For Quick Alerts
ALLOW NOTIFICATIONS  
For Daily Alerts

ನಿಮ್ಮ ಹಣಕಾಸು ಗುರಿಗಳನ್ನು ತಲುಪಲು ಯೋಜನೆ ತಯಾರಿಸುವುದು ಹೇಗೆ?

ಜೀವನದಲ್ಲಿ ಉಳಿತಾಯ, ಖರ್ಚುಗಳು ಹಾಗೂ ಹೂಡಿಕೆಗಳ ಪ್ರಮಾಣಗಳನ್ನು ನಿರ್ಧರಿಸಬೇಕಾದರೆ ಮೊದಲಿಗೆ ನಿಮ್ಮ ಹಣಕಾಸು ಗುರಿಗಳ ಬಗ್ಗೆ ನಿರ್ಧಾರ ತಳೆಯಬೇಕಾಗುತ್ತದೆ. ನಂತರ ಇದಕ್ಕೆ ತಕ್ಕಂತೆ ಹಣಕಾಸು ಯೋಜನೆ ರೂಪಿಸಬೇಕಾಗುತ್ತದೆ.

|

ಜೀವನದಲ್ಲಿ ಉಳಿತಾಯ, ಖರ್ಚುಗಳು ಹಾಗೂ ಹೂಡಿಕೆಗಳ ಪ್ರಮಾಣಗಳನ್ನು ನಿರ್ಧರಿಸಬೇಕಾದರೆ ಮೊದಲಿಗೆ ನಿಮ್ಮ ಹಣಕಾಸು ಗುರಿಗಳ ಬಗ್ಗೆ ನಿರ್ಧಾರ ತಳೆಯಬೇಕಾಗುತ್ತದೆ. ನಂತರ ಇದಕ್ಕೆ ತಕ್ಕಂತೆ ಹಣಕಾಸು ಯೋಜನೆ ರೂಪಿಸಬೇಕಾಗುತ್ತದೆ. ಬಹುತೇಕ ಜನ ಒಳ್ಳೆಯ ಹಣಕಾಸು ಜೀವನ ನಡೆಸಬೇಕೆಂದುಕೊಂಡರೂ ಅದನ್ನು ಸಾಧಿಸುವುದು ಹೇಗೆಂದು ಮಾತ್ರ ತಿಳಿದಿರುವುದಿಲ್ಲ. ನಿಮ್ಮ ಹಣಕಾಸು ಗುರಿಯನ್ನು ಸಾಧಿಸಬೇಕಾದರೆ ಮೊದಲಿಗೆ ಗುರಿಗಳ ಬಗ್ಗೆ ಸ್ಪಷ್ಟತೆ ಇದ್ದು ಅವು ವಾಸ್ತವಿಕ ಜೀವನದಲ್ಲಿ ಸಾಧ್ಯವಾಗುವಂತಿರಬೇಕು. ಹಣಕಾಸು ಗುರಿಯನ್ನು ತಲುಪಲು ಅತ್ಯಂತ ವ್ಯವಸ್ಥಿತವಾದ ಯೋಜನೆಯನ್ನು ರೂಪಿಸುವುದು ಅಗತ್ಯ ಎನ್ನುತ್ತಾರೆ ಹಣಕಾಸು ತಜ್ಞರು.

ಜೀವನದಲ್ಲಿ ಎದುರಾಗಬಹುದಾದ ಅನಿರೀಕ್ಷಿತ ಸಂದರ್ಭಗಳಿಗಾಗಿ ಮೊಟ್ಟ ಮೊದಲಿಗೆ ಒಂದು ನಿಧಿಯನ್ನು ಕಾಯ್ದಿಟ್ಟುಕೊಂಡು ನಂತರ ಸೂಕ್ತವಾದ ವಿಮಾ ಯೋಜನೆ ಹಾಗೂ ಹೂಡಿಕೆ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುತ್ತಾರೆ ಹಣಕಾಸು ತಜ್ಞರು.

