಪರಿಶ್ರಮ ಪಟ್ಟಲ್ಲಿ ಬೇಗನೆ ಉನ್ನತಿ ಸಾಧಿಸಬಹುದು.
13. ಆನ್ಲೈನ್ ಶಾಪ್
ಈಗ ಎಲ್ಲರೂ ಆನ್ಲೈನ್ ಮೂಲಕ ವಸ್ತುಗಳನ್ನು ಆರ್ಡರ್ ಮಾಡಲು ಬಯಸುತ್ತಿದ್ದಾರೆ. ಇನ್ನು ಬೆಂಗಳೂರಿನಂಥ ಆಧುನಿಕ ಹಾಗೂ ತಾಂತ್ರಿಕವಾಗಿ ಮುಂದುವರಿದ ಮಹಾನಗರದಲ್ಲಿ ಜನರಿಗೆ ಎಲ್ಲವೂ ಬೆರಳ ತುದಿಯಲ್ಲೇ ಬೇಕಾಗುತ್ತದೆ. ಬಟ್ಟೆ, ದಿನಸಿ, ಸಲಕರಣೆಗಳು, ಡಿಜಿಟಲ್ ಡಿವೈಸ್‌ಗಳು, ಸುಖಾಸೀನ ವಸ್ತುಗಳು ಹೀಗೆ ಎಲ್ಲ ವಸ್ತುಗಳೂ ಇವತ್ತು ಆನ್ಲೈನ್ ಮೂಲಕ ಮಾರಾಟವಾಗುತ್ತವೆ. ಇದರಲ್ಲಿರುವ ಅವಕಾಶಗಳನ್ನು ಬಳಸಿಕೊಂಡು ನೀವೂ ಬಿಸಿನೆಸ್ ಆರಂಭಿಸಬಹುದು. ಒಂದು ವೇಳೆ ಮಳಿಗೆ ಆರಂಭಿಸಲು ದುಡ್ಡಿನ ಕೊರತೆ ಇದ್ದರೆ ನೇರವಾಗಿ ಗ್ರಾಹಕರ ಮನೆ ಬಾಗಿಲಿಗೆ ವಸ್ತುಗಳನ್ನು ತಲುಪಿಸಿ ಬಿಸಿನೆಸ್ ಮಾಡಬಹುದು.
14. ಉದ್ಯೋಗ ಮಾರ್ಗರ್ಶನ ಕೇಂದ್ರ
ಬೆಂಗಳೂರಿನಲ್ಲಿ ಉದ್ಯೋಗ ಮಾಡುವವರು ಯಾವಾಗಲೂ ಮತ್ತಷ್ಟು ಉತ್ತಮ ಕೆಲಸ ಹುಡುಕಲು ಉತ್ಸುಕರಾಗಿರುತ್ತಾರೆ. ಇಂಥವರಿಗಾಗಿಯೇ ಉದ್ಯೋಗ ಮಾರ್ಗದರ್ಶನ ಕೇಂದ್ರಗಳು ಸಾಕಷ್ಟು ಸಂಖ್ಯೆಯಲ್ಲಿ ಕೆಲಸ ಮಾಡುತ್ತಿವೆ. ಆದರೆ ಈ ಕ್ಷೇತ್ರದಲ್ಲಿ ಇನ್ನೂ ಸಾಕಷ್ಟು ಅವಕಾಶಗಳಿವೆ. ದೊಡ್ಡ ದೊಡ್ಡ ಕಂಪನಿಗಳ ಜೊತೆ ಮಾತನಾಡಿ ಅವರಿಗೆ ಒಳ್ಳೆಯ ಕೆಲಸಗಾರರನ್ನು ನೀಡುವುದು ಹಾಗೂ ಉದ್ಯೋಗದ ಹುಡುಕಾಟದಲ್ಲಿರುವವರಿಗೆ ಕಂಪನಿಗಳ ರೆಫರೆನ್ಸ್ ನೀಡುವ ಮೂಲಕ ಆದಾಯ ಪಡೆಯಲು ಸಾಧ್ಯವಿದೆ.
