ಭಾರತದಲ್ಲಿನ ಟಾಪ್ 10 ಪಿಂಚಣಿ ಯೋಜನೆಗಳ ಮಾಹಿತಿ ಇಲ್ಲಿದೆ..

ಕೈತುಂಬಾ ಹಣ ಗಳಿಸುತ್ತಿರುವಾಗ ಎಲ್ಲವೂ ಚೆನ್ನಾಗಿ ನಡಿತಾ ಇರತ್ತೆ! ಆದರೆ ಉದ್ಯೋಗಕ್ಕೆ ಹೋಗುವುದನ್ನು ನಿಲ್ಲಿಸಿದಾಗ ಇಲ್ಲವೇ ನಿವೃತ್ತಿಯಾದ ನಂತರ? ನೀವು ಕೆಲಸ ನಿಲ್ಲಿಸಿದ ನಂತರ ನಿಮ್ಮ ಅಗತ್ಯಗಳನ್ನು ಕಾಪಾಡಿಕೊಳ್ಳಲು ಪಿಂಚಣಿ ಯೋಜನೆ ಅಗತ್ಯ.

ಕೈತುಂಬಾ ಹಣ ಗಳಿಸುತ್ತಿರುವಾಗ ಎಲ್ಲವೂ ಚೆನ್ನಾಗಿ ನಡಿತಾ ಇರತ್ತೆ! ಆದರೆ ಉದ್ಯೋಗಕ್ಕೆ ಹೋಗುವುದನ್ನು ನಿಲ್ಲಿಸಿದಾಗ ಇಲ್ಲವೇ ನಿವೃತ್ತಿಯಾದ ನಂತರ? ಹಾಗಾಗಿ ನೀವು ಕೆಲಸ ನಿಲ್ಲಿಸಿದ ನಂತರ ನಿಮ್ಮ ಅಗತ್ಯಗಳನ್ನು ಕಾಪಾಡಿಕೊಳ್ಳಲು ಪಿಂಚಣಿ ಯೋಜನೆಗಳಿಗಾಗಿ ಹುಡುಕುತ್ತಿದ್ದರೆ, ಭಾರತದಲ್ಲಿ ಲಭ್ಯವಿರುವ ಟಾಪ್ 10 ಪಿಂಚಣಿ ಯೋಜನೆಗಳ ಮಾಹಿತಿ ಇಲ್ಲಿ ನೀಡಲಾಗಿದೆ. ಇದರಲ್ಲಿ ನಿಮಗೆ ಇಷ್ಟವಾಗುವ ಅತ್ಯುತ್ತಮವಾದ ಪಿಂಚಣಿ ಯೋಜನೆ ಆಯ್ಕೆಯ ನಿರ್ಧಾರವನ್ನು ತೆಗೆದುಕೊಳ್ಳಿ.

ಪಿಂಚಣಿ ಯೋಜನೆಗಳು ಉದ್ಯೋಗದಾತರಿಂದ/ಮಾಲೀಕರಿಂದ ನಿರ್ವಹಿಸಲ್ಪಡುವ ಯೋಜನೆಗಳಾಗಿವೆ. ಇದು ವ್ಯಕ್ತಿಗಳ ಮುಂದಿನ ಹಣಕಾಸು ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಮತ್ತು ನಿವೃತ್ತಿ ನಂತರದಲ್ಲಿ ಉದ್ಭವಿಸಬಹುದಾದ ಅನಿಶ್ಚಿತತೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಹಿರಿಯ ನಾಗರಿಕರು ತಮ್ಮ ನಿವೃತ್ತಿಯನ್ನು ಜೀವನವನ್ನು ಪರಿಣಾಮಕಾರಿಯಾಗಿ ರೂಪಿಸಲು ಈ ಯೋಜನೆಗಳು ಸೂಕ್ತವಾಗಿರುತ್ತವೆ.
ಭಾರತದಲ್ಲಿ ಪ್ರಸ್ತುತ ಲಭ್ಯವಿರುವ ಅಗ್ರ 10 ಪಿಂಚಣಿ ಯೋಜನೆಗಳಿದ್ದು, ಬನ್ನಿ ನೋಡೋಣ..