ತುರ್ತು ನಿಧಿ ಕಾಯ್ದಿರಿಸುವಿಕೆ

ತುರ್ತು ನಿಧಿ ಕಾಯ್ದಿರಿಸುವಿಕೆ

ಯಾವುದೇ ಹೂಡಿಕೆ ಯೋಜನೆಯಲ್ಲಿ ನಿಮ್ಮ ಹಣವನ್ನು ತೊಡಗಿಸುವ ಮೊದಲು ತುರ್ತು ನಿಧಿಗೆ ಹಣ ಮೀಸಲಿಡುವುದು ಅತಿ ಅಗತ್ಯ ಎನ್ನುತ್ತಾರೆ ಹಣಕಾಸು ತಜ್ಞರು. ಅನಿರೀಕ್ಷಿತವಾಗಿ ಕೆಲಸ ಕಳೆದುಕೊಳ್ಳುವುದು, ರೋಗದಿಂದ ಬಳಲುವುದು ಅಥವಾ ಅಪಘಾತ ಸಂಭವಿಸುವುದು ಇಂಥ ಸಂದರ್ಭಗಳಲ್ಲಿ ಒಮ್ಮೆಲೇ ದೊಡ್ಡ ಮೊತ್ತದ ಹಣ ಬೇಕಾಗುತ್ತದೆ. ತುರ್ತು ನಿಧಿಯು ಇಂಥ ಆಪತ್ಕಾಲಿನ ಸಂದರ್ಭಗಳಲ್ಲಿ ತುಂಬಾ ಸಹಕಾರಿಯಾಗುತ್ತದೆ. ತುರ್ತು ನಿಧಿಯ ಮೊತ್ತವನ್ನು ಆದಷ್ಟೂ ಹೆಚ್ಚು ಬಡ್ಡಿದರ ನೀಡುವ ಉಳಿತಾಯ ಖಾತೆಯಲ್ಲಿಯೇ ಇಡಬೇಕಾಗುತ್ತದೆ. ಏಕೆಂದರೆ ಯಾವುದೇ ಅನಿರೀಕ್ಷಿತ ಸಂದರ್ಭ ಎದುರಾದಲ್ಲಿ ಉಳಿತಾಯ ಖಾತೆಯಿಂದ ಮೊತ್ತವನ್ನು ಸುಲಭವಾಗಿ ನಗದೀಕರಿಸಿಕೊಳ್ಳಬಹುದು. ತಿಂಗಳ ಸರಾಸರಿ ಖರ್ಚಿನ 5 ರಿಂದ 6 ಪಟ್ಟು ಮೊತ್ತವನ್ನು ತುರ್ತುನಿಧಿಯಾಗಿ ಕಾಯ್ದಿಡಬೇಕೆಂದು ಹಣಕಾಸು ತಜ್ಞರು ಹೇಳುತ್ತಾರೆ. ಹಾಗೆಯೇ ಮಾಸಿಕ ಆದಾಯ ಹೆಚ್ಚಾದಂತೆ ಈ ತುರ್ತು ನಿಧಿಯ ಮೊತ್ತವನ್ನು ಹೆಚ್ಚಿಸುತ್ತ ಹೋಗಬೇಕು.

ಅವಶ್ಯವಿರುವಷ್ಟು ಅವಧಿ ವಿಮೆ

ಅವಶ್ಯವಿರುವಷ್ಟು ಅವಧಿ ವಿಮೆ

ಆರೋಗ್ಯ ಸೇವೆಗಳು ತೀರಾ ದುಬಾರಿಯಾಗುತ್ತಿರುವ ಇಂದಿನ ದಿನಗಳಲ್ಲಿ ಟರ್ಮ್ ಇನ್ಸೂರೆನ್ಸ್ ಹಾಗೂ ಆರೋಗ್ಯ ವಿಮೆ ಮಾಡಿಸುವುದು ಈಗ ತುಂಬಾ ಅಗತ್ಯವಾಗಿದೆ. ದುಬಾರಿ ಮೆಡಿಕಲ್ ಬಿಲ್ಲುಗಳು ಹಾಗೂ ಅನಿರೀಕ್ಷಿತ ವೈದ್ಯಕೀಯ ವೆಚ್ಚಗಳಿಂದ ಕುಟುಂಬಕ್ಕೆ ಸುರಕ್ಷತೆ ನೀಡಬೇಕಾದರೆ ಟರ್ಮ್ ವಿಮೆ ಹಾಗೂ ಆರೋಗ್ಯ ವಿಮೆ ಎರಡೂ ಪಾಲಿಸಿಗಳು ಬೇಕೇ ಬೇಕು.