15. ಇವೆಂಟ್ ಮ್ಯಾನೇಜಮೆಂಟ್ ಕಂಪನಿ
ದೊಡ್ಡ ಮಹಾನಗರಗಳಲ್ಲಿ ಸಭೆ ಸಮಾರಂಭಗಳು ಪ್ರತಿದಿನವೂ ಜರುಗುತ್ತಲೇ ಇರುತ್ತವೆ. ಇವನ್ನೆಲ್ಲ ಅಚ್ಚುಕಟ್ಟಾಗಿ ನಿರ್ವಹಿಸಲು ಇವೆಂಟ್ ಮ್ಯಾನೇಜರ್ಸ್ ಬೇಕಾಗುತ್ತಾರೆ. ಬರ್ಥಡೇ ಪಾರ್ಟಿ, ಫ್ಯಾಶನ್ ಶೋ, ಹೊಸ ಉತ್ಪನ್ನಗಳ ಬಿಡುಗಡೆ, ಸಂಗೀತ ಕಚೇರಿ, ಗ್ಯಾದರಿಂಗ್ ಹೀಗೆ ಯಾವುದೇ ದೊಡ್ಡ ಫಂಕ್ಷನ್ ನಡೆಸಬೇಕಾದರೆ ಇವೆಂಟ್ ಮ್ಯಾನೇಜಮೆಂಟ್ ಕಂಪನಿ ಬೇಕೇ ಬೇಕು. ಈ ಕ್ಷೇತ್ರದಲ್ಲಿ ಬಹಳಷ್ಟು ಅವಕಾಶಗಳಿದ್ದು ನಿಮಗೆ ಇವೆಂಟ್ ಮ್ಯಾನೇಜಮೆಂಟ್ ಬಗ್ಗೆ ಜ್ಞಾನವಿದ್ದರೆ ನಿಮ್ಮದೇ ಕಂಪನಿ ಆರಂಭಿಸಿ ದುಡ್ಡು ಸಂಪಾದನೆಗೆ ಮುಂದಾಗಬಹುದು.
16. ಫ್ಯಾಶನ್ ಬುಟಿಕ್
ಹೊಸ ವಿನ್ಯಾಸದ ಬಟ್ಟೆ ಧರಿಸುವುದು, ಸುಂದರವಾಗಿ ಕಾಣುವುದು ಇವತ್ತಿನ ಟ್ರೆಂಡ್ ಆಗಿದೆ. ನೀವೊಬ್ಬ ಫ್ಯಾಶನ್ ಡಿಸೈನರ್ ಆಗಿದ್ದಲ್ಲಿ ಫ್ಯಾಶನ್ ಬಟ್ಟೆಗಳ ಮಳಿಗೆ ಅಥವಾ ಫ್ಯಾಶನ್ ಬುಟಿಕ್ ಆರಂಭಿಸಬಹುದು. ಇದಕ್ಕೆ ಮಳಿಗೆಯನ್ನೇ ಆರಂಭಿಸಬೇಕೆಂದೇನಿಲ್ಲ. ಆನ್ಲೈನ್ ಮೂಲಕವೇ ನೀವು ಹೊಲಿದ ಹೊಸ ವಿನ್ಯಾಸದ ಬಟ್ಟೆಗಳನ್ನು ಪ್ರದರ್ಶಿಸಿ ಗ್ರಾಹಕರಿಂದ ಆರ್ಡರ್ ಪಡೆಯಬಹುದು. ಜೊತೆಗೆ ಫೇಸ್ಬುಕ್ ಗ್ರೂಪ್‌ಗಳಲ್ಲಿ ಫ್ರೆಂಡ್ಸ್ ಮೂಲಕವೂ ಪ್ರಚಾರ ಮಾಡಿ ಬಿಸಿನೆಸ್ ಬೆಳೆಸಬಹುದು.
17. ಮೊಬೈಲ್ ಆಟೊ ವರ್ಕಶಾಪ್
ಬೆಂಗಳೂರಿನ ರಸ್ತೆಗಳಲ್ಲಿ ನಿತ್ಯ ಕೋಟ್ಯಂತರ ವಾಹನಗಳು ಚಲಿಸುತ್ತವೆ. ಇವುಗಳಲ್ಲಿ ಅನೇಕ ವಾಹನಗಳು ರಸ್ತೆ ಮಧ್ಯದಲ್ಲಿಯೇ ಕೆಟ್ಟು ನಿಲ್ಲುವುದು ಸಾಮಾನ್ಯ. ಅನೇಕ ಸಂದರ್ಭಗಳಲ್ಲಿ ಇವನ್ನು ರಿಪೇರಿ ಮಾಡದೆ ಸ್ಥಳದಿಂದ ಕದಲಿಸುವುದೇ ಕಷ್ಟಕರವಾಗಿರುತ್ತದೆ. ಮೊಬೈಲ್ ಅಟೊ ವರ್ಕಶಾಪ್ ಈ ಸಂದರ್ಭದಲ್ಲಿ ಬಹಳ ಅನುಕೂಲಕರವಾಗಿರುತ್ತದೆ. ಒಂದು ಕಾಲ್ ಮಾಡಿದರೆ ಸ್ಥಳಕ್ಕೇ ಬಂದು ಗಾಡಿಯನ್ನು ರಿಪೇರಿ ಮಾಡಿದರೆ ಗ್ರಾಹಕರು ನಿರಾಳರಾಗುತ್ತಾರೆ. ಈ ಒಂದು ಸೇವೆಗೆ ಹೆಚ್ಚು ದುಡ್ಡು ನೀಡಲು ಸಹ ಹಿಂಜರಿಯರು. ಇಂಥ ಒಂದು ಬಿಸಿನೆಸ್ ಆರಂಭಿಸಿ ಕೈತುಂಬಾ ಸಂಪಾದಿಸಬಹುದು.