ಎಲ್ಐಸಿ ಜೀವನ್ ಅಕ್ಷಯ್ 6 ಪ್ಲಾನ್

ಎಲ್ಐಸಿ ಜೀವನ್ ಅಕ್ಷಯ್ 6 ಪ್ಲಾನ್

ಎಲ್ಐಸಿ ಜೀವನ್ ಅಕ್ಷಯ್ 6 ಪಾಲಿಸಿ ಯೋಜನೆಯು ತಕ್ಷಣದ ವರ್ಷಾಶನ ಯೋಜನೆಯಾಗಿದ್ದು, ಇದನ್ನು ಒಂದೇ ಬಾರಿ ಬೃಹತ್ ಪ್ರೀಮಿಯಂ ಮೊತ್ತವನ್ನು ಪಾವತಿಸುವ ಮೂಲಕ ಖರೀದಿಸಬಹುದು. ಯೋಜನೆಯನ್ನು ಖರೀದಿಸಿದ ತಕ್ಷಣ ಪಿಂಚಣಿ ಪ್ರಾರಂಭವಾಗುತ್ತದೆ.

ವೈಶಿಷ್ಟ್ಯ ಮತ್ತು ಲಾಭಗಳು:
- ಭಾರೀ ಪ್ರೀಮಿಯಂ ಮೊತ್ತವನ್ನು ಪಾವತಿಸಬಹುದು.
- ಮಾಸಿಕ, ತ್ರೈಮಾಸಿಕ, ಅರ್ಧ ವರ್ಷ ಅಥವಾ ವಾರ್ಷಿಕವಾಗಿ ಪಿಂಚಣಿ ಪಡೆಯಬಹುದು.
- ಈ ಯೋಜನೆಯನ್ನು ಪಡೆಯಲು ವೈದ್ಯಕೀಯ ಪರೀಕ್ಷೆ ಅಗತ್ಯವಿಲ್ಲ.
- ಆಫ್ಲೈನ್ ​​ವಿತರಣಾ ಚಾನೆಲ್ ಗಳಿಗೆ ಕನಿಷ್ಟ ಖರೀದಿ ಮೊತ್ತ 1 ಲಕ್ಷ ಮತ್ತು ಆನ್ಲೈನ್ ​​ವಿತರಣಾ ಚಾನೆಲ್ ಗಳಿಗೆ ರೂ. 1.50 ಲಕ್ಷ
- ಖರೀದಿ ಬೆಲೆ, ವರ್ಷಾಶನ ಇತ್ಯಾದಿಗಳಿಗೆ ಗರಿಷ್ಠ ಮಿತಿಗಳಿಲ್ಲ
- ಕನಿಷ್ಠ ವಯಸ್ಸು 30 ವರ್ಷ ಮತ್ತು ಗರಿಷ್ಠ 85 ವರ್ಷಗಳು
- ವಯಸ್ಸು ದಾಖಲಾತಿ ಕಡ್ಡಾಯವಾಗಿದೆ
- ಪಾವತಿಸಿದ ಪ್ರೀಮಿಯಂ ತೆರಿಗೆಯಿಂದ ವಿನಾಯಿತಿ ಪಡೆದಿದೆ. ಅಟಲ್ ಪಿಂಚಣಿ ಯೋಜನೆ(APY) ಮಾಡಿಸುವುದು ಹೇಗೆ?

