For Quick Alerts
ALLOW NOTIFICATIONS  
For Daily Alerts

ವೈಯಕ್ತಿಕ ಸಾಲ ಬಡ್ಡಿ ದರದ ಮೇಲೆ ಉತ್ತಮ ಡೀಲ್ ನಿಮ್ಮದಾಗಿಸಲು 6 ಮಾರ್ಗ

ಇತ್ತೀಚಿನ ದಿನಗಳಲ್ಲಿ ವೈಯಕ್ತಿಕ ಸಾಲ ಪಡೆಯುವುದು ತುಂಬಾ ಸುಲಭ. ತಕ್ಷಣದ ಅನುಮೋದನೆ ಮತ್ತು ಅಡಮಾನ ಮುಕ್ತ ಹಣಕಾಸು ಸೌಲಭ್ಯವು ವೈಯಕ್ತಿಕ ಸಾಲ ಪಡೆಯುವ ಪ್ರಮುಖ ಪ್ರಯೋಜನಗಳಾಗಿದ್ದು, ಇದು ಹೆಚ್ಚು ಜನರನ್ನು ಆಕರ್ಷಿಸುವಂತೆ ಮಾಡುತ್ತದೆ.

|

ಇತ್ತೀಚಿನ ದಿನಗಳಲ್ಲಿ ವೈಯಕ್ತಿಕ ಸಾಲ ಪಡೆಯುವುದು ತುಂಬಾ ಸುಲಭ. ತಕ್ಷಣದ ಅನುಮೋದನೆ ಮತ್ತು ಅಡಮಾನ ಮುಕ್ತ ಹಣಕಾಸು ಸೌಲಭ್ಯವು ವೈಯಕ್ತಿಕ ಸಾಲ ಪಡೆಯುವ ಪ್ರಮುಖ ಪ್ರಯೋಜನಗಳಾಗಿದ್ದು, ಇದು ಹೆಚ್ಚು ಜನರನ್ನು ಆಕರ್ಷಿಸುವಂತೆ ಮಾಡುತ್ತದೆ.
ಹೆಚ್ಚಿನ ಸಾಲದಾತರು ತುಂಬಾ ಸುಲಭವಾದ ಅರ್ಹತಾ ಮಾನದಂಡಗಳನ್ನು ಅಳವಡಿಸಿದ್ದು, ನೀವು ಕೂಡ ಸುಲಭವಾಗಿ ಅರ್ಹತೆ ಪಡೆಯಬಹುದಾಗಿದೆ.

 
ವೈಯಕ್ತಿಕ ಸಾಲ ಬಡ್ಡಿ ದರದ ಮೇಲೆ ಉತ್ತಮ ಡೀಲ್ ನಿಮ್ಮದಾಗಿಸಲು 6  ಮಾರ್ಗ

ಗ್ರಾಹಕರು ವೈಯಕ್ತಿಕ ಸಾಲವನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ ವೈಯಕ್ತಿಕ ಸಾಲ ಎಷ್ಟು ಸುರಕ್ಷಿತ, ವೈಯಕ್ತಿಕ ಸಾಲದ ಮೇಲಿನ ಬಡ್ಡಿದರ ಎಷ್ಟು ಇತ್ಯಾದಿ ಸಂಗತಿಗಳನ್ನು ಎಚ್ಚರಿಕೆಯಿಂದ ನೋಡಬೇಕಾಗುತ್ತದೆ. ಇದಕ್ಕಾಗಿಯೇ ನಿಮ್ಮ ಕ್ರೆಡಿಟ್ ಸ್ಕೋರ್ ಮತ್ತು ವೈಯಕ್ತಿಕ ಸಾಲದ ಅರ್ಜಿಯ ವಿವರಗಳನ್ನು ಸರಿಯಾಗಿ ತುಂಬುವುದು ವೇಗದ ಅನುಮೋದನೆಗೆ ತುಂಬಾ ಮುಖ್ಯವಾಗಿದೆ.