18. ಮಾಸಿಕ ಕಾರು ವಾಶಿಂಗ್ ಸರ್ವಿಸ್
ದೇಶದ ಬೇರೆ ಬೇರೆ ನಗರಗಳಲ್ಲಿ ಲಕ್ಷಾಂತರ ಜನ ಕಾರುಗಳ ಮೂಲಕವೇ ಕೆಲಸಕ್ಕೆ ಹೋಗುತ್ತಾರೆ. ಆದರೆ ಕಾರು ಗಲೀಜಾದಾಗ ಅದನ್ನು ತೊಳೆಸಲು ಸಹ ಇವರ ಬಳಿ ಸಮಯವಿರುವುದಿಲ್ಲ. ಇದನ್ನೇ ಒಂದು ಅವಕಾಶವನ್ನಾಗಿ ಬಳಸಿಕೊಳ್ಳಬಹುದು. ತಿಂಗಳಿಗೊಮ್ಮೆ ಅವರ ಕಾರನ್ನು ಆಫೀಸ್ ಬಳಿಯಿಂದ ತೆಗೆದುಕೊಂಡು ಹೋಗಿ ವಾಶ್ ಮಾಡಿ ಮತ್ತೆ ಆಫೀಸ್ ಬಳಿ ಪಾರ್ಕ ಮಾಡಿದರೆ ಸಾಕು. ಈ ಸರ್ವಿಸ್‌ಗೆ ಬೇಡಿಕೆ ಹೆಚ್ಚಾಗುತ್ತಿದ್ದು ಬೇಗನೆ ಆರಂಭಿಸುವುದು ಒಳ್ಳೆಯದು.
19. ಸ್ಟೋರೇಜ್ ಸರ್ವಿಸ್
ನಗರ ಪ್ರದೇಶಗಳಲ್ಲಿ ಚಿಕ್ಕ ಚಿಕ್ಕ ಆಫೀಸುಗಳಲ್ಲಿ ಕೆಲಸ ನಿರ್ವಹಿಸುವ ಹಲವಾರು ಕಂಪನಿಗಳಿವೆ. ಇವರಿಗೆ ತಮ್ಮ ಆಫೀಸು ದಾಖಲೆಗಳು ಹಾಗೂ ಇನ್ನಿತರ ಮುಖ್ಯ ವಸ್ತುಗಳನ್ನು ಇಟ್ಟುಕೊಳ್ಳಲು ಜಾಗದ ಕೊರತೆ ಇರುತ್ತದೆ. ಅವಶ್ಯಕವಾದ ಆದರೆ ಪ್ರತಿದಿನ ಬೇಕಾಗದ ವಸ್ತುಗಳನ್ನು ಬೇರೆಲ್ಲಾದರೂ ಇವರು ಇಡಬೇಕಾಗುತ್ತದೆ. ಇಂಥವರಿಗೆ ಕಡಿಮೆ ಬಾಡಿಗೆ ದರದಲ್ಲಿ ಸ್ಥಳಗಳು ಸಿಗುತ್ತವೆ.
20. ಇನ್ಸೂರೆನ್ಸ್ ಬ್ರೋಕರ್
ನಮ್ಮ ದೇಶದಲ್ಲಿ ವಿಮಾ ವಲಯ ಅಗಾಧವಾಗಿ ತನ್ನ ವ್ಯಾಪಕ ಜಾಲವನ್ನು ವಿಸ್ತರಿಸಿಕೊಳ್ಳುತ್ತಿದೆ. ಪ್ರತಿಯೊಂದು ಕುಟುಂಬಗಳು ವಿಮೆಗಳನ್ನು ಮಾಡಿಸಲು ಬಯಸುತ್ತಾರೆ. ಬೇರೆ ಬೇರೆ ವಿಧದ ವಿಮೆಗಳನ್ನು ಮಾಡಲು ಸಾಕಷ್ಟು ಅವಕಾಶಗಳಿದ್ದು, ನೀವು ವಿಮಾ ಏಜೆಂಟ್ ಆಗಿ ನಿಮ್ಮ ಏರಿಯಾದಲ್ಲಿ ಕಾರ್ಯನಿರ್ವಹಿಸಬಹುದು. ಇದಕ್ಕೆ ಎಲ್ಐಸಿ ಅತ್ಯುತ್ತಮ ಅವಕಾಶ ಒದಗಿಸುತ್ತದೆ.
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru Gold Rate: ಬೆಂಗಳೂರಿನಲ್ಲಿ ಗಗನಕ್ಕೇರಿದ ಚಿನ್ನದ ಬೆಲೆ! ದಿಢೀರ್ 31,600 ರೂ. ಏರಿಕೆ



Click it and Unblock the Notifications