For Quick Alerts
ALLOW NOTIFICATIONS  
For Daily Alerts

ಎಟಿಎಂ ಕಾರ್ಡ್ ಬಳಸುವ ಮುನ್ನ ಇಲ್ಲಿ ನೋಡಿ..

ಎಟಿಎಂ ಶುಲ್ಕಗಳ ನಿಯಮಾವಳಿಗಳ ಅನುಸಾರ ನಿಮ್ಮ ಖಾತೆ ಇರುವ ಬ್ಯಾಂಕಿನ ಎಟಿಎಂನಲ್ಲಿ ತಿಂಗಳಿಗೆ ಐದು ಬಾರಿ ಹಾಗೂ ಬೇರೆ ಎಟಿಎಂ ಗಳಲ್ಲಿ ತಿಂಗಳಿಗೆ ಮೂರು ಬಾರಿ ವ್ಯವಹಾರ ನಡೆಸಬಹುದಾಗಿದೆ.

|

ಡಿಜಿಟಲ್ ಯುಗದಲ್ಲಿ ಕೈ ಬೆರಳ ತುದಿಯಲ್ಲೇ ಎಲ್ಲಾ ವ್ಯವಹಾರಗಳು ನಡೆಯುತ್ತಿವೆ! ಬ್ಯಾಂಕಿಗೆ ಹೋಗಿ ಸರದಿ ಸಾಲಿನಲ್ಲಿ ನಿಂತುಕೊಂಡೆ ವ್ಯವಹರಿಸಬೇಕೆಂದೆನಿಲ್ಲ. ಮನೆಯಿಂದಲೇ ಆನ್ಲೈನ್ ಮೂಲಕ ವಹಿವಾಟು ನಡೆಸುವಷ್ಟರ ಮಟ್ಟಿಗೆ ತಂತ್ರಜ್ಞಾನ ಮುಂದುವರೆದಿದೆ. ಇದರಲ್ಲಿ ಎಟಿಎಂ ವ್ಯವಹಾರ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದೆ.
ನಮ್ಮಲ್ಲಿ ಪ್ರತಿಯೊಬ್ಬರು ಕೂಡ ಎಟಿಎಂ ಬಳಕೆ ಮಾಡುತ್ತೇವೆ ಎಂದರೆ ತಪ್ಪಾಗಲಾರದು. ಆದರೆ ಎಟಿಎಂ ನಲ್ಲಿ ವ್ಯವಹರಿಸುವಾಗ ಹಲವು ನಿಯಮಗಳನ್ನು ಅರಿತಿರಬೇಕಾಗುತ್ತದೆ. ಎಟಿಎಂ ಕಾರ್ಡ್ ನ್ನು ತಿಂಗಳಿಗೆ ಎಷ್ಟು ಬಾರಿ ಬಳಸಬೇಕು? ಯಾವ ಬ್ಯಾಂಕಿನ ಎಟಿಎಮ್ ಬಳಸಬೇಕು? ಹೆಚ್ಚುವರಿ ಎಟಿಎಂ ಬಳಸಿದರೆ ತಗಲುವ ಶುಲ್ಕ ಎಷ್ಟು? ಶುಲ್ಕ ಹೇಗೆ ವಿಧಿಸಲ್ಪಡುತ್ತದೆ? ಇತ್ಯಾದಿ ಸಂಗತಿಗಳ ಬಗ್ಗೆ ನಮ್ಮಲ್ಲಿ ಗೊಂದಲ ಇದ್ದೆ ಇರುತ್ತದೆ ಅಲ್ಲವೆ?

 

ಎಟಿಎಂ ಶುಲ್ಕಗಳ ನಿಯಮಾವಳಿಗಳ ಅನುಸಾರ ನಿಮ್ಮ ಖಾತೆ ಇರುವ ಬ್ಯಾಂಕಿನ ಎಟಿಎಂನಲ್ಲಿ ತಿಂಗಳಿಗೆ ಐದು ಬಾರಿ ಹಾಗೂ ಬೇರೆ ಎಟಿಎಂ ಗಳಲ್ಲಿ ತಿಂಗಳಿಗೆ ಮೂರು ಬಾರಿ ವ್ಯವಹಾರ ನಡೆಸಬಹುದಾಗಿದೆ. ಜೊತೆಗೆ, ನಿಗದಿತ ಮಿತಿ ಮೀರಿದ ವ್ಯವಹಾರಗಳ ಮೇಲೆ ಶುಲ್ಕ ವಿಧಿಸಲಾಗುತ್ತದೆ.