 

ನಿಮ್ಮ ವೈಯಕ್ತಿಕ ಸಾಲದ ಕೈಗೆಟಕುವ ಇಎಂಐ ಮತ್ತು ಕಡಿಮೆ ಪ್ರಮಾಣದ ಬಡ್ಡಿ ದರವನ್ನು ಆನಂದಿಸಲು ಬಯಸುವುದಾದರೆ ಈ 6 ಸಲಹೆಗಳನ್ನು ತಪ್ಪದೇ ಪಾಲಿಸಿ..

1)ಕ್ರೆಡಿಟ್ ಸ್ಕೋರ್ ಬಗ್ಗೆ ಎಚ್ಚರವಿರಲಿ
ಯಾವುದೇ ಸಾಲದಾತ ಸಂಸ್ಥೆ ಸಾಲ ಮಂಜೂರು ಮಾಡುವ ಮುನ್ನ ಅರ್ಜಿದಾರನ ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲಿಸುತ್ತದೆ. ಕ್ರೆಡಿಟ್ ಸ್ಕೋರ್ ಅರ್ಜಿದಾರನ ಮರುಪಾವತಿಯ ಸಾಮರ್ಥ್ಯವನ್ನು ತಿಳಿಸುತ್ತದೆ. ನಿಮ್ಮ ಕ್ರೆಡಿಟ್ ಸ್ಕೋರ್ 750 ಕ್ಕಿಂತ ಹೆಚ್ಚಿದ್ದರೆ ಸಾಲ ಪಡೆಯಲು ಅರ್ಹತೆ ಪಡೆದಂತೆ. ಆಕಸ್ಮಾತ್ ಅದಕ್ಕಿಂತಲೂ ಕಡಿಮೆ ಇದ್ದಲ್ಲಿ ನಿಮ್ಮ ಅರ್ಜಿ ತಿರಸ್ಕರಿಸಲ್ಪಡುವ ಸಾಧ್ಯತೆ ಹೆಚ್ಚು.
ಒಂದುವೇಳೆ ಕಡಿಮೆ ಬಡ್ಡಿದರದ ಮತ್ತು ಅನುಕೂಲಕರ ಸಾಲ ಪಡೆಯಲು ಅತ್ಯುತ್ತಮ ಕ್ರೆಡಿಟ್ ಸ್ಕೋರ್ ಹೊಂದಿಲ್ಲದಿದ್ದರೆ ಕ್ರೆಡಿಟ್ ಕಾರ್ಡ್ ಅನ್ನು ವಿವೇಕದಿಂದ ಬಳಸಬೇಕಾಗುತ್ತದೆ. ಕ್ರೆಡಿಟ್ ಕಾರ್ಡ್ ಬಾಕಿ ಮೊತ್ತವನ್ನು ಸಮಯಕ್ಕೆ ಸರಿಯಾಗಿ ಪೂರ್ಣವಾಗಿ ಮರುಪಾವತಿ ಮಾಡುತ್ತಾ ಬಂದರೆ, ಕ್ರೆಡಿಟ್ ಸ್ಕೋರ್ ಅನ್ನು ಸುಧಾರಿಸಬಹುದು.

