For Quick Alerts
ALLOW NOTIFICATIONS  
For Daily Alerts

ಸ್ಟಾರ್ಟ್ಅಪ್ ಅಥವಾ ಬಿಸಿನೆಸ್ ಗಾಗಿ ಫಂಡ್ಸ್ ಪಡೆಯುವ ಮಾರ್ಗಗಳು ಯಾವುವು?

|

ಡಿಜಿಟಲ್ ಯುಗದಲ್ಲಿ ಸ್ಟಾರ್ಟ್ಅಪ್ ಕಡೆಗೆ ಹೆಚ್ಚಿನ ಯುವಜನ ಆಕರ್ಷಿತರಾಗಿ ಅದರಲ್ಲಿ ಜೀವನವನ್ನು ಕಂಡುಕೊಳ್ಳುತ್ತಾ, ಅಲ್ಪಾವಧಿಯಲ್ಲಿಯೇ ಮಿಲಿಯನೇರ, ಬಿಲಿಯನೇರ್ ಆಗುತ್ತಿದ್ದಾರೆ.
ಹೊಸದಾಗಿ ಸ್ಟಾರ್ಟ್ಅಪ್ ಆರಂಭಿಸಲು ಬಯಸುವವರ ಮುಖ್ಯ ಸಮಸ್ಯೆಯೆಂದರೆ ಫಂಡ್ ಪಡೆಯುವುದು ಹೇಗೆ? ಹೀಗಾಗಿಯೇ ಅನೇಕ ನವೋದ್ಯಮಿಗಳು ತಮ್ಮ ಯೋಜನೆಗಳನ್ನು ಅರ್ಧಕ್ಕೆ ಕೈಬಿಡುತ್ತಾರೆ. ಹೀಗಾಗಿಯೇ ಅನೇಕ ಬ್ಯಾಂಕುಗಳು ವ್ಯವಹಾರ ಸಾಲಗಳನ್ನು ನೀಡಲು ಮುಂದಾಗಿವೆ.
ನೀವು ಸ್ಟಾರ್ಟ್ಅಪ್ ನಡೆಸುವ ಆಕಾಂಕ್ಷೆ ಹೊಂದಿದ್ದು, ಫಂಡ್/ಸಾಲವನ್ನು ಪಡೆಯಲು ಬಯಸಿದಲ್ಲಿ ೧೦ ಸುಲಭ ಮಾರ್ಗಗಳನ್ನು ನೋಡಿ..

ಬೂಟ್ಸ್ ಟ್ರ್ಯಾಪಿಂಗ್
 

ಬೂಟ್ಸ್ ಟ್ರ್ಯಾಪಿಂಗ್

ಸ್ವಂತ ಉಳಿತಾಯ ಅಥವಾ ಹೂಡಿಕೆಯ ಮುಖಾಂತರ ಉದ್ಯಮಗಳನ್ನು ಪ್ರಾರಂಭಿಸುವುದನ್ನು ಸಾಮಾನ್ಯವಾಗಿ ಬೂಟ್ಸ್ ಟ್ರ್ಯಾಪಿಂಗ್ ಎನ್ನಲಾಗುತ್ತದೆ. ಹೊಸ ಉದ್ಯಮಗಳಿಗಾಗಿ ಫಂಡ್ಸ್ ಪಡೆಯುವುದು ತುಂಬಾ ಕಷ್ಟ. ಹೀಗಾಗಿ ಸ್ವಂತ ಹೂಡಿಕೆ ಮಾಡುವುದರಿಂದಾಗಿ ಯಾವುದೇ ದಾಖಲಾತಿ ಅಥವಾ ನಿಯಮಗಳನ್ನು ಅನುಸರಿಸುವ ಅಗತ್ಯ ಇರುವುದಿಲ್ಲ.

ಏಂಜೆಲ್ ಇನ್ವೆಸ್ಟ್ಮೆಂಟ್

ಇಕ್ವಿಟಿ ಮಾಲೀಕತ್ವದ ವಿನಿಮಯದಲ್ಲಿ ಹೂಡಿಕೆ ಮಾಡಲು ಆಸಕ್ತಿ ಇರುವ ಹೊಸ ಉದ್ಯಮದಾರರಿಗೆ ಪ್ರೋತ್ಸಾಹಿಸಲು ಏಂಜೆಲ್ ಹೂಡಿಕೆದಾರರು ಮುಂದಾಗಿದ್ದಾರೆ.
ಗೂಗಲ್, ಯಾಹೂ, ಅಲಿಬಾಬಾ ದಂತಹ ಅನೇಕ ಯಶಸ್ವಿ ಉದ್ಯಮಗಳು ಏಂಜೆಲ್ ಹೂಡಿಕೆದಾರರ ಸಹಾಯವನ್ನು ಪಡೆದಿವೆ.

ವೆಂಚರ್ ಕ್ಯಾಪಿಟಲ್

ವೆಂಚರ್ ಕ್ಯಾಪಿಟಲ್ ವೃತ್ತಿಪರ ಹೂಡಿಕೆದಾರರಾಗಿದ್ದು, ಎಲ್ಲಿ ಹೆಚ್ಚೆಚ್ಚು ಲಾಭ ಮತ್ತು ಬೆಳವಣಿಗೆ ಸಾಧ್ಯವಿದೆ ಅಲ್ಲಿ ಮಾತ್ರ ಹೂಡಿಕೆ ಮಾಡುತ್ತಾರೆ. ಇವರು ವ್ಯವಹಾರದಲ್ಲಿ ಈಕ್ವಿಟಿಯ ವಿರುದ್ದವಾಗಿ ಹೂಡಿಕೆ ಮಾಡಲು ಬಯಸುತ್ತಾರೆ.
ಯೋಜನೆಗಳಿಗೆ ಸಂಬಂಧಿಸಿದಂತೆ ಮಾರ್ಗದರ್ಶನ ಮತ್ತು ಸಂಸ್ಥೆಯ ಬೆಳವಣಿಗೆಗಾಗಿ ಪರಿಣಿತರ ಮುಖಾಂತರ ಸಹಾಯ ಮಾಡುತ್ತಾರೆ.