ಅದಾಗ್ಯೂ, ಎಟಿಎಂ ಕಾರ್ಡುದಾರರು ವ್ಯವಹಾರಗಳ ಮೇಲೆ ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಿಕೊಂಡರೆ ಮಾತ್ರ ಶುಲ್ಕದಿಂದ ತಪ್ಪಿಸಿಕೊಳ್ಳಬಹುದು. ನಮ್ಮ ಹಣಕಾಸಿನ ಅಗತ್ಯಗಳಿಗೆ ಅನುಗುಣವಾಗಿ ವ್ಯವಹಾರದ ನಡತೆಯಲ್ಲಿ ಬದಲಾವಣೆ ತರಬೇಕು. ಅನಗತ್ಯ ಶುಲ್ಕಗಳಿಂದ ತಪ್ಪಿಸಿಕೊಳ್ಳಲು ಅನೇಕ ಮುಂಜಾಗ್ರತಾ ಕ್ರಮಗಳನ್ನು ಹಾಗೂ ವಿಧಾನಗಳನ್ನು ಪಾಲಿಸಬೇಕಾಗುತ್ತದೆ. ಇದರ ಕುರಿತ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ..

ಖರ್ಚುಗಳನ್ನು ನಿಗದಿಪಡಿಸಿ

ಖರ್ಚುಗಳನ್ನು ನಿಗದಿಪಡಿಸಿ

ನಿಮಗೆ ಕೊಡಬಹುದಾದ ಸಲಹೆಗಳಲ್ಲಿ ಇದು ಮುಖ್ಯವಾದದ್ದು. ನಿಮಗೆ ಒಂದು ವಾರಕ್ಕೆ, ತಿಂಗಳಿಗೆ ಬೇಕಾಗಬಹುದಾದ ಖರ್ಚಿನ ಬಗ್ಗೆ ಬಜೆಟ್ ನ್ನು ರೂಪಿಸಿ ಮೊದಲೆ ನಿಗದಿಪಡಿಸುವಂತೆ ಎಟಿಎಂನಿಂದ ಹಣವನ್ನು ಬಿಡಿಸಿಕೊಳ್ಳುವುದು ಉತ್ತಮ ಮಾರ್ಗ. ಇದರಿಂದಾಗಿ ಬೇರೆ ಎಟಿಎಂಗಳಲ್ಲಿ ಅನಗತ್ಯವಾಗಿ ಹಣ ತೆಗೆಯುವ ಪ್ರಸಂಗ ಎದುರಾಗುವುದಿಲ್ಲ. ಇದರಿಂದ ಅನಗತ್ಯವಾಗಿ ಪದೇ ಪದೇ ಎಟಿಎಂಗಳಿಗೆ ಹೋಗುವುದು ಹಾಗೂ ಅನಗತ್ಯ ಖರ್ಚುಗಳನ್ನು ತಪ್ಪಿಸಬಹುದು.

ತುರ್ತಿನ ಸಂದರ್ಭಕ್ಕಾಗಿ ಹಣ ಇರಲಿ

ತುರ್ತಿನ ಸಂದರ್ಭಕ್ಕಾಗಿ ಹಣ ಇರಲಿ

ಎಟಿಎಂ ಮೂಲಕ ಈ 16 ವ್ಯವಹಾರಗಳನ್ನು ಮಾಡಬಹುದು ಎಟಿಎಂ ಮೂಲಕ ಈ 16 ವ್ಯವಹಾರಗಳನ್ನು ಮಾಡಬಹುದು

ನಿಮ್ಮ ಬ್ಯಾಂಕ್ ಶಾಖೆಗೆ ಆದ್ಯತೆ
 

ನಿಮ್ಮ ಬ್ಯಾಂಕ್ ಶಾಖೆಗೆ ಆದ್ಯತೆ

ಬೇರೆ ಬ್ಯಾಂಕುಗಳ ಎಟಿಎಂಗಳಲ್ಲಿ ವ್ಯವಹರಿಸುವುದನ್ನು ಕಡಿಮೆ ಮಾಡದಷ್ಟು ಒಳ್ಳೆಯದು. ಒಂದು ವೇಳೆ ನಿಮ್ಮ ಎಟಿಂ ದುರಸ್ತಿಯಲ್ಲಿದ್ದರೆ ಅಥವಾ ಮುಚ್ಚಲ್ಪಟ್ಟಿದ್ದರೆ ಮಾತ್ರ ಬೇರೆ ಎಟಿಎಂಗಳಿಗೆ ಹೋಗಿ. ಸ್ಮಾರ್ಟ್ ಪೋನ್ ಗಳಲ್ಲಿ ಕೆಲ ಬ್ಯಾಂಕುಗಳ ಆಪ್ ಗಳಿದ್ದು ಅದರ ಮೂಲಕ ಹತ್ತಿರದ ಎಟಿಎಂ ಶಾಖೆಗಳನ್ನು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ.