ಎಲ್ಐಸಿ ಜೀವನ್ ನಿಧಿ ಪ್ಲಾನ್

ಎಲ್ಐಸಿ ಜೀವನ್ ನಿಧಿ ಪ್ಲಾನ್

ಎಲ್ಐಸಿ ಜೀವನ್ ನಿಧಿ ಪ್ಲಾನ್ ಲಾಭದಾಯಕ ಪಿಂಚಣಿ ಯೋಜನೆಯಾಗಿದೆ.
ವೈಶಿಷ್ಟ್ಯ ಮತ್ತು ಲಾಭಗಳು
- ಪಾವತಿಸಿದ ಪ್ರೀಮಿಯಂ ಆದಾಯ ತೆರಿಗೆ ಕಾಯಿದೆಯಡಿ ಸೆಕ್ಷನ್ 80CCC ಯಿಂದ ವಿನಾಯಿತಿ ಪಡೆದಿವೆ.
- ಮೊದಲ ಐದು ವರ್ಷಗಳಲ್ಲಿ, ಪ್ರತಿವರ್ಷ ಪೂರ್ಣಗೊಂಡ ನಂತರ ಪಾಲಿಸಿದಾರನು ಸಾವಿರಕ್ಕೆ ಖಾತರಿ ಸೇರ್ಪಡೆ ರೂ. 50 ಪಡೆಯುತ್ತಾನೆ.
- ಆರನೇ ವರ್ಷದಿಂದ ಲಾಭದಲ್ಲಿ ಈ ಪಾಲಿಸಿಯು ಪಾಲ್ಗೊಳ್ಳುತ್ತದೆ.
- ನಿಯಮಿತ ಪ್ರೀಮಿಯಂನಡಿಯಲ್ಲಿ ಕನಿಷ್ಟ ಆಶ್ವಾಸಿತ ಮೊತ್ತವು ರೂ. 1 ಲಕ್ಷ ಮತ್ತು ಏಕೈಕ ಪ್ರೀಮಿಯಂ ಅಡಿಯಲ್ಲಿ ರೂ. 1.50 ಲಕ್ಷ ಪಾವತಿಸಬಹುದು.
- ಮೂಲ ಸಮ್ ಅಷೂರ್ಡ್ ಗೆ ಗರಿಷ್ಠ ಮಿತಿ ಇಲ್ಲ.
- ಪಾಲಿಸಿ ಅವಧಿಯು 5 ರಿಂದ 35 ವರ್ಷಗಳವರೆಗೆ ಇರುತ್ತದೆ.
- ಕನಿಷ್ಠ ವೇಸ್ಟಿಂಗ್ ವಯಸ್ಸು 55 ವರ್ಷ ಮತ್ತು ಗರಿಷ್ಠ 65 ವರ್ಷಗಳು

ಎಸ್ಬಿಐ ಲೈಫ್ ಸರಳ್ ಪಿಂಚಣಿ ಯೋಜನೆ

ಎಸ್ಬಿಐ ಲೈಫ್ ಸರಳ್ ಪಿಂಚಣಿ ಯೋಜನೆ

ಎಸ್ಬಿಐ ಲೈಫ್ ಸರಳ್ ಪಿಂಚಣಿ ಯೋಜನೆಯು ಸಾಂಪ್ರದಾಯಿಕ ಪಿಂಚಣಿ ಯೋಜನೆಯಾಗಿದೆ. ಇದು ಮಾರುಕಟ್ಟೆಯ ಏರಿಳಿತ ಮತ್ತು ಚಂಚಲತೆಯಿಂದ ಪಾಲಿಸಿದಾರ ರಕ್ಷಣೆಯನ್ನು ನೀಡುತ್ತದೆ.

ವೈಶಿಷ್ಟ್ಯ ಮತ್ತು ಲಾಭಗಳು:
- ಮೊದಲ 5 ವರ್ಷಗಳಲ್ಲಿ ಖಾತರಿಪಡಿಸಿದ ಬೋನಸ್ ಲಭ್ಯ
- ಯೋಜನೆ ಮೆಚುರಿಟಿ ನಂತರ ಪಾಲಿಸಿದಾರರಿಗೆ ವೇಸ್ಟಿಂಗ್ ಬೋನಸ್ ಭರವಸೆ ಇದೆ.
- ಅಧಿಕ ಸಾಲ ಅವಧಿಯು 10 ರಿಂದ 40 ವರ್ಷ
- ವರ್ಷಕ್ಕೆ ಕನಿಷ್ಠ ಪ್ರೀಮಿಯಂ ಪಾವತಿ ರೂ. 7,500, ಗರಿಷ್ಠ ಪಾವತಿಗೆ ಮಿತಿ ಇಲ್ಲ.
- ಕನಿಷ್ಠ ಪ್ರವೇಶ ವಯಸ್ಸು 18 ವರ್ಷ ಮತ್ತು ಗರಿಷ್ಠ 65 ವರ್ಷ
- ಕನಿಷ್ಠ ಮೆಚುರಿಟಿ ವಯಸ್ಸು 40 ವರ್ಷ ಮತ್ತು ಗರಿಷ್ಠ 70 ವರ್ಷ