2) ಪೂರ್ವ-ಅನುಮೋದಿತ ಆಫರ್ ನ್ನು ವೀಕ್ಷಿಸಿ
ಪ್ರಸಿದ್ದ ಸಾಲದಾತರು ನಿಮ್ಮ ಕ್ರೆಡಿಟ್ ಸ್ಕೋರ್ ವರದಿಯನ್ನು ಮೊದಲು ಪರಿಶೀಲಿಸಿ, ನಿಮ್ಮ ಹಣಕಾಸಿನ ಸ್ಥಿತಿಗತಿಗಳನ್ನು ಗಮನಿಸುತ್ತಾರೆ. ಕ್ರೆಡಿಟ್ ಸ್ಕೋರ್ ವರದಿಯ ಆಧಾರದ ಮೇಲೆ ಸಾಲದಾತ ಸಂಸ್ಥೆಗಳು ಸಾಲವನ್ನು ಅನುಮೋದಿಸುತ್ತಾರೆ ಎಂಬುದನ್ನು ಗಮನಿಸಬೇಕು. ಈ ಪ್ರಕ್ರಿಯೆ ಅರ್ಜಿದಾರನಿಗೆ ಗೊತ್ತಿಲ್ಲದೇ ನಡೆದಿರುತ್ತದೆ.
ಹೀಗಾಗಿ ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಮುನ್ನ ನೀವು ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲಿಸಿದರೆ ಉತ್ತಮ. ಇದರ ಆಧಾರದ ಮೇಲೆ ನೀವು ಎಷ್ಟು ಸಾಲ ಪಡೆಯಲು ಅರ್ಹತೆ ಹೊಂದಿದ್ದಿರಿ, ಎಷ್ಟು ಸಾಲ ಕೇಳಬಹುದು ಎಂಬುದು ಅಂದಾಜಿಸಬಹುದು. ಹೀಗಾಗಿ ಆ ವ್ಯಾಪ್ತಿಯೊಳಗಗಿನ ಮೊತ್ತವನ್ನು ಅರ್ಜಿದಾರರು ನಿಭಾಯಿಸಬಹುದೆಂದು ಸಾಲದಾತರಿಗೆ ತಿಳಿದಿರುತ್ತದೆ. ನಿಮ್ಮ ಪೂರ್ವ-ಅನುಮೋದಿತ ಆಫರ್ ಅನ್ನು ಪರಿಶೀಲಿಸಿ ಅರ್ಜಿ ಸಲ್ಲಿದರೆ ನಿಮ್ಮ ವಿವರಗಳ ಆಧಾರದ ಮೇಲೆ ತ್ವರಿತವಾಗಿ ವೈಯಕ್ತಿಕ ಸಾಲ ಅನುಮೋದಿಸಲ್ಪಡುತ್ತದೆ. ಜೊತೆಗೆ ಉತ್ತಮವಾದ ಬಡ್ಡಿದರಗಳನ್ನು ಕೂಡ ಆನಂದಿಸಬಹುದು.

