ಹೂಡಿಕೆ ಮಾಡುವ ಮುನ್ನ ಈ ಇಂಟಲಿಜೆಂಟ್ ಟಿಪ್ಸ್ ಪಾಲಿಸಿ

ಹೂಡಿಕೆ ಮಾಡುವ ಹಣದಿಂದ ಹೆಚ್ಚು ಅಥವಾ ಡಬಲ್ ಆದಾಯ ದೊರಕಬೇಕೆಂಬ ಉದ್ದೇಶದಿಂದ ಬಹುತೇಕ ಜನರು ಹೂಡಿಕೆ ಮಾಡುತ್ತಾರೆ. ಆದಾಗ್ಯೂ, ಹೂಡಿಕೆಯ ಆದಾಯದ ಬಗ್ಗೆ ಅವಾಸ್ತವಿಕ ನಿರೀಕ್ಷೆಗಳನ್ನಿಟ್ಟುಕೊಂಡಾಗ ನಿರಾಸೆ ಅನುಭವಿಸಬೇಕಾಗುತ್ತದೆ.

ಹೂಡಿಕೆ ಮಾಡುವ ಹಣದಿಂದ ಹೆಚ್ಚು ಅಥವಾ ಡಬಲ್ ಆದಾಯ ದೊರಕಬೇಕೆಂಬ ಉದ್ದೇಶದಿಂದ ಬಹುತೇಕ ಜನರು ಹೂಡಿಕೆ ಮಾಡುತ್ತಾರೆ. ಆದಾಗ್ಯೂ, ಹೂಡಿಕೆಯ ಆದಾಯದ ಬಗ್ಗೆ ಅವಾಸ್ತವಿಕ ನಿರೀಕ್ಷೆಗಳನ್ನಿಟ್ಟುಕೊಂಡಾಗ ನಿರಾಸೆ ಅನುಭವಿಸಬೇಕಾಗುತ್ತದೆ. ಅದರಲ್ಲೂ ಹೂಡಿಕೆಯ ಮೇಲಿನ ಆದಾಯ ಮಾರುಕಟ್ಟೆಗೆ ಲಿಂಕ್ ಆಗಿದ್ದರೆ ಇಂಥ ನಿರಾಸೆಯ ಸಾಧ್ಯತೆಗಳು ಹೆಚ್ಚು.
ನೀವು ಹೆಚ್ಚಿನ ಆದಾಯ ಪಡೆಯಬೇಕಾದರೆ ಹೂಡಿಕೆ ಸಂದರ್ಭದಲ್ಲಿ ಯಾವ ಯಾವ ಅಂಶಗಳನ್ನು ಗಮನದಲ್ಲಿಟ್ಟುಕೊಂಡಿರಬೇಕು ಎಂಬುದನ್ನು ತಿಳಿಯೋಣ ಬನ್ನಿ..

ಗುರಿ ನಿಖರವಾಗಿರಲಿ

ಗುರಿ ನಿಖರವಾಗಿರಲಿ

ಹೂಡಿಕೆದಾರರು ಯಾವಾಗಲೂ ನಿರ್ದಿಷ್ಟ ಆದಾಯದ ಗುರಿಯನ್ನಿಟ್ಟುಕೊಂಡೇ ಹೂಡಿಕೆ ಮಾಡಬೇಕು. 'ಏಕೆ' (ಗುರಿಗಳು), 'ಹೇಗೆ' (ಪ್ರಕ್ರಿಯೆ) ಮತ್ತು 'ಏನು' (ಹೂಡಿಕೆ ವಿಧಾನ) ಎಂಬ ವಿಷಯಗಳ ಆಧಾರದಲ್ಲಿ ಹೂಡಿಕೆ ಮಾಡುವುದು ಸೂಕ್ತವಾಗಿದೆ. ಈ ವಿಧಾನವನ್ನು ಅಳವಡಿಸಿಕೊಳ್ಳುವ ಮುಂಚೆ ನಿಮ್ಮ ಗುರಿಯ ಬಗ್ಗೆ ನಿರ್ಧರಿಸಿ ಹಾಗೂ ನೀವು ತಡೆಯಬಹುದಾದ ರಿಸ್ಕ್‌ಗಳನ್ನು ಲೆಕ್ಕ ಹಾಕಿ. ನಂತರವಷ್ಟೆ ಸೂಕ್ತವಾದ ಹೂಡಿಕೆಯ ಉತ್ಪನ್ನ ಆಯ್ದುಕೊಳ್ಳಿ.

ಗಂಡಾಂತರಗಳನ್ನು ಅಧ್ಯಯನ ಮಾಡಿ

ಗಂಡಾಂತರಗಳನ್ನು ಅಧ್ಯಯನ ಮಾಡಿ

ಮುಂದಾಲೋಚನೆ ಇಲ್ಲದೆ ಯಾವುದೋ ಒಂದು ಉತ್ಪನ್ನದಲ್ಲಿ ಹೂಡಿಕೆ ಮಾಡುವುದು ಬಹುತೇಕ ಜನರು ಮಾಡುವ ತಪ್ಪಾಗಿದೆ. ಹೂಡಿಕೆಯ ಬಗ್ಗೆ ಯೋಜನೆ ತಯಾರಿಸುವಾಗ ಮೊದಲು ಅದರಲ್ಲಿನ ರಿಸ್ಕ್ ಅಂಶಗಳ ಬಗ್ಗೆ ಪರಿಶೀಲನೆ ಮಾಡಬೇಕಾಗುತ್ತದೆ. ರಿಸ್ಕ್‌ಗಳನ್ನು ಗಣನೆಗೆ ತೆಗೆದುಕೊಂಡು ಆದಾಯದ ಬಗ್ಗೆ ಸ್ಪಷ್ಟ ಗುರಿಯನ್ನು ನಿರ್ಧರಿಸಿದಲ್ಲಿ ಅಂದುಕೊಂಡ ಹಾಗೆ ಪ್ರತಿಫಲ ಪಡೆಯಲು ಸಾಧ್ಯವಿದೆ.