ಎಚ್ಡಿಎಫ್ಸಿ ಲೈಫ್ - ಕ್ಲಿಕ್ 2 ರಿಟೈರ್

ಎಚ್ಡಿಎಫ್ಸಿ ಲೈಫ್ - ಕ್ಲಿಕ್ 2 ರಿಟೈರ್

ಎಚ್ಡಿಎಫ್ಸಿ ಲೈಫ್ - ಕ್ಲಿಕ್ 2 ರಿಟೈರ್ ಪ್ಲ್ಯಾನ್ ಎನ್ನುವುದು ಆನ್ಲೈನ್ ಯುನಿಟ್ ಲಿಂಕ್ಡ್ ಪ್ಲಾನ್ ಆಗಿದೆ. ಇದು ಪಾಲಿಸಿದಾರರಿಗೆ ಕನಿಷ್ಠ ಶುಲ್ಕದೊಂದಿಗೆ ಮಾರುಕಟ್ಟೆ ಲಿಂಕ್ಡ್ ರಿಟರ್ನ್ಸ್ ಅನ್ನು ನೀಡುತ್ತದೆ. ಇದು ನಿವೃತ್ತಿಯ ನಂತರದ ಅವಶ್ಯಕತೆಗಳನ್ನು ಪೂರೈಸಲು ಸಹಾಯ ಮಾಡುತ್ತದೆ.

ವೈಶಿಷ್ಟ್ಯ ಮತ್ತು ಲಾಭಗಳು
- ಖಾತರಿ ವೆಸ್ಟಿಂಗ್ ಸೌಲಭ್ಯ ಮತ್ತು ಮಾರುಕಟ್ಟೆಯಿಂದ ಹೆಚ್ಚುವರಿ ಲಾಭ ಲಭ್ಯ
- ಕನಿಷ್ಠ 18 ವರ್ಷ ಮತ್ತು ಗರಿಷ್ಠ 65 ವರ್ಷ ಆಗಿರಬೇಕು.
- ಕನಿಷ್ಟ ಮೆಚುರಿಟಿ ವಯಸ್ಸು 45 ವರ್ಷ ಮತ್ತು ಗರಿಷ್ಠ 75 ವರ್ಷ
- ಫಂಡ್ ವ್ಯಾಲ್ಯೂಗಿಂತ ನಾಮಿನಿಗೆ ಸಿಗುವ ಮರಣದ ಲಾಭ ಹೆಚ್ಚಿನದಾಗಿರುತ್ತದೆ.
- ಆದಾಯ ತೆರಿಗೆ ಕಾಯಿದೆ 1961ರ ಸೆಕ್ಷನ್ 80 ಸಿ ಮತ್ತು ಸೆಕ್ಷನ್ 10 (10 ಎ) ಅಡಿಯಲ್ಲಿ ತೆರಿಗೆ ಪ್ರಯೋಜನ ಲಭ್ಯ

ಎಚ್ಡಿಎಫ್ಸಿ ಲೈಫ್ - ಅಸ್ಯೂರ್ಡ್ ಪಿಂಚಣಿ ಯೋಜನೆ

ಎಚ್ಡಿಎಫ್ಸಿ ಲೈಫ್ - ಅಸ್ಯೂರ್ಡ್ ಪಿಂಚಣಿ ಯೋಜನೆ

ಎಚ್ಡಿಎಫ್ಸಿ ಲೈಫ್ - ಆಶ್ವಾಸಿತ ಪಿಂಚಣಿ ಯೋಜನೆ ಯುನಿಟ್ ಲಿಂಕ್ಡ್ ಪ್ಲಾನ್ ಆಗಿದ್ದು, ನಿವೃತ್ತದಾರರ ಗುರಿಗಳನ್ನು ಪೂರೈಸಲು ಪಾಲಿಸಿದಾರರಿಗೆ ಮಾರ್ಕೆಟ್ ಲಿಂಕ್ಡ್ ಆದಾಯವನ್ನು ನೀಡುತ್ತದೆ.

