ಸ್ವಂತ ಉದ್ಯಮ ಪ್ರಾರಂಭಿಸಬೇಕು, ಅದನ್ನು ಯಶಸ್ವಿಗೊಳಿಸಬೇಕು ಎಂಬ ಕನಸು ತುಂಬಾ ಜನರಲ್ಲಿ ಇರುತ್ತದೆ. ಆದರೆ ಸ್ವಂತ ಉದ್ಯಮ/ವ್ಯವಹಾರ ಆರಂಭಿಸುವಾಗ ಹೇಗೆ ಯಶಸ್ವಿಗೊಳಿಸಬೇಕು ಎಂಬ ಕಲೆಯನ್ನು ಕರಗತ ಮಾಡಿಕೊಂಡಿರಬೇಕು.
ಸ್ವಂತ ಉದ್ಯಮ ಪ್ರಾರಂಭಿಸಬೇಕು, ಅದನ್ನು ಯಶಸ್ವಿಗೊಳಿಸಬೇಕು ಎಂಬ ಕನಸು ತುಂಬಾ ಜನರಲ್ಲಿ ಇರುತ್ತದೆ. ಆದರೆ ಸ್ವಂತ ಉದ್ಯಮ/ವ್ಯವಹಾರ ಆರಂಭಿಸುವಾಗ ಹೇಗೆ ಯಶಸ್ವಿಗೊಳಿಸಬೇಕು ಎಂಬ ಕಲೆಯನ್ನು ಕರಗತ ಮಾಡಿಕೊಂಡಿರಬೇಕು. ಹೊಸದಾಗಿ ಉದ್ಯಮ ಪ್ರಾರಂಭಿಸುತ್ತಿದ್ದು, ಯಶಸ್ವಿ ಉದ್ಯಮದ ಮಾಲೀಕರಾಗಲು ಸಹಾಯ ಬಯಸುತ್ತಿದ್ದರೆ ಈ ಲೇಖನ ನಿಮಗೆ ಸಹಾಯಕ ಆಗಬಲ್ಲದು. ಒಬ್ಬ ಯಶಸ್ವಿ ಉದ್ಯಮಿಗಿರಬೇಕಾದ ನಡವಳಿಕೆ/ಅರ್ಹತೆಗಳೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ ಬನ್ನಿ... ಸ್ವಂತ ಉದ್ಯಮ (ಕಂಪನಿ) ಪ್ರಾರಂಭಿಸುವುದು ಹೇಗೆ?
1. ಹೆಚ್ಚು ಹಣ ಸಂಪಾದನೆ ಹೇಗೆ?
ಪ್ರತಿಯೊಬ್ಬ ಉದ್ಯಮಿಯು ಎದುರಿಸುವ ಮೊದಲ ಸವಾಲೆಂದರೆ ಹೆಚ್ಚು ಹಣ ಗಳಿಕೆ ಹೇಗೆ ಎಂಬುದು? ಉದ್ಯಮಿಗಳು ವಿವಿಧ ವಿಧಾನಗಳನ್ನು ಅಳವಡಿಸಿಕೊಂಡು ಹೆಚ್ಚು ಹಣ ಗಳಿಸಬಹುದು. ಅದರಲ್ಲಿ ಅತ್ಯಂತ ಸಾಮಾನ್ಯ ವಿಧಾನಗಳೆಂದರೆ:
- ಹೆಚ್ಚು ಉತ್ಪನ್ನಗಳನ್ನು ಮಾರುವುದು.
- ಹೆಚ್ಚು ಉತ್ಪನ್ನ ಶ್ರೇಣಿಗಳನ್ನು ಪರಿಚಯಿಸುವುದು.
- ಉತ್ಪನ್ನಗಳನ್ನು ನವೀಕರಿಸುವುದು.
- ವ್ಯಾಪಾರವನ್ನು ಪ್ರಚುರಪಡಿಸುವುದು.
2. ಸಮಯ ನಿರ್ವಹಣೆ
ಸಮಯ ನಿರ್ವಹಣೆ ಮಹತ್ವದ ಸಂಗತಿ. ಒಮ್ಮೆ ಕಳೆದು ಹೋದ ಸಮಯ ಎಂದಿಗೂ ಮರಳಿ ಸಿಗದು. ಸಮಯ ಹಣವಿದ್ದಂತೆ. ನೀವು ಉದ್ಯಮವನ್ನು ಪರಿಣಾಮಕಾರಿಯಾಗಿ ನಡೆಸಬೇಕಾದರೆ ಸಮಯವನ್ನು ಸರಿಯಾಗಿ ನಿರ್ವಹಿಸಬೇಕು. ಹೆಚ್ಚುವರಿ ಸಮಯವನ್ನು ಹೊಸ ಉತ್ಪನ್ನ ಅಥವಾ ವ್ಯವಹಾರ ವರ್ಧನೆಯ ಕುರಿತಾಗಿ ಯೋಚಿಸಿ ಕಾರ್ಯರೂಪಕ್ಕೆ ತರಲು ಉಪಯೋಗಿಸಬಹುದು.