ಕುಟುಂಬದಲ್ಲಿ ದುಡಿಯುವ ಪ್ರಮುಖ ವ್ಯಕ್ತಿಗೆ ಏನಾದರೂ ಆಗಿ ಅನಿರೀಕ್ಷಿತವಾಗಿ ಮೃತಪಟ್ಟಲ್ಲಿ ಟರ್ಮ್ ವಿಮೆ ಕುಟುಂಬಕ್ಕೆ ಹಣಕಾಸು ಸುರಕ್ಷತೆ ನೀಡುತ್ತದೆ. ವಾರ್ಷಿಕ ಆದಾಯದ 10 ರಿಂದ 15 ಪಟ್ಟು ಹೆಚ್ಚು ಮೊತ್ತದಷ್ಟು ಟರ್ಮ್ ವಿಮೆ ಪಡೆದುಕೊಳ್ಳುವುದು ಸೂಕ್ತ. ಹಾಗೆಯೇ ಆದಾಯ ಹೆಚ್ಚಾದಂತೆ ವಿಮಾ ಸುರಕ್ಷೆ ಹೆಚ್ಚಿಸಿಕೊಳ್ಳುತ್ತ ಸಾಗಬೇಕು. ಟರ್ಮ್ ವಿಮೆಯ ಪ್ರೀಮಿಯಂಗಳು ಸಹ ಕಡಿಮೆಯಾಗಿದ್ದು, ಸಾಕಷ್ಟು ಪ್ರಯೋಜನಗಳನ್ನು ಈ ಪಾಲಿಸಿ ನೀಡುತ್ತದೆ. ಇನ್ನು ಟರ್ಮ್ ವಿಮೆಗೆ ಪಾವತಿಸಲಾದ ಪ್ರೀಮಿಯಂ ಮೊತ್ತ ಆದಾಯ ತೆರಿಗೆ ಕಾಯ್ದೆ 80ಸಿ ಪ್ರಕಾರ ತೆರಿಗೆ ವಿನಾಯಿತಿಗೆ ಒಳಪಟ್ಟಿರುತ್ತದೆ.

ಅಲ್ಪಾವಧಿಗಾಗಿ ಹೂಡಿಕೆ ಮಾಡುವುದು

ಅಲ್ಪಾವಧಿಗಾಗಿ ಹೂಡಿಕೆ ಮಾಡುವುದು

ಅಲ್ಪಾವಧಿ ಹೂಡಿಕೆಯ ಅವಧಿಯು ಸಾಮಾನ್ಯವಾಗಿ ಕೆಲವು ತಿಂಗಳು ಅಥವಾ 1 ರಿಂದ 2 ವರ್ಷ ಅವಧಿಯದ್ದಾಗಿರುತ್ತದೆ. ಕುಟುಂಬ ಸಮೇತ ಪ್ರಯಾಣ ಹೋಗುವುದು ಅಥವಾ ಕಾರು ಖರೀದಿಸಲು ಡೌನ್ ಪೇಮೆಂಟ್ ಹೊಂದಿಸುವುದು ಮುಂತಾದ ಚಿಕ್ಕ ಮೊತ್ತದ ಕಾರಣಗಳಿಗಾಗಿ ಅಲ್ಪಾವಧಿಯ ಹೂಡಿಕೆ ಯೋಜನೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಫಿಕ್ಸೆಡ್ ಡಿಪಾಸಿಟ್ ಅಥವಾ ಡೆಬ್ಟ್ ಮ್ಯೂಚುವಲ್ ಫಂಡ್‌ಗಳಂಥ ಕಡಿಮೆ ಅಪಾಯದಿಂದ ಮಧ್ಯಮ ಅಪಾಯದ ಯೋಜನೆಗಳಲ್ಲಿ ಹಣ ತೊಡಗಿಸುವುದು ಸೂಕ್ತ ಎನ್ನುತ್ತಾರೆ ಹಣಕಾಸು ತಜ್ಞರು.