ವೈಶಿಷ್ಟ್ಯಗಳು ಮತ್ತು ಲಾಭಗಳು:
- ಖಾತರಿಪಡಿಸುವ ವೆಸ್ಟಿಂಗ್ ಸೌಲಭ್ಯಗಳು ಮತ್ತು ಮಾರುಕಟ್ಟೆಯಿಂದ ಹೆಚ್ಚುವರಿ ಲಾಭಗಳು
- ಕನಿಷ್ಠ 18 ವಯಸ್ಸಾದರೆ, ಕನಿಷ್ಟ ಮೆಚುರಿಟಿ ವಯಸ್ಸು 45
- ಸೀಮಿತ ಮತ್ತು ಏಕ ಪಾವತಿ ಆಯ್ಕೆಗಳು
- ಫಂಡ್ ವ್ಯಾಲ್ಯೂಗಿಂತ ನಾಮಿನಿಗೆ ಸಿಗುವ ಮರಣದ ಲಾಭ ಹೆಚ್ಚಿನದಾಗಿರುತ್ತದೆ..
- ಆದಾಯ ತೆರಿಗೆ ಕಾಯಿದೆ 1961 ರ ಸೆಕ್ಷನ್ 80 ಸಿ ಮತ್ತು ಸೆಕ್ಷನ್ 10 (10 ಡಿ) ಅಡಿಯಲ್ಲಿ ತೆರಿಗೆ ಪ್ರಯೋಜನ.

ಐಸಿಐಸಿಐ ಪ್ರು - ಸುಲಭ ರಿಟೈರ್ಮೆಂಟ್

ಐಸಿಐಸಿಐ ಪ್ರು - ಸುಲಭ ರಿಟೈರ್ಮೆಂಟ್

ಇಕ್ವಿಟಿಯಲ್ಲಿ ಹೂಡಿಕೆ ಮಾಡುವ ಮೂಲಕ ಅವನ/ ಅವಳ ನಿವೃತ್ತಿ ನಂತರ ವೇತನ ನಿಂತಾಗ ಪಾಲಿಸಿದಾರನಿಗೆ ನಿಯಮಿತವಾದ ಆದಾಯವನ್ನು ಪಡೆಯಲು ಈ ಯೋಜನೆ ಸಹಾಯ ಮಾಡುತ್ತದೆ. ಐಸಿಐಸಿಐ ಪ್ರು ಈಸಿ ರಿಟೈರ್ಮೆಂಟ್ ಉತ್ತಮ ದೀರ್ಘಾವಧಿಯ ಆದಾಯವನ್ನು ಒದಗಿಸುತ್ತದೆ. ಜೊತೆಗೆ ಮಾರುಕಟ್ಟೆಯಲ್ಲಿನ ಚಂಚಲತೆಯಿಂದ ರಕ್ಷಣೆ ನೀಡುತ್ತದೆ.

ವೈಶಿಷ್ಟ್ಯಗಳು ಮತ್ತು ಲಾಭಗಳು
- ಕನಿಷ್ಠ ಪ್ರೀಮಿಯಂ ವಾರ್ಷಿಕ ರೂ. 48,000, ಗರಿಷ್ಠ ಮಿತಿಯಿಲ್ಲ
- ಮಾಸಿಕ, ಅರ್ಧ ವಾರ್ಷಿಕ ಮತ್ತು ವಾರ್ಷಿಕ ಪಾವತಿ ವಿಧಾನಗಳನ್ನು ಆಯ್ಕೆ ಮಾಡಿ
- ಕನಿಷ್ಠ 18 ವರ್ಷ ಮತ್ತು ಗರಿಷ್ಠ 70 ವರ್ಷ
- ಕನಿಷ್ಠ ಮೆಚುರಿಟಿ ವಯಸ್ಸು 45 ವರ್ಷ ಮತ್ತು ಗರಿಷ್ಠ 80 ವರ್ಷಗಳು.
- ಪಾಲಿಸಿಯ ಅವಧಿಯು 10 ರಿಂದ 30 ವರ್ಷಗಳವರೆಗೆ ಇರುತ್ತದೆ. ಪ್ರೀಮಿಯಂ ಮತ್ತು ಪ್ರಯೋಜನಗಳ ಮೇಲೆ ತೆರಿಗೆ ಪ್ರಯೋಜನ ಲಭ್ಯ.

