For Quick Alerts
ALLOW NOTIFICATIONS  
For Daily Alerts

ಪೋಸ್ಟ್ ಆಫಿಸ್ ಮಾಸಿಕ ಉಳಿತಾಯ ಯೋಜನೆ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ..

ಪೋಸ್ಟ್ ಆಫೀಸ್ ಹಲವಾರು ಉಳಿತಾಯ ಯೋಜನೆಗಳನ್ನು ವಿವಿಧ ಬಡ್ಡಿದರದೊಂದಿಗೆ ಒದಗಿಸುತ್ತದೆ. ಸಣ್ಣ ಉಳಿತಾಯಗಳ ಮೇಲಿನ ಬಡ್ಡಿದರಗಳನ್ನು ತ್ರೈಮಾಸಿಕಕ್ಕೆ ಅನುಗುಣವಾಗಿ ಪರಿಷ್ಕರಿಸಲಾಗುತ್ತದೆ.

|

ದೇಶದಾದ್ಯಂತ ಸುಮಾರು 1.5 ಲಕ್ಷ ಅಂಚೆ ಕಚೇರಿಗಳನ್ನು ಹೊಂದಿರುವ ಭಾರತೀಯ ಅಂಚೆ ಇಲಾಖೆ ತನ್ನ ಗ್ರಾಹಕರಿಗಾಗಿ ಹಲವಾರು ಯೋಜನೆಗಳನ್ನು ಪರಿಚಯಿಸಿದೆ. ಪೋಸ್ಟ್ ಆಫೀಸ್ ಹಲವಾರು ಉಳಿತಾಯ ಯೋಜನೆಗಳನ್ನು ವಿವಿಧ ಬಡ್ಡಿದರದೊಂದಿಗೆ ಒದಗಿಸುತ್ತದೆ. ಸಣ್ಣ ಉಳಿತಾಯಗಳ ಮೇಲಿನ ಬಡ್ಡಿದರಗಳನ್ನು ತ್ರೈಮಾಸಿಕಕ್ಕೆ ಅನುಗುಣವಾಗಿ ಪರಿಷ್ಕರಿಸಲಾಗುತ್ತದೆ. ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (POMIS) ಬಗ್ಗೆ ನಿಮಗೆಷ್ಟು ಗೊತ್ತು?
ಅಂಚೆ ಇಲಾಖೆ ಮಾಸಿಕ ಆದಾಯ ಉಳಿತಾಯ ಸ್ಕೀಮ್ ಒಂದನ್ನು ಪರಿಚಯಿಸಿದ್ದು ಅದರ ವಿವರ ಇಲ್ಲಿದೆ.

 
ಪೋಸ್ಟ್ ಆಫಿಸ್ ಮಾಸಿಕ ಉಳಿತಾಯ ಯೋಜನೆ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ..