3) ನಿಮ್ಮ ಬ್ಯಾಂಕಿನೊಂದಿಗೆ ಬೇರೆ ಬ್ಯಾಂಕಿನ ಆಫರ್ ಹೋಲಿಸಿ ನೋಡಿ
ಬ್ಯಾಂಕಿನೊಂದಿಗಿನ ಹಣಕಾಸು ವ್ಯವಹಾರಗಳ ಸಂಬಂಧದ ಹೊರತಾಗಿಯೂ, ವೈಯಕ್ತಿಕ ಸಾಲದ ಅರ್ಜಿ ಸಲ್ಲಿಸುವಾಗ ಇದನ್ನು ಮಿರಿ ಮುಂದಾಲೋಚನಾ ದೃಷ್ಟಿಯಿಂದ ನೋಡುವ ಅವಶ್ಯಕತೆಯಿದೆ.
ಈ ರೀತಿ ನೋಡುವುದರಿಂದ ಪ್ರಸಿದ್ಧ ಸಾಲದಾತ ಸಂಸ್ಥೆಗಳಿಂದ ಕೈಗೆಟುಕುವ ದರದ ಅಗ್ಗದ ಕೊಡುಗೆಗಳನ್ನು ಪಡೆಯಬಹುದು. ಉದಾಹರಣೆಗೆ, ಬಜಾಜ್ ಫಿನ್ ಸರ್ವ್ (Bajaj Finserv) ಅಂದರೆ ನೀವು ವೈಯಕ್ತಿಕ ಸಾಲವನ್ನು ತುಂಬಾ ಸುಲಭವಾಗಿ ಹೆಚ್ಚಿನ ಸಾಲ ಸೌಲಭ್ಯದೊಂದಿಗೆ ಪ್ರಯೋಜನ ಪಡೆಯಬಹುದು ಎಂದರ್ಥ.
ಈ ಸೌಲಭ್ಯದೊಂದಿಗೆ, ನಿಮ್ಮ ಅಗತ್ಯತೆಗಳಿಗೆ ಅನುಗುಣವಾಗಿ ನೀವು ಅನೇಕ ಬಾರಿ ಸಾಲ ಪಡೆಯಬಹುದು. ಅದು ಕೂಡ ನಿಮ್ಮ ಅಗತ್ಯತೆಗಳ ಪ್ರಕಾರ ಬಡ್ಡಿದರ ಪಾವತಿಸಬಹುದು ಅಥವಾ ಮೊತ್ತವನ್ನು ವಿತ್ ಡ್ರಾ ಮಾಡಬಹುದು.
ಇದಲ್ಲದೆ, ಇಎಂಐಗಳ ಬಡ್ಡಿ ಮಾತ್ರ ಪಾವತಿಸಲು ನೀವು ಆಯ್ಕೆ ಮಾಡಬಹುದು. EMIನಂತೆ ಸಾಲದ ಬಡ್ಡಿಯನ್ನು ಮಾತ್ರ ಪಾವತಿಸಲು ಅವಕಾಶವಿರುತ್ತದೆ. ಮತ್ತು ಅವಧಿಯ ಕೊನೆಯಲ್ಲಿ ಪ್ರಿನ್ಸಿಪಲ್ ಮೊತ್ತವನ್ನು ಮರುಪಾವತಿಸಬಹುದು.
ಅರ್ಜಿದಾರರು ತಮ್ಮ ಹೆಚ್ಚಿನ ಆದಾಯ ಮತ್ತು ಉದ್ಯೋಗ ಸ್ಥಿರತೆಯಂತಹ ಸಾಮರ್ಥ್ಯಗಳತ್ತ ಸಾಲದಾತರ ಗಮನವನ್ನು ಸೆಳೆಯುವ ಮೂಲಕ ವೈಯಕ್ತಿಕ ಸಾಲದ ಬಡ್ಡಿ ದರ ಸಮಾಲೋಚಿಸಿ ಪರಿಗಣಿಸಿ.

4) ಕಡಿಮೆ ಅವಧಿ ಆಯ್ಕೆ ಮಾಡಿ
ಸಾಲ ಮರುಪಾವತಿ ಮಾಡುವ ಅವಧಿಗಳ ಮೂಲಕ ನಿಮ್ಮ ಮರುಪಾವತಿ ಸಾಮರ್ಥ್ಯವನ್ನು ಸಾಲದಾತರಿಗೆ ತೋರಿಸಬಹುದು. ಹೆಚ್ಚುವರಿಯಾಗಿ, ಕಡಿಮೆ ಕಾಲಾವಧಿ ಅಂದರೆ ಮರುಪಾವತಿಯ ಸಮಯದಲ್ಲಿ ನೀವು ಬಡ್ಡಿಯ ಖರ್ಚುಗಳ ಮೇಲೆ ಕಡಿಮೆ ಖರ್ಚು ಮಾಡುತ್ತಿರಿ ಎಂದರ್ಥ.
ಕಡಿಮೆ ಕಾಲಾವಧಿಯನ್ನು ಆಯ್ಕೆ ಮಾಡುವುದರಿಂದ ನಿಮ್ಮ ಸಾಲದಾತನಿಗೆ ಭರವಸೆ ನೀಡಿದಂತಾಗುತ್ತದೆ ಮತ್ತು ಸಾಲ ಮರುಪಾವತಿಯ ಸಂದರ್ಭದಲ್ಲಿ ನಿಮ್ಮ ಜೇಬಿಗೆ ಆಗಬಹುದಾದ ವೆಚ್ಚವನ್ನು ಕಡಿತಗೊಳಿಸಬಹುದು.
ಆದರೂ, ನಿಮ್ಮ ಸಾಲ ಪಾವತಿಯ ಅವಧಿ ನಿಮ್ಮ ಇಎಂಐಗಳ ಮೇಲೆ ಪರಿಣಾಮ ಬೀರುತ್ತದೆ. ಇಎಂಐ ಮೊತ್ತ ನಿಮ್ಮ ಮಾಸಿಕ ಆದಾಯಕ್ಕೆ ಹೋಲಿಸಿದಾಗ ತುಂಬಾ ಹೆಚ್ಚಿರಬಾರದು ಎಂಬುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಆದಾಯಕ್ಕಿಂತ ಸಾಲದ ಅನುಪಾತವೇ ಹೆಚ್ಚಿದ್ದರೆ ಸಾಲದಾತರು ನಿಮ್ಮ ಮರುಪಾವತಿಯ ಸಾಮರ್ಥ್ಯಗಳನ್ನು ಅನುಮಾನಿಸಲು ಕಾರಣವಾಗುತ್ತದೆ ಎಂಬುದನ್ನು ಮರೆಯದಿರಿ.