ಆರೋಗ್ಯ ವಿಮೆ ಮಾಡಿಸಿ

ಆರೋಗ್ಯ ವಿಮೆ ಮಾಡಿಸಿ

ಅನಿರೀಕ್ಷಿತ ಅನಾರೋಗ್ಯ ಉಂಟಾದಾಗ ಚಿಕಿತ್ಸೆಗಾಗಿ ದೊಡ್ಡ ಮೊತ್ತದ ಹಣ ಬೇಕಾಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ಆರೋಗ್ಯ ವಿಮೆ ತುಂಬಾ ಸಹಕಾರಿಯಾಗಿದೆ. ಕೆಲವರು ತಾವು ಕೆಲಸ ಮಾಡುವ ಕಂಪನಿಗಳು ನೀಡುವ ಆರೋಗ್ಯ ವಿಮಾ ಪಾಲಸಿಯನ್ನೇ ಅವಲಂಬಿಸಿರುತ್ತಾರೆ. ಆದರೆ ಇವು ಅನೇಕ ಸಂದರ್ಭಗಳಲ್ಲಿ ಬೇಕಾದಷ್ಟು ಸುರಕ್ಷತೆ ನೀಡಲಾರವು. ಇನ್ನು ಕೆಲವೊಮ್ಮೆ ಒಂದೇ ಬಾರಿ ಆಸ್ಪತ್ರೆಗೆ ದಾಖಲಾದರೂ ಸಾಕು ಇವುಗಳ ಕವರೇಜ್ ಮುಗಿದು ಹೋಗುತ್ತದೆ. ಹೀಗಾಗಿ ಕುಟುಂಬದಲ್ಲಿನ ಪಾಲಕರು, ಹೆಂಡತಿ, ಮಕ್ಕಳು ಹೀಗೆ ಎಲ್ಲರಿಗೂ ಆರೋಗ್ಯ ವಿಮೆಯ ಸುರಕ್ತೆಗಾಗಿ ಫ್ಯಾಮಿಲಿ ಫ್ಲೋಟರ್ ಪಾಲಿಸಿ ಖರೀದಿಸುವುದು ಸೂಕ್ತ. ಅಪಘಾತ ಅಥವಾ ಅಂಗವಿಕಲತೆ ಉಂಟಾದಲ್ಲಿ ಹೆಚ್ಚುವರಿ ಮೆಡಿಕಲ್ ಬಿಲ್‌ಗಳ ಪಾವತಿಗಾಗಿ ಟಾಪ್ ಆಪ್ ಆಯ್ಕೆ ಮಾಡಿಕೊಳ್ಳಬಹುದು. ಆರೋಗ್ಯ ವಿಮೆಗೆ ಪಾವತಿಸಲಾದ ಪ್ರೀಮಿಯಂ ಮೊತ್ತವು ಆದಾಯ ತೆರಿಗೆ ಕಾಯ್ದೆ 80 ಡಿ ಪ್ರಕಾರ ತೆರಿಗೆ ವಿನಾಯಿತಿಗೆ ಒಳಪಟ್ಟಿದೆ.