ರಿಲಯನ್ಸ್ - ಸ್ಮಾರ್ಟ್ ಪೆನ್ಷನ್

ರಿಲಯನ್ಸ್ - ಸ್ಮಾರ್ಟ್ ಪೆನ್ಷನ್

ರಿಲಾಯನ್ಸ್ ಸ್ಮಾರ್ಟ್ ಪಿಂಚಣಿ ಯೋಜನೆ ಎನ್ನುವುದು ಪಾಲಿಸಿದಾರರನ್ನು ಕ್ರಮಬದ್ಧವಾಗಿ ಉಳಿತಾಯ ಮಾಡಲು ಸಹಾಯ ಮಾಡುತ್ತದೆ. ನಿವೃತ್ತಿಯ ನಂತರ ನಿಯಮಿತ ಆದಾಯ ಗಳಿಸಲು ಭಾರೀ ಮೊತ್ತವನ್ನು ರೂಪಿಸುತ್ತದೆ.

ವೈಶಿಷ್ಟ್ಯಗಳು ಮತ್ತು ಲಾಭಗಳು
- ಪಾಲಿಸಿಯ ಅವಧಿ 10 ರಿಂದ 30 ವರ್ಷ
- ಇಕ್ವಿಟಿ ಪಾಲ್ಗೊಳ್ಳುವಿಕೆ ಮತ್ತು ಕ್ಯಾಪಿಟಲ್ ಗ್ಯಾರಂಟಿ ಈ ಎರಡರ ಲಾಭ ಲಭ್ಯ
- ಖಾತರಿ ಲಾಯಲ್ಟಿ ಪಡೆಯಬಹುದು.
- ಕನಿಷ್ಠ ಮೆಚುರಿಟಿ ವಯಸ್ಸು 45 ವರ್ಷ ಮತ್ತು ಗರಿಷ್ಠ 75 ವರ್ಷ
- ಆದಾಯ ತೆರಿಗೆ ಕಾಯಿದೆ 1961 ರ ಸೆಕ್ಷನ್ 10 (10 ಎ), ಸೆಕ್ಷನ್ 80 ಸಿ ಅಡಿಯಲ್ಲಿ ಆದಾಯ ತೆರಿಗೆ ಪ್ರಯೋಜನ

ಮ್ಯಾಕ್ಸ್ ಲೈಫ್ ಗ್ಯಾರಂಟಿಡ್ ಲೈಫ್ ಟೈಮ್ ಇನ್ಕಮ್ ಪ್ಲಾನ್

ಮ್ಯಾಕ್ಸ್ ಲೈಫ್ ಗ್ಯಾರಂಟಿಡ್ ಲೈಫ್ ಟೈಮ್ ಇನ್ಕಮ್ ಪ್ಲಾನ್

ಮ್ಯಾಕ್ಸ್ ಲೈಫ್ ಗ್ಯಾರಂಟಿಡ್ ಲೈಫ್ ಟೈಮ್ ಇನ್ಕಮ್ ಪ್ಲಾನ್ ಅನ್ನು ಪಾಲಿಸಿದಾರನು ತನ್ನ ನಿವೃತ್ತಿಯ ನಂತರ ನಿಯಮಿತ ಆದಾಯವನ್ನು ಖಾತರಿಪಡಿಸುವ ಸಾಂಪ್ರದಾಯಿಕ ವರ್ಷಾಶನ ಯೋಜನೆಯಾಗಿದೆ.