5) ನಿಮ್ಮ ಎಲ್ಲ ವರಮಾನ ಬಹಿರಂಗಪಡಿಸಿ
ಅರ್ಜಿ ಸಲ್ಲಿಸುವಾಗ ನಿಮ್ಮ ಆದಾಯದ ಎಲ್ಲಾ ಮೂಲಗಳ ವಿವರವನ್ನು ಬಹಿರಂಗಪಡಿಸಬೇಕು. ಇದು ಸಾಲದಾತ ಸಂಸ್ಥೆಗಳಿಗೆ ನಿಮ್ಮ ಅರ್ಜಿಯನ್ನು ಮಂಜೂರು ಮಾಡಲು ಸಹಾಯಕವಾಗುತ್ತದೆ. ಅಲ್ಲದೇ ಸರಿಯಾದ ಸಮಯಕ್ಕೆ ಇಎಂಐ ಪಾವತಿ ಮಾಡಲು ನಿಮ್ಮ ಬಳಿ ಸಾಕಷ್ಟು ಹಣ ಇದೆಯೆಂದು ಗೊತ್ತಾಗುತ್ತದೆ.
ಇದಲ್ಲದೆ, ಹೆಸರಾಂತ ಕಂಪನಿಯಲ್ಲಿನ ನಿಮ್ಮ ಉನ್ನತ ಸ್ಥಾನವು ನಿಮ್ಮ ಅರ್ಜಿಗೆ ಹೆಚ್ಚಿನ ಮೌಲ್ಯವನ್ನು ಒದಗಿಸಬಹುದು.
ಆದ್ದರಿಂದ ದೊಡ್ಡ ಸಂಸ್ಥೆಯಲ್ಲಿ ಉದ್ಯೋಗ ಪಡೆದು, ಇದನ್ನು ನಿಮ್ಮ ವೃತ್ತಿಜೀವನದ ಹಂತಗಳನ್ನು ಬುದ್ಧಿವಂತಿಕೆಯಿಂದ ಯೋಜಿಸುವಲ್ಲಿ ಸಫಲರಾಗಿ. ನಿಮ್ಮ ಭವಿಷ್ಯದಲ್ಲಿ ವೈಯಕ್ತಿಕ ಸಾಲ ಪಡೆಯಲು ಮುಂದಾದಾಗ ಇಲ್ಲಿ ತಿಳಿಸಿರುವ ಅಂಶಗಳನ್ನು ಪರಿಗಣಿಸಿ. ಉದ್ಯೋಗದಿಂದ ಉದ್ಯೋಗ ಅಥವಾ ಕಂಪನಿಯಿಂದ ಕಂಪನಿಗೆ ಬದಲಾಯಿಸುತ್ತಿರುವುದು ಅಸ್ಥಿರತೆಯನ್ನು ತೋರಿಸುತ್ತದೆ. ಅಲ್ಲದೇ ನಿಮ್ಮ ಇಎಂಐಗಳನ್ನು ಪಾವತಿ ಮಾಡಲು ಖಚಿತವಾದ ಆದಾಯದ ಖಾತರಿಯನ್ನು ಕಡಿಮೆ ಮಾಡುತ್ತದೆ.