3. ಉತ್ಪಾದಕ ಉದ್ಯೋಗಿಗಳ ಆಯ್ಕೆ
ಉದ್ಯಮ ಆರಂಭಿಸಿದ ಬಳಿಕ ಅಡ್ಡಿಯಾಗುವ ಮತ್ತೊಂದು ಸವಾಲು ತಂಡದಲ್ಲಿ ಉತ್ಪಾದಕ ಉದ್ಯೋಗಿಗಳ ಆಯ್ಕೆ. ಸರಿಯಾದ ಕೆಲಸಕ್ಕೆ ಸೂಕ್ತ ಕೌಶಲ್ಯಯುಕ್ತ ವ್ಯಕ್ತಿಯ ಆಯ್ಕೆ ಖಂಡಿತವಾಗಿಯೂ ವ್ಯತ್ಯಾಸದೊಂದಿಗೆ ಉತ್ತಮ ಆದಾಯ ತರಬಲ್ಲದು.
4. ಯಶಸ್ಸಿಗೆ 3 ಹಂತದ ಪ್ರಕ್ರಿಯೆ
1. ಮನೋಭಾವ
ಯಶಸ್ವಿ ಉದ್ಯಮವನ್ನು ನಡೆಸಲು ಮನೋಭಾವವು ಅತ್ಯಂತ ನಿರ್ಣಾಯಕ ಅಂಶ. ಯಾವುದೇ ಕೆಲಸದ ಯಶಸ್ವಿಗೆ ನೀವು ಧನಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ನಿಮ್ಮ ಮನೋಭಾವವು ಈ ಕೆಳಗಿನ ಅಂಶಗಳನ್ನು ಒಳಗೊಂಡಿರಬೇಕು.
- ಪರಿಹಾರದತ್ತ ಗಮನ ಕೇಂದ್ರೀಕರಿಸುವುದು
- ಮಾಲೀಕತ್ವವನ್ನು ತೆಗೆದುಕೊಳ್ಳುವುದು
- ಬಿಟ್ಟುಕೊಡದಿರುವ ಮನೋಭಾವ
- ಆದ್ಯತೆ/ಮನ್ನಣೆ ಕೊಡುವುದು
2. ಕಾರ್ಯ ತಂತ್ರ
ಸರಿಯಾದ ವ್ಯವಹಾರ ಯೋಜನೆ ಅಥವಾ ಕಾರ್ಯ ತಂತ್ರವಿಲ್ಲದ ಕಂಪೆನಿಗಳು ನೀರಿಲ್ಲದೇ ವೃತ್ತದಲ್ಲೇ ತಿರುಗುವ ಬಂದರಿನ ಹಡಗುಗಳಂತೆ. ಅವರು ಹೇಗೆ ಮುಂದುವರಿಯಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ಕಷ್ಟ ಪಡುತ್ತಾರೆ. ಏಕೆಂದರೆ ಅವರು ಯಶಸ್ಸಿನ ಅರ್ಥವನ್ನು ವ್ಯಾಖ್ಯಾನಿಸಿರುವುದಿಲ್ಲ.
ಕಾರ್ಯತಂತ್ರ ಇರದಿದ್ದರೆ ಜನರನ್ನು ಹೇಗೆ ನೇಮಿಸಿಕೊಳ್ಳುವುದು, ಜನರನ್ನು ತೆಗೆದು ಹಾಕುವುದು ಹೇಗೆ, ನಿಮ್ಮ ಗ್ರಾಹಕರು ಯಾರು, ಸಂಭಾವ್ಯ ಮಾರುಕಟ್ಟೆಗಳು ಯಾವುದು ಎಂದು ತಿಳಿಯುವುದಿಲ್ಲ.
ಕಾರ್ಯತಂತ್ರವು ಉದ್ದವಾದ ದಾಖಲೆಯಾಗಿರಬೇಕೆಂದಿಲ್ಲ. ಅದು ಕೇವಲ ಒಂದು ಪುಟದ ಕೈಪಿಡಿಯಾಗಿದ್ದರೆ ಸಾಕು. ವ್ಯವಹಾರ ಕಾರ್ಯತಂತ್ರವು ಒಂದು ಜೀವಂತ ದಾಖಲೆ. ಅದನ್ನು ನಿಯಮಿತವಾಗಿ ಮರುಪರಿಶೀಲನೆ ಮಾಡುತ್ತಿರಬೇಕು.


Click it and Unblock the Notifications