For Quick Alerts
ALLOW NOTIFICATIONS  
For Daily Alerts

10 ಸಾವಿರಕ್ಕೆ ನಿಮ್ಮ ಕನಸಿನ ಮನೆ ಬುಕಿಂಗ್ ಮಾಡಿ, ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭ..

ಡಿಡಿಎ ವಸತಿ ಯೋಜನೆಯಡಿ ರಾಜಧಾನಿ ದೆಹಲಿ ನಿವಾಸಿಗಳು ತಮ್ಮ ಕನಸನ್ನು ಈಗ ಪೂರೈಸಿಕೊಳ್ಳಬಹುದು. ಡಿಡಿಎ ವಸತಿ ಯೋಜನೆಯಡಿ ಮನೆ ಖರೀದಿ ಮಾಡಲು ಮಾರ್ಚ್ 25 ರಿಂದ ಮೇ 10 ರ ವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ.

|

ಸ್ವಂತದ ಸುಂದರವಾದ ಮನೆ ಹೊಂದುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಗ್ರಾಮೀಣ ಭಾಗಗಳಲ್ಲಿ ಇದು ಸಾದ್ಯವಾದರೂ ನಗರ/ಮೆಟ್ರೊ ಪ್ರದೇಶಗಳಲ್ಲಿ ಸುಲಭದ ಕೆಲಸವಲ್ಲ. ಅದರಲ್ಲೂ ಮೆಟ್ರೋ ನಗರದಲ್ಲಿ ಸ್ವಂತ ಮನೆ ಹೊಂದುವ ಕನಸು ಯಾರಿಗೆ ತಾನೇ ಇರಲ್ಲ ಹೇಳಿ? ಆದರೆ ಹಣದ ಸಮಸ್ಯೆಯಿಂದಾಗಿ ತುಂಬಾ ಜನರಿಗೆ ಕನಸಿನ ಮನೆ ಖರೀದಿ ಸಾಧ್ಯವೇ ಆಗುವುದಿಲ್ಲ.

 

ಮೇ 10ರ ವರೆಗೆ ಅರ್ಜಿ ಸಲ್ಲಿಕೆ

ಮೇ 10ರ ವರೆಗೆ ಅರ್ಜಿ ಸಲ್ಲಿಕೆ

ಡಿಡಿಎ ವಸತಿ ಯೋಜನೆಯಡಿ ರಾಜಧಾನಿ ದೆಹಲಿ ನಿವಾಸಿಗಳು ತಮ್ಮ ಕನಸನ್ನು ಈಗ ಪೂರೈಸಿಕೊಳ್ಳಬಹುದು. ಡಿಡಿಎ ವಸತಿ ಯೋಜನೆಯಡಿ ಮನೆ ಖರೀದಿ ಮಾಡಲು ಮಾರ್ಚ್ 25 ರಿಂದ ಮೇ 10 ರ ವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ.

ಒಟ್ಟು 18000 ಫ್ಲಾಟ್

ಒಟ್ಟು 18000 ಫ್ಲಾಟ್

ನರೇಲಾ ಮತ್ತು ವಸಂತ್ ಕುಂಜ್ ನಲ್ಲಿ ಫ್ಲಾಟ್ ಲಭ್ಯವಿದ್ದು, ಒಟ್ಟು 18000 ಫ್ಲಾಟ್ ಗಳು ಮಾರಾಟಕ್ಕಿವೆ. ಈ ಯೋಜನೆಯಡಿ ವಸಂತ್ ಕುಂಜ್ ನ ಎ -ಬ್ಲಾಕ್ ನಲ್ಲಿ ಅತಿ ಹೆಚ್ಚು ಮನೆಗಳಿವೆ. ಈ ಫ್ಲಾಟ್ ಗಾಗಿ ನೀವು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಬುಕಿಂಗ್ ಮಾಡೋದು ಹೇಗೆ?
 

ಬುಕಿಂಗ್ ಮಾಡೋದು ಹೇಗೆ?

ಡಿಡಿಎ ವಸತಿ ಯೋಜನೆಯ ಮಾಹಿತಿ ಪ್ರಕಾರ, ಈ ನಿವೇಶನಗಳನ್ನು ಯಾವುದೇ ಆದಾಯ ವರ್ಗದ ವ್ಯಕ್ತಿಗಳು ಬುಕ್ ಮಾಡಬಹುದು. ಮೊದಲು ಬನ್ನಿ, ಮೊದಲು ಪಡೆಯಿರಿ(पहले आओ-पहले पाओ ) ಘೋಷಣೆಯೊಂದಿಗೆ ಫ್ಲಾಟ್ ಬುಕ್ ಮಾಡಬಹುದು. ಆಸಕ್ತರು www.dda.org.in ಆನ್ಲೈನ್ ನಲ್ಲಿ ಫ್ಲಾಟ್ ಬುಕ್ ಮಾಡಬಹುದು.
ಜನತಾ ಫ್ಲಾಟ್ ಅನ್ನು 10 ಸಾವಿರಕ್ಕೆ ಹಾಗೂ 1BHK ಮನೆಯನ್ನು 15 ಸಾವಿರಕ್ಕೆ ಬುಕ್ಕಿಂಗ್ ಮಾಡಬಹುದು. ಉಳಿದ ಹಣವನ್ನು ಮೂರು ತಿಂಗಳ ನಂತರ ಪಾವತಿ ಮಾಡಬೇಕಾಗುತ್ತದೆ.

