ಇಂದಿನಿಂದ ಹೊಸ ಹಣಕಾಸು ವರ್ಷ ಆರಂಭವಾಗುತ್ತಿದೆ. ಹೊಸ ವಿತ್ತೀಯ ವರ್ಷದೊಂದಿಗೆ ಹಲವು ಬದಲಾವಣೆಗಳು ಆಗುತ್ತಿದ್ದು, ಜನಸಾಮಾನ್ಯರು ಇದರ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ.
ಇಂದಿನಿಂದ ಹೊಸ ಹಣಕಾಸು ವರ್ಷ ಆರಂಭವಾಗುತ್ತಿದೆ. ಹೊಸ ವಿತ್ತೀಯ ವರ್ಷದೊಂದಿಗೆ ಹಲವು ಬದಲಾವಣೆಗಳು ಆಗುತ್ತಿದ್ದು, ಜನಸಾಮಾನ್ಯರು ಇದರ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ.
ಪ್ಯಾನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಜೋಡಣೆ, ಐಟಿಆರ್ ಸಲ್ಲಿಕೆ, ಆದಾಯ ತೆರಿಗೆ ಇಲಾಖೆಯ ಹೊಸ ನಿಯಮಗಳು, ಬ್ಯಾಂಕಿಂಗ್ ವಲಯದ ಬದಲಾವಣೆಗಳು ತಿಳಿಯುವುದು ಅವಶ್ಯವಾಗುತ್ತದೆ.
ಬ್ಯಾಂಕ್ ಸಾಲ ಅಗ್ಗ
ಏಪ್ರಿಲ್ ತಿಂಗಳಿನಲ್ಲಿ ಬ್ಯಾಂಕ್ ಸಾಲಗಳು ಅಗ್ಗವಾಗುವ ಸಾಧ್ಯತೆ ಇರುತ್ತದೆ. ಬ್ಯಾಂಕುಗಳು ಎಂ.ಸಿ.ಎಲ್.ಆರ್ ಬದಲು ರೆಪೋ ದರದ ಆಧಾರದ ಮೇಲೆ ಸಾಲದ ಮೇಲಿನ ಬಡ್ಡಿಯನ್ನು ನಿರ್ಧರಿಸಬೇಕು ಒದಗಿಸುತ್ತವೆ. ಆರ್ಬಿಐ ರೆಪೋ ದರ ಇಳಿಕೆ ಮಾಡಿದರೆ ಬ್ಯಾಂಕ್ ಗಳು ಸಾಲದ ಮೇಲಿನ ಬಡ್ಡಿಯನ್ನು ಇಳಿಕೆ ಮಾಡಬೇಕಾಗುತ್ತದೆ.
ಹೈ ಸೆಕ್ಯುರಿಟಿ ನಂಬರ್ ಪ್ಲೇಟ್
ಏಪ್ರಿಲ್ ನಿಂದ ಷೋರೂಮ್ ಗಳಲ್ಲಿ ಮಾರಾಟ ಮಾಡಲ್ಪಡುವ ಕಾರುಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಜೋಡಿಸುವುದು ಅನಿವಾರ್ಯವಾಗುತ್ತದೆ. ಜೊತೆಗೆ ಕಾರಿನ ಕಿಟಕಿ ಪರದೆ ಮೇಲೆ ಇಂಧನ ಪ್ರಕಾರವನ್ನು ನಮೂದಿಸಬೇಕಾಗುತ್ತದೆ. ಸುಪ್ರೀಂಕೋರ್ಟ್ ಈ ನಿಯಮವನ್ನು ನಿಯಮಿತವಾಗಿ ಜಾರಿ ಮಾಡುವಂತೆ ನಿರ್ದೇಶನ ಮಾಡಿದೆ.
ಲಾಕ್ ಬ್ರೇಕಿಂಗ್ ಸಿಸ್ಟಂ ಅಳವಡಿಕೆ
125 ಸಿಸಿಗಿಂತ ಹೆಚ್ಚು ಪವರ್ ಹೊಂದಿರುವ ಮೋಟರ್ ಸೈಕಲ್ ಗಳಿಗೆ ಮೋಟರ್ ಕಂಪನಿಗಳು ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಕಡ್ಡಾಯವಾಗಿ ಅಳವಡಿಸಬೇಕು.ಇದು ಅಪಘಾತವನ್ನು ತಡೆಯಲು ನೆರವಾಗಲಿದೆ.