6)ಕ್ರೆಡಿಟ್ ಸ್ಕೋರ್ 750 ಇರುವ ವ್ಯಕ್ತಿಯನ್ನು ಸಹ ಅರ್ಜಿದಾರನಾಗಿ ಆಯ್ಕೆ ಮಾಡಿ
ಸಹ ಅರ್ಜಿದಾರನು ಸಾಲದಾತನಿಗೆ ಮರುಪಾವತಿಯ ಭರವಸೆ ನೀಡುತ್ತಾನೆ. ಇದರರ್ಥ ನೀವು ಇನ್ನೊಬ್ಬ ವ್ಯಕ್ತಿ ಜೊತೆಗೂಡಿ ಸಾಲಕ್ಕಾಗಿ ಅರ್ಜಿ ಸಲ್ಲಿಸುವುದರಿಮದ ಆತನು ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕಾಗುತ್ತದೆ. 750 ಮತ್ತು ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಹೊಂದಿರುವ ಸಹ ಅರ್ಜಿದಾರನೊಂದಿಗೆ ಅರ್ಜಿ ಸಲ್ಲಿಸಿದರೆ ಸಾಲದಾತನಿಗೆ ನಿಮ್ಮ ಮರುಪಾವತಿ ಸಾಮರ್ಥ್ಯದಲ್ಲಿ ಭರವಸೆಯಿಡಬಹುದು. ಸಾಲದಾತ ಸಂಸ್ಥೆ ನಿಮ್ಮ ಅರ್ಜಿಯಲ್ಲಿನ ಕಡಿಮೆ ಅಪಾಯದ ಮೇಲೆ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ನೀಡಲು ಮುಂದಾಗುತ್ತಾರೆ. ನೀವು ವೈಯಕ್ತಿಕ ಸಾಲಕ್ಕಾಗಿ ಹುಡುಕುತ್ತಿದ್ದರೆ ಬಜಾಜ್ ಫಿನ್ ಸರ್ವ್ ಅತ್ಯುತ್ತಮ ಆಯ್ಕೆ ಎಂಬುದನ್ನು ಮರೆಯಬೇಡಿ. ಇಲ್ಲಿ ನೀವು ನಾಮಮಾತ್ರ ಬಡ್ಡಿ ದರದಲ್ಲಿ 25 ಲಕ್ಷಕ್ಕೆ ಗಣನೀಯ ಪ್ರಮಾಣದ ಹಣವನ್ನು ಪಡೆಯಬಹುದು. ನೀವು ಆನ್ಲೈನ್ ಮೂಲಕ ಕೂಡ ಅರ್ಜಿ ಸಲ್ಲಿಸಬಹುದಾಗಿದ್ದು, 5 ನಿಮಿಷಗಳಲ್ಲಿ ತ್ವರಿತ ಅನುಮೋದನೆಯನ್ನು ಪಡೆದುಕೊಳ್ಳಬಹುದು ಮತ್ತು 24 ಗಂಟೆಗಳಲ್ಲಿ ರಿಯಾಯಿತಿ ಪಡೆಯಬಹುದು.

English summary

Six Ways to Ensure Good Deal on Personal Loan Interest Rate

Personal loans are easily available in today's day and age. Instant approval and collateral-free finances are key advantages of personal loan make this offering stand out.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X