ದೂರದೃಷ್ಟಿ ಇರಲಿ

ದೂರದೃಷ್ಟಿ ಇರಲಿ

ಹೂಡಿಕೆಯ ಅವಧಿಯನ್ನು ಸಂಪೂರ್ಣ ತಾರ್ಕಿಕವಾಗಿ ನಿರ್ಧರಿಸುವುದು ಒಂದು ರೀತಿಯ ಅಸಾಧ್ಯ ಕ್ರಮವಾಗಿದೆ. ಏಕೆಂದರೆ ಹೂಡಿಕೆ ಮಾಡುವ ಹಾಗೂ ಹಿಂತೆಗೆಯುವ ಒಳ್ಳೆಯ ಸಮಯ ಯಾವುವು ಎಂಬುದು ನಂತರವಷ್ಟೇ ತಿಳಿದು ಬರುವಂಥ ವಿಷಯ. ಮಾರುಕಟ್ಟೆಯ ಏರಿಳಿತಗಳನ್ನು ಅತ್ಯಂತ ನಿಖರವಾಗಿ ಅಂದಾಜಿಸುವುದು ಯಾರಿಂದಲೂ ಸಾಧ್ಯವಿಲ್ಲ. ಹೀಗಾಗಿ ಆದಷ್ಟೂ ದೀರ್ಘಾವಧಿಯವರೆಗೆ ಹೂಡಿಕೆ ಮಾಡಿ ಆದಾಯವು ಸಂಚಯಿತವಾಗುವಂತೆ ಕಾಲಾವಕಾಶ ನೀಡಬೇಕು.

ಯಾವುದರ ಬಗ್ಗೆ ಚಿಂತಿಸಬಾರದು?

ಯಾವುದರ ಬಗ್ಗೆ ಚಿಂತಿಸಬಾರದು?

ಯಾವಾಗ, ಎಲ್ಲಿ ಮತ್ತು ಹೇಗೆ ಹೂಡಿಕೆ ಮಾಡುವುದು ಎಂಬುದನ್ನು ನಿರ್ಧರಿಸುವುದು ಬಹುತೇಕ ಜನರಿಗೆ ಕಷ್ಟದ ಕೆಲಸವಾಗಿದೆ. ಆದಾಗ್ಯೂ ಹೂಡಿಕೆ ವಿಚಾರದಲ್ಲಿ ಉದ್ಭವಿಸುವ ಕೆಲ ಗೌಣ ವಿಷಯಗಳತ್ತ ಗಮನ ಹರಿಸದಿರುವುದೇ ಸೂಕ್ತ. ಹೂಡಿಕೆಗೆ ಸಂಬಂಧಿಸಿದಂತೆ ಪ್ರಮುಖ ವಿಚಾರಗಳ ಬಗ್ಗೆ ಮಾತ್ರ ಚಿಂತಿಸಬೇಕು. ಇಲ್ಲವಾದರೆ ಚಿಕ್ಕ ಪುಟ್ಟ ವಿಷಯಗಳಿಂದ ಹೂಡಿಕೆಯ ಪ್ರಕ್ರಿಯೆಯೇ ಹಾಳಾಗುವ ಸಾಧ್ಯತೆ ಇರುತ್ತದೆ.

ಸಲಹೆ ಪಡೆದುಕೊಳ್ಳಿ

ಸಲಹೆ ಪಡೆದುಕೊಳ್ಳಿ

ಹೂಡಿಕೆ ಮಾಡುವಾಗ ಪ್ರಸ್ತುತ ಯಾವ ಷೇರು 'ಅತ್ಯುತ್ತಮ' ಎಂದು ನಿರ್ಧರಿಸುವುದು ತುಸು ಕಷ್ಟದ ಕೆಲಸವೇ ಆಗಿದೆ. ಆಯಾ ಸ್ಟಾಕ್ ಅಥವಾ ಶೇರಿನ ಬಗ್ಗೆ ಆಳವಾದ ಜ್ಞಾನ ಬೇಕಾಗುತ್ತದೆ. ಇದು ಬಹುತೇಕರಲ್ಲಿ ಇರುವುದಿಲ್ಲ. ಜೊತೆಗೆ ನಮ್ಮ ಅವಶ್ಯಕತೆಗಳಿಗನುಗುಣವಾಗಿ ಶೇರನ್ನು ಆಯ್ಕೆ ಮಾಡುವುದು ಇನ್ನೂ ಕಷ್ಟಕರ. ಹೀಗಾಗಿ ನಂಬಿಕಸ್ಥ ಹೂಡಿಕೆ ತಜ್ಞರ ಸಲಹೆ ಪಡೆಯುವುದು ಉತ್ತಮವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+