ಬ್ಯಾಂಕುಗಳ ವಿಲೀನ
ಏಪ್ರಿಲ್ ಒಂದಕ್ಕೆ ದೇನಾ ಬ್ಯಾಂಕ್ ಹಾಗೂ ವಿಜಯ ಬ್ಯಾಂಕ್ ಗಳು ಬ್ಯಾಂಕ್ ಆಫ್ ಬರೋಡಾ ಜೊತೆ ವಿಲೀನವಾಗಲಿದ್ದು, ದೇಶದ ಮೂರನೇ ಅತಿದೊಡ್ಡ ಬ್ಯಾಂಕ್ ಎನಿಸಲಿದೆ. ಈ ಬ್ಯಾಂಕ್ ಗ್ರಾಹಕರನ್ನು ಇನ್ನು ಬಿಒಬಿ ಬ್ಯಾಂಕ್ ಗ್ರಾಹಕರೆಂದು ಕರೆಯಲಾಗುವುದು. ಬ್ಯಾಂಕ್ ವಿಲೀನದ ನಂತರ ದೇನಾ ಮತ್ತು ವಿಜಯಾ ಬ್ಯಾಂಕ್ ಗ್ರಾಹಕರೆಲ್ಲ ಬ್ಯಾಂಕ್ ಆಫ್ ಬರೋಡಾಗೆ ವರ್ಗಾವಣೆಯಾಗಲಿದ್ದಾರೆ. ಗ್ರಾಹಕರಿಗೆ ಹೊಸ ಖಾತೆಯ ಸಂಖ್ಯೆ ಮತ್ತು ಕಸ್ಟಮರ್ ಐಡಿ ನೀಡಲಾಗುತ್ತದೆ. ಹೊಸ ಡೆಬಿಟ್ ಕಾರ್ಡ್, ಚೆಕ್ ಬುಕ್ ಮತ್ತು ಕ್ರೆಡಿಟ್ ಕಾರ್ಡ್ ನೀಡಲಾಗುವುದು.
ಪಿಎಫ್ ಖಾತೆ ಖುದ್ದು ವರ್ಗಾವಣೆ
ಒಂದುವೇಳೆ ನೀವು ಏಪ್ರಿಲ್ ಒಂದರ ನಂತರ ಉದ್ಯೋಗ ಬದಲಾವಣೆ ಮಾಡುತ್ತಿದ್ದರೆ ಪಿಎಫ್ ಖಾತೆಯನ್ನು ಬದಲಿಸುವ ಜಂಜಾಟ ಇರುವುದಿಲ್ಲ. ಬದಲಿಗೆ ಪಿಎಫ್ ಖಾತೆ ಖುದ್ದು ವರ್ಗಾವಣೆಯಾಗಲಿದೆ. ಇಪಿಎಫ್ಒ ಹೊಸ ನಿಯಮದಂತೆ ಯುಎಎನ್ ನಂಬರ್ ಸಹಾಯದಿಂದ ಹೊಸ ಖಾತೆ ಹಳೆ ಖಾತೆಯೊಂದಿಗೆ ಹೊಂದಾಣಿಕೆಯಾಗಲಿದೆ.
ಟ್ರಾಯ್ ನಿಯಮ
ಟ್ರಾಯ್ ನಿಯಮದ ಪ್ರಕಾರ ಮಾರ್ಚ್ 31 ವರೆಗೆ ಮಾತ್ರ ಚಾನೆಲ್ ಪ್ಯಾಕ್ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಏಪ್ರಿಲ್ ಒಂದರಿಂದ ನಿಮ್ಮ ಟಿವಿ ಚಾನೆಲ್ ಗಳು ಬಂದ್ ಆಗಲಿದ್ದು, ಇಂದಿನ ಬದಲು ನಾಳೆ ಚಾನೆಲ್ ಪ್ಯಾಕ್ ಆಯ್ಕೆ ಮಾಡಿಕೊಂಡರೆ ಹೆಚ್ಚಿನ ಹಣ ಪಾವತಿ ಮಾಡಬೇಕಾಗುತ್ತದೆ.


Click it and Unblock the Notifications