ಕಾರ್ಡುಗಳನ್ನು ಬಳಸಿ

ಕಾರ್ಡುಗಳನ್ನು ಬಳಸಿ

ತುಂಬಾ ಹಣದ ಅವಶ್ಯಕತೆ ಇದ್ದಾಗ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡುಗಳನ್ನು ಬಳಸುವುದರಿಂದ ಅಂತಹ ಸಂದರ್ಭಗಳಲ್ಲಿ ಸುಲಭವಾಗುತ್ತದೆ. ಆದರೆ ನೆನಪಿರಲಿ, 1-2% ವ್ಯವಹಾರ ಶುಲ್ಕ ವಿಧಿಸಲಾಗುತ್ತದೆ. ಏನೇ ಆಗಲಿ ಅತಿಹೆಚ್ಚು ಖರ್ಚು ಮಾಡುವುದು ಯಾವಾಗಲೂ ಅಪಾಯಕಾರಿ. ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು.

ಸುಪ್ತ ಖಾತೆ ಉಪಯೋಗಿಸಿ (dormant account )

ಸುಪ್ತ ಖಾತೆ ಉಪಯೋಗಿಸಿ (dormant account )

ಸುಪ್ತ ಬ್ಯಾಂಕ್ ಖಾತೆ ಬಳಸುವುದರಿಂದ ಎಟಿಎಂ ಶುಲ್ಕಗಳಿಂದ ಸುಧಾರಿಸಲು ಸಹಾಯಕವಾಗುತ್ತದೆ. ಹೆಚ್ಚಿನ ಬ್ಯಾಂಕುಗಳು ವಾರ್ಷಿಕವಾಗಿ ರೂ. 80-100 ಶುಲ್ಕ ವಿಧಿಸುತ್ತವೆ.

ನಗದು ವಿನಿಮಯ ಸಾಧ್ಯವಾದರೆ ತಪ್ಪಿಸಿ

ನಗದು ವಿನಿಮಯ ಸಾಧ್ಯವಾದರೆ ತಪ್ಪಿಸಿ

ಪ್ರತಿಯೊಂದು ಬಾರಿ ಎಟಿಎಂ ಮೂಲಕ ವ್ಯವಹರಿಸುವ ಅಥವಾ ಪಾವತಿಸುವ ಅಭ್ಯಾಸ ಇದ್ದಲ್ಲಿ ಅವಶ್ಯವಾಗಿ ನಿಮ್ಮ ನಡೆಯಲ್ಲಿ ಬದಲಾವಣೆ ತನ್ನಿ. ವಿದ್ಯುನ್ಮಾನ ಫಂಡ್ ವರ್ಗಾವಣೆ, ಚೆಕ್, ಡ್ರಾಪ್ಟ್ ಗಳ ಮುಖಾಂತರ ನಗದು ಪಡೆಯಿರಿ ಮತ್ತು ಪಾವತಿ ಮಾಡಿ. ಇದರಿಂದಾಗಿ ಎಟಿಎಂ ಶುಲ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯ.

ಹಣದ ಪಾವತಿಗೆ ಕಾರ್ಡ್ ಸ್ವೈಪ್ ಮಾಡಿ

ಹಣದ ಪಾವತಿಗೆ ಕಾರ್ಡ್ ಸ್ವೈಪ್ ಮಾಡಿ

ಮಾಲ್ ಗಳಲ್ಲಿ ಅಥವಾ ವಾಣಿಜ್ಯ ಸ್ಟೋರ್ ಗಳಲ್ಲಿ ಶಾಪಿಂಗ್ ಮಾಡುವಾಗ ಅಥವಾ ಉತ್ಪನ್ನಗಳನ್ನು ಖರೀದಿಸುವಾಗ ಹಣವನ್ನು ಪಾವತಿಸುವುದಕ್ಕಾಗಿ ಕಾರ್ಡ್ ಗಳನ್ನು ಜಾಗರೂಕತೆಯಿಂದ ಬಳಸಬೇಕು. ಹಣವಿಲ್ಲದಿದ್ದಾಗ ವ್ಯವಹಾರ ಮಾಡುವ ಪ್ರವೃತ್ತಿಯನ್ನು ಕಡಿಮೆ ಮಾಡುವುದೇ ಉತ್ತಮ ವಿಧಾನ. ಅಲ್ಲದೆ ಡೆಬಿಟ್ ಕಾರ್ಡ್ ಬಳಸುವುದರಿಂದ ಎಟಿಎಂ ಶುಲ್ಕಗಳನ್ನು ಕಡಿಮೆ ಮಾಡಬಹುದು. ಆದರೆ ಕಾರ್ಡ್ ಗಳನ್ನು ಅತಿ ಬುದ್ದಿವಂತಿಕೆಯಿಂದ ಬಳಸಬೇಕು.