ವೈಶಿಷ್ಟ್ಯಗಳು ಮತ್ತು ಲಾಭಗಳು
- ನೀವು ಮತ್ತು ನಿಮ್ಮ ಸಂಗಾತಿ ಇರುವವರೆಗೆ ಜೀವಿತಾವಧಿಯ ಪೇಮೆಂಟ್ ಸ್ವೀಕರಿಸಲು ಅವಕಾಶ
- ಪಾಲಿಸಿ ಖರೀದಿಯ ಬೆಲೆ ಪಾಲಿಸಿದಾರನ ಮರಣದ ನಂತರ ನಾಮಿನಿಗೆ ಸಿಗುತ್ತದೆ.
- ಮಾಸಿಕ, ತ್ರೈಮಾಸಿಕ, ಅರ್ಧ-ವರ್ಷ ಅಥವಾ ವಾರ್ಷಿಕ ಆಧಾರದ ಮೇಲೆ ಪಿಂಚಣಿ ಪಡೆಯಬಹುದು.

ಬಿರ್ಲಾ ಸನ್ ಲೈಫ್ ಎಂಪವರ್ ಪೆನ್ಷನ್

ಬಿರ್ಲಾ ಸನ್ ಲೈಫ್ ಎಂಪವರ್ ಪೆನ್ಷನ್

ಬಿರ್ಲಾ ಸನ್ ಲೈಫ್ ಎಂಪವರ್ ಪಿಂಚಣಿ ಯೋಜನೆಯು ಪಾಲಿಸಿದಾರರ ನಿವೃತ್ತಿ ನಂತರದ ಜೀವನ ಉಜ್ವಲಗೊಳಿಸುವ ಪಿಂಚಣಿ ಯೋಜನೆಯಾಗಿದೆ.
ವೈಶಿಷ್ಟ್ಯ ಮತ್ತು ಲಾಭಗಳು:
- ಪಾಲಿಸಿ ಅವಧಿಯು 5 ರಿಂದ 30 ವರ್ಷ
- ಕನಿಷ್ಟ ಪ್ರವೇಶ ವಯಸ್ಸು 25 ಮತ್ತು ಗರಿಷ್ಠ 70 ವರ್ಷ
- ನಿಮ್ಮ ಪಾಲಿಸಿ ಪ್ರೀಮಿಯಂ ಮೊತ್ತವನ್ನು ಆಯ್ಕೆ ಮಾಡುವ ಆಯ್ಕೆ
- ವೆಸ್ಟಿಂಗ್ ದಿನಾಂಕವನ್ನು ಆಯ್ಕೆ ಮಾಡುವ ಆಯ್ಕೆ

ಬಜಾಜ್ ಅಲಿಯಾನ್ಸ್ - ಪೆನ್ಷನ್ ಗ್ಯಾರಂಟಿ

ಬಜಾಜ್ ಅಲಿಯಾನ್ಸ್ - ಪೆನ್ಷನ್ ಗ್ಯಾರಂಟಿ

ಬಜಾಜ್ ಅಲಿಯನ್ಸ್ ಪಿಂಚಣಿ ಖಾತರಿ ಯೋಜನೆಯು ನಿವೃತ್ತಿಯ ನಂತರ ಪಾಲಿಸಿದಾರರಿಗೆ ನಿಯಮಿತ ಆದಾಯ ಒದಗಿಸುತ್ತದೆ.
ವೈಶಿಷ್ಟ್ಯ ಮತ್ತು ಲಾಭಗಳು
- ಆಯ್ಕೆ ಮಾಡಲು ಆರು ವರ್ಷಾಶನ ಆಯ್ಕೆಗಳು ಲಭ್ಯ
- ಕನಿಷ್ಠ ವಯಸ್ಸು 37 ವರ್ಷ ಮತ್ತು 80 ವರ್ಷ ಗರಿಷ್ಠ ವಯಸ್ಸು
- ಕನಿಷ್ಟ ಪ್ರಿಮಿಯಂ ಮಿತಿ ರೂ. 25,000, ಗರಿಷ್ಠ ಮಿತಿ ಇಲ್ಲ.
- ಕನಿಷ್ಠ ವರ್ಷಾಶನ ಕಮತು ರೂ. 1,000. ಸಂಗಾತಿಗಾಗಿ ವರ್ಷಾಶನವನ್ನು ವಿಸ್ತರಿಸುವ ಆಯ್ಕೆ ಇರುತ್ತದೆ.

 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+