ಖಾತೆ ತೆರೆಯುವಿಕೆ: ಚೆಕ್ ಅಥವಾ ನಗದು ಬಳಸಿ ಪೋಸ್ಟ್ ಆಫೀಸ್ ತಿಂಗಳ ಉಳಿತಾಯ ಯೋಜನೆ ಖಾತೆ ತೆರೆಯಬಹುದು.
ಬಡ್ಡಿ ದರ: ವಾರ್ಷಿಕವಾಗಿ ಶೇ. 7.7 ಬಡ್ಡಿ ದರ ನಿಗದಿ ಮಾಡಲಾಗಿದ್ದು, ಇದನ್ನು ಮಾಸಿಕವಾಗಿ ಪಾವತಿ ಮಾಡಲಾಗುತ್ತದೆ.
ಕನಿಷ್ಟ ಮೊತ್ತ: ಖಾತೆ ತೆರೆಯಲು ಕನಿಷ್ಠ ರೂ. 1500 ಹೂಡಿಕೆ ಮಾಡಬೇಕು
ಗರಿಷ್ಠ ಮೊತ್ತ: ಅತಿಹೆಚ್ಚು ಅಂದರೆ ಸಿಂಗಲ್ ಖಾತೆಯಲ್ಲಿ ರೂ. 4.5 ಲಕ್ಷ, ಜಂಟಿ ಖಾತೆಯಲ್ಲಿ ರೂ. 9 ಲಕ್ಷ ಹೂಡಿಕೆ ಮಾಡಬಹುದು.
ಮೆಚುರಿಟಿ ಅವಧಿ: ಪೋಸ್ಟ್ ಬ್ಯಾಂಕ್ ಉಳಿತಾಯ ಯೋಜನೆ ಮೆಚುರಿಟಿ ಅವಧಿ 5 ವರ್ಷಗಳಾಗಿರುತ್ತದೆ.
ಅರ್ಹತೆ: ಮೈನರ್ ಹೆಸರಿನಲ್ಲಿಯೂ ಖಾತೆ ತೆರೆಯಬಹುದು. ಹತ್ತು ವರ್ಷ ಮೇಲ್ಪಟ್ಟವರು ಖಾತೆಯನ್ನು ಸ್ವತಂತ್ರವಾಗಿ ನಿರ್ವಹಿಸಬಹುದು.
ಖಾತೆ ನಿರ್ವಹಣೆ: ಎರಡು ಅಥವಾ ಮೂರು ಜನ ಸೇರಿ ಜಂಟಿ ಖಾತೆ ತೆರೆಯಬಹುದು. ಸಿಂಗಲ್ ಅಕೌಂಟ್ ಗಳನ್ನು ಜಾಯಿಂಟ್ ಖಾತೆಯಾಗಿ ಬದಲಾಯಿಸಲು ಅವಕಾಶ ಇದೆ.
ಖಾತೆ ವರ್ಗಾವಣೆ: ಒಂದು ಅಂಚೆ ಕಚೇರಿಯಿಂದ ಇನ್ನೊಂದು ಅಂಚೆ ಕಚೇರಿಗೆ ಖಾತೆ ವರ್ಗಾವಣೆ ಮಾಡಿಕೊಳ್ಳಬಹುದು. ಅಲ್ಲದೇ ಎಷ್ಟು ಖಾತೆ ಬೇಕಾದರೂ ತೆರೆಯಬಹುದು. ಆದರೆ ಎಲ್ಲ ಖಾತೆಗಳ ಒಟ್ಟು ಮೌಲ್ಯ ಗರಿಷ್ಠ ಮಿತಿ ಮೀರುವಂತೆ ಇಲ್ಲ.
ಅಕಾಲಿಕ ಹಿಂತೆಗೆದುಕೊಳ್ಳುವಿಕೆ: ಖಾತೆ ತೆರೆದು ಒಂದು ವರ್ಷದ ನಂತರ ಹಣ ವಿತ್ ಡ್ರಾ ಮಾಡಿಕೊಳ್ಳಬಹುದು. ಆದರೆ ಮೂರು ವರ್ಷಕ್ಕೆ ಮುನ್ನ ವಿತ್ ಡ್ರಾ ಮಾಡಿದರೆ ಶೇ. 2, ಮೂರು ವರ್ಷದ ವಿತ್ ಡ್ರಾ ಮಾಡಿದರೆ ಒಟ್ಟು ಮೌಲ್ಯದಲ್ಲಿ ಶೇ.1 ರಷ್ಟನ್ನು ಡಿಸ್ಕೌಂಟ್ ರೂಪದಲ್ಲಿ ಬಿಟ್ಟು ಕೊಡಬೇಕಾಗುತ್ತದೆ.
ನಾಮಿನಿ: ಪೋಸ್ಟ್ ಆಫೀಸ್ ಮಾಸಿಕ ಯೋಜನೆ ಖಾತೆ ತೆರೆಯುವ ಸಂದರ್ಭದಲ್ಲಿ ನಾಮಿನಿ ಹೆಸರು ದಾಖಲಿಸಲು ಅವಕಾಶವಿರುತ್ತದೆ. ಪೋಸ್ಟ್ ಆಫೀಸ್ ಬೆಸ್ಟ್ ಉಳಿತಾಯ ಯೋಜನೆಗಳು

Read more about: post office schemes money savings
English summary

Post Office Monthly Income Scheme Account: Know these things

The Department of Posts offers several savings schemes with different interest rates.
Story first published: Tuesday, March 5, 2019, 14:12 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X