ನೆಟ್ ಬ್ಯಾಂಕಿಂಗ್/ಪೋನ್ ಬ್ಯಾಂಕಿಂಗ್ ಬಳಸಿ

ನೆಟ್ ಬ್ಯಾಂಕಿಂಗ್/ಪೋನ್ ಬ್ಯಾಂಕಿಂಗ್ ಬಳಸಿ

ನಗದು ಇಲ್ಲದ ವ್ಯವಹಾರದ ಮೇಲೆ ಹೆಚ್ಚು ಅವಲಂಬಿತವಾದಲ್ಲಿ ಎಟಿಎಂ ಶುಲ್ಕವನ್ನು ಯಶಸ್ವಿಯಾಗಿ ಕಡಿಮೆ ಮಾಡಿಕೊಳ್ಳಬಹುದು. ಈಗಂತೂ ನಗದು ಇಲ್ಲದೆ ಹಣಕಾಸು ವ್ಯವಹಾರ ಮಾಡಬಹುದಾದ ಅನೇಕ ವಾಹಿನಿಗಳು ಲಭ್ಯ ಇವೆ. ಅವುಗಳಲ್ಲಿ ನೆಟ್ ಬ್ಯಾಂಕಿಂಗ್ ಹಾಗೂ ಪೋನ್ ಬ್ಯಾಂಕಿಂಗ್ ಮುಖ್ಯವಾದವು. ಇವುಗಳ ಮೂಲಕ ಖಾತೆ ಮತ್ತು ಹಣದ ವ್ಯವಹಾರ ಮಾಡುವುದಕ್ಕಾಗಿ ನೋಂದಾಯಿಸಿಕೊಳ್ಳಿ. ನೀವು ಪೋನ್ ಬ್ಯಾಂಕಿಂಗ್ ಆಪ್ ಗಳನ್ನು ಡೌನಲೋಡ್ ಮಾಡಿಕೊಂಡು ಮುಂದುವರೆಯಬಹುದು.

ಮುಂಜಾಗ್ರತೆ ಇರಲಿ

ಮುಂಜಾಗ್ರತೆ ಇರಲಿ

ಒಂದು ತಿಂಗಳಿಗೆ ಎಟಿಎಂ ಕಾರ್ಡ್ ಬಳಸಬಹುದಾದ ಮಿತಿಯನ್ನು ದಾಟಿದ್ದರೆ ಅಥವಾ ಆನ್ಲೈನ್/ಎಟಿಎಂ ಮೂಲಕ ಹಣಕಾಸು ವ್ಯವಹಾರ ಮಾಡಲು ತೊಂದರೆಗಳಿದ್ದಲ್ಲಿ ನಿಮ್ಮ ಬ್ಯಾಂಕ್ ಶಾಖೆಗೆ ಬೇಟಿ ನೀಡಿ ವ್ಯವಹರಿಸಿ. ಅಲ್ಲದೆ ನೀವು ಹೆಚ್ಚು ಮೊತ್ತದ ಹಣವನ್ನು ಡ್ರಾ ಮಾಡಿಕೊಳ್ಳುವುದಿದ್ದರೆ ಎಟಿಎಂಗಿಂತಲೂ ಬ್ಯಾಂಕಿಗೆ ಹೋಗುವುದು ಮುಂಜಾಗ್ರತೆ ದೃಷ್ಟಿಯಿಂದ ಒಳಿತು.

ಸಣ್ಣ ಮೊತ್ತ ಡ್ರಾ ಮಾಡಿಕೊಳ್ಳಬೇಡಿ

ಸಣ್ಣ ಮೊತ್ತ ಡ್ರಾ ಮಾಡಿಕೊಳ್ಳಬೇಡಿ

ಹೆಚ್ಚಿನ ಜನರು ಸಣ್ಣ ಮೊತ್ತಕ್ಕಾಗಿ ಪದೇ ಪದೇ ಹಣವನ್ನು ಡ್ರಾ ಮಾಡಿಕೊಳ್ಳುವುದನ್ನು ಕಾಣಬಹುದು. ಇದರಿಂದ ಎಟಿಎಂ ಮುಖಾಂತರ ವ್ಯವಹಾರದ ಪ್ರಮಾಣ ಹೆಚ್ಚಾಗುತ್ತದಲ್ಲದೇ ಸುರಕ್ಷತೆ ದೃಷ್ಟಿಯಿಂದ ಕೂಡ ಒಳ್ಳೆಯದಲ್ಲ. ಇದರಿಂದಾಗಿ ಅನವಶ್ಯಕ ಶುಲ್ಕ ಪಾವತಿಸಬೇಕಾಗುತ್ತದೆ.

Read more about: atm banking money savings
English summary

How to avoid high ATM charges, Must know these things..

The current rules on ATM charges which allows only five ATM transaction in home bank’s ATM and three from other bank’s ATM in a month.
Story first published: Wednesday, April 24, 2019, 8:57 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X