NBFC ಸಾಲ
 

NBFC ಸಾಲ

ಬ್ಯಾಂಕುಗಳಲ್ಲದ ಅನೇಕ ಹಣಕಾಸು ಸಂಸ್ಥೆಗಳು ಹೊಸ ಉದ್ಯಮದಾರರಿಗೆ ಸಾಲವನ್ನು ಮಂಜೂರು ಮಾಡುತ್ತವೆ. ಕಿರು ಬಂಡವಾಳ (ಮೈಕ್ರೊಫೈನಾನ್ಸ್) ಸಂಸ್ಥೆಗಳು, Non Banking Financial Company (NBFC) ಸಿಮಿತವಾದ ಪ್ರಕ್ರಿಯಾ ಅವಧಿಗಾಗಿ ಸಾಲವನ್ನು ನೀಡುತ್ತವೆ.

ಸ್ಟಾರ್ಟ್ಅಪ್ ಇಂಡಿಯ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೊಸ ಉದ್ಯಮದಾರರನ್ನು ಪ್ರೋತ್ಸಾಹಿಸಲು, ಉತ್ತಮವಾದ ಬಿಸಿನೆಸ್ ಯೋಜನೆಗಳಿಗಾಗಿ ಸಾಲವನ್ನು ನೀಡಲು ಸ್ಟಾರ್ಟ್ಅಪ್ ಇಂಡಿಯ ಯೋಜನೆಯನ್ನು ಪ್ರಾರಂಭಿಸಿದ್ದು ಆ ಮೂಲಕ ಸಹ ಸಾಲವನ್ನು ಪಡೆಯಬಹುದಾಗಿದೆ. ಮುದ್ರಾ ಯೋಜನೆಯಡಿ ಸಾಲ ಪಡೆಯುವುದು ಇದಕ್ಕೆ ಉತ್ತಮ ಆಯ್ಕೆ.

ಕ್ರೌಡ್ ಫಂಡಿಂಗ್

ಒಂದೇ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಹಣ ಪಡೆಯುವ ವಿಧಾನ ಇದಾಗಿದೆ. ಈ ಪ್ರಕ್ರಿಯೆ ಸಾಮಾನ್ಯವಾಗಿ ಸೋಷಿಯಲ್ ಮಿಡಿಯಾ ಮತ್ತು ಕ್ರೌಡ್ ಫಂಡಿಂಗ್ ವೇದಿಕೆ ಮುಖಾಂತರ ನಡೆಯುತ್ತದೆ.

ಇನ್ಕ್ಯುಬೆಟರ್ಸ್

ಕೆಲ ಸಂಸ್ಥೆಗಳು ಹಣ ಮತ್ತು ಮಾರ್ಗದರ್ಶನದ ಕೊಡುವುದರ ಜೊತೆಗೆ ಬಾಹ್ಯಾಕಾಶ ಮತ್ತು ಇತರ ಉಪಕರಣಗಳನ್ನು ಸ್ಟಾರ್ಟ್ಅಪ್ ಟೀಮ್ ನವರಿಗೆ ಪೂರೈಸುತ್ತವೆ.

ವೇಗವರ್ಧಕಗಳು

ಇವು ಇನ್ಕ್ಯುಬೆಟರ್ಸ್ ನಂತೆಯೆ ಕಾರ್ಯವನ್ನು ನಿರ್ವಹಿಸುತ್ತಿದ್ದು, ಸಿಮೀತ ಅವಧಿಗಾಗಿ ಹಣ ಮತ್ತು ಮಾರ್ಗದರ್ಶನ ಮಾಡುತ್ತವೆ.

ಕ್ರೆಡಿಟ್ ಕಾರ್ಡುಗಳು

ಕ್ರೆಡಿಟ್ ಕಾರ್ಡುಗಳು ಸಹ ಉಪಕರಣಗಳನ್ನು ಖರೀದಿಸಲು ಮತ್ತು ಆಫಿಸ್ಸಿನ ವ್ಯವಸ್ಥೆ ಮಾಡಲು ಉಪಯೋಗಕಾರಿಯಾಗಿದೆ. ಕ್ಯಾಶ್ ಬ್ಯಾಕ್ ಮತ್ತು ರಿವಾರ್ಡ್ ಪಾಯಿಂಟುಗಳನ್ನು ಸಹ ಕ್ರೆಡಿಟ್ ಕಾರ್ಡುಗಳನ್ನು ಬಳಸುವುದರ ಮೂಲಕ ಪಡೆಯಬಹುದಾಗಿದೆ.

ಅಡಮಾನ ಸ್ವತ್ತುಗಳು

ಅಲ್ಪಾವಧಿಯ ಅವಶ್ಯಕತೆಗಳನ್ನು ಪೂರೈಸಲು ನಿಮ್ಮ ಬಳಿ ಇರುವ ವಸ್ತುಗಳನ್ನು ಅಡವಿಟ್ಟು ಸಾಲವನ್ನು ಪಡೆಯಬಹುದಾಗಿದೆ.

Read more about: startup money business investment
English summary

How To Raise Funds For Your Startup Or Business?

Lack of funding is the major reason why some of the startups do not take off. However, there are many banks which offer business loan to startups.
Story first published: Monday, April 22, 2019, 11:56 [IST]
Company Search
Enter the first few characters of the company's name or the NSE symbol or BSE code and click 'Go'

Find IFSC

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more