ಬುಕಿಂಗ್ ಮಾಡುವ ವಿಧಾನ

ಬುಕಿಂಗ್ ಮಾಡುವ ವಿಧಾನ

ಡಿಡಿಎ ನೀಡಿದ ಮಾಹಿತಿಯ ಪ್ರಕಾರ, ಈ ಯೋಜನೆಯಲ್ಲಿ ಫ್ಲಾಟ್ ತೆಗೆದುಕೊಳ್ಳುಲು ಬಯಸುವವರು www.dda.org.in ಗೆ ಲಾಗ್ ಇನ್ ಆಗಬೇಕು. ಇಲ್ಲಿ ಎಡಭಾಗದಲ್ಲಿ ಮೇಲೆ ಇರುವ ಹಾಟ್ ಲಿಂಕ್ಸ್ ಪುಟ ಕಾಣುತ್ತದೆ. ಇದರ ಮೇಲೆ ಕ್ಲಿಕ್ ಮಾಡುವುದರಿಂದ ಹೊಸ ಪುಟ ತೆರೆಯುತ್ತದೆ. ಈ ಪುಟದಲ್ಲಿರುವ DDA Online Housing Scheme 2019 ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಇಲ್ಲಿ ಕ್ಲಿಕ್ ಮಾಡಿದ ನಂತರ ಹೊಸ ಪುಟ ತೆರೆಯುತ್ತದೆ. ನಿಮ್ಮ ಇಚ್ಛೆಗೆ ಅನುಗುಣವಾಗಿ ನರೇಲಾ, ರಾಮಗಢ ಮತ್ತು ಸಿರಸಪುರದಲ್ಲಿ ಲಭ್ಯವಿರುವ ಫ್ಲಾಟ್ ಬಗ್ಗೆ ಮಾಹಿತಿ ಪಡೆಯಬಹುದು. ಜೊತೆಗೆ ಫ್ಲಾಟ್ ಬುಕಿಂಗ್ ಮಾಡಬಹುದು. ಇಲ್ಲಿ ಕೇಳಲಾಗುವ ಸಂಪೂರ್ಣ ಮಾಹಿತಿಯನ್ನು ತುಂಬಿರಿ.

ಇಲ್ಲೂ ಅರ್ಜಿ ಸಲ್ಲಿಸಬಹುದು

ಇಲ್ಲೂ ಅರ್ಜಿ ಸಲ್ಲಿಸಬಹುದು

ವಸತಿ ಯೋಜನೆ ಫಾರ್ಮ್ ಗಳನ್ನು ಆನ್ಲೈನ್ ನಲ್ಲಿ ಮಾತ್ರ ಭರ್ತಿ ಮಾಡಬಹುದು. ಇದಕ್ಕೆ ಹೆಚ್ಚುವರಿಯಾಗಿ, ಡಿಡಿಎದ ವೆಬ್ಸೈಟ್ ಹೊರತುಪಡಿಸಿ, 13 ಬ್ಯಾಂಕುಗನ್ನು ಟೈಅಪ್ ಮಾಡಲಾಗಿದೆ.
ಈ ಬ್ಯಾಂಕುಗಳಲ್ಲಿ ಯೋಜನೆಯ ಬ್ರೌಸರ್, ಇನ್ಸ್ಟ್ರಕ್ಷನ್, ಇತರೆ ಎಲ್ಲಾ ರೀತಿಯ ಮಾಹಿತಿ ಲಭ್ಯವಿರುತ್ತವೆ. ಇವುಗಳಲ್ಲಿ ಎಚ್ಡಿಎಫ್ಸಿ, ಐಸಿಐಸಿಐ, ಐಡಿಬಿಐ, ಆಕ್ಸಿಸ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಸಿಂಡಿಕೇಟ್ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್, IndusInd ಬ್ಯಾಂಕ್, ಯೆಸ್ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಐಡಿಎಫ್ಸಿ ಬ್ಯಾಂಕ್ ಒಳಗೊಂಡಿವೆ.

Read more about: pmay home loan money
English summary

DDA housing scheme 2019: buy your dream home in 10-thousand rupees, Apply from today

Under the DDA housing scheme 2019 people can buy your dream home in 10-thousand rupees.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X