ಮಧ್ಯಮ ಹಾಗೂ ದೀರ್ಘಾವಧಿಯ ಹೂಡಿಕೆ ಮಾಡುವುದು

ಮಧ್ಯಮ ಹಾಗೂ ದೀರ್ಘಾವಧಿಯ ಹೂಡಿಕೆ ಮಾಡುವುದು

3 ರಿಂದ 5 ವರ್ಷ ಅಥವಾ ಅದಕ್ಕೂ ಹೆಚ್ಚು ಅವಧಿಯ ಹೂಡಿಕೆ ಯೋಜನೆಗಳು ಮಧ್ಯಮ ಹಾಗೂ ದೀರ್ಘಾವಧಿಯ ಹೂಡಿಕೆ ಯೋಜನೆಗಳೆಂದು ಕರೆಯಲ್ಪಡುತ್ತವೆ. ಮಗ ಅಥವಾ ಮಗಳ ಉನ್ನತ ವಿದ್ಯಾಭ್ಯಾಸ ಖರ್ಚು, ಮನೆ ಖರೀದಿಸಲು ಹಣ ಸಂಗ್ರಹ ಅಥವಾ ನಿವೃತ್ತ ಜೀವನಕ್ಕಾಗಿ ಹಣ ಕೂಡಿಸಲು ಈ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು.

ಯಾವುದೇ ರೀತಿಯ ಹಣಕಾಸು ಗುರಿಯ ಸಾಧನೆಗೆ ಇಕ್ವಿಟಿ ಮ್ಯೂಚುವಲ್ ಫಂಡ್‌ಗಳನ್ನು ಪರಿಗಣಿಸಬಹುದು. ಸಾಂಪ್ರದಾಯಿಕ ಉಳಿತಾಯ ಯೋಜನೆಗಳಾದ ಎಫ್‌ಡಿ, ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಮುಂತಾದ ಯೋಜನೆಗಳ ಮೂಲಕ ನಿಗದಿತ ಹಣಕಾಸು ಗುರಿಯನ್ನು ಸಾಧಿಸಲು ಸಾಧ್ಯವಾಗದೇ ಇರಬಹುದು. ಕಾಲಕಾಲಕ್ಕೆ ಹೆಚ್ಚಾಗುವ ಹಣದುಬ್ಬರವನ್ನು ಮೀರಿಸಿ ಆದಾಯ ನೀಡಲು ಈ ಸಾಂಪ್ರದಾಯಿಕ ಯೋಜನೆಗಳು ಸೂಕ್ತವಲ್ಲ. ವಿಭಿನ್ನ ರೀತಿಯ ಹಾಗೂ ಹೂಡಿಕೆದಾರರ ಅಗತ್ಯಕ್ಕೆ ತಕ್ಕಂಥ ಯೋಜನೆಗಳನ್ನು ಹೊಂದಿರುವ ಇಕ್ವಿಟಿ ಮ್ಯೂಚುವಲ್ ಫಂಡ್ ಯೋಜನೆಗಳು ಹಣಬುಬ್ಬರ ಮೀರಿ ಆದಾಯ ನೀಡುವ ಸಾಮರ್ಥ್ಯ ಹೊಂದಿವೆ. ಹೊಸದಾಗಿ ಹೂಡಿಕೆ ಮಾಡುವವರು ಹಾಗೂ ಇಕ್ವಿಟಿ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಹಿಂಜರಿಯುವವರು ಬ್ಯಾಲೆನ್ಸಡ್ ಫಂಡ್ ಆಯ್ಕೆ ಮಾಡಿಕೊಳ್ಳಬಹುದು. ಡೆಬ್ಟ್ ಹಾಗೂ ಇಕ್ವಿಟಿ ಮಾರುಕಟ್ಟೆಗಳೆರಡರ ಮಿಶ್ರಣವಾಗಿರುವ ಬ್ಯಾಲೆನ್ಸಡ್ ಫಂಡ್‌ಗಳು ಅಪಾಯ ಹಾಗೂ ಆದಾಯದ ಮಟ್ಟವನ್ನು ಸರಾಸರಿಗೊಳಿಸಿ ಹೂಡಿಕೆದಾರರ ಹಿತ ಕಾಪಾಡಲು ಉತ್ತಮವಾಗಿವೆ.

Read more about: investments money savings
English summary

How should you plan your investments to meet financial goals?

Having financial goals are the groundwork for planning your saving, spending and investing activities.
Story first published: Friday, April 19, 2019